ಅಭಿಪ್ರಾಯ / ಸಲಹೆಗಳು

ಚೌಕ  ಪೊಲೀಸ್ ಠಾಣೆ :-  ದಿನಾಂಕ 28-02-2022 ರಂದು ರಾತ್ರಿ ೯-೦೦ ಗಂಟೆಗೆ ಶ್ರೀ ರೋಹಿತ ತಂದೆ ಸುರೇಶ ರತ್ನಾಕರ ಇತನು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಮಾಡಿದ ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ, ಕಳೆದ ಒಂದು ವರ್ಷದ ಹಿಂದೆ ನಮ್ಮ ಅಣ್ಣ ಸಾಗರ ಮತ್ತು ಅವನ ಗೆಳೆಯರಾಗಿರುವ  ವಿಜಯಕುಮಾರ,ಕರ್ಣ, ರಾಚಿ, ಭರತ, ಹಾಗೂ ಕಿಶನ ಇವರ ಮಧ್ಯದಲ್ಲಿ ಜಗಳಾವಾಗಿರುತ್ತದೆ.ಆ ವೇಳೆಯಲ್ಲಿ ಕರ್ಣ ಮತ್ತು ಅವನ ಸಂಗಡಿಗರು ಕೂಡಿಕೊಂಡು ನಮ್ಮ ಅಣ್ಣನ ಗೆಳೆಯನಾದ ವಿಜಯಕುಮಾರ ಇತನ ಕಾಲಿಗೆ ಮಚ್ಚಿನಿಂದ ಹೊಡೆದು ಕತ್ತರಿಸಿ ಹಾಫ ಮರ್ಡರ್ ಕೇಸ ಆಗಿರುತ್ತದೆ.ಅದೇ ವೈಮನಸ್ಸಿನಿಂದ ನನ್ನ ಅಣ್ಣ ಸಾಗರ ಮತ್ತು ಅವನ ಸಂಗಡಿಗರು ಕೂಡಿಕೊಂಡು ಕರ್ಣನ ಗೆಳೆಯನಾದ ಅನಿಲ್ ದುಬೈ ಕಾಲನಿ ಕಲಬುರಗಿ ಇತನಿಗೆ ಕೊಲೆ ಮಾಡಿರುತ್ತಾರೆ. ಹೀಗಾಗಿ  ನಮ್ಮ ಅಣ್ಣ ಸಾಗರ ಮತ್ತು ಅವನ ಸಂಗಡಿಗರು ಮತ್ತು ಕರ್ಣ ಜಮಾದಾರ ಮತ್ತು ಅವನ ಸಂಗಡಿಗರ ಮಧ್ಯೆ  ವೈಮನಸ್ಸು ಬೆಳೆದು ಒಬ್ಬರ ಮೇಲೆ ಒಬ್ಬರು ಸೇಡು ತೀರಿಸಿಕೊಳ್ಳುವ ಕುರಿತು ಈ ಮೇಲಿನಂತೆ ದ್ವೇಷ ಸಾಧಿಸುತ್ತಾ ಬಂದಿರುತ್ತಾರೆ. ನನ್ನ ಅಣ್ಣ ಸಾಗರ ಇತನು ಸಧ್ಯ ಮರ್ಡರ್ ಕೇಸಿನಲ್ಲಿ ಜೇಲನಲ್ಲಿ ಇರುತ್ತಾನೆ. ನಮ್ಮ ಅಣ್ಣನ ಮೇಲಿನ ದ್ವೇಷಕ್ಕಾಗಿ ಕರ್ಣ ಮತ್ತು ಅವನ ಸಂಗಡಿಗರು ನನಗೆ ಹೊಡೆಯಬೇಕೆಂದು ಸಮಯ ಕಾಯುತ್ತಾ ಇದ್ದರು.ಆದ್ದರಿಂದ ಕರ್ಣಮತ್ತು ಅವನ ಸಂಗಡಿಗರ ನನಗೆ ಹೊಡೆಯಬಹುದೆಂದು, ಹೆದರಿ ಈಗ ೫-೬ ತಿಂಗಳ ಹಿಂದೆ ಕಲಬುರಗಿ ಬಿಟ್ಟು ಬೆಂಗಳೂರಿಗೆ ಹೋಗಿರುತ್ತೇನೆ. ದಿನಾಂಕ ೧೨/೦೨/೨೦೨೨ ರಂದು ನಾನು ಮತ್ತು ಶಹಾಬಜಾರ ಬಡಾವಣೆಯ ನಿವಾಸಿ ಬೆಂಗಳೂರನಲ್ಲಿ ಪರಿಚಯವಾದ ನನ್ನ ಗೆಳೆಯ  ಪ್ರದೀಪ ಗೌಳಿ ಇಬ್ಬರು ಕೂಡಿಕೊಂಡು ನಮ್ಮ ಮನೆಯವರಿಗೆ ಭೇಟ್ಟಿ ಕುರಿತು ಕಲಬುರಗಿಗೆ ಬಂದಿರುತ್ತೇವೆ. ನಿನ್ನೆ ದಿನಾಂಕ ೨೭/೦೨/೨೦೨೨ ರಂದು ರಾತ್ರಿ ೮-೦೦ ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಇದ್ದಾಗ ನಮ್ಮ ಗೆಳೆಯ ಪ್ರದೀಪ ಗೌಳಿ ಇತನಿಗೆ ಪೋನ ಮಾಡಿ ಮನೆ ಹತ್ತಿರ ಬರಮಾಡಿಕೊಂಡು, ಅವನು ತಂದಿದ್ದ ಅವೈಟರ ಮೋಟಾರ ಸೈಕಲ ಹಿಂದೆ ಕುಳಿತುಕೊಂಡು ನಮ್ಮ ಮನೆಯಿಂದ ಶಹಾಬಜಾರ ಲಾಲ ಹನುಮಾನ ಗುಡಿ ಹತ್ತಿರ ಇರುವ ಪಾನಿಪೂರಿ ಬಂಡಿಗೆ ಪಾನಿಪೂರಿ ತಿನ್ನಲು ಹೊರಟಾಗ, ಅಂಬಾಭಾಯಿ ಗುಡಿ ಹತ್ತಿರ ಇರುವ ಕುಣಿಗೇರಿ ರೋಡಿನ ಮೇಲೆ ಬಂದಾಗ ನಮ್ಮ ಅವೈಟರ ಗಾಡಿ ಪಂಚರ ಆಗಿದ್ದರಿಂದ ನಾವಿಬ್ಬರು ಗಾಡಿ ಒತ್ತಿಕೊಂಡು ಹೊರಟಿದ್ದು,  ರಾತ್ರಿ ೮-೧೫ ಗಂಟೆ ಸುಮಾರಿಗೆ ಶಹಾಬಜಾರ ಆರಾಧಾನ ಸ್ಕೂಲ ಹತ್ತಿರ ರೋಡಿನ ಮೇಲೆ ಬರುತ್ತಿದ್ದಾಗ ಎದುರುಗಡೆಯಿಂದ ಕರ್ಣ @ ರಾಕ್ಸ್ ತಂದೆ ರಮೇಶ ಜಮಾದಾರ ಇತನು ಒಂದು ಬುಲೆಟ ಮೋಟಾರ ಸೈಕಲ ಹಿಂದೆ ರಾಚಿ @ ರಾಚಣ್ಣಾ ತಂದೆ ಕಾಶಿನಾಥ ಇತನಿಗೆ ಕೂಡಿಸಿಕೊಂಡು  ಮತ್ತು ಕಿಶನ ತಂದೆ ಅಣ್ಣಪ್ಪ ಕಟ್ಟಿಮನಿ ಇತನು ಡಿಯೋ ಮೋಟಾರ ಸೈಕಲ ಹಿಂದೆ ಭರತ ತಂದೆ ಸದಾಶಿವ ಮರತೂರಕರ ಇತನಿಗೆ ಕೂಡಿಸಿಕೊಂಡು ಬಂದವರೇ ಎರಡು ಮೋಟಾರ ಸೈಕಲಗಳಿಂದ ನಮ್ಮ ಮೋಟಾರ ಸೈಕಲಿಗೆ ಅಡ್ಡಗಟ್ಟಿ ನಿಲ್ಲಿಸಿ ಎರಡು ಮೋಟಾರ ಸೈಕಲಗಳಿಂದ ನಾಲ್ಕು ಜನರು ಇಳಿದು ಅವರಲ್ಲಿ ಕರ್ಣ ಇತನು ಪ್ರದೀಪ ಗೌಳಿ ಇತನಿಗೆ ರಂಡಿ ಮಗನೇ ನನ್ನ ಹತ್ತಿರದಿಂದ ೨೦,೦೦೦/- ರೂ. ಹಣ ತೆಗೆದುಕೊಂಡು ಇಷ್ಟು ದಿನ ಎಲ್ಲಿಗೆ ಓಡಿ ಹೋಗಿದ್ದೀ ರಂಡಿ ಮಗನೇ ಅಂತಾ ಬೈಯ್ಯುತ್ತಾ ಕರ್ಣ ಮತ್ತು ರಾಚಿ ಇಬ್ಬರು ಕೈಯಿಂದ ೨-೩ ಏಟು ಕಪಾಳ ಮೇಲೆ ಹೊಡೆ ಬಡೆ ಮಾಡಿದರು. ಆಗ  ಅವರೆಲ್ಲರೂ  ನೀನು ಸಾಗ್ಯಾನ ತಮ್ಮ ಇದ್ದೀ ರಂಡಿ ಮಗನೇ ಇಷ್ಟು ದಿನ ನೀನು ಸಿಕ್ಕಿಲ್ಲಾ ವಡ್ಡ ಸೂಳೇ ಮಗನೇ ಇವತ್ತು ನಿನಗೆ ಜೀವ ಸಹಿತ ಬಿಡುವುದಿಲ್ಲಾ ಎಂದು ಬೆದರಿಕೆ ಹಾಕಿ ಕರ್ಣ ಇತನು ತನ್ನ ಬುಲೆಟ ಗಾಡಿಯಲ್ಲಿ ಇಟ್ಟಿದ ಚಾಕು ತೆಗೆದುಕೊಂಡು ನನ್ನ ಹತ್ತಿರ ಬಂದನು. ಆಗ ಪ್ರದೀಪನು ಅಲ್ಲಿಂದ ಓಡಿ ಹೋದನು.ಈ ನಾಲ್ಕು ಜನರು ನನಗೆ ಕೊಲೆ ಮಾಡಿಯೇ ಬಿಡುತ್ತಾರೆ ಎಂದು ಹೆದರಿಕೊಂಡು ಜಿಡಿಎ ಕಾಲನಿ ಕಡೆ ಓಡಿ ಹೋದನು. ನಾಲ್ಕು ಜನರು ತಾವು ತಂದಿದ್ದ ಎರಡು ಮೋಟಾರ ಸೈಕಲಗಳ ಮೇಲೆ ಬೆನ್ನು ಹತ್ತಿ ನನಗೆ ಜಿಡಿಎ ಕಾಲನಿ ಗಾರ್ಡನ ಹತ್ತಿರ  ರಾತ್ರಿ ೮-೩೦ ಗಂಟೆ ಸುಮಾರಿಗೆ  ಮತ್ತೆ ಹಿಡಿದುಕೊಂಡರು. ನಾಲ್ಕು ಜನರು ನನಗೆ ವಡ್ಡ ಸೂಳೇ ಮಗನೇ ನಮ್ಮಿಂದ ತಪ್ಪಿಸಿಕೊಂಡು ಎಲ್ಲಿಗೆ ಓಡಿ ಹೋಗುತ್ತೀ ಮಗನೇ ಅನ್ನುತ್ತಾ ಕರ್ಣ ಇತನು ಅಲ್ಲೇ ಬಿದ್ದ ಕಲ್ಲು ತೆಗೆದುಕೊಂಡು ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ತಲೆ ಹಿಂದೆ ಹೊಡೆದು ರಕ್ತಗಾಯಗೊಳಿಸಿದನು.ಮತ್ತು ರಾಚಿ ಇತನು ಅಲ್ಲೇ ಬಿದ್ದ ಬಿಯರ ಬಾಟಲಿಯಿಂದ ನನ್ನ ಬಲಗಡೆ ಹಣೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು.ಭರತ ಮತ್ತು ಕಿಶನ ಇಬ್ಬರು ಕೈ ಮುಷ್ಟಿ ಮಾಡಿ ಹೊಟ್ಟೆಗೆ ಎದೆಗೆ, ಬೆನ್ನಿಗೆ ಹೊಡೆದು ಗುಪ್ತಗಾಯಗೊಳಿಸಿದನು.ಕರ್ಣ ಇತನು ತನ್ನ ಹತ್ತಿರವಿದ್ದ ಚಾಕುವಿನಿಂದ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಕುತ್ತಿಗೆ ಹೊಡೆಯಲು ಆ ಏಟು ತಪ್ಪಿಸಿಕೊಂಡೆನು.ಆ ಏಟು ತಪ್ಪಿಸಿಕೊಳ್ಳದಿದ್ದರೆ ನನ್ನ ಕುತ್ತಿಗಿಗೆ ಹೊಡೆದು ಕೊಲೆ ಮಾಡಿಯೇ ಬಿಡುತ್ತಿದ್ದನ್ನು, ಈ ಜಗಳಾ ಸುಮೀತ ಮತ್ತು ನಿತೀನ ಹಾಗೂಇತರೇ ಜನರುನಮ್ಮ ಕಡೆಗೆ ಬರುತ್ತಿರುವುದನ್ನು ನೋಡಿ ಅವರು ನನಗೆ ಹೊಡೆಯುವುದನ್ನು ಬಿಟ್ಟು ತಾವು ತಂದಿದ್ದ ಮೋಟಾರ ಸೈಕಲ ಮೇಲೆ ಕುಳಿತುಕೊಂಡು ಅಲ್ಲಿಂದ ಓಡಿ ಹೋದರು. ಅಲ್ಲಿಂದ ನಾನು ಉಪಚಾರ ಕುರಿತು ನೇರವಾಗಿ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ ಹೋಗಿ ತೋರಿಸಿಕೊಂಡು, ನನಗೆ ಹೊಡೆದವರು ಮತ್ತೆ ಆಸ್ಪತ್ರೆಗೆ ಬರಬಹುದೆಂದು ಹೆದರಿಕೊಂಡು ಮನೆಗೆ ಹೋಗಿ, ಮನೆಯಲ್ಲಿ  ತಂದೆ, ತಾಯಿಗೆ ತಿಳಿಸಿ, ಇಂದು ರಾತ್ರಿ ಠಾಣೆಗೆ ಬಂದು ದೂರು ಕೊಟ್ಟಿದ್ದು ಈ ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ. ಕಾರಣ ಈ ಮೇಲ್ಕಂಡ ದ್ವೇಷದಿಂದ ನನಗೆ ಅವಾಚ್ಯ ಬೈದು ಜಾತಿ ನಿಂದನೆ ಮಾಡಿ ಕಲ್ಲಿನಿಂದ, ಬೀರ ಬಾಟಲಿಯಿಂದ ಚಾಕುವಿನಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ ೧)ಕರ್ಣ @ ರಾಕ್ಸ್  ತಂದೆ ರಮೇಶ ಜಮಾದಾರ ಸಾ: ಜಿಡಿಎ ಕಾಲನಿ ಶಹಾಜಾರ ಕಲಬುರಗಿ ೨) ರಾಚಿ @ ರಾಚಣ್ಣಾ ತಂದೆ ಕಾಶಿನಾಥ ಸಾ: ಗಂಜ ಬ್ಯಾಂಕ ಕಾಲನಿ ಕಲಬುರಗಿ ೩)ಕಿಶನ ತಂದೆ ಅಣ್ಣಪ್ಪ ಕಟ್ಟಿಮನಿ ಸಾ: ಶಹಾಬಜಾರ ಕಲಬುರಗಿ  ೪) ಭರತ ತಂದೆ ಸದಾಶಿವ ಮರತೂರಕರ ಸಾ:ರಾಮಜಿ ನಗರ ಕಲಬುರಗಿ  ಇವರುಗಳ ಮೇಲೆ  ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 03-03-2022 02:59 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080