ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ: ೨೬-೧೧-೨೦೨೧ ರಂದು ಮುಂಜಾನೆ ೧೧:೩೦ ಗಂಟೆಗೆ ಫರ‍್ಯಾದಿ ಶ್ರೀ ಅನ್ಸರ್ ಖಾನ ತಂದೆ ತುರಬಖಾನ ಪಠಾಣ ವಯ: ೩೯ ವರ್ಷ ಉ: ಖಾಸಗಿ ಕೆಲಸ ಜಾತಿ: ಮುಸ್ಲಿಂ ಸಾ: ಸರ್ವೆ ನಂ ೧೦ ಪ್ಲಾಟ ನಂ ೫೧ ಎಮ್.ಜಿ ಕಾಲೋನಿ (ಹೊಸ ಬಡವಣೆ) ಅಜಾದಪೂರ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ್ ಮಾಡಿಸಿದ ದೂರು ಅರ್ಜಿ ಸಲ್ಲಿಸಿದ್ದರ ಸಾರಾಂಶ ಏನಂದರೆ, ನಾನು ಖಾಸಗಿ ಕೆಲಸ ಮಾಡಿಕೊಂಡು ಇರುತ್ತೇನೆ ನನ್ನ ಹೆಂಡತಿ ಮಳಖೇಡ ಆರೋಗ್ಯ ಕೇಂದ್ರದಲ್ಲಿ ರ‍್ಸ್ ಅಂತ ಕೆಲಸ ಮಾಡಿಕೊಂಡಿರುತ್ತಾಳೆ ಅವಳು ದಿನಾಲು ಹೋಗಿ ಬಂದು ಮಾಡುತ್ತಾರೆ. ನಮಗೆ ಆಶಾಸಿದ್ದಿಕ ವಯ ೯ ವರ್ಷ, ಮುಸಾಖಾನ ವಯ: ೪ ವರ್ಷ ದವರಿರುತ್ತಾರೆ. ನಿನ್ನೆ ದಿನಾಂಕ: ೨೫-೧೧-೨೦೨೧ ರಂದು ಮುಂಜಾನೆ ೦೯:೩೦ ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಹಾಗು ಮಕ್ಕಳೊಂದಿಗೆ ಮನೆ ಕೀಲಿ ಹಾಕಿ ಮಗಳಿಗೆ ಶಾಲೆಗೆ ಬಿಟ್ಟು ನನ್ನ ಹೆಂಡತಿಗೆ ಮಳಖೇಡ ಬಸ್ಸಿಗೆ ಕೂಡಿಸಿ ಇನ್ನೊಬ್ಬ ಮಗನಿಗೆ ನಮ್ಮ ತಾಯಿ ಹತ್ತಿರ ಬಿಟ್ಟಿರುತ್ತೇನೆ ನನ್ನ ಕೆಲಸದ ಸಲುವಾಗಿ ಕಲಬುರಗಿ ನಗರದಲ್ಲಿ ಹೊಗಿ ಕೆಲಸ ಮುಗಿಸಿಕೊಂಡು ಮದ್ಯಾಹ್ನ ೧:೫೦ ಗಂಟೆಗೆ ವಾಪಸ ಮನೆಗೆ ಬಂದಾಗ ನಮ್ಮ ಮನೆಯ ಬಾಗಿಲು ಕೀಲಿ ಮುರಿದಿತ್ತು ನಾನು ಒಳಗೆ ಹೋಗಿ ನೋಡಲು ಮನೆಯಲ್ಲಿ ಸಮಾನುಗಳು ಚಲ್ಲಾಪಿಲ್ಲಿಯಾಗಿದ್ದವು. ಅಲ್ಲದೆ ಮನೆಯಲ್ಲಿದ್ದ ಅಲಮಾರದ ಬೆಂಡ್ ಮಾಡಿ ಮುರಿದಿತ್ತು. ನೋಡಲು ಅಲಮಾರದಲ್ಲಿಟ್ಟ ೧) ಬಂಗಾರದ ನೇಕಲ್ಸ್ ೧೫ ಗ್ರಾಂ ಅ.ಕಿ ೬೦,೦೦೦/-ರೂ ೨) ಬಂಗಾರದ ಚೈನ್ ೩೦ ಗ್ರಾಂ ಅ.ಕಿ ೧೨೦,೦೦೦/-ರೂ ೩) ಬಂಗಾರದ ಚೈನ್ ೧೦ ಗ್ರಾಂ  ಅ.ಕಿ ೪೦,೦೦೦/-ರೂ ೪) ಬಂಗಾರದ ಜುಮಕಿ ೫ ಗ್ರಾಂ ೨೦,೦೦೦/-ರೂ ೫) ಬಂಗಾರದ ೫ ಗ್ರಾಂ ಡಿಜನ್ ಉಂಗರ ೨೦,೦೦೦/-ರೂ ೬) ನಗದು ಹಣ ೯೩,೦೦೦/-ರೂ ಇವುಗಳು ಕಳ್ಳತನವಾಗಿದ್ದವು. ಹೀಗೆ ಒಟ್ಟು ೬೫ ಗ್ರಾಂ ಬಂಗಾರದ ಆಭರಣಗಳು ಹಾಗು ನಗದು ಹಣ ಸೇರಿ ಒಟ್ಟು ೩,೫೩,೦೦೦/-ರೂ ಕಿಮ್ಮತಿನವುಗಳು ದಿನಾಂಕ: ೨೫-೧೧-೨೦೨೧ ರಂದು ಬೆಳಿಗ್ಗೆ ೧೦:೦೦ ಗಂಟೆಯಿAದ ಮದ್ಯಾಹ್ನ ೧:೩೦ ಗಂಟೆ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲು ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ನಾನು ನನ್ನ ಹೆಂಡತಿಗೆ ಫೋನ ಮಾಡಿ ವಿಷಯ ತಿಳಿಸಿ ಅವಳು ಮನೆಗೆ ಬಂದ ನಂತರ ಮನೆಯಲ್ಲಿ ವಿಚಾರ ಮಾಡಿ ಇಂದು ದೂರು ಅರ್ಜಿ ನೀಡಿರುತ್ತೇನೆ. ಕಾರಣ ಮಾನ್ಯರವರು ಕಳುವಾದ ಬಂಗಾರದ ಆಭರಣಗಳು ಮತ್ತು ನಗದು ಹಣ ಮತ್ತು ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೂಳ್ಳಲು ವಿನಂತಿ ಅಂತಾ ಇತ್ಯಾದಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಅಶೋಕ ನಗರ ಠಾಣೆ:-  ಇಂದು ದಿನಾಂಕ:೨೬.೧೧.೨೦೨೧ ರಂದು ಬೆಳಿಗ್ಗೆ ೧೦:೦೦ ಗಂಟೆಗೆ ಫರ‍್ಯಾದಿದಾರರಾದ  ಚಂದ್ರಭಾಗ ಗಂಡ ಪಂಡಿತ  ನೂಲಾ ವಯ:೬೮ ಉ: ನಿವೃತ್ತ ಎಫ್.ಡಿ.ಸಿ ನೌಕರಳು, ಜಾ: ಎಸ್.ಸಿ (ಹೊಲೆಯ) ಸಾ|| ಪ್ಲಾಟ್ ನಂ-೩೮೯ ಹಳೆಯ ಇ.ಎಸ್.ಐ. ಆಸ್ಪತ್ರೆಯ ಹತ್ತಿರ ಸಿ.ಐ.ಬಿ ಕಾಲೋನಿ ಕಲಬುರಗಿ. ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ‍್ದಿ ರ‍್ಜಿಯ ಸಾರಾಂಶವೆನೆಂದರೆ, ನಾನು ನಿವೃತ್ತ ನೌಕರಳಿದ್ದು, ಸದ್ಯ ಮನೆ ಕೆಲಸ ಮಾಡಿಕೊಂಡು ಸವಾಗಿರುತ್ತೇನೆ.ನನ್ನ ಗಂಡ ಪಂಡಿತ ನೂಲಾ ಇವರು ಸಹ ನಿವೃತ್ತ ಸರಕಾರಿ ನೌಕರರು ಆಗಿರುತ್ತಾರೆ.ನಮಗೆ ಒಟ್ಟು ಮೂರು ಜನ ಹೆಣ್ಣು ಮಕ್ಕಳಿದ್ದು ಮೂರು ಜನ ಮಕ್ಕಳ ಮದುವೆ ಮಾಡಿದ್ದು ಅವರು ತಮ್ಮ ತಮ್ಮ ಗಂಡನ ಮನೆಯಲ್ಲಿ ವಾಸವಾಗಿರುತ್ತಾರೆ.ಸಿ.ಐ.ಬಿ ಕಾಲೋನಿಯಲ್ಲಿರುವ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಗಂಡ ಇಬ್ಬರೆ ವಾಸವಾಗಿರುತ್ತೇವೆ.ನನ್ನ ಗಂಡ ಪಂಡಿತ ಇವರಿಗೆ ಕಳೆದ ಎರಡು ರ‍್ಷಗಳ ಹಿಂದೆ ಪರ‍್ಶ್ವವಾಯು (ಲಕವಾ) ಕಾಯಿಲೆಯಿಂದ ಬಳಲುತ್ತಿದ್ದು ಅವರಿಗೆ ಸರಿಯಾಗಿ ಮಾತನಾಡಲು ಬರುತ್ತಿಲ್ಲ.ಹೀಗಿದ್ದು ದಿನಾಂಕ ೧೫/೧೧/೨೦೨೧ ರಂದು ಮದ್ಯಾಹ್ನ ೩-೦೦ ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗಂಡ ಮನೆಯಲ್ಲಿರುವಾಗ ನನ್ನ ಗಂಡ ನನಗೆ ಹೇಳದೆ ಕೇಳದೆ ಮನೆಯಿಂದ ಹೊರಗೆ ಹೋಗಿದ್ದು ರಾತ್ರಿಯಾದರೂ ಕೂಡಾ ನನ್ನ ಗಂಡನು ಮನೆಗೆ ಬರದೆ ಇರುವುದರಿಂದ ನಾನು ಗಾಬರಿಯಾಗಿ ಎಲ್ಲಾ ಕಡೆ ಹುಡಕಾಡಿದರೂ ಮತ್ತು ನನ್ನ ಮಕ್ಕಳಿಗೆ ದೂರವಾಣಿ ಮುಖಾಂತರ ವಿಚಾರಿಸಿದರೂ ಕೂಡಾ ನನ್ನ ಗಂಡನ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲ.ನನ್ನ ಗಂಡನು ಕನ್ನಡ ಮತ್ತು ಹಿಂದಿ ಭಾಷೆ ಬಲ್ಲವರಾಗಿರುತ್ತಾರೆ.ಅವರು ಮನೆಯಿಂದ ಹೋಗುವಾಗ ಒಂದು ಬಿಳಿ ಬಣ್ಣದ ಕಂಪನಿ ಬನಿಯನ್ ಮತ್ತು ಒಂದು ನೀಲಿ ಬಣ್ಣದ ಹಳೆಯ ಲುಂಗಿ ಧರಿಸಿರುತ್ತಾರೆ.ಅವರು ಸಾಧಾರಣ ಮೈಕಟ್ಟು ಹೊಂದಿದ್ದು ೫”-೬” ಫೀಟ್ ಎತ್ತರ ಉಳ್ಳವರಾಗಿರುತ್ತಾರೆ.ನನ್ನ ಗಂಡನು ಕಾಣೆಯಾದ ಬಗ್ಗೆ ಇಲ್ಲಿಯವರೆಗೆ ನಾನು ಮತ್ತು ನಮ್ಮ ಮಕ್ಕಳು ಎಲ್ಲಾ ಕಡೆ ಹುಡುಕಾಡಿದರು ಕೂಡ ನನ್ನ ಗಂಡನು ಪತ್ತೆ ಆಗಿರುವದಿಲ್ಲ. ಈ ಬಗ್ಗೆ ನಾನು ನನ್ನ ಗಂಡನ ಗೆಳೆಯರಿಗೆ ಹಾಗೂ ನಮ್ಮ ಸಂಬಂಧಿಕರಿಗೆ ವಿಚಾರಿಸಿದರು ಕೂಡ ನನ್ನ ಗಂಡನ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವದಿಲ್ಲ. ಅಲ್ಲದೆ ನನ್ನ ಗಂಡನು ಈ ಮೊದಲಿನಿಂದಲೂ ಮೋಬಾಯಿಲ್ ಫೋನ್ ಬಳಕೆ ಮಾಡುತ್ತಿರಲಿಲ್ಲ. ಕಾರಣ ಕಾಣೆಯಾದ ನನ್ನ  ಗಂಡ ಪಂಡಿತ ನೂಲಾ  ಇವರನ್ನು ಪತ್ತೆ ಮಾಡಿಕೊಡಲು ವಿನಂತಿ. ಅಂತ ವಗೈರೆಯಾಗಿ ನೀಡಿದ ರ‍್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಅಶೋಕ ನಗರ ಠಾಣೆ:-   ಇಂದು ದಿನಾಂಕ:೨೬.೧೧.೨೦೨೧ ರಂದು ೦೭:೩೦ ಪಿ.ಎಂ.ಕ್ಕೆ ಫರ‍್ಯಾದಿ ಶ್ರೀ ಶಿವಾನಂದ ತಂದೆ ಶಿವಶಂಕರ ಹುಲ್ಲೂರ ವಯ: ೩೧ ರ‍್ಷ ಜಾ: ಎಸ್.ಸಿ (ಮಾದಿಗ) ಉ: ಎಫ್.ಡಿ.ಎ. ಸಮಾಜ ಕಲ್ಯಾಣ ಇಲಾಖೆ  ಸಾ|| ಪ್ಲಾಟ ನಂ. ೪೦ ದೇಶಮುಖ ಲೇಔಟ ಬಿದ್ದಾಪೂರ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ  ಲಿಖಿತ ಫರ‍್ಯಾದಿ  ರ‍್ಜಿ  ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಫ್.ಡಿ.ಎ ಅಂತ ಕಿತ್ತೂರ ರಾಣಿ ಚೆನ್ನಮ್ಮ  ವಸತಿ ಶಾಲೆ ನರಿಬೋಳ ತಾ|| ಜೇರ‍್ಗಿಯಲ್ಲಿ ರ‍್ತವ್ಯ ನರ‍್ವಹಿಸುತ್ತಿರುತ್ತೇನೆ. ನಮ್ಮ ತಾಯಿ ಶ್ರೀಮತಿ ಶರಣಮ್ಮ ಇವರು ಜಿಲ್ಲಾ ಸಂಖ್ಯಾ ಸಂಗ್ರಹಣ ಅಧಿಕಾರಿಗಳ ಕರ‍್ಯಾಲಯದಲ್ಲಿ ಕಛೇರಿ ಅಧೀಕ್ಷಕರು ಅಂತ ರ‍್ತವ್ಯ  ನರ‍್ವಹಿಸುತ್ತಿರುತ್ತಾರೆ. ನಾನು ಮತ್ತು  ನಮ್ಮ  ತಾಯಿ  ಇಬ್ಬರೆ ಮನೆಯಲ್ಲಿ ಇರುತ್ತೇವೆ. ನಮ್ಮ ತಂದೆ ತೀರಿಕೊಂಡಿರುತ್ತಾರೆ.  ನಾವು ದಿನಾಲು ಬೆಳಿಗ್ಗೆ ೦೯:೦೦ ಗಂಟೆಗೆ ಮನೆಯಿಂದ ಹೋದವರು ಸಾಯಂಕಾಲ ೦೬:೦೦ ಗಂಟೆ ಸುಮಾರಿಗೆ ಮನೆಗೆ  ಬರುತ್ತೇವೆ. ನಾನು ಕೆಲಸ ಮುಗಿಸಿಕೊಂಡು ಬರುವಾಗ ನಮ್ಮ ತಾಯಿಗೆ  ಅವರ ಕಛೇರಿಯಿಂದ  ಕರೆದುಕೊಂಡು ಮನೆಗೆ  ಬರುತ್ತೇನೆ.  ಹೀಗಿದ್ದು ಇಂದು ದಿನಾಂಕ:೨೬.೧೧.೨೦೨೧ ರಂದು ನಾನು ಮತ್ತು ನಮ್ಮ ತಾಯಿ  ಇಬ್ಬರು ಎಂದಿನಂತೆ ಬೆಳಿಗ್ಗೆ ೦೯:೦೦ ಗಂಟೆಗೆ  ಮನೆಗೆ  ಬೀಗ  ಹಾಕಿ  ನಮ್ಮ ನಮ್ಮ ಕೆಲಸಕ್ಕೆ  ಹೋಗಿರುತ್ತೇವೆ.  ಕೆಲಸದ ನಂತರ ಸಾಯಂಕಾಲ  ೦೬:೦೦ ಗಂಟೆಗೆ  ನಾನು ಮತ್ತು ನಮ್ಮ  ತಾಯಿ ಶರಣಮ್ಮ  ಇಬ್ಬರೂ  ಮರಳಿ  ಮನೆಗೆ  ಬಂದು  ನೋಡಲಾಗಿ ನಮ್ಮ ಮನೆಯ ಬೀಗ ಮುರಿದ್ದು  ಬಾಗಿಲು ತೆರೆದಿದ್ದು  ಇರುತ್ತದೆ.  ನಂತರ ನಾವಿಬ್ಬರು ಗಾಬರಿಯಾಗಿ  ಒಳಗೆ  ಹೋಗಿ ನೋಡಲಾಗಿ  ಮನೆಯ ಎರಡು  ಬೆಡ್ ರೂಮಗಳಲ್ಲಿ  ಇದ್ದ  ಅಲ್ಮಾರಾದ  ಬಾಗಿಲುಗಳು ತೆರೆದಿದ್ದು  ಅದರಲ್ಲಿದ್ದ  ಎಲ್ಲಾ ಬಟ್ಟೆಗಳು  ಚೆಲ್ಲಾಪಿಲ್ಲಿಯಾಗಿ  ಬಿದ್ದಿರುತ್ತವೆ.  ನಂತರ  ನಮ್ಮ  ತಾಯಿಯ  ಬೆಡ್ ರೂಮನ ಅಲ್ಮಾರವನ್ನು ಪರಿಶೀಲಿಸಿ  ನೋಡಿದಾಗ  ನಮ್ಮ ತಾಯಿ ಅದರಲ್ಲಿ  ಇಟ್ಟಿದ್ದ  ೧) ಬಂಗಾರದ ೨ ಬಳೆಗಳು ೫೦ ಗ್ರಾಂ ಅ.ಕಿ. ೨,೦೦,೦೦೦/-   ೨) ಒಂದು ಎರಡೆಳೆ ಚೈನ್  ೨೦ ಗ್ರಾಂ ಅ.ಕಿ. ೭೦,೦೦೦/-  ೩) ಬಂಗಾರದ ೩ ಉಂಗುರಗಳು ತಲಾ ೫ ಗ್ರಾಂ ಒಟ್ಟು ೧೫ ಗ್ರಾಂ   ಅ.ಕಿ.  ೬೦,೦೦೦/-     ೪) ಝುಮಕಿ  ೧೦ ಗ್ರಾಂ ಅ.ಕಿ.  ೩೦,೦೦೦/-   ೫)  ಒಂದು ಲಾಕೇಟ್  ೧೦ ಗ್ರಾಂ ಅ.ಕಿ.  ೩೦,೦೦೦/-   ೬) ಹರಳಿನ  ಭೆಂಡೋಲಿ  ೧೦ ಗ್ರಾಂ  ಅ.ಕಿ.  ೩೦,೦೦೦/- ಮತ್ತು  ನಗದು   ಹಣ  ರೂ, ೧,೭೦,೦೦೦/-  ಹೀಗೆ ಎಲ್ಲಾ ಸೇರಿ ಒಟ್ಟು ರೂ, ೫,೯೦,೦೦೦/-  ಕಿಮ್ಮತ್ತಿನ ನಗದು ಹಣ ಮತ್ತು  ಬಂಗಾರದ  ಆಭರಣಗಳನ್ನು ಕಳ್ಳತನ ಆಗಿದ್ದು  ಇರುತ್ತದೆ. ಕಾರಣ ನಮ್ಮ ಮನೆಯ  ಬೀಗ  ಮುರಿದು  ಬಾಗಿಲು ತೆಗೆದು ಒಳಗೆ ಪ್ರವೇಶಮಾಡಿ ನಗದು ಹಣ ಬಂಗಾರದ ಆಭರಣಗಳನ್ನು  ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆಮಾಡಿ ಅವರ ವಿರುದ್ಧ ಕ್ರಮ ಜರುಗಿಸಿ ನಮ್ಮ ವಸ್ತುಗಳನ್ನು  ನಮಗೆ  ದೊರಕಿಸಿ ಕೊಡಲು ವಿನಂತಿ ಅಂತ ಇತ್ಯಾದಿಯಾದಿ ಇದ್ದ ರ‍್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

          

 

ಇತ್ತೀಚಿನ ನವೀಕರಣ​ : 02-12-2021 12:03 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080