ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್ ಠಾಣೆ :-  ದಿನಾಂಕ: 27-05-2022 ರಂದು ಬೆಳಿಗ್ಗೆ ೯.೩೦ ಎಎಂಕ್ಕೆ ಶ್ರೀ  ಶಮಶೊದ್ದೀನ ತಂದೆ ಮಹಿಬೂಬಸಾಬ ಕಟ್ಟಿಗೆಅಡ್ಡಾ  ವ:೬೦ ವರ್ಷ  ಉ:ಕೂಲಿಕೆಲಸ  ಜಾ:ಮುಸ್ಲಿಂ ಸಾ:ಯಖಾನಾ ಮಜೀದ ಹತ್ತಿರ ಶಹಾಬಜಾರ ನಾಕಾ ಕಲಬುರಗಿ ನಾನು ಬರೆದುಕೊಡುವ ವಿನಂತಿ ಅರ್ಜಿ  ಏನೆಂದರೆ, ನಾನು ಕೂಲಿಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನಾನು ದಿನಾಂಕ:೧೪.೦೫.೨೦೨೨ ರಂದು ನನ್ನ ವೈಯಕ್ತಿಕ ಕೆಲಸದ ನಿಮಿತ್ಯ ಶಹಾಬಜಾರ ನಾಕಾ ಹತ್ತಿರ ಬೆಳಿಗ್ಗೆ ೭.೩೦ ಗಂಟೆ ಸುಮಾರಿಗೆ ಹೋದಾಗ ಶಹಾಬಜಾರ ನಾಕಾದಲ್ಲಿರುವ ಕೆನರಾ ಬ್ಯಾಂಕ ಎಟಿಎಂ ಮುಂದುಗಡೆ ರಸ್ತೆಯ ಬದಿಯಲ್ಲಿ ಒಬ್ಬ ಅಂದಾಜು ೪೦-೫೦ ವರ್ಷ ವಯಸ್ಸಿನ ಅಪರಿಚಿತ ಗಂಡು ಮನುಷ್ಯ ರೋಡಿನ ಬದಿಯಲ್ಲಿ ನಿತ್ರಾಣ ಸ್ಥಿತಿಯಲ್ಲಿ ಬಿದಿದ್ದು ಅವನಿಗೆ ಯಾವುದೋ ಕಾಯಿಲೆ ಇದಂತೆ ಕಂಡು ಬಂದಿದ್ದು ಇದನ್ನು ನೋಡಿ ನಾನು ೧೦೮ ಅಂಬುಲೇನ್ಸ ವಾಹನಕ್ಕೆ ಮಾಹಿತಿ ನೀಡಿ ಸದರಿ ಅಪರಿಚಿತ ಗಂಡು ಮನುಷ್ಯನಿಗೆ ಉಪಚಾರ ಕುರಿತು ಅಂಬುಲೇನ್ಸದವರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ಅಪರಿಚಿತ ಗಂಡು ಮನುಷ್ಯನು ಅಂದಾಜು ೫ ಫೀಟ ೩ ಇಂಚು ಎತ್ತರ, ಬಿಳಿ ಕರಿಯ ಸ್ವಲ್ಪ ದಾಡಿ ಬಿಟ್ಟಿದ್ದು. ಸಾದಾರಣ ಗೋಧಿ ಬಣ್ಣ, ಮೈಮೇಲೆ ಬಿಳಿ ಬಣ್ಣದ ಕಪ್ಪು ಚುಕ್ಕೆಯ ಡಿಜೈನ ಇರುವ ಶರ್ಟ್‌,  ಬೂದು ಬಣ್ಣದ ಪ್ಯಾಂಟ ಧರಿಸಿದ್ದು ಇತನು ತನಗೆ ಇದ್ದ ಯಾವುದೋ ಕಾಯಿಲೆಯಿಂದ ಸ್ಥಳದಲ್ಲಿಯೇ ನಿತ್ರಾಣನಾಗಿ ಬಿದಿದ್ದು ಅವನಿಗೆ ಉಪಚಾರಕ್ಕಾಗಿ ೧೦೮ ಅಂಬುಲೇನ್ಸದವರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೇ ದಿನಾಂಕ:೧೬.೦೫.೨೦೨೨ ರಂದು ಮದ್ಯಾಹ್ನ ೧.೩೦ ಗಂಟೆಗೆ ಮೃತಪಟ್ಟಿದ್ದು ಅವನ ಹೆಸರು ವಿಳಾಸ ಯಾರಿಗೂ ಗೊತ್ತಾಗದೇ ಇರುವುದರಿಂದ ಮತ್ತು ಯಾರು ಕೂಡಾ ಅಪರಿಚಿತ ಗಂಡು ಮನುಷ್ಯನ ಬಗ್ಗೆ ಫಿರ್ಯಾದಿ ಕೊಡಲು ಮುಂದೆ ಬಾರದೇ ಇರುವುದರಿಂದ ಸದರಿ ಅಪರಿಚಿತ ಗಂಡು ಮನುಷ್ಯನು ಮೃತಪಟ್ಟ ಬಗ್ಗೆ ಇಂದು ವಿಷಯ ಗೊತ್ತಾಗಿ ಅವನ ಶವವನ್ನು ಸರಕಾರಿ ಆಸ್ಪತ್ರೆಯಲ್ಲಿ ಹೋಗಿ ನೋಡಿ ದೂರು ಕೊಟ್ಟಿದ್ದು ಇರುತ್ತದೆ. ಸದರಿ ಅಪರಿಚಿತ ಗಂಡು ಮನುಷ್ಯನು ಯಾವ ಊರಿನವನು, ಅವನ ಸಂಬಂಧಿಕರು ಎಲ್ಲಿ ಇದ್ದಾರೆ ಅನ್ನುವುದು ನನಗೆ ಗೊತ್ತಿಲ್ಲಾ. ಅವನು ತನಗೆ ಇದ್ದ ಯಾವುದೋ ಕಾಯಿಲೆಯಿಂದಲೆ ನರಳುತ್ತಾ ಶಹಾಬಜಾರ ನಾಕಾದಲ್ಲಿರುವ ಕೆನರಾ ಬ್ಯಾಂಕ ಎಟಿಎಂ ಮುಂದುಗಡೆ ರಸ್ತೆಯ ಬದಿಯಲ್ಲಿ ಬಿದ್ದಾಗ ಅವನಿಗೆ ಉಪಚಾರ ಕುರಿತು ದಾಖಲು ಮಾಡಿದರು ಸಹ ಉಪಚಾರ ಫಲಕಾರಿಯಾಗದೇ ದಿನಾಂಕ:೧೬.೦೫.೨೦೨೨ ರಂದು ಮದ್ಯಾಹ್ನ ೧.೩೦ ಗಂಟೆಗೆ ಸರಕಾರಿ ಆಸ್ಪತ್ರೆಯಲ್ಲಿ ಸಾವು ಸಂಭವಿಸಿದ್ದು, ಸದರಿಯವನ ಸಾವಿನಲ್ಲಿ ನನಗೆ ಯಾರ ಮೇಲೆಯೂ ಸಂಶಯ ಫರ‍್ಯಾದಿ ದೂರು ಇರುವುದಿಲ್ಲಾ ಮುಂದಿನ ಕಾನೂನು ಕ್ರಮ ಕೈಕೊಳ್ಳಲು ವಿನಂತಿ  ಅಂತಾ ವಗೈರೆ ಕೊಟ್ಟ ಫರ‍್ಯಾಧಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 01-06-2022 01:36 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080