ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ 27/12/2022 ರಂದು 9.45 ಪಿ.ಎಮ್ ಕ್ಕೆ ಪ್ರಕಾಶ ತಂದೆ ರಾಮದಿರಾಜ್ ಸಾ: ಗಣೇಶಪೂರ ತಾ: ತುಳಸಿಪೂರ ಜಿ: ಬಲರಾಮಪೂರ ಉತ್ತರ ಪ್ರದೇಶ ಹಾಃವಾಃ ಪ್ರಭುಲಿಂಗ ಗೋದಾಮ ಕಪನೂರ ಇಂಡಿಸ್ಟ್ರೀಯಲ್ ಏರಿಯಾ ಕಲಬುರಗಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನಿಡಿದ್ದು ಅರ್ಜಿಯ ಸಾರಂಶವೆನೆಂದರೆ, ನಾನು ಕಲಬುರಗಿಯ ಕಪನೂರ ಇಂಡಿಸ್ಟ್ರೀಯಲ್ ಏರಿಯಾದಲ್ಲಿರುವ ಅಬ್ದೂಲ ಸಲಿಂ ತಂದೆ ಅಬ್ದೂಲ ರಹೇಮನಾ ಇವರಿಗೆ ಸಂಭಂಧಪಟ್ಟ ಪ್ಲಾಸ್ಟೀಕ್ ಖಾರ್ಕಾನೆಯಲ್ಲಿ ಹೆಲ್ಪ್ಪರ ಕೆಲಸ ಮಾಡಿಕೊಂಡಿರುತ್ತೆನೆ. ನಮ್ಮ ಪಕ್ಕದ ಊರಿನ ನಮ್ಮ ಸಂಬಂದಿ ಪ್ರದೀಪ ತಂದೆ ರಾಮಲಾಲ್ ವಯಃ 47 ವರ್ಷ ಸಾಃ ಜುಗುನಿಯಾ ತಾಃ ತುಳಸಿಪೂರ ಜಿಃ ಬಲರಾಮಪೂರ ಉತ್ತರ ಪ್ರದೇಶ ಈತನು ಕೂಡಾ ಇಂಡಸ್ಟ್ರೀಯಲ್ ಏರಿಯಾದಲ್ಲಿಯೆ ಕುರಿಕುರೆ & ಮಕ್ಕಳು ತಿನ್ನುವ ವಸ್ತಗಳನ್ನು ಮಾರಾಟ ಮಾಡಿಕೊಂಡಿದ್ದನು. ಹೀಗಿದ್ದು ಇಂದು ದಿಃ 27.12.2022 ರಂದು ನಾನು & ನಮ್ಮ ಸಂಬಂಧಿ ಪ್ರದೀಪ ತಂದೆ ರಾಮಲಾಲ್ ಇಬ್ಬರೂ ಕೂಡಿಕೊಂಡು ಕೆಲಸದ ಕುರಿತು ಕಪನೂರ ಇಂಡಿಸ್ಟ್ರೀಯಲ್ ಏರಿಯಾದ ಧಮ್ಮೂರ ವಾಡರ್ ಪ್ಲಾಂಟ್ ರೋಡಿನ ವೆಂಕಟೇಶ್ವರ ರೈಸ್ ಮಿಲ ಹತ್ತೀರದ ರೋಡಿನ ಹತ್ತೀರ ನಿಂತಿರುವಾಗ ಮಧ್ಯಾಹ್ನ 1:45 ಆಗಿರಬಹುದು. ಒಂದು ಟಾಟಾ ಕಂಪನಿಯ ಮಿನಿ ಲಾರಿ ನಂ ಕೆಎ 32 ಎ 2732 ನೇದ್ದರ ಚಾಲಕನು ಓಮ್ಮಲೆ ಲಾರಿಯನ್ನು ಮುಂದೆಕ್ಕೆ ತೆಗೆದುಕೊಂಡು ತಿರಿಗಿಸಿಕೊಳ್ಳುವ ಕುರಿತು ಜೋರಿನಿಂದ & ಅತೀವೇಗದಿಂದ ಓಮ್ಮಲೆ ವೇಗದಲ್ಲಿ ಹಿಂದಕ್ಕೆ ತೆಗೆದುಕೊಂಡಿದ್ದಕ್ಕೆ ಅಲ್ಲಿ ಹಿಂದೆ ಇದ್ದ ಪ್ರದೀಪ ಈತನು ಲಾರಿಯ ಹಿಂದಿನ ಟೈರಿನಲ್ಲಿ ಸಿಲುಕಿದ್ದಕ್ಕೆ ಆತನ ಸೈಡಿಗೆ & ಬೆನ್ನಿಗೆ ಭಾರಿಗಾಯವಾಗಿ, ಅಲ್ಲಲ್ಲಿ ತೆರೆಚಿದ ಗಾಯವಾಗಿದ್ದು, ಈ ಘಟನೆಯನ್ನು ರೋಡಿನಿಂದ ಹೋಗುತ್ತಿರುವ ಸಿದ್ದು ತಂದೆ ಫ್ರಭುರಾವ, ಮಹ್ಮದ ಹಸೀಬ ತಂದೆ ಅಬ್ದೂಲ ಸಲಿಂ ಇವರು ನೋಡಿ ಸಹಾಯ ಮಾಡಿದ್ದು, ಲಾರಿ ಚಾಲಕನ ಹೆಸರು ವಿಚಾರಿಸಲು ಮಹೆಬೂಬ ವಯಃ 40 ವರ್ಷ ಸಾಃ ಮಿಲ್ಲತ್ತ ನಗರ ಕಲಬುರಗಿ ಅಂತಾ ಗೋತ್ತಾಯಿತು. ಘಟನೆಯ ನಂತರ ಲಾರಿಯನ್ನು ಬಿಟ್ಟು ಓಡಿ ಹೋಗಿರುತ್ತಾನೆ. ಮುಂದೆ ಪ್ರದೀಪನಿಗೆ ಉಪಚಾರ ಕುರಿತು ಒಂದು ಆಟೋದಲ್ಲಿ ಹಾಕಿಕೊಂಡು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ಉಪಚಾರಕ್ಕಾಗಿ ತೆಗೆದುಕೊಂಡು ಹೋಗುವಾಗ ಮಧ್ಯಾಹ್ನ 2.30 ಗಂಟೆ ಆಗಿರಬಹುದು. ಸರ್ಕಾರಿ ಆಸ್ಪತ್ರೆಯ ಹತ್ತೀರ ಪ್ರದೀಪ ಈತನು ಮೃತ ಪಟ್ಟಿರುತ್ತಾನೆ. ಕಾರಣ ಮಿನಿ ಲಾರಿ ನಂ ಕೆಎ 32 ಎ 2732 ನೇದ್ದರ ಚಾಲಕ ಮಹೆಬೂಬ ಸಾಃ ಮಿಲ್ಲತ್ತ ನಗರ ಕಲಬುರಗಿ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಎಂದು ಫಿರ್ಯಾಧಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರಾಘವೇಂದ್ರ ನಗರ ಪೊಲೀಸ್‌ ಠಾಣೆ :- ದಿನಾಂಕ:27/12/2022 ರಂದು 2:00 ಪಿ ಎಮಕ್ಕೆ ಮಾನ್ಯ ಹಣಮಂತ ಕಟ್ಟಿ ಎ.ಎಸ್.ಐ ರಾಘವೇಂದ್ರ ನಗರ ಪೊಲೀಸ ಠಾಣೆ ಕಲಬುರಗಿ ನಗರ ರವರು ಒಬ್ಬ ಆರೋಪಿತ ಹಾಗೂ ಜಪ್ತಿ ಪಂಚನಾಮೆ, ಮುದ್ದೆ ಮಾಲಿನೊಂದಿಗೆ ಜ್ಞಾಪನ ಪತ್ರ ನೀಡಿದರ ಸಾರಾಂಶವೇನೆಂದರೆ. ನಾನು ಇಂದು ದಿನಾಂಕ:27/12/2022 ರಂದು ಬೆಳಿಗ್ಗೆ 11:30 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯವರಾದ ಶ್ರೀ ಉಮೇಶ   ಸಿಪಿಸಿ-111, ಶ್ರೀ ರಮೇಶ ಸಿಪಿಸಿ-445, ಹಾಗೂ ಶ್ರೀ ತುಕಾರಾಮ ಸಿಪಿಸಿ-234 ರವರನ್ನು ಸಂಗಡ ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ ಕರ್ತವ್ಯ ನಿರ್ವಹಿಸುತ್ತಿರುವಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ ಠಾಣಾ ವ್ಯಾಪ್ತಿಯ ನ್ಯೂ ರಾಘವೇಂದ್ರ ಕಾಲೋನಿಯ ಬಲಬೀಮ ಸೇನಾ ಗುಡಿ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತು ಕೊಂಡು ರಸ್ತೆಯ ಮೇಲೆ ಹೋಗಿಬರು ವಜನರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದು ಕೊಡುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿರುವದರಿಂದ ಸದರಿ ಮಾಹಿತಿಯನ್ನು ಮಾನ್ಯ ಮೇಲಾಧಿಕಾರಿಯವರಿಗೆ ತಿಳಿಸಿ ಮಾನ್ಯ ಮೇಲಾಧಿಕಾರಿಯವರ ಮಾರ್ಗದರ್ಶನದಂತೆ ಖಚಿತವಾದ ಮಾಹಿತಿಯಂತೆ ಸದರಿಯವನ ಮೇಲೆ ದಾಳಿಮಾಡಿ ಕ್ರಮ ಕೈಕೊಳ್ಳುವ ಕುರಿತು ಇಬ್ಬರು ಪಂಚರನ್ನು ಶ್ರೀ ರಮೇಶ ಸಿಪಿಸಿ-445 ರವರ ಮುಖಾಂತರ ಬರಮಾಡಿಕೊಂಡು ಅವರಿಗೆ ತಿಳಿಹೇಳಿ ನಂತರ ಪಂಚರು ಮತ್ತು ನಾವು ಸಿಬ್ಬಂದಿಯವರು ನಮ್ಮ ನಮ್ಮ ಮೋಟಾರ ಸೈಕಲ್ಮೇಲೆ ಮದ್ಯಾಹ್ನ 12:00 ಗಂಟೆಗೆ ಹೊರಟು 12-30 ಗಂಟೆಗೆ ಸ್ಥಳಕ್ಕೆ ತಲುಪಿ ಮರೆಯಾಗಿ ನಿಂತುಕೊಂಡು ನೋಡಲಾಗಿ ಒಬ್ಬ ವ್ಯಕ್ತಿ ಸಾರ್ವಜನಿಕ ನ್ಯೂ ರಾಘವೇಂದ್ರ ಕಾಲೋನಿಯ ಬಲಬೀಮ ಸೇನಾ ಗುಡಿರಸ್ತೆಯ ಪಕ್ಕದಲ್ಲಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿಬರುವವರಿಗೆ ಇದು ಬಾಂಬೆ ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಅವರಿಂದ ಹಣಪಡೆದುಕೊಂಡು ಮಟಕಾ ಚೀಟಿ ಬರೆದು ಕೂಡುತ್ತಿರುವದನ್ನು ಖಚಿತಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಪಂಚರ ಸಮಕ್ಷಮ ಸದರಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿಹೋಗಿದ್ದು, ಮಟಕಾ ಚೀಟಿಯನ್ನು ಬರೆದು ಕೊಳ್ಳುತ್ತಿದ್ದವನಿಗೆ ಸಿಬ್ಬಂದಿಯವರ ಸಹಾಯದಿಂದ ವ್ಯಕ್ತಿಗೆ ಹಿಡಿದಿದ್ದು ಅವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಸಂತೋಷ ತಂದೆ ಶ್ರೀಕಾಂತರಾವ ಕುಲಕರ್ಣಿ ವಯ-43 ವರ್ಷ ಜಾ||ಬ್ರಾಹ್ಮಣ ಉ||ಖಾಸಗಿ ಕೆಲಸ ಸಾ||ನ್ಯೂ ರಾಘವೆಂದ್ರ ಕಾಲೋನಿ ಕಲ್ಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋದನೆ ಮಾಡಲು ಅವನ ಹತ್ತಿರ ನಗದು ಹಣ 2260/- ರೂ ಸಿಕ್ಕಿದ್ದು ಮತ್ತು ಒಂದು ಬಾಲಪೆನ ಅಃಕಿಃ00, ಒಂದು ಮಟಕಾ ಚೀಟಿ ಅಕಿ. 00/- ದೊರೆತಿದ್ದು, ಸದರಿ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ 2260/- ರೂಗಳು, ಬೆಲೆಬಾಳುವದನ್ನು ಸದರಿಯವನಿಂದ ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು, ಪಂಚರು ಸಹಿಮಾಡಿದ ಚೀಟಿಯನ್ನು ಅಂಟಿಸಿಕೊಂಡು ಮುಂದಿನ ಪುರಾವೆಗಾಗಿ ಸದರಿ ವ್ಯಕ್ತಿಯನ್ನು ನನ್ನ ತಾಬಾಕ್ಕೆ ತೆಗೆದುಕೊಂಡು ಮದ್ಯಾಹ್ನ 12-30 ಗಂಟೆಯಿಂದ 1-30  ಗಂಟೆಯವರೆಗೆ ಸ್ಥಳದಲ್ಲಿ ಕುಳಿತು ಜಪ್ತಿ ಪಂಚನಾಮೆಯನ್ನು ಕೈಕೊಂಡು ಜಪ್ತಿಮಾಡಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 21/12/2022 ರಂದು  00:30 ಎ.ಎಂ. ದಿಂದ 5:00 ಎ.ಎಂ. ಮದ್ಯದ ಅವಧಿಯಲ್ಲಿ ತೇಲಕ್ರ ಕಾಲೋನಿಯಲ್ಲಿದ್ದ ಫಿರ್ಯಾಧಿ ಮನೆಯ ಬೆಡ್‌ರೂಮಿನ ಅಲಮಾರಿಯಲ್ಲಿಟ್ಟಿದ್ದ 1)  750 ಗ್ರಾಂ ವಿವಿಧ ಬಗೆಯ ಬೆಳ್ಳಿಯ ಆಭರಣಗಳು ಅ.ಕಿ 15,000 /- ರೂ. 2) ನಗದು ಹಣ 25,000/- 3) 4 ಕೈ ಗಡಿಯರಗಳು ಅ.ಕಿ 2000/- ರೂ 4) 2 ಶ್ವೇಟರ , 5 ರೇಷ್ಮೆ ಸೀರೆಗಳು ಒಟ್ಟು ಅಕಿ.20,000/- ರೂ 5) 5 ಹಾಗೂ 10 ರೂ ಮುಖ ಬೆಲೆಯುಳ್ಳ ನಾಣ್ಯಗಳು ಒಟ್ಟು ಅ.ಕಿ 7000/- ರೂ ಹೀಗೆ ಒಟ್ಟು 69,000/- ರೂ. ಕಿಮ್ಮತ್ತಿನೇದ್ದವುಗಳನನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿಯವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನಮ್ಮ ಆಭರಣ ಹಾಗೂ ನಗದು ಹಣವನ್ನು ನಮಗೆ ದೊರಕಿಸಿ ಕೊಡಲು ವಿನಂತಿ ಅಂತ ವಗೈರೆಯಾಗಿ ಇದ್ದ ಫಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ: 27/12/2022 ರಂದು ಮದ್ಯಾಹ್ನ 4:30 ಗಂಟೆ ಸುಮಾರಿಗೆ ಫಿರ್ಯಾದಿ ರವಿಂದ್ರ ತಂದೆ ಧರ್ಮಣ್ಣಾ ಹೊಸಮನಿ ವಯ:37 ವರ್ಷ ಜಾ:ಎಸ್.ಸಿ ಉ:ಬಸ್ ಚಾಲಕ ಬ್ಯಾಚ್ ನಂ.103 ಎನ್.ಇ.ಕೆ.ಎಸ್.ಆರ್.ಟಿ.ಸಿ ಕಲಬುರಗಿ ಸಾ:ಗೊಬ್ರಾ ಕಾಲೋನಿ ಸಿರಸಗಿ ಮಡ್ಡಿ ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ನಿನ್ನೆ ದಿನಾಂಕ: 26/12/2022 ರಂದು ಬೆಳಗ್ಗೆ 9:00 ಗಂಟೆಗೆ ಕರ್ತವ್ಯಕ್ಕೆ ಬಂದಿದ್ದು, ನನ್ನಂತೆ ನಿರ್ವಾಹಕ ಅಂತ ಕೆಲಸ ಮಾಡುವ ಮಹಾಂತೇಶ ಬಿರಾದಾರ ಬ್ಯಾಚ್ ನಂ.751 ರವರು ಬಂದಿದ್ದು ಇರುತ್ತದೆ. ಬಸ್ ಡಿಪೋ ನಂ. 3 ವಿದ್ಯಾ ನಗರ ದಿಂದ ಬೆಳಗ್ಗೆ ಕರ್ತವ್ಯಕ್ಕೆ ನೇಮಿಸಿದಂತೆ ನಾನು ಮತ್ತು ಮಹಾಂತೇಶ ಬಿರಾದಾರ ಇಬ್ಬರು ಕೂಡಿಕೊಂಡು ಎನ್.ಇ.ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ 32 ಎಫ್-1837 ನೇದ್ದನ್ನು ತೆಗೆದುಕೊಂಡು ಸುಪರ್ ಮಾರ್ಕೆಟದಿಂದ ಮೇಳಕುಂದಾ(ಬಿ) ಕರ್ತವ್ಯಕ್ಕೆ ಹೋಗಿ ನಿನ್ನೆ ದಿನ ಕರ್ತವ್ಯ ಮಾಡಿ ಅಲ್ಲಿಯೇ ಮುಕ್ಕಾಮು ಮಾಡಿ ನಂತರ ಇಂದು ದಿನಾಂಕ: 27/12/2022 ರಂದು ಬೆಳಗ್ಗೆ ಮೇಳಕುಂದಾ(ಬಿ) ಗ್ರಾಮದಿಂದ ಎರಡು ಟ್ರೀಪ್ ಮಾಡಿ ಮೂರನೇ ಟ್ರೀಪ್ ಮೆಳಕುಂದಾದಿಂದ ಹೊರಟು ಮದ್ಯಾಹ್ನ 12:40 ಗಂಟೆ ಸುಮಾರಿಗೆ ಎಸ್.ವ್ಹಿ.ಪಿ ವೃತ್ತದಿಂದ ಸಿಟಿ ಬಸ್ ನಿಲ್ದಾಣದ ಕಡೆಗೆ ಜಿಡಿಎ ಕಾರ್ಯಾಲಯದ ಮುಂದಿನ ಮುಖ್ಯ ರಸ್ತೆಯಿಂದ ಹೋಗುತ್ತಿದ್ದಾಗ ಒಬ್ಬ ವ್ಯಕ್ತಿ ಹೋಗುತ್ತಿರುವ ಬಸ್ ನ್ನು ತಡೆದು ಏಕಾಏಕಿ ಒಮ್ಮೆಲೆ ಒಂದು ಕಲ್ಲಿನಿಂದ ಬಸ್ ನ ಮುಂದಿನ ದೊಡ್ಡ ಗಾಜಿಗೆ ಹೋಡೆದು ಹಾಳು ಮಾಡಿ ಅಂದಾಜು 10,000/- ರೂ ರಷ್ಟು ನಷ್ಟ ಉಂಟು ಮಾಡಿರುತ್ತಾನೆ. ನಂತರ ನಾವು ಬಸ್ ನ್ನು ಪಕ್ಕಕ್ಕೆ ತೆಗೆದುಕೊಂಡು ನಿಲ್ಲಿಸಿ ಅವನ ಹೆಸರು ವಿಚಾರಿಸಲು ರಾಜು ಕಟ್ಟಿಮನಿ ಅಂತ ತಿಳಿದು ಬಂದಿರುತ್ತದೆ. ಕಾರಣ ಸರಕಾರಿ ಬಸ್ ನ ಗಾಜನ್ನು ಒಡೆದು ನಷ್ಟು ಉಂಟು ಮಾಡಿದ ರಾಜು ಕಟ್ಟಿಮನಿ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್-ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ: 27/12/2022 ರಂದು ಫಿರ್ಯಾದಿಯು ಠಾಣೇಗೆ ಬಂದು ದೂರು ಸಲ್ಲಿಸಿದೇನೆಂದರೆ ದಿನಾಂಕ: 26/12/2022 ರಂದು ಫಿರ್ಯಾದಿಯ ತಾಯಿಯ ಕಾಲಿನ ಆಪರೇಷನ್ ಕುರಿತು ಆಸ್ಪತ್ರೆಗೆ ಸೇರಿಸಿದ್ದು ಅವರ ಜೊತೆ ಇರಲು ಮನೆಗೆ ಬೀಗ ಹಾಕಿಕೊಂಡು ಆಸ್ಪತ್ರೆಗೆ ಹೋಗಿದ್ದು ನಂತರ ಮರುದಿನ ಬೆಳೆಗ್ಗೆ 06 ಎ.ಎಮ್ ಕ್ಕೆ  ಬಂದು ನೋಡಲು ಮನೆಯ ಬೀಗ ಮುರಿದಿದ್ದು ಒಳಗೆ ಹೋಗಿ ನೋಡಲು ಮನೆಯಲ್ಲಿಟ್ಟ ಆಲಮರಿ ಬಾಗಿಲು ಖುಲ್ಲಾ ಇದ್ದು ಸೀರೆಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು ,ಅದರೊಳಗೆ ಇಟ್ಟಿದ್ದ 10 ವರ್ಷಗಳ ಹಿಂದೆ ಮಾಡಿಸಿಟ್ಟಿದ್ದ 01) 05 ಗ್ರಾಂ ಬಂಗಾರದ ಬೋರಮಳ ಅ:ಕಿ: 20,000/- ರೂ 02) 05 ಗ್ರಾಂ ಬಂಗಾರದ ಜಿರಮಣಿ ಸರ ಅ.ಕಿ; 20,000/- ರೂ ಯಾರೋ ಕಳ್ಳರು ನಾವು ಇಲ್ಲದ ಸಮಯದಲ್ಲಿ ಬಂದು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿಯವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನಮ್ಮ ಆಭರಣ ನಮಗೆ ದೊರಕಿಸಿ ಕೊಡಲು ವಿನಂತಿ ಅಂತ ವಗೈರೆಯಾಗಿ ಇದ್ದ ಫಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 30-12-2022 03:03 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080