ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ್ ಠಾಣೆ  :-  ದಿನಾಂಕ:27-07-2022 ರಂದು ೦೮:೩೦ ಪಿ.ಎಂ.ಕ್ಕೆ ಶ್ರೀ ಎ.ವಾಜೀದ ಪಟೇಲ್ ಪಿ.ಐ. ಸಿ.ಸಿ.ಬಿ. ಘಟಕ ಕಲಬುರಗಿ  ಇವರು ಎರಡು ಜನ ಆರೋಪಿತರೊಂದಿಗೆ ಒಂದು ವರದಿ ಮತ್ತು ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ವರದಿ ಹಾಜರು ಪಡಿಸಿದ್ದು  ವರದಿಯನ್ನು ಸ್ವೀಕರಿಸಿಕೊಂಡಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ:೨೭-೦೭-೨೦೨೨ ರಂದು ಮಧ್ಯಾಹ್ನ ೧-೦೦ ಗಂಟೆಗೆ ನಾನು ಕಛೇರಿಯಲ್ಲಿದ್ದಾಗ ಕಲಬುರಗಿ ನಗರದ ಕಣ್ಣಿ ಮರ‍್ಕೆಟ್ ಹಿಂದುಗಡೆ ಎಂ.ಎಸ್.ಕೆ. ಮಿಲ್ ಗ್ರೌಂಡ ಖುಲ್ಲಾ ಮೈದಾನದಲ್ಲಿ ಕೆಲವು ಜನರು ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದಿದ್ದು, ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ಫೋನ್ ಮೂಲಕ ಮಾಹಿತಿ ನೀಡಿ ಅವರ ಮರ‍್ಗರ‍್ಶನದಲ್ಲಿ ಸದರಿ ಬಾತ್ಮಿಯನ್ನು ಖಚಿತಪಡಿಸಿಕೊಳ್ಳಲು ಇಬ್ಬರೂ ರ‍್ಕಾರಿ ಪಂಚರನ್ನು ಮತ್ತು ಪತ್ರಾಂಕಿತಅಧಿಕಾರಿಯವರನ್ನು ಬರ ಮಾಡಿಕೊಳ್ಳಲು ಮಾನ್ಯ ತಹಸೀಲ್ದಾರರು, ಕಲಬುರಗಿ ರವರಿಗೆ ಕೋರಿದ್ದು, ಅದರಂತೆ ಮಧ್ಯಾಹ್ನ ೨-೦೦ ಗಂಟೆ ಸುಮಾರಿಗೆ ಪಂಚರಾದ ೧) ಶ್ರೀ ಗುರುಪ್ರಸಾದ ತಂದೆ ಸಿದ್ದಯ್ಯ ಮಳ್ಳಿ, ವ:೩೭ ರ‍್ಷ, ಉ:ಕಂದಾಯ ನಿರೀಕ್ಷಕರು, ಕಲಬುರಗಿ-೧,  ತಹಸೀಲ್ ಕಛೇರಿ, ಕಲಬುರಗಿ, ಸಾ:ಬ್ರಹ್ಮಪೂರ ಕಲಬುರಗಿ.  ಮೊ.ನಂ.೯೭೩೯೦೮೮೮೮೩ ೨) ಶ್ರೀ ಸಂತೋಷ ತಂದೆ ನಾಗಪ್ಪ ಯಡ್ರಾಮಿ, ವ:೨೭ ರ‍್ಷ, ಉ:ದ್ವೀತಿಯ ರ‍್ಜೆ ಸಹಾಯಕರು, ತಹಸೀಲ್ ಕಛೇರಿ, ಕಲಬುರಗಿ, ಸಾ:ಪಿ.ಡಬ್ಲು.ಡಿ. ಕ್ವರ‍್ಟಸ್, ಕಲಬುರಗಿ ಮೊ.ನಂ.೯೯೦೨೭೮೧೪೩೫ ರವರಿಗೆ ನಿಯೋಜಿಸಿ ಕಳುಹಿಸಿಕೊಟ್ಟಿದ್ದು ಅಲ್ಲದೇ ತಹಸೀಲ್ದಾರ ಸಾಹೇಬರಾದ ಶ್ರೀ ವೆಂಕಣ್ಣಗೌಡ ಬಿ. ಪಾಟೀಲ ರವರು ಪತ್ರಾಂಕಿತ ಅಧಿಕಾರಿಯಾಗಿ ಅವರು ಕೂಡಾ ಹಾಜರಾಗಿದ್ದು ಇರುತ್ತದೆ. ಅದರಂತೆ ಶ್ರೀ ಶಶಿಧರ ತಂದೆ ಮನೋಹರ ದೇವದರ‍್ಗ ಇವರು ಹಾಗೂ ಅಳತೆ ಮತ್ತು ತೂಕ ಮಾಡುವ ಕುರಿತು ತೂಕ ಮತ್ತು ಅಳತೆ ಯಂತ್ರದೊಂದಿಗೆ ಅವರು ಕೂಡಾ ಮಧ್ಯಾಹ್ನ ೨-೦೦ ಗಂಟೆ ಸುಮಾರಿಗೆ ಹಾಜರಾಗಿದ್ದು ಇರುತ್ತದೆ. ಹಾಗೂ ಸಿ.ಸಿ.ಬಿ. ಘಟಕದ ಸಿಬ್ಬಂದಿಯವರಾದ ೧) ರವೀಂದ್ರಕುಮಾರ ಸಿ.ಹೆಚ್.ಸಿ-೪೮, ೨) ವೇದರತ್ನಂ ಸಿ.ಹೆಚ್.ಸಿ-೫೧, ೩) ಮಲ್ಲಿಕರ‍್ಜುನ ಸಿ.ಹೆಚ್.ಸಿ-೭೯, ೪) ಶರಣಬಸಪ್ಪ ಸಿ.ಹೆಚ್.ಸಿ-೯೪, ೫) ಕೇಸುರಾಯ ಸಿ.ಹೆಚ್.ಸಿ-೨೨೩, ೬) ಸುನೀಲಕುಮಾರ ಸಿ.ಹೆಚ್.ಸಿ-೧೬೭, ೭) ಯಲ್ಲಪ್ಪ ಸಿಪಿಸಿ-೨೨೦, ೮) ಶಿವಕುಮಾರ ಸಿಪಿಸಿ-೧೬೭೧೫, ೯) ಅಶೋಕ ಕಟಕೆ ಸಿಪಿಸಿ-೯೬೬,  ೧೦) ಅಶೋಕ ಸಿಪಿಸಿ-೬೪೭, ೧೧) ರಾಜಕುಮಾರ ಸಿಪಿಸಿ-೧೧೦೦, ೧೨) ವಿಶ್ವನಾಥ ಸಿಪಿಸಿ-೬೮೬, ೧೩) ಅರವಿಂದ ಸಿಪಿಸಿ-೯೫೫, ೧೪) ನಾಗರಾಜ ಸಿಪಿಸಿ-೧೨೫೭ ರವರುಗಳು ಕಛೇರಿಯಲ್ಲಿ ಹಾಜರಿದ್ದು, ಅವರನ್ನು ಪಂಚರಿಗೆ ಮತ್ತು ಪತ್ರಾಂಕಿತ ಅಧಿಕಾರಿಗಳಿಗೆ ಪರಿಚಯಿಸಿ ಕಲಬುರಗಿ ನಗರದ ಕಣ್ಣಿ ಮರ‍್ಕೆಟ್ ಹಿಂದುಗಡೆ ಎಂ.ಎಸ್.ಕೆ. ಮಿಲ್ ಗ್ರೌಂಡ ಖುಲ್ಲಾ ಮೈದಾನದಲ್ಲಿ ಕೆಲವು ಜನರು ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದಿದ್ದು, ಸದರಿ ಬಾತ್ಮಿಯನ್ನು ಖಚಿತಪಡಿಸಿಕೊಳ್ಳಲು ಹೋಗುವ ಕುರಿತು ಮೇಲಾಧಿಕಾರಿಗಳಿಗೆ ಫೋನ್ ಮುಖಾಂತರ ಮಾಹಿತಿ ನೀಡಿದ್ದು, ಅವರ ಮರ‍್ಗರ‍್ಶನದಲ್ಲಿ ದಾಳಿ ಮಾಡುವ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ.  ಅಲ್ಲದೇ ಶ್ರೀ ಶಶಿಧರ ದೇವದರ‍್ಗ ತೂಕ ಮತ್ತು ಅಳತೆ ಮಾಡುವವರಿಗೆ ದಾಳಿ ಕಾಲಕ್ಕೆ ದೊರೆತ ಗಾಂಜಾ ಅಳತೆ ಮಾಡಿಕೊಡುವಂತೆ ಕೇಳಿಕೊಂಡ ಮೇರೆಗೆ ಅವರು ಕೂಡಾ ಒಪ್ಪಿಕೊಂಡಿರುತ್ತಾರೆ. ನಂತರ ನಾನು, ಪಂಚರು ಮತ್ತು ಪತ್ರಾಂಕಿತ ಅಧಿಕಾರಿಗಳು, ತೂಕ ಮತ್ತು ಅಳತೆ ಮಾಡುವವರು ಹಾಗೂ ಸಿಬ್ಬಂದಿ ಜನರು ಎಲ್ಲರೂ ಕೂಡಿ ಮಧ್ಯಾಹ್ನ ೨-೩೦ ಗಂಟೆಗೆ ರ‍್ಕಾರಿ ಜೀಪ ನಂ.ಕೆಎ-೩೨-ಜಿ-೧೨೪೯ ನೇದ್ದರಲ್ಲಿ ಹೊರಟಿದ್ದು, ಉಳಿದ ಸಿಬ್ಬಂದಿಯವರು ತಮ್ಮ ತಮ್ಮ ಮೋಟಾರಸೈಕಲಗಳ ಮೇಲೆ ಹೊರಟು ಬಾತ್ಮಿ ಬಂದ ಸ್ಥಳವಾದ ಕಲಬುರಗಿ ನಗರದ ಕಣ್ಣಿ ಮರ‍್ಕೆಟ್ ಹಿಂದುಗಡೆ ಎಂ.ಎಸ್.ಕೆ. ಮಿಲ್ ಗ್ರೌಂಡ ಖುಲ್ಲಾ ಮೈದಾನ ಹತ್ತಿರ ಮಧ್ಯಾಹ್ನ ೨-೫೦ ಗಂಟೆಗೆ ತಲುಪಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಅಲ್ಲಿಯೇ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಎಂ.ಎಸ್.ಕೆ. ಮಿಲ್ ಗ್ರೌಂಡ ಖುಲ್ಲಾ ಮೈದಾನದಲ್ಲಿ ೩ ಜನರು ಕುಳಿತುಕೊಂಡು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ಕೂಡಿ ಒಮ್ಮಲ್ಲೇ ಮಧ್ಯಾಹ್ನ ೩-೦೦ ಗಂಟೆಗೆ ದಾಳಿ ಮಾಡಿ ಹಿಡಿಯಲು ಹೋದಾಗ ಅವರಲ್ಲಿ ಒಬ್ಬ ವ್ಯಕ್ತಿ ಓಡಿ ಪಲ್ಸರ್ ಮೋಟಾರಸೈಕಲ್ ಮೇಲೆ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸಿಬ್ಬಂದಿಯವರು ಬೆನ್ನಟ್ಟಿ ಮೋಟಾರಸೈಕಲ್ ಹಿಡಿದಾಗ ಸದರಿ ಆರೋಪಿತನು ಮೋಟಾರಸೈಕಲನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಹಾಗೂ ಇನ್ನೂಳಿದ ೩ ಜನರು ಸ್ಥಳದಲ್ಲಿಯೇ ಸಿಕ್ಕಿ ಬಿದ್ದಿದ್ದು,  ಅವರ ಹೆಸರು ವಿಳಾಸ ವಿಚಾರಿಸಲಾಗಿ ೧) ಭೀಮ ತಂದೆ ನಾರಾಯಣ ಹೊನ್ನಳ್ಳಿ, ವ:೩೨ ವರ್ಷ, ಜಾತಿ:ಬೇಡರ, ಉ:ಖಾಸಗಿ ಕೆಲಸ, ಸಾ:ದಾಗತೆವಾಡಿ, ತಾ:ಉರ‍್ಗಾ, ಜಿ:ಉಸ್ಮಾನಾಬಾದ ಅಂತಾ ತಿಳಿಸಿದನು. ೨) ಧರ್ಮರಾಜ ತಂದೆ ನಿಂಗಪ್ಪ ಬೇವಿನಕಟ್ಟಿ, ವ:೨೩ ವರ್ಷ ಉ:ವಿದ್ಯಾರ್ಥಿ, ಜಾತಿ:ಬೇಡರ, ಸಾ:ಬಾಣತಿಹಾಳ, ತಾ:ಶಹಾಪೂರ, ಜಿ:ಯಾದಗಿರಿ ಅಂತಾ ತಿಳಿಸಿದನು.  ನಂತರ ಓಡಿ ಹೋದ ವ್ಯಕ್ತಿಯ ಹೆಸರು ವಿಚಾರಿಸಲು ೩) ಲಕ್ಷ್ಮಣ ತಂದೆ ವೆಂಕಟ ಸೀತಾಳಗೇರೆ, ವ:೩೬ ವರ್ಷ , ಜಾತಿ:ಬೇಡರ, ಉ:ಖಾಸಗಿ ಕೆಲಸ, ಸಾ:ದಾಗತೆವಾಡಿ, ತಾ:ಉರ‍್ಗಾ, ಜಿ:ಉಸ್ಮಾನಾಬಾದ ಅಂತಾ ತಿಳಿಸಿದರು. ನಂತರ ಸ್ಥಳದಿಂದ ಎರಡು ಬಿಳಿ ಬಣ್ಣದ ಪ್ಲಾಸ್ಟಿಕ ಚೀಲಗಳಲ್ಲಿ ಗಾಂಜಾ ದೊರೆತಿದ್ದು, ಸದರಿ ಪ್ಲಾಸ್ಟಿಕ ಚೀಲಗಳನ್ನು ಶ್ರೀ ಶಶಿಧರ ದೇವದರ‍್ಗ ಇವರಿಂದ ಪ್ಲಾಸ್ಟಿಕ ಚೀಲ ಸಮೇತ ಗಾಂಜಾವನ್ನು ತೂಕ ಮಾಡಿಸಿ ನೋಡಲಾಗಿ ೧) ಒಂದು ಚೀಲದಲ್ಲಿ ಒಟ್ಟು ೧೨ ಕೆ.ಜಿ. ಗಾಂಜಾ ಇದ್ದು, ೨) ಇನ್ನೊಂದು ಚೀಲದಲ್ಲಿ ಒಟ್ಟು ೧೧ ಕೆ.ಜಿ. ಗಾಂಜಾ ಆಗಿದ್ದು, ಹೀಗೆ ಒಟ್ಟು ೨೩ ಕೆ.ಜಿ. ಗಾಂಜಾ ದೊರೆತಿದ್ದು,  ಪ್ರತಿ ಕೆ.ಜಿ.ಗೆ ರೂ.೧೦,೦೦೦/- ಅಂತೆ ಒಟ್ಟು ೨೩ ಕೆ.ಜಿ.ಗೆ ಅ.ಕಿ. ರೂ.೨,೩೦,೦೦೦/- ಇರುತ್ತದೆ. ನಂತರ ಸದರಿ ಪ್ಲಾಸ್ಟಿಕ್ ಚೀಲಗಳಲ್ಲಿದ್ದ ಗಾಂಜಾವನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸಿಕೊಡಲು ಮಾದರಿಗಾಗಿ ಅಂದಾಜು ೫೦ ಗ್ರಾಂ ಮತ್ತು ೫೦ ಗ್ರಾಂ ತೂಕದಷ್ಟು ಗಾಂಜಾವನ್ನು ಪ್ರತ್ಯೇಕವಾಗಿ ತೆಗೆದು ಒಂದೊಂದು ಬಿಳಿಯ ಬಟ್ಟೆಯಲ್ಲಿ ಹಾಕಿ ಬಾಯಿ ಹೊಲೆದು ಅದರ ಮೇಲೆ  “ಂ“  ಎಂಬ ಇಂಗ್ಲೀಷ ಅಕ್ಷರದ ಅರಗಿನಿಂದ ಸೀಲ ಮಾಡಿ ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ಕೇಸಿನ ಮುಂದಿನ ಪುರಾವೆಗಾಗಿ ನಾನು ತೆಗೆದುಕೊಂಡೆನು.ನಂತರ ಸ್ಥಳದಲ್ಲಿ ದೊರೆತ ಪಲ್ಸರ್ ೧೫೦ ಮೋಟಾರಸೈಕಲ್ ನಂಬರ ನೋಡಲಾಗಿ ಅದರ ನಂಬರ MH-25-AX-2954  ಅಂತಾ ಇದ್ದು, ಅದರ ಇಂಜಿನ ನಂ. DHXCMG45754, ಮತ್ತು ಚೆಸ್ಸಿ ನಂ. MD2A11CX4MCG22411 ಇರುತ್ತದೆ. ಸದರಿ ಮೋಟಾರಸೈಕಲನ ಅ.ಕಿ. ರೂ.೧,೫೦,೦೦೦/- ಇರುತ್ತದೆ.  ನಂತರ ಸದರಿ ಆರೋಪಿತರಿಗೆ ಈ ಮೋಟಾರಸೈಕಲ್ ಯಾರಿಗೆ ಸಂಬಂಧಿಸಿರುತ್ತದೆ ಅಂತಾ ವಿಚಾರಿಸಿದಾಗ ಓಡಿ ಹೋದ ಆರೋಪಿ ಲಕ್ಷ್ಮಣ ತಂದೆ ವೆಂಕಟ ಸೀತಾಳಗೇರೆ ಈತನಿಗೆ ಸಂಬಂಧಿಸಿರುತ್ತದೆ ಅಂತಾ ತಿಳಿಸಿದರು.ನಂತರ ಪತ್ರಾಂಕಿತ ಅಧಿಕಾರಿಗಳು ಆರೋಪಿತರ ದೇಹವನ್ನು ಅಂಗಶೋಧನೆ ಮಾಡಲು ಕೇಳಿದಾಗ ಅವರು ಯಾವುದೇ ಅಭ್ಯಂತರ ಇರುವುದಿಲ್ಲ ಅಂತಾ ತಿಳಿಸಿದಾಗ ಪತ್ರಾಂಕಿತ ಅಧಿಕಾರಿಗಳಾದ ಶ್ರೀ ವೆಂಕಣ್ಣಗೌಡ ಬಿ. ಪಾಟೀಲ ರವರು ರವರು ಆತನ ಅಂಗ ಶೋಧನೆ ಮಾಡಿದ್ದು,  ೧) ಭೀಮ ತಂದೆ ನಾರಾಯಣ ಹೊನ್ನಳ್ಳಿ ಈತನ ಅಂಗ ಶೋಧನೆ ಮಾಡಲಾಗಿ ಸದರಿಯವನ ಜೇಬಿನಿಂದ ಒಂದು ವಿಮೋ ಕಂಪನಿಯ ಮೊಬೈಲ್ ದೊರೆತಿದ್ದು ಸದರಿ ಮೊಬೈಲ್ ನಂಬರ ೮೬೦೦೩೧೧೧೬೦ ಅಂತಾ ಇದ್ದು, ಅದರ ಐ.ಎಂ.ಇ.ಐ ನಂಬರ ಪರಿಶೀಲಿಸಲಾಗಿ ೮೬೬೦೦೧೦೪೮೧೧೫೮೩೭, ೮೬೬೦೦೧೦೪೮೧೧೫೮೨೯ ಇದ್ದು, ಅದರ ಅ.ಕಿ. ರೂ.೧೦,೦೦೦/- ಇರುತ್ತದೆ.  ಮತ್ತು ಆತನ ಜೇಬಿನಲ್ಲಿ ರೂ.೧೦೦೦/- ಗಳು ದೊರೆತಿರುತ್ತವೆ.  ೨) ರ‍್ಮರಾಜ ತಂದೆ ನಿಂಗಪ್ಪ ಬೇವಿನಕಟ್ಟಿ, ಈತನ ಅಂಗ ಶೋಧನೆ ಮಾಡಲಾಗಿ ಸದರಿಯವನ ಜೇಬಿನಿಂದ ಒಂದು ಒಪ್ಪೋ ಕಂಪನಿಯ ಮೊಬೈಲ್ ದೊರೆತಿದ್ದು ಸದರಿ ಮೊಬೈಲ್ ನಂಬರ ೭೨೦೪೧೭೧೩೧೦ ಅಂತಾ ಇದ್ದು, ಅದರ ಐ.ಎಂ.ಇ.ಐ ನಂಬರ ಪರಿಶೀಲಿಸಲಾಗಿ ೮೬೩೭೮೨೦೫೪೯೯೯೦೧೫, ೮೬೩೭೮೨೦೫೪೯೯೯೦೦೭ ಇದ್ದು, ಅದರ ಅ.ಕಿ. ರೂ.೧೦,೦೦೦/- ಇರುತ್ತದೆ.  ಮತ್ತು ಆತನ ಜೇಬಿನಲ್ಲಿ ರೂ.೧೮೦೦/-  ಗಳು ದೊರೆತಿರುತ್ತವೆ.  ಹೀಗೆ ಒಟ್ಟು ರೂ.೨೮೦೦/- ನಗದು ಹಣ ದೊರೆತಿರುತ್ತದೆ.       ನಂತರ ನಾನು ಅನಧೀಕೃತ ಮತ್ತು ಅಕ್ರಮವಾಗಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪಿತರಿಗೆ ಮತ್ತು ಆತನ ಹತ್ತಿರ ಜಪ್ತು ಮಾಡಿದ ಮುದ್ದೇಮಾಲುಗಳನ್ನು ನಮ್ಮ ವಶಕ್ಕೆ ತೆಗೆದುಕೊಂಡು ಆರೋಪಿತರಿಂದ ಜಪ್ತಾದ ಮುದ್ದೇಮಾಲಿನ ಬಗ್ಗೆ ಜಪ್ತಿ ಪಂಚನಾಮೆಯನ್ನು ಮಧ್ಯಾಹ್ನ ೩-೦೦ ಗಂಟೆಯಿಂದ ೪-೩೦ ಗಂಟೆಯವರೆಗೆ ಸ್ಥಳದಲ್ಲಿ ಕುಳಿತು ಲ್ಯಾಪಟ್ಯಾಪನಲ್ಲಿ ಟೈಪ ಮಾಡಿ ಮುಗಿಸಿ ವಶಕ್ಕೆ ಪಡೆದ ಆರೋಪಿತರನ್ನು ಮತ್ತು ಜಪ್ತು ಮಾಡಿದ ಮುದ್ದೇಮಾಲುಗಳೊಂದಿಗೆ ಅಶೋಕನಗರ ಪೊಲೀಸ್ ಠಾಣೆಗೆ ಬಂದು ವರದಿಯನ್ನು ತಯಾರಿಸಿ ಜಪ್ತು ಮಾಡಿದ ಮುದ್ದೇಮಾಲುಗಳು ಮತ್ತು ಎರಡು ಜನ ಆರೋಪಿತರನ್ನು, ಜಪ್ತಿ ಪಂಚನಾಮೆಯೊಂದಿಗೆ ನನ್ನ ವರದಿಯನ್ನು ಹಾಜರಪಡಿಸುತ್ತಿದ್ದು, ಸದರಿ ಆರೋಪಿತರ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ವಗೈರೆಯಾಗಿ ಇದ್ದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.‌

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ ೨೩.೦೭.೨೦೨೨ ರಂದು ರಾತ್ರಿ ೧೦.೦೦ ಪಿ.ಎಮ್ ದಿಂದ ೨೪.೦೭.೨೦೨೨ ರಂದು ೭.೩೦ ಎ ಎಮ್ ಮಧ್ಯ ಅವಧಿಯಲ್ಲಿ ಯರೋ ಕಳ್ಳರು ಮನೆಯ ಮುಂದೆ ಹ್ಚಿದ ಮೊ.ಸೈ ನಂ. ಟಿಎಸ್‌೦೯ ಇಡಬ್ಲೂö್ಯ೨೧೩೪ ಅ.ಕಿ ೫೦೦೦೦/- ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ದೂರು ಇರುತ್ತದೆ.

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 27-07-2022  ರಂದು ೦೬:೩೦ ಪಿಎಮ್ ಕ್ಕೆ ಫಿರ್ಯಾದಿದಾರರಾದ ಉದಯಕುಮಾರ್ ತಂದೆ ದಾನಯ್ಯ ಸ್ವಾಮಿ ವಯ:೪೦ವರ್ಷ ಜಾ:ಜಂಗಮ ಉ:ವ್ಯಾಪಾರ ಸಾ// ಕಾಮನಳ್ಳಿ ತಾ//ಆಳಂದ ಹಾ.ವ:-ಮನೆ ನಂ ೩-೩೮ ಸರಸ್ವತಿ ಗೋದಾಮ ಗಾಜಿಪೂರ ಕಲಬುರಗಿ ನಗರ. ಈ ಮೂಲಕ ವಿನಂತಿ ದೂರು ಅರ್ಜಿ ಸಲ್ಲಿಸುವುದೇನೆಂದರೆ, ನಾನು ಸರಸ್ವತಿ ಗೋದಾಮದ ಉದಯ.ಎಮ್ ಇವರ ಮನೆಯಲ್ಲಿ ಬಾಡಿಗೆಯಂತೆ ವಾಸವಾಗಿರುತ್ತೇನೆ. ನನ್ನದೊಂದು ಸ್ವಂತ ಹೋಂಡಾ ಸಿಬಿ ಶೈನ್ ಮೋಟಾರ್ ಸೈಕಲ್ ನಂ: ಏಂ-೩೨-ಇಕಿ-೫೧೪೦ ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ: ೦೫/೦೭/೨೦೨೨ ರಂದು ರಾತ್ರಿ ೧೧:೦೦ ಪಿಎಮ್ ಗಂಟೆಗೆ ನಮ್ಮ ಮನೆಯ ಮುಂದೆ ನಿಲ್ಲಿಸಿದ್ದು. ಮರುದಿನ ಬೆಳಿಗ್ಗೆ ೦೬:೩೦ ಎ.ಎಮ್ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ಆದ್ದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ:26-07-2022  ರಂದು ರಾತ್ರಿ ೧೦:೩೫ ಗಂಟೆಗೆ ಯುನಯಟೇಡ್ ಆಸ್ಪತ್ರೆಯಿಂದ ಶ್ರೀಮತಿ ಕಸ್ತೂರಿಬಾಯಿ ಗಂ.ದಿ.ಬಸವಂತಪ್ಪಾ ಸಿಂದಗಿ ವಯ|| ೬೯ ವರ್ಷ ಉ|| ಮನೆಕೆಲಸ ಸಾ|| ಪ್ಲಾಟ ನಂ. ೯ ಬ್ಯಾಂಕ್ ಕಾಲೋನಿ ಕಲಬುರಗಿ ಇವರ ಅಸಾಲ್ಟ ಅಂತ ಎಮ್.ಎಲ್.ಸಿ ವಸೂಲಾಗಿದ್ದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಫರ‍್ಯಾದಿ ಶ್ರೀಮತಿ ಕಸ್ತೂರಿಬಾಯಿ ಇವರನ್ನು ವಿಚಾರಣೆ ಮಾಡಿ, ಸದರಿಯವರು ಬರೆಯಿಸಿಕೊಟ್ಟ ದೂರು ಅರ್ಜಿಯನ್ನು ಪಡೆದುಕೊಂಡು ಮರಳಿ ಠಾಣೆಗೆ ೧೨:೧೫ ಎಎಮ್ ಕ್ಕೆ ಬಂದಿದ್ದು, ಸದರಿ ದೂರಿನ ಸಾರಾಂಶವೇನಂದರೆ, ನನಗೆ ೭ ಜನ ಮಕ್ಕಳಿರುತ್ತಾರೆ, ಹೆಣ್ಣು ಮಕ್ಕಳು ೩ ಜನ, ಗಂಡು ಮಕ್ಕಳು ೪ ಜನರು ಇರುತ್ತಾರೆ. ಅವರವರು ತಮ್ಮ ಕೆಲಸದಲ್ಲಿ ತೊಡಗಿ ಬೇರೆ ಬೇರೆ ಸ್ಥಳದಲ್ಲಿ ವಾಸವಾಗಿರುತ್ತಾರೆ. ಮಗ ವಿಜಯಕುಮಾರ ಇತನು ನನ್ನ ಜೋತೆ ಇರುತ್ತಾನೆ. ಈಗ ಒಂದು ತಿಂಗಳು ಹಿಂದೆ ಮಗ ವಿಜಯಕುಮಾರ ಈತನು ಮನೆ ಬಿಟ್ಟು ಎಲ್ಲಿಯಾದರು ಹೋಗು ಈ ಮನೆಯಲ್ಲಿ ಇರಬೇಡ ಅಂತ ಹೇಳಿದ್ದರಿಂದ ನಾನು ನನ್ನ ಗಂಡನ ಆಸ್ತಿ ಇದೆ ಈ ಮನೆ ಬಿಟ್ಟು ಹೋಗುವದಿಲ್ಲ ಅಂತ ಅಂದಿದಕ್ಕೆ ಮಗ ವಿಜಯಕುಮಾರ ಇತನು ನನಗೆ ಬಡಿಗೆ ಮತ್ತು ಸೀರೆಯನ್ನು ಉಪಯೋಗಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ ದೂರು ದಾಖಲಿಸಿದ್ದು ಇವನ ಮೇಲೆ ಈಗಾಗಲೆ ಕೇಸು ಕೂಡಾ ದಾಖಲು ಆಗಿರುತ್ತದೆ.ಇಂದುದಿನಾಂಕ:೨೬/೦೭/೨೦೨೨ರಂದು ಬೆಳಗ್ಗೆ ೯:೦೦ ಗಂಟೆಗೆ ಮನೆಗೆ ಬಂದು ಏ ಬೊಸಡಿ ಎಷ್ಟು ಸಾರಿ ಹೇಳಬೇಕು ಈ ಮನೆ ನನಗೆ ಬಿಟ್ಟು ಹೋಗು ಅಂತ ಹೇಳಿದ್ದು ಅಲ್ಲದೆ ಈ ಹಿಂದೆ ನನ್ನ ಮೇಲೆ ಹಾಕಿರುವ ಕೇಸು ಕೂಡಾ ವಾಪಸ ಪಡಿ ಇಲ್ಲಾಂದ್ರೆ ನಿನ್ನ ಜೀವ ತೆಗೆಯುತ್ತೆನೆ ಅಂತ ಜೀವ ಬೇದರಿಕೆ ಹಾಕಿ ನನಗೆ ಕೈ ಮುಷ್ಠಿ ಮಾಡಿ ಎದೆಯ ಮೇಲೆ ಹೊಡೆದಿದ್ದರಿಂದ ಓಲ ಗುಪ್ತಗಾಯವಾಗಿರುತ್ತದೆ. ತನ್ನ ಬಲಗಾಲು ಚಪ್ಪಲಿ ತೆಗೆದುಕೊಂಡು ಬೆನ್ನುನ ಮೇಲೆ ಮತ್ತು ದೇಹದ ಭಾಗದ ಮೇಲೆ ಹೊಡೆದು ಒಳಪೆಟ್ಟು ಮಾಡಿರುತ್ತಾನೆ. ಅಷ್ಟರಲ್ಲಿ ನನ್ನ ಮಗಳಾದ ಅಂಬುಜಾ ಇವಳು ಏ ತಮ್ಮ ನನ್ನ ಅಮ್ಮನಿಗೆ ಯಾಕೆ ಹೊಡೆಯುತ್ತಿಯಾ ಅಂತ ಕೇಳಿದಾಗ ಈ ಮನೆ ಬಿಟ್ಟು ಹೋಗುವದಿಲ್ಲ, ಯಾವ ಕರ‍್ಟ ಕಛೇರಿ ಏನು ಮಾಡುವದಿಲ್ಲ. ಈ ಮನೆಯು ನನಗೆ ಬೇಕು ಈ ಮನೆಯಲ್ಲಿ ನಾನೊಬ್ಬನೆ ಇರುತ್ತೆನೆ ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ, ಇದು ಸರಿಯಲ್ಲ ಅಂತ ಮಗಳು ಜಗಳ ಬಿಡಿಸಿ ಕಳುಹಿಸಿರುತ್ತಾಳೆ. ನನಗೆ ನನ್ನ ಮಗ ಕೈಯಿಂದ ಮತ್ತು ಕಾಲಿನಿಂದ ಒದ್ದಿದ್ದು, ಮನೆಯಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ತುಂಬಾ ನೋವು ಆಗುತ್ತಿದ್ದರಿಂದ ಮನೆಯಲ್ಲಿ ವಿಚಾರಿಸಿ ಈಗ ಸಾಯಂಕಾಲ ೯:೦೦ ಗಂಟೆಗೆ ಯುನೈಟೇಡ್ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ಸೇರಿಕೆ ಆಗಿರುತ್ತೆನೆ ಕಾರಣ ನನ್ನ ಮಗ ವಿಜಯಕುಮಾರ ಇತನು ನನ್ನ ಮೇಲೆ ಈ ಹಿಂದೆ ಕೇಸ್ ಮಾಡಿದ್ದ ದ್ವೇಷ ಇಟ್ಟುಕೊಂಡು ಇಂದು ನನಗೆ ಕಾಲಿನಿಂದ ಒದ್ದು, ಕೈಯಿಂದ ಮತ್ತು ಚಪ್ಪಲಿಯಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದವನ ಮೇಲೆ ಕಾನೂನು ರೀತಿ ಕ್ರಮಕೈಕೊಳ್ಳಲುವಿನಂತಿಅಂತನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 01-08-2022 06:09 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080