ಅಭಿಪ್ರಾಯ / ಸಲಹೆಗಳು

ಮಹಿಳಾ ಪೊಲೀಸ ಠಾಣೆ:-  ಇಂದು ದಿನಾಂಕ ೨೬.೧೦.೨೦೨೧ ರಂದು ರಾತ್ರಿ ೮ ಗಂಟೆಗೆ ಫರ‍್ಯಾದಿ ಶ್ರೀಮತಿ ಸುನೀತಾ ಗಂಡ ಮಂಜುನಾಥ ಚೆಂಗಟಾ ವ|| ೨೫, ಜಾತಿ|| ಲಿಂಗಾಯತ ಕೆಲಸ|| ಗೃಹಣಿ ಮು|| ಮನೆ ನಂ. ೩೦, ೧ನೇ ಕ್ರಾಸ್, ಆದರ್ಶ ನಗರ, ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ,  ನನ್ನ ಮದುವೆಯು ದಿನಾಂಕ ೧೨-೦೬-೨೦೧೫ ರಂದು ಮಂಜುನಾಥ ತಂದೆ ರೇವಣಸಿದ್ದಪ್ಪ ಚೆಂಗಟಾ ಆದರ್ಶ ನಗರ ಕಲಬುರಗಿ ಇವರೊಂದಿಗೆ ಸಂಪ್ರದಾಯAದAತೆ ನನ್ನ ತಂದೆತಾಯಿ ನನ್ನ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆ ಕಾಲಕ್ಕೆ ನನ್ನ ಗಂಡ ಮತ್ತು ಅತ್ತೆ ಇವರ ಬೇಡಿಕೆಯಂತೆ ಒಂದು ಲಕ್ಷ ರೂಪಾಯಿ ಹುಂಡಾ ಮತ್ತು ೫ ತೊಲಿ ಬಂಗಾರ ಹಾಗೂ ಗೃಹ ಬಳಕೆ ಸಾಮಾನುಗಳು ಕೊಟ್ಟಿರುತ್ತಾರೆ. ಈಗ ನನಗೆ ಇಬ್ಬರು ಮಕ್ಕಳು ಇರುತ್ತಾರೆ.  ನನ್ನ ಗಂಡ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತ ಅಲ್ಲಿ ತಮ್ಮ ವೈಯಕ್ತಿಕ ಖರ್ಚಿಗಾಗಿ ೫ ಲಕ್ಷ  ಸಾಲ ಮಾಡಿದ್ದು, ಹೊರಗಡೆ ಕೂಡ ೪-೫ ಲಕ್ಷ ಸಾಲ ಮಾಡುತ್ತಾ ಬಂದಿರುತ್ತಾರೆ. ಇದರಿಂದ ನನ್ನ ಗಂಡ ಮತ್ತು ಅತ್ತೆ ನಿರ್ಮಲಾ ಇವರು ನನಗೆ ವಿನಾಕಾರಣ ತೊಂದರೆ ಕೊಡುತ್ತಾ, ಮದುವೆಯಲ್ಲಿ ನಿನ್ನ ತಂದೆತಾಯಿ ೧ ಲಕ್ಷ ರೂಪಾಯಿ ಮಾತ್ರ ಕೊಟ್ಟಿರುತ್ತಾರೆ. ಈಗ ನೀನು ನಿನ್ನ ತವರು ಮನೆಯಿಂದ ಇನ್ನು ೫ ಲಕ್ಷ ರೂಪಾಯಿ ವರದಕ್ಷಿಣೆ ಹಣ ತರಬೇಕು ಈಗಾಗಲೇ ನಮಗೆ ಸಾಲ ಆಗಿದೆ. ನೀನು ಹಣ ತಂದು ಕೊಟ್ಟರೆ ಅದರಿಂದ ನಾವು ಸಾಲ ತೀರಿಸಿ ನಿನಗೆ ಮತ್ತು ನಿನ್ನ ಮಕ್ಕಳಿಗೆ ಸರಿಯಾಗಿ ನೊಡಿಕೊಳ್ಳುತ್ತೇವೆ ಅಂತಾ ಹೇಳುತ್ತಾ ಬಂದಿರುತ್ತಾರೆ. ಈ ವಿಷಯ ನಾನು ನನ್ನ ತಂದೆತಾಯಿಗೆ ಹೇಳಿದಾಗ ನನ್ನ ತಂದೆತಾಯಿಯವರು ನಮ್ಮ ಹತ್ತಿರ ಹಣ ಇರುವದಿಲ್ಲಾ. ನೀವು ನಮ್ಮ ಮಗಳಿಗೆ ಸರಿಯಾಗಿ ನೋಡಿಕೊಳ್ಳಿರಿ ಅಂತಾ ನನ್ನ ಗಂಡನ ಮನೆಗೆ ಬಂದು ನನ್ನ ಗಂಡ ಮತ್ತು ಅತ್ತೆ ಇವರಿಗೆ ತಿಳಿಹೇಳಿದರು ಕೂಡಾ ಅವರು ತಮ್ಮ ಚಾಳಿ ಬಿಡದೇ ನನಗೆ ಹಣದ ಸಲುವಾಗಿ ಕಿರುಕುಳ ನೀಡುತ್ತಾ ಬಂದಿರುತ್ತಾರೆ. ನನ್ನ ಗಂಡ ರಾತ್ರಿ ಇಡೀ ನನಗೆ ಹೊಡೆಬಡೆ ಮಾಡುವುದು ರಂಡಿ ಭೊಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುವುದು, ನನ್ನ ತಂದೆತಾಯಿಯವರಿಗೆ ಬೈಯ್ಯುವುದು ಮಾಡುತ್ತಾ ಬಂದಿರುತ್ತಾರೆ. ಮನೆಯಲ್ಲಿ ನನ್ನ ಅತ್ತೆ ಇದ್ದರೂ ಕೂಡಾ ಅವರು ನನ್ನ ಗಂಡನಿಗೆ ಬುದ್ದಿವಾದ ಹೇಳದೆ, ನೀನು ನಿನ್ನ ಗಂಡ ಹೇಳಿದಂತೆ ಹಣ ತಂದುಕೊಡು, ಆಗ ಅವನು ನಿನ್ನ ಜೊತೆ ಸರಿಯಾಗಿ ಸಂಸಾರ ಮಾಡಿಕೊಂಡು ಇರುತ್ತಾನೆ ಅಂತಾ ಹೇಳುತ್ತಾರೆ. ಅಲ್ಲದೆ, ಸಣ್ಣಪುಟ್ಟ ವಿಷಯಕ್ಕೆ ನನಗೆ ರಂಡಿ ಭೋಸಡಿ ಅಂತಾ ಬೈದು ನನಗೆ ಹೀಯ್ಯಾಳಿಸಿ ಮಾತಾಡುತ್ತಾರೆ. ಇದರಿಂದ ನನಗೆ ತುಂಬಾ ಮಾನಸಿಕ ಒತ್ತಡ ಉಂಟಾಗುತ್ತದೆ. ನನ್ನ ಗಂಡನಿಗೆ ನನ್ನ ಬಗ್ಗೆ ಇಲ್ಲಸಲ್ಲದ ವಿಷಯ ಹೇಳಿ ನೀನು ನಿನ್ನ ತವರು ಮನೆಗೆ ಹೋಗು ಅಂತಾ ಯಾವಾಗಲೂ ಹೇಳುತ್ತಾರೆ. ದಿನಾಂಕ ೧೯.೦೮.೨೦೨೧ ರಂದು ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ನನ್ನ ಗಂಡ ಮತ್ತು ಅತ್ತೆ ಇವರು ನನ್ನ ಜೊತೆ ವಿನಾಕಾರಣ ಜಗಳ ತೆಗೆದು ಇಬ್ಬರು ಸೇರಿ ನನಗೆ ಕೈಯಿಂದ ಬೆನ್ನಿನ ಮೇಲೆ ಕಪಾಳಕ್ಕೆ ಹೊಡೆದು, ನಿನ್ನ ಮಕ್ಕಳಿಗೆ ಕರೆದುಕೊಂಡು ನೀನು ತವರು ಮನೆಗೆ ಹೋಗು, ಹಣ ತರದೇ ನಮ್ಮ ಮನೆಗೆ ಬರಬೇಡ ಅಂತಾ ಹೇಳಿರುತ್ತಾರೆ. ಅವರ ಕಿರುಕುಳ ತಾಳದೇ ನಾನು ನನ್ನ ಇಬ್ಬರು ಮಕ್ಕಳೊಂದಿಗೆ ನನ್ನ ತವರು ಮನೆ ಚಿಣಮಗೇರಾ ಗ್ರಾಮಕ್ಕೆ ಹೋಗಿ ಅಲ್ಲಿಯೆ ಉಳಿದುಕೊಂಡಿರುತ್ತೇನೆ. ನನ್ನ ಗಂಡ ಇಲ್ಲಿಯವರೆಗೆ ನನ್ನ ಮತ್ತು ನನ್ನ ಮಕ್ಕಳ ಬಗ್ಗೆ ಯಾವುದೇ ವಿಚಾರ ಮಾಡಿರುವದಿಲ್ಲಾ. ನಮ್ಮ ಜೊತೆ ಮಾತು ಕೂಡಾ ಆಡುತ್ತಿಲ್ಲಾ. ಇದರಿಂದ ನನ್ನ ಜೀವನ ನಡೆಸುವುದು ತುಂಬಾ ಕಷ್ಟ ಆಗುತ್ತಿದೆ. ಕಾರಣ ನನಗೆ ವರದಕ್ಷಿಣೆ ಹಣಕ್ಕಾಗಿ ಕಿರುಕುಳ ನೀಡಿ ಮನೆಯಿಂದ ಹೊರಗೆ ಹಾಕಿದ ನನ್ನ ಗಂಡ ಮತ್ತು ಅತ್ತೆ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 02-11-2021 12:24 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080