ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್ ಠಾಣೆ-೨ :- ದಿನಾಂಕ 27-03-2022 ರಂದು ೫:೩೦ ಪಿ.ಎಮ್ ಕ್ಕೆ ಶ್ರೀ. ಮಲ್ಲಿಕಾರ್ಜುನ ತಂದೆ ಭೀಮರಾಯ ಹರವಾಳಕರ ವಯಃ ೪೦ ವರ್ಷ ಜಾತಿಃ ಲಿಂಗಾಯತ ಉಃ ಟೇಲರ ಕೆಲಸ ಸಾಃ ಪ್ರಕೃತಿ ಕಾಲೋನಿ ಹೀರಾಪೂರ ರೈಲ್ವೆ ಗೇಟ ಹತ್ತೀರ ಕಲಬುರಗಿ  ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಂಶವೆನೆಂದರೆ, ನಮಗೆ ಅಂಕೀತಾ ೧೨ ವರ್ಷ ಮತ್ತು ಮನೀಶ ೯ ವರ್ಷದ ಇಬ್ಬರು ಮಕ್ಕಳಿರುತ್ತಾರೆ. ಮನೀಶ ಈತನು ೪ನೇ ತರಗತಿಯಲ್ಲಿ ಓದಿಕೊಂಡಿದ್ದನು.  ಹೀಗಿದ್ದು, ಇಂದು ದಿನಾಂಕ ೨೭/೦೩/೨೦೨೨ ರಂದು ನಾನು ಮತ್ತು ನನ್ನ ಹೆಂಡತಿ ಕಲ್ಪನಾ ಇಬ್ಬರು ಎಂದಿನಂತೆ ನಮ್ಮ ಕೆಲಸಕ್ಕೆ ಬಿದ್ದಾಪೂರ ಕಾಲೋನಿಗೆ ಬಂದಿದ್ದು, ಸಾಯಂಕಾಲ ೪:೨೦ ಗಂಟೆ ಸುಮಾರಿಗೆ ನನ್ನ ಹೆಂಡತಿಯ ತಂಗಿ ಮಲ್ಲಮ್ಮ ಹಾಗು ಅವರ ತಮ್ಮ ಸುರೇಶ ಇಬ್ಬರು ಫೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ, ಈಗ ತಾನೆ ಸಾಯಂಕಾಲ ೪:೧೦ ಗಂಟೆ ಸುಮಾರಿಗೆ ತಾವು ಹಾಗು ಮನೀಶ ಕೂಡಿಕೊಂಡು ಮನೆಯಿಂದ ಟೇಲರ ಅಂಗಡಿಗೆ ಬರುವ ಕುರಿತು ಬಿದ್ದಾಪೂರ ಕಾಲೋನಿಯ ಓವರ ಬ್ರಿಡ್ಜಿನ ಇಳಕಿನ ಕೆಳಭಾಗದಲ್ಲಿ ರೋಡು ದಾಟುತ್ತಿರುವಾಗ ಹೀರಾಪೂರ ರಿಂಗರೋಡ ಓವರ ಬ್ರಿಡ್ಜಿನ ಮೇಲಿಂದ ಒಂದು ಟಿಪ್ಪರ ನಂ. ಕೆಎ ೩೩ ಎ ೫೬೬೨ ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರೋಡು ದಾಟುತ್ತಿರುವ ಮನೀಶನಿಗೆ ಆ ಟಿಪ್ಪರ ಚಾಲಕನು ಡಿಕ್ಕಿ ಹೊಡೆದಿದ್ದರಿಂದ ಆತನು ರೋಡಿಗೆ ಬಿದ್ದಾಗ, ಆತನ ಹೊಟ್ಟೆಯ ಮತ್ತು ಟೊಂಕದ ಮೇಲಿಂದ ಟೈರು ಹಾಯ್ದು ಹೋಗಿದ್ದರಿಂದ ಭಾರಿ ಪ್ರಮಾಣದ ಗಾಯಗಳಾಗಿರುತ್ತವೆ. ಆತನಿಗೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಯುನೈಟೆಡ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿರುತ್ತೆವೆ ಅಂತಾ ತಿಳಿಸಿದಕ್ಕೆ ನಾನು ಮತ್ತು ನನ್ನ ಹೆಂಡತಿ ಗಾಬರಿಗೊಂಡು ಯುನೈಟೆಡ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಮಗನ ಹೊಟ್ಟೆಯಿಂದ ಮತ್ತು ಟೊಂಕದ ಭಾಗ ಮತ್ತು ಗುಪ್ತಾಂಗದ ಹತ್ತಿರ ಭಾರಿಗಾಯವಾಗಿ ಮೌಂಸ ಖಂಡ ಹಾಗು ಕರಳು ಹೊರಬಂದಿದ್ದು, ಅಲ್ಲಿಯೆ ಇರುವ ಹೆಂಡತಿ ತಂಗಿ ಮಲ್ಲಮ್ಮ, ತಮ್ಮ ಸುರೇಶ ಇವರು ಮೇಲಿನಂತೆ ತಿಳಿಸಿ, ಅಪಘಾತದ ನಂತರ ಟಿಪ್ಪರ ಚಾಲಕ ಓಡಿ ಹೋಗಿದ್ದು, ಆತನಿಗೆ ನೋಡಿರುತ್ತೆವೆ ಮತ್ತು ಘಟನೆಯನ್ನು ಗುರುರಾಜ ತಂದೆ ಶರಣಪ್ಪಾ ಗುಡಿ ಎಂಬುವರು ಕೂಡಾ ನೋಡಿರುತ್ತಾರೆ. ಈಗ ೪:೪೦ ಗಂಟೆ ಸುಮಾರಿಗೆ ಯುನೈಟೆಡ ಆಸ್ಪತ್ರೆ ಹತ್ತೀರ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾನೆ.  ಕಾರಣ ಟಿಪ್ಪರ ನಂ. ಕೆಎ ೩೩ ಎ ೫೬೬೨ ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ಬಿದ್ದಾಪೂರ ಕಾಲೋನಿಯ ಓವರ ಬ್ರಿಡ್ಜ ಇಳಿಕಿನಲ್ಲಿ ನಡೆಯಿಸಿಕೊಂಡು ಬಂದು ನನ್ನ ಮಗ ಮನೀಶ ಈತನಿಗೆ ಡಿಕ್ಕಿ ಹೊಡೆದು ಮುಂದಿನ ಟೈರ ಮೈಮೆಲಿಂದ ಹೋಗಿದ್ದರಿಂದ ಈ ಮೇಲಿನಂತೆ ಘಟನೆ ಜರುಗಿದ್ದು, ಆತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಹೇಳಿಕೆ ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 08-04-2022 01:11 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080