ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 28/07/2023 ರಂದು ಸಾಯಂಕಾಲ 5:30 ಶ್ರೀ ಭೀಮಾಶಂಕರ ತಂದೆ ಬಸಣ್ಣಾ ದುತ್ತರಗಾಂವ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ನನಗೆ ಎರಡು ಜನ ಗಂಡು ಮಕ್ಕಳಿದ್ದು ಹಿರಿಯ ಮಗ ಶಿವಶರಣಪ್ಪಾ ಇತನು ಬೆಂಗಳೂರ ಖಾಸಗಿ ಕಂಪನಿಯಲ್ಲಿ ಈಗ ಸುಮಾರು 7 ವರ್ಷಗಳಿಂದ ಕೆಲಸ ಮಾಡಿಕೊಂಡು ಇದ್ದು ಆಗಾಗಾ ಊರಿಗೆ ಬಂದು ಹೋಗುವದು ಮಾಡಿಕೊಂಡು ಇದ್ದನು. ದಿನಾಂಕ: 05-02-2023 ರಂದು ನನ್ನ ಮಗ ಶಿವಶರಣಪ್ಪಾ ಇತನು ಬೆಂಗಳೂರಿನಿಂದ ಪಟ್ಟಣ್ಣ ಗ್ರಾಮಕ್ಕೆ ಬಂದಿರುತ್ತಾನೆ. ದಿನಾಂಕ: 07-02-2023 ರಂದು ಮದ್ಯಾಹ್ನ ಸಮಯದಲ್ಲಿ ನಾನು ಮನೆಯಲ್ಲಿರುವಾಗ ನನ್ನ ಮಗ ಶಿವಶರಣಪ್ಪಾ ಇತನು ಆಳಂದ ರೋಡಿಗೆ ಬರುವ ಕೇಂದ್ರಿಯ ವಿಶ್ವ ವಿದ್ಯಾಲಯದಲ್ಲಿ ಇರುವ ತನ್ನ ಗೆಳೆಯರಿಗೆ ಭೇಟಿಯಾಗಿ ಬರುತ್ತೆನೆ ಅಂತಾ ಮೋಟಾರ ಸೈಕಲ ನಂಬರ ಕೆಎ-05/ಹೆಚ್.ವಾಯ್-0896 ನೇದ್ದನ್ನು ಚಲಾಯಿಸಿಕೊಂಡು ಹೋದನು. ಮದ್ಯಾಹ್ನ ನಾನು ಮನೆಯಲ್ಲಿರುವಾಗ ನಮ್ಮ ಅಣ್ಣ ತಮ್ಮ ಸಿದ್ದಾರೂ ತಂದೆ ರಾಜೇಂದ್ರ ಪೊಲೀಸ ಪಾಟೀಲ ಇವರು ಪೋನ ಮಾಡಿ ನಾನು ಮತ್ತು ನಮ್ಮೂರಿನ ಭೀಮಾಶಂಕರ ತಂದೆ ಹಣಮಂತರಾವ ಪರಸ್ತೆ ಇಬ್ಬರೂ ನಮ್ಮೂರಿನ ಜವಳಿ ಇವರ ಕಬ್ಬಿನ ತೋಟದ ಹತ್ತೀರ ರೋಡ ಪಕ್ಕದಲ್ಲಿ ಇಬ್ಬರೂ  ಇರುವಾಗ ನಿಮ್ಮ ಮಗ ಶಿವಶರಣಪ್ಪಾ ಇತನು ಪಟ್ಟಣ್ಣ ಗ್ರಾಮದ ಕಡೆಯಿಂದ ಕೇಂದ್ರಿಯ ವಿಶ್ವ ವಿದ್ಯಾಲಯ ಕಡೆಗೆ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುತ್ತೀರುವಾಗ ಜವಳಿ ಇವರ ಕಬ್ಬಿನ ತೋಟದ ಹತ್ತೀರ ರೋಡ ಮೇಲೆ ಕಲಬುರಗಿ ಕಡೆಯಿಂದ ಆಳಂದ ಕಡೆಗೆ ಹೋಗುವ ಕುರಿತು ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶಿವಶರಣಪ್ಪಾ ಇತನ ಮೋಟಾರ ಸೈಕಲ ಹಿಂದುಗಡೆ ಡಿಕ್ಕಿಪಡಿಸಿ ಅಪಘಾತ ಮಾಡಿದಾಗ ನಿಮ್ಮ ಮಗ ತನ್ನ ಮೋಟಾರ ಸೈಕಲದೊಂದಿಗೆ ಪುಟಿದು ಹೋಗಿ ಬಿದ್ದನ್ನು. ನಾವು ಆತನ ಹತ್ತೀರ ಹೋಗಿ ಎಬ್ಬಿಸಿ ಕೂಡಿಸಿ ಆತನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಕಾರ ನಂಬರ ಎಮ್.ಹೆಚ್.-04/ಜಿಇ-8707 ಇದ್ದಿತ್ತು. ಅದರ ಚಾಲಕನು ನಮ್ಮ ಕಡೆಗೆ ನೋಡುತ್ತಾ ಟೂಲ ನಾಕಾ ಕಡೆಗೆ ಕಾರ ಸಮೇತ ಓಡಿ ಹೋದನು. ಸದರ ಘಟನೆ ಜರುಗಿದಾಗ ಮದ್ಯಾಹ್ನ 2-30 ಗಂಟೆ ಸಮಯವಾಗಿತ್ತು ಸದರ ಘಟನೆಯಿಂದ ಶಿವಶರಣಪ್ಪಾ ಇತನ ತಲೆಗೆ ಭಾರಿ ರಕ್ತಗಾಯ, ಬಲ ಚಪ್ಪೆಗೆ ಭಾರಿ ಗುಪ್ತಪೆಟ್ಟು, ಬಲಕಾಲಿನ ಹೆಬ್ಬರಳಿಗೆ ರಕ್ತಗಾಯವಾಗಿರುತ್ತದೆ ಸದರಿ ಘಟನೆ ಗೋತ್ತಾಗಿ ಪಕ್ಕದ ಟೂಲ ನಾಕಾ ಅಂಬುಲೇನ್ಸ ವಾಹನವು ಅಪಘಾತ ಸ್ಥಳಕ್ಕೆ ಬಂದಿದ್ದು ನಾನು ಮತ್ತು ಭೀಮಾಶಂಕರ ಇಬ್ಬರೂ ಸೇರಿಕೊಂಡು ನಿಮ್ಮ ಮಗ ಶಿವಶರಣಪ್ಪಾ ಇತನ ಉಪಚಾರ ಕುರಿತು ಕಲಬುರಗಿ ಖಾಸಗಿ ಕಾಮರೆಡ್ಡಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತೆವೆ ಅಂತಾ ತಿಳಿಸಿದ್ದರಿಂದ ನಾನು ಕಾಮರೆಡ್ಡಿ ಆಸ್ಪತ್ರೆಗೆ ಬಂದು ನನ್ನ ಮಗ ಶಿವಶರಣಪ್ಪಾ ಇತನಿಗೆ ನೋಡಲು ಆತನಿಗೆ ಭಾರಿಪೆಟ್ಟು ಬಿದ್ದಿದ್ದರಿಂದ ಉಪಚಾರದಲ್ಲಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಸಿದ್ದಾರೂಡ ಮತ್ತು ಭೀಮಾಶಂಕರ ಇವರಿಗೆ ಅಪಘಾತ ಪಡಿಸಿದ ಕಾರ ಚಾಲಕನ ಬಗ್ಗೆ ವಿಚಾರಿಸಲು ಕಾರ ಚಾಲಕನ ಹೆಸರು ಗೋತ್ತಾಗಿರುವದಿಲ್ಲ ಆತನನ್ನು ನೋಡಿದ್ದು ಮುಂದೆ ನೋಡಿದಲ್ಲಿ ಗುರ್ತಿಸುತ್ತೆನೆ ಅಂತಾ ತಿಳಿಸಿದರು. ಕಾಮರೆಡ್ಡಿ ಆಸ್ಪತ್ರೆಯಲ್ಲಿ ನನ್ನ ಮಗ ಶೀವಶರಣಪ್ಪಾ ಇತನಿಗೆ ಉಪಚಾರ ಮಾಡಿಸಿ ಆತನ ಹೆಚ್ಚಿನ ಉಪಚಾರ ಕುರಿತು ದಿನಾಂಕ: 15-02-2023 ರಂದು ಸೊಲಾಪೂರದ ಎಸ.ಎಸ.ಬಲದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಉಪಚಾರ ಮಾಡಿಸುತ್ತಿದ್ದರಿಂದ ಕಾರ ಚಾಲಕನ ಮೇಲೆ ದೂರು ನೀಡಲು ಆಗಿರುವದಿಲ್ಲ ಇಂದು ನಾನು ಸೊಲಾಪೂರದಿಂದ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ಸದರಿ ಕಾರ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವ ವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 27-02-2023 ರಂದು 2:00 ಪಿ.ಎಮ್ ದಿಂದ 7:00 ಪಿ.ಎಮ್ ದ ಮಧ್ಯದ ಅವಧಿಯಲ್ಲಿ ಫಿರ್ಯಾದಿಯ ಮನೆಯಲ್ಲಿಯ ಬೆಡ್ ರೂಮಿನಲ್ಲಿಯ ಕಟ್ಟಿಗೆ ಸೆಲ್ಪದಲ್ಲಿಯ ಬಟ್ಟೆಯೊಳಗೆ ಇಟ್ಟಿದ್ದ ನಗದು ಹಣ 20,000/-ರೂ ಮತ್ತು 5 ಗ್ರಾಂ ಬಂಗಾರದ ಒಂದು ಜೊತೆ ಬೆಂಡೋಲೆ ಕಾಣಲಿಲ್ಲ. ಯಾರೋ ಕಳ್ಳರು ನಮ್ಮ ಮನೆಯ ಮುಖ್ಯ ಬಾಗಿಲ ಕೊಂಡಿ ಮುರಿದ್ದು ಒಟ್ಟು 40,000/- ಕಿಮ್ಮತ್ತಿನ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರಾಘವೇಂದ್ರ ನಗರ ಪೊಲೀಸ್ ಠಾಣೆ :- ದಿನಾಂಕ: 28-02-2023 ರಂದು 11:30 ಎ.ಎಮ್ ಕ್ಕೆ ಶ್ರೀ ಶರಣಬಸಪ್ಪಾ ತಂದೆ ಚೆನ್ನಪ್ಪಾ ಔರಾದ ವಯ-26 ವರ್ಷ  ಜಾ||ಕಬ್ಬಲಿಗ  ಉ||ಖಾಸಗಿ ಕೆಲ್ಸ  ಸಾ||ಆಳಂದ ಕಾಲೋನಿ ಕಲಬುರಗಿ ರವರು ಠಾಣೆಗೆ ಹಾಜರಾಜಿ ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ದೂರು ಹಾಜರಪಡಿಸಿದ್ದರ ಸಾರಾಂಶವೆನೆಂದರೆ ಮಾನ್ಯರವರಲ್ಲಿ ಮೇಲ್ಕಂಡ ವಿಷಯದಲ್ಲಿ ಅರಿಕೆ ಮಾಡಿಕೊಳ್ಳುವದೆನೆಂದರೆ ನಾನು 2018 ನೇ ಸಾಲಿನಲ್ಲಿ ಹೋಂಡಾ ಡಿವೋ ಮೋಟಾರ ಸೈಕಲ್ ನಂ ಕೆಎ-32 ಇಆರ್-3560 ನೇದ್ದನ್ನು ಖರಿದಿ ಮಾಡಿದ್ದು ಇರುತ್ತದೆ. ಸದರಿ ಮೋಟಾರ ಸೈಕಲ್ನ್ನು ನಾನೆ ಉಪಯೋಗ ಮಾಡುತ್ತಾ ಬಂದಿರುತ್ತಾನೆ. ಹೀಗೆ ಇರುವಾಗ ದಿನಾಂಕ: 18-02-2023 ರಂದು ಸಾಯಂಕಾಲ್ 8:00 ಗಂಟೆ ಸುಮಾರಿಗೆ ನಾನು ನನ್ನ ಹೋಂಡಾ ಡಿವೋ ಮೋಟಾರ ಸೈಕಲ್ ನಂ ಕೆಎ-32 ಇಆರ್-3560 ಅ||ಕಿ|| 40000/-ರೂ ನೇದ್ದನ್ನು ಆಳಂದ ಚೆಕಪೋಸ್ಟ್ ಹತ್ತಿರ ಇರುವ ರಾಮತೀರ್ಥ ಗುಡಿಗೆ ಹೋಗುವ ಎದುರುಗಡೆ ಸರ್ವಿಸ ರೋಡನ ಪಕ್ಕದಲ್ಲಿ ನಿಲ್ಲಿಸಿ ರಾಮತೀರ್ಥ ಗುಡಿಗೆ ಹೋಗಿ ದರ್ಶನ ಮಾಡಿ ನಂತರ ರಾತ್ರಿ 9-00 ಗಂಟೆ ಸುಮಾರಿಗೆ ಮನೆಗೆ ಹೋಗಬೇಕು ಅಂತಾ ಬಂದು ನೋಡಲಾಗಿ ನಾನು ನಿಲ್ಲಿಸಿರುವ ನನ್ನ ಹೋಂಡಾ ಡಿವೋ ಮೋಟಾರ ಸೈಕಲ್ ನಂ ಕೆಎ-32 ಇಆರ್-3560  ಅ||ಕಿ|| 40000/- ರೂ ನೇದ್ದು ಇರಲಿಲ್ಲಾ ಯಾರೋ ಕಳ್ಳರು ನನ್ನ ಮೊಟಾರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು

ಸದರಿ ಮೋಟಾರ ಸೈಕಲ್ ವಿವರ ಈ ಕೆಳಗಿನಂತೆ ಇರುತ್ತದೆ.

1)      ಮೋಟಾರ ಸೈಕಲ್ ವಿಧಃಹೋಂಡಾ ಡಿವೋ 

2)      ಮೋಟಾರ ಸೈಕಲ್ ನಂ       : KA-32 ER-3560

3)      ಚಸ್ಸಿ ನಂ      : ME4JF39EMHT003777

4)      ಇಂಜಿನ ನಂ   : JF39ET2012317

5)      ಮಾಡಲ್ ನಂ : 2018

6)      ಬಣ್ಣ            : ಗ್ರೇ ಬಣ್ಣ

7)      ಅ.ಕಿ.          : 40000/-ರೂ

ಮಾನ್ಯರವರು ಕಳೆದು ಹೋದ ನನ್ನ ಮೋಟಾರ ಸೈಕಲನ್ನು ಪತ್ತೆಮಾಡಿ ಕೊಡಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ್ ಠಾಣೆ :- ದಿನಾಂಕ 28/02/2023 ರಂದು ಸಂಜೆ 07:15 ಗಂಟೆಗೆ ನಮ್ಮ ಠಾಣೆಯ ಶ್ರೀ ಹುಸೇನಬಾಷಾ ಎ.ಎಸ್.ಐ.  ಚೌಕ ಪೊಲೀಸ ಠಾಣೆ ಕಲಬುರಗಿ ರವರು ಮಟಕಾ ಜೂಜಾಟ ನಿರತ ಇಬ್ಬರು  ಆರೋಪಿತರು ಮತ್ತು ಮುದ್ದೆಮಾಲು ಹಾಗೂ  ಮಟಕಾ ಜೂಜಾಟ ದಾಳಿ ಮಾಡಿದ  ಸರಕಾರಿ ತರ್ಫೇ ದೂರು ಮತ್ತು ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ತಮ್ಮ ಸರಕಾರಿ ತರ್ಫೇ ದೂರು ಕೊಟ್ಟಿದ್ದರ  ಸಾರಾಂಶವೆನೆಂದೆರೆ, ನಾನು, ಹುಸೇನಬಾಷಾ  ಎ.ಎಸ್.ಐ. ಚೌಕ ಪೊಲೀಸ ಠಾಣೆ ಕಲಬುರಗಿ ಸರ್ಕಾರಿ ತರ್ಫೇ ದೂರು ಕೊಡುವುದೆನೆಂದರೆ, ಇಂದು ದಿನಾಂಕ: 28/02/2023 ರಂದು ಮಧ್ಯಾಹ್ನ 04:30 ಗಂಟೆಗೆ ಕಲಬುರಗಿ ಚೌಕ ಪೊಲೀಸ ಠಾಣೆಯಲ್ಲಿ ಇದ್ದಾಗ ನಮ್ಮ ಚೌಕ ಠಾಣೆಯ ಶ್ರೀ ವಿಜಯಕುಮಾರ ಸಿನ್ನೂರು ಪಿ.ಐ. ರವರು  ನನಗೆ ಕಲಬುರಗಿ ನಗರ ರಾಜೀವಗಾಂಧಿ ನಗರ ಫೀಲ್ಟರ ಬೇಡ ಕೆ.ಬಿ.ಇ. ಖಜಾನೆ ಎದುರುಗಡೆ ಇರುವ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಇಬ್ಬರು  ನಿಂತುಕೊಂಡು ಹೋಗಿ-ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದಿದೆ. ನೀವು ದಾಳಿ ಮಾಡಿ ಮುಂದಿನ ಕಾನೂನು ಕ್ರಮ ಕೈ ಕೊಳ್ಳಲು ಆದೇಶಿಸಿದ ಪ್ರಕಾರ ನಾನು, ಪಿ.ಐ. ಸಾಹೇಬರ ಬಾತ್ಮಿ ಮೇರೆಗೆ ಮಟಕಾ ಜೂಜಾಟದಲ್ಲಿ ನಿರತನಾದವನ ಮೇಲೆ ದಾಳಿ ಮಾಡಿ ಹಿಡಿದು ಅವನ ವಿರುದ್ಧ ಅಸಂಜ್ಞೇಯ ಕಲಂ 78 (3) ಕೆ.ಪಿ.ಎಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಕೋರಿ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ಕೋರಿಕೊಂಡು, ಇಬ್ಬರು ಪಂಚರಾದ 1)ಶ್ರೀ ಶರಣಪ್ಪ ತಂದೆ ಹಣಮಂತಪ್ಪ ಡೋರನಳ್ಳಿ ವ:52 ವರ್ಷ ಉ:ಗೌಂಡಿ ಕೆಲಸ ಜಾತಿ ಕಬ್ಬಲೀಗ ಸಾ:ಯಲ್ಲಮ್ಮ ಗುಡಿ ಹತ್ತಿರ ಗಂಗಾ ನಗರ ಕಲಬುರಗಿ  2) ಶ್ರೀ ಮಾಹಾದೇವ ತಂದೆ ಶ್ರೀಪತರಾವ ಮೇತ್ರೆ ವ:32 ವರ್ಷ ಉ:ಕಂಬಾರ ಕೆಲಸ ಜಾತಿ ಗಿಸಾಡಿ ಸಾ:ಸಿಟಿ ಬಸ್‌ ಸ್ಟ್ಯಾಡ ಎದುರುಗಡೆ ಜೋಪಡಪಟ್ಟಿ ಕಲಬುರಗಿ ಇವರುಗಳನ್ನು ಮತ್ತು ನಮ್ಮ ಠಾಣಾ ಸಿಬ್ಬಂದಿಯವರಾದ  ಶ್ರೀ ಸುರೇಶ ಸಿಪಿಸಿ-130, ಶ್ರೀ ಫಿರೋಜ ಸಿಪಿಸಿ-313  ಶ್ರೀ ಮೋಸಿನ ಸಿಪಿಸಿ-285, ಶ್ರೀ ರಾಜಕುಮಾರ ಸಿಪಿಸಿ-166, ಶ್ರೀ ಸೈಯ್ಯದ ತೌಸೀಫ ಹುಸೇನ, ಶ್ರೀ ಅಶೋಕ ಸಿಪಿಸಿ-06 ಇವರಿಗೂ ಬರಮಾಡಿಕೊಂಡು ಈ ಮೇಲಿನ ಮಟಕಾ ಜೂಜಾಟದ ಬಾತ್ಮಿ ವಿಷಯ ತಿಳಿಸಿ, ಪಂಚರಿಗೆ ನಾವು ಮಾಡುವ ದಾಳಿ ಜಪ್ತಿ ಪಂಚನಾಮೆಯ ಪಂಚರಾಗಿ ಜಪ್ತಿ ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಪಂಚರು ಒಪ್ಪಿಕೊಂಡರು. ಮತ್ತು ಈ ಮೇಲಿನ ಸಿಬ್ಬಂದಿಯವರಿಗೆ ನಮ್ಮ ಜೊತೆಯಲ್ಲಿ ದಾಳಿಗೆ ಬರಲು ಸೂಚಿಸಿದಾಗ ಅವರು ಕೂಡಾ ಒಪ್ಪಿಕೊಂಡರು. ಆಗ ನಾನು ಮಟಕಾ ಜೂಜಾಟ ದಾಳಿ ಕುರಿತು ನಾನು ಮತ್ತು ಸಿಬ್ಬಂದಿಯವರು ಹಾಗೂ ಪಂಚರು ನಮ್ಮ ನಮ್ಮ ಮೋಟಾರ ಸೈಕಲಗಳ ಮೇಲೆ ಕುಳಿತುಕೊಂಡೇವು. ನಮ್ಮಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ದಾಳಿ ಕುರಿತು, ಠಾಣೆಯಿಂದ ಸಂಜೆ 05-00  ಗಂಟೆಗೆ ಹೊರಟಿದ್ದು, ಬಾತ್ಮಿ ಸ್ಥಳವಾದ ಕಲಬುರಗಿ ನಗರ ರಾಜೀವಗಾಂಧಿ ನಗರ ಫೀಲ್ಟರ ಬೇಡ ಕೆ.ಬಿ.ಇ. ಖಜಾನೆ ಇನ್ನೂ ಸ್ವಲ್ಪ ದೂರ ಇರುವಂತೆ ಎಲ್ಲರೂ ನಮ್ಮ ನಮ್ಮ ಮೋಟಾರ ಸೈಕಲಗಳನ್ನು ನಿಲ್ಲಿಸಿ  ಎಲ್ಲರೂ ಇಳಿದು ಒಂದು ಮನೆಯ ಮರೆಯಲ್ಲಿ ನಿಂತು ನೋಡಲಾಗಿ  ಇಬ್ಬರು  ಕಲಬುರಗಿ ನಗರ ರಾಜೀವಗಾಂಧಿ ನಗರ ಫೀಲ್ಟರ ಬೇಡ ಕೆ.ಬಿ.ಇ. ಖಜಾನೆ ಎದುರಿನ ಸಾರ್ವಜನಿಕ ರಸ್ತೆ ಬದಿಯಲ್ಲಿ ನಿಂತುಕೊಂಡು ಹೋಗು-ಬರುವ ಸಾರ್ವಜನಿಕರಿಗೆ 1 ರೂ.ಗೆ 80 ರೂ. ಗೆಲ್ಲಿರಿ ಕಲ್ಯಾಣ ಮಟಕಾ ಇದೆ ಅಂತಾ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಬರೆದುಕೊಡುತ್ತಿದ್ದನ್ನು ನೋಡಿ ನನ್ನ ಜೊತೆಯಲ್ಲಿ ಬಂದಿದ್ದ ಪಂಚರಿಗೆ ಮತ್ತು ಈ ಮೇಲಿನ ಸಿಬ್ಬಂದಿಯವರಿಗೆ ತೋರಿಸಿ ಖಚಿತಪಡಿಸಿಕೊಂಡು, ಪಂಚರ ನಮ್ಮ ಸಮಕ್ಷಮದಲ್ಲಿ ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ಸಂಜೆ 5-30 ಗಂಟೆಗೆ ದಾಳಿ ಮಾಡಿದಾಗ ಮಟಕಾ ಚೀಟಿಗಳು ಬರೆಯಿಸಲು ಬಂದಿದ್ದ ಸಾರ್ವಜನಿಕರು ಅಲ್ಲಿಂದ ಓಡಿ ಹೋದರು. ಮಟಕಾ ಬರೆದುಕೊಳ್ಳುತ್ತಿದ್ದ ಇಬ್ಬರಿಗೆ ಹಿಡಿದಿದ್ದು, ಅವರಲ್ಲಿ ಒಬ್ಬನು ಹೆಸರು ವಿಳಾಸ ವಿಚಾರಿಸಲೂ ಅವನು ತನ್ನ ಹೆಸರು ಲಕ್ಷ್ಮೀಕಾಂತ ತಂದೆ ಕೃಷ್ಣಾ ಭುಯ್ಯೆ ವ:28 ವರ್ಷ ಉ: ಆಟೋ ಚಾಲಕ ಜಾತಿ ಹಿಂದು ಖಾಟಿಕ ಸಾ: ರಾಜೀವಗಾಂಧಿ ನಗರ ಕೆ.ಇ.ಬಿ. ಖಜಾನೆ ಹತ್ತಿರ ಕಲಬುರಗಿ ಅಂತಾ ತಿಳಿಸಿದನು. ಆತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ:ಕಿ:00 ರೂ. ಮತ್ತು ಒಂದು ಬಾಲಪೆನ್ನು ಅ:ಕಿ:00 ರೂ. ಹಾಗೂ ನಗದು ಹಣ 1310/- ರೂ. ದೊರೆತವು. ಎರಡನೆಯವನಿಗೆ  ಅವನ ಹೆಸರು ವಿಳಾಸ ವಿಚಾರಿಸಲೂ ಅವನು ತನ್ನ ಹೆಸರು  ಗಂಗಾಧರ ತಂದೆ ಕಾಶಿನಾಥ ಭುಯ್ಯಾ ವ:43 ವರ್ಷ ಉ: ಹೋಟಲ ವ್ಯಾಪರ ಜಾತಿ ಹಿಂದೂ ಖಾಟಿಕ ಸಾ: ರಾಜೀವಗಾಂಧಿ ನಗರ ಕೆ.ಇ.ಬಿ. ಖಜಾನೆ ಹತ್ತಿರ ಕಲಬುರಗಿ ಅಂತಾ ತಿಳಿಸಿದನು. ಆತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ:ಕಿ:00 ರೂ. ಮತ್ತು ಒಂದು ಬಾಲಪೆನ್ನು ಅ:ಕಿ:00 ರೂ. ಹಾಗೂ ನಗದು ಹಣ 2050/- ರೂ. ದೊರೆತವು. ನಂತರ ಅವರಿಬ್ಬರಿಗೆ ಮಟಕಾ ಚೀಟಿ ಯಾರಿಗೆ ಒಯ್ದು ಕೊಡುತ್ತೀ ಅಂತಾ ವಿಚಾರಿಸಿದಾಗ, ಅವನು ರಾಜಶೇಖರ ತಂದೆ ಮಲ್ಲಿಕಾರ್ಜುನ ಉಮಾಶೆಟ್ಟಿ ಸಾ: ರೇವಣಸಿದ್ದೇಶ್ವರ ಕಾಲನಿ ಕಲಬುರಗಿ ಇತನಿಗೆ ಕೊಡುವುದಾಗಿ ತಿಳಿಸಿದರು. ಆಗ ನಾನು ಕೇಸಿನ ಪುರಾವೆಗೋಸ್ಕರ ಒಂದು ದಸ್ತಿಯಲ್ಲಿ ಮಟಕಾ ಚೀಟಿ, ಬಾಲಪೆನ್ನು, ಹಣ ಹಾಕಿ ಗಂಟು ಕಟ್ಟಿ ಅದಕ್ಕೆ ಪಂಚರು ಸಹಿಸಿದ ಚೀಟಿ ಅಂಟಿಸಿ ವಶಕ್ಕೆ ತೆಗೆದುಕೊಂಡು ಜಪ್ತಪಡಿಸಿಕೊಂಡೆನು. ಮತ್ತು ಲಕ್ಷ್ಮೀಕಾಂತ ತಂದೆ ಕೃಷ್ಣಾ ಭುಯ್ಯೆ ವ:28 ವರ್ಷ ಉ: ಆಟೋ ಚಾಲಕ ಜಾತಿ ಹಿಂದು ಖಾಟಿಕ ಸಾ: ರಾಜೀವಗಾಂಧಿ ನಗರ ಕೆ.ಇ.ಬಿ. ಖಜಾನೆ ಹತ್ತಿರ ಕಲಬುರಗಿ ಮತ್ತು ಗಂಗಾಧರ ತಂದೆ ಕಾಶಿನಾಥ ಭುಯ್ಯಾ ವ:43 ವರ್ಷ ಉ: ಹೋಟಲ ವ್ಯಾಪರ ಜಾತಿ ಹಿಂದೂ ಖಾಟಿಕ ಸಾ: ರಾಜೀವಗಾಂಧಿ ನಗರ ಕೆ.ಇ.ಬಿ. ಖಜಾನೆ ಹತ್ತಿರ ಕಲಬುರಗಿ ಹಾಗೂ ರಾಜಶೇಖರ  ತಂದೆ ಮಲ್ಲಿಕಾರ್ಜುನ ಉಮಾಶೆಟ್ಟಿ ಸಾ: ರೇವಣಸಿದ್ದೇಶ್ವರ ಕಾಲನಿ ಕಲಬುರಗಿ ಇವರುಗಳು ಮಟಕಾ ಜೂಜಾಟದಲ್ಲಿ ನಿರತರಾದ ಖಚಿತಪಟ್ಟಿದ್ದರಿಂದ  ಸಿಕ್ಕಿ ಬಿದ್ದ ಲಕ್ಷ್ಮೀಕಾಂತ ಮತ್ತು ಗಂಗಾಧರ ಇವರುಗಳಿಗೆ ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ವಶಕ್ಕೆ ತೆಗೆದುಕೊಂಡೇವು. ಸದರ ಜಪ್ತಿ ಪಂಚನಾಮೆ ಸದರ ಜಪ್ತಿ ಪಂಚನಾಮೆ ಇಂದು ದಿನಾಂಕ 28/02/2023 ರಂದು ಸಂಜೆ 05-30 ಗಂಟೆಯಿಂದ ಸಂಜೆ 6-30 ಗಂಟೆಯವರೆಗೆ ಸದರ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮಲ್ಲಿ ಲ್ಯಾಪಟ್ಯಾಪನಲ್ಲಿ ಶ್ರೀ ಅಶೋಕ ಸಿಪಿಸಿ 06 ಇವರ ಕಡೆಯಿಂದ ಗಣಕೀಕೃತ ಮಾಡಿ ಮುಗಿಸಲಾಯಿತು. ಸದರಿ ಮಟಕಾ ಜೂಜಾಟದಲ್ಲಿ ನಿರತರಾದ ಮತ್ತು ಲಕ್ಷ್ಮೀಕಾಂತ ತಂದೆ ಕೃಷ್ಣಾ ಭುಯ್ಯೆ ವ:28 ವರ್ಷ ಉ:ಆಟೋ ಚಾಲಕ ಜಾತಿ ಹಿಂದು ಖಾಟಿಕ ಸಾ: ರಾಜೀವಗಾಂಧಿ ನಗರ ಕೆ.ಇ.ಬಿ. ಖಜಾನೆ ಹತ್ತಿರ ಕಲಬುರಗಿ ಮತ್ತು ಗಂಗಾಧರ ತಂದೆ ಕಾಶಿನಾಥ ಭುಯ್ಯಾ ವ:43 ವರ್ಷ ಉ: ಹೋಟಲ ವ್ಯಾಪರ ಜಾತಿ ಹಿಂದೂ ಖಾಟಿಕ ಸಾ: ರಾಜೀವಗಾಂಧಿ ನಗರ ಕೆ.ಇ.ಬಿ. ಖಜಾನೆ ಹತ್ತಿರ ಕಲಬುರಗಿ ಹಾಗೂ ರಾಜಶೇಖರ  ತಂದೆ ಮಲ್ಲಿಕಾರ್ಜುನ ಉಮಾಶೆಟ್ಟಿ ಸಾ: ರೇವಣಸಿದ್ದೇಶ್ವರ ಕಾಲನಿ ಕಲಬುರಗಿ ಇವರುಗಳು ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಸರ್ಕಾರ ತರ್ಫೇ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ ಪೊಲೀಸ ಠಾಣೆ :- ಬಸವರಾಜ ಆರೋಪಿತ ಈತನು ಫಿರ್ಯಾದಿಯ ಮನೆಯಲ್ಲಿ ಕಟ್ಟಡ ಕೆಲಸ ಮಾಡಿಕೊಂಡು ಬಂದಿದ್ದು ಫಿರ್ಯಾದಿಯು ಆತನಿಗೆ ಕೂಲಿ ಹಣವನ್ನು ಕೊಟ್ಟು ಮತ್ತು ಖರ್ಚಿಗೆ ಹಣವನ್ನು ಕೊಟ್ಟಿದ್ದು ದಿನಾಂಕ: 08-02-2023 ರಂದು ಸದರಿ ಆರೋಪಿತ ಈತನು ಫಿರ್ಯಾದಿಗೆ ಕುಡಿಯಲು ಹಣವನ್ನು ಕೊಡೆಂದು ಕೇಳಿದಾಗ ಅದಕ್ಕೆ ಫಿರ್ಯಾದಿಯು ಹಣ ನನ್ನ ಬಳಿ ಇಲ್ಲ ಎಂದಿದ್ದಕ್ಕೆ ಆರೋಪಿತನು ಹಣ ಕೊಡುವುದಿಲ್ಲಾ ನಿನಗೆ ನೋಡಿಕೊಳ್ಳುತ್ತೇನೆ ಎಂದು ಬೈದು ಹೋಗಿದ್ದು ಫಿರ್ಯಾದಿಯು ಸಂಜೆ ಮಲಗಿಕೊಂಡಿದ್ದ ಸಮಯದಲ್ಲಿ ಅವರು ನೇತು ಹಾಕಿದ್ದ ಹಣದಲ್ಲಿ ಆರೋಪಿತನು 5000/-  ಹಣವನ್ನು ಕಳುವು  ಮಾಡಿದ್ದು ಅದನ್ನು ಊರಿನ ಮುಖ್ಯಸ್ಥರ ಬಳಿ ಕರೆದು ಕೇಳಿದಾಗ ಸದರಿ ಆರೋಪಿತನು ಒಪ್ಪಿಕೊಂಡಿದ್ದು ನಂತರ ನಾನು ಕಳುವು ಮಾಡಿಲ್ಲ ಎಂದು ಸುಳ್ಳು ಹೇಳುತ್ತಿದ್ದಾನೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 01-03-2023 03:02 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080