ಅಭಿಪ್ರಾಯ / ಸಲಹೆಗಳು

ಸಂಚಾರಿ  ಪೊಲಿಸ್‌  ಠಾಣೆ -1 :- ದಿನಾಂಕ 27-10-2022 ರಂದು ರಾತ್ರಿ ೮-೧೫ ಗಂಟೆಗೆ ಶ್ರೀ ವಿರುಪಯ್ಯಾ ಇವರು ಠಾಣೆಗೆ ಹಾಜರಾಗಿ ಅವರ ಅಣ್ಣ ಶ್ರೀ ಬಸಯ್ಯಾ ತಂದೆ ಬಂಡಯ್ಯಾ ಮಠಪತಿ ಇವರ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು  ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ ೨೨-೧೦-೨೦೨೨ ರಂದು ಸಾಯಂಕಾಲ ಹುಮನಾಬಾದ ರೋಡ ಹತ್ತೀರ ಬರುವ ಸಾರಡಾ ಕಾಂಪ್ಲೇಕ್ಸನಲ್ಲಿ ಇರುವ ಆಟೋಮೋಬೈಲ ಅಂಗಡಿಗೆ ಹೋಗಿ ನಮ್ಮ ಪರಿಚಯದವರನ್ನು ಬೆಟಿಯಾಗಿ ವಾಪಸ್ಸ ನಡೆದುಕೊಂಡು ರೋಡ ಮೇಲೆ ಹೋಗಿ ಬರುವ ವಾಹನಗಳನ್ನು ನೊಡಿಕೊಂಡು ರಸ್ತೆ ದಾಟುತ್ತೀರುವಾಗ ಒಬ್ಬ ಒಮಿನಿ ವ್ಯಾನ ಚಾಲಕನು ಹುಮನಾಬಾದ ರಿಂಗ ರೋಡ ಕಡೆಯಿಂದ ಚೌಕ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸಾನ್ವಿ ವೈನ್ಸ ಶಾಪ ಎದುರಿನ ರೋಡ ಮೇಲೆ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದನು. ನಾನು ಪುಟಿದು ರೋಡ ಮೆಲೆ ಬಿದ್ದಾಗ ಸದರ ಘಟನೆ ನೋಡಿದ ನನಗೆ ಪರಿಚಯದ ಸುನೀಲ ತಂದೆ ರೇವಣಸಿದ್ದಪ್ಪಾ ಬೀರನಳ್ಳಿ ಹಾಗೂ ರಾಕೇಶ ತಂದೆ ಮಲ್ಲಿಕಾರ್ಜುನ ಬಬಲಾದ ರವರು ಬಂದು ನನಗೆ ಎಬ್ಬಿಸಿ ರೋಡ ಪಕ್ಕದಲ್ಲಿ ಕೂಡಿಸಿದಾಗ ನಾನು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಮಾರುತಿ ಓಮನಿ ವ್ಯಾನ ನಂಬರ ನೋಡಲು ಕೆಎ-೨೮/ಎನ್-೯೧೩೪ ಇದ್ದಿತ್ತು. ಸದರಿ ವಾಹನದ ಚಾಲಕನು ವ್ಯಾನನ್ನು ರೋಡ ಪಕ್ಕಕ್ಕೆ ನಿಲ್ಲಿಸಿ ವ್ಯಾನಿನಿಂದ ಇಳಿದು ನಮ್ಮ ಹತ್ತೀರ ಬಂದು ಸ್ವಲ್ಪ ನಿಂತಂತೆ ಮಾಡಿ ತನ್ನ ವಾಹನವನ್ನು ಚಲಾಯಿಸಿಕೊಂಡು ಚೌಕ ಸರ್ಕಲ ಕಡೆಗೆ ಓಡಿ ಹೋದನು. ಸದರಿ ಘಟನೆ ಜರುಗಿದಾಗ ಸಾಯಂಕಾಲ ಅಂದಾಜು ೫-೩೦ ಗಂಟೆ ಸಮಯವಾಗಿತ್ತು. ಸದರ ಘಟನೆಯಿಂದ ಬಲಗಾಲು ತೊಡೆ ಹತ್ತೀರ ಭಾರಿ ಗುಪ್ತಪೆಟ್ಟು ಎಡಗಾಲಿನ ಹಿಮ್ಮಡಿಯ ಹತ್ತೀರ ರಕ್ತಗಾಯ ಹಾಗೂ ಮುಖಕ್ಕೆ ತರಚಿದಗಾಯ ಹಾಗೂ ಎರಡು ಕೈಬರಳುಗಳಿಗೆ ರಕ್ತಗಾಯವಾಗಿದ್ದರಿಂದ ಸುನೀಲ ಮತ್ತು ರಾಕೇಶ ಇಬ್ಬರೂ ಸೇರಿಕೊಂಡು ಒಂದು ಆಟೋರಿಕ್ಷಾ ವಾಹನದಲ್ಲಿ ಕೂಡಿಸಿಕೊಂಡು ಜಿಲ್ಲಾ ‍ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಅಂದು ಪೊಲೀಸನವರು ಬಂದಾಗ ನಮ್ಮ ಮನೆಯವರು ಬೇರೆ ಊರಿಗೆ ಹೋಗಿದ್ದರಿಂದ ಅವರನ್ನು ವಿಚಾರಿಸಿ ಅಪಘಾತ ಪಡಿಸಿದ ಚಾಲಕನ ಮೇಲೆ ದೂರು ನೀಡುವದಾಗಿ ತಿಳಿಸಿದ್ದು ಇಂದು ನಮ್ಮ ಮನೆಯವರು ಆಸ್ಪತ್ರೆಗೆ ಬಂದಿದ್ದು ಅವರನ್ನು ವಿಚಾರಿಸಿದ್ದು ಮತ್ತು ನನಗೆ ಶಸ್ತ್ರ ಚಿಕಿತ್ಸೆ ಆಗಿದ್ದರಿಂದ ನನಗೆ ದೂರು ಬರೆದು ಕಳುಹಿಸಲು ತಡವಾಗಿರುತ್ತದೆ. ಇಂದು ನಾನು ದೂರು ಬರೆಯಿಸಿ ನನ್ನ ತಮ್ಮ ವಿರುಪಯ್ಯಾ ಇವರ ಮುಖಾಂತರ ಕಳುಹಿಸುತ್ತಿದ್ದೆನೆ. ಅಪಘಾತ ಪಡಿಸಿದ ಓಮಿನಿ ವ್ಯಾನ ಚಾಲಕನ ಹೆಸರು ನನಗೆ ಗೋತ್ತಿರುವದಿಲ್ಲ ಆತನನ್ನು ನೋಡಿದ್ದು ಮುಂದೆ ನೋಡಿದಲ್ಲಿ ಗುರುತಿಸುತ್ತೆನೆ. ಓಮನಿ ವ್ಯಾನ ನಂಬರ ನೋಡಲು ಕೆಎ-೨೮/ಎನ್-೯೧೩೪ ನೆದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತೀರುವ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ಕೊಟ್ಟ ದೂರು  ‍ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

 

 

 

 

ಸಂಚಾರಿ ಪೊಲಿಸ್‌  ಠಾಣೆ -2 :- ಇಂದು ದಿನಾಂಕ 27-10-2022 ರಂದು ೧೧:೦೦ ಎ.ಎಮ್ ಕ್ಕೆ ಶ್ರೇಯಸ್ ತಂದೆ ರಾಜೀವ ಸಂಗಮ ವಯ: 15 ವರ್ಷ ಜಾ: ಬ್ರಾಹ್ಮಣ ಉ: ‍ವಿದ್ಯಾರ್ಥಿ   ಸಾ: ಕೇನ್ಬ್ರಿಡ್ಜ್ ಶಾಲೆಯ ಹತ್ತೀರ ನೃಪತುಂಗ ಕಾಲೋನಿ ಕಲಬುರಗಿ ಇವರು ಕನ್ನಡದಲ್ಲಿ ಟೈಪ್ ಮಾಡಿದ ಫರ‍್ಯಾದಿ ರ‍್ಜಿ ಹಾಜರು ಪಡಿಸಿದ್ದು ಸದರಿ   ಅರ್ಜಿ ಸಾರಂಶವೆನೆಂದರೆ, ನಮ್ಮ ತಾಯಿಯಾದ ವಿಶಾಲಾಕ್ಷಿ ಇವರು ಡ್ಯಾನ್ಸ್ ಟೀಚರ ಇದ್ದು. ದಿನಾಂಕ ೨೨/೧೦/೨೦೨೨ ರಂದು ಸಾಯಂಕಾಲ ನಮ್ಮ ಮನೆಯಿಂದ ನಮ್ಮ ಮೋಟರ ಸೈಕಲ್ ನಂ.ಕೆಎ-೩೨ಇಟಿ-೮೬೨೩ ನೇದ್ದರ ಮೇಲೆ ನಮ್ಮ ಅಮ್ಮ ಅವರ ಜೊತೆಗೆ ಸೇಡಂ ರಸ್ತೇಯಲ್ಲಿ ಬರುವ ಸುಬೇದಾರ ಆಸ್ಪತ್ರೆಯ ಹತ್ತೀರ ಇರುವ ನಟರಾಜ ನಾಟ್ಯಕಲಾಸಂಸ್ಥೆಗೆ ಹೋಗಿ ಕ್ಲಾಸ್ ಮುಗಿಸಿಕೊಂಡು ಮರಳಿ ನಮ್ಮ ಮನೆಗೆ ಬರುವ ಕುರಿತು ನಮ್ಮ  ಅಮ್ಮ ಅವರು ನನಗೆ ಹಿಂದೆ ಕೂಡಿಸಿಕೊಂಡು  ಮೋಟರ ಸೈಕಲನ್ನು ರಸ್ತೇಯ ಬದಿಯಿಂದ ನಿಧಾನವಾಗಿ ಚಲಾಯಿಸಿಕೊಂಡು ಬರುವಾಗ ಜಯನಗರ ಕ್ರಾಸ್ ರಸ್ತೇಯ ಮೇಲೆ ಸಾಯಂಕಾಲ ೭-೩೦ ಗಂಟೆ ಸುಮಾರಿಗೆ ಒಂದು ಕಾರ ಚಾಲಕನು  ಗುಲಬರ್ಗಾ  ವಿಶ್ವವಿದ್ಯಾಲಯದ ಕಡೆಯಿಂದ ಸೇಡಂ ರಿಂಗ್ ರೋಡ ಕಲಬುರಗಿ ಕಡೆಗೆ ಗೋಗುವ ಕುರಿತು ತನ್ನ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ನಮ್ಮ ಹಿಂದಿನಿಂದ ಬಂದು ನಮ್ಮ ಮೋಟರ ಸೈಕಲ್ಲಿಗೆ ಡಿಕ್ಕಿಪಡಿಸಿದನು. ಆಗ ನಾನು ಮತ್ತು ನಮ್ಮ ಅಮ್ಮ ಇಬ್ಬರು ಮೋಟರ ಸೈಕಲಸಮೇತ ರಸ್ತೇಯ ಮೇಲೆ ಬಿದ್ದೇವು. ಅದನ್ನು ನೋಡಿದ ಸೈಫನ್ ತಂದೆ ಲಾಲಅಹ್ಮದ ಸಾಬ ಹಾಗೂ ನಮ್ಮ ಅಮ್ಮ ಅವರ ಜೊತೆಗೆ ಡ್ಯಾನ್ಸ್ ಟೀಚರ ಕೆಲಸ ಮಾಡುವ ನಮ್ಮ ಹಿಂದೆ ಬರುತಿದ್ದ ಮಹಮ್ಮದ ತಹೇಸಿನ್ ಅಲಿ ಇವರು ಬಂದು ನಮಗೆ ಎಬ್ಬಿಸಿ ರಸ್ತೇಯ ಬದಿಯಲ್ಲಿ ಕೂಡಿಸಿ ನೋಡಲು ಸದರ ಘಟನೆಯಿಂದ ನನಗೆ ಬಲಗೈಮುಂಗೈ ಹಾಗೂ ಅಲ್ಲಲ್ಲಿ ತರಚಿದಗಾಯ ಹಾಗೂ ಗುಪ್ತಗಾಯಗಳು ಆಗಿದ್ದು. ನಮ್ಮ ಅಮ್ಮ ವಿಶಾಲಾಕ್ಷಿ ಇವರಿಗೆ ನೋಡಲು ಅವರ ಬಲಗಾಲಿನ ಹಿಮ್ಮಡಿ ಹಾಗೂ ಪಾದದ ಮೇಲ್ಭಾಗದಲ್ಲಿ ಭಾರಿ ರಕ್ತಗಾಯ ವಾಗಿದ್ದು. ನಮಗೆ ಡಿಕ್ಕಿಪಡಿಸಿದ ಕಾರನ ನಂ. ನೋಡಲು ಕೆಎ-೩೨ ಪಿ-೯೭೬೧ ನೇದ್ದು ಇದ್ದು. ಅದರ ಸವಾರನಿಗೆ ನೋಡಲು ಆತನು ತನ್ನ ಕಾರನ್ನು ನಿಲ್ಲಿಸಿ ಹೊರಗೆ ಬಂದು ನಿಲ್ಲುವ ಹಾಗೆ ಮಾಡಿ ಮತ್ತೆ ತನ್ನ ಕಾರ ಚಾಲು ಮಾಡಿಕೊಂಡು ಸೇಡಂ ರಿಂಗ್ ರೋಡ ಕಡೆಗೆ ಓಡಿ ಹೋಗಿರುತ್ತಾನೆ. ಆತನಿಗೆ ನೋಡಿರುತ್ತೇನೆ. ಮುಂದೆ ನೋಡಿದ್ದಲ್ಲಿ ಗುರುತಿಸುತ್ತೇನೆ. ಸದರ ವಿಷಯಗೊತ್ತಾಗಿ ಸ್ಥಳಕ್ಕೆ ಅಂಬುಲೆನ್ಸ್ ವಾಹನ ಬಂದಿದ್ದು. ಮಹ್ಮದ ತಹೇಸಿನ್ ಅಲಿ ಹಾಗೂ ನಾನು ಸೇರಿ ನಮ್ಮ ತಾಯಿಯವರಿಗೆ ಅಂಬುಲೆನ್ಸ್ ನಲ್ಲಿ ಹಾಕಿಕೊಂಡು ಉಪಚಾರ ಕುರಿತು ಮಣ್ಣೂರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು. ನನಗೆ ಸಣ್ಣ ಪುಟ್ಟ ಗಾಯಗಳು ಆಗಿದ್ದು ನಾನು ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ. ನಾನು ನನ್ನ ತಾಯಿಯವರ ಚಿಕಿತ್ಸೆಯಲ್ಲಿ ಇದ್ದು ನಮ್ಮ ತಂದೆಯವರೊಂದಿಗೆ ವಿಚಾರಿಸಿ ಇಂದು ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಕಾರಣ ಸದರಿ ಡಿಕ್ಕಿಪಡಿಸಿ ಅಪಘಾತ ಮಾಡಿದ ಕಾರ ನಂ. ಕೆಎ-೩೨ ಪಿ-೯೭೬೧ ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ  ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ದೂರು  ‍ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲಿಸ್ ಠಾಣೆ:-  ದಿನಾಂಕ ೨೨.೧೦.೨೦೨೨ ರಂದು ರಾತ್ರಿ ೯:೦೦ ಗಂಟೆ ಸುಮಾರಿಗೆ ನಾನು ಮತ್ತು ಸೈಯದ ಸಲ್ಮಾನ್ ಇಬ್ಬರು ಕೂಡಿಕೊಂಡು ಚುನ್ನಾ ಭಟ್ಟಿ ಹತ್ತಿರ ಪಾನಿಪುರಿ ತಿನ್ನುತ್ತಿರುವಾಗ ಸದರಿ ಆರೋಪಿತರಾದ ೧) ಮೋಶಿನ್ ೨) ರಿಹಾನ್ ೩) ಮುಕ್ರಮ್ ೪) ಸಮೀರ್ ೫) ತೌಫೀಕ್ ಎಂಬುವವರು ಅಕ್ರಮಕೂಟ ರಚಿಸಿಕೊಂಡು ಬಂದವರೆ ನಾವು ನಿಂತಿದ್ದ ಸ್ಥಳಕ್ಕೆ ಬಂದು ಅವರು ನನಗೆ ಡಿಕ್ಕಿ ಹೊಡೆದರು ಆಗ ನಾನು ಕೈಕೂ ಮೇರೆ ಕೂ ಡಿಕ್ಕಿ ಮಾರೆ ಅಂತಾ ಕೇಳಿದ್ದಕ್ಕೆ ಮೋಶೀನ್ ಈತನು ಹಮ್ ಏ ಏರಿಯಾಕೇ ಡಾನ್ ಹೈ ಹಮಾರೆಕೋ ಪುಚತಾ ಹೈ ತುಮ್ ಹಮಾರಾ ಬಾತ್ ಸುನನಾ ಅಂತಾ ಅಂದು ತನ್ನ ಹತ್ತಿರ ಇದ್ದ ಚಾಕುವಿನಿಂದ ನನ್ನ ಎಡಕಿವಿಗೆ ಹೊಡೆದು ರಕ್ತಗಾಯ ಮಾಡಿದನು ಅಂತಾ ಫಿರ್ಯಾದಿ ಕೊಟ್ಟ ಹೇಳಿಕೆ  ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 14-11-2022 03:00 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080