ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ ಠಾಣೆ -2 :- ದಿನಾಂಕ 26/10/2022 ರಂದು ಬೆಳಿಗ್ಗೆ 5:30 ಎ.ಎಮ್ ದ ಸುಮಾರಿಗೆ ಯುನೈಟೆಡ ಆಸ್ಪತ್ರೆಯಿಂದ ಸೈಬಣ್ಣಾ ತಂದೆ ಶಿವರಾಯ, ಉಮಾದೇವಿ ಗಂಡ ನಾಗಪ್ಪಾ ತಳವಾರ ಇವರುಗಳ ಆರ್.ಟಿ.ಎ ಎಮ್.ಎಲ್.ಸಿ ವಸೂಲಾಗಿರುವ ಬಗ್ಗೆ ಮಾಹಿತಿ ಬಂದಿದಕ್ಕೆ ಯುನೈಟೆಡ ಆಸ್ಪತ್ರೆಗೆ ಹೋಗಿ ಗಾಯಾಳುದಾರರನ್ನು ವಿಚಾರಿಸಿದ್ದು, ಸೈಬಣ್ಣ ತಂದೆ ಶಿವರಾಯ ಇವರ ಹೇಳಿಕೆ ಪಡೆದುಕೊಂಡಿದ್ದು ಸಾರಂಶವೆನೆಂದರೆ, ತಾನು ಮತ್ತು ತನ್ನ ಸಂಬಂಧಿಕರಾದ ಸೈಬಣ್ಣ ಗಂಜಿ ಹಾಗು ಬಾಬುರಾವ ಮೂವರು ಹೈದ್ರಾಬಾದಿನಲ್ಲಿ ಕೆಲಸ ಮಾಡಿಕೊಂಡಿದ್ದು, ನಿನ್ನೆ ದಿನಾಂಕ 25/10/2022 ರಂದು ತಾವು ಸಾಯಿಬಣ್ಣ ಗಂಜಿ ಈತನಿಗೆ ಸಂಬಂಧಪಟ್ಟ ಕಾರ ನಂ. ಟಿ.ಎಸ್ 07 ಜಿ.ವಿ 2589 ಇದರಲ್ಲಿ ಕಲಬುರಗಿಗೆ ಬಂದುಕಲಬುರಗಿಯಿಂದ ರಟಕಲ ದೇವಸ್ಧಾನಕ್ಕೆ ಹೋಗುವ ಕುರಿತು ಮೇಲಿನವರು ಮತ್ತು ತಮ್ಮ ಸಂಬಂಧಿಕರಾದ ಉಮಾದೇವಿ ಗಂಡ ನಾಗಪ್ಪಾ ಹಾಗು ಗೌರಮ್ಮ ಗಂಡ ಹಣಮಂತ ಎಲ್ಲರೂ ಕೂಡಿಕೊಂಡು ಕಲಬುರಗಿಯಿಂದ ರಟಕಲ ದೇವಸ್ಧಾನಕ್ಕೆ ಹೊಗಿ ದರ್ಶನ ಮುಗಿಸಿಕೊಂಡುಮರಳಿ ಕಲಬುರಗಿಗೆ ಬರುವಾಗ ಕಾರನ್ನು ಸಾಯಿಬಣ್ಣ ಗಂಜಿ ಈತನೆ ನಡೆಸುತ್ತಿದ್ದು, ಸಾಯಂಕಾಲ 4:00 ಗಂಟೆ ಸುಮಾರಿಗೆ ಉಪಳಾಂವ ಕ್ರಾಸಿನ ಸಮೀಪ ಬರುವಾಗ ಚಾಲಕನು ತನ್ನ ಕಾರನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಿಯಂತ್ರಣವನ್ನು ಮಾಡಿಕೊಳ್ಳದೆ ರೋಡಿನ ಬಲಭಾಗದ ತಗ್ಗಿನಲ್ಲಿ ಹೋಗಿ ಅಲ್ಲಿ ಪಲ್ಟಿಯಾಗಿ ಮತ್ತೆ ಮುಂದಕ್ಕೆ ಹೋಗಿದ್ದರಿಂದ ಫಿರ್ಯಾದಿ ಮತ್ತು ಉಮಾದೇವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಹಾಗು ಗೌರಮ್ಮಳಿಗೆ ತಲೆಗೆ & ಇತರೆ ಕಡೆಗಳಲ್ಲಿ ಭಾರಿಪ್ರಮಾಣದ ಗಾಯವಾಗಿ ಸ್ಧಳದಲ್ಲಿ ಮೃತ ಪಟ್ಟಿದ್ದು, ಈ ವಿಷಯದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಕೊಟ್ಟ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 6:30 ಎ.ಎಮ್ ಕ್ಕೆ ಬಂದು ಈ ಹೇಳಿಕೆ ಫಿರ್ಯಾದಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಂಚಾರಿ ಪೊಲೀಸ ಠಾಣೆ -2 :-  ದಿನಾಂಕ 26/10/2022 ರಂದು 7:30 AM ಕ್ಕೆ ಶ್ರೀ. ಸುರ್ಯಕಾಂತ ತಂದೆ ಹಣಮಂತ್ರಾಯ ಯಲಗೊಂಡ ವಯಃ 45 ವರ್ಷ ಜಾತಿಃ ಕುರುಬ ಉಃ ಸೆಕ್ಯೂರಿಟಿ ಗಾರ್ಡ ಮುಕ್ಕಾಃ ಪಟ್ಟಣ ತಾ.ಜಿಃ ಕಲಬುರಗಿ ಇವರು ಠಾಣೆಗೆ ಬಂದು ಫಿರ್ಯಾದಿ ಅರ್ಜಿ ಸಲ್ಲಿಸಿದ್ದು ಸಾರಂಶವೆನೆಂದರೆ, ನನ್ನ ಅಣ್ಣನ ಮಗನಾದ ರಮೇಶ ಯಲಗೊಂಡ 32 ವರ್ಷದವನಿದ್ದು, ಈತನು ಕಡಗಂಚಿ ವಿಶ್ವವಿದ್ಯಾಲಯದಲ್ಲಿ ಸೆಕ್ಯೂರಿಟಿ ಗಾರ್ಡ ಅಂತಾ ಕೆಲಸ ಮಾಡಿಕೊಂಡಿದ್ದನು. ಆತನಿಗೆ ಜ್ಯೋತಿ ಎಂಬ ಹೆಂಡತಿ ಹಾಗು ರೋಹಿತ, ಕಾವೇರಿ & ಖುಷಿ ಎಂಬ ಚಿಕ್ಕಚಿಕ್ಕ ಮಕ್ಕಳಿರುತ್ತಾರೆ. ಆತನ ಹೆಸರಿನಿಂದ ಹೊಂಡಾ ಶೈನ್ ಮೋಟರ ಸೈಕಲ ನಂ. ಕೆಎ 32 ಇ.ಕೆ 7447 ನೇದ್ದು ಇರುತ್ತದೆ. ಹೀಗಿದ್ದು, ದಿನಾಂಕ 25/10/2022 ರಂದು ಅಣ್ಣನ ಮಗ ರಮೇಶ ಈತನು ಎಂದಿನಂತೆ ತನ್ನ ಸೆಕ್ಯೂರಿಟಿ ಕೆಲಸಕ್ಕಾಗಿ ಕಡಗಂಚಿ ವಿಶ್ವವಿದ್ಯಾಲಯಕ್ಕೆ ಈ ಮೊಟರ ಸೈಕಲ ಮೇಲೆ ಹೋದನು. ಇಂದು ದಿನಾಂಕ 26/10/2022 ರಂದು ಬೆಳಗಿನ ಜಾವಾ 6:00 ಗಂಟೆ ಸುಮಾರಿಗೆ ನಮ್ಮೂರಿನ ಬಾಬು ತಂದೆ ಟೋಲುಸಾಬ ಈತನು ನಮಗೆ ಮಾಹಿತಿ ತಿಳಿಸಿದ್ದೆನೆಂದರೆ, ನಿನ್ನೆ ದಿನಾಂಕ 25/10/2022 ರಂದು ರಾತ್ರಿ 11:00 ಗಂಟೆ ಸುಮಾರಿಗೆ ರಮೇಶ ಯಲಗೊಂಡ ಈತನು ತನ್ನ ಮೋಟರ ಸೈಕಲ ನಂ. ಕೆಎ 32 ಇ.ಕೆ 7447 ಇದರ ಮೇಲೆ ಟೋಲನಾಕಾ ಕಡೆಯಿಂದ ಪಟ್ಟಣ ಕಡೆ ಬರುವಾಗ ಪಟ್ಟಣ ಕಡೆಯ ಸಣ್ಣ ಬ್ರಿಡ್ಜಿನ ರೋಡ ಹಬ್ಸದ ಹತ್ತೀರ ವೇಗವಾಗಿ ಬರುವಾಗ ಮುಂದೆ ಹೋಗುವ ಯಾವುದೋ ಒಂದು ಲಾರಿಯ ಹಿಂಭಾಗಕ್ಕೆ ಈತನೆ ಆಕಸ್ಮಿಕವಾಗಿ ಡಿಕ್ಕಿ ಹೊಡೆದುಕೊಂಡ ಪರಿಣಾಮ ಆತನ ತಲೆಯ ಭಾಗಕ್ಕೆ, ಮುಖದ ಭಾಗಕ್ಕೆ ಹಾಗು ಅಲ್ಲಲ್ಲಿ ಗಾಯಗೊಂಡು ಸ್ಧಳದಲ್ಲಿ ಮೃತ ಪಟ್ಟಿದ್ದು, ರಾತ್ರಿ ಈತನಿಗೆ ಯಾವುದೊ ಒಂದು ಖಾಸಗಿ ಅಂಬುಲೇನ್ಸದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಕಡೆಗೆ ಕಳುಹಿಸಿಕೊಟ್ಟಿದ್ದು ಅಂತಾ ತಿಳಿಸಿದಕ್ಕೆ ನಾನು ಗಾಬರಿಗೊಂಡು ನಾನು ಮತ್ತು ನಮ್ಮೂರಿನ ಶರಣಬಸಪ್ಪಾ ತಂದೆ ಶಾಂತಪ್ಪಾ ರಾಜೋಳಿ ಇಬ್ಬರೂ ಕೂಡಿ ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋಗಿ ರಮೇಶನಿಗೆ ನೋಡಲಾಗಿ ಆತನ ತಲೆಯ ಭಾಗಕ್ಕೆ, ಮುಖದ ಭಾಗಕ್ಕೆ ಹಾಗು ಅಲ್ಲಲ್ಲಿ ಗಾಯವಾಗಿ ಮೃತ ಪಟ್ಟಿದ್ದು ಇರುತ್ತದೆ. ಕಾರಣ ಈ ವಿಷಯದಲ್ಲಿ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡಿದ್ದು, ಈಗ ಬಂದಿದ್ದು, ಈ ವಿಷಯದಲ್ಲಿ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರಾಘವೇಂದ್ರ ನಗರ ಪೊಲೀಸ ಠಾಣೆ :- ದಿನಾಂಕಃ26.10.2022 ರಂದು ಸಾಯಾಂಕಾಲ 6.30 ಗಂಟೆಯ ಸುಮಾರಿಗೆ ಶ್ರೀಕಂಬಂಬ ಪಾಟಿ ಶೈಲಜಾ ಗಂಡ ರಾಮರಾವದೇಚರಾಜು ವಯಃ51ವರ್ಷ ಜಾಃಬ್ರಾಹ್ಮಣ ಉಃಎಎಓಎಲ್ಐಸಿ ಆಪೀಸ್ಸಾಃಮಹಾಲಕ್ಷ್ಮೀಲೇಔಟ ಕಲಬುರಗಿರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ ನಾನು ಮೂಲತಃ ಹೈದ್ರಾಬಾದ ನಿವಾಸಿ ಆಗಿರುತ್ತೇನೆ, ನಾನು ಕಲಬುರಗಿ ನಗರದ ಎಲ್ಐಸಿ ಆಪೀಸನಲ್ಲಿ ಎಎಓ ಅಂತ ಪ್ರೋಮೋಷನ ಆಗಿ ಬಂದಿರುತ್ತೇನೆ. ಆದ್ದರಿಂದ ನಾನು ಮಹಾಲಕ್ಷ್ಮೀ ಬಡಾವಣೆಯ ಭಗವಂತಪ್ಪಾ ತಂದೆ ಶ್ರೀಮಂತಪ್ಪಾ ಸಿದ್ದಣ್ಣಾ ಎಂಬುವರ ಮನೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇರುತ್ತೇನೆ. ಇತಿಚೀನ ದಿನಗಳಲ್ಲಿ ಸರಕಾರಿ ರಜೆ ಇರುವ ಪ್ರಯುಕ್ತ ನಾನು ನನ್ನ ಮನೆಗೆ ದಿನಾಂಕಃ21.10.2022ರಂದು ರಾತ್ರಿ10.30ಗಂಟೆಗೆ ಸರಿಯಾಗಿ ಮನೆಗೆ ಕೀಲಿ ಹಾಕಿಕೊಂಡು ನನ್ನ ಗಂಡನ ಮನೆ ಇರುವ ಹೈದ್ರಾಬಾದ ಪಕ್ಕದಲ್ಲಿರುವ ನೆಲಗೊಂಡಾ ಗ್ರಾಮಕ್ಕೆ ಹೋಗಿರುತ್ತೇನೆ. ನಂತರ ದಿನಾಂಕಃ23.10.2022ರಂದು ನಮ್ಮ ಮನೆ ಮಾಲೀಕರು ಪೊನ್ಮಾಡಿ ತಿಳಿಸಿದೆನೆಂದರೆ ನಿಮ್ಮ ಮನೆಗೆ ಹಾಕಿರುವ ಕೀಲಯನ್ನು ಯಾರೋ ಕಳ್ಳರು ಮುರಿದ್ದು ಮನೆಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಆಗೆ ಕಾಣುತ್ತಿದೆ ಅದಕ್ಕೆ ನೀವು ಬಂದು ನೋಡಿ ಅಂತ ಹೇಳಿದ್ದಾಗ ಈ ವಿಷಯ ನನ್ನ ಗಂಡನಿಗೆ ಹೇಳಿದು ನಂತರ ನಾನು ಮತ್ತು ನನ್ನ ಗಂಡನಾದ ರಾಮರಾವ ಕೂಡಿಕೊಂಡು ಇಂದು ದಿನಾಂಕಃ26.10.2022ರಂದು ಸಾಯಂಕಾಲ 5.30ಗಂಟೆಯ ಸುಮಾರಿಗೆ ನಾವು ಬಂದು ನೋಡಿದ್ದಾಗ ನಮ್ಮ ಮನೆಯಲ್ಲಿರುವ ಬಟ್ಟೆಗಳು ಚಲ್ಲೆಪೀಲ್ಲೆ ಆಗಿಬಿದ್ದಿರುವದನ್ನು ನೋಡಿ ಗಾಬರಿಗೊಂಡು ನಾನು ಬ್ಯಾಗನಲ್ಲಿ ಇಟ್ಟಿರುವ ಬಂಗಾರದ ಆಭರಣಗಳು ಪರಿಶೀಲಿಸಿ ನೋಡಿದ್ದಾಗ ನನ್ನ ಬ್ಯಾಗನಲ್ಲಿ ಇಟ್ಟಿರುವ ಬಂಗಾರದ ಆಭರಣಗಳಾದ 1) 30ಗ್ರಾಂನ ಮಂಗಲಸೂತ್ರ ಅಃಕಿಃ45,000/- , 2) 10ಗ್ರಾಂ ಬಂಗಾರದ ಚೈನ್ಅಃಕಿಃ15000/-, 3) 25ಗ್ರಾಂದ ಕಿವಿಯೋಲೆ ಅಃಕಿಃ37500, 4) 05ಗ್ರಾಂದ ಬಂಗಾರದ ಉಂಗೂರ ಅಃಕಿಃ7500 ಹೀಗೆ ಒಟ್ಟು 1,05,000/- ರೂ ಬೆಲೆಬಾಳುವ ಬಂಗಾರದ ಆಭರಣಗಳು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ದಿನಾಂಕಃ21.10.2022ರಂದು ರಾತ್ರಿ10.30ಗಂಟೆಯಿಂದ ದಿನಾಂಕಃ23.10.2022ರಂದು ಸಾಯಂಕಾಲ6.00 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯೋಳಗೆ ಅತಿಕ್ರಮ ಪ್ರವೇಶ ಮಾಡಿ ಮನೆಯ ಬಾಗಿಲಕ್ಕೆ ಹಾಕಿರುವ ಕೀಲಿಕೊಂಡಿ ಮುರಿದು ಮನೆಯಲ್ಲಿಟ್ಟಿರುವ 70ಗ್ರಾಂ ಬಂಗಾರದ ಆಭರಣಗಳು ಅಃಕಿಃ 1,05,000/-  ರೂಪಾಯಿ ಬೆಲೆ ಬಾಳುವದು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನಮ್ಮ ಮನೆಯಲ್ಲಿ ನಮ್ಮ ಕುಟುಂಬದೊಂದಿಗೆ ವಿಚಾರಿಸಿಕೊಂಡು ಮತ್ತು ನಾವು ನಮ್ಮೂರಿನಿಂದ ಬಂದು ಪರಿಶೀಲನೆ ಮಾಡಿಕೊಂಡು ಇಂದು ತಡವಾಗಿ ಬಂದು ದೂರು ಕೊಡುತ್ತಿದ್ದೆನೆ.  ಕಾರಣ ನಮ್ಮ ಮನೆಯ ಬಾಗಿಲು ಕೀಲಿ ಮುರಿದು ಮನೆಯಲ್ಲಿಟ್ಟಿರುವ ಬಂಗಾರದ ಆಭರಣಗಳು ಪತ್ತೆ ಹಚ್ಚಿ ನಮ್ಮ ಮನೆ ಕಳ್ಳತನ ಮಾಡಿದವರ ವಿರುದ್ಧ ಕಾನೂನು ಕ್ರಮ ಜರಗಿಸಲು ವಿನಂತಿ  ಅಂತಾ ಇತ್ಯಾಧಿಯಾಗಿ ದೂರು ನೀಡಿದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರಾಘವೇಂದ್ರ ನಗರ ಪೊಲೀಸ ಠಾಣೆ :- ದಿನಾಂಕಃ26.10.2022 ರಂದು ಸಾಯಾಂಕಾಲ 8.30ಗಂಟೆಯ ಸುಮಾರಿಗೆ ಶ್ರೀನರಹರಿ ತಂದೆ ರಾಮಚಂದ್ರ ಕಟ್ಟಿ ವಯಃ43ವರ್ಷ ಜಾಃಬ್ರಾಹ್ಮಣ ಉಃಬ್ಯಾಂಕನೌಕರ ಸಾಃನ್ಯೂರಾಘವೇಂದ್ರಕಾಲೋನಿ ದತ್ತಾತ್ರೆಯ ಕೊಗನೂರರವರ ಮನೆಯಲ್ಲಿ ಬಾಡಿಗೆ ಕಲಬುರಗಿರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ಮಾಡಿಸಿದ ದೂರು ನೀಡಿದರ ಸಾರಾಂಶವೆನೆಂದರೆ ನಾನು ನ್ಯೂರಾಘವೇಂದ್ರಕಾಲೋನಿ ದತ್ತಾತ್ರೆಯ ಕೊಗನೂರರವರ ಮನೆಯಲ್ಲಿ ಬಾಡಿಗೆ ಕಲಬುರಗಿಯ ನಿವಾಸಿತನಿದ್ದು ನಾನು ಮೂಲತಃ ಚಿಕ್ಕೋಡಿ ನಿವಾಸಿಆಗಿರುತ್ತೇನೆ, ನಾನು ಕಲಬುರಗಿ ನಗರದ ಕರ್ನಾಟಕ ಬ್ಯಾಂಕದಲ್ಲಿ ನೌಕರಿ ಮಾಡಿಕೊಂಡು ವಾಸವಾಗಿರುತ್ತೇನೆ. ಹೀಗಿದ್ದು ದೀಪಾವಳಿ ಹಬ್ಬದ ಪ್ರಯುಕ್ತ ನಾನು ಮತ್ತು ನನ್ನ ಕುಟುಂಬ ಕೂಡಿಕೊಂಡು ದಿನಾಂಕಃ19.10.2022ರಂದು ರಾತ್ರಿ8.00ಗಂಟೆಗೆ ನಮ್ಮ ಮನೆಗೆ ಸರಿಯಾಗಿ ಬೀಗ ಹಾಕಿಕೊಂಡು ಹೊಳೆನರಸಿಪೂರದಲ್ಲಿರುವ ನನ್ನ ತಂಗಿ ಮನೆಗೆ ಹೋಗಿರುತ್ತೇನೆ. ನಂತರ ದಿನಾಂಕಃ21.10.2022ರಂದು ಬೆಳಿಗ್ಗೆ10.00ಗಂಟೆ ಸುಮಾರಿಗೆ ನಮ್ಮ ಮನೆಯ ಮಾಲಿಕರಾದ ದತ್ತಾತ್ರೆಯ ಕೋಗನೂರರವರು ಫೋನಮಾಡಿ ತಿಳಿಸಿದ್ದೇನೆಂದರೆ ಯಾರೋ ಕಳ್ಳರು ನಿಮ್ಮ ಮನೆ ಕಳ್ಳತನ ಮಾಡಿಕೊಂಡು ಹೋಗಿರುವ ಹಾಗೆ ಕಾಣುತ್ತಿದೆ ಅಂತಫೋನ ಮಾಡಿದಾಗ ನಾನು ಮತ್ತು ನನ್ನ ಹೆಂಡತಿಯಾದ ಲಕ್ಷ್ಮೀ ಗಂಡ ನರಹರಿ ಕೂಡಿಕೊಂಡು ದಿನಾಂಕ;22/10/2022ರಂದು ಮಧ್ಯಾಹ್ನ12.00ಗಂಟೆ ಸುಮಾರಿಗೆ ನಮ್ಮ ಮನೆಗೆ ಬಂದು ನೋಡಿದಾಗ ನಮ್ಮ ಮನೆಯ ಬಾಗಿಲಿಗೆ ಹಾಕಿರುವ ಕೀಲಿ ಮುರಿದಿದ್ದು ನಂತರ ಗಾಬರಿಗೊಂಡು ನಾವು ಮನೆಯೊಳಗಡೆ ಹೋಗಿ ನೋಡಿದಾಗ ನಮ್ಮ ಮನೆಯಲ್ಲಿಟ್ಟಿರುವ ಅಲಮಾರಿಯು ಸಹ ಒಡೆದಿದ್ದು ಅಲಮಾರಿಯಲ್ಲಿಟ್ಟಿರುವ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ನಂತರ ನಾವು ಇಟ್ಟಿರುವ ಬೆಳ್ಳಿ ಆಭರಣಗಳನ್ನು ಪರಿಶೀಲಿಸಿ ನೋಡಿದಾಗ ಯಾವುದೇ ಆಭರಣಗಳು ಇರಲಿಲ್ಲಾ ನಮ್ಮ ಮನೆಯಲ್ಲಿಟ್ಟಿರು ಬೆಳ್ಳಿಯ ಆಭರಣಗಳಾದ 1) 300ಗ್ರಾಂಬೆಳ್ಳಿತಾಟು ಅಃಕಿಃ15000/-,  2) 100ಗ್ರಾಂ ಬೆಳ್ಳಿ ಆರತಿ ತಟ್ಟೆ ಅಃಕಿಃ5000/-  , 3) 100ಗ್ರಾಂ ಬೆಳ್ಳಿಯ ಅಭಿಶೇಕ ತಟ್ಟೆ ಅಃಕಿಃ5000,  4) 100ಗ್ರಾಂ ಬೆಳ್ಳಿ ವಾಟಗಾ ಅಃಕಿಃ5000, 5) 200ಗ್ರಾಂ ಬೆಳ್ಳಿ ವಾಟಗಾ ಚಿಕ್ಕದು ಅಕಿ. 10000/-  , 6 )  100ಗ್ರಾಂ ಬೆಳ್ಳಿ ಬಟ್ಟಲುಗಳು 3 ಅ.ಕಿ; 5000/-, 7) 100ಗ್ರಾಂ ಬೆಳ್ಳಿ ಕುಂಕುಮದ ಬಟ್ಟಲು 4 ಅ.ಕಿ; 5000/-,  8) 50ಗ್ರಾಂ ಬೆಳ್ಳಿ ತಟ್ಟಿ ಚಿಕ್ಕದು ಅ.ಕಿ; 2500/-, 9) 200ಗ್ರಾಂ ಬೆಳ್ಳಿ ನೀಲಾಂಜನ 3 ಜೊತೆ ಅ.ಕಿ. 10000/-, 10) 100ಗ್ರಾಂ ಬೆಳ್ಳಿ ಉದ್ದರಣೆ 2 ಅ.ಕಿ. 5000/-,  11) 200ಗ್ರಾಂ ಬೆಳ್ಳಿ ಕಾಲ್ಗೆಜ್ಜೆ ಅ.ಕಿ; 10000/-,  12) 50ಗ್ರಾಂ ಬೆಳ್ಳಿ ಕಾಲುಂಗುರ ಅ.ಕಿ. 2500/-,  13) 100ಗ್ರಾಂ ಬೆಳ್ಳಿಗಿಂಡಿ 2 .ಅಕಿ. 5000/-, 14) 3ಗ್ರಾಂ ಬಂಗಾರದ ಜುಮಕಿ ಅ.ಕಿ. 9000/- ಹೀಗೆ ಒಟ್ಟು 94,000/- ರೂ ಬೆಲೆ ಬಾಳುವ ಬೆಳ್ಳಿ ಆಭರಣಗಳು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಇತ್ಯಾಧಿಯಾಗಿ ದೂರು ನೀಡಿದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಇತ್ತೀಚಿನ ನವೀಕರಣ​ : 10-11-2022 01:24 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080