ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :-  ದಿನಾಂಕ 27-06-2022 ರಂದು  ಬೆಳಿಗ್ಗೆ ರಾತ್ರಿ ೨:೧೫ ಗಂಟೆಯಿಂದ ೩:೧೫ ಗಂಟೆಯವರೆಗೆ  ಆಜಾದಪೂರ-ಹಾಗರಗಾ ರೋಡ ಕಲ್ಲಿನ ಖಣಿ ಹತ್ತಿರ ರೋಡಿನ ಮೇಲೆ ಒಂದು  ಕೆಎ-೩೨ ಎ-೭೯೩೯  ವಾಹನದಲ್ಲಿ ಆಕ್ರಮಾವಾಗಿ ಎರಡು ಗೋವುಗಳು ಸಾಗಣಿಕೆ ಮಡುತ್ತಿದ್ದ ಸಮಯದಲ್ಲಿ ಸದರಿ ಆರೋಪಿತರಿಗೆ ದಸ್ತಗಿರಿ ಮಾಡಿದ ಬಗ್ಗೆ ದೂರು ಇರುತ್ತದೆ.

 ಸಂಚಾರಿ ಪೊಲೀಸ್‌ ಠಾಣೆ-1 :- ದಿನಾಂಕ 27-06-2022 ರಂದು ಮದ್ಯಾಹ್ನ 1-45 ಗಂಟೆಗೆ ಯುನೈಟೆಡ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ಅಕ್ಷಯ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಯನೈಟೆಡ ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳುವಿಗೆ ವಿಚಾರಿಸಲು ಗಾಯಾಳು ಮಾತನಾಡಿ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರದ ಕಾರಣ ಅವರ ಜೊತೆಯಲ್ಲಿದ್ದ ಅವರ ತಾಯಿ ಶ್ರೀಮತಿ ಸುಜಾತಾ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ 26-06-2022 ರಂದು ರಾತ್ರಿ ಸಮಯದಲ್ಲಿ ನನ್ನ ಮಗ ಅಕ್ಷಯ ಇತನು ತನ್ನ ಗೆಳೆಯರ ಸಂಗಡ ಹೊರಗಡೆ ಊಟಕ್ಕೆ ಹೋಗುವ ಕುರಿತು ಮೋಟಾರ ಸೈಕಲ ನಂಬರ ಕೆಎ-32/ಹೆಚ್.ಬಿ-5063 ನೇದ್ದನ್ನು ಚಲಾಯಿಸಿಕೊಂಡು ಹೋಗಿ ಊಟ ಮಾಡಿಕೊಂಡು ವಾಪಸ್ಸ ಮನೆಗೆ ಬರುವ ಕುರಿತು ರಾಷ್ಟ್ರೀಯ ಹೆದ್ದಾರಿ-50 ರ ಮೇಲೆ ಜೇವರ್ಗಿ ಕಡೆಯಿಂದ ಕಲಬುರಗಿ ಕಡೆಗೆ ಬರುವ ಕುರಿತು ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಂದಿಕೂರ ತಾಂಡಾ ಹತ್ತೀರ ಬರುವ ರೋಡ ಹಂಪ್ಸ ಮೇಲೆ ರಾತ್ರಿ ಅಂದಾಜು 1-00 ಎ.ಎಮ್ ಗಂಟೆ ಸುಮಾರಿಗೆ ಮೋಟಾರ ಸೈಕಲ ಸ್ಕಿಡ್ ಮಾಡಿ ಅಪಘಾತ ಮಾಡಿ ಭಾರಿ ಗಾಯ ಹೊಂದಿದ್ದು ತಾವು ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಹೇಳಿಕೆ ಸಾರಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 ಸಂಚಾರಿ ಪೊಲೀಸ್‌ ಠಾಣೆ-2 :-  ದಿನಾಂಕ-27/06/2022 ರಂದು 12:30 ಪಿ.ಎಮ್ ಕ್ಕೆ ಶ್ರೀ ಶಮಿಬೇಗ ತಂದೆ ಕಾಜಿಂಬೇಗ ವಯಃ 32 ವರ್ಷ ಜಾತಿಃ ಮುಸ್ಲಿಂ ಉಃ ಪೈಪ ಆಪರೇಟರ ಸಾಃ ನೂರಾನಿ ಮೊಹಲ್ಲಾ ಕಲಬುರಗಿ ಇವರು ಒಂದು ಕನ್ನಡದಲ್ಲಿ ಟೈಪ ಮಾಡಿದ ಫಿರ್ಯಾದಿ ಅರ್ಜಿ  ತಂದು ಹಾಜರ ಪಡಿಸಿದ್ದು ಸಾರಾಂಶವೆನೆಂದರೆ,  ದಿನಾಂಕ 21/06/2022 ರಂದು ನಾನು ವಯಕ್ತಿಕ ಕೆಲಸ ಕುರಿತು ಕಾರ ನಂ. ಕೆಎ 35 ಎನ್ 3708 ನೇದ್ದರಲ್ಲಿ ಹುಮ್ನಾಬಾದಿಗೆ ಹೊಗಿ ಮರಳಿ ಕಲಬುರಗಿಗೆ ಬರಬೇಕೆಂದು ಸದರಿ ಕಾರ ಚಾಲಕ ಮಹಮ್ಮದ ರಸೂಲ ಈತನ ಜೊತೆಗೆ ಬರುವಾಗ ಸದರಿ ಕಾರ ಚಾಲಕ ಮಹಮ್ಮದ ರಸೂಲ ಈತನು ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದ್ದನು. ನಾನು ಆತನಿಗೆ ನಿಧಾನವಾಗಿ ಚಲಾಯಿಸಲು ಹೇಳಿದರು ಕೂಡಾ ಆತನು ಅದೆ ವೇಗದಲ್ಲಿ ಚಲಾಯಿಸಿ ರಾತ್ರಿ 10:00 ಗಂಟೆ ಸುಮಾರಿಗೆ ಹುಮ್ನಾಬಾದ ಕಲಬುರಗಿ ರಸ್ತೆಯಲ್ಲಿ ಬರುವ ಕಪನೂರ ಬ್ರಿಡ್ಜ ಹತ್ತಿರದ ಕಸ ಇರುವ ಜಾಗದ ಹತ್ತಿರ ರಸ್ತೆಯ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಒಂದು ಪಾದಚಾರಿಗೆ ಡಿಕ್ಕಿ ಪಡಿಸಿದನು. ಆಗ ಆತನು ಪುಟಿದು ಕಾರಿನ ಬಾನಟ ಮೇಲೆ ಬಿದ್ದನು. ಆಗ ನಾನು ಮತ್ತು ಡ್ರೈವರ ಕೆಳಗೆ ಇಳಿದು ನೋಡಲು ಸದರಿ ಪಾದಚಾರಿ ತಲೆಗೆ ಮತ್ತು ಮುಖಕ್ಕೆ ಬಾರಿಗಾಯ ಆಗಿ ಮಾತನಾಡುವ ಸ್ಧಿತಿಯಲ್ಲಿ ಇರಲಿಲ್ಲಾ. ನಾನು ಮತ್ತು ಸದರಿ ಕಾರ ಚಾಲಕ ಮಹಮ್ಮದ ರಸೂಲ ಇಬ್ಬರೂ ಸೇರಿ ಸದರಿ ಪಾದ ಚಾರಿಗೆ ಕಾರಿನಲ್ಲಿ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು, ಸದರಿ ಪಾದಚಾರಿ ಹೆಸರು ಖಾದರ ತಂದೆ ರಫೀಕ ಸಾಃ ತಾಂಡೂರ ಅಂತಾ ಗೊತ್ತಾಗಿರುತ್ತದೆ. ಸದರಿ ಅಪಘಾತದ ಬಗ್ಗೆ ಯಾವುದೆ ದೂರ ದಾಖಲಾಗಿಲ್ಲಾ ಅಂತಾ ಗೊತ್ತಾಗಿ ನಾನು ಮನೆಯವರೊಂದಿಗೆ ವಿಚಾರ ಮಾಡಿ ಇಂದು ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ.  ಕಾರ ನಂ. ಕೆಎ 35 ಎನ್ 3708 ನೇದ್ದರ ಚಾಲಕ ಮಹಮ್ಮದ ರಸೂಲ ಈತನು ಹುಮ್ನಾಬಾದ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ರಸ್ತೆ ಬದಿಯಿಂದ ಹೋಗುತ್ತಿದ್ದ ಪಾದಚಾರಿ ಖಾದರ ಈತನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿದ್ದು ಕಾರಣ ಸದರಿ ಕಾರ ಚಾಲಕ ಮಹಮ್ಮದ ರಸೂಲ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಫಿರ್ಯಾದಿ  ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ .

 ಸಂಚಾರಿ ಪೊಲೀಸ್‌ ಠಾಣೆ-2  :-  ದಿನಾಂಕ-27/06/2022 ರಂದು 06:30 ಪಿ.ಎಮ್ ಕ್ಕೆ ಶ್ರೀ ಭೀಮರಾಯ ತಂದೆ ಬೀರಪ್ಪಾ ಗ್ವಾಡಿ ವ; 35 ವರ್ಷ ಜಾ; ಕುರುಬ ಉ; ಸೆಂಟ್ರಿಂಗ್ ಕೆಲಸ ಸಾ; ಗುಂಡಗುರ್ತಿ ತಾ; ಚಿತ್ತಾಪುರ ಜಿ; ಕಲಬುರಗಿ ಇವರು ಒಂದು ಕನ್ನಡದಲ್ಲಿ ಟೈಪ ಮಾಡಿದ ಫಿರ್ಯಾದಿ ಅರ್ಜಿ ತಂದು ಹಾಜರ ಪಡಿಸಿದ್ದು ಸಾರಾಂಶವೆನೆಂದರೆ, ದಿನಾಂಕ-23/06/2022 ರಂದು ನಾನು ನಮ್ಮೂರಿನಿಂದ ಕಲಬುರಗಿಗೆ ಬಂದು ಕೆಲಸ ಮಾಡಿ ಮರಳಿ ಊರಿಗೆ ಹೋಗಬೇಕೆಂದು ನನ್ನ ಮೋಟಾರ ಸೈಕಲ ಮೇಲೆ ಹೋಗುವಾಗ ಸೇಡಂ ರಿಂಗ್ ರೋಡ ಹತ್ತಿರ ನಮ್ಮೋರಿನ ಸೋಮಶೇಖರ ತಂದೆ ರೇವಣಸಿದ್ದಪ್ಪಾ ಸಣ್ಣೂರ ಈತನು ಸಹ ನನ್ನ ಜೋತೆಗೆ ಬರುತ್ತೇನೆ ಅಂತಾ ಹೇಳಿ ನನ್ನ ಮೋಟಾರ ಸೈಕಲ ಮೇಲೆ ಹಿಂದುಗಡೆ ಕುಳಿತನು. ಮತ್ತು ಇನ್ನೊಂದು ಮೋಟಾರ ಸೈಕಲ ಮೇಲೆ ನಮ್ಮ ಊರಿನ ಮಲ್ಲಿಕಾರ್ಜುನ ತಂದೆ ಭೀಮರಾಯ ಹತಗೂಂದಾ ಹಾಗೂ ನಮ್ಮ ಚಿಕ್ಕಪ್ಪನ ಮಗ ದೇವಿಂದ್ರಪ್ಪಾ ತಂದೆ ಸೈಬಣ್ಣಾ ಗ್ವಾಡಿ ಹಾಗೂ ಯಲ್ಲಾಲಿಂಗ್ ತಂದೆ ಸಿದ್ದಣ್ಣಾ ಕಡಬುರ ಮೂರು ಜನರು ಸೇರಿ ನಾವು ಗುಂಡಗುರ್ತಿ ಕಡೆಗೆ ಹೋಗುವಾಗ ಮಲ್ಲಿಕಾರ್ಜುನ ಈತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ನಮ್ಮ ಮೋಟಾರ ಸೈಕಲಗೆ ಓವರ ಟೇಕ ಮಾಡಿ ಅದೆ ವೇಗದಲ್ಲಿ ಸರಡಗಿ ಕ್ರಾಸ್ ಹತ್ತಿರ ಸಾಯಂಕಾಲ 06:30 ಗಂಟೆ ಸುಮಾರಿಗೆ ಹೋಗುವಾಗ ಇನ್ನೊಂದು ಮೋಟಾರ ಸೈಕಲ ಸವಾರನು ಮಾಡಬೂಳ ಕಡೆಯಿಂದ ಕಲಬುರಗಿ ಕಡೆಗೆ ಬರುವ ಕುರಿತು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಂದು ವಾಹನಕ್ಕೆ ಓವರ ಟೇಕ ಮಾಡಲು ಹೋಗಿ ಮಲ್ಲಿಕಾರ್ಜುನ ಹಾಗೂ ಸದರಿ ಮೋಟಾರ ಸೈಕಲ ಸವಾರನು ಮುಖಾಮುಖಿಯಾಗಿ ಡಿಕ್ಕಿ ಪಡಿಸಿಕೊಂಡು ರಸ್ತೆಯ ಮೇಲೆ ಬಿದ್ದರು ಅದನ್ನು ನೋಡಿ ನಾನು ಮತ್ತು ಸೋಮಶೇಖರ ಇಬ್ಬರೂ ನಮ್ಮ ಮೋಟಾರ ಸೈಕಲ ಸೈಡಿಗೆ ಹಚ್ಚಿ ಸದರಿ ಮೋಟಾರ ಸೈಕಲ ಸವಾರ ಮಲ್ಲಿಕಾರ್ಜುನ ಈತನಿಗೆ ಎಬ್ಬಿಸಿ ನೋಡಲು ಆತನಿಗೆ ಬಲಗೈ ರಿಸ್ಟ್ ಹತ್ತಿರ ಭಾರಿಗಾಯ ಮತ್ತು ಬಲಗಾಲಿನ ಪಾದಕ್ಕೆ ಭಾರಿ ರಕ್ತಗಾಯ ಆಗಿದ್ದು. ಆತನ ಜೋತೆಗೆ ಇದ್ದ ಯಲ್ಲಾಲಿಂಗ್ ಹಾಗೂ ದೇವಿಂದ್ರಪ್ಪಾ ಇವರಿಗೆ ಅಲ್ಲಲ್ಲಿ ತರಚಿದಗಾಯ ಹಾಗೂ ಗುಪ್ತಗಾಯ ಆಗಿದ್ದು ಇವರ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿದ ಮೋಟಾರ ಸೈಕಲ ಸವಾರನಿಗೆ ನೋಡಲು ಆತನ ಹೆಸರು ಸುನೀಲಕುಮಾರ ಅಂತಾ ಗೋತ್ತಾಗಿದ್ದು ಆತನಿಗೆ ತೆಲೆಗೆ ಭಾರಿ ಒಳಪೆಟ್ಟು ಬಲಗೈ ಗುಪ್ತಗಾಯ ಅಲ್ಲಲ್ಲಿ ತರಚಿದಗಾಯ ಆಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಮಲ್ಲಿಕಾರ್ಜುನ ಈತನ ಮೋಟಾರ ಸೈಕಲ ನಂ ಕೆಎ-14 ವಿ-2261 ಹಾಗೂ ಸುನೀಲಕುಮಾರ ಈತನ ಹೊಸ ಪಲ್ಸರ್ ಮೋಟಾರ ಸೈಕಲ ಚಸ್ಸಿ ನಂ MD2B64BX4MWG15238 ನೇದ್ದು ಇದ್ದು ಸದರ ವಿಷಯ ಗೋತ್ತಾಗಿ ಸ್ಥಳಕ್ಕೆ ಅಂಬುಲೈನ್ಸ್ ವಾಹನಗಳು ಬಂದಿದ್ದು ಉಪಚಾರ ಕುರಿತು ಸುನೀಲಕುಮಾರ ಈತನಿಗೆ ಮಣ್ಣೂರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಮಲ್ಲಿಕಾರ್ಜುನ ಈತನಿಗೆ ನಾನು ಇನ್ನೊಂದು ಅಂಬುಲೈನ್ಸ್ ವಾಹನದಲ್ಲಿ ಹಾಕಿಕೊಂಡು ಪುಷ್ಕರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ, ಯಲ್ಲಾಲಿಂಗ್ ಹಾಗೂ ದೇವಿಂದ್ರಪ್ಪಾ ಇಬ್ಬರೂ ಆಸ್ಪತ್ರೆಗೆ ತೊರಿಸಿಕೊಂಡಿರುವುದಿಲ್ಲಾ. ನಾನು ವಿಚಾರ ಮಾಡಿ ಇಂದು ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಕಾರಣ ಮೋಟಾರ ಸೈಕಲ ನಂ ಕೆಎ-14 ವಿ-2261 ನೇದ್ದರ ಸವಾರ ಮಲ್ಲಿಕಾಜರ್ುನ ಹಾಗೂ ಹೊಸ ಪಲ್ಸರ್ ಮೋಟಾರ ಸೈಕಲ ಚಸ್ಸಿ ನಂ MD2B64BX4MWG15238 ನೇದ್ದರ ಸವಾರ ಸುನೀಲಕುಮಾರ ಇವರಿಬ್ಬರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಫಿರ್ಯಾದಿ  ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ .

ಇತ್ತೀಚಿನ ನವೀಕರಣ​ : 16-07-2022 04:36 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080