ಅಭಿಪ್ರಾಯ / ಸಲಹೆಗಳು

ರೋಜಾ ಪೊಲೀಸ್‌ ಠಾಣೆ :- ದಿನಾಂಕ: 27/10/2022 ರಂದು ಮಧ್ಯರಾತ್ರಿ 01:35 ಗಂಟೆಯಿಂದ  01:45 ಗಂಟೆಯ ಮಧ್ಯದ ಅವಧಿಯಲ್ಲಿ ನನ್ನ ಮನೆಯ ಮುಂದೆ ನಿಲ್ಲಿಸಿದ ಹೊಂಡಾ ಎಕ್ಟೀವಾ ಮೊ.ಸೈಕಲ ನಂ KA 32 EH 3609 ಅಕಿ 24000 ರೂ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಎಲ್ಲಾ ಕಡೆಹುಡುಕಾಡಿ ತಡವಾಗಿ ಠಾಣೆಗೆ ಬಂದು ಕಳ್ಳತನವಾಗಿದೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಚೌಕ ಪೊಲೀಸ್‌ ಠಾಣೆ :-  ದಿನಾಂಕ:26.11.2022 ರಂದು 11.30 ಎ.ಎಂಕ್ಕೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದೇನೆಂದರೆ, ನಾನು ಎಲ್ಲೇರಿ ಉಪೇಂದ್ರ ತಂದೆ ಶರಣಗೌಡ ಎಲ್ಲೇರಿ ವ:31ವರ್ಷ ಉ:ಲ್ಯಾಬ ಟೆಕ್ನಿಶಿಯನ್ ಜ್ಯಾ:ರೆಡ್ಡಿ ಸಾ:ವೇದಾಂತ ಆಸ್ಪತ್ರೆ ಸಿದ್ರಾಮೇಶ್ವರ ನಗರ ಯಶ್ ಸೂಪರ ಬಜಾರ ಹತ್ತಿರ ಆಳಂದ ಚಕ್ಕ ಪೋಸ್ಟ್ ರೋಡ ಕಲಬುರಗಿ ತಮ್ಮಲ್ಲಿ ದೂರು ಸಲ್ಲಿಸುವುದೇನೆಂದರೆ, ನಾನು ವೇದಾಂತ ಆಸ್ಪತ್ರೆಯಲ್ಲಿ ಅಂತ ಲ್ಯಾಬ ಟೆಕ್ನಿಶಿಯನ್ ಕೆಲಸ ಮಾಡಿಕೊಂಡಿರುತ್ತೇನೆ. ನನ್ನ ಸ್ವಂತ ಕೆಲಸಕ್ಕಾಗಿ ನನ್ನ  ಹೆಸರಿನಲ್ಲಿ ಹಿರೋ ಹೊಂಡಾ ಸ್ಪ್ಲೇಂಡರ ಪ್ಲಸ್ ಮೋಟಾರ ಸೈಕಲ್ ನಂ.KA32EA0341 ನೇದ್ದನ್ನು ಖರೀದಿಸಿ ನಾನೇ ಉಪಯೋಗಿಸಿಕೊಂಡು ಬಂದಿದ್ದು ಇರುತ್ತದೆ.   ಹೀಗಿದ್ದು,ದಿನಾಂಕ:21.11.2022 ರಂದು ಸಾಯಂಕಾಲ 05.45 ಗಂಟೆಗೆ ನನ್ನ ಮೋಟಾರ ನಂ. KA32EA0341 ನೇದ್ದು ಕಲಬುರಗಿ ನಗರದ ವೇದಾಂತ ಆಸ್ಪತ್ರೆಯ ಪಕ್ಕದಲ್ಲಿ ನಿಲ್ಲಿಸಿ ಕೆಲಸ ಕುರಿತು ಒಳಗಡೆ ಹೋಗಿದ್ದು, ನಂತರ ಹೊರಗಡೆ ಬಂದುದಿಸಿ ನಾನು ನನ್ನ ಮೋಟಾರ ಸೈಕಲ್ ನಿಲ್ಲಿಸಿದ  ಸ್ಥಳಕ್ಕೆ ಸಾಯಂಕಾಲ 06.00 ಗಂಟೆಗೆ ಹೋಗಿ ನೋಡಿದಾಗ ನನ್ನ  ಮೋಟಾರ ಸೈಕಲ್ ಕಾಣಿಸಲಿಲ್ಲ. ಆಗ  ನಾನು ಗಾಬರಿಗೊಂಡು ನಾನು ಮತ್ತು ನನ್ನ ಗೆಳೆಯರಾದ ಶ್ರೀ ಸುಧೀರ ಮತ್ತು ಸಂತೋಷ 03 ಜನರು ಕೂಡಿಕೊಂಡು ಮೋಟಾರ ಸೈಕಲ್ ನಿಲ್ಲಿಸಿದ ಸ್ಥಳದ  ಸುತ್ತಾಮುತ್ತಾ ದುಬೈ ಕಾಲೋನಿ ,ಅಟೋ ನಗರ ಕಲಬುಗರಿ ರೈಲ್ವೇಸ್ಟೇಶನ, ಬಸ್ ನಿಲ್ದಾಣ, ಇಎಸ್ಐ ಆಸ್ಪತ್ರೆ ಮತ್ತು ಇತರೆ ಖಾಲಿ ಜಾಗದಲ್ಲಿ ಹುಡಿಕಾಡಿದರೂ ಎಲ್ಲಿಯೂ ನನ್ನ ಮೋಟಾರ ಸೈಕಲ್ ಪತ್ತೆಯಾಗಿರುವುದಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ನನ್ನ ಮೋಟಾರ ಸೈಕಲ್ ಕಳ್ಳತನವಾದ ದಿವಸದಿಂದ ಇಲ್ಲಿಯವರೆಗೆ ಎಲ್ಲಾ ಕಡೆಗೂ ಹುಡುಕಿ ಎಲ್ಲಿಯಾದರೂ ನನ್ನ ಕಳುವಾದ ಮೋಟಾರ  ಸೈಕಲ್  ಸಿಗಬಹುದು ಅಂತ ಪೊಲೀಸ ಠಾಣೆಗೆ ಬಂದು  ದೂರು  ಕೊಟ್ಟಿರುವುದಿಲ್ಲ ಇಂದು ಠಾಣೆಗೆ ತಡವಾಗಿ ದೂರು ಕೊಟ್ಟಿದ್ದು ಇರುತ್ತದೆ. ಸದರಿ ನನ್ನ ಕಳುವಾದ ಮೋಟಾರ ಸೈಕಲ್ನ ವಿವರಈ ಕೆಳಗಿನಂತಿರುತ್ತದೆ.ಮೋಟಾರ ಸೈಕಲ್ ವಿವರ : HERO HONDA SPLENDOR PLUSಮೋಟಾರ ಸೈಕಲ್ ನಂ : KA 32 EA0341ಮೋಟಾರ ಸೈಕಲ್ ಚೆಸ್ಸಿ ನಂ :  MBLHA10EZBHG70113ಮೋಟಾರ ಸೈಕಲ್ ಇಂಜೀನ ನಂ:HA10EFBHG78739ಮೋಟಾರ ಸೈಕಲ್ ಮಾದರಿ: 08/2011ಮೋಟಾರ ಸೈಕಲ್ ಬಣ್ಣ :SILVERಮೋಟಾರ ಸೈಕಲ್ ಅ.ಕಿ:  20,047/- ರೂ ಇರುತ್ತದೆ.  ಈ ಬಗ್ಗೆ ಕಾನೂನು ಕ್ರಮ ಕೈಕೊಂಡು ಕಳುವಾದ ನನ್ನ ಮೋಟಾರ ಸೈಕಲ್ ಪತ್ತೆ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಅದೆ ಅಂತ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ-26-11-2022  ರಂದು ಸರಕಾರಿ    ಫಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯೇನೆಂದರೆ ಸದರಿಯವರು ಏರಿಯಾದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ  ಪಂಡಿತ್ ದೀನ್ ದಯಾಳು ಕಾಲೋನಿಯಲ್ಲಿ ಸದರಿ ಆರೋಪಿತನು ೧ ರೂ ೮೦ ರೂ ಗೆಲ್ಲಿರಿ ಎಂದು ಸಾರ್ವಜನಿಕ ಸ್ಥಳದಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದಾನೆಂದು ಮಾಹಿತಿ ಬಂದ ಮೇರೆಗೆ ದಾಳಿ ಮಾಡಲಾಗಿ ಸದರಿ ಆರೋಪಿತನು ಮತ್ತು ಮುದ್ದೆ ಮಾಲನ್ನು ವಶಕ್ಕೆ ಪಡೆದು ಸದರಿ ಆರೋಪಿತನ ವಿರುದ್ದ ಪ್ರಕರಣವನ್ನು  ದಾಖಲಿಸಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ : ದಿನಾಂಕ : 10-11-2022  ರಂದು 00:10 ಎಮ್‌ ಕ್ಕೆ ಶ್ರೀ ಸೋಹೇಬ ಗೋರಿ ತಂದೆ ಸಲೀಮ ಗೋರಿ ವಯ 18 ವರ್ಷ  ವಿಳಾಸ : ಯದುಲ್ಲಾ ಕಾಲೂನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಇಂಗ್ಲೀಷದಲ್ಲಿ ಬರೆದ ಫಿರ್ಯಾದು ಹಾಜರಪಡಿಸಿದನ್ನು ಸ್ವೀಕರಿಸಿಕೊಂಢನು . ಸದರಿ ಫಿರ್ಯಾದಿ ಸಾರಂಶ ಏನೆಂದರೆ ದಿನಾಂಕ. 10-11-2022 ರಂದು 12-10 ಎ.ಎಂ.ಕ್ಕೆ. ಹಾಗರಗಾ ಕ್ರಾಸ ಹತ್ತಿರ ನಿಂತಿರುವಾಗ ಒಂದು ಗುಂಪಿನವರು ಸಡನಾಗಿ ಬಂದು ನನ್ನ ಹತ್ತಿರ ದ್ದ 10,000--00 ರೂ ಕಸಿದುಕೊಂಡರು ಮತ್ತು ಚೂಪಾದ ಚಾಕು ತೆಗೆದುಕೊಂಡು ನನಗೆ ಹೊಡೆಯಲು ಪ್ರಯತ್ನಿಸಿದ್ದು  ಆಗ ನಾನು ಗಾಯಗೊಂಡಿದ್ದು ನಂತರ ಬಸವೇಶ್ವರ ಸ್ಪತ್ರೆಯಲ್ಲಿ ಉಚಾರ ಕುರಿತು ಸೇರಿಕೆಯಾಗಿದ್ದು ನನಗೆ ಗಾಯಗಳಾಗಿರುತ್ತವೆ.ಸದರಿಯವರ ಗುಂಪು  ಟಿಪ್ಪು ಬಾಯ್ಸಿ ಫ್ರಾಂ ಎಂ.ಎಸ್.ಕೆ.ಮಿಲ್ಲ ಅಂತಾ ಇದ್ದು ಇವರ ಹೆಸರು  1) ಶಫೀಕ ಭಾಗವಾನ 2) ಶೇಖ ಕಲಿ , 3) ಹಸನ , 4) ಮಹೆಬೂಬ  ಮತ್ತು ಇತರೆ 10-12 ಜನರು   ಚಾಕು ತೋರಿಸಿ ಹಣ ಕಸಿದುಕೊಂಡಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 28-11-2022 12:45 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080