ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್ ಠಾಣೆ 1  :- ದಿನಾಂಕ 27.09.2022 ರಂದು ಬೆಳಿಗ್ಗೆ  9-45 ಗಂಟೆಗೆ ಶ್ರೀ ಹಣಮಂತರಾಯ ತಂದೆ ವೆಂಕೋಬಾ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವನೆಂದರೆ ದಿನಾಂಕ 26.09.2022 ರಂದು ರಾತ್ರಿ 10-00 ಗಂಟೆಯಿಂದ  ಬೆಳಿಗ್ಗೆ  6-00  ಗಂಟೆಯವರೆಗೆ ನನಗೆ ಮತ್ತು ಪ್ರಶಾಂತ ಇಬ್ಬರಿಗೂ ಕೇಂದ್ರ ಬಸ್ಸ ನಿಲ್ದಾಣ ಕಾವಲು ಕರ್ತವ್ಯಕ್ಕೆ ನೇಮಿಸಿದ್ದರಿಂದ ನಾನು ಮತ್ತು ಪ್ರಶಾಂತ ಇಬ್ಬರು ಕೇಂದ್ರ ಬಸ್ಸ ನಿಲ್ದಾಣ ಕಾವಲು ಕರ್ತವ್ಯದ  ಮೇಲೆ ಶೀವುಕುಮಾರ ಮತ್ತು ಪೈಜೊದ್ದಿನ ಇಬ್ಬರು ಕೇಂದ್ರ ಬಸ್ಸ ನಿಲ್ದಣ ಕಂಟ್ರೋಲರ್ ಕೆಲಸದ ಮೇಲೆ ಇದ್ದೇವು ರಾತ್ರಿ 2-50 ಗಂಟೆ ಸಮಯಕ್ಕೆ ಒಬ್ಬಳು ಹೆಣ್ಣುಮಗಳು ಬಸ್ಸ ನಿಲ್ದಾಣ  ಪ್ರವೇಶ ದ್ವಾರದಿಂದ ಕೇಂದ್ರ ಬಸ್ಸ ನಿಲ್ದಾಣ ಒಳಗಡೆ ನಡೆದುಕೊಂಡು ಬರುತ್ತಿರುವಾಗ ಬಸ್ಸ ನಿಲ್ದಾಣದ ಪ್ರವೇಶ ದ್ವಾರದಿಂದ ಒಬ್ಬ ಬಸ್ಸ ಚಾಲಕನು ಕೇಂದ್ರ ಬಸ್ಸ ನಿಲ್ದಾಣದ ಪ್ಲಾಟಪಾರಂ ಕಡೆಗೆ ಬರುವಾಗ ತನ್ನ ಬಸ್ಸನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪ್ರವೇಶದ್ವಾರದ ಸಮೀಪ  ನಡೆದುಕೊಂಡು ಬರುತ್ತಿರುವ ಹೆಣ್ಣು ಮಗಳಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದಾಗ ಅ ಹೆಣ್ಣುಮಗಳು ಕೆಳಗಡೆ ಬಿದ್ದಾಗ ಅವಳ ಮೇಲೆ  ಬಸ್ಸ ಚಾಲಕ ಬಸ್ಸಿನ ಗಾಲಿಯನ್ನು ಚಲಾಯಿಸಿಕೊಂಡು ಮುಂದೆ ಬಂದು ಬಸ್ಸನ್ನು ನಿಲ್ಲಿಸಿದಾಗ ನಾನು ಮತ್ತು ಪ್ರಶಾಂತ ಕಂಟ್ರೋಲರ್ ಶೀವುಕುಮಾರ ಹಾಗೂ ಪೈಜೋದ್ದಿನ 4 ಜನರು ಹೋಗಿ ನೋಡಲು ಅಪರಿಚಿತ ಹೆಣ್ಣುಮಗಳಿಗೆ ಭಾರಿ ಪೆಟ್ಟು ಬಿದ್ದಿದರಿಂದ ಅಪಘಾತ ಸ್ಥಳದಲ್ಲಿ ಅವಳ ಉಸಿರಾಟ ನಿಂತು ಮೃತ ಪಟ್ಟಿದ್ದಳು ಅಪಘಾತ ಪಡಿಸಿದ ಬಸ್ಸ ನಂಬರ  ನೋಡಲು ಕೆಎ38/ಎಫ-1140 ಇದ್ದು ಸದರ ಬಸ್ಸ ಬೀದರ್ ಬಸ್ಸ ಡಿಪೂ ನಂ 1 ರ  ಬಸ್ಸ ಇದ್ದು ಅದರ ಚಾಲಕನ  ಹೆಸರು ವಿಠಲರಾವ ತಂದೆ ಯಲ್ಲಯ್ಯಾ ಅಂತಾ ಕಂಡೇಕ್ಟರ ಹೆಸರು  ಶೀವಶಂಕರ ತಂದೆ ದೇವಪ್ಪ ಅಂತಾ ಗೊತ್ತಾಯಿತ್ತು ಸದರಿಯವರು ಬಳ್ಳಾರಿಯಿಂದ ಬೀದರಕ್ಕೆ ಹೊರಟಿದ್ದರು   ಮೃತ ಅಪರಿಚಿತ ಹೆಣ್ಣು ಮಗಳ ತೆಲೆ ಮೇಲೆ ಭಾರಿ ರಕ್ತಗಾಯ ಬಲ ಗಲ್ಲಕ್ಕೆ ಭಾರಿ ರಕ್ತಗಾಯ ಬಲ ಎದೆಗೆ ಎಡ ಎದೆಗೆ ಭಾರಿ ರಕ್ತಗಾಯ ಹೊಟ್ಟೆಗೆ ಭಾರಿ ರಕ್ತಗಾಯ ಬಲಮುಂಗೈಗೆ ಎಡಗೈ ರೆಟ್ಟೆಯಿಂದ ಹಸ್ತದ ವರೆಗೆ ಭಾರಿ ಪೆಟ್ಟು ಬಿದ್ದು ಚಪ್ಪಟೆಯಾಗಿತ್ತು ಮತ್ತು ಬಲಗಾಲ ತೊಡೆಗೆ ಭಾರಿ ರಕ್ತಗಾಯವಾಗಿತ್ತು ಸದರಿಯವಳ ಹೆಸರು ವಿಳಾಸ ಗೊತ್ತಾಗಲಿಲ್ಲ ಸದರಿಯವಳು  ಅಂದಾಜು 62 ರಿಂದ 65 ವಯಸ್ಸವಳಾಗಿದ್ದು ಸಾದಾ ಗಪ್ಪು ಮೈಬಣ್ಣ ಕೊಲು ಮುಖ ಹೊಂದಿದ್ದು ಮತ್ತು ಕಪ್ಪು ಬಣ್ಣದ ಕುಪ್ಪಸ ತಿಳಿ ಹಸಿರು ಬಣ್ಣದ ಸಿರೇ ದರಿಸಿದ್ದರು ನಂತರ ಸಂಚಾರಿ ಪೊಲೀಸ್ ನವರಿಗೆ ಮಾಹಿತಿ ಗೊತ್ತಾಗಿದ್ದರಿಂದ ಅಪಘಾತ ಸ್ಥಳಕ್ಕೆ ಬಂದು ಒಂದು ಅಂಬ್ಯುಲೇನ್ಸ ವಾಹನಕ್ಕೆ ಪೋನ ಮಾಡಲು ಅಂಬ್ಯಲೇನ್ಸ ವಾಹನ ಅಪಘಾತ ಸ್ಥಳಕ್ಕೆ ಬಂದಾಗ ಅಪರಿಚಿತ ಹೆಣ್ಣು ಮಗಳ ಶವದ ಸುರಕ್ಷತೆಗಾಗಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದರು ನಾನು ನಮ್ಮ ಅಧೀಕಾರಿಗಳಿಗೆ ಮಾಹಿತಿ ತಿಳಿಸಿ ಠಾಣೆಗೆ ಬಂದಿರುತ್ತೇನೆ.  ಕೆ.ಕೆ.ಅರ.ಟಿ.ಸಿ. ಬಸ್ಸ ನಂ ಕೆಎ38/ಎಫ-1140  ನೇದ್ದರ ಚಾಲಕ ವಿಠಲರಾವ  ಇತನು ಬಸ್ಸನ್ನು ಪ್ರವೇಶ ದ್ವಾರದಿಂದ ಕೇಂಧ್ರ ಬಸ್ಸ ನಿಲ್ದಾಣದ ಒಳಗಡೆ ಬರುವಾಗ ಬಸ್ಸನ್ನು  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಬರುತ್ತಿರುವ ಅಪರಿಚಿತ ಹೆಣ್ಣುಮಗಳಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅವಳ  ಮೈಮೇಲೆ ಬಸ್ಸಗಾಲಿ ಚಲಾಯಿಸಿ ಭಾರಿಗಾಯಗೊಳಿಸಿದ್ದರಿಂದ ಅಪರಿಚಿತ ಹೆಣ್ಣುಮಗಳು ಅಪಘಾತ ಸ್ಥಳದಲ್ಲಿ ಮೃತ ಪಟ್ಟಿದ್ದು ಬಸ್ಸ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಅರ್ಜಿ  ಸಾರಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ್‌ ಠಾಣೆ :- ದಿನಾಂಕ 27/09/2022 ರಂದು ಬೆಳಿಗ್ಗೆ 11-30  ಗಂಟೆಗೆ ನಮ್ಮ ಠಾಣೆಯ ಕೋರ್ಟ ಕರ್ತವ್ಯ ನಿರ್ವಹಿಸುತ್ತಿದ್ದ ಸಿಹೆಚಸಿ 64 ರವರು ಮಾನ್ಯ ಮೂರನೇ ಅಪರ ದರ್ಜೆ ಜೆ.ಎಂ.ಎಫ.ಸಿ.ಕೋರ್ಟ ಕಲಬುರಗಿ ರವರ ಪಿ.ಸಿ.ಅರ್. ನಂಬರ 514/2022 ನೇದ್ದರೊಂದಿಗೆ ಕಲಂ 200 ಸಿಅರಪಿಸಿ ರೀತ್ಯ ಮಾನ್ಯ ನ್ಯಾಯಾಲಯದ ಉಲ್ಲೇಖಿತ ದೂರು ಹಾಜರಪಡಿಸಿದ್ದರ ಸಾರಾಂಶವೆನೆಂದೆರೆ,  ಪಿರ್ಯಾದಿದಾರನಾದ ನಾನು ಶ್ರೀ ಕಮಲಾಕರ ತಂದೆ ಚಂದು ರಾಠೋಡ ವಯಸ್ಸು 44 ವರ್ಷ ಉದ್ಯೋಗ ವ್ಯಾಪರ ಮತ್ತು ಒಕ್ಕಲುತನ ಸಾ;ಶಕ್ತಿ ನಗರ ಶಹಾಬಾದ ರಸ್ತೆ ಕಲಬುರಗಿ ನಿವಾಸಿಯಾಗಿದ್ಉದ, ನಾನು ನನ್ನ ಹೆಂಡತಿ ಹಾಗೂ ಮಕ್ಕಳೊಂದಿಗೆಕೂಡಿಕೊಂಡು ಜೀವನ ಸಾಗಿಸುತ್ತಿದ್ದೆನೆ. ನನಗೆ ಸೋಮು ರಾಠೋಡ, ಅನ್ವರಬೇಗ, ದಿಲೀಪ ಜಾಧವ ಹಾಗೂ ನೂರಾಸಿಂಗ ಇವರು ನನ್ನ ಬಹಳ ದಿನಗಳಿಂದ ಸ್ನೇಹಿತರಾಗಿದ್ದು, ಸದರಿಯವರು ತಮ್ಮ ಸಂಸಾರಿಕ ಜೀವನದ ತೊಂದರೆಯಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಸಾಲ ಪಡೆಯುವ ಹಿನ್ನಲೆಯಲ್ಲಿ ಈ ನಾಲ್ಕು ಜನರು 2013 ನೇ ಸಾಲಿನಲ್ಲಿ ಮೇಲೆ ತೋರಿಸಿರುವ ಆಪಾದಿತನ ಮಾಹಾದೇವ ಲಿಜಿಂಗ್ ಫೈನಾನ್ಸ ಇವರ ಕಡೆ ಸಾಲ ಕೇಳಲು ಹೋದಾಗ ಫೈನಾನ್ಸ್ನ ಮಾಲೀಕರಾದ ಆಪಾದಿತ ಶ್ರೀ ಶಿವಶರಣಪ್ಪ ಬಿ.ಚಿಗೋಣಿ ಯವರು ನಾಲ್ಕು ಜನರಿಗೆ ಸಾಲ ಕೊಡಲು ಒಪ್ಪಿಕೊಂಡಿದ್ದು, ಜಾಮೀನುದಾರರಿಗೆ ಸದರಿ ಸಾಲದ ಸಲುವಾಗಿಕ ಕರೆದುಕೊಂಡು ಬಂದಲ್ಲಿ ತಮಗೆ ಸಾಲ ಕೊಡುತ್ತೇನೆಂದು ಹೇಳಿದರು. ಆಗ ನನ್ನ ಸ್ನೇಹಿತರು ನನ್ನ ಹತ್ತಿರ ಬಂದು ಸದರಿ ಸಾಲದ ಜಮೀನಿನ ಸಲುವಾಗಿ ನೀನು ಮೇಲೆ ತೋರಿಸಿರುವ ಫೈನಾನ್ಸಗೆ ಬಂದು ನಮ್ಮ ಪರವಾಗಿ ಫೈನಾನ್ಸನ ಸಾಲದ ಪತ್ರದ ಅರ್ಜಿಯ ಮೇಲೆ ಜಾಮೀನು ಸಲುವಾಗಿ ನೀನು ರುಜು ಮಾಡಬೇಕೆಂದು ಕೇಳಿದಾಗ, ನಾನು ಒಪ್ಪಿಕೊಂಡು, ಅವರು ತೆಗೆದುಕೊಳ್ಳುವ ಸಾಲಕ್ಕೆ ಜಾಮೀನು ಅರ್ಜಿಯ ಮೇಲೆ ನಾನು ರುಜು ಮಾಡಿದ್ದು,ಹಾಗೆ ನನ್ನ ಹೆಸರಿನಲ್ಲಿರುವ ಹೆಚ.ಡಿ.ಎಫ.ಸಿ. ಬ್ಯಾಂಕ ಖಾತೆಯ 8 ಖಾಲಿ ಚೆಕಗಳ ಮೇಲೆ ರುಜು ಮಾಡಿದ್ದು ಹಾಗೆಯೇ ನನ್ನ ಹೆಸರಿನಲ್ಲಿರುವ ಕೃಷ್ಣಾ ಗ್ರಾಮೀಣ ಬ್ಯಾಂಕ ಖಾತೆಯ 2 ಖಾಲಿ ಚೆಕಗಳ ಮೇಲೆ ರುಜು ಮಾಡಿದ್ದು, ಮತ್ತೊಂದು ನನ್ನ ಹೆಸರಿನಲ್ಲಿರುವ ಎಸ್.ಬಿ.ಐ. ಬ್ಯಾಂಕಿನ ಖಾತೆಯ1 ರುಜು ಮಾಡಿರುವ ಖಾಲಿ ಚೆಕನ್ನು ಅವರಿಗೆ ನಾನು ಕೊಟ್ಟಿರುತ್ತೇನೆ. ಒಟ್ಟು 11 ಚೆಕಗಳನ್ನು ಮಾಹಾದೇವ ಲೀಸಿಂಗ ಫೈನಾನ್ಸ ಮಾಲೀಕರಿಗೆ ಕೊಟ್ಟಿದ್ದು ಅದರ ವಿವರ ಈ ಕೆಳಗಿನಂತಿರುತ್ತದೆ.

  1. ಹೆಚ್.ಡಿ.ಎಫ.ಸಿ. ಬ್ಯಾಂಕ ಮಾಹಾನಗರ ಪಾಲಿಕೆ ಎದುರುಗಡೆ ಇರುವ ಶಾಖೆ ಕಲಬುರಗಿ

            1)ಚೆಕ್ಕನಂಬರ 6248678 2) ಚೆಕ್ಕನಂಬರ 624869 3) ಚೆಕ್ಕನಂಬರ 624870 4) 624871 5) 624875

           6)  624876 7) 428729 8) 4287230

  1. ಕೃಷ್ಣಾ ಗ್ರಾಮೀಣ ಬ್ಯಾಂಕ

         ಚೆಕ್ಕ ನಂಬರ 046557

  1. ಸ್ಟೇಟ ಬ್ಯಾಂಕ ಆಫ ಇಂಡಿಯಾ ಓಂ ನಗರ ಶಾಖೆ, ಕಲಬುರಗಿ

ಚೆಕ್ಕ ನಂಬರ 147999  ಸಾಲ ತೆಗೆದುಕೊಳ್ಳುವ ಸಮಯದಲ್ಲಿ ಫೈನಾನ್ಸ ಮಾಲೀಕರು ಹೇಳಿದ್ದೆನೆಂದೆರ, ಸದರಿ ಸಾಲ ಪೂರ್ತಿಯಾಗಿ ತೀರಿಸಿದ ನಂತರ ಸದರ ಸಾಲದ ಸಲುವಾಗಿ ನೀವು ಕೊಟ್ಟಿರುವಂತಹ ಚೆಕಗನ್ನು ವಾಪಸ್ಸು ಕೊಡುತ್ತೇನೆಂದು ಹೇಳಿರುತ್ತಾರೆ. ಇತ್ತಿಚಿಗೆ ನನ್ನ ಸ್ನೇಹಿತರು ತಾವು ಸಾಲ ತಿರಿಸಿದ  ನಂತರ ಸಾಲದ ಸಮಯದಲ್ಲಿ ಕೊಟ್ಟಿರುವಂತಹ  ಚೆಕ್ಕಗಳನ್ನು ವಾಪಸ್ಟು ಕೊಡಲು ಕೇಳಿದಾಗ ಆಪಾದಿತ ಶ್ರೀ ಶಿವಶರಣಪ್ಪ ಬಿ. ಚಿಗೋಣಿ ಯವರು ನನ್ನ ಸ್ನೇಹಿತರಿಗೆ ಹೇಳಿದ್ದೆನೆಂದೆರೆ,ನೀವು ಕೊಟ್ಟಿರುವಂತಹ ಚೆಕಗಳು ಬೇರೆ ದಾಖಲೆಗಳ ಜೊತೆ ಕೂಡಿಕೊಂಡಿರುವುದರಿಂದ ಅವುಗಳು ಸಿಗುತ್ತಿಲ್ಲಾ ನೀವು ನನಗೆ ಪೂರ್ತಿ ಸಾಲದ ಹಣವನ್ನು ಸಂದಾಯ ಮಾಡಿದ್ದು, ನೀವು ಕೊಟ್ಟಿರುವಂತಹ ಬೇರೆ ದಾಖಲೆಗಲನ್ನು ನಾನು ಸುಟ್ಟು ಹಾಕಿರುತ್ತೇನೆ ಎಂದು ಹೇಳಿರುತ್ತಾರೆ ಒಂದು ವೇಲೆ ನಿಮ್ಮ ದಾಖಲೆಗಳು ಮತ್ತಗು 11 ಚೆಕಗಳು ನನಗೆ ಸಿಕ್ಕಿದ್ದಲ್ಲಿ ನಿಮಗೆ ಕರೆಯಿಸಿ ಕೊಡುತ್ತೇನೆಂದು ಹೇಳಿ ವಾಪಸ್ಸು ಕಳುಹಿಸಿರುತ್ತಾರೆ ಎಂದು ನನಗೆ ಗೊತ್ತಾಯಿತು,  ಆದಾದ ನಂತರ ನಾನು ಸ್ವತಃ  ಶ್ರೀ ಶಿವಶರಣಪ್ಪ ಬಿ.ಚೀಗೋಣಿಯವರಿಗೆ ಭೇಟಿಯಾಗಿ ನಾನು ಕೊಟ್ಟಿರುವ 11 ಚೆಕಗಳು ಮತ್ತು ನಾನು ರುಜುಮಾಡಿರುವು ದಾಖಲೆ  ಪತ್ರಗಳು ನನಗೆ ವಾಪಸ್ಸು ಕೊಡಿ ಎಂದು ಕೇಳಿದಾಗ ಅವರು ಬೇರೆ ಯಾವುದೋ ದುರುದ್ದೇಶದಿಂದ ಹಾಗೂ ವಂಚಿಸುವ ಇರಾದೆಯಿಂದ ನಾನು ಕೊಟ್ಟಿರುವ ಚೆಕ್ಕಗಳನ್ನು ಮತ್ತು ನಾನು ಸಹಿ ಮಾಡಿರುವ ದಾಖಲೆಗಳನ್ನು ದುರುಪಯೋಗ ಮಾಡಿಕೊಳ್ಳುವ ಸಂಭವವಿದ್ದು, ಅವರು ನನಗೆ ನನ್ನ ಸಹಿ ಮಾಡಿರುವ  ಚೆಕ್ಕಗಳು ಮತ್ತು ದಾಖಲೆ ಪತ್ರಗಳು ಕೊಟ್ಟಿರುವುದಿಲ್ಲಾ ಇತ್ತೀಚಿಗೆ ನಾನು ಆಪಾದಿತ ಶ್ರೀ ಶಿವಶರಣಪ್ಪ ಬಿ. ಚಿಗೋನಿ ಯವರ ಮನೆಗೆ ಹೋಗಿ ನನ್ನ ಸಹಿ ಮಾಡಿರುಚ ಚೆಕಗಳು ಹಾಗೂ ದಾಖಲೆ ಪತ್ರಗಳು ಕೊಡಿ ಎಂದು ಕೇಳಿದಾಗ ಅವನು ನನಗೆ ಜೀವ ಭಯ ಹಾಕಿದ್ದು ಇನ್ನೂ ಮುಂದೆ ನೀನು ಒಂದು ವೇಲೆ ನನ್ನ ಮನೆಗೆ ಬಂದು ಚೆಕಗಳು ಹಾಗೂ ಸಹಿ ಮಾಡಿರುವ ಕಾಗದಪತ್ರಗಳನ್ನು ಕೇಳಿದರೆ ನಿನ್ನ ಜೀವ ಸಹಿತ ಬಿಡುವುದಿಲ್ಲಾ ಎಂದು ಬೆದರಿಕೆ ಹಾಕಿರುತ್ತಾರೆ. ಸದರಿ ಆಪಾದಿತ ಶ್ರೀ ಶಿವಶರಣಪ್ಪ ಬಿ. ಚೀಗೋಣಿ ಯವರಿಗೆ ಹೆದರಿ ಯಾರು ಪೊಲೀಸ ಠಾಣೆಗೆ ಹೋಗಿ ಅವನ ವಿರುದ್ಧ ದೂರುನ್ನು ದಾಖಲಿಸಿರುವುದಿಲ್ಲಾ. ಆದ್ದರಿಂದ ನನಗೆ ಆಪಾದಿತ ಶ್ರೀ ಶಿವಶರಣಪ್ಪ ಬಿ. ಚೀಗೋಣಿ ಇತನಿಂದ ನನಗೆ ಜೀವ ಬೆದರಿಕೆಯಿದ್ದು, ತಾವು ನನಗೆ ಹಾಗೂ ನನ್ನ ಕುಟುಂಬಕ್ಕೆ ಸಂರಕ್ಷಣೆ ಕೊಡಬೇಕೆಂದು, ಹಾಗೆಯೇ ನಾನು ಅವನಿಗೆ ಕೊಟ್ಟಿರುವಂತಹ 11 ಚೆಕಗಳು ಹಾಗೂ ಸಹಿ ಮಾಡಿರುವ ಕಾಗದ ಪತ್ರಗಳನ್ನು  ನನಗೆ ವಾಪಸ್ಸು ಕೊಡಿಸಬೇಕೆಂದು ಮಾನ್ಯರಾದ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಸದರಿ ಆಪಾದಿತ ಶ್ರೀ ಶಿವಶರಣಪ್ಪ ಬಿ. ಚೀಗೋಣಿ ಇವನು ನನಗೆ ಮೋಸ ಹಾಗೂ ವಂಚನೆ ಮಾಡಿರುತ್ತಾನೆ. ಫಿರ್ಯಾದಿದಾರನಿಗೆ ಆರೋಪಿತರನು ಚೆಕ್ಕುಗಳು ದುರುಪಯೋಗ ಪಡಿಸಿಕೊಂಡು ಬಗ್ಗೆ ತಿಳಿದ ನಂತರ ದಿನಾಂಕ21/06/2022 ರಂದು ಚೌಕ ಪೊಲೀಸ ಠಾಣೆಯಲ್ಲಿ ಲಿಖಿತ ದೂರುನ್ನು ಸಲ್ಲಿಸಿದ್ದು, ಅದರೆ ಸಂಬಂಧಪಟ್ಟ ಪೊಲೀಸ ಅಧಿಕಾರಿಗಳು ಯಾವುದೇ ವಿಚಾರಣೆ ಮತ್ತು ತನಿಖೆ ಮಾಡಿರುವುದಿಲ್ಲಾ. ಇದನ್ನು ಕಂಡು ಫಿರ್ಯಾದಿದಾರರು ದಿನಾಂಕ 12/07/2022 ರಂದು ಮತ್ತೊಂದು ಅರ್ಜಿಯನ್ನು ಜಿಲ್ಲಾ ಕಮೀಷನರ್ ಆಫ್ ಪೊಲೀಸ ಸಿಟಿ ಕಲಬುರಗಿ ಇವರಿಗೆ ಸಲ್ಲಿಸಿದ್ದು, ತನ್ನ ಕೊಟ್ಟ  ಫಿರ್ಯಾದಿಯ ಬಗ್ಗೆ ವಿಚಾರಣೆ ಅಥವಾ ತನಿಖೆ ಮಾಡಬೇಕೆಂದು  ವಿನಂತಿಸಿಕೊಂಡಿದ್ದು, ಆದರೆ ಇಲ್ಲಿಯರೆಗೆ ಯಾವುದೇ ತನಿಖೆ ಮಾಡಿವುದಿಲ್ಲ ಆದ್ದರಿಂದ ಫಿರ್ಯಾದಿದಾರರು ಈ ಫಿರ್ಯಾದಿಯನ್ನು ಮಾನ್ಯ ಘನ ನ್ಯಾಯಾಲಯದಲ್ಲಿ ಸಲ್ಲಿಸಿದ್ದು, ಮಾನ್ಯ ಘನ ನ್ಯಾಯಾಲಯದಲ್ಲಿ ವಿನಂತಿಸಿಕೊಳ್ಳುವದೆನೆಂದೆರೆ, ಸದರಿ ಆರೋಪಿತನು ಮೇಲ್ಕಂಡ ಆರೋಪಗಳನ್ನು ಎಸಗಿದ್ದು, ಆದ್ದುದ್ದರಿಂದ ಮಾನ್ಯ ಘನ ನ್ಯಾಯಾಲಯವು ಸದರಿ ಆರೋಪಿತನ ವಿರುದ್ಧ ಕಾಗ್ನಿಜೆನ್ಸ್ (ಸಂಜ್ಞೆ) ತೆಗೆದುಕೊಂಡು ಆತನಿಗೆ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಕೊಂಡು ಶಿಕ್ಷೆ ವಿಧಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ಕೊಟ್ಟ ಮಾನ್ಯ ಉಲ್ಲೇಖಿತ ಫಿರ್ಯಾದಿ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ಶರಣ ಶಿರಸಗಿ ಗ್ರಾಮದ ಸರ್ಕಾರಿ ಹಳೆಯ ಸರ್ವೇ ನಂ. ೧೩೯ ಮತ್ತು ಹೊಸ ಸರ್ವೇ ನಂ. ೨೪೦ ನೇದ್ದರಲ್ಲಿಯ ೫ ಎಕರೆ ಜಮೀನನ್ನು ೫ ವರ್ಷಗಳವರೆಗೆ ಲೀಸ್ ಆಧಾರದ ಮೇಲೆ ವಿಭಾಗಾಧಿಕಾರಿಗಳು ಮತ್ತು ಅಧ್ಯಕ್ಷರು, ಆಸ್ಪತ್ರೆಗಳ ಸಮೀತಿ ಕಲಬುರಗಿರವರಿಗೆ ನೀಡಲಾಗಿದ್ದು, ಸದರಿ ಜಮೀನನ್ಮ್ನ ಬೇರೆಯವರಿಗೆ ಹಸ್ತಾಂತರ ಮಾಡಿರುವುದು ಕಂಡು ಬಂದಿದ್ದರಿAದ, ಆದೇಶವನ್ಮ್ನ ರದ್ದುಗೊಳಿಸಿ, ಜಮೀನನ್ನು ಮರಳಿ ನೀಡಲು ಹೇಳಿದರೂ ಕೂಡಾ ಆದೇಶವನ್ನು ಉಲ್ಲಂಘಿಸಿ ಒತ್ತುವರಿ ಮಾಡಿ, ಘನ ತಾಜ್ಯ ವಿಲೆವಾರಿ ನಡೆಸುತ್ತಿರುವದರಿಂದ ಮತ್ತು ಸರ್ಕಾರಕ್ಕೆ ಮೋಸ ಮಾಡಿದ್ದರಿಂದ ಸದರಿ ಆರೋಪಿತರ ವಿರುದ್ದ ಕ್ರಮ ಜರುಗಿಸಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 13-10-2022 01:47 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080