ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ:26-08-2022  ರಂದು ರಾತ್ರಿ ೧೦-೦೦ ಗಂಟೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಶ್ರೀಮತಿ ಶಾಂತಬಾಯಿ ಇಬ್ಬರು ಊಟ ಮಾಡಿಕೊಂಡು ಮನೆಯ ಬಾಗಿಲ ಬೀಗವನ್ನು ಹಾಕಿಕೊಂಡು ನಾನು ಮನೆಯ ಹಾಲಿನಲ್ಲಿ ನನ್ನ ಹೆಂಡತಿ ಶ್ರೀಮತಿ ಶಾಂತಬಾಯಿ ರವರು ಮನೆಯ ಬೆಡ್ ರೂಮ್ ಒಳಗಡೆ ಮಲ್ಲಗಿಕೊಂಡಿರುತ್ತಾರೆ.ನಂತರ ದಿನಾಂಕ:೨೭-೦೮-೨೦೨೨ ರಂದು ಬೆಳಿಗ್ಗೆ ೦೫-೦೦ ಗಂಟೆಗೆ ಎದ್ದು ನೋಡಿದಾಗ ಯಾರೋ ಕಳ್ಳರು ನಮ್ಮ ಮನೆಯ ಅಡುಗೆ ಕೋಣೆಯ ಕಿಟಿಕಿಯ ಗ್ರೀಲ್ ತೆಗೆದು ಮನೆಯ ಒಳಗಡೆ ಪ್ರವೇಶ ಮಾಡಿ ಮನೆಯ ಬೆಡ್ ರೂಮ್ ಒಳಗಡೆ ಇಟ್ಟಿದ್ದ ಕಬ್ಬಿಣ ಬೀರುವನ್ನು ತೆರೆದು ಅದರಲ್ಲಿ ಇಟ್ಟಿದ್ದ ೧) ೧೦ ಗ್ರಾಂ ಬಂಗಾರದ ಉಂಗುರ. ಅ,ಕಿ ೪೦೦೦೦/- ರೂ ೨) ೫ ಗ್ರಾಂ ಬಂಗಾರದ ಉಂಗುರ ಅ.ಕಿ ೨೦೦೦೦/-ರೂ ೩) ೩ ಗ್ರಾಂ ಕಿವಿ ಬೆಂಡೋಲಿ ಒಂದು ಜೊತೆ ಅ.ಕಿ ೧೫೦೦೦/-ರೂ ೪)  ೫೦೦ ಗ್ರಾಂ ಬೆಳ್ಳಿಯ ತಂಬಗಿ ಒಂದು ಅ.ಕಿ ೨೦೦೦೦/- ೫) ೫೦ ಗ್ರಾಂ ಬೆಳ್ಳಿಯ ದೀಪಾ ಒಂದು ಜೊತೆ ಅ.ಕಿ ೨೫೦೦/- ರೂ ೬) ೫೦ ಗ್ರಾಂ ಬೆಳ್ಳಿಯ ಲಕ್ಷ್ಮೀ ಮೂರ್ತಿ ಅ.ಕಿ ೨೫೦೦/-ರೂ ೭) ೧೫೦ ಗ್ರಾಂ ಬೆಳ್ಳಿಯ ಗ್ಲಾಸ್ ೫ ಅ.ಕಿ  ೭೫೦೦/- ರೂ ೮) ೩೦೦ ಗ್ರಾಂ ಬೆಳ್ಳಿಯ ಅಥರದಾನಿ ೩ ಅ.ಕಿ ೧೫೦೦೦/-ರೂ ೯) ೧೦೦ ಗ್ರಾಂ ಬೆಳ್ಳಿಯ ಗುಲಾಬ್ ದಾನಿ ಒಂದು ಅ.ಕಿ ೫೦೦೦/-ರೂ ೧೦) ೮೦ ಗ್ರಾಂ ಬೆಳ್ಳಿಯ ನೀಲಾಂಜನ ಎರಡು .ಅ.ಕಿ ೪೦೦೦/-ರೂ ೧೧) ೧೦೦ ಗ್ರಾಂ ಬೆಳ್ಳಿಯ ಪಂಚಪಾಳ ಒಂದು ಅ.ಕಿ ೫೦೦೦/-ರೂ ೧೨) ಮನೆ ನಂ, ೧-೮೮೯/೨೬ಎಫ್/೫ ಮನೆ ದಾಖಲಾತಿಗಳು ಅ.ಕಿ ೦೦-೦೦ ಹೀಗೆ ಒಟ್ಟು ೧೩೬೫೦೦/- ರೂ  ಬೆಲೆ ಬಾಳೂವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

  ಅಶೋಕ ನಗರ ಪೊಲೀಸ್‌ ಠಾಣೆ :-  ದಿನಾಂಕ:27.08.2022 ರಂದು 10:00ಎ.ಎಂ.ಕ್ಕೆ ಫಿರ್ಯಾದಿದಾರರಾದ ಶ್ರೀ ಅಕ್ಷಯಕುಮಾರ ತಂದೆ ಗಣಪತರಾವ ನಾಲವಾಡೆ ವಯ: 27 ವರ್ಷ ಜಾ: ಮರಾಠಾ ಉ: ಆಟೋ ಚಾಲಕ ಸಾ|| ಬಿದ್ದಾಪೂರ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ನನ್ನ ದಿನ ನಿತ್ಯದ ಉಪಜಿವನಕ್ಕಾಗಿ 2019 ನೇ ಸಾಲಿನಲ್ಲಿ ಒಂದು ಅಟೋ ರಿಕ್ಷಾ ಬಜಾಜ ಕಂಪನಿಯ ನಂ ಕೆ.ಎ-32 ಡಿ-6516 ಕಪ್ಪು ಬಣ್ಣದ್ದು ಚೆಸ್ಸಿ ನಂ MD2A45AY4KWH89079 ಇಂಜಿನ್ ನಂ AZYWKH57710 ಅ|| ಕಿ|| 1,18,000/- ರೂಪಾಯಿ ನೇದ್ದು ಖರೀದಿಸಿದ್ದು ಇರುತ್ತದೆ. ಹೀಗಿದ್ದು ದಿನಾಂಕ:07.07.2022 ರಂದು ರಾತ್ರಿ 10:00 ಗಂಟೆ ಸುಮಾರಿಗೆ ನಾನು ನನ್ನ ಅಟೋ ರಿಕ್ಷಾವನ್ನು ನಮ್ಮ ಡ್ರೈವರ ಆದ ಶಿವುಕುಮಾರ ತಂದೆ ಮಾಪಣ್ಣ ಜಾನೆ ಇವನ ಮನೆಯ ಹತ್ತಿರ ಅಂಬೇಡ್ಕರ ನಗರ ಪೆಟ್ರೋಲ್ ಪಂಪ ಹತ್ತಿರ ನಿಲ್ಲಿಸಿ ಹೋಗಿದ್ದು ಮರಳಿ ಊಟ ಮುಗಿಸಿಕೊಂಡು ರಾತ್ರಿ 11:30 ಗಂಟೆಗೆ ಬಂದು ನೋಡಲಾಗಿ  ನನ್ನ ಅಟೊ ಇದ್ದಿರುವುದಿಲ್ಲ. ಯಾರೋ ಕಳ್ಳರು ನನ್ನ ಅಟೋ ರಿಕ್ಷಾ ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ನಂತರ ನಾನು ಮತ್ತು ನಮ್ಮ ಆಟೋ ಡ್ರೈವರ ಇಬ್ಬರೂ ಕೂಡಿಕೊಂಡು ಕಲಬುರಗಿ ನಗರದಲ್ಲಿ ಮತ್ತು ಹೊರ ವಲಯಗಳಲ್ಲಿ ಇಲ್ಲಿಯ ವರೆಗೆ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ನನ್ನ ವಾಹನ ನನಗೆ ಸಿಕ್ಕಿರುವುದಿಲ್ಲ. ಈ ವಿಷಯದ ಬಗ್ಗೆ ಮನೆಯಲ್ಲಿ  ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ಕಳುವಾದ ನನ್ನ ಅಟೋ ರಿಕ್ಷಾ ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ವಾಹನ ನನಗೆ ದೊರಕಿಸಿ ಕೊಡಲು ವಿನಂತಿ ಅಂತ ಇತ್ಯಾದಿಯಾಗಿ ಸಲ್ಲಿಸಿದ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರೋಜಾ ಪೊಲೀಸ ಠಾಣೆ :- ದಿನಾಂಕ: 26/08/2022 ರಂದು ಸಾಯಂಕಾಲ 18.30 ಗಂಟೆಗೆ ಫಿರ್ಯಾದಿದಾರರು ತಮ್ಮ ಮನೆಯನ್ನು ಬಾಡಿಗೆ ಕೊಡಲು ಹೋದಾಗ ನನ್ನ ಮಕ್ಕಳು ಹಾಗೂ ಸೊಸೆಯಂದಿರು ವಿರೋಧಿಸಿ ನನಗೆ ಮುಂದೆ  ಹೋಗದಂತೆ ತಡೆದು ನಿಲ್ಲಿಸಿ ಕೈಯಿಂದ ಹೊಡೆದು ಬಾಯಿಂದ ಕಚ್ಚಿ ಗಾಯಗೊಳಿಸಿ ಜೀವ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರೋಜಾ ಪೊಲೀಸ ಠಾಣೆ :-  ದಿನಾಂಕ: 27/08/2022 ರಂದು 12.00 ಗಂಟೆಗೆ ಖಬ್ರಾಸ್ಥಾನ ಮೆಹಬೂಬ ನಗರ ದಲ್ಲಿ ಗಾಂಜಾ ಮಾರಾಟ ಮಾಡಲು ಇಟ್ಟಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದುಕೊಂಡು ಸದರಿಯವನ ಬಳಿಯಿಂದ 646 ಗ್ರಾಂ ಗಾಂಜಾ ಅ.ಕಿ: 5090/- ರೂ 13.00 ಗಂಟೆಯಿಂದ 14.00 ಗಂಟೆಯವರೆಗೆ ಜಪ್ತಿ ಪಂಚನಾಮೆ ಕೈಕೊಂಡು ಜಪ್ತುಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.

 

 

ಎಂ.ಬಿ.ನಗರ ಪೊಲೀಸ್‌ ಠಾಣೆ :- ದಿನಾಂಕ: ೦೨/೦೮/೨೦೨೨ ರಂದು ರಾತ್ರಿ ಸಮಯದಲ್ಲಿ ಫಿರ್ಯಾದಿ ತನ್ನ ಮೋಟರ್ ಸೈಕಲ್ ನಂ ಕೆಎ ೩೨ ವಾಯ್ ೦೩೦೮ ಅ.ಕಿ ೧೦೦೦೦ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡ ಹೋದ ಬಗ್ಗೆ ಇತ್ಯಾದಿ ಫಿರ್ಯಾದಿ ಇರುತ್ತದೆ.

 

 

ರಾಘವೇಂದ್ರ ನಗರ ಪೊಲೀಸ ಠಾಣೆ:-  ದಿನಾಂಕಃ 27.08.2022 ರಂದು 6.30 ಪಿ.ಎಮ್ ಕ್ಕೆ ಶಿವಾನಂದಮ್ಮಾ ಗಂಡ ಸಂಜಯಕಯಮಾರ ವಯಃ 51 ವರ್ಷ ಜಾಃ ಪಜಾತಿ ಉಃ ಅಧಿಕ್ಷಕರು ಸರಕಾರಿ ಬಾಲಕೀಯರ ಬಾಲ ಮಂದಿರ ಕಲಬುರಗಿ ಸಾಃ ಆಳಂದ ಕಾಲೋನಿ ಕಲಬುರಗಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಿಕೀಕೃತ ಮಾಡಿಸಿದ ದೂರು ನೀಡಿದರ ಸಾರಾಂಶವೆನೆಂದರೆ. ಈ ಮಲೂಕ ಮಾನ್ಯರವರಲ್ಲಿ ವಿನಂತಿಸಿಕೋಳ್ಳುವದೆನೆಂದರೆ ದಿನಾಂಕಃ 16.03.2022 ರಂದು 1098 ಸಂಸ್ಥೆಯವರು ರೈಲು ನಿಲ್ದಾಣದಲ್ಲಿ ಕುಳಿತಿರುವ ಬಾಲಕಿಯಾಗಿರುವ ಕು. ಪ್ರೀತಿರಾಯ ತಂದೆ ನಿತ್ಯಾನಂದ ರಾಯ್ ವಯಃ 14 ವರ್ಷ ಇವಳು ಹಿಡಿದುಕೊಂಡು ನಮ್ಮ ಸಂಸ್ಥೆಗೆ ತಂದು ಒಪ್ಪಿಸಿದ್ದು ಇರುತ್ತದೆ. ಸದರಿಯವಳಿಗೆ ಹಿಂದೆ ಮುಂದೆ ಯಾರು ಇಲ್ಲದ ಸಂಬಂದ ಮತ್ತು ಅವಳಿಗೆ ಪೋನ್ ನಂಬರ ಏನು ಗೊತ್ತಿರುವದಿಲ್ಲ ಆದ್ದರಿಂದ ಸದರಿ ಬಾಲಕಿಗೆ ವಿಚಾರಿಸಿದ್ದಾಗ ಆಕೆಯು ಮೂಲತಃ ಪಶ್ಚಿಮ ಬಂಗಾಳ ದಿಂದ ಬಂದಿರುತ್ತಾಳೆ ಅಂತ ತಿಳಿಸಿದ್ದು ನಂತರ ಸದರಿ ಕುಮಾರಿಯನ್ನು ಕುಲಂಕುಶವಾಗಿ ವಿಚಾರಿಸಿದ್ದಾಗ ಆಕೆಯು ಇಸ್ಲಾಮ್ಪೂರ ನಗರ ಜಿಃ ದಿಂಜಾಪುರ ರಾಜ್ಯಃ ಪಶ್ಚಿಮ ಬಂಗಾಳ ಅಂತ ತಿಳಿಸಿರುತ್ತಾಳೆ. ನಂತರ ಸುಮಾರು 3-4  ತಿಂಗಳ ನಮ್ಮ ಸಂಸ್ಥೆಯಲ್ಲಿ ಸರಿಯಾಗಿ ಇರುತ್ತಾಳೆ.   ಹೀಗೆ ಇರುವಾಗ ದಿನಾಂಕಃ 27.08.2022 ರಂದು 6.30 ಗಂಟೆಯ ಸುಮಾರಿಗೆ ನಮ್ಮ ಸಂಸ್ಥೆ ಶ್ರೀಮತಿ ಸವಿತಾ ಗಂಡ ಶ್ರವಣಕುಮಾರ ಎಂಬುವರು ಪೊನ್ ಮಾಡಿತಿಳಿಸಿದೆನೆಂದರೆ  ಕು. ಪ್ರೀತಿರಾಯ ತಂದೆ ನಿತ್ಯಾನಂದ ರಾಯ್ ವಯಃ 14 ವರ್ಷ ಎಂಬವಳು ಕಾಣಿಸುತ್ತಿಲ್ಲ ಎಲ್ಲಾ ಕಡೆ ಹುಡಕಾಡಿರುತ್ತೇನೆ ಅಂತ ತಿಳಿಸಿದ್ದಾಗ ನಾನು ಗಾಬರಿಗೊಂಡು ಬಂದು ನೋಡಿದ್ದಾಗ ಸದರಿ ಕು. ಪ್ರೀತಿರಾಯ ತಂದೆ ನಿತ್ಯಾನಂದ ರಾಯ್ ವಯಃ 14 ವರ್ಷ ಇರಲ್ಲಿಲ್ಲ. ನಂತರ ನಮ್ಮ ಸಂಸ್ಥೆಗೆ ಅಳವಡಿಸಿರುವ ಸಿಸಿ ಕ್ಯಾಮ್ರ ಪರಿಶೀಲನೆ ಮಾಡಿ ನೋಡಿದ್ದಾಗ ಕು. ಪ್ರೀತಿರಾಯ ಇವಳು ದಿನಾಂಕಃ 27.08.2022 ರಂದು ಬೆಳಗಿನ ಜಾವ 5.55 ಗಂಟೆಯ ಸುಮಾರಿಗೆ ನಮ್ಮ ಸಂಸ್ಥಗೆ ಅಳವಡಿಸಿರುವ ಕಿಡಕಿ ಸಲಾಕೆ ಮುರಿದು ತಪ್ಪಿಸಿಕೊಂಡು ಹೋಗಿರುತ್ತಾಳೆ. ನಂತರ ನಾನು ಹಾಗೂ ಸಂಸ್ಥೆಯ ನೌಕರರು ಕೂಡಿಕೊಂಡು ಕೇಂದ್ರ ಬಸನಿಲ್ದಾಣ, ರೈಲ್ವೇ ಸ್ಟೇಷನ್, ಆಳಂದ ಚಕ್ಕಪೋಸ್ಟ, ಮುಂತಾದವಕಡೆ ಹುಡಕಾಡಿದ್ದು ಸಿಕ್ಕಿರುವದಿಲ್ಲ. ನಂತರ ಈ ಬಗ್ಗೆ 1098 ರವರಿಗೂ ವಿಚಾರಿಸಿದ್ದು ಇರುತ್ತದೆ. ಯಾವುದೇ ರೀತಿಯ ಉಪಯುಕ್ತವಾದ ಮಾಹಿತಿ ಸಿಕ್ಕಿರುವದಿಲ್ಲ. ಸದರಿ ಬಾಲಕಿಗೆ ಯಾರೋ ಅಪಹರಸಿಕೊಂಡು ಹೋಗಿರಬಹುದೆಂದು ಸಂಶಯ ಇರುತ್ತದೆ. 

                 ಸದರಿ ಬಾಲಕಿಯ ಚಹರಾ ಪಟ್ಟಿ ಈ ಕೇಳಗಿನಂತೆ ಇರುತ್ತದೆ.

ಕಾಣೆಯಾದ ಹುಡುಗನ ಹೇಸರು ;  ಪ್ರೀತಿರಾಯ್ ತಂದೆ ನಿತ್ಯಾನಂದ ರಾಯ್

ವಯಸ್ಸು                  ;  14 ವರ್ಷ

ಲಿಂಗ                    ;  ಹೆಣ್ಣು

ಕೂದಲು                  ; ಕಪ್ಪು

ಮೈಬಣ್ಣ                   ; ಗೋದಿ ಮೈ ಬಣ್ಣ

ಮುಖ                    ;  ಗೋಲು ಮುಖ

ಮೈಕಟ್ಟು                   ; ಸಾದಾರಣ ಮೈಕಟ್ಟು

ದರಸಿದ ಉಡಪುಗಳು         ; ನೀಲಿ ಬಣ್ಣದ ಟೀ ಶರ್ಟ, ಕೆಂಪು ಬಣ್ಣದ ಲಗಿನ್ಸ್

ಮಾತನಾಡುವ ಭಾಷೆ         ; ಹಿಂದಿ ಹಾಗೂ ಬೋಜಪುರಿ

        ಮಾನ್ಯರವರು ಕಾಣೆಯಾದ/ಅಪಹರಣಕ್ಕೊಳಗಾದ ನಮ್ಮ ಸಂಸ್ಥೆಯ ಮಗುವನ್ನು  ಹುಡುಕಿಕೊಡಬೇಕೆಂದು ಮಾನ್ಯರವರಲ್ಲಿ ವಿನಂತಿಸಿಕೊಳ್ಳುತ್ತೇನೆ. ಅಂತ ಇತ್ಯಾದಿಯಾಗಿ ದೂರು ನೀಡಿದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಇತ್ತೀಚಿನ ನವೀಕರಣ​ : 03-09-2022 12:33 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080