ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ 28-03-2022  ರಂದು ೧೨:೧೫ ಪಿ.ಎಮ್ ಕ್ಕೆ ಫಿರ್ಯಾದಿದಾರಳಾದ ಶ್ರೀಮತಿ ಸೋನಾಬಾಯಿ ಗಂಡ ಸೇವಾಲಾಲ ರಾಠೋಡ ವಯ : ೫೬ ವರ್ಷ ಉ: ಕೂಲಿಕೆಲಸ ಜಾ: ಲಂಬಾಣಿ ಸಾ: ಕಾಳನೂರ ತಾಂಡಾ ತಾ:ಜಿ: ಕಲಬುರಗಿ ರವರು ಠಾಣೆಗೆ ಹಾಜರಾಗಿ ಕಂಪ್ಯೂಟರನಲ್ಲಿ ಗಣಕೀಕೃತ ಮಾಡಿಸಿದ ಒಂದು ದೂರು ಅರ್ಜಿ ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ನನಗೆ ೪ ಜನ ಗಂಡಸು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ. ಇಬ್ಬರು ಹೆಣ್ಣು ಮಕ್ಕಳ ಮದುವೆ ಆಗಿರುತ್ತದೆ. ೪ ಮಕ್ಕಳಲ್ಲಿ ವಾಲ್ಮೀಕ ಈತನು ಕಳೆದ ೫ ತಿಂಗಳ ಹಿಂದೆ ತೀರಿಕೊಂಡಿರುತ್ತಾನೆ ಇನ್ನೊಬ್ಬ ಮಗ ನಾಮದೇವ ಈತನು ಸಾಲ ಮಾಡಿಕೊಂಡು ಪುನಾದಲ್ಲಿದ್ದು ಕಳೆದ ೪ ತಿಂಗಳ ಹಿಂದೆ ಊರಿಗೆ ಬಂದು ನಮ್ಮ ಮನೆಯಲ್ಲಿ ಇರುತ್ತಾನೆ. ಕಳೆದ ೫-೬ ದಿವಸಗಳ ಹಿಂದೆ ಸೇಡಂ ರೋಡಿಗೆ ತುಳಜಾ ಭವಾನಿ ಅಂತಾ ಹೊಟೆಲ ಹಾಕಿರುತ್ತೇವೆ ಅದು ನನ್ನ ಮಕ್ಕಳು ನಡೆಸಿಕೊಂಡು ಹೋಗುತ್ತಾರೆ. ನನ್ನ ಗಂಡ ಸೇವಾಲಾಲ ಈತನು ಕೂಲಿ ಕೆಲಸ ಮಾಡಿಕೊಂಡು ಪ್ರತಿನಿತ್ಯ ಸಾರಾಯಿ ಕುಡಿದು ಮನೆಗೆ ಬಂದು ನನ್ನ ಸಂಗಡ ಮತ್ತು ನನ್ನ ಮಕ್ಕಳ ಸಂಗಡ ಕಿರಿಕಿರಿ ಮಾಡುವುದು ಮಾಡುತ್ತಿದ್ದನು ಅಲ್ಲದೇ ನನ್ನ ಮಗನಾದ ನಾಮದೇವ ಈತನು ನನ್ನ ಗಂಡನಿಗೆ ತಾಯಿಗೆ ಯ್ಯಾಕೆ ಈ ರೀತಿ ಕಿರಿಕಿರಿ ಕೊಡುತ್ತಿ ಸರಾಯಿ ಕುಡಿದು ಬಂದು ಸುಮ್ಮನೆ ಇರಲಾಕ ಆಗಲೇನು ಅಂತಾ ಬುದ್ದೀವಾದ ಹೇಳುತ್ತಾ ಬಂದಿದರು ಕೂಡಾ ನನ್ನ ಗಂಡನು ಮೇಲಿನಂತೆ ಮನೆಯಲ್ಲಿ ಎಲ್ಲರ ಸಂಗಡ ಸಾರಾಯಿ ಕುಡಿದು ಬಂದು ಜಗಳ ಮಾಡುತ್ತಿದ್ದನು ಅದಕ್ಕೆ ನನ್ನ ಮಗ ನಾಮದೇವ ಈತನು ಇವನಿಗೆ ಒಂದು ಗತಿ ಕಾಣಸ್ತೆನಿ ಅಂತಾ ಅಂದಾಗ ನಾನು ನನ್ನ ಮಗನಿಗೆ ಅವನು ನಿಮ್ಮ ತಂದೆ ಇರುತ್ತಾನೆ. ಆತನು ಸಾರಾಯಿ ಕುಡಿದಾಗ ಮಾತನಾಡುತ್ತಾನೆ. ನೀನು ಈ ರೀತಿ ಹೇಳೋದು ಸರಿ ಅಲ್ಲಾ ಅಂತಾ ಅಂದಿರುತ್ತೇನೆ.   ನಿನ್ನೆ ದಿನಾಂಕ ೨೭-೦೩-೨೦೨೨ ರಂದು ರಾತ್ರಿ ಸಮಯದಲ್ಲಿ ನಾನು ಮತ್ತು ನನ್ನ ಸೊಸೆ ಲಲಿತಾ ಇಬ್ಬರು ಮನೆಯಲ್ಲಿದ್ದಾಗ ನನ್ನ ಗಂಡನು ಸಾರಾಯಿ ಕುಡಿದು ಬಂದು ನನ್ನ ಸಂಗಡ ಜಗಳ ಮಾಡುತ್ತಿದ್ದನು. ರಾತ್ರಿ ಅಂದಾಜು ೧೦.೦೦ ಗಂಟೆ ಆಗಿರಬಹುದು ನನ್ನ ಮಗ ನಾಮದೇವ ಈತನು ಮನೆಗೆ ಬಂದನು. ನನ್ನ ಮಗ ನಾಮದೇವ ಈತನು ನನ್ನ ಗಂಡನಿಗೆ ನೀನು ಯಾಕೆ ಮನೆಯಲ್ಲಿ ಈ ರೀತಿ ಸಾರಾಯಿ ಕುಡಿದು ಬಂದು ತಾಯಿ ಸಂಗಡ ಜಗಳ ಮಾಡುತ್ತಿ ಮನೆಯಲ್ಲಿ ತಮ್ಮನ ಹೆಂಡತಿ ಇರುತ್ತಾಳೆ ಹೊಲಸು ಯಾಕೆ ಮಾತನಾಡತಿ ಅಂತಾ ಅಂದಾಗ ಅವನ ಸಂಗಡ ಕೂಡಾ ಜಗಳ ಮಾಡಿರುತ್ತಾನೆ. ನಂತರ ನನ್ನ ಮಗ ನಾಮದೇವ ಈತನು ಸಿಟ್ಟಿನಿಂದಲೇ ನನ್ನ ಗಂಡನಿಗೆ ಹೊಟೆಲದಲ್ಲಿ ಮಲಗಿಕೊಳ್ಳುತ್ತೇವೆ ಅಂತಾ ಕರೆದುಕೊಂಡು ಹೋದನು. ನಂತರ ನನ್ನ ಇನ್ನೊಬ್ಬ ಮಗ ವಿಕಾಸ ಈತನು ಮನೆಗೆ ಬಂದಿರುತ್ತಾನೆ. ನವು ಮನೆಯಲ್ಲಿ ಮಲಗಿಕೊಂಡಿದ್ದೆವು. ಇಂದು ದಿನಾಂಕ ೨೮-೦೩-೨೦೨೨ ರಂದು ಮಧ್ಯ ರಾತ್ರಿ ೧.೩೦ ಎ.ಎಮ್ ಸುಮಾರಿಗೆ ನನ್ನ ಮಗ ನಾಮದೇವ ಈತನು ಬಂದು ಬಾಗಿಲು ಬಡೆದಾಗ ನಾವು ಬಾಗಿಲು ತೆರದೇವು, ಅವನು ಗಾಬರಿಯಲ್ಲೇ ನಾನು ಬಾಬಾ(ತಂದೆಗೆ) ಇವನಿಗೆ ಹೊಡೆದಿರುತ್ತೇನೆ, ಅವನಿಗೆ ಆಟೋದಲ್ಲಿ ತಂದ ಬಗ್ಗೆ ತಿಳಿಸಿದಾಗ ನಾವು ಗಾಬರಿಯಾಗಿ ಆಟೋದ ಹತ್ತಿರ ಹೋಗಿ ನೋಡಲು ನನ್ನ ಗಂಡನ ಕುತ್ತಿಗೆ ಕೊಯ್ದ ರೀತಿಯಲ್ಲಿ ಭಾರಿ ರಕ್ತಗಾಯವಾಗಿ ಸತ್ತಿದ್ದನು. ನಾನು ನನ್ನ ಮಗ ನಾಮದೇವನಿಗೆ ಏನು ಮಾಡಿದ್ದೀ ಅಂತಾ ಕೇಳಿದಾಗ ರಾತ್ರಿ ಹೊಟೇಲದಲ್ಲಿ ಕೂಡಾ ನನ್ನ ಸಂಗಡ ಕೂಡಾ ಜಗಳ ಮಾಡಿರುತ್ತಾನೆ. ಅವನು ಮಲಗಿದ ಸಮಯದಲ್ಲಿ ಕಲ್ಲಿನಿಂದ ಹೊಡೆದು ಉಳ್ಳಿಗಡ್ಡಿ ಕೊಯ್ಯುವ ಚಾಕುವಿನಿಂದ ಕುತ್ತಿಗೆ ಕೊಯ್ದಿರುತ್ತೇನೆ ನಂತರ ರೋಡಿನಲ್ಲಿ ಬರುತ್ತಿರುವ ಅಪರಿಚಿತ ಆಟೋಕ್ಕೆ ಕೈ ಮಾಡಿ ನಿಲ್ಲಿಸಿದಾಗ ನಮ್ಮ ತಂದೆಗೆ ಆರಾಮ ಇಲ್ಲಾ ಕಾಳನೂರ ಊರಿನ ತನ ಬಿಡು ಅಂತಾ ಅಂದಾಗ ಆತನ ಆಟೋದಲ್ಲಿ ಹಾಕಿಕೊಂಡು ಬಂದಿರುವ ಬಗ್ಗೆ ತಿಳಿಸಿದನು. ನಂತರ ನಾವು ನನ್ನ ಗಂಡನ ಶವವು ನಮ್ಮ ಮುಂದೆ ಹಾಕಿರುತೇವೆ. ನಂತರ ನನ್ನ ಮಗ ನಾಮದೇವ ಈತನು ಅಲ್ಲಿಂದ ಓಡಿ ಹೋಗಿರುತ್ತಾನೆ. ನನ್ನ ಗಂಡ ಸೇವಾಲಾಲ ಈತನು ಪ್ರತಿನಿತ್ಯ ಸಾರಾಯಿ ಕುಡಿದು ಬಂದು ನಮ್ಮ ಸಂಗಡ ಜಗಳ ಮಾಡುವುದು ಮತ್ತು ಅವಾಚ್ಯ ಶಬ್ದಗಳು ಬೈಯ್ಯುವುದನ್ನು ಮಾಡುತ್ತಿರುವುದರಿಂದ ನನ್ನ ಮಗ ನಾಮದೇವ ಈತನು ನನ್ನ ಗಂಡಿಗೆ ಕೊಲೆ ಮಾಡುವ ಉದ್ದೇಶದಿಂದ ನಿನ್ನೆ ದಿನಾಂಕ ೨೭-೦೩-೨೦೨೨ ರಂದು ರಾತ್ರಿ ೧೦.೩೦ ಗಂಟೆಗೆ ಹೊಟೆಲದಲ್ಲಿ ಮಲಗಿಕೊಳ್ಳುತ್ತೇವೆ ಅಂತಾ ಕರೆದುಕೊಂಡು ಹೋಗಿ ನನ್ನ ಗಂಡನು ಮಲಗಿದ ಸಮಯದಲ್ಲಿ ಅವನಿಗೆ ಕಲ್ಲಿನಿಂದ ಹೊಡೆದು ಉಳ್ಳಿಗಡ್ಡಿ ಕೊಯ್ಯುವ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದು ಸದರಿ ಘಟನೆಯು ರಾತ್ರಿ ೧೧.೦೦ ಪಿ.ಎಮ್ ದಿಂದ ಮಧ್ಯ ರಾತ್ರಿ ೧.೦೦ ಎ.ಎಮ್ ದ ಮಧ್ಯದ ಅವಧಿಯಲ್ಲಿ ಜರುಗಿರಬಹುದು ಕಾರಣ ಆತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಇತ್ಯಾದಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 08-04-2022 01:13 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080