Feedback / Suggestions

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 28/01/2023 ರಂದು 5-00 ಪಿ.ಎಮ್ ಕ್ಕೆ ಮಣ್ಣೂರ ಆಸ್ಪತ್ರೆಯಿಂದ ಶ್ರೀಮತಿ. ಶಾಂತಾಬಾಯಿ ಗಂಡ ದಿ: ದಿಗಂಬರ ಕೆಕಲೆ ಎಂಬುವರ RTO MLC ವಸೂಲಾದ ಮೇರೆಗೆ ನಾನು ಆಸ್ಪತ್ರೆಗೆ ಹೋಗಿ ಶಾಂತಾಬಾಯಿ ಗಂಡ ದಿ: ದಿಗಂಬರ ಕೆಕಲೆ ಇವರಿ ಬೇಟಿಯಾಗಿ ವಿಚಾರಿಸಲು  ಇವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ್ ಮಾಡಿದ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಸಾರಂಶವೆನೆಂದರೆ, ಇಂದು ದಿನಾಂಕ-28/01/2023 ರಂದು ನಮ್ಮ ಒಣಿಯ ಶ್ರೀ ಸಂತೋಷ ಕುಮಾರ ತಂದೆ ಮಹೇಂದ್ರ ಇಂಗಳಗಿ ಇವರ ಮಗಳ ತೋಟಿಲ ಕಾರ್ಯಕ್ರಮವು ಸೇಡಂ ರೋಡಿನ ಸಮೀಪದಲ್ಲಿ ಬರುವ ವಿಸ್ತಾರಾ ಹೋಟಲದಲ್ಲಿ ಇಟ್ಟಿಕೊಂಡಿದಕ್ಕೆ ಮತ್ತು ಈ ಕಾರ್ಯಕ್ರಮಕ್ಕೆ ನಮಗೆ ಬರಲು ತಿಳಿಸಿದರಿಂದ ನಾನು ನನ್ನ ಮಗಳಾದ ಕಿರಣ ಗಂಡ ಅಶೋಕ, ಅಳಿಯ ಅಶೋಕ ತಂದೆ ಮಾರುತಿ ಹಾಗೂ ಇಬ್ಬರೂ ಮೊಮ್ಮಕ್ಕಳಾದ ಅವಿಕಾ, ಅನ್ಷ ರವರೊಂದಿಗೆ ಮದ್ಯಾಹ್ನ ವಿಸ್ತಾರಾ ಹೋಟಲಗೆ ಹೋಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಊಟ ಮಾಡಿಕೊಂಡು ಮರಳಿ ನಾವು ಮನೆಗೆ ಹೋಗುವ ಕುರಿತು ರೋಡಿಗೆ ಬಂದಾಗ ಒಂದು ಆಟೋ ನಂ ಕೆಎ-32 ಎಎ-3388 ನೇದ್ದು ಬಂದಿದ್ದು ನನ್ನ ಅಳಿಯ ಮತ್ತು ಮಗಳು ಈ ಆಟೋದಲ್ಲಿ ನನಗೆ ಮತ್ತು ಈ ಇಬ್ಬರೂ ಮೊಮ್ಮಕಳಿಗೆ ಕೂಡಿಸಿ ಅವರಿಬ್ಬರೂ ಮೋಟಾರ ಸೈಕಲದ ಮೇಲೆ ನಮ್ಮ ಆಟೋದ ಹಿಂದೆ ಮನೆಯ ಕಡೆಗೆ ಹೋಗುತ್ತಿರುವಾಗ  ಮದ್ಯಾಹ್ನ 03:00 ಗಂಟೆ ಆಗಿರಬಹುದು ಹೊಸ ಆರ್.ಟಿ.ಓ ಆಫೀಸದ ನಂತರ ವಿ.ಟಿ.ಯು ಗೇಟಿನ ಮುಂದೆ ಶಹಾಬಾದ ರಿಂಗ್ ರೋಡ ಕಡೆಗೆ ಹೋಗುವಾಗ ಎದುರುಗಡೆಯಿಂದ ರಾಂಗ್ ರೋಟಿನಲ್ಲಿ ಒಂದು ಮೋಟಾರ ಸೈಕಲ ನಂ ಕೆಎ-32 ಹೆಚ್.ಎ-7704 ನೇದ್ದರ ಸವಾರನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ನಾವು ಕುಳಿತುಕೊಂಡ ಆಟೋಕ್ಕೆ ಡಿಕ್ಕಿ ಪಡಿಸಿದರಿಂದ ಆಟೋ ಪಲ್ಟಿಯಾಗಿ ಬಿದಿದ್ದರಿಂದ ಹಿಂದೆ ಇರುವ ನನ್ನ ಅಳಿಯ ಮತ್ತು ಮಗಳು ನೋಡಿ ನಮಗೆ ಎಬ್ಬಿಸಿದ್ದು ಇದರಿಂದ ನನ್ನ ಬಲಗೈ ಮಣಿಕಂಠಿಗೆ ಭಾರಿಗಾಯವಾಗಿದ್ದು ಮತ್ತು ಗುಪ್ತಗಾಯವಾಗಿದ್ದು, ಮೊಮ್ಮಕಳಿಗೆ ಕೂಡಾ ಗುಪ್ತಗಾಯಗಳಾಗಿದ್ದು ಅಲ್ಲಿಂದ ಹೋಗುವ ಶಿವುಕುಮಾರ ಹೊಸಪೇಟೆ ಎಂಬುವರು ಕೂಡಾ ಕಂಡಿರುತ್ತಾರೆ, ಮುಂದೆ ಅಳಿಯ ಮತ್ತು ಮಗಳು ಮಣ್ಣೂರ ಆಸ್ಪತ್ರೆಗೆ ತಂದು ನನಗೆ ಉಪಚಾರ ಕುರಿತು ಸೇರಿಕೆ ಮಾಡಿರುತ್ತಾರೆ, ಮೊಮ್ಮಕಳಿಗೆ ಅಂತಾ ಗಾಯವಾಗದಕ್ಕೆ ಖಾಸಗಿ ಆಗಿ ಉಪಚರಿಸಿರುತ್ತಾರೆ, ನಂತರ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲದೊಂದಿಗೆ ಓಡಿ ಹೋಗಿರುತ್ತಾನೆ, ಆತನ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 28/01/2023 ರಂದು ರಾತ್ರಿ 8:30 ಪಿ.ಎಮ್ ಕ್ಕೆ ಶ್ರೀ. ಗೋಪಾಲ ತಂದೆ ಶ್ರೀನಿವಾಸ ರವರು ನೀಡಿರುತ್ತಾರೆಂಬುವ ಈ ಫಿರ್ಯಾದಿ ಅರ್ಜಿಯನ್ನು ಶ್ರೀ. ಯಕಂಣ್ಣ ತಂದೆ ಭೀಮರಾವ ಇವರು ತಂದು ಹಾಜರು ಪಡಿಸಿದ್ದು, ಫಿರ್ಯಾದಿ ಸಾರಂಶವೆನೆಂದರೆ, ದಿನಾಂಕ 26/01/2023 ರಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ ಫಿರ್ಯಾದಿ ಗೋಪಾಲ ಮತ್ತು ಭೀಮಾಶಂಕರ ಇಬ್ಬರು ಕುಡಿಕೊಂಡು ಶಹಾಬಾದದಿಂದ ಕಲಬುರಗಿಗೆ ಮೋಟರ ಸೈಕಲ ನಂ. ಕೆಎ 32 ಇ.ಆರ್ 0922 ನೇದ್ದರ ಮೇಲೆ ಕಲಬುರಗಿಯ ರಾಜಾಪೂರ ಕ್ರಾಸದಿಂದ ರಾಮ ಮಂದಿರ ಕಡೆಗೆ ಹೋಗುವ ನಾಗನಹಳ್ಳಿ ಓವರ ಬ್ರಿಡ್ಜಿನ ಹತ್ತೀರ ಹೋಗುವಾಗ ಭೀಮಾಶಂಕರ ಈತನು ಮೋಟರ ಸೈಕಲನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುವಾಗ ಯಾವುದೊ ಒಂದು ಲಾರಿ ಬಂದಿದ್ದಕ್ಕೆ ಒಮ್ಮೇಲೆ ವಾಹನವು ಪಕ್ಕಕ್ಕೆ ತೆಗೆದುಕೊಳ್ಳಲು ಹೋಗಿ ಎಡ ರೋಡಿನ ಡಿವೈಡರಿಗೆ ಡಿಕ್ಕಿ ಪಡಿಸಿಕೊಂಡಿದ್ದರಿಂದ ಫಿರ್ಯಾದಿಗೆ ಎಡಗಾಲಿಗೆ ಭಾರಿ ಪ್ರಮಾಣದ ಗಾಯವಾಗಿದ್ದು ಮತ್ತು ಹಲ್ಲು ಬಿದ್ದಿದ್ದು ಹಾಗು ಭೀಮಾಶಂಕರನಿಗು ಕೂಡಾ ಸಣ್ಣಪುಟ್ಟ ಗಾಯಗಳಾಗಿರುತ್ತವೆ. ಈ ಘಟನೆ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಕೊಟ್ಟ ಲಿಖಿತ ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ- 28-01-2023 ರಂದು ಬೇಳಿಗ್ಗೆ ೧೦:೦೦ ಗಂಟೆಗೆ ಫಿರ್ಯಾದಿಯು ಏರಿಯಾದಲ್ಲಿ ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಖಚಿತ ಬಾತ್ಮಿ ಬಂದ ಮೇರೆಗೆ ತವರಗೆರಾ ಗ್ರಾಮದ ರಾಜು ತಂದೆ ಗುರುಭೀಮರಾಯ ನಾಗನಳ್ಳಿ ರವರ ಹೋಟೆಲ್ ಮುಂದುಗಡೆ ಸದರಿ ಆರೋಪಿತರು ಯಾವುದೆ ಪರವಾನಿಗೆ ಇಲ್ಲದೆ ಅಕ್ರಮ ವiದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ದಾಳಿ ಮಾಡಲಾಗಿ ಸದರಿ ಆರೋಪಿತನನ್ನು ಮತ್ತು ಮುದ್ದೆಮಾಲನ್ನು ವಶಕ್ಕೆ ಪಡೆದು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ- 28-01-2023  ಮಧ್ಯಾಹ್ನ  ೦೨:೦೦ ಗಂಟೆಗೆ ಫಿರ್ಯಾದಿಯು ಏರಿಯಾದಲ್ಲಿ ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಖಚಿತ ಬಾತ್ಮಿ ಬಂದ ಮೇರೆಗೆ ಜಂಬಗಾ(ಬಿ) ಗ್ರಾಮದ ಅಗಸಿ ಬಾಗಿಲು ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಸದರಿ ಆರೋಪಿತರು ಯಾವುದೆ ಪರವಾನಿಗೆ ಇಲ್ಲದೆ ಅಕ್ರಮ ವiದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ದಾಳಿ ಮಾಡಲಾಗಿ ಸದರಿ ಆರೋಪಿತನು ಓಡಿ ಹೋಗಿದ್ದು ನಂತರ ಸದರಿ ಗುನ್ನೆ ಸ್ಥಳದಿಂದ  ಮುದ್ದೆಮಾಲನ್ನು ವಶಕ್ಕೆ ಪಡೆದು ಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ:23-01-2023 ರಂದು ಸಾಯಂಕಾಲ ೭:೫೩ ಕ್ಕೆ ಫಿರ್ಯಾದಿದಾರರಾದ ಶ್ರೀ ವಿಶ್ವನಾಥ ತಂದೆ ಶಿವಯೋಗಪ್ಪಾ ಯರಗಲ್ಲ ವಯ:೪೪ವರ್ಷ ಜಾ:ಲಿಂಗಾಯತ ಉ:ಖಾಸಗಿ ಕೆಲಸ ಸಾ//ಕಮರವಾಡಿ ತಾ//ಚಿತ್ತಾಪೂರ ಜಿ//ಕಲಬುರಗಿ ಹಾಲಿವಾಸ:-ಮೋರೆ ಮಕ್ಕಳ ಆಸ್ಪತ್ರೆ ಹತ್ತಿರ ಗಬರಾಡಿ ಬೀಲ್ಡಿಂಗ್ ಶರಣನಗರ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದರ ಸಾರಾಂಶವೆನೆಂದರೆ ನಮ್ಮ ಮಾವನಾದ ಮಹಾಂತಗೌಡ ತಂದೆ ಹನುಮಂತರಾವ್ ಪಾಟೀಲ್ ಸಾ//ಪಾಳಾ ತಾ ಮತ್ತು ಜಿ ಕಲಬುರಗಿ. ಇವರ ಹೆಸರಿನಲ್ಲಿ ಹೊಂಡಾ ಡಿಯೋ ಸ್ಕೂಟರ್ ನಂ. KA-32-ES-0748 ನೇದ್ದು ಇದ್ದು ಸದರಿ ಸ್ಕೂಟರನ್ನು ನಾನೇ ನಡೆಸುತ್ತಿರುತ್ತೇನೆ. ನಾನು ದಿನಾಂಕ:೨೩/೦೧/೨೦೨೩ ರಂದು ಸಾಯಂಕಾಲ ೬:೨೦ ಗಂಟೆ ಸುಮಾರಿಗೆ ಕಲಬುರಗಿ ನಗರದ ವಿಠ್ಠಲನಗರದ ೬ನೇ ಕ್ರಾಸ್‌ನಲ್ಲಿರುವ ಮನೆ ನಂ ೧೦-೩/೭೦ ನೇದ್ದರಲ್ಲಿ ಶ್ರೀನಿವಾಸ ಎಂಬುವವರು ಟ್ಯೂಷನ್ ಕ್ಲಾಸ್ ನೆಡೆಸುತ್ತಿದ್ದು ಟ್ಯೂಷನ್ ಕ್ಲಾಸ್‌ಗೆ ನನ್ನ ಮಗನಾದ ಅಭಿಷೇಕನು ಹೋಗಿದ್ದು ಆದ ಕಾರಣ ನಾನು ನನ್ನ ಮಗನಿಗೆ ಊಟ ಕೊಡೊದಕ್ಕೆ ಅಂತಾ ಬಂದು ಶ್ರೀನಿವಾಸ ಎಂಬುವವರ ಟ್ಯೂಷನ್ ಕ್ಲಾಸ್ ಮುಂದೆ ನಮ್ಮ ಸ್ಕೂಟರನ್ನು ನಿಲ್ಲಿಸಿ ಸದರಿ ಟ್ಯೂಷನ್ ಕ್ಲಾಸ್ ಒಳಗಡೆ ಹೋಗಿ ನನ್ನ ಮಗನಿಗೆ ಊಟಕೊಟ್ಟು ಮರಳಿ ಅದೇ ದಿನ ಸಾಯಂಕಾಲ ೭:೧೦ ಗಂಟೆ ಸುಮಾರಿಗೆ ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ಸ್ಕೂಟರನ್ನು ನೋಡಲಾಗಿ ಸ್ಕೂಟರ ಇರಲಿಲ್ಲಾ, ಸ್ಕೂಟರ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಸ್ಕೂಟರ ಸಿಕ್ಕಿರುವುದಿಲ್ಲಾ ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಸ್ಕೂಟರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ 23-01-2023  ರಂದು ರಾತ್ರಿ ೧೦:೦೦ ಗಂಟೆ ಸುಮಾರಿಗೆ ನನ್ನ ಮೊಬೈಲ್ ನಂ. 9036730409 ನೇದ್ದಕ್ಕೆ ವಿಶಾಲ ಈತನು ತನ್ನ ಮೊಬೈಲ್ ನಂ. 9036677996 ನೇದ್ದರಿಂದ ಕರೆ ಮಾಡಿ ಸದರಿ ವಿಶಾಲ ಈತನು ನನಗೆ ನೀನು ಬೇಕು ನೀನು ನನ್ನ ಸಂಗಡ ಬಂದರೆ ನಿನಗೆ ಬಿಡುತ್ತೇನೆ ಇಲ್ಲಾ ಅಂದರೆ ನಿನ್ನ ಜೀವನ ಹಾಳು ಮಾಡುತ್ತೇನೆ ಅಂತಾ ಹೇಳಿ ಸದರಿ ಆರೋಪಿಯು ಫಿರ್ಯಾದಿಯ ಹೆಸರಿನ ಮೇಲೆ ಫೇಕ ಅಕೌಂಟ ಕ್ರಿಯೇಟ ಮಾಡಿ ಅದರಲ್ಲಿ ಮಾನಸಿಕವಾಗಿ ಚಿತ್ರಹಿಂಸೆ ನೀಡಿ ನನ್ನ ಸಂಸಾರ ಹಾಳು ಮಾಡಿ ನನ್ನ ಫೇಸ್ ಬುಕ್ ಅಕೌಂಟ್ ಕ್ರಿಯೇಟ್ ಮಾಡಿ ನನ್ನ ಫೊಟೋಗಳು ಮತ್ತು ವಿಡಿಯೋಗಳನ್ನು ಹರಿಬಿಟ್ಟು ನನ್ನ ಮಾನ ಮರ್ಯಾದೆ ಹಾಳು ಮಾಡುತ್ತಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 30-01-2023 12:36 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080