Feedback / Suggestions

ಸಂಚಾರಿ ಪೊಲೀಸ್ ಠಾಣೆ-೨ :- ದಿನಾಂಕ 27-03-2022 ರಂದು ೫:೩೦ ಪಿ.ಎಮ್ ಕ್ಕೆ ಶ್ರೀ. ಮಲ್ಲಿಕಾರ್ಜುನ ತಂದೆ ಭೀಮರಾಯ ಹರವಾಳಕರ ವಯಃ ೪೦ ವರ್ಷ ಜಾತಿಃ ಲಿಂಗಾಯತ ಉಃ ಟೇಲರ ಕೆಲಸ ಸಾಃ ಪ್ರಕೃತಿ ಕಾಲೋನಿ ಹೀರಾಪೂರ ರೈಲ್ವೆ ಗೇಟ ಹತ್ತೀರ ಕಲಬುರಗಿ  ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಂಶವೆನೆಂದರೆ, ನಮಗೆ ಅಂಕೀತಾ ೧೨ ವರ್ಷ ಮತ್ತು ಮನೀಶ ೯ ವರ್ಷದ ಇಬ್ಬರು ಮಕ್ಕಳಿರುತ್ತಾರೆ. ಮನೀಶ ಈತನು ೪ನೇ ತರಗತಿಯಲ್ಲಿ ಓದಿಕೊಂಡಿದ್ದನು.  ಹೀಗಿದ್ದು, ಇಂದು ದಿನಾಂಕ ೨೭/೦೩/೨೦೨೨ ರಂದು ನಾನು ಮತ್ತು ನನ್ನ ಹೆಂಡತಿ ಕಲ್ಪನಾ ಇಬ್ಬರು ಎಂದಿನಂತೆ ನಮ್ಮ ಕೆಲಸಕ್ಕೆ ಬಿದ್ದಾಪೂರ ಕಾಲೋನಿಗೆ ಬಂದಿದ್ದು, ಸಾಯಂಕಾಲ ೪:೨೦ ಗಂಟೆ ಸುಮಾರಿಗೆ ನನ್ನ ಹೆಂಡತಿಯ ತಂಗಿ ಮಲ್ಲಮ್ಮ ಹಾಗು ಅವರ ತಮ್ಮ ಸುರೇಶ ಇಬ್ಬರು ಫೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ, ಈಗ ತಾನೆ ಸಾಯಂಕಾಲ ೪:೧೦ ಗಂಟೆ ಸುಮಾರಿಗೆ ತಾವು ಹಾಗು ಮನೀಶ ಕೂಡಿಕೊಂಡು ಮನೆಯಿಂದ ಟೇಲರ ಅಂಗಡಿಗೆ ಬರುವ ಕುರಿತು ಬಿದ್ದಾಪೂರ ಕಾಲೋನಿಯ ಓವರ ಬ್ರಿಡ್ಜಿನ ಇಳಕಿನ ಕೆಳಭಾಗದಲ್ಲಿ ರೋಡು ದಾಟುತ್ತಿರುವಾಗ ಹೀರಾಪೂರ ರಿಂಗರೋಡ ಓವರ ಬ್ರಿಡ್ಜಿನ ಮೇಲಿಂದ ಒಂದು ಟಿಪ್ಪರ ನಂ. ಕೆಎ ೩೩ ಎ ೫೬೬೨ ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರೋಡು ದಾಟುತ್ತಿರುವ ಮನೀಶನಿಗೆ ಆ ಟಿಪ್ಪರ ಚಾಲಕನು ಡಿಕ್ಕಿ ಹೊಡೆದಿದ್ದರಿಂದ ಆತನು ರೋಡಿಗೆ ಬಿದ್ದಾಗ, ಆತನ ಹೊಟ್ಟೆಯ ಮತ್ತು ಟೊಂಕದ ಮೇಲಿಂದ ಟೈರು ಹಾಯ್ದು ಹೋಗಿದ್ದರಿಂದ ಭಾರಿ ಪ್ರಮಾಣದ ಗಾಯಗಳಾಗಿರುತ್ತವೆ. ಆತನಿಗೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಯುನೈಟೆಡ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿರುತ್ತೆವೆ ಅಂತಾ ತಿಳಿಸಿದಕ್ಕೆ ನಾನು ಮತ್ತು ನನ್ನ ಹೆಂಡತಿ ಗಾಬರಿಗೊಂಡು ಯುನೈಟೆಡ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಮಗನ ಹೊಟ್ಟೆಯಿಂದ ಮತ್ತು ಟೊಂಕದ ಭಾಗ ಮತ್ತು ಗುಪ್ತಾಂಗದ ಹತ್ತಿರ ಭಾರಿಗಾಯವಾಗಿ ಮೌಂಸ ಖಂಡ ಹಾಗು ಕರಳು ಹೊರಬಂದಿದ್ದು, ಅಲ್ಲಿಯೆ ಇರುವ ಹೆಂಡತಿ ತಂಗಿ ಮಲ್ಲಮ್ಮ, ತಮ್ಮ ಸುರೇಶ ಇವರು ಮೇಲಿನಂತೆ ತಿಳಿಸಿ, ಅಪಘಾತದ ನಂತರ ಟಿಪ್ಪರ ಚಾಲಕ ಓಡಿ ಹೋಗಿದ್ದು, ಆತನಿಗೆ ನೋಡಿರುತ್ತೆವೆ ಮತ್ತು ಘಟನೆಯನ್ನು ಗುರುರಾಜ ತಂದೆ ಶರಣಪ್ಪಾ ಗುಡಿ ಎಂಬುವರು ಕೂಡಾ ನೋಡಿರುತ್ತಾರೆ. ಈಗ ೪:೪೦ ಗಂಟೆ ಸುಮಾರಿಗೆ ಯುನೈಟೆಡ ಆಸ್ಪತ್ರೆ ಹತ್ತೀರ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾನೆ.  ಕಾರಣ ಟಿಪ್ಪರ ನಂ. ಕೆಎ ೩೩ ಎ ೫೬೬೨ ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ಬಿದ್ದಾಪೂರ ಕಾಲೋನಿಯ ಓವರ ಬ್ರಿಡ್ಜ ಇಳಿಕಿನಲ್ಲಿ ನಡೆಯಿಸಿಕೊಂಡು ಬಂದು ನನ್ನ ಮಗ ಮನೀಶ ಈತನಿಗೆ ಡಿಕ್ಕಿ ಹೊಡೆದು ಮುಂದಿನ ಟೈರ ಮೈಮೆಲಿಂದ ಹೋಗಿದ್ದರಿಂದ ಈ ಮೇಲಿನಂತೆ ಘಟನೆ ಜರುಗಿದ್ದು, ಆತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಹೇಳಿಕೆ ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 08-04-2022 01:11 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080