ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ – 2 :- ದಿನಾಂಕ: 27-02-2023 ರಂದು ಬೆಳಿಗ್ಗೆ 08-30 ಗಂಟೆಗೆ ಸಯ್ಯದ ಅಬ್ಬಾಸ ತಂದೆ ಸಯ್ಯದ ಹುಸೆನ ಸೊಂದೆಸಾಬ ವ: 40 ವರ್ಷ ಉ: ಪೆಟಿಂಗ ಕೆಲಸ ಸಾ:ಸೋನಿಯಾ ಗಾಂಧಿ ಕಾಲೊನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸಾರಂಶವೆನೆಂದರೆ, ನಮ್ಮ ತಂದೆ ತಾಯಿಯವರಗೆ ನಾವು ಮುರು ಜನ ಹೆಣ್ಣು ಮಕ್ಕಳು ಮತ್ತು ಇಬ್ಬರೂ ಗಂಡು ಮಕ್ಕಳಿದ್ದು ಸಯ್ಯದ ಖಾಸಿಂ ವ: 35 ವರ್ಷದ ತಮ್ಮನಿದ್ದು ಇತನು ಬೇಕರಿಯಲ್ಲಿ ಕೆಲಸ ಮಾಡಿಕೊಂಡು ಇದ್ದನು. ಇತನಿಗೆ ಅಜರಾ ಬೇಗಂ ಎಂಬ ಹೆಂಡತಿ ಹಾಗೂ ಸಯ್ಯದ ಅಯಾನ ಹಾಗೂ ಸಯ್ಯದ ಆರಿಸಾ ಮತ್ತು ಸಯ್ಯದ ಅಫಾನ ಎಂಬ ಮೂರು ಜನ ಚಿಕ್ಕ ಚಿಕ್ಕ ಮಕ್ಕಳಿರುತ್ತಾರೆ. ಹೀಗಿದ್ದು, ಎಂದಿನಂತೆ ತಮ್ಮನ್ನು ನಿನ್ನೆ ದಿನಾಂಕ: 26-02-2023 ರಂದು ತನ್ನ ಬೇಕರಿ ಕೆಸಲಕ್ಕೆ ಹೋಗುತ್ತೆನೆ ಎಂದು ಮನೆಯಿಂದ ಹೋಗಿದ್ದು ಇಂದು ದಿನಾಂಕ: 27-02-2023 ರಂದು ಬೆಳಿಗ್ಗೆ 6:00 ಗಂಟೆ ಸುಮಾರಿಗೆ ನಮ್ಮ ಓಣಿಯ ಮಹ್ಮದ ನಿಬಿಲಾಲ ಬಾಗವಾನ ಇತನು ನನಗೆ ಪೋನ ಮಾಡಿ ಮಾಹಿತ ತಿಳಿಸಿದ್ದೆನೆಂದರೆ ನಾನು ಕಾಯಪಲ್ಲೆ ತರುವ ಕುರಿತು ಸುಲ್ತಾನಪಪೂರ ಯಾರ್ಡಗೆ ಹೋಗಿ ಮರಳಿ ಈಗ 5:30 ಗಂಟೆಗೆ ಬರುವಾಗ ರಿಂಗ ರೋಡ ರಾಮ ನಗರ ಕ್ರಾಸ ಕಾಜಲ ವೈಜಲ ವೈನ ಶಾಪದ ಸಮೀಫದ ಬಯಲು ಜಾಗದಲ್ಲಿ ಒಬ್ಬ ಮನುಷ್ಯನು ಬಿದ್ದಿದ್ದು ಕಂಡು ನೋಡಲಾಗಿ ಆತನು ನಿಮ್ಮ ತಮ್ಮ ಸಯ್ಯದ ಖಾಸಿಂ ತಂದೆ ಸಯ್ಯದ ಹುಸೇನ ಇತನಿದ್ದು ಇತನ ಹೊಟ್ಟೆಯ ಕೆಳ ಭಾಗದಿಂದ ತೊಡೆಯ ಭಾಗದವರೆಗೆ ಭಾರಿ ಪ್ರಮಾಣದ ರಕ್ತಗಾಯ ಮತು ಮೌಂಸ ಹೊರ ಬಂದಿದ್ದು ಅಲ್ಲದೆ ಎಡಗೈ ಮೊಳಕೈ ಕೆಳಭಾಗ ಮುರಿದು ಎಲಬು ಕಾಣುತ್ತಿದ್ದು. ಇಂದು ದಿನಾಂಕ: 27-02-2023 ರಂದು ಮದ್ಯ ರಾತ್ರಿ 00-30 ಗಂಟೆಯಿಂದ ಬೆಳಿಗ್ಗಿನ ಜಾವ 4-00 ಗಂಟೆಯ ಅವಧಿಯಲ್ಲಿ ಯಾವುದೇ ಒಂದು ಭಾರಿ ವಾಹನವು ಇತನ ದೇಹದ ಮೇಲಿಂದ ಹೋಗಿ ಭಾರಿ ರಕ್ತಸ್ರಾವವಾಗಿ ಸ್ಥಳದಲ್ಲಿ ಮೃತಪಟ್ಟಿರುವದಾಗಿ ಕಂಡು ಬಂದಿರುತ್ತದೆ ಅಂತಾ ತಿಳಿಸಿದ್ದಕ್ಕೆ ಕೂಡಲೇ ನಾನು ಗಾಬರಿಗೊಂಡು ನನ್ನ ಅತ್ತಿಗೆ ಅಜನಾ ಬೇಗಂ ಇವಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಮ್ಮ ಸಯ್ಯದ ಖಾಸಿಂ ಇತನು ಸ್ಥಳದಲ್ಲಿ ಮೃತಪಟ್ಟಿದ್ದು ಮೇಲಿನಂತೆ ಘಟನೆ ಜರುಗಿರಬಹುದೆಂದು ಕಂಡು ಬಂದಿರುತ್ತದೆ. ಅಪಘಾತ ಪಡಿಸಿದ ವಾಹನದ ಚಾಲಕನು ಘಟನೆ  ನಂತರ ತನ್ನ ವಾಹನದೊಂದಿಗೆ ಓಡಿ ಹೋಗಿದ್ದು ಇರುತ್ತದೆ. ಕಾರಣ ನನ್ನ ತಮ್ಮ ಸಯ್ಯದ ಖಾಸಂ ಇತನು ಬೇಕರಿ ಕೆಲಸಕ್ಕೆ ಹೋಗಿ ರಾಮ ನಗರ ರಿಂಗರೋಡನ ಕಾಜಲ ವೈನ ಶಾಪದ ಸಮೀಪದಲ್ಲಿ ಹೋದಾಗ ಯಾವುದೊ ಒಂದು ಬಾರಿ ವಾಹನವು ಇತನ ದೇಹದ ಮೈಮೇಲೆ ಹೋಗಿ ಭಾರಿ ರಕ್ತಗಾಯವಾಗಿ ಅಪಘಾತ ಸ್ಥಳದಲ್ಲಿ ಮೃತಪಟ್ಟಿದ್ದು ಅಪಘಾತ ಪಡಿಸಿದ ಚಾಲಕ ಮತು ಆ ವಾಹನವನ್ನು ಪತ್ತೆ ಮಾಡಿ ನ್ಯಾಯ ಕೊಡಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ – 2 :- ದಿನಾಂಕ: 27-02-2023 ರಂದು ಮದ್ಯಾಹ್ನ 12:00 ಗಂಟೆಗೆ ಶ್ರೀ ಸಂತೋಷ ಎ.ಎಸ.ಐ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ: 27-02-2023 ರಂದು ಬೆಳಿಗ್ಗೆ ಸೇಡಂ ರಿಂಗ ರೋಡದಿಂದ ಹುಮನಬಾದ ರಿಂಗ ರೋಡ ವರೆಗೆ ನನಗೆ ಪೆಟ್ರೊಲಿಂಗ ಕರ್ತವ್ಯಕ್ಕೆ ನೇಮಿಸಿದ್ದರಿಂದ ನಾನು ಹುಮನಾಬಾದ ರಿಂಗ ರೋಡದಿಂದ ಸೇಡಂ ರಿಂಗ ರೋಡ ಕಡೆಗೆ ಪೆಟ್ರೊಲಿಂಗ ಕರ್ತವ್ಯ ನಿರ್ವಹಿಸುತ್ತಾ ಸೇಡಂ ರಿಂಗ ರೋಡ ಹತ್ತೀರ ಬಂದೆನು ಸೇಡಂ ರಿಂಗ ರೋಡ ಖರ್ಗೆ ಪೆಟ್ರೊಲ ಪಂಪ ಹತ್ತೀರ ಸಂಚಾರ ಸಿಬ್ಬಂದಿಗಳಾದ ಶ್ರೀ ಶಂಕರಲಿಂಗ ಸಿಪಿಸಿ-118 ಹಾಗೂ ಶ್ರೀ ಚಿದಾನಂದ ಸಿಪಿಸಿ-394 ರವರು ಕರ್ತವ್ಯದ ಮೇಲೆ ಇದ್ದರು. ಸೇಡಂ ರಿಂಗ ರೋಡ ಹತ್ತೀರ ಬರುವ ಖರ್ಗೆ ಪೆಟ್ರೊಲ ಪಂಪ ಪಕ್ಕದ ರೋಡ ಮೇಲೆ ಒಬ್ಬ ಐಚರ ಗೂಡ್ಸ ಲಾರಿ ನಂಬರ ಎಮ.ಹೆಚ್-18/ಬಿ.ಜಿ-7056 ನೇದ್ದರ ಚಾಲಕನು ಸೇಡಂ ಕಡೆಯಿಂದ ಹುಮನಾಬಾದ ರಿಂಗ ರೋಡ ಕಡೆಗೆ ಹೋಗದೆ ಬೆಳಿಗ್ಗೆ 11-00 ಗಂಟೆ ಸುಮಾರಿಗೆ ತನ್ನ ವಾಹನವನ್ನು ನಿಷ್ಕಾಳಿಜಿತನದಿಂದ ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡತಡೆ ಆಗುವಂತೆ ರೋಡ ಮೇಲೆ ತನ್ನ ವಾಹನವನ್ನು ನಿಲ್ಲಿಸಿ ಹೋಗಿದ್ದು ಸದರಿಯವನನ್ನು ಪತ್ತೆ ಮಾಡಿ ಆತನ ಹೆಸರು ವಿಚಾರಿಸಲು ಆತನ ಹೆಸರು ಬಿರೇಂದ್ರ ತಂದೆ ದೂಫನಾಥ ಜಾಧವ ವ: 50 ವರ್ಷ ಉ: ಐಚರ ಗೂಡ್ಸ ಚಾಲಕ ಜಾ: ಹಿಂದು ಯಾಧವ ಸಾ: ಎಚ್.ಆರ್ ಚಮರಿಯಾ ರೋಡ ಗೋಲಾಬಾಡಿ ಹವರಾ ಪಶ್ಚೀಮ ಬಂಗಾಳ ರಾಜ್ಯ ಅಂತಾ ತಿಳಿಸಿದೆನು. ಸದರಿಯವನು ಕಲಬುರಗಿಯಿಂದ ತೆಲಂಗಾಣ ಸೇಡಂ, ಚಿಂಚೊಳಿ ಪಟ್ಟಣ್ಣಗಳಿಗೆ ಹೋಗುವ ಮುಖ್ಯ ರಸ್ತೆಯ ಮೇಲೆ ಬಿರೇಂದ್ರ ಇತನು ತನ್ನ ಭಾರಿ ವಾಹನವನ್ನು ರೋಡ ಮೇಲೆ ನಿಲ್ಲಿಸಿ ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡತಡೆ ಮಾಡಿದ್ದು ಸದರಿ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ – 2 :- ದಿನಾಂಕ: 27-02-2023 ರಂದು ಸಾಯಂಕಾಲ 6:30 ಗಂಟೆಗೆ ಶ್ರೀಮತಿ ಸಾವಿತ್ರಿ ಗಂಡ ಕೃಷ್ಣಾ ಚವ್ಹಾಣ ವಯಃ 28 ವರ್ಷ ಜಾತಿಃ ಲಂಬಾಣಿ ಉಃ ಬಿಗಾರಿ ಕೆಲಸ ಸಾಃ ತರಿ ತಾಂಡಾ ಶಹಾಬಾದ ಹಾ.ವಃ ಶ್ರೀನಿವಾಸ ಸರಡಗಿ ತಾಂಡಾ ತಾ.ಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ 26/02/2023 ರಂದು ನನ್ನ ಗಂಡನವರ ಕಾಕಾನವರಿಗೆ ಕಣ್ಣಿನ ಆಪರೇಷನ ಆಗಿರುವುದರಿಂದ ನಾನು ಮತ್ತು ಅವರು ಮೋಟರ ಸೈಕಲ ನಂ. ಕೆಎ 32 ಇ.ಜೆ 3627 ನೇದ್ದರ ಮೇಲೆ ಕಲಬುರಗಿಗೆ ಬಂದು ಆಸ್ಪತ್ರೆಯಲ್ಲಿ ಮಾತನಾಡಿ ನಾನು ಮರಳಿ ಮಧ್ಯಾಹ್ನಕ್ಕೆ ತಾಂಡಾಕ್ಕೆ ಹೋದೆನು. ನನ್ನ ಗಂಡನವರು ರಾತ್ರಿ ಊರಿಗೆ ಬರುವುದಾಗಿ ತಿಳಿಸಿದ್ದು, ಮುಂದೆ ರಾತ್ರಿ 8:30 ಗಂಟೆ ಸುಮಾರಿಗೆ ಅಂಬುಲೇನ್ಸನ ಚಾಲಕನು ನನ್ನ ಗಂಡನವರ ಮೊಬೈಲ ಫೋನಿನಿಂದ ನನಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ, ಈಗ ರಾತ್ರಿ 8:00 ಗಂಟೆ ಸುಮಾರಿಗೆ ಸೇಡಂ ರೋಡಿನ ಅಶೋಕ ಲೇಲೈಂಡ ಶೋ ರೂಮಿನ ಹತ್ತೀರ ಇರುವ ಕ್ರಿಸ್ಟಲ ಪಾರ್ಕದ ಹತ್ತೀರ ಈ ಫೋನ ಇರುವರು ಮತ್ತು ಇನ್ನೊಂದು ಮೋಟರ ಸೈಕಲದ ಮಧ್ಯೆ ಎಕ್ಸಿಡೆಂಟ ಆಗಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಗೆ ತರುತ್ತಿರುತ್ತೆವೆ ಅಂತಾ ತಿಳಿಸಿದ್ದಕ್ಕೆ ನಾನು ಆಸ್ಪತ್ರೆಗೆ ಬಂದು ಗಂಡನವರಿಗೆ ನೋಡಲು ಹಣೆಯ ಭಾಗಕ್ಕೆ, ತಲೆಯ ಭಾಗಕ್ಕೆ ಹಾಗು ಮುಖದ ಭಾಗಕ್ಕೆ ಗಾಯವಾಗಿದ್ದು, ನನ್ನ ಗಂಡನವರಿಗೆ ವಿಚಾರಿಸಲು ಸರಿಯಾಗಿ ಮಾತನಾಡಲಿಲ್ಲಾ. ಮುಂಜಾನೆ ತಿಳಿಸಿದ್ದೆನೆಂದರೆ ತಾನು ಕಲಬುರಗಿಯಿಂದ ಊರಿಗೆ ಬರುವಾಗ ರಾತ್ರಿ 8:00 ಗಂಟೆ ಸುಮಾರಿಗೆ ಎದುರುಗಡೆಯಿಂದ ಇನ್ನೊಂದು ಮೋಟರ ಸೈಕಲ ನಂ. ಕೆಎ 05 ಕೆ.ಜಿ 8497 ನೇದ್ದರ ಚಾಲಕನು ಬಂದು ಪರಸ್ಪರವಾಗಿ ಅಪಘಾತವಾಗಿದ್ದಕ್ಕೆ ಇಬ್ಬರು ಗಾಯಗೊಂಡಿರುತ್ತೆವೆ ಅಂತಾ ತಿಳಿಸಿದರು. ಆತನ ಹೆಸರು ವಿಚಾಣೆಯಲ್ಲಿ ಮಶಾಕ ತಂದೆ ಫತ್ರುಶೇಖ ಸಾಃ ಶ್ರೀನಿವಾಸ ಸರಡಗಿ ಅಂತಾ ತಿಳಿದು ಬಂದಿರುತ್ತದೆ. ಕಾರಣ ನನ್ನ ಗಂಡ ಮತ್ತು ಮಶಾಕ ಶೇಖ ಇಬ್ಬರು ಸೇಡಂ ರೋಡಿನ ಕ್ರಿಸ್ಟಲ ಪಾರ್ಕನ ಹತ್ತೀರ ಮಧ್ಯ ರೋಡಿನ ಮೇಲೆ ಪರಸ್ಪರವಾಗಿ ಅಪಘಾತ ಪಡಿಸಿಕೊಂಡಿದ್ದರಿಂದ ಇಬ್ಬರು ಭಾರಿಗಾಯಗೊಂಡಿದ್ದು, ಈ ವಿಷಯದಲ್ಲಿ ಇಬ್ಬರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ: 14-02-2023 ರಂದು ಸಂಜೆ 4:00 ಗಂಟೆಗೆ ಫಿರಾದಿಯು ವಿಶ್ವರಾಧ್ಯ ದೇವಸ್ಥಾನದ ಹತ್ತಿರ ಇರುವ ತಮ್ಮ ಮನೆಗೆ ಬಾಗಿಲು ಬೀಗ ಹಾಕಿಕೊಂಡು ನಿಂಬರಗಾ ಗ್ರಾಮದಲ್ಲಿ ಸೇವಲಾಲ ಜಯಂತಿ ಪ್ರಯುಕ್ತ ಹೋಗಿದ್ದು ದಿನಾಂಕ: 27-02-2023 ರಂದು ಬೆಳಗ್ಗೆ 9:00 ಗಂಟೆಗೆ ಬಂದು ನೋಡಲು ಮನೆಯ ಬಾಗಿಲು ಬೀಗ ಮುರಿದಿದ್ದು ಸುಮಾರು 64,500/- ರೂ ಮೌಲ್ಯದ ಟಿವಿ, ಪ್ರಿಜ್, ಇತರೆ ವಸ್ತುಗಳನ್ನು ಕಳುವು ಮಾಡಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 27-02-2023 ರಂದು ಮಧ್ಯಾಹ್ನ 3:11 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ವಿಜಯಲಕ್ಷ್ಮೀ ಗಂಡ ಸಿದ್ರಾಮಪ್ಪ ಗಟಾಟೆ ವಯ:61ವರ್ಷ ಜಾ:ಲಿಂಗಾಯತ ಉ:ನಿವೃತ್ತ ನೌಕರ ಸಾ||ಮನೆ ನಂ 10-934/21/2B/17 ಮಹಾಲಕ್ಷ್ಮೀ ನಗರ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದರ ಸಾರಾಂಶವೆನೆಂದರೆ, ನನ್ನ ಮಗನಾದ ವಿವೇಕ ಗಟಾಟೆ ಇವರ ಹೆಸರಿನಲ್ಲಿ ಒಂದು ಹೊಂಡಾ ಡಿಯೋ ಮೋಟಾರ್ ಸೈಕಲ್ ನಂ KA-32-EM-0022 ಇದ್ದು ಅದನ್ನು ನಾನು ನೆಡೆಸಿಕೊಂಡು ಹೋಗುತ್ತೇನೆ. ದಿನಾಂಕ: 28/01/2023 ರಂದು ಮಧ್ಯಾಹ್ನ 12:00 ಗಂಟೆ ಸುಮಾರಿಗೆ ಕಲಬುರಗಿ ನಗರದ ಟ್ಯಾಂಕ್ ಬಂಡ ರೋಡಿನಲ್ಲಿರುವ ಯಲ್ಲಮ್ಮ ದೇವಸ್ಥಾನದಲ್ಲಿ ನಮ್ಮ ಸಂಬಂಧಿಕರ ನಿಶ್ಚಿತಾರ್ತ ಕಾರ್ಯಕ್ರಮವು ಇರುವದರಿಂದ ಸದರಿ ಮೋಟಾರ್ ಸೈಕಲನ್ನು ಹೋಗಿ ಯಲ್ಲಮ್ಮ ದೇವಸ್ಥಾನದ ಮುಂದೆ ನಿಲ್ಲಿಸಿ ಒಳಗಡೆ ಹೋಗಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಮಧ್ಯಾಹ್ನ 2:30 ಗಂಟೆ ಸುಮಾರಿಗೆ ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲಾ, ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 27-02-2023 ರಂದು ಸಾಯಂಕಾಲ 4:00  ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಹ್ಮದ್ ಆರೀಫ್ ತಂದೆ ಮಹ್ಮದ್ ರಫಿ ವಯ:50 ವರ್ಷ ಜಾ:ಮುಸ್ಲಿಂ ಉ:ಡ್ರೈವರ್ ಸಾ||ಮದೀನಾ ಕಾಲೋನಿ ಎಮ್.ಎಸ್.ಕೆ ಮಿಲ್ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದರ ಸಾರಾಂಶವೆನೆಂದರೆ, ನನ್ನದೊಂದು ಸ್ವಂತ ಹೊಂಡಾ ಡಿಯೋ ಮೋಟಾರ್ ಸೈಕಲ್ ನಂ KA-32-EN-8596 ನೇದ್ದು ಇದ್ದು ಸದರಿ ಮೋಟಾರ್ ಸೈಕಲ್ ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲನ್ನು ದಿನಾಂಕ:02-01-2023 ರಂದು ಸಾಯಂಕಾಲ 7:00 ಗಂಟೆಯ ಸುಮಾರಿಗೆ ಕಲಬುರಗಿ ನಗರದ ಆರ್ಚಿಡ್ ಮಾಲ್ ಮುಂದುಗಡೆ ನಿಲ್ಲಿಸಿ ಮಾಲ್ ಒಳಗಡೆ ಹೋಗಿ ಸಾಮಾನುಗಳನ್ನು ಖರಿದಿ ಮಾಡಿಕೊಂಡು ಸಾಯಂಕಾಲ 7:45 ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 28-02-2023 12:44 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080