ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ್‌ ಠಾಣೆ :-  ದಿನಾಂಕ:26.12.2022 ರಂದು  01:00 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ ತಿರುಪತಿ ತಂದೆ ನಾಮಯ್ಯ ಸುರಪೂರ ವಯ: 38 ವರ್ಷ ಜಾ: ಎಸ್.ಟಿ. (ನಾಯಕ) ಉ: ಟೈಪಿಸ್ಟ್ (ಎ.ಜಿ. ಆಫೀಸ್, ಹೈಕೋರ್ಟ್, ಕಲಬುರಗಿ) ಸಾ|| ಗುಡಾಳಕೇರೆ ಸುರಪೂರ ಜಿ||ಯಾದಗಿರಿ ಹಾ||ವ|| ಬ್ಲಾಕ್ ನಂ. ಬಿ3-03-01, ಹೈಕೋರ್ಟ್ ಆವರಣ, ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಹೈಕೋರ್ಟನ ಅಡ್ವೋಕೇಟ್ ಜನರಲ್ ಆಫೀಸನಲ್ಲಿ ಕಳೆದ 6 ವರ್ಷಗಳಿಂದ ಟೈಪೀಸ್ಟ್ ಅಂತ ಕೆಲಸ ಮಾಡಿಕೊಂಡು ನನ್ನ ಹೆಂಡತಿಯೊಂದಿಗೆ ಮೇಲೆ ನಮೂದು ಮಾಡಿದ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ಹೆಂಡತಿ ನಿಂಗಮ್ಮ ಅಂತ ಇದ್ದು ಎಂ.ಎ. ಪದವಿಯನ್ನು ಮುಗಿಸಿದ್ದು ಸದ್ಯ ಮನೆಗೆಲಸ ಮಾಡಿಕೊಂಡು ನನ್ನೊಂದಿಗೆ ವಾಸವಾಗಿದ್ದು ಇರುತ್ತದೆ. ನನ್ನ ಹೆಂಡತಿ ನೀಲಮ್ಮ ಇವಳು ದಿನಾಂಕ:20.12.2022 ರಂದು ಬೆಳಿಗ್ಗೆ 08:00 ಗಂಟೆಗೆ ಅವರ ತವರುಮನೆಯಾದ ಶಾರದಳ್ಳಿ ತಾ||ಶಹಾಪೂರ ಕ್ಕೆ ದೇವರ ಕಾರ್ಯಕ್ರಮ ಇರುವ ನಿಮಿತ್ಯ ಹೋಗಿದ್ದು ಇರುತ್ತದೆ.    ಹೀಗಿದ್ದು ನಿನ್ನೆ ದಿನಾಂಕ: 25.12.2022 ರಂದು ಬೆಳಿಗ್ಗೆ 08:30 ಎ.ಎಂ.ಕ್ಕೆ ನಾನು ನಮ್ಮ ಸ್ವಂತ ಊರಾದ ಗುಡಾಳಕೇರೆ ಸುರಪೂರಕ್ಕೆ ದೇವರ ಪೂಜೆ ಇರುವ ನಿಮಿತ್ಯ ನಾನು ಹೋಗಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ:26.12.2022 ರಂದು ಬೆಳಿಗ್ಗೆ 08:00 ಗಂಟೆಗೆ ನಾನು ನಮ್ಮ ಊರಿನಲ್ಲಿ ಇದ್ದಾಗ ನಮ್ಮ ಅಪಾರ್ಟಮೆಂಟನಲ್ಲಿ ಇರುವ ಲಿಂಗರಾಜ ಇವರು ತಮ್ಮ ದೂರವಾಣಿ ಮೂಲಕ ಕರೆ ಮಾಡಿ ನನಗೆ ತಿಳಿಸಿದ್ದೆನೆಂದರೆ, ನಿನ್ನೆ ರಾತ್ರಿ ವೇಳೆಯಲ್ಲಿ ನಿಮ್ಮ ಮನೆಯ ಬೀಗ ಮುರಿದು ಯಾರೋ ಕಳ್ಳರು ಅಲಮಾರಿಯಲ್ಲಿ ಇಟ್ಟಿದ್ದ ಬಟ್ಟೆಗಳನ್ನು ಎಲ್ಲಾ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ಇರುತ್ತದೆ ಅಂತ ತಿಳಿಸಿದ ಮೇರೆಗೆ ನಾನು ಗಾಬರಿಯಾಗಿ ಈ ವಿಷಯವನ್ನು ನನ್ನ ಹೆಂಡತಿ ನಿಂಗಮ್ಮ ಇವಳಿಗೆ ತಿಳಿಸಿದ್ದು ಇರುತ್ತದೆ. ನಂತರ ನಾನು,ಮತ್ತು ನನ್ನ ಹೆಂಡತಿ ಇಬ್ಬರೂ ಕೂಡಿ ಖಾಸಗಿ ಕಾರನಲ್ಲಿ  ಕಲಬುರಗಿ ನಗರದಲ್ಲಿ ಇರುವ ಮನೆಗೆ ಬಂದು ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಮನೆಯ ಒಳಗಡೆ ಹೋಗಿ ನೋಡಲಾಗಿ ನಮ್ಮ ಮನೆಯ ಬೆಡರೂಮಗೆ ಹೋಗಿ ನೋಡಲು ಅಲ್ಮಾರಾದಲ್ಲಿದ್ದ ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದಿದ್ದು ಇರುತ್ತದೆ. ನಂತರ ನಾನು ಮತ್ತು ನನ್ನ ಹೆಂಡತಿ ನಿಂಗಮ್ಮ ಇಬ್ಬರೂ ಕೂಡಿ ಅಲ್ಮಾರಾದಲ್ಲಿ ಇಟ್ಟಿದ್ದ ನಗದು ಹಣ 4,00,000/-ರೂ , ಒಂದು ಬಂಗಾರದ ಮಂಗಳ ಸೂತ್ರ 45 ಗ್ರಾಂ ಅ.ಕಿ.2,50,000/-ರೂ, ಒಂದು ಬಂಗಾರದ ನೇಕಲೇಸ್ 10 ಗ್ರಾಂ ಅ.ಕಿ.45,000/-ರೂ, ಒಂದು ಬಂಗಾರದ ಚೈನ್ 10 ಗ್ರಾಂ ಅ.ಕಿ.45,000/-ರೂ , ಬಂಗಾರದ ಎರಡು ಕಿವಿ ಓಲೆಗಳು ತಲಾ 5 ಗ್ರಾಂ ಒಟ್ಟು 10 ಗ್ರಾಂ ಅ.ಕಿ.45,000/-ರೂ ಹಾಗೂ ನಾಲ್ಕು ಬಂಗಾರದ ಸುತ್ತುಂಗುರಗಳು ತಲಾ 5 ಗ್ರಾಂ ಹೀಗೆ ಒಟ್ಟು 20 ಗ್ರಾಂ ಅ.ಕಿ.1,00,000/-ರೂ ಹೀಗೆ ಒಟ್ಟು ನಗದು ಹಣ ಹಾಗೂ ಬಂಗಾರದ ಆಭರಣಗಳು ಎಲ್ಲಾ ಸೇರಿ ಒಟ್ಟು ಅ.ಕಿ. 8,85,000/- ನೇದ್ದವುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನಂತೆ ಹೈಕೋರ್ಟ್ ವಸತಿ ನಿಲಯದಲ್ಲಿ ಇರುವ ಬೇರೆ ಬೇರೆ ಸಿಬ್ಬಂದಿಯವರ ಮನೆಗಳು ಕೂಡ ಕಳುವಾಗಿರುತ್ತವೆ ಅಂತ ನನಗೆ ಗೊತ್ತಾಗಿರುತ್ತದೆ. ಕಾರಣ ನಿನ್ನೆ ರಾತ್ರಿ ವೇಳೆಯಲ್ಲಿ ನಮ್ಮ ಮನೆಯಲ್ಲಿ ನಗದು ಹಣ ಮತ್ತು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆಮಾಡಿ ಅವರ ವಿರುದ್ಧ ಕ್ರಮ ಜರುಗಿಸಿ ನಮ್ಮ ವಸ್ತುಗಳನ್ನು ನಮಗೆ ದೊರಕಿಸಿಕೊಡಲು ವಿನಂತಿ ಅಂತ ವಗೈರೆಯಾಗಿದ್ದ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ್‌ ಠಾಣೆ :-   ದಿನಾಂಕ:26.12.2022 ರಂದು 01:45 ಪಿ.ಎಂಕ್ಕೆ ಫಿರ್ಯಾದಿದಾರರಾದ ಶ್ರೀಮತಿ ಶೀಲಾದೇವಿ ಗಂಡ ಮಹೇಶ ರಡ್ಡಿ ವಯ: 30 ವರ್ಷ ಜಾ: ರಡ್ಡಿ ಉ: ಟೈಪಿಷ್ಟ ಎ.ಜಿ ಆಫೀಸ್ ಹೈಕೊರ್ಟ ಕಲಬುರಗಿ ಸಾ|| ಬೂದೇರಾ ತಾ|| ಜಿ|| ಬೀದರ ಹಾ|| ವ|| ಬ್ಲಾಕ ನಂ ಸಿ2-3-1 ಹೈಕೊರ್ಟ ಕ್ವಾಟರ್ಸ್ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ, ನಾನು ಕಳೆದ ಒಂದು ವರ್ಷದಿಂದ ಕಲಬುರಗಿ ನಗರದ ಹೈಕೊರ್ಟ ಎ.ಜಿ ಆಫೀಸನಲ್ಲಿ ಟೈಪಿಸ್ಟ ಅಂತ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುತ್ತೇನೆ ನನ್ನ ಗಂಡ ಕಾರ್ ಚಾಲಕ ಅಂತ ಕೆಲಸ ಮಾಡಿಕೊಂಡು ಇರುತ್ತಾರೆ. ನಮ್ಮ ಅತ್ತೆ ಕಲಾವತಿ ಇವರು ಸಹ ನಮ್ಮೊಂದಿಗೆ ವಾಸವಾಗಿರುತ್ತಾರೆ. ನಮಗೆ 2 ವರ್ಷದ ಸಮಿಕ್ಷಾ ಅಂತ ಒಬ್ಬ ಹೆಣ್ಣು ಮಗಳು ಇರುತ್ತಾಳೆ.      ನಮ್ಮ ಸ್ವಂತ ಊರಾದ ಬೀದರ ಜೆಲ್ಲೆಯ ಬೂದೇರಾ ಗ್ರಾಮದಲ್ಲಿ ದೇವರ ಕಾರ್ಯ ಮತ್ತು ಎಳ್ಳ ಅಮವಾಸೆ ಪ್ರಯುಕ್ತ ಎರಡು ದಿನಗಳ ರಜೆ ಹಾಕಿಕೊಂಡು ದಿನಾಂಕ:22.12.2022 ರಂದು ಸಾಯಂಕಾಲ 6:00 ಗಂಟೆಗೆ ಮನೆಗೆ ಬೀಗ ಹಾಕಿ ಎಲ್ಲರೂ ಸ್ವಂತ ಊರಿಗೆ ಹೋಗಿದ್ದು ಇರುತ್ತದೆ. ಇಂದು ದಿನಾಂಕ:26.12.2022 ರಂದು ಬೆಳಗ್ಗೆ 10:30 ಗಂಟೆ ಸುಮಾರಿಗೆ ಮನೆಗೆ ಬಂದು ನೋಡಲಾಗಿ ಮನೆಯ ಬೀಗ ಮುರಿದ್ದಿದ್ದು ಮನೆಯ ಒಳಗೆ ಹೋಗಿ ನೋಡಲಾಗಿ ಬೆಡ್ ರೂಮಿನಲ್ಲಿದ್ದ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ಡ್ರೆಸ್ಸಿಂಗ ಟೆಬಲಗೆ ಇದ್ದ ಲಾಕರ್ ಮುರಿದು ತೆಗೆದಿದ್ದು ನಾನು ಮತ್ತು ನನ್ನ ಗಂಡ ಗಾಬರಿಯಾಗಿ ನೋಡಲಾಗಿ ಡ್ರೆಸ್ಸಿಂಗ ಟೆಬಲನ ಲಾಕರನಲ್ಲಿ ಇಟ್ಟಿದ್ದ 1) ಒಂದು ಬಂಗಾರದ ಮಂಗಳಸೂತ್ರ 40 ಗ್ರಾಂ ಅ|| ಕಿ|| 1,60,000/-ರೂ 2) ಒಂದು ಬಂಗಾರದ ಚೈನ್ ಸರ 10 ಗ್ರಾಂ ಅ|| ಕಿ|| 40,000/-ರೂ 3) ಒಂದು ಬಂಗಾರದ ಚೈನ್ ಸರ 10 ಗ್ರಾಂ ಅ|| ಕಿ|| 40,000/-ರೂ 4) ಒಂದು ಬಂಗಾರದ ಚೈನ್ ಸರ 10 ಗ್ರಾಂ ಅ|| ಕಿ|| 40,000/-ರೂ 5) ಬಂಗಾರದ ಸುತ್ತುಂಗುರ 3 ತಲಾ ಒಂದು 10 ಗ್ರಾಂ ಒಟ್ಟು 30 ಗ್ರಾಂ ಅ|| ಕಿ|| 1,50,000/-ರೂ 6) ಒಂದು ಬಂಗಾರದ ಸುತ್ತುಂಗುರ 5 ಗ್ರಾಂ ಅ|| ಕಿ|| 25,000/-ರೂ, 7) ಬಂಗಾರದ ಹರಳಿನ ಉಂಗುರ 3 ಗ್ರಾಂ ಅ|| ಕಿ|| 10,000/-ರೂ, 8) ಬಂಗಾರದ ಹರಳಿನ ಉಂಗುರ 6 ಗ್ರಾಂ ಅ|| ಕಿ|| 30,000/-ರೂ, 9) ಬಂಗಾರದ ಚಿಕ್ಕ ಮಕ್ಕಳ ಉಂಗುರ 6 ತಲಾ ಒಂದು ಗ್ರಾಂ ಒಟ್ಟು 6 ಗ್ರಾಂ ಅ|| ಕಿ|| 30,000/-ರೂ, 10) ಬಂಗಾರದ ಪದಕ 2 ಗ್ರಾಂ ಅ|| ಕಿ|| 8,000/-ರೂ,  11) ಬಂಗಾರದ ಗುಂಡುಗಳು 0.5 ಗ್ರಾಂ ಅ|| ಕಿ|| 1000/-ರೂ, 12) ಬಂಗಾರದ ಕಮಲ ಝುಮಕಾ 10 ಗ್ರಾಂ ಅ|| ಕಿ|| 40,000/-ರೂ, 13) ಬಂಗಾರದ ಕಿವಿ ಓಲೆ 7 ಗ್ರಾಂ ಅ|| ಕಿ|| 30,000/-ರೂ, ಹೀಗೆ ಒಟ್ಟು 14.2 ಗ್ರಾಂನ ಬಂಗಾರದ ಆಭರಣಗಳು ಅ|| ಕಿ|| 6,04,000/-ರೂ ಮತ್ತು 15 ತೊಲೆಯ ಬೆಳ್ಳಿಯ ಆಭರಣಗಳು ಅ|| ಕಿ|| 10,000/-ರೂ ಕಿಮ್ಮತ್ತಿನ ಹೀಗೆ ಬಂಗಾರ ಮತ್ತು ಬೆಳ್ಳಿಯ ಆಭರಣ ಕೂಡಿ ಒಟ್ಟು ಅ|| ಕಿ|| 6,14,000/-ರೂ ಕಿಮ್ಮಿತ್ತಿನ ಆಭರಣಗಳನ್ನು ಯಾರೋ ಕಳ್ಳರು ನಿನ್ನೆ ದಿನಾಂಕ:25.12.2022 ರಂದು ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ಮೇಲೆ ನಮೂದಿಸಿದ ಬಂಗಾರ ಮತ್ತು ಬೆಳ್ಳಿಯ ಆಭರನಗಳನ್ನು ಕಳ್ಳತನ ಮಾಡಿಕೊಂಡು ಹೋದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನಮ್ಮ ಆಭರಣಗಳನ್ನು ನಮಗೆ ದೊರಕಿಸಿ ಕೊಡಲು ವಿನಂತಿ ಅಂತ ವಗೈರೆಯಾಗಿ ಇದ್ದ ಫಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ್‌ ಠಾಣೆ :-   ದಿನಾಂಕ:26.12.2022 ರಂದು  02:30 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀಮತಿ ಶಿಲಮ್ಮ ಗಂಡ ಪಂಡರಿನಾಥ ಬಳತ್ ವಯ: 42 ವರ್ಷ ಜಾ: ಎಸ್.ಟಿ.(ಗೊಂಡ) ಉ: ಸ್ಟೇನೋಗ್ರಾಫರ್ ಸಾ||ಚಿಟ್ಟವಾಡಿ ಗ್ರಾಮ ತಾ||&ಜಿ|| ಬೀದರ್ ಹಾ||ವ|| ಬ್ಲಾಕ್ ನಂ. ಬಿ2-0-8, ಹೈಕೋರ್ಟ ಆವರಣ, ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಹೈಕೋರ್ಟನ ಅಡ್ವೋಕೇಟ್ ಜನರಲ್ ಆಫೀಸನಲ್ಲಿ ಕಳೆದ 10 ವರ್ಷಗಳಿಂದ ಸ್ಟೇನೋಗ್ರಾಫರ್ ಅಂತ ಕೆಲಸ ಮಾಡಿಕೊಂಡು ನನ್ನ ಗಂಡ-ಮಕ್ಕಳೊಂದಿಗೆ ಹಾಗೂ ನನ್ನ ತಾಯಿ ಚಂದ್ರಮ್ಮ ಇವರೊಂದಿಗೆ ಮೇಲೆ ನಮೂದು ಮಾಡಿದ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ಗಂಡ ಪಂಡರಿನಾಥ ಇವರು ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಸ್ಟೇನೋಗ್ರಾಫರ್ ಅಂತ ಕೆಲಸ ಮಾಡಿಕೊಂಡು ಇರುತ್ತಾರೆ. ನಮಗೆ ಒಟ್ಟು ಎರಡು ಜನ ಹೆಣ್ಣುಮಕ್ಕಳು ಹಾಗೂ ಒಂದು ಗಂಡು ಮಗು ಇರುತ್ತಾರೆ. ಹೆಣ್ಣುಮಕ್ಕಳ ಪೈಕಿ ಮೊದಲನೇಯವಳು ಐಶ್ವರ್ಯ ಅಂತ ಇದ್ದು ಇವಳು ಪಿ.ಡಿ.ಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ಇರುತ್ತಾಳೆ ಹಾಗೂ ಎರಡನೇಯವಳು ಶಿವಾನಿ ಅಂತ ಇದ್ದು ಇವಳು ಕೇಂದ್ರೀಯ ವಿದ್ಯಾಲಯದಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ಇರುತ್ತಾಳೆ ಹಾಗೂ ನಮ್ಮ ಮಗ ಗಣೇಶ ಇತನು ಸೇಂಟ್ ಮೇರಿಸ್ ಶಾಲೆಯಲ್ಲಿ 7ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುತ್ತಾನೆ. ನಮ್ಮ ತಾಯಿ ಚಂದ್ರಮ್ಮ ಇವರು ನಮ್ಮ ಮನೆಗೆ ಆಗಾಗ ಬಂದು ಹೋಗುತ್ತಿರುತ್ತಾರೆ. ನನ್ನ ಮಗಳು ಶಿವಾನಿ ಇವಳು ದಿನಾಂಕ:19.12.2022 ರಂದು ಶಾಲಾ ಪ್ರವಾಸದ ನಿಮಿತ್ಯ ಮೂಡಬಿದರೆಗೆ ಹೋಗಿರುತ್ತಾಳೆ. ನಾನು ದಿನಾಂಕ: 20.12.2022 ರಂದು ಸಾಯಂಕಾಲ 04:00 ಗಂಟೆಗೆ ನಮ್ಮ ಸ್ವಂತ ಊರು ಬೀದರ್ ಜಿಲ್ಲೆಯ ಚಿಟ್ಟೆವಾಡಿ ಗ್ರಾಮಕ್ಕೆ ಕೆಲಸದ ನಿಮಿತ್ಯ ಹೋಗಿರುತ್ತೇನೆ. ನಂತರ ದಿನಾಂಕ: 23.12.2022 ರಂದು ನನ್ನ ಗಂಡ ಹಾಗೂ ನನ್ನ ಮಗ ಗಣೇಶ್ ಇಬ್ಬರೂ ಕೂಡಿ ನಮ್ಮ ಸ್ವಂತ ಊರುಗೆ ಹೋಗಿರುತ್ತಾರೆ. ನಂತರ ದಿನಾಂಕ: 24.12.2022 ರಂದು ಮಧ್ಯಾನ್ಹ 02:00 ಗಂಟೆಗೆ ನನ್ನ ಮಗಳು ಐಶ್ವರ್ಯ ಇವಳು ಮನೆಯ ಬೀಗ ಹಾಕಿಕೊಂಡು ನಮ್ಮ ಊರಾದ ಚಿಟ್ಟವಾಡಿಗೆ ಬಂದಿರುತ್ತಾಳೆ.ಹೀಗಿದ್ದು ಇಂದು ದಿನಾಂಕ:26.12.2022 ರಂದು ಬೆಳಿಗ್ಗೆ 08:00 ಗಂಟೆಗೆ ನಾನು ನಮ್ಮ ಊರಿನಲ್ಲಿ ಇದ್ದಾಗ ನಮ್ಮ ಹೈಕೋರ್ಟ್ ವಸತಿ ನಿಲಯದ ನಿವಾಸಿಯಾದ ಮಲ್ಲಣ್ಣ ಇವರು ತಮ್ಮ ದೂರವಾಣಿ ಮೂಲಕ ಕರೆ ಮಾಡಿ ನನಗೆ ತಿಳಿಸಿದ್ದೆನೆಂದರೆ, ನಿನ್ನೆ ರಾತ್ರಿ ವೇಳೆಯಲ್ಲಿ ನಿಮ್ಮ ಮನೆಯ ಬೀಗ ಮುರಿದು ಯಾರೋ ಕಳ್ಳರು ಅಲಮಾರಿಯಲ್ಲಿ ಇಟ್ಟಿದ್ದ ಬಟ್ಟೆಗಳನ್ನು ಎಲ್ಲಾ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ಇರುತ್ತದೆ ಅಂತ ತಿಳಿಸಿದ ಮೇರೆಗೆ ನಾನು ಗಾಬರಿಯಾಗಿ ಈ ವಿಷಯವನ್ನು ನನ್ನ ಗಂಡ ಪಂಡರಿನಾಥ ಇವರಿಗೆ ತಿಳಿಸಿದ್ದು ಇರುತ್ತದೆ. ನಂತರ ನಾನು ಮತ್ತು ನನ್ನ ಗಂಡ ಮತ್ತು ನನ್ನ ತಾಯಿ ಚಂದ್ರಮ್ಮ ಮೂರು ಜನರು ಕೂಡಿ ಬಸ್ ಮೂಲಕ ಕಲಬುರಗಿ ನಗರದಲ್ಲಿ ಇರುವ ಮನೆಗೆ ಬಂದು ನಾನು ಮತ್ತು ನನ್ನ ಗಂಡ ಇಬ್ಬರೂ ಮನೆಯ ಒಳಗಡೆ ಹೋಗಿ ನೋಡಲಾಗಿ ನಮ್ಮ ಮನೆಯ ದೇವರ ಕೋಣೆ ಹಾಗೂ ಬೆಡರೂಂನಲ್ಲಿ ಇದ್ದ ಅಲಮಾರಿಯಲ್ಲದ್ದ ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದಿದ್ದು ಇರುತ್ತದೆ. ನಂತರ ನಾನು ಮತ್ತು ನನ್ನ ಗಂಡ ಇಬ್ಬರೂ ಕೂಡಿ ನಮ್ಮ ಅಮ್ಮ ಚಂದ್ರಮ್ಮ ಇವರು ಬೆಡ್ -ರೂಂನ ಅಲ್ಮಾರಾದಲ್ಲಿ ಇಟ್ಟಿದ್ದ ದು ಬಂಗಾರದ ನಾನ 30 ಗ್ರಾಂ ಅ.ಕಿ.1,20,000/-ರೂ, ಒಂದು ಬಂಗಾರದ ಪಾಟ್ಲಿ 50 ಗ್ರಾಂ ಅ.ಕಿ.2,50,000/-ರೂ, ಒಂದು ಬಂಗಾರದ ಗುಂಡಿನ ಸರ 10 ಗ್ರಾಂ ಅ.ಕಿ. 40,000/-ರೂ, ಒಂದು ಬಂಗಾರದ ನೇಕಲೇಸ್ 10 ಗ್ರಾಂ ಅ.ಕಿ.40,000/-ರೂ, ಒಂದು ಬಂಗಾರದ ಉಂಗುರ 10 ಗ್ರಾಂ ಅ.ಕಿ.40,000/-ರೂ, ಎರಡು ಬೆಳ್ಳಿ ಕಡಗಳು ತಲಾ 5 ಗ್ರಾಂ ಒಟ್ಟು 10 ಗ್ರಾಮ ಅ.ಕಿ.6,000/-ರೂ ಹಾಗೂ ನಗದು ಹಣ 50,000/-ರೂ ಹಾಗೂ ನಾನು ದೇವರ ಮನೆಯ ಅಲಮಾರಿಯಲ್ಲಿ ಇಟ್ಟಿದ್ದ ದು ಬಂಗಾರದ ಮಾಂಗಲ್ಯ ಚೈನ್ 50 ಗ್ರಾಂ ಅ.ಕಿ.2,50,000/-ರೂ, ಒಂದು ಬಂಗಾರದ ನಾನ 30 ಗ್ರಾಂ  ಅ.ಕಿ.1,20,000/-ರೂ, ಬಂಗಾರದ 4 ಸುತ್ತುಂಗುರಗಳು ಒಟ್ಟು 40 ಗ್ರಾಂ ಅ.ಕಿ.2,00,000/-ರೂ, ಒಂದು ಬಂಗಾರದ ಕಿವಿ ಓಲೆ 5 ಗ್ರಾಂ ಅ.ಕಿ.20,000/-ರೂ, ಒಂದು ಬಂಗಾರದ ಚಿಕ್ಕ ಉಂಗುರ  5 ಗ್ರಾಂ ಅ.ಕಿ.20,000/-ರೂ, ಒಂದು ಬೆಳ್ಳಿ ಲಕ್ಷ್ಮೀ ಮೂರ್ತಿ ಹಾಗೂ 4 ಬೆಳ್ಳಿ ಕಡಗಗಳು ಒಟ್ಟು 200 ಗ್ರಾಂ 25,000/-ರೂ ಹಾಗೂ ನಗದು ಹಣ 10,000/-ರೂ ಹೀಗೆ ಒಟ್ಟು ನಗದು ಹಣ, ಬೆಳ್ಳಿ ಆಭರಣಗಳು ಹಾಗೂ ಬಂಗಾರದ ಆಭರಣಗಳು ಎಲ್ಲಾ ಸೇರಿ ಒಟ್ಟು ಅ.ಕಿ. 11,91,000/- ನೇದ್ದವುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನಂತೆ ಹೈಕೋರ್ಟ್ ವಸತಿ ನಿಲಯದಲ್ಲಿ ಇರುವ ಬೇರೆ ಬೇರೆ ಸಿಬ್ಬಂದಿಯವರ ಮನೆಗಳು ಕೂಡ ಕಳುವಾಗಿರುತ್ತವೆ ಅಂತ ನನಗೆ ಗೊತ್ತಾಗಿರುತ್ತದೆ.ಕಾರಣ ನಿನ್ನೆ ರಾತ್ರಿ ವೇಳೆಯಲ್ಲಿ ನಮ್ಮ ಮನೆಯಲ್ಲಿ ನಗದು ಹಣ, ಬೆಳ್ಳಿ ಆಭರಣಗಳು ಮತ್ತು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆಮಾಡಿ ಅವರ ವಿರುದ್ಧ ಕ್ರಮ ಜರುಗಿಸಿ ನಮ್ಮ ವಸ್ತುಗಳನ್ನು ನಮಗೆ ದೊರಕಿಸಿಕೊಡಲು ವಿನಂತಿ ಅಂತ ವಗೈರೆಯಾಗಿದ್ದ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ್‌ ಠಾಣೆ :-   ದಿನಾಂಕ:26.12.2022 ರಂದು 03:30 ಪಿ.ಎಂ ಕ್ಕೆ ಫಿರ್ಯಾದಿದಾರರಾದ ಶ್ರೀ ಅಣ್ಣೆಪ್ಪಾ ತಂದೆ ಸಿದ್ರಾಮಪ್ಪಾ ವಯ: 31 ಉ: ದ್ವಿತಿಯ ದರ್ಜೆಯ ಸಹಾಯಕ ಸಾ|| ಕರ್ನಾಟಕ ಉಚ್ಚ ನ್ಯಾಯಾಲಯ ಕಲಬುರಗಿ ವಸತಿ ಗ್ರಹ ಸಂಖ್ಯೆ ಸಿ4-3-2 ಕಲಬುರಗಿ, ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ,  ದಿನಾಂಕ:25.12.2022 ರಂದು ತಡರಾತ್ರಿ ನನ್ನ ಮನೆ ಕಳುವು ಮಾಡಿರುತ್ತಾರೆ. ಅಲ್ಲದೆ ಇತರರ ಮನೆಗಳು ಕೂಡಾ ಕಳುವಾಗಿರುತ್ತವೆ ನಮ್ಮ ಮನೆಯಲ್ಲಿ ಕಳುವಾದ ಆಭರಣಗಳು ಈ ಕೆಳಗಿನಂತೆ ಇರುತ್ತವೆ, 1) ಮಾಂಗಲ್ಯ ಸರ (ಚಿನ್ನದ್ದು) 35 ಗ್ರಾಂ ಅ|| ಕಿ|| 1,75,000/-ರೂ, 2) ಚಿನ್ನದ ಸರ 7 ಗ್ರಾಂ ಅ|| ಕಿ|| 30,000/-ರೂ 3) ಕೈ ಕಡಗ (ಚಿನ್ನದ್ದು) 5 ಗ್ರಾಂ ಅ|| ಕಿ||  25,000/-ರೂ, 4) ಕಿವಿ ಓಲೆ (ಚಿನ್ನದ್ದು) 7 ಗ್ರಾಂ ಅ|| ಕಿ|| 30,000/-ರೂ, 5) ಶಟಗನ ರೂಪ (ಚಿನ್ನದ್ದು) 1 ಗ್ರಾಂ ಅ|| ಕಿ|| 5000/-ರೂ, 6) ಕೊರಳ ಸರ (ಚಿನ್ನದ್ದು) 2 ಗ್ರಾಂ ಅ|| ಕಿ|| 10,000/-ರೂ, 7) ಕಾಲ್ಗೆಜ್ಜೆ 2 ಬೆಳ್ಳಿದ್ದು 200 ಗ್ರಾಂ ಅ|| ಕಿ|| 14,220/-ರೂ, 8) ಕಾಲ್ಗೆಜ್ಜೆ 2 ಬೆಳ್ಳಿದು 100 ಗ್ರಾಂ ಅ|| ಕಿ|| 7,100/-ರೂ, 9) ಗಣಪತಿ ಮತ್ತು ಲಕ್ಷ್ಮಿ ರೂಪ 2 ಬೆಳ್ಳಿದ್ದು 100 ಗ್ರಾಂ ಅ|| ಕಿ|| 7,110/-ರೂ,10) ತಾಳಿ ಮತ್ತು ಕಾಲುಂಗರ ಬೆಳ್ಳಿದ್ದು 100 ಗ್ರಾಂ ಅ|| ಕಿ|| 3,195/-ರೂ 11) ಕೈ ಮಣೆ ಚಿನ್ನದ್ದು 1 ಗ್ರಾಂ ಅ|| ಕಿ|| 5000/-ರೂ, 12) ನಗದು ಹಣ 18,000/-ರೂ, ಹೀಗೆ ಒಟ್ಟು ಬಂಗಾರ ಮತ್ತು ಬೆಳ್ಳಿ ಹಾಗೂ ನಗದು ಹಣ ಸೆರಿ 3,29,625/-ರೂ ಕಿಮ್ಮತಿನವುಗಳನ್ನು ಯಾರೋ ಕಳ್ಳರೂ ನಿನ್ನೆ ದಿನಾಂಕ:25.12.2022 ರಂದು ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಒಳಗೆ ಪ್ರವೇಶ ಮಾಡಿ ಈ ಮೇಲೆ ನಮೂದು ಮಾಡಿ ಆಭರಣಗಳನ್ನು ಹಾಗು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿಯವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನಮ್ಮ ಆಭರಣ ಹಾಗೂ ನಗದು ಹಣವನ್ನು ನಮಗೆ ದೊರಕಿಸಿ ಕೊಡಲು ವಿನಂತಿ ಅಂತ ವಗೈರೆಯಾಗಿ ಇದ್ದ ಫಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ ಠಾಣೆ -1 :- ದಿನಾಂಕ: 26-12-2022 ರಂದು ಬೆಳಿಗ್ಗೆ 9-30 ಗಂಟೆಗೆ ಖಾಸಗಿ ಕಾಮರೆಡ್ಡಿ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ಶರಣಬಸಪ್ಪಾ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಶ್ರೀ ಶರಣಬಸಪ್ಪಾ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ: 25-12-2022 ರಂದು ಜೇವರ್ಗಿ ಪಟ್ಟಣ್ಣದಲ್ಲಿ ಸಾಮೂಹಿಕ ವಿವಾಹ ಕಾರ್ಯಾಕ್ರಮ ಇರುದರಿಂದ ಸದರ ಕಾರ್ಯಾಕ್ರಮಕ್ಕೆ ನಮ್ಮೂರಿನಿಂದ ನಮ್ಮೂರ ಶಿವಲಿಂಗಪ್ಪಾ ತಂದೆ ನಾಗೇಶ ಸಿದ್ದಣ್ಣಗೌಡರ ಇವರು ಚಲಾಯಿಸುತ್ತೀರುವ ಕಾರ ನಂಬರ ಕೆಎ-33/ಎಮ್-3909 ನೇದ್ದರಲ್ಲಿ ನಾನು ಮತ್ತು ನಮ್ಮೂರಿನ ಶರಣಬಸಪ್ಪಾ ತಮದೆ ಭೀಮಣ್ಣಾ ಅಂತರಗಂಗಾ ಇಬ್ಬರೂ ಕುಳಿತು ಕಡಣಿ ಗ್ರಾಮದಿಂದ ಜೇವರ್ಗಿಗೆ ಹೋಗಿ ಸಾಮೂಹಿಕ ವಿವಾಹ ಕಾರ್ಯಾಕ್ರಮ ಮುಗಿಸಿಕೊಂಡು ಜೇವರ್ಗಿಯಿಂದ ರಾಷ್ಟ್ರೀಯ ಹೆದ್ದಾರಿ-50 ರ ಮೇಲೆ ಬರುವ ಹತ್ತಿ ಮಿಲನಲ್ಲಿ ಊಟಕ್ಕೆ ಹೋಗಿ ಊಟ ಮುಗಿಸಿಕೊಂಡು ವಾಪಸ್ಸ ಕಡಣಿ ಗ್ರಾಮಕ್ಕೆ ಹೋಗುವ ಕುರಿತು ನಾವಿಬ್ಬರೂ ಕಾರಿನಲ್ಲಿ ಕುಳಿತೆವು ಶಿವಲಿಂಗಪ್ಪಾ ಇವರು ಕಾರನ್ನು ಚಲಾಯಿಸಿಕೊಂಡು ಹೋಗುವಾಗ ರಾಷ್ಟ್ರಿಯ ಹೆದ್ದಾರಿ-50 ರ ಮೇಲೆ ಬರುವ ಶಹಾಬಾದ ಕ್ರಾಸ ದಾಟಿದ ನಂತರ ಶಿವಲಿಂಗಪ್ಪಾ ಇತನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ರೋಡ ಎಡ ಬಲ ಕಟ್ ಹೊಡೆಯುತ್ತಾ ಚಲಾಯಿಸಿಕೊಂಡು ಫಿರೋಜಾಬಾದ ಗ್ರಾಮದ ಸಿಮಾಂತರದ ರೋಡ ಮೇಲೆ ಸಾಯಂಕಾಲ ಅಂದಾಜು 4-30 ಗಂಟೆ ಸುಮಾರಿಗೆ ಕಾರನ್ನು ಒಮ್ಮಲೇ ಬಲಕ್ಕೆ ತಿರುಗಿಸಿ ಕಟ್ ಹೊಡೆದು ನಿಷ್ಕಾಳಜಿತನದಿಂದ ಚಲಾಯಿಸಿ ಕಾರನ್ನು ಪಲ್ಟಿ ಮಾಡಿ ಅಪಘಾತ ಮಾಡಿ ನನಗೆ ಮತ್ತು ಶರಣಬಸಪ್ಪಾ ರವರಿಗೆ ಗಾಯಗೊಳಿಸಿ ತಾನೂ ಗಾಯ ಹೊಂದಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ: 26-12-2022  ರಂದು ಸಾಯಾಂಕಾಲ ೦೮:೪೦ ಸುಮಾರಿಗೆ ಖಚಿತ ಬಾತ್ಮಿ ಬಂದಿದೇನೆAದರೆ ಸದರಿ ಆರೋಪಿತನು ಅಂಗನವಾಡಿ ಕೆಂದ್ರಗಳಲ್ಲಿ ಮಕ್ಕಳಿಗೆ ವಿತರಿಸುವ ಹಾಲಿನ ಪ್ಯಾಕೇಟ್‌ಗಳನ್ನು ಆಟೋದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಸಾಗಿಸ್ಮತ್ತಿದ್ದ ಬಗ್ಗೆ ದೂರು ಬಂದಿದ್ದು, ಸುಲ್ತಾನಪುರ ಕ್ರಾಸ್ ಹತ್ತಿರನಲ್ಲಿ ಸದರಿ ಆರೋಪಿತನನ್ನು ಹಿಡಿದಿದ್ದು ನಂತರ ದಾಕಲಾತಿ ಚೆಕ್ ಮಾಡಲಾಗಿ ಯಾವುದೇ ದಾಖಲಾತಿ ಇರುವುದಿಲ್ಲ. ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ ಸದರಿ ಆರೋಪಿತನ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಫರಹತಾಬಾದ ಪೊಲೀಸ ಠಾಣೆ :- ದಿನಾಂಕ: 26.12.2022 ರಂದು 03:30 ಪಿಎಮ್ ಗಂಟೆಗೆ ಸ:ತ: ಧರ್ಮಣ್ಣಾ ಸಿಹೆಚ್ಸಿ 219 ಫರಹತಾಬಾದ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ, ಮುದ್ದೇಮಾಲು ಹಾಗೂ ಆರೋಪಿತನೊಂದಿಗೆ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರ ಸಾರಾಂಶವೇನೆಂದರೆ, ಇಂದು ದಿನಾಂಕ: 26.12.2022 ರಂದು ಮದ್ಯಾಹ್ನ 01:00 ಗಂಟೆಯ ಸುಮಾರಿಗೆ ನಾನು ಪೊಲೀಸ್ ಠಾಣೆ ಯಲ್ಲಿದ್ದಾಗ ಬಾತ್ಮಿ ಬಂದಿದ್ದೇನೆಂದರೆ, ನಮ್ಮ ಠಾಣೆಯ ವ್ಯಾಪ್ತಿಯ ಪಾಣೇಗಾಂವ ಗ್ರಾಮದ ಮೌಲಾಲಿ ದರ್ಗಾದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಕುಳಿತು ಸಾರ್ವಜನಿಕರಿಂದ 10 ರೂಪಾಯಿಗೆ 100 ರೂಪಾಯಿ ನೀಡುವ ಭರವಸೆ  ನೀಡಿ ಅದೃಷ್ಟದ ಚಿತ್ರ ತಿತಲಿ ಆಟ ನಡೆಸಿ ಸಾರ್ವಜನಿಕರಿಂದ ಹಣ ಪಡೆದುಕೋಳ್ಳುತ್ತಿದಾನೆ ಅಂತಾ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಠಾಣೆಗೆ ಇಬ್ಬರೂ ಪಂಚರಾದ 1) ದೀಪಕ ತಂದೆ ಶ್ರೀಮತ ಹರಸೂರ ವಯ:33 ವರ್ಷ ಉ: ಕೂಲಿಕೆಲಸ ಜಾತಿ: ಎಸ್,ಸಿ ಸಾ: ಫರಹತಾಬಾದ 2) ರಾಜು ತಂದೆ ಸುಭಾಸಚಂದ್ರ ವಾರದ ವಯ:36 ಉ: ಚಾಲಕ ಜಾತಿ: ಲಿಂಗಾತಯ ಸಾ: ಫರಹತಾಬಾದ ಇವರನ್ನು ಬರ ಮಾಡಿಕೊಂಡು ನಮ್ಮ ಠಾಣೆಯ ಸಿಬ್ಬಂದಿಯಾದ ರಾಜಕುಮಾರ ಸಿಪಿಸಿ 477 ರವರು ಮತ್ತು ಪಂಚರಿಗೆ ಅದೃಷ್ಟದ  ಚಿತ್ರ ಇರುವ ತಿತಲಿ ಆಟದ ಮಾಹಿತಿ ತಿಳಿಸಿ, ನಮ್ಮ ಪಿಐ ಸಾಹೇಬರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ ನಾನು ಪಂಚರಿಗೆ ಮತ್ತು ಸಿಬ್ಬಂದಿ ಜನರಿಗೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಠಾಣೆಯಿಂದ ಮದ್ಯಾಹ್ನ 01:30 ಗಂಟೆಗೆ ಹೊರಟು ಭಾತ್ಮೀ ಸ್ಥಳದ ಹತ್ತಿರ ಮದ್ಯಾಹ್ನ 02:00 ಗಂಟೆಗೆ ಹೋಗಿ ದಗರ್ಾದ ಹತ್ತಿರ ವಾಹನ ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಮೌಲಾಲಿ ದರ್ಗಾದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಒಬ್ಬ ವ್ಯಕ್ತಿ ಸಾರ್ವಜನಿಕರನ್ನು ಕೂಗಿ ಕರೆದು ತಿತಲಿ ಆಟ ಆಡಿರಿ 10 ರೂಪಾಯಿಗೆ 100 ರೂಪಾಯಿ ಗೆಲ್ಲಿರಿ ಅಂತಾ ಅದೃಷ್ಟದ ಚೀಟಿ ಆಟ ಆಡಿಸುತ್ತಿದ್ದು ಅವನ ಎದುರು ಜನರು ನಿಂತಿದ್ದು ಕೆಲವರು ಹಣವನ್ನು ಪಣಕ್ಕೆ ಇಟ್ಟಿದ್ದು ಖಚಿತ ಪಟ್ಟಾಗ 02:05 ಪಿಎಮ್ ಆಗಿದ್ದು ಆಗ ನಾವು ಏಕ ಕಾಲಕ್ಕೆ ದಾಳಿ ಮಾಡಲು ಚೀಟಿ ಹಚುತ್ತಿದ ಜನರು ನಮ್ಮನ್ನು ನೋಡಿ ಓಡಿ ಹೋದರು. ಅದೃಷ್ಟದ ಚಿತ್ರ ಇರುವ ಚೀಟಿ ಆಟ ಆಡುಸುತ್ತಿದ್ದ ವ್ಯಕ್ತಿ ಸಿಕ್ಕು ಬಿದಿದ್ದು ಅವನ ಹೆಸರು ವಿಳಾಸ ವಿಚಾರಿಸಲು ಗುಂಡು ತಂದೆ ದೇವಿಂದ್ರಪ್ಪಾ ರಾಠೋಡ ವಯ: 30 ವರ್ಷ ಉ: ಕೂಲಿಕೆಲಸ ಜಾತಿ: ಲಂಬಾಣಿ ಸಾ: ಪಾಣೇಗಾಂವ ಅಂತಾ ತಿಳಿಸಿದ್ದು, ಇತನಿಗೆ ಹಿಡಿದು ಚೆಕ್ ಮಾಡಲಾಗಿ 1) ತನ್ನ ಎದುರು ಇಟ್ಟುಕೊಂಡು ಕುಳುತ್ತಿದ ತಿತಲಿ ಆಟದ ಚಿತ್ರ ಇರುವ ಒಂದು ಪೇಪರ ಶೀಟ ಇದ್ದು ಅದರಲ್ಲಿ ಕೆಲವು ಚೀಟಿ ಕಿತ್ತು ಆಟವಾಡಿದ್ದು ಇರುತ್ತದೆ ಮತ್ತು ಪೇಪರ ಶೀಟ ಮೇಲೆ 30 ರೂಪಾಯಿ ಇದ್ದು ಅಂಗ ಜಪ್ತಿ ಮಾಡಲಾಗಿ 2) ನಗದು ಹಣ 4220/- ರೂ ಸಿಕ್ಕಿದ್ದು, ಹೀಗೆ ಒಟ್ಟು ನಗದು ಹಣ 4250/- ರೂ ಸಿಕ್ಕಿರುತ್ತವೆ. ಸದರಿಯವರ ಹತ್ತಿರ ಸಿಕ್ಕಿದ್ದ ಮುದ್ದೇಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಪಂಚರ ಸಮಕ್ಷಮದಲ್ಲಿ 02:05 ಪಿಎಮ್ದಿಂದ 03:05 ಪಿಎಮ್ ದವರೆಗೆ ಕೈಕೊಂಡಿರುತ್ತೆನೆ. ನಂತರ ಜಪ್ತಿಪಂಚನಾಮೆ, ಮುದ್ದೇಮಾಲು ಮತ್ತು ಒಬ್ಬ ಆರೋಪಿತನೊಂದಿಗೆ 03:30 ಪಿಎಮ್ ಗಂಟೆಗೆ ಠಾಣೆಗೆ ಬಂದಿದ್ದು ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊರಲಾಗಿದೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

                 

ಇತ್ತೀಚಿನ ನವೀಕರಣ​ : 27-12-2022 05:51 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080