ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-1 :- ದಿನಾಂಕ 27-01-2023 ರಂದು ಬೆಳಿಗ್ಗೆ 7-45 ಗಂಟೆಗೆ ಖಾಸಗಿ ಬಸವೇಶ್ವರ ಆಸ್ಪತ್ರೆಯ ಓ.ಪಿ ಸಿಬ್ಬಂದಿಯವರು ರವರು ಠಾಣೆಗೆ ಪೋನ ಮಾಡಿ ಬೀರಪ್ಪಾ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಶ್ರೀ ಬೀರಪ್ಪಾ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ: 26-01-2023 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಎಸಬಿಟಿ ರೋಡಿಗೆ ಬರುವ ನಮ್ಮ ಮಡಿಕಲ್ ಶಾಪ ಬಂದ ಮಾಡಿ ಸಿಟಿ ಬಸ್ಸ ನಿಲ್ದಾಣ ಹತ್ತೀರ ಬರುವ ಖಾನಾವಳಿಯಿಂದ ಪಾರ್ಸಲ ಊಟ ತರುವ ಸಲುವಾಗಿ ಮೋಟಾರ ಸೈಕಲ ನಂಬರ ಕೆಎ-32/ಇಬಿ-3022 ನೇದ್ದನ್ನು ಚಲಾಯಿಸಿಕೊಂಡು ಸಿಟಿ ಬಸ್ಸ ನಿಲ್ದಾಣ ಹತ್ತೀರ ಬರುವ ಖಾನಾವಳಿಯಿಂದ ಊಟ ತಗೆದುಕೊಂಡು ಬಸವೇಶ್ವರ ಕಾಲೋನಿಯಲ್ಲಿರುವ ನಮ್ಮ ಮನೆಗೆ ಹೋಗುವ ಸಲುವಾಗಿ ನಾನು ಮೋಟಾರ ಸೈಕಲ ಚಲಾಯಿಸಿಕೊಂಡು ಜಗತ ಸರ್ಕಲ ಕಡೆಗೆ ಬರುವಾಗ ದಾರಿ ಮದ್ಯ ಜಿಲ್ಲಾ ಕೇಂದ್ರ ಗ್ರಂಥಾಲಯದ ಹತ್ತಿರ ನನ್ನ ಮೊಬಾಯಿಲ್ ಪೋನಿಗೆ ಕರೆ ಬಂದಿದ್ದರಿಂದ ನಾನು ರೋಡ ಪಕ್ಕದಲ್ಲಿ ಮೋಟಾರ ಸೈಕಲ ನಿಲ್ಲಿಸಿ ಮೋಟಾರ ಸೈಕಲ ಮೆಲೆ ಕುಳಿತು ಮಾತನಾಡುತ್ತೀರುವಾಗ ಕಾರ ನಂಬರ ಕೆಎ-32/ಪಿ-6510 ನೇದ್ದರ ಚಾಲಕನು ಜಗತ ಸರ್ಕಲ ಕಡೆಯಿಂದ ಸಿಟಿ ಬಸ್ಸ ನಿಲ್ದಾಣ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ಕಾರ ಅಲ್ಲೆ ಬಿಟ್ಟು ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 26-01-2023  ರಂದು ರಾತ್ರಿ ೮:೦೦ ಗಂಟೆಯಿಂದ ೧೧:೦೦ ಗಂಟೆಯ ವರೆಗೆ ಸದರಿ ಸರಕಾರಿ ತರ್ಪೇ ಫಿರ್ಯಾದಿದಾರರು  ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಸದರಿ ಎರಡು ರೆಸ್ಟೋರಂಟನ ಆರೋಪಿತರು ವಿನಾ ಕಾರಣ ಹೊಟೇಲ ವಿಷಯದಲ್ಲಿ ಪೊಲಿಸರ ಎದುರಲ್ಲೇ ಹೊಡೆಬಡೆದಾಟ ಮಾಡುತ್ತಿದಾಗ ಸದರಿಯವರು ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸ್ಟೇಷನ್‌ ಬಜಾರ ಪೊಲೀಸ ಠಾಣೆ :-  ದಿನಾಂಕ:27/01/2023 ರಂದು ಮದ್ಯಾಹ್ನ 04:00   ಗಂಟೆ ಸುಮಾರಿಗೆ ಠಾಣೆಯಲ್ಲಿದ್ದಾಗ ಮಾಹಿತಿ ತಿಳಿದು ಬಂದಿದ್ದೆನಂದರೆ, ಠಾಣಾ ವ್ಯಾಪ್ತಿಯ ಕೋರ್ಟ ಕ್ರಾಸ್ ಹತ್ತಿರ ಯಾರೋ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ರಸ್ತೆಯ ಮೇಲೆ ಹೋಗಿ ಬರುವ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳುತ್ತಾ ಹಣವನ್ನು ಪಡೆದುಕೊಂಡು ದೈವ ಲೀಲೆಯ ಮಟಕಾ ನಂಬರಗಳನ್ನು ಬರೆದುಕೊಂಡು ಚೀಟಿ ಕೊಡುತ್ತಿದ್ದಾನೆ ಅಂತ ಮಾಹಿತಿ ತಿಳಿದು ಬಂದ ಮೇರೆಗೆ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು ದಕ್ಷಿಣ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ನಾನು ಠಾಣೆಯ ಸಿಬ್ಬಂದಿಯಾದ, ಶಿವಾನಂದ ಹೆಚ್.ಸಿ 229, ರವರಿಗೆ ವಿಷಯ ತಿಳಿಸಿ ಮತ್ತು ಇಬ್ಬರು ಪಂಚರಾದ 1] ಶ್ರೀ ಜಾಪರಖಾನ ತಂದೆ ಅಮೀರಖಾನ ವಯ:-25 ವರ್ಷ ಉ:ಕೂಲಿ ಕೆಲಸ ಸಾ:ಹಮಲವಾಡಿ ಕಲಬುರಗಿ. 2].ಶ್ರೀ ಮಹ್ಮದ ಇರ್ಫಾನ ತಂದೆ ಅಬ್ದುಲ್ ಅಜೀಮ್ ವಯ:23 ವರ್ಷ ಉ:ಹಾಲಿನ ವ್ಯಾಪಾರ ಸಾ:ಸೈದುಮಿಯಾ ಕಂಪೌಂಡ ಸ್ಟೇಷನ ಏರಿಯಾ ಕಲಬುರಗಿ ಇವರನ್ನು ಕರೆಯಿಸಿ ದಾಳಿ ಬಗ್ಗೆ ತಿಳಿಸಿ ನಂತರ ಸಯಂಕಾಲ 04:30 ಗಂಟೆ ಸುಮಾರಿಗೆ ಖಾಸಗಿ ಮೋಟಾರ್ ಸೈಕಲಗಳ ಮೇಲೆ ಹೊರಟು ವಾಹನಗಳನ್ನು ಕೋರ್ಟ್ ಕ್ರಾಸ್ ಹತ್ತಿರ  ಗಲ್ಲಿಯಲ್ಲಿ ನಿಲ್ಲಿಸಿ ನಡೆದುಕೊಂಡು ಹೋಗಿ ಕೋರ್ಟ್ ಕ್ರಾಸ್ ಹತ್ತಿರ ಮರೆಯಲ್ಲಿ ನಿಂತು ಮದ್ಯಾಹ್ನ 04:45 ಗಂಟೆಯ ಸುಮಾರಿಗೆ ನೊಡಲು ಕೋರ್ಟ್ ಕ್ರಾಸ್ ಹತ್ತಿರ  ನಿಂತು ನೋಡಲು ಒಬ್ಬ ವ್ಯಕ್ತಿ ರಸ್ತೆಯ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳುತ್ತಾ ನಂಬರಗಳನ್ನು ಬರೆದುಕೊಂಡು ಒಂದು ಚೀಟಿಯು ಜನರಿಗೆ ಕೊಟ್ಟು ಇನ್ನೊಂದು ಚೀಟಿಯ ಮೇಲೆ ಮಟಕಾ ನಂಬರಗಳನ್ನು ಬರೆದುಕೊಡುತ್ತಿರುದನ್ನು ನೋಡಿ ಪಂಚರನ್ನು ತೊರಿಸಿ ಖಚಿತ ಪಡಿಸಿಕೊಸಿಕೊಂಡು ಸಿಬ್ಬಂದಿಯ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ಏಕಕಾಲಕ್ಕೆ ದಾಳಿ ಮಾಡಲು ಮಟಕಾ ನಂಬರಗಳನ್ನು ಬರೆಸುವವರು ಓಡಿ ಹೋಗಿದ್ದು, ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಹಿಡಿದು ಅಂಗ ಶೋಧನೆ ಮಾಡಿ ಹೆಸರು ಮತ್ತು  ವಿಳಾಸ ಕೇಳಲಾಗಿ ಅವನು ತನ್ನ ಹೆಸರು ಪ್ರಕಾಶ ತಂದೆ ಶರಣಪ್ಪ ಕಪನೂರ್ ವಯ: 35 ವರ್ಷ ಜಾ:ಎಸ್ ಸಿ(ಹೊಲೆಯ) ಉ:ಟೀ ಪಾಯಿಂಟ್ ಹೋಟೆಲ್ ವ್ಯಾಪಾರ ಸಾ:ಇಂದಿರಾ ನಗರ ಕಲಬುರಗಿ ಅಂತ ತಿಳಿಸಿದ್ದು ಇತನಿಗೆ ಚೆಕ್ ಮಾಡಲು ಇತನ ಹತ್ತಿರ ನಗದು ಹಣ 4105/- ರೂಗಳು ಒಂದು ಮಟಕಾ ಚೀಟಿ ಅ.ಕಿ:00/-, ಒಂದು ಬಾಲ್ ಪೆನ್ ಅ.ಕಿ:00/- ವಶಪಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ ಪೊಲೀಸ ಠಾಣೆ :-  ದಿನಾಂಕ: 27-01-2023  ರಂದು ರಾತ್ರಿ ೮:೩೦ ಗಂಟೆಗೆ ಫಿರ್ಯಾದಿದಾರರಾದ ಶ್ರೀ ನಿಂಗಣ್ಣ ತಂದೆ ಹನಮಂತರಾಯ ಸೋಮಜಾಳ ವಯ: ೨೯ ವರ್ಷ ಉ: ವ್ಯಾಪಾರ ಜಾ: ಗಾಣಿಗ ಸಾ: ಜೀರಟಗಿ ಗ್ರಾಮ ತಾ: ಜೇವರ್ಗಿ ಜಿ: ಕಲಬುರಗಿ ಮೊ ನಂ. 9686366417 ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ದೂರು ಅರ್ಜಿ ನೀಡಿದರ ಸಾರಾಂಶವೆನೆಂದರೆ, ನನ್ನ ಮಾಲಿಕತ್ವದ ಜೀರಟಗಿ ಗ್ರಾಮದಲ್ಲಿ ಸೋಮಜಾಳ ಜೀನಿಂಗ್ ಫ್ಯಾಕ್ಟರಿ (ಹತ್ತಿ ಫ್ಯಾಕ್ಟರಿ) ಇರುತ್ತದೆ. ನನ್ನದೊಂದು ಬಿಳಿ ಬಣ್ಣದ ಕೆಎ-೩೨ ಪಿ-೩೨೫೨ ಇನ್ನೋವಾ ಕ್ರಿಷ್ಟಾ ಕಾರ್ ಇರುತ್ತದೆ. ಕಲಬುರಗಿ ನಗರದಲ್ಲಿ ವಾಯು ಮಾಲಿನ್ಯ ಕಾರ್ಯಾಲಯದಲ್ಲಿ, ಚಾರ್ಟೆಡ್ ಅಕೌಂಟೆಂಟ್ ಹತ್ತಿರ ಕೆಲಸ ಇದ್ದ ಪ್ರಯುಕ್ತ ನಾನು ನನ್ನ ಫ್ಯಾಕ್ಟರಿಗೆ ಸಂಬಂದಿಸಿದ ನಮ್ಮ ಜಮೀನಿನ ಎನ್.ಎ. ರಜಿಸ್ಟರಗಳು, ಹತ್ತಿ ಫ್ಯಾಕ್ಟರಿಗೆ ಸಂಬಂದಿಸಿದ ದಾಖಲಾತಿಗಳು ಮತ್ತು ನನ್ನ ಕುಟುಂಬ ಸದಸ್ಯರ ಮೂಲ ಆಧಾರ ಕಾರ್ಡ, ಪ್ಯಾನಕಾರ್ಡ ಮತ್ತು ಎಲ್ಲಾ ಜೇರಾಕ್ಸ ದಾಖಲಾತಿಗಳು ಹಾಗೂ ಟೈಟಾನ ಕಂಪನಿಯ ಕೈಗಡಿಯಾರ ಅ.ಕಿ. ೧೦,೦೦೦/-ರೂ ಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡು ಕಾರಿನಲ್ಲಿ ಇಟ್ಟು ಇಂದು ದಿನಾಂಕ: 27-01-2023  ರಂದು ಬೆಳಿಗ್ಗೆ ೧೧:೦೦ ಗಂಟೆಗೆ ಜೀರಟಗಿ ಗ್ರಾಮದಿಂದ ನನ್ನ ಇನ್ನೋವಾ ಕ್ರೀಷ್ಟಾ ಕಾರಿನಲ್ಲಿ ಹೊರಟು ಜೇವರ್ಗಿಗೆ ಬಂದು ನನ್ನ ಖಾಸಗಿ ಕೆಲಸ ಮುಗಿಸಿಕೊಂಡು ಕಲಬುರಗಿ ನಗರಕ್ಕೆ ಬಂದು ನಗರದ ಬಿಗ್ ಬಜಾರ ಹತ್ತಿರ ಇರುವ ವಾಯು ಮಾಲಿನ್ಯ ಕಾರ್ಯಾಲಯಕ್ಕೆ ಹೋಗಿ ನನ್ನ ಹತ್ತಿ ಫ್ಯಾಕ್ಟರಿಯ ಕೆಲಸ ಮುಗಿಸಿಕೊಂಡು ಸಾಯಾಂಕಾಲ ೫:೧೦ ಗಂಟೆ ಸುಮಾರಿಗೆ ನಾನು ನನ್ನ ಕಾರನ್ನು ಸುಪರ ಮಾರ್ಕೆಟದ ಕಾಮತ್ ಹೊಟೇಲ ಎದುರುಗಡೆ ನಿಲುಗಡೆ ಮಾಡಿ ನಮ್ಮ ಚಾರ್ಟೆಡ್ ಅಕೌಂಟೆಂಟ್ ರವರ ಹತ್ತಿರ ಹೋಗಿ ನನ್ನ ವ್ಯಾಪಾರಕ್ಕೆ ಸಂಬಂದಪಟ್ಟ ಕೆಲಸಗಳನ್ನು ಮುಗಿಸಿಕೊಂಡು, ಸಾಯಾಂಕಾಲ ೭:೧೦ ಗಂಟೆ ಸುಮಾರಿಗೆ ಕಾಮತ್ ಹೊಟೇಲ ಎದುರುಗಡೆ ನಿಲ್ಲಿಸಿದ ನನ್ನ ಕಾರ ಹತ್ತಿರ ಬಂದಾಗ ಚಾಲಕನ ಹಿಂಬದಿಯ ಬಲಭಾಗದ ಕಿಟಕಿಯ ಗಾಜು ಒಡೆದಿದ್ದು ನಾನು ಗಾಬರಿಯಾಗಿ ನೋಡಲು ಕಾರಿನಲ್ಲಿದ್ದ ಎರಡು ಬ್ಯಾಗಗಳು ಇರಲಿಲ್ಲ. ಯಾರೋ ಅಪರಿಚಿತ ಕಳ್ಳರು ನನ್ನ ಇನ್ನೋವಾ ಕ್ರೀಷ್ಟಾ ಕಾರಿನ ಬಲಭಾಗದ ಕಿಟಕಿಯ ಗಾಜು ಒಡೆದು ಕಾರಿನಲ್ಲಿದ್ದ ಎರಡು ಬ್ಯಾಗಗಳನ್ನು ಕಳ್ಳತನ ಮಾಡಿಕೊಂಡಿಕೊಂಡು ಹೋಗಿದ್ದರು. ಕಾರಣ ಮಾನ್ಯರು ಕಳ್ಳತನ ಮಾಡಿದ ಅಪರಿಚಿತ ಕಳ್ಳರನ್ನು ಪತ್ತೆ ಹಚ್ಚಿ ನನ್ನ ಬ್ಯಾಗಗಳನ್ನು ಮರಳಿಸಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ ಪೊಲೀಸ ಠಾಣೆ :-   ದಿನಾಂಕ: 27-01-2023  ರಂದು ರಾತ್ರಿ ೯:೧೫ ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸಿದ್ದನಗೌಡ ತಂದೆ ಅಮೃತಗೌಡ ಪಾಟೀಲ ವಯ: ೩೪ ವರ್ಷ ಉ: ಫೈಯರ್ ಪಿಟಿಂಗ್ ಪ್ರಾಜೇಕ್ಟ್ ಮ್ಯಾನೇಜರ್ ಜಾ: ಲಿಂಗಾಯತ ಸಾ: ಪ್ಲಾಟ ನಂ. ೨೦ ಗಾಬರೆ ಲೇಔಟ ಹಳೆ ಜೇವರ್ಗಿ ರಸ್ತೆ ಕಲಬುರಗಿ ಮೊ ನಂ. 9535178999 ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ದೂರು ಅರ್ಜಿ ನೀಡಿದರ ಸಾರಾಂಶವೆನೆಂದರೆ, ನನ್ನದೊಂದು ಸಿಲ್ವರ್ ಗ್ರೇ ಬಣ್ಣದ ಸ್ಕಾರ್ಪಿಯೋ ಕಾರ್ ನಂ ಕೆಎ-೩೩ ಎಮ್-೧೪೧೪ ನೇದ್ದು ಇರುತ್ತದೆ. ನಾನು ಕಲಬುರಗಿ ನಗರದ ಜಯದೇವ ಆಸ್ಪತ್ರೆಯ ಹೊಸ ಕಟ್ಟಡದ ಕಾಮಗಾರಿಯಲ್ಲಿ ನಾನು ಫೈಯರ್ ಪಿಟಿಂಗ್ ಕೆಲಸದ ಪ್ರಾಜೇಕ್ಟ್ ಮ್ಯಾನೇಜರ್ ಅಂತ ಕೆಲಸ ಮಾಡಿಕೊಂಡಿರುತ್ತೇನೆ. ಜಯದೇವ ಆಸ್ಪತ್ರೆಯ ಹೊಸ ಕಟ್ಟಡಕ್ಕೆ ಸಂಬಂದಿಸಿದ ದಾಖಲಾತಿ ಮತ್ತು ನಗದು ಹಣ ೧೮,೦೦೦/-ರೂಪಾಯಿಗಳನ್ನು ನನ್ನ ಬ್ಯಾಗಿನಲ್ಲಿ ಹಾಕಿಕೊಂಡು ನನ್ನ ಕಾರನಲ್ಲಿ ಇಟ್ಟು ನಾನು ಇಂದು ದಿನಾಂಕ: ೨೭/೦೧/೨೦೨೩ ರಂದು ಸಾಯಾಂಕಾಲ ೩:೪೫ ಗಂಟೆ ಸುಮಾರಿಗೆ ನಾನು ನನ್ನ ಸ್ಕಾರ್ಪಿಯೋ ಕಾರ್‌ನಲ್ಲಿ ಮನೆಯಿಂದ ಹೊರಟು ಸಾಯಾಂಕಾಲ ೪:೦೦ ಗಂಟೆ ಸುಮಾರಿಗೆ ಕಲಬುರಗಿ ನಗರದ ಜಯದೇವ ಆಸ್ಪತ್ರೆಯ ಹೊಸ ಕಟ್ಟಡದ ಕಾಮಗಾರಿ ಹತ್ತಿರ ಬಂದು ನಾನು ನನ್ನ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ನಾನು ಕೆಲಸ ನಡೆದ ಸ್ಥಳಕ್ಕೆ ಹೋಗಿ ಅಲ್ಲಿ ಕೆಲಸ ಮಾಡುವವರನ್ನು ಮಾತಾನಾಡಿಸಿ ಕೆಲಸವನ್ನು ಪರೀಶಿಲಿಸಿ ಮರಳಿ ಸಾಯಾಂಕಾಲ ೬:೩೦ ಗಂಟೆ ಸುಮಾರಿಗೆ ನನ್ನ ಕರ ಹತ್ತಿರ ಬಂದಾಗ ನನ್ನ ಕಾರಿನ ಚಾಲಕನ ಬಲಭಾಗದ ಕಿಟಕಿಯ ಗಾಜು ಒಡೆದಿದ್ದು ನಾನು ಗಾಬರಿಯಾಗಿ ನೋಡಲು ಕಾರಿನಲ್ಲಿದ್ದ ನನ್ನ ಬ್ಯಾಗ ಇರಲಿಲ್ಲ. ಯಾರೋ ಅಪರಿಚಿತ ಕಳ್ಳರು ನನ್ನ ಸ್ಕಾರ್ಪಿಯೋ ಕಾರಿನ ಚಾಲಕನ ಬಲಭಾಗದ ಕಿಟಕಿಯ ಗಾಜು ಒಡೆದು ಕಾರಿನಲ್ಲಿದ್ದ ಬ್ಯಾಗನ್ನು ಕಳ್ಳತನ ಮಾಡಿಕೊಂಡಿಕೊಂಡು ಹೋಗಿದ್ದರು. ನಾನು ಜಯದೇವ ಆಸ್ಪತ್ರೆಯ ಹೊಸ ಕಟ್ಟಡಕ್ಕೆ ಸಂಬಂದಿಸಿದ ದಾಖಲಾತಿ ಮತ್ತು ನಗದು ಹಣ ೧೮,೦೦೦/-ರೂಪಾಯಿಗಳನ್ನು ಬ್ಯಾಗಿನಲ್ಲಿ ಹಾಕಿ ಕಾರಿನಲ್ಲಿ ಇಟ್ಟುಕೊಂಡು ನನ್ನ ಕಾರ್‌ನ್ನು ಜಯದೇವ ಆಸ್ಪತ್ರೆಯ ಹೊಸ ಕಟ್ಟಡದ ಕಾಮಗಾರಿ ಹತ್ತಿರ ಬಂದು ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಕಾಮಗಾರಿ ಪರಿಶೀಲಿಸಲು ಹೋದಾಗ ಸಾಯಾಂಕಾಲ ೪:೦೦ ಗಂಟೆಯಿಂದ ಸಾಯಾಂಕಾಲ ೬:೩೦ ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ನನ್ನ ಕಾರಿನ ಚಾಲಕನ ಬಲಭಾಗದ ಕಿಟಕಿಯ ಗಾಜು ಒಡೆದು ನನ್ನ ಬ್ಯಾಗನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಾರಣ ಮಾನ್ಯರು ಕಳ್ಳತನ ಮಾಡಿದ ಅಪರಿಚಿತ ಕಳ್ಳರನ್ನು ಪತ್ತೆ ಹಚ್ಚಿ ನನ್ನ ಬ್ಯಾಗನ್ನು, ನಗದು ಹಣ ೧೮೦೦೦ ರೂ ಹಣವನ್ನು ಮರಳಿಸಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ್‌ ಠಾಣೆ :-  ದಿನಾಂಕ 26-01-2023  ರಂದು ರಾತ್ರಿ ೧೦-೦೦ ಗಂಟೆಗೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯವರಾದ ೧)ಶ್ರೀ ಸಿದ್ರಾಮಯ್ಯ ಸಿಹೆಚಸಿ ೨೨೨ ೨) ಶ್ರೀ ಮೋಸಿನ ಸಿಪಿಸಿ ೨೮೫ ೩) ಶ್ರೀ ಅಶೋಕ ಸಿಪಿಸಿ ೦೬ ಇವರುಗಳನ್ನು ಜೊತೆಯಲ್ಲಿ ಕರೆದುಕೊಂಡು ಠಾಣಾ ವ್ಯಾಪಿಯಲ್ಲಿ ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಪೆಟ್ರೋಲಿಂಗ ಕರ್ತವ್ಯ ನಿರ್ವಹಿಸುತ್ತಾ ಇದ್ದಾಗ, ಶಹಾಬಜಾರ ನಾಕಾ ಕಡೆ ಪೆಟ್ರೋಲಿಂಗ ಮಾಡುತ್ತಾ ರಾತ್ರಿ ೧೦:೪೫ ಗಂಟೆಗೆ ಶಹಾಬಜಾರ ಸುಭಾಷ ನಗರದಿಂದ-ವಡ್ಡರಗಲ್ಲಿ ಶಹಾಬಜಾರ ಕಡೆ ಹೋಗುವ ರೋಡ ಕಡೆಯಿಂದ ಅತಿ ಹೆಚ್ಚು ಶಬ್ದ ಮಾಡಿ ಸಾರ್ವಜನಿಕರಿಗೆ ಉಪದ್ರವವಾಗುವ ಹಾಗೇ ಡಿ.ಜೆ. ಸೌಂಡ ಸಿಸ್ಟಮ್ ಹಚ್ಚಿದ್ದು ಕೇಳಿ ಅಲ್ಲಿಗೆ ನಾನು ಮತ್ತು ಈ ಮೇಲಿನ ಎಲ್ಲಾ ಸಿಬ್ಬಂದಿಯವರು ಕೂಡಿಕೊಂಡು ರಾತ್ರಿ ೧೧-೦೦ ಗಂಟೆಗೆ ಸ್ಥಳಕ್ಕೆ ಹೋದಾಗ, ಕಲಬುರಗಿ ನಗರದ ಶಹಾಬಜಾರ ನಾಕಾ ಹತ್ತಿರ ಇರುವ ಶಹಾಬಜಾರ ಸುಭಾಷ ನಗರದಿಂದ-ವಡ್ಡರಗಲ್ಲಿ ಶಹಾಬಜಾರ ಕಡೆ ಹೋಗುವ ಸಾರ್ವಜನಿಕ ರೋಡಿನ ರಸ್ತೆಯ ನಾಲಿಯ ಮೇಲೆ ಉಸ್ಮಾನ ಬೈ ಸಾ:ಶಹಾಬಜಾರ ಕಲಬುರಗಿ ಎಂಬುವವನು ಸಂಬಂಧಪಟ್ಟ ಪ್ರಾಪ್ರಾಂಕಿತ ಅಧಿಕಾರಿಯವರಿಂದ ಅಧಿಕೃತವಾದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಕಾನುನು ಬಾಹಿರವಾಗಿ ಸರಕಾರ ಆದೇಶಗಳನ್ನು ಉಲ್ಲಂಘನೆ ಮಾಡಿ  ಹೋಗಿ-ಬರುವ ಸಾರ್ವಜನಿಕರಿಗೆ ತಿರುಗಾಡಲು ಮತ್ತು ಸಂಚಾರಕ್ಕೆ ಅಡೆ ತಡೆಯಾಗುವ ರೀತಿಯಲ್ಲಿ ರಸ್ತೆಯ ಮೇಲೆ ಸ್ಟೇಜ ಹಾಕಿ ಬ್ಯಾನರ ಹಚ್ಚಿದ್ದು ಅಲ್ಲದೇ ಸದರ ಸ್ಥಳದಲ್ಲಿ ಡಿ.ಜೆ. ಸೌಂಡ ಸಿಸ್ಟಮನ್ನು ಹಚ್ಚಿ ನೃತ್ಯ ಮಾಡುತ್ತಾ ಹುಟ್ಟು ಹಬ್ಬ ಆಚರಣೆ ಮಾಡುತ್ತಾ ಸಾರ್ವಜನಿಕ ಸ್ಥಳದಲ್ಲಿ ಅತಿ ಹೆಚ್ಚು ಶಬ್ದ ಇಟ್ಟು ಎರಿಯಾದಲ್ಲಿ ರಾತ್ರಿ ಮಲಗಿಕೊಂಡ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿ ಹಾಳು ಮಾಡುವದಲ್ಲದೆ ಶಾಂತತೆ ಭಂಗವನ್ನುಂಟು ಮಾಡುತ್ತಿರುವದನ್ನು ಕಂಡು ನನಗೆ ಮತ್ತು ಈ ಮೇಲಿನ ಸಿಬ್ಬಂದಿಯವರಿಗೆ ನೋಡಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ ಉಸ್ಮಾನ ಬೈ ಮತ್ತು ಡಿ.ಜೆ. ಮಾಲೀಕ ಹಾಗೂ ಅಲ್ಲಿದ್ದವರನ್ನು ಓಡಿ ಹೋದರು. ಆಗ ನಾವು ಸದರಿ ಸ್ಥಳದಲ್ಲಿ ಬಿಟ್ಟು ಹೋದ  ಡಿ.ಜೆ. ಸೌಂಡ ಸಿಸ್ಟಂನ ೧) ಒಂದು ಪಿಂಟೋ ಎಂಬ ಹೆಸರಿನ ಸಣ್ಣ ಟಾಪ ಸಿಸ್ಟಮ್ ಅ:ಕಿ: ೧೦,೦೦೦/- ರೂ. ೨)ಒಂದು ದೊಡ್ಡ ಬೇಸ್ ಸಿಸ್ಟಮ್  ಅ.ಕಿ. ೨೦,೦೦೦/- ರೂ ೩) ಒಂದು ಪಿಂಟೋ ಎಂಬ ಹೆಸರಿನ  ಎಂಪ್ಲಿಫಾಯರ  ಮತ್ತು ಅದಕ್ಕೆ ಸಂಬಂಧಪಟ್ಟ ೦೩ ವಾಯರಗಳು ಅ:ಕಿ:೨೦,೦೦೦/- ರೂ. ೪)ಸ್ಟೇಜ ಹೊಡೆಯಲು ಉಪಯೋಸಿದ ೦೪ ಕಟ್ಟಿಗೆಯ ಹಲಗೆಗಳು ಅ:ಕಿ: ೩೦೦೦/- ರೂ.೫)೦೪ ಕಬ್ಬಿಣದ ಸ್ಟ್ಯಾಂಡಗಳು ಅ:ಕಿ: ೫೦೦೦/- ರೂ. ೬)ಹುಟ್ಟು ಹಬ್ಬದ ನಿಮಿತ್ಯ ಸ್ಟೇಜ ಮೇಲೆ ಅಳವಡಿಸಿದ  ಬ್ಯಾನರ ಮತ್ತು  ಸ್ಟೇಜಿಗೆ ಅಳವಡಿಸಿದ ಪರದಾ ಅ:ಕಿ: ೨೦೦೦/- ರೂ. ಹೀಗೆ ಎಲ್ಲಾ ಸೇರಿ ಒಟ್ಟು  ೬೦,೦೦೦/- ರೂ. ನೇದ್ದವುಗಳು ಕೇಸಿನ ಪುರಾವೆಗೋಸ್ಕರ ವಶಕ್ಕೆ ಪಡೆದುಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 28-01-2023 01:46 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080