ಅಭಿಪ್ರಾಯ / ಸಲಹೆಗಳು

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ 27-11-2022 ರಂದು ಫಿರ್ಯಾದಿಯು ಆಸ್ಪತ್ರೆಯಲ್ಲಿ ನೀಡಿದ ಫಿರ್ಯಾದಿಯೇನೆಂದರೆ ದಿನಾಂಕ ೨೭/೧೧/೨೦೨೨ ರಂದು ಬೆಳಗ್ಗೆ ೧೧-೦೦ ಗಂಟೆಗೆ ಸುಮಾರಿಗಿ ಫಿರ್ಯಾದಿಯು ತರಕಾರಿ ತರಲು ಅಂಗಡಿಗೆ ಹೋದಾಗ ಆಕಸ್ಮಿಕವಾಗಿ ಆರೋಪಿತ ರಾಜು ಈತನ ಕಾಲನ್ನು ತುಳಿದಿದ್ದು ಕ್ಷಮೆ ಕೇಳಿದರು ರಾಜು ಈತನು ಕೇಳದೆ ಏ ರಂಡಿ ಮಗನೆ ನನಗೆ ಕಾಲು ತುಳಿತಿಯಾ ಅಂತಾ ಬೈದಿದ್ದು ಅಲ್ಲದೆ ಅಲ್ಲಿಯೇ ತರಕಾರಿ ಕಟ್ ಮಾಡುವ ಕುಡುಗೋಲಿನಿಂದ ಫಿರ್ಯಾದಿಗೆ ಹೊಡೆದಿದ್ದು ಮತ್ತು ಆರೋಪಿಯ ಅಳಿಯಂದಿರು ಫಿರ್ಯಾದಿಗೆ ನೆಲಕ್ಕೆ ಕೆಡವಿ ಕಾಲಿನಿಂದ ಹೊಡೆದು ಗುಪ್ತ ಗಾಯ ಮಾಡಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ರಾಘವೇಂದ್ರ ನಗರ ಪೊಲೀಸ ಠಾಣೆ  :- ದಿನಾಂಕ; 27/11/2022 ರಂದು 8.30 ಪಿ.ಎಮ್ ಕ್ಕೆ ಶ್ರೀ ಜಮೀರ ಅಹ್ಮದ ತಂದೆ ಸಾಹೇಬ ಪಟೇಲ್ ವಯ-49 ವರ್ಷ ಉ||ಪಾನಶಾಪ ಅಂಗಡಿ ಸಾ||ಮದೀನಾ ಕಾಲೋನಿ ಕಲಬುರಗಿ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಕೊಟ್ಟ ಸಾರಾಂಶವೇನೆಂದರೆ ನಾನು ಈ ಮೇಲ್ಕಂಡ ವಿಳಾಸದ ನಿವಾಸಿತನಿದ್ದು ನಮ್ಮ ಪಕ್ಕದ ಬಡಾವಣೆಯ ನಿವಾಸಿಯಾಗಿರುವ ಅಜಗರ ತಂದೆ ಉಸ್ಮಾನ ಅಖಾಡಾ ಸಾ||ಜಾಮೀಯಾ ಮಜೀದ ಎಂ.ಎಸ್.ಕೆ ಮಿಲ್ ಕಲಬುರಗಿ ಈತನು ದಿನಾಂಕ:10.03.2021 ರಂದು ಅಜಗರ ಅಖಾಡಾ ಹಾಗೂ ಆತನ ಸಂಗಡ ತೌಫೀಕ ಮತ್ತು ಅಲ್ಲು ಅಖಾಡಾ ಇವರು ಮಿರ್ಚೀ ಗೋದಾಮ ಹತ್ತಿರ ಇರುವ ನನ್ನ ಪಾನಶಾಪ ಹತ್ತಿರ ಬಂದು ಅಜಗರ ಈತನು ಹೇಳಿದ್ದೆನೆಂದರೆ ನಾನು ಸುಮಾರು ವರ್ಷಗಳಿಂದ ಚಿಟ್ಟಿ ಬಿಸಿ ನಡೆಸಿಕೊಂಡು ಬಂದಿದ್ದು ನನ್ನ ಹತ್ತಿರ ಚಿಟ್ಟಿ ಬಿಸಿ ಹಾಕಿದರೆ ನಿಮ್ಮ ಹಣಕ್ಕೆ ಡಬ್ಬಲ್ ಹಣ ಮಾಡಿ ಕೊಡುತ್ತೇನೆ ನನ್ನ ಹತ್ತಿರ ಸುಮಾರು ಜನರು ಹಣ ಚಿಟ್ಟಿ ಹಣ ಹಾಕಿ ಅವರು ಎರಡು ಪಟ್ಟು ಹಣ ಪಡೆದುಕೊಂಡಿರುತ್ತಾರೆ. ನೀವು ಕೂಡಾ ನನ್ನ ಹತ್ತಿರ ಚಿಟ್ಟಿ ಬಿಸಿ ಹಣ ಹಾಕಿದರೆ ನಿಮಗೂ ಕುಡಾ ಎರಡು ಪಟ್ಟು ಹಣ ಮಾಡಿ ಕೊಡುತ್ತೆನೆ ಅಂತಾ ನಂಬಿಸಿ ಬಣ್ಣ ಬಣ್ಣದ ಮಾತುಗಳು ಹೇಳೀದ್ದರಿಂದ ನಾನು ಚಿಟ್ಟಿ ಬಿಸಿ ಹಣ ಹಾಕಬೇಕೆಂದು ನಿರ್ಧರಿಸಿಕೊಂಡು ಅಲ್ಲದೆ ನಿಮ್ಮ ಪರವಾಗಿ ನಿಮ್ಮ ಪರಿಚಯಸ್ತರಿಗೆ ಚಿಟ್ಟಿ ಹಣ ಹಾಕಿಸಿದೆ ನಿಮಗೆ ಹೆಚ್ಚಿನ ಲಾಭ ಕೊಡುತ್ತೇನೆ ಅಂತಾ ಹೇಳಿದ್ದರಿಂದ ನಾನು ಮತ್ತು ನನ್ನ ಅಣ್ಣನಾದ ಬಸೀರ ಅಹ್ಮದ ತಂದೆ ಸಾಹೇಬ ಪಟೇಲ್ ಹಾಗೂ ನನ್ನ ಅಳಿಯನಾದ ಸೈಯ್ಯದ ಶೇರಿಯಾರ ತಂದೆ ಸೈಯ್ಯದ ಸಾಬೀರ ಅಲ್ಲದೆ ನನ್ನ ಅಕ್ಕನ ಮಗಳಾದ ರಿಜ್ವಾನಾ ಬೇಗಂ ಗಂಡ ಶೆಬ್ಬಿರ ಅಹ್ಮದ ಇವಳು ಸಹ ಇನ್ನೂ ಹೆಚ್ಚಿನ ಹಣ ಬರುತ್ತವೆ ಅಂತಾ ಆಸೆಯಿಂದ ನಾನು 2 ಲಕ್ಷ /- ಹಣ ಕೊಟ್ಟಿದ್ದು ಇದಕ್ಕೆ ಎರಡು ಪಟ್ಟು ಕೊಡುತ್ತೆನೆ ಅಂತಾ ಹೇಳಿದ್ದರಿಂದ ನಾನು ನಂಬಿ ಹಣ ಕೊಟ್ಟಿರುತ್ತೇನೆ. ನಂತರ ನಾನು ಅಜಹಗರ ಅಖಾಢಾ ಇವರ ಹತ್ತಿರ ಚಿಟ್ಟಿ ಬಿಸಿ ಹಣ ಹಾಕಲು ಪ್ರಾರಂಭಿಸಿದ್ದು ನಾನು 17 ಲಕ್ಷ ರೂಪಾಯಿಯ ಬಿಸಿ ಹಣ ಹಾಕಿದ್ದು ಆ ಬಿಸಿಗೆ ನಾನು ಪ್ರತಿ ತಿಂಗಳು 30 ಸಾವಿರ/- ಕಟ್ಟುತ್ತಾ ಬಂದಿದ್ದು ಈಗ ಒಟ್ಟು 17 ತಿಂಗಳು 30 ಸಾವಿರ ರೂ ಅಂತೆ ಪ್ರತಿ ತಿಂಗಳ ಅಜಗರ ಅಖಾಡಾ ಇವರ ಜಾಮೀಯಾ ಮಜೀದ ಹತ್ತಿರ ಇರುವ ಆಫಿಸ್ಗೆ ಖುದ್ದಾಗಿ ಹೋಗಿ ಬಿಸಿ ಹಣ ಕಟ್ಟುತ್ತಾ ಬಂದಿರುತ್ತೇನೆ. ಹೀಗೆ ಒಟ್ಟು ನಾನು 8 ಲಕ್ಷ 25 ಸಾವಿರ ರೂ ಹಣವನ್ನು ಅಜಗರ ಅಖಾಡಾ ಅವರಿಗೆ ಕೊಟ್ಟಿರುತ್ತೇನೆ. ಅಲ್ಲಿ ಅಜಗರ ಅಖಾಡಾ ಇವರ ಆಫೀಸ್ನ ಸಹಾಯಕನಾಗಿರುವ ತೌಫಿಕ ಅಹ್ಮದ ಇವರಿಗೆ ಕೊಟ್ಟು ಯಾವುದೋ ಒಂದು ಡೈರಿಯಲ್ಲಿ ನಮೂದಿಸಿ ಸಹಿ ಮಾಡಿ ಕೊಟ್ಟಿರುತ್ತಾನೆ. ಅದೆ ರೀತಿ ನನ್ನ ಅಣ್ಣನಾದ ಬಸೀರ ಅಹ್ಮದ ತಂದೆ ಸಾಹೇಬ ಪಟೇಲ್ ಇವರು ಸಹ 9 ಲಕ್ಷದ ಬಿಸಿ ಹಾಕಿದ್ದು ಇವರೂ ಸಹ ಪ್ರತಿ ತಿಂಗಳು 45 ಸಾವಿರ ರೂ ಯಂತೆ 13 ತಿಂಗಳು ಒಟ್ಟು 8 ಲಕ್ಷ 10 ಸಾವಿರ ರೂ ಕಟ್ಟಿದ್ದು ಹಾಗೂ ನನ್ನ ಅಳಿಯನಾದ ಸೈಯ್ಯದ ಶೇರಿಯಾರ ತಂದೆ ಸೈಯ್ಯದ ಸಾಬೀರ ಈತನು ಸಹ 2 ಲಕ್ಷದ ಬಿಸಿಯ 4 ತಿಂಗಳು 20 ಸಾವಿರ ರೂ ಯ 4 ಕಂತುಗಳ 80 ಸಾವಿರ ರೂ  ಕಟ್ಟಿದ್ದು ಅಲ್ಲದೆ ನನ್ನ ಅಕ್ಕನ ಮಗಳಾದ ರಿಜ್ವಾನಾ ಬೇಗಂ ಗಂಡ ಶೆಬ್ಬಿರ ಅಹ್ಮದ ಇವಳು 17 ಲಕ್ಷದ ಬಿಸಿಯಲ್ಲಿ ಪ್ರತಿ ತಿಂಗಳು 30 ಸಾವಿರ ರೂ 17 ತಿಂಗಳ ಒಟ್ಟು 7 ಲಕ್ಷ 32 ಸಾವಿರದ 500 ರೂ ಕಟ್ಟಿರುತ್ತಾರೆ. ಹೀಗೆ ನಮ್ಮ ಕುಟುಂಬದವರಿಂದ 24 ಲಕ್ಷ 47 ಸಾವಿರದ 500 ರೂ ಹಣ ಚಿಟ್ಟಿ ಬಿಸಿ ಹಣದಲ್ಲಿ ತೊಡಗಿಸಿಕೊಂಡಿದ್ದು ಆ ಹಣವನ್ನು ಕೇಳಲು ಹೋದರೆ ಇವತ್ತು ಕೊಡುತ್ತೇನೆ ನಾಳೆ ಕೊಡುತ್ತೇನೆ ಅಂತಾ ಹೇಳಿ ನಮಗೆ ಸತಾಯಿಸುತ್ತಿದ್ದು ನಂತರ ನಮಗೆ ಗೊತ್ತಾಗಿದೆನೆಂದರೆ ಅಜಗರ ಅಖಾಡಾ , ಅಲ್ಲು ಅಖಾಡಾ ಮತ್ತು ತೌಫಿಕ ಅಹ್ಮದ ಇವರು ಕಾನೂನು ಬಾಹಿರವಾಗಿ ಚಿಟ್ಟಿ ಬಿಸಿ ನಡೆಸುತ್ತಿದ್ದರು ಅಲ್ಲದೆ ಕಲಬುರಗಿ ನಗರದ ಬೇರೆ ಬೇರೆ ಬಡಾವಣೆಯ ಸುಮಾರು 100-150 ಜನರು ಕೂಡಾ ಅಜಗರ ಅಖಾಡಾ ಇವರು ಚಿಟ್ಟಿ ಬಿಸಿ ಹಣ ಕಟ್ಟಿಸಿಕೊಂಡು ಅವರಿಗೂ ಸಹ ಮೋಸ ಮಾಡಿರುತ್ತಾನೆ ಅಂತಾ  ತಿಳಿದು ಬಂದಿರುತ್ತದೆ.   ನಾವು ನಮ್ಮ ಕೊಡುವಂತೆ ನಾವು ಅವರ ಮನೆಗೆ ಹೋದಾಗ ಅವರ ಮನೆಯವರು ನಮಗೆ ಏರು ಧ್ವನಿಯಲ್ಲಿ ಮಾತನಾಡಿ ನಮ್ಮ ಮನೆಗೆ ಬರಬೇಡಿ ಅಂತಾ ಹೇಳಿದ್ದು ಅಲ್ಲದೆ ಇನ್ನೊಂದು ಸಲ ನಮ್ಮ ಮನೆ ಕಡೆ ಬಂದರೆ ನಿಮಗೆ ಬಿಡುವದಿಲ್ಲಾ ನೋಡರಿ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ನಾವು ನಮ್ಮ ಜೀವನ ಅಡವಿಟ್ಟು ಸಂಗ್ರಹಿಸಿದ ಹಣವನ್ನು ಅಜಗರ ಅಖಾಡಾ ಅವರಿಗೆ ನಂಬಿ ಹಣ ಕೊಟ್ಟಿದ್ದು ಆತನು ನಮಗೆ ಹಣ ಕೊಡದೆ ನಂಬಿಸಿ ದ್ರೋಹ ಮಾಡಿದ್ದು ಇರುತ್ತದೆ, ಆದ್ದರಿಂದ ಅಜಗರ ಅಖಾಡಾ, ಅಲ್ಲು ಅಖಾಡಾ ಮತ್ತು ತೌಫಿಕ ಅಹ್ಮದರವರ ವಿರುಧ್ದ ಸೂಕ್ತ ಕಾನೂನು ಕ್ರಮ ಜರುಗಿಸಿಬೇಕು ಅಂತಾ ಮಾನ್ಯರವರಲ್ಲಿ ವಿನಂತಿ ಅಂತ ಇತ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರಾಘವೇಂದ್ರ ನಗರ ಪೊಲೀಸ ಠಾಣೆ  :-  ದಿನಾಂಕ; 26/11/2022 ರಂದು 10.45 ಪಿ.ಎಮ್ ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ MLC ವಸೂಲಾಗಿದ್ದರ ಪ್ರಯುಕ್ತ ರಾತ್ರಿ  11.30 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀ ಮೊಹ್ಮದ ಮಕಸೂದ ಅಲಿ ತಂದೆ ತೋಲಾಬಾಷಾ ವಯಃ 24 ವರ್ಷ ಜಾಃ ಮುಸ್ಲಿಂ ಉಃ ಎಲ್ಟ್ರೀಕಲ್ ಗುತ್ತೇದಾರ ಸಾಃ ಮದಿನಾ ಕಾಲೋನಿ ಕಲಬುರಗಿ ರವರಿಗೆ ವಿಚಾರಿಸಿ 11.45 ಗಂಟೆಯಿಂದ 1.15 ಗಂಟೆ ವರೆಗೆ ವಿಚಾರಿಸಿ ಗಾಯಾಳುದಾರನ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 1.45 ಎ.ಎಮ್ ಕ್ಕೆ ಬಂದು ಸದರಿ ಗಾಯಾಳುದಾರನ ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ. ನಾನು ಈ ಮೇಲ್ಕಾಣಿಸಿದ ಹೆಸರು ವಿಳಾಸದ ನಿವಾಸಿತನಿದ್ದು ಎಲೆಕ್ಟ್ರಿಕಲ್ ಗುತ್ತೇದಾರ ಕೆಲಸ ಮಾಡಿಕೊಂಡು ತಂದೆ ತಾಯಿಯೊಂದಿಗೆ ಮದಿನಾ ಕಾಲೋನಿಯಲ್ಲಿ ವಾಸವಾಗಿರುತ್ತೇನೆ. ನನ್ನ ತಂದೆಯಾದ ತೋಲಾ ಬಾಷ ಇವರು ಅಜಗರ ಎಂಬುವವರ ಹತ್ತಿರ  ಬಿಸಿ ಹಾಕಿದ್ದು ಈ ವಿಷಯದಲ್ಲಿ ಇಲಿಯಾಸ್ ಪಟೇಲ  ಎಂಬುವರು ಸುಮಾರು ಒಂದು ವಾರದ ಹಿಂದೆ  ಪೋನ್ ಮಾಡಿ ನೀನು ವಿನಾಃ ಕಾರಣ ಬಿಸಿ ವಿಚಾರದಲ್ಲಿ  ತೆಲೆ ಹಾಕುತ್ತಿದ್ದಿಯಾ ನೋಡು ರಂಡಿ ಮಗನೆ ನಿನಗೆ ಮತ್ತು ನಿನ್ನ ಮಗನಿಗೆ ಖಲಾಸ ಮಾಡುತ್ತೇವೆ ನೋಡು ಅಂತ  ಬೈದಿರುತ್ತಾರೆ. ಆದ್ದರಿಂದ ನಾನು ಯಾಕೆ ನನಗೆ ನಮ್ಮ ತಂದೆಗೆ ಅವಾಚ್ಯವಾಗಿ ಬೈದಿರುತ್ತಿರಿ ಅಂತ ಕೇಳಿದಕ್ಕೆ ನನಗೂ ಸಹ ಜೀವದ ಭಯ ಬೆದರಿಕೆ ಹಾಕಿರುತ್ತಾರೆ. ಆದರೂ ನಾವು ಸುಮ್ಮನೆ ಇದ್ದಿರುತ್ತೇವೆ.  ನಂತರ ಇಂದು ದಿನಾಂಕ; 26/11/2022 ರಂದು ಸಾಯಂಕಾಲ 5.00 ಗಂಟೆ ಸುಮಾರಿಗೆ ಶಾಹಜಿಲಾನಿ ದರ್ಗಾ ಹತ್ತಿರ ನಾನು ಮತ್ತು ನನ್ನ ಗೆಳೆಯ ನಿಂತಿರುವಾಗ ಇಲಿಯಾಸ ಪಟೇಲ ಈತನು ಬಂದಿ ಏ ಭೋಸಡಿಕೆ ಬಿ ಸಿ ಕೆ ಮಾಮಲೆ ಮೆ ತುಮ್ ಔರ್ ರುಮಾರ ಬಾಪ್ ಕ್ಯೋಂ ಆಯೇ ಬೇ ಭೋಸಡಿಕೆ ತುಮಕೋ ಹಾಥ್ ಪೈರ್ ಕಾಟಕೆ ಫೇಕತೆ ಜಿಂದ ನೈ ಛೋಡತೆ ಸಾಲೆ ಅಂತ ಬೈದು ದಕಲಂ ದುಕಲಿ ಮಾಡಿ ಹೋಗಿರುತ್ತಾರೆ. ನಂತರ ನಾನು ಸಹ ನಮ್ಮ ಮನೆಗೆ ಹೋಗಿರುತ್ತೇನೆ.  ನಂತರ ರಾತ್ರಿ 9.00 ಗಂಟೆಯ ಸುಮಾರಿಗೆ ನಾನು ನನ್ನ ಗೆಳೆಯನಾದ ಶೇಖ ಮೈನೊದ್ದೀನ ಹಾಗೂ ಮಹ್ಮದ ಆರಿಫ ಕೂಡಿಕೊಂಡು ಮಾತನಾಡುತ್ತಾ ಕುಳಿಕೊಂಡಿರುವಾಗ ಅಲಿ ಪಟೇಲ,ಇಲಿಯಾಸ ಪಟೇಲ, ಅಜರ ಪಟೇಲ, ಫಯಾಜ ಪಟೇಲ, ಇಮ್ತಿಯಾಜ ಪಟೇಲ, ಅಜೀಮ ಪಟೇಲ, ಹಾಗೂ ಸಂಗಡ ಇನ್ನೂ 10-15 ಜನರು ಮೋಟರ ಸೈಕಲಗಳ ಮೇಲೆ ಅಕ್ರಮ ಕೂಟ ರಚಿಸಿಕೊಂಡು ಕೂಡಿಕೊಂಡು ಬಂದವರೆ ಏ ರಾಂಡಕಾ ಬೇಟಾ ಪಕಡೋ ಸಾಲೆಕೋ ಬಹುತ ಹೋಗಯಾ ಇಸಕಾ ಅಂದವರೆ ಇಲಿಯಾಸ ಪಟೇಲ ಈತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈ ಮುಷ್ಠಿ ಮಾಡಿ ಮುಖದ ಮೇಲೆ ಹೊಡೆಯುತ್ತಿರುವಾಗ ಇಲಿಯಾಸ ಪಟೇಲ ಈತನು ನನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿರುವ ತಲವಾರದಿಂದ ಜೋರಾಗಿ ನನ್ನ ತಲೆಗೆ ಹೊಡೆದು ಭಾರಿ ರಕ್ತಗಾಯ ಮಾಡುತ್ತಿರುವಾಗ ಅಜರ ಪಟೇಲ, ಮತ್ತು ಅಜೀಮ ಪಟೇಲ ಇವರು ಕೈಯಲ್ಲಿರುವ ಬಡಿಗೆಯಿಂದ ನನ್ನ ಕಾಲ ಮೇಲೆ ಹೊಡೆಯುತ್ತಿರುವಾಗ ಫಯಾಜ ಮತ್ತು ಇಮ್ತಿಯಾಜ ಪಟೇಲ ಇವರು ಮುಷ್ಠಿ ಮಾಡಿ ನನ್ನ ಎದೆಯ ಮೇಲೆ ಮತ್ತು ಎದೆಯ ಮೇಲೆ ಹೊಡೆದು ಗುಪ್ತಗಾಯಪಡಿಸುತ್ತಿರುವಾಗ ಅವರ ಸಂಗಡ ಬಂದವರು ಮಾರೋ ಸಾಲೋಂಕೋ ಜಿಂದಾ ಮತ್ ಛೋಡೋ ಅಂತ ಎಲ್ಲರೂ ಸೇರಿ ಕಾಲಿನಿಂದ ಕೈಯಿಂದ ಹೊಡೆಯುತ್ತಿರುವಾಗ ಮಹ್ಮದ ಆರಿಫ ಮತ್ತು ಶೇಖ ಮೈನೊದ್ದೀನ ಇವರು ಬಂದು ಜಗಳ ಬಿಡಿಸಿರುತ್ತಾರೆ. ಒಂದು ವೇಳೆ ಅವರು ನನಗೆ ಹೊಡೆಯುವದನ್ನು ಬಿಡಿಸದೆ ಇದ್ದಿದ್ದರೆ ನನಗೆ ಕೊಲೆ ಮಾಡೆ ಬಿಡುತ್ತಿದ್ದರು ಮುಂದೆ ಏನಾಯಿತು ಎಂಬುವದು ನನಗೆ ಗೊತ್ತಿರುವದಿಲ್ಲಾ . ನನಗೆ ಕೊಲೆ ಮಾಡುವ ಉದ್ದೇಶದಿಂದ ಇಲಿಯಾಸ ಪಟೇಲ ಹಾಗೂ ಇತರರು ಕೂಡಿಕೊಂಡು ಬಿ ಸಿ ವಿಚಾರದಲ್ಲಿ ಕೊಲೆ ಮಾಡುವ ಉದ್ದೇಶದಿಂದ ಹೊಡೆ ಬಡೆ ಮಾಡಿ ಅವಾಚ್ಯವಾದ ಶಬ್ದಗಳಿಂದ ಬೈದು ರಕ್ತಗಾಯ ಮತ್ತು ಗುಪ್ತಗಾಯ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಇತ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ರಾಘವೇಂದ್ರ ನಗರ ಪೊಲೀಸ ಠಾಣೆ  :-  ದಿನಾಂಕ; 26/11/2022 ರಂದು 9.45 ಪಿ.ಎಮ್ ಕ್ಕೆ ಕ್ಯೋ. ಪಿ ಆಸ್ಪತ್ರೆಯಿಂದ MLC ವಸೂಲಾಗಿದ್ದರ ಪ್ರಯುಕ್ತ ರಾತ್ರಿ  10.05 ಗಂಟೆಗೆ ಕ್ಯೋ.ಪಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀ ಫಯಾಜ ಪಟೇಲ ತಂದೆ ಖುರಷಿದ ಪಟೇಲ್ ವಯ-26 ವರ್ಷ ಜಾ||ಮುಸ್ಲಿಂ ಉ||ಸಿವಿಲ್ ಕಾಂಟ್ರ್ಯಾಕ್ಟ್ರರ್ ಸಾ||ಮಹಿಬೂಬ ಸುಬಾನಿ ಚಿಲ್ಲಾ ಎಂ.ಎಸ್.ಕೆ.ಮಿಲ್ ಕಲಬುರಗಿ ರವರಿಗೆ ರಾತ್ರಿ 11.00 ಗಂಟೆಯಿಂದ 12.15 ಗಂಟೆ ವರೆಗೆ ವಿಚಾರಿಸಿ ಗಾಯಾಳುದಾರನ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 12.30 ಎ.ಎಮ್ ಕ್ಕೆ ಬಂದು ಸದರಿ ಗಾಯಾಳುದಾರನ ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ. ನಾನು ಈ ಮೇಲ್ಕಾಣಿಸಿದ ಹೆಸರು ವಿಳಾಸದ ನಿವಾಸಿತನಿದ್ದು ಸಿವಿಲ್ ಕಾಂಟ್ರ್ಯಾಕ್ಟರ್ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಮಹಿಬೂಬ ಸುಬಾನಿ ಚಿಲ್ಲಾದ ಹತ್ತಿರ ವಾಸವಾಗಿ ಇರುತ್ತೇನೆ. ನಾನು ಮತ್ತು ನಮ್ಮ ಕುಟುಂಬದವರು ನಮ್ಮ ಬಡಾವಣೆಯ  ಅಜಗರ ಎಂಬುವವರ ಹತ್ತಿರ ಬಿಸಿ ಹಾಕಿದ್ದು ಈ ವಿಷಯದಲ್ಲಿ ಎರಡು ಮೂರು ದಿನಗಳ ಹಿಂದೆ ನಮ್ಮ ಏರಿಯಾದಲ್ಲಿ ಬಿಸಿ ವಿಷಯದಲ್ಲಿ ಗಲಾಟೆ ಆಗಿದ್ದರಿಂದ ನಾನು ಅಜಗರನನ್ನು ಸಮಜಾಯಿಸಿ ಕರೆದುಕೊಂಡು ಹೋಗಿರುತ್ತೇನೆ. ಇದೆ ವಿಷಯವಾಗಿ ದಿನಾಂಕ:26.11.2022 ರಂದು 2-30 ಪಿ.ಎಂ ಸುಮಾರಿಗೆ ನನ್ನ ತಮ್ಮನಾದ ಇಲಿಯಾಸ ಪಟೇಲ ಈತನು ಶಹಾ ಜಿಲಾನಿ ದರ್ಗಾ ಹತ್ತಿರ ನಿಂತುಕೊಂಡಾಗ ಸದ್ದಾಂ ಎಂಬುವವನು ಬಂದು ಈ ಹಿಂದೆ ನಿನ್ನ  ಅಣ್ಣ ಫಯಾಜ ಇವರು ಅಜಗರ ಎಂಬುವವನನ್ನು ಕರೆದುಕೊಂಡು ಹೋಗಿರುತ್ತಾನೆ ಅಂತಾ ಈ ವಿಷಯದಲ್ಲಿ  ನನ್ನ ತಮ್ಮನ ಮೇಲೆ ಸಿಟ್ಟಾಗಿ ನನ್ನ ತಮ್ಮನ  ಅಂಗಿಯ ಕಾಲರ ಹಿಡಿದು ತೆರೆಕೋನಾ ಐಲಿಯಾ ಹದೀಶ ಮಜೀದ ಕೆ ಪಾಸ ಲಂಗಾ ಕರೆಕೆ ಮಾರತು ಸಾಲೆ ಅಂತಾ ಅಂದಾಗ ನನ್ನ ತಮ್ಮ  ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಬಂದಿರುತ್ತಾನೆ. ನಂತರ ರಾತ್ರಿ 8-00 ಗಂಟೆ ಸುಮಾರಿಗೆ ತೋಲಾ ಕಾರ್ಪೆಂಟರ ಈತನು ನನಗೆ ಫೋನ ಮಾಡಿ ಹಮ್ಹಾರೆ ಬೇಟಾ ಸದ್ದಾಂ ಛೋಟಾ ಹೈ ತೋಡಾ ಸಮಜೋ,  ತುಮ ಬಡೆ ಹೈ ತುಮ್ಹಾರೆ ಬಾತ ಸುನತೆ ಅಂತಾ ಹೇಳಿರುತ್ತಾನೆ. ನಂತರ 8-45 ಗಂಟೆ ಸುಮಾರಿಗೆ ನಾನು ಮತ್ತು ಇಲಿಯಾಸ ಪಟೇಲ್, ಅಜೀಮ್ ಪಟೇಲ್ ,ಹಾಗೂ ಮಹಿಬೂಬ ನಾವೆಲ್ಲರೂ ಕೂಡಿಕೊಂಡು ಶಹಾ ಜಿಲಾನಿ ಫಂಕ್ಷನ ಹಾಲದಲ್ಲಿ ನಡೆಯುತ್ತಿರುವ ನನ್ನ ಗೆಳೆಯನ ಮದುವೆ ಸಮಾರಂಭಕ್ಕೆ ಹೋಗಿರುತ್ತೇವೆ. ಅದೆ ಸಮಯದಲ್ಲಿ ಸದ್ದಾಂ ತಂದೆ ತೋಲಾ ಈತನು ಶಹಾ ಜಿಲಾನಿ ದರ್ಗಾದ ಹತ್ತಿರ ನಿಂತುಕೊಂಡಿದ್ದು ನಾನು ತಿಳುವಳೀಕೆ ಹೇಳಲು ಹೋದಾಗ ಈತನು ಕ್ಯಾ ಬೇ ಮಾಕೆ ಲೌಡೆ ತೆರೆ ಬಹುತ ಹುವಾ ಹಮ್ಹಾರೆಕೋ ಸಮಜೆನೆಕೋ ಆತೆ ಸಾಲೆ ಅಂತಾ ಅಂದವನೆ ನನ್ನ ಎಧೆಯ ಮೇಲಿನ ಅಂಗಿ ಹಿಡಿದು ಕೈ ಮುಷ್ಟೀ ಮಾಡಿ ನನ್ನ ಮುಖದ ಮೇಲೆ ಹೊಡೆದು ಗುಪ್ತಗಾಯ ಮಾಡುತ್ತಿರುವಾಗ  ಅಲ್ಲೆ ನಿಂತಿರುವ ಆರೀಪ್ ಈತನು ನನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಹತ್ತಿರ ಇರುವ ಚಾಕುವಿನಿಂದ ನನ್ನ ಕುತ್ತಿಗೆಗೆ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಿದ್ದು ಅಷ್ಟರಲ್ಲಿಯೆ ನನ್ನ ತಮ್ಮನಾದ ಇಲಿಯಾಸ ಪಟೇಲ್ ಈತನು ಜಗಳ ಬಿಡಿಸಲು ಬಂದಾಗ ಆರೀಪ್ ಈತನು ಏ ಭೋಸಡಿಕೆ ತುಮ್ ದೋನೋ ಭಾಯೋಕಾ ಬಹುತ ಹುವಾ ಅಂತಾ ಅನ್ನುತ್ತಿರುವಾಗ ಸಾದಿಕ ತಂದೆ ತೋಲಾ ಈತನು ತನ್ನ ಕೈಯಲ್ಲಿರುವ ಬಡಿಗೆಯಿಂದ ನನ್ನ ತಮ್ಮನ ತೆಲೆಗೆ ಹೋಡಿದಾಗ ನನ್ನ ತಮ್ಮನ ತಲೆಗೆ ಭಾರಿ ರಕ್ತಗಾಯ ಆಗಿದ್ದು ನನ್ನ ತಮ್ಮ ಕೆಳಗಡೆ ಬಿದ್ದಾಗ ಸಾದಿಕ ಈತನ ಜೊತೆಯಲ್ಲಿ ಬಂದ 15-20 ಜನರು ನನಗೆ ಮತ್ತು ನನ್ನ ತಮ್ಮನಿಗೆ ಬೈಯುತ್ತಿರುವಾಗ ಮಕ್ಸೂದ  ಅಲಿ ಈತನು ಅವಾಛ್ಯ ಶಬ್ದಗಳಿಂದ ಬೈದು ಕೈ ಮುಷ್ಟಿ ಮಾಡಿ ನನ್ನ ಎಡಗಣ್ಣಿನ ಹುಬ್ಬಿನ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ. ನನಗೆ ಮತ್ತು ನನ್ನ ತಮ್ಮನಿಗೆ ಕೊಲೆ ಮಾಡುವ ಉದ್ದೇಶದಿಂದ ಕೈಯಲ್ಲಿ ಹರಿತವಾದ ಆಯುಧಗಳು ಹಿಡಿದುಕೊಂಡು ತುಮ ಲೋಗೋಕೋ ಜಿಂದಾ ನಹಿ ಛೋಡತೆ ಅಂತಾ ಅನ್ನುತ್ತಿರುವಾಗ  ಅಲ್ಲೆ ನಿಂತಿರುವ  ಅಜೀಮ್ ಪಟೇಲ ,ಮಹಿಬೂಬ ಹಾಗೂ ಅಕ್ಕಪಕ್ಕದ ಜನರು ಬಂದು ಜಗಳ ಬಿಡಿಸಿರುತ್ತಾರೆ. ಒಂದು ವೇಳೆ ಇವರು ಬಂದು ಜಗಳ ಬಿಡಿಸದೆ ಇದ್ದರೆ ಅವರೆಲ್ಲರೂ ಕೂಡಿಕೊಂಡು ನನಗೆ ಮತ್ತು ನನ್ನ ತಮ್ಮನಿಗೆ ಹೊಡೆದು ಕೊಲೆ ಮಾಡೆ ಬಿಡುತ್ತಿದ್ದರು. ನಂತರ ನಾನಗೆ ಮತ್ತು ನನ್ನ ತಮ್ಮನಿಗೆ ಅಕ್ಕಪಕ್ಕದ ಜನರು ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ.        ಕಾರಣ ನನಗೆ ಮತ್ತು ನನ್ನ ತಮ್ಮನಿಗೆ ಕೊಲೆ ಮಾಡುವ ಉದ್ದೇಶದಿಂದ ಸದ್ದಾಂ ತೋಲಾ, ಆರೀಪ್ ತೋಲಾ , ಸಾದಿಕಾ ತೋಲಾ ಹಾಗೂ ಸಂಗಡ 15-20 ಜನರು  ಅಕ್ರಮ ಕೂಟ ರಚಿಸಿಕೊಂಡು ಕೈಯಿಂದ ಬಡಿಗೆಯಿಂದ ಚಾಕುವಿನಿಂದ ಹೊಡೆ ಬಡೆ ಮಾಡಿ ಭಾರಿ ರಕ್ತಗಾಯ ಗುಪ್ತಗಾಯಪಡಿಸಿ ಜೀವದ ಭಯಾ ಬೆದರಿಕೆ ಹಾಕಿದ್ದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿ ಬರೆಸಿದ ಹೇಳೀಕೆ ನಿಜ ಇರುತ್ತದೆ. ಅಂತ ಇತ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ ಠಾಣೆ -2 :-  ದಿನಾಂಕ 27/11/2022 ರಂದು ಬೆಳಿಗ್ಗೆ 11:00 ಗಂಟೆಗೆ ಆರ್.ಆರ್ ಶಹಾ ಆಸ್ಪತ್ರೆಯಿಂದ ಶ್ರೀ. ಶರಣಬಸಪ್ಪಾ ತಂದೆ ಭೀಮರಾಯ ಇಂಗಳಗಿಕರ ವಯಃ 56 ವರ್ಷ ಜಾತಿಃ ಹಡಪದ ಉಃ ಎಲ್.ಐ.ಸಿಯಲ್ಲಿ ಕೆಲಸ ಸಾಃ ಸಂಗಮತಾಯಿ ಕಾಲೋನಿ ಕಲಬುರಗಿ ಇವರ ಆರ್.ಟಿ.ಎ ಎಮ್.ಎಲ್.ಸಿ ಬಂದ ಮೇರೆಗೆ ನಾನು ಆಸ್ಪತ್ರೆಗೆ ಭೇಟಿ ನೀಡಿ ಎಮ್.ಎಲ್.ಸಿ ಪತ್ರ ವಸೂಲ ಮಾಡಿಕೊಂಡು ಗಾಯಾಳು ಶರಣಬಸಪ್ಪಾ ಇವರಿಗೆ ನೋಡಿ ವಿಚಾರಿಸಲು ಅವರು ನಿನ್ನೆ ದಿನಾಂಕ 26/11/2022 ರಂದು ಮಧ್ಯಾಹ್ನ ಅವರ ಇಲಾಖೆ ವತಿಯಿಂದ ಮಾಡುವ ಆರೋಗ್ಯ ತಪಾಸಣೆ ಕುರಿತು ಅವರ ಮನೆಯಿಂದ ಅವರ ಮಗಳಾದ ಮಹಾಲಕ್ಷ್ಮಿ ಇವರ ಜೊತೆಗೆ ಮೋಟರ ಸೈಕಲ ನಂ. ಕೆಎ 32 ಎಕ್ಸ 5855 ನೇದ್ದರ ಮೇಲೆ ಸಂಗಮೇಶ್ವರ ಕಾಲೋನಿಗೆ ಬರುವ ಎಸ್.ಬಿ.ಆರ್ ಶಾಲೆಯ ಕಂಪೌಂಡ ಹತ್ತೀರ ನಿಧಾನಬದಿಯಿಂದ ರಸ್ತೆ ಬದಿಯಿಂದ ಹೋಗುವಾಗ ಮಧ್ಯಾಹ್ನ 2:15 ಗಂಟೆ ಸುಮಾರಿಗೆ ಕಾರ ನಂ. ಕೆಎ 32 ಪಿ 5887 ನೇದ್ದರ ಚಾಲಕನು ಎಸ್.ಬಿ ಕಾಲೇಜ ಕಡೆಯಿಂದ ಒಡ್ಡರಗಲ್ಲಿಯ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟರ ಸೈಕಲಗೆ ಎದುರಿನಿಂದ ಡಿಕ್ಕಿ ಪಡಿಸಿ ಮೋಟರ ಸೈಕಲ ಸಮೇತ ಕೆಳಗೆ ಬಿಳಿಸಿ ಭಾರಿಗಾಯಗೊಳಿಸಿ ಉಪಚಾರ ಕುರಿತು ಆರ್.ಆರ್ ಶಹಾ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿ ಅಲ್ಲಿಂದ ಹೇಳದೆ ಕೇಳದೆ ಓಡಿ ಹೋಗಿದ್ದು, ಕಾರಣ ಸದರಿ ಕಾರ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಕೊಟ್ಟ ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 28-11-2022 12:57 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080