ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್ ಠಾಣೆ :- ದಿನಾಂಕ 27-04-2022 ರಂದು ಮಧ್ಯಾಹ್ನ ೪-೧೫ ಗಂಟೆಗೆ ನಮ್ಮ ಠಾಣೆಯ ಶ್ರೀ ರಾಜಶೇಖರ ವ್ಹಿ. ಹಳಗೋಧಿ ಪಿ.ಐ. ಚೌಕ ಪೊಲೀಸ ಠಾಣೆ ಕಲಬುರಗಿ ರವರು ಮಟಕಾ ಜೂಜಾಟ ನಿರತ ಒಬ್ಬ ಆರೋಪಿ ಮತ್ತು ಮುದ್ದೆಮಾಲು ಹಾಗೂ  ಮಟಕಾ ಜೂಜಾಟ ದಾಳಿ ಮಾಡಿದ  ಸರಕಾರಿ ತರ್ಫೆ ದೂರು ಮತ್ತು ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ತಮ್ಮ ಸರಕಾರಿ ತರ್ಫೆ ದೂರು ಕೊಟ್ಟಿದ್ದರ  ಸಾರಾಂಶವೆನೆಂದೆರೆ, ಇಂದು ದಿನಾಂಕ ೨೭/೦೪/೨೦೨೨ ರಂದು ಮಧ್ಯಾಹ್ನ ೦೧-೩೦  ಗಂಟೆಗೆ ಚೌಕ ಪೊಲೀಸ ಠಾಣೆಯಲ್ಲಿ ಇದ್ದಾಗ ನನಗೆ ಖಚಿತವಾದ ಬಾತ್ಮಿ ಬಂದಿದ್ದೆನೆಂದೆರೆ, ಕಲಬುರಗಿ ನಗರದ ಶಿವಾಜಿ ನಗರ ಅಂಭಾಬಾಯಿ ಗುಡಿ ಎದುರುಗಡೆ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಒಬ್ಬನು ನಿಂತುಕೊಂಡು ಹೋಗಿ- ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಮಟಕಾ ಜೂಜಾಟದಲ್ಲಿ ನಿರತನಾದವನ  ಮೇಲೆ ದಾಳಿ ಮಾಡಿ ಹಿಡಿದು ಅವನ ವಿರುದ್ಧ ಅಸಂಜ್ಞೇಯ ಕಲಂ ೭೮(೩) ಕೆ.ಪಿ.ಎಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಕೋರಿ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ಕೋರಿಕೊಂಡು, ಇಬ್ಬರು ಪಂಚರಾದ ೧)ಶ್ರೀ ಶರಣು ತಂದೆ ವೀರಪ್ಪ ಜಾರಬಂಡಿ ವ:೧೯ ವರ್ಷ ಉ:ವಿದ್ಯಾರ್ಥಿ ಜಾತಿ ಕಬ್ಬಲೀಗ ಸಾ;ಶಿವಾಜಿ ನಗರ ಮಾಹಾಂತು ಇವರ ಅಂಗಡಿ ಹತ್ತಿರ  ಕಲಬುರಗಿ ೨)ಶ್ರೀ ರಾಜು ತಂದೆ ಗೋಪಾಲ ಜಾಧವ ವ:೩೮ವರ್ಷ ಉ: ಸಿವಿಲ್ ರ‍್ಕ ಜಾತಿ ಪ.ಜಾತಿ (ಲಂಬಾಣಿ) ಸಾ:ಶಿವಾಜಿ ನಗರ ಕಲಬುರಗಿ ಇವರುಗಳನ್ನು ಮತ್ತು ನಮ್ಮ ಠಾಣಾ ಸಿಬ್ಬಂದಿಯವರಾದ ಶ್ರೀ ಹುಸೇನಬಾಷಾ ಎ,ಎಸ್.ಐ. ಸಿಪಿಸಿ ೧೧೧ ಉಮೇಶ, ಹಾಗೂ ಜೀಪು ಚಾಲಕ ಎಪಿಸಿ ೦೭ ಮಾಳಪ್ಪ ಇವರಿಗೂ ಈ ಮೇಲಿನ ಮಟಕಾ ಜೂಜಾಟದ ಬಾತ್ಮಿ ವಿಷಯ ತಿಳಿಸಿ, ಪಂಚರಿಗೆ ನಾವು ಮಾಡುವ ದಾಳಿ ಜಪ್ತಿ ಪಂಚನಾಮೆಯ ಪಂಚರಾಗಿ ಜಪ್ತಿ ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಪಂಚರು ಒಪ್ಪಿಕೊಂಡರು. ಮತ್ತು ಸಿಬ್ಬಂದಿಯವರಿಗೆ ನಮ್ಮ ಜೊತೆಯಲ್ಲಿ ದಾಳಿಗೆ ಬರಲು ಸೂಚಿಸಿದಾಗ ಅವರು ಕೂಡಾ ಒಪ್ಪಿಕೊಂಡರು. ಆಗ ನಾನು ಮಟಕಾ ಜೂಜಾಟ ದಾಳಿ ಕುರಿತು ಠಾಣೆಯ ಜೀಪು ಕೆಎ ೩೨ ಜಿ ೮೭೪ ರಲ್ಲಿ ನಾನು ಮತ್ತು ಪಂಚರು ಹಾಗೂ ಈ ಮೇಲಿನ ಸಿಬ್ಬಂದಿಯವರು ಕುಳಿತುಕೊಂಡೇವು. ಜೀಪು ಎಪಿಸಿ ಮಾಳಪ್ಪ ಇವರು ಚಾಲನೆ ಮಾಡುತ್ತಿದ್ದರು ಮಾನ್ಯ ಎ.ಸಿ.ಪಿ.(ಎನ್) ಉಪವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಬಂಬೂ ಬಜಾರ ಕ್ರಾಸದಿಂದ ಮಧ್ಯಾಹ್ನ ೨-೩೦ ಗಂಟೆಗೆ ಹೊರಟಿದ್ದು, ಬಾತ್ಮಿ ಸ್ಥಳವಾದ ಶಿವಾಜಿ ನಗರ ಅಂಭಾಬಾಯಿ ಗುಡಿ ಇನ್ನೂ ಸ್ವಲ್ಪ ದೂರ ಇರುವಂತೆ ಜೀಪು ನಿಲ್ಲಿಸಿದಾಗ ಎಲ್ಲರೂ ಜೀಪು ಇಳಿದು ಅಂಭಾಬಾಯಿ ಗುಡಿ ದಕ್ಷಿಣ ದಿಕ್ಕಿನ ಗೋಡೆ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬನು ಕಲಬುರಗಿ ನಗರ ಶಿವಾಜಿ ನಗರ ಅಂಭಾಬಾಯಿ ಗುಡಿ ಎದುರಿನ ಸಾರ್ವಜನಿಕ ರಸ್ತೆ ಬದಿಯಲ್ಲಿ ನಿಂತುಕೊಂಡು ಹೋಗು-ಬರುವ ಸಾರ್ವಜನಿಕರಿಗೆ ೧ ರೂ.ಗೆ ೮೦ ರೂ. ಗೆಲ್ಲಿರಿ ಕಲ್ಯಾಣ ಮಟಕಾ ಇದೆ ಅಂತಾ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಬರೆದುಕೊಡುತ್ತಿದ್ದನ್ನು ನೋಡಿ ನನ್ನ ಜೊತೆಯಲ್ಲಿ ಬಂದಿದ್ದ ಪಂಚರಿಗೆ ಮತ್ತು ಈ ಮೇಲಿನ ಸಿಬ್ಬಂದಿಯವರಿಗೆ ತೋರಿಸಿ ಖಚಿತಪಡಿಸಿಕೊಂಡು, ಪಂಚರ ನಮ್ಮ ಸಮಕ್ಷಮದಲ್ಲಿ ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ಮಧ್ಯಾಹ್ನ ೦೩-೦೦ ಗಂಟೆಗೆ ದಾಳಿ ಮಾಡಿ ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲೂ ಅವನು ತನ್ನ ಬಸವರಾಜ ತಂದೆ ರೇವಪ್ಪ ಕಂಠಿ ವ:೭೦ ವರ್ಷ ಉ:ಖಾಸಗಿ ಕೆಲಸ ಜಾತಿ ಲಿಂಗಾಯತ ಸಾ: ಬಸವಣ್ಣ ಗುಡಿ ಹತ್ತಿರ ಶಿವಾಜಿ ನಗರ ಕಲಬುರಗಿ ಅಂತಾ ತಿಳಿಸಿದನು. ಆತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ:ಕಿ:೦೦ ರೂ. ಮತ್ತು ಒಂದು ಬಾಲಪೆನ್ನು ಅ:ಕಿ:೦೦ ರೂ. ಹಾಗೂ ನಗದು ಹಣ ೧೦೨೦/- ರೂ. ದೊರೆತವು. ನಂತರ ಅವನಿಗೆ ಮಟಕಾ ಚೀಟಿ ಯಾರಿಗೆ ಒಯ್ದು ಕೊಡುತ್ತೀ ಅಂತಾ ವಿಚಾರಿಸಿದಾಗ, ಅವನು ರೇವಣಸಿದ್ಧಪ್ಪ ತಂದೆ ರಾಮಚಂದ್ರಪ್ಪ ಹೊಸಮನಿ ಸಾ: ರೇವಣಸಿದ್ದೇಶ್ವರ ಕಾಲನಿ ಕಲಬುರಗಿ ಇತನಿಗೆ ಕೊಡುವುದಾಗಿ ತಿಳಿಸಿದನು.  ಆಗ ನಾನು ಕೇಸಿನ ಪುರಾವೆಗೋಸ್ಕರ ಒಂದು ದಸ್ತಿಯಲ್ಲಿ ಮಟಕಾ ಚೀಟಿ, ಬಾಲಪೆನ್ನು, ಹಣ ಹಾಕಿ ಗಂಟು ಕಟ್ಟಿ ಅದಕ್ಕೆ ಪಂಚರು ಸಹಿಸಿದ ಚೀಟಿ ಅಂಟಿಸಿ ವಶಕ್ಕೆ ತೆಗೆದುಕೊಂಡು ಜಪ್ತಪಡಿಸಿಕೊಂಡೆನು. ಮತ್ತು ಬಸವರಾಜ ತಂದೆ ರೇವಪ್ಪ ಕಂಠಿ ವ:೭೦ ವರ್ಷ ಉ:ಖಾಸಗಿ ಕೆಲಸ ಜಾತಿ ಲಿಂಗಾಯತ ಸಾ: ಬಸವಣ್ಣ ಗುಡಿ ಹತ್ತಿರ ಶಿವಾಜಿ ನಗರ ಕಲಬುರಗಿ ಇತನು ಮಟಕಾ ಜೂಜಾಟದಲ್ಲಿ ನಿರತರಾದ ಖಚಿತಪಟ್ಟಿದ್ದರಿಂದ ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ವಶಕ್ಕೆ ತೆಗೆದುಕೊಂಡೇವು. ಸದರ ಜಪ್ತಿ ಪಂಚನಾಮೆ ಇಂದು ದಿನಾಂಕ ೨೭/೦೪/೨೦೨೨ ರಂದು ಮಧ್ಯಾಹ್ನ ೩-೦೦ ಗಂಟೆಯಿಂದ ಮಧ್ಯಾಹ್ನ ೪-೦೦ ಗಂಟೆಯವರೆಗೆ ಸದರ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮಲ್ಲಿ ಬರೆದು ಮುಗಿಸಲಾಯಿತು. ಸದರಿ ಮಟಕಾ ಜೂಜಾಟದಲ್ಲಿ ನಿರತನಾದ ಬಸವರಾಜ ತಮದೆ ರೇವಪ್ಪ ಕಂಠಿ ವ:೭೦ ವರ್ಷ  ಉ:ಖಾಸಗಿ ಕೆಲಸ ಜಾತಿ ಲಿಂಗಾಯತ ಸಾ: ಬಸವಣ್ಣ ಗುಡಿ ಹತ್ತಿರ ಶಿವಾಜಿ ನಗರ ಕಲಬುರಗಿ ಮತ್ತು  ರೇವಣಸಿದ್ಧಪ್ಪ ತಂದೆ ರಾಮಚಂದ್ರಪ್ಪ ಹೊಸಮನಿ ಸಾ: ರೇವಣಸಿದ್ದೇಶ್ವರ ಕಾಲನಿ ಕಲಬುರಗಿ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಸರಕಾರ ಪರ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಚೌಕ ಪೊಲೀಸ್ ಠಾಣೆ :- ದಿನಾಂಕ 27-04-2022 ರಂದು  ೦೭-೩೦ ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ತಮ್ಮದೊಂದು ಗಣಕೀಕೃತ ಮಾಡಿದ ದೂರು ಸಾರಾಂಶವೇನಂದರೆ,  ನಾನು ಸೈಬಣ್ಣ ತಂದೆ ಪೀರಪ್ಪ ತಳವಾರ  ವ:೩೭ವರ್ಷ ಉ:ಒಕ್ಕಲುತನ ಜ್ಯಾ:ಕಬ್ಬಲಿಗ ಸಾ: ನದಿಸಿನ್ನೂರ ತಾ:ಜಿ:ಕಲಬುರಗಿ ಆಗಿದ್ದು ಒಕ್ಕಲುತನ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ.  ನನ್ನ ವೈಯಕ್ತಿಕ ಕೆಲಸ ನಿಮಿತ್ಯ ಓಡಾಡಲು ೨೦೧೭ ನೇ ಸಾಲಿನಲ್ಲಿ ನನ್ನ ಹೆಸರಿನಲ್ಲಿ ಹಿರೋ ಸ್ಪ್ಲೇಂಡರ್ ಪ್ಲಸ್ KA32EQ1586 ನೇದ್ದು  ಖರೀದಿಸಿರುತ್ತೇನೆ. ಹೀಗಿದ್ದು ದಿನಾಂಕ ೦೬/೦೨/೨೦೨೨ ರಂದು ಮಧ್ಯಾಹ್ನ ೦೧.೦೦ ಗಂಟೆಗೆ  ಮನೆಯಿಂದ ನನ್ನ ಮೋಟಾರ ಸೈಕಲ್ ನಂ. KA32EQ1586 ನೇದ್ದರ ಮೇಲೆ ಕಲಬುರಗಿ ಎಪಿಎಮ್ಸಿ ಯಲ್ಲಿ ತೊಗರಿ ಮಾರಾಟ ಮಾಡಿದ ಹಣ ತೆಗೆದುಕೊಂಡು ಬರಲು ನಾನು ಮತ್ತು ಮರೆಪ್ಪ  ಕೂಡಿಕೊಂಡು ಧನ್ನೂರ ಅಡತ್ತ ಅಂಗಡಿಗೆ  ಹೋಗಿ ಮಧ್ಯಾಹ್ನ ೨.೩೦ ಗಂಟೆ ಸುಮಾರಿಗೆ ನೆಹರು ಗಂಜ ಎ.ಪಿ.ಎಂ.ಸಿ ಒಳಗಡೆ ಇರುವ ಧನ್ನೂರ ಅಡತ್ತ ಅಂಗಡಿ ಮುಂದೆ ನನ್ನ ಮೋಟಾರ ಸೈಕಲ ಪಾರ್ಕಿಂಗ್ ಮಾಡಿ ಅಂಗಡಿ ಮಾಲೀಕರಿಗೆ ಭೇಟಿಯಾಗಲು ಒಳಗಡೆ ಹೋಗಿ ವಾಪಸ್ಸು ೦೩.೩೦ ಗಂಟೆ ಸುಮಾರಿಗೆ ಬಂದು ನೋಡಲಾಗಿ ನನ್ನ ಮೋಟಾರ ಸೈಕಲ ಕಾಣಿಸಲಿಲ್ಲ. ನಾನು ಮತ್ತು ಮರೆಪ್ಪ ಇಬ್ಬರೂ ಕೂಡಿಕೊಂಡು ಎಪಿಎಂಸಿ ಸುತ್ತ ಮುತ್ತಲು ಮೋಟಾರ ಸೈಕಲ ಹುಡುಕಾಡಿದರೂ ನನ್ನ ಮೋಟಾರ ಸೈಕಲ ಸಿಗದ ಕಾರಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ಅಂದಿನಿಂದ ಇಂದಿನವರೆಗೆ ಎಲ್ಲಿಯಾದರೂ ಸಿಗಬಹುದೆಂದು ಕಲಬುರಗಿ ನಗರ ಗಂಜ ಏರಿಯಾದಲ್ಲಿ ಹಾಗೂ ಕಲಬುರಗಿ ನಗರ ಹೊರ ವಲಯದಲ್ಲಿ ಎಲ್ಲಾ ಕಡೆಗಳಲ್ಲಿ ತಿರುಗಾಡಿ ಹುಡುಕಾಡಿ ನನ್ನ  ಮೋಟಾರ ಸೈಕಲ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ.  ಕಳ್ಳತನವಾದ ನನ್ನ ಮೋಟಾರ ಸೈಕಲ ವಿವರ ಈ ಕೆಳಗಿನಂತೆ ಇರುತ್ತದೆ.೦೧.ಮೋಟಾರ ಸೈಕಲ ಮಾದರಿ & ನಂಬರ :  HERO SPLENDOR +BS-IV 

೦೨. ಇಂಜನ ನಂಬರ                                        :   HA10AGHHF37386

೦೩. ಚೆಸ್ಸಿ ನಂಬರ                               :   MBLHAR089HHF77412

೦೪. ಮಾಡಲ್                                         :   07/2017

೦೫.ಬಣ್ಣ                                                           :   SILVER  ಕಲರ್

೦೬.ಬೆಲೆ                                                 :   ೩೬,೦೦೦/- ರೂ.ಕಾರಣ ಮಾನ್ಯರವರು HERO SPLENDOR +BS-IV ನಂ. KA32EQ1586 ನೇದ್ದು ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡ ಹೋದ ಯಾರೋ ಅಪರಿಚಿತ ಕಳ್ಳರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ನನ್ನ ಮೋಟಾರ ಸೈಕಲ್  ದೊರಕಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಅಂತ ಕೊಟ್ಟ ಫಿರ್ಯಾದಿಯ ಅರ್ಜಿಯ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಚೌಕ ಪೊಲೀಸ್ ಠಾಣೆ  :-  ದಿನಾಂಕ 27-04-2022 ರಂದು ಮಧ್ಯಾಹ್ನ ೧-೩೦ ಗಂಟೆಗೆ  ಬಸವೇಶ್ವರ ಓ.ಪಿ. ಸಿಬ್ಬಂದಿಯವರು ಪೋನ ಮುಖಾಂತರ ಪಾಪಯ್ಯ ಇವರ ಡೆತ ಎಂ.ಎಲ್.ಸಿ. ಇದೆ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟ್ಟಿಕೊಟ್ಟು ಡೆತ ಎಂ.ಎಲ್.ಸಿ. ಮಧ್ಯಾಹ್ನ ೧-೪೫ ಗಂಟೆಗೆ ಸ್ವೀಕರಿಸಿಕೊಂಡು, ಅಲ್ಲೇ ಹಾಜರಿದ್ದ ಮೃತನ ಹೆಂಡತಿ ಶ್ರೀಮತಿ ಗಂಗಮ್ಮಾ ಗಂಡ ಪಾಪಯ್ಯ ಹಡಪದ ಸಾ: ಸಿದ್ದೇಶ್ವರ ಕಾಲನಿ ಆಜಾದಪುರ ರೋಡ ಕಲಬುರಗಿ ಇವರು ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ದೂರು ಮಧ್ಯಾಹ್ನ ೨-೦೦ ಗಂಟೆಗೆ ಕೊಟ್ಟಿದ್ದನ್ನುನಾನು, ಗಂಗಮ್ಮಾ ಗಂಡ ಪಾಪಯ್ಯ ಹಡಪದ ವ:೪೫ ವರ್ಷ ಉ:ಮನೆಗೆಲಸ ಜಾತಿ ಹಡಪದ ಸಾ: ಸಿದ್ದೇಶ್ವರ ಕಾಲನಿ ಆಜಾದಪುರ ರೋಡ ಕಲಬುರಗಿ ಇದ್ದು, ಈ ಮೂಲಕ ತಮಗೆ ದೂರು ಕೊಡುವದೆನೆಂದೆರೆ, ಪಾಪಯ್ಯ ಗಂಡ ಕಾಶಪ್ಪ ಹಡಪದ  ವ:೫೨ ವರ್ಷ ಇವರು ನನ್ನ ಗಂಡನಾಗುತ್ತಾರೆ. ಅವರು ಕಟ್ಟಿಂಗ ಕೆಲಸ ಮಾಡಿಕೊಂಡು ಇರುತ್ತಾರೆ. ಅವರು ಪ್ರತಿ ದಿನ ವಿಪರೀತ ಸರಾಯಿ ಕುಡಿಯುವ ಚಟವುಳ್ಳವರೂ ಇರುತ್ತಾರೆ.   ನಿನ್ನೆ ದಿನಾಂಕ ೨೬/೦೪/೨೦೨೨ ರಂದು ಬೆಳಿಗ್ಗೆ ೦೯-೦೦ ಗಂಟೆ ಸುಮಾರಿಗೆ ನನ್ನ ಗಂಡ ಪಾಪಯ್ಯ ಇವರು ಕಟ್ಟಿಂಗ ಶಾಪಿಗೆ ರಜೆ ಇರುವುದರಿಂದ ಮನೆಯಿಂದ ಮಟನ ತರುತ್ತೇನೆ ಎಂದು ಹೇಳಿ ಮನೆಯಿಂದ ಹೊರಗಡೆ ಹೋದರು. ಮಧ್ಯಾಹ್ನ ೧-೩೦ ಗಂಟೆ ಸುಮಾರಿಗೆ ನನ್ನ ತಮ್ಮ ಅಶೋಕ ತಂದೆ ಗುಂಡಪ್ಪ ಹಡಪದ ಇತನು ನನಗೆ ಪೋನ ಮಾಡಿ ನಮ್ಮ ಭಾವ ಪಾಪಯ್ಯ ಇತನು ಕುಡಿದ ಅಮಲಿನಲ್ಲಿ  ಕಲಬುರಗಿ ನಗರದ ಸುಪರ ಮಾರ್ಕೆಟ ಅರವಿಂದ ಮೆಡಿಕಲ ಪಕ್ಕದಲ್ಲಿ ಇರುವ ಪುಟ್ಟಪಾತ ಮೇಲೆ ತರಕಾರಿ ಹೊಡೆಯುವ ಕ್ರೀಮಿನಾಷಕ ಔಷಧಿ ಕುಡಿದು ಬಿದ್ದಿರುತ್ತಾನೆ ಅಲ್ಲಿರುವ ಟ್ರಾಫೀಕ ಪೊಲೀಸರು ನಮ್ಮ ಭಾವನಿಗೆ ಉಪಚಾರ ಕುರಿತು 108 ಅಂಬುಲೈನ್ಸ ಗಾಡಿ ಹಾಕಿ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ ರವರಲ್ಲಿ ಕಳುಹಿಸಿಕೊಟ್ಟಿರುತ್ತೇವೆ ಎಂದು ಪಾಪಯ್ಯನ ಹತ್ತಿರ ಇರುವ ಮೋಬಾಯಿಲನಲ್ಲಿ ಇರುವ ನನ್ನ ಮೋಬಾಯಿಲ್ ನಂಬರಿಗೆ ಪೋನ ಮಾಡಿ ವಿಷಯ ತಿಳಿಸಿರುತ್ತಾರೆ ಎಂದು ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಮಗ ಅನಂದ ಇಬ್ಬರು ಕೂಡಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಬಂದು ಅಂಬುಲೈನ್ಸದಲ್ಲಿ ನನ್ನ ಗಂಡ ಪಾಪಯ್ಯ ಇವರಿಗೆ ನೋಡಲಾಗಿ ಅವರು ಬೇಹುಷ ಸ್ಥಿತಿಯಲ್ಲಿ ಇದ್ದು, ಅವರಿಗೆ ಅಲ್ಲಿಂದ ನೇರವಾಗಿ ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದೇವು. ನನ್ನ ಗಂಡ ಪಾಪಯ್ಯ ಇತನು ಕುಡಿದ ಅಮಲಿನಲ್ಲಿ ತರಕಾರಿ ಹೊಡೆಯುವ ಕ್ರೀಮಿನಾಷಕ ಔಷಧಿ ಸೇವನೆ ಮಾಡಿದ್ದು, ಈ ವಿಷದ ಭಾದೆಯಿಂದ ಉಪಚಾರ ಹೊಂದುತ್ತಾ ಗುಣ ಮುಖ ಹೊಂದದೇ ಇಂದು ದಿನಾಂಕ ೨೭/೦೪/೨೦೨೨ ರಂದು ಮಧ್ಯಾಹ್ನ ೧೨-೫೦ ಗಂಟೆಗೆ ಬಸವೇಶ್ವರ ಆಸ್ಪತ್ರೆ ಕಲಬುರಗಿ ಎಂ.ಐ.ಸಿ.ಯು. ವಾರ್ಡನಲ್ಲಿ ಮೃತಪಟ್ಟಿರುತ್ತಾನೆ. ನನ್ನ ಗಂಡ ಪಾಪಯ್ಯ ಇವರು ಕುಡಿದ ಅಮಲಿನಲ್ಲಿ ತರಕಾರಿ ಹೊಡೆಯುವ ಕ್ರೀಮಿನಾಷಕ ಔಷಧಿ ಸೇವನೆ ಮಾಡಿ ಮೃತಪಟ್ಟಿರುತ್ತಾನೆ. ನನ್ನ ಗಂಡ ಮರಣದಲ್ಲಿ ಯಾರ ಮೇಲೆ ಸಂಶಯ ಮತ್ತು ದೂರು ಇರುವುದಿಲ್ಲಾ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಿ ನನ್ನ ಗಂಡ ಮೃತ ದೇಹ ಅಂತ್ಯಕ್ರಿಯೆ ಕುರಿತು ನನಗೆ ಒಪ್ಪಿಸಲು ಕೋರಲಾಗಿದೆ.  ಸ್ವೀಕರಿಸಿಕೊಂಡೆನು. ಸದರ ದೂರಿನ ಅಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 28-04-2022 11:59 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080