ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ ಠಾಣೆ :- ದಿನಾಂಕ:26.08.2022 ರಂದು 12:30 ಪಿ.ಎಂ.ಕ್ಕೆ  ಫಿರ್ಯಾದಿದಾರರಾದ ಶ್ರೀ ಮಹಾಂತಪ್ಪ ತಂದೆ ಬಸಣ್ಣಾ ಹೂಗಾರ ವಯ: 56 ವರ್ಷ ಜಾ: ಹಿಂದೂ ಹೂಗಾರ ಉ: ಕೂಲಿ ಕೆಲಸ ಸಾ|| ಹಾವನೂರ ತಾ|| ಅಫಜಲಪೂರ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆದರೆ, ದಿನಾಂಕ:23.08.2022 ರಂದು ಬೆಳಿಗ್ಗೆ 11:30 ಗಂಟೆಗೆ ನಾನು ಮತ್ತು ನನ್ನ ಸೊಸೆ ಸಂಗೀತಾ ಹಾಗೂ ಮೊಮ್ಮಕ್ಕಳು ಕೂಡಿ ಗುಲ್ಬರ್ಗಾ ಹೈಕೋರ್ಟ ಹತ್ತಿರ ಅಫಜಲಪೂರ ಹೋಗುವ ಬಸ್ ಸಂಖ್ಯೆ ಕೆ.ಎ-32 ಎಫ್-2065 ನೇದ್ದರಲ್ಲಿ ಹತ್ತಿದಾಗ ನನ್ನ ಸೊಸೆಯು ತನ್ನ ವೆನಿಟಿ ಬ್ಯಾಗಿನಲ್ಲಿ 35 ಗ್ರಾಂ ಬಂಗಾರದ ಮಂಗಳ ಸೂತ್ರ ಅ.ಕಿ. 1,05,000/- ಮತ್ತು 4 ಗ್ರಾಂ ಬಂಗಾರದ ಕಿವಿ ಓಲೆಗಳು ಅ.ಕಿ. 15,000/- ಗಳನ್ನು ಇಟ್ಟಿದ್ದು, ಬಸ್ಸಿನಲ್ಲಿ 3-4 ಜನ ಹೆಣ್ಣು ಮಕ್ಕಳು ಕೂಡಿ ನನ್ನ ಸೊಸೆಗೆ ಮತ್ತು ಮೊಮ್ಮಕ್ಕಳಿಗೆ ಹಿಂದೆ ಮುಂದೆ ನೂಕುತ್ತಾ ಸೊಸೆಗೆ ತಿಳಿಯದಂತೆ ಅವಳ ವೆನಿಟಿ ಬ್ಯಾಗಿನಲ್ಲಿದ್ದ 35 ಗ್ರಾಂ ಬಂಗಾರದ ಮಂಗಳಸೂತ್ರ ಮತ್ತು 4 ಗ್ರಾಂ ಬಂಗಾರದ ಕಿವಿ ಓಲೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ನನ್ನ ಸೊಸೆಯ ಮಂಗಳ ಸೂತ್ರ ಮತ್ತು ಬಂಗಾರದ ಕಿವಿ ಓಲೆ ಪತ್ತೆಮಾಡಿ ಕೊಡಬೇಕಾಗಿ ವಿನಂತಿ ಮತ್ತು ಈ ವಿಷಯದ ಬಗ್ಗೆ ಮನೆಯಲ್ಲಿ ವಿಚಾರಿಸಿ ಇಂದು ತಡಮಾಡಿ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ ಅಂತ ಇತ್ಯಾದಿಯಾಗಿ ಸಲ್ಲಿಸಿದ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ ಬಜಾರ ಪೊಲೀಸ ಠಾಣೆ :- ದಿನಾಂಕ:೦೯-೦೮-೨೦೨೨ ರಂದು ಬೆಳಿಗ್ಗೆ ೦೭-೩೦ ಗಂಟೆಯಲ್ಲಿ ನನ್ನ HERO HONDA SPLENDOR PLUS REG NO KA-32U-1036. VALUVE-೧೫೦೦೦/-ವಾಹನವನ್ನು ರಾಮ ಮಂದಿರ ವೃತ್ತದ ಹತ್ತಿರ ಇರುವ ಧನ್ವಂತ್ರಿ ಆಸ್ಪತ್ರೆ ಮುಂದೆ ನಿಲ್ಲಿಸಿ. ನಾನು ಚಿತ್ತಾಪೂರ ತಾಲ್ಲೂಕಿನ ಕೂಡ್ಲಾ ಗ್ರಾಮಕ್ಕೆ ಹೋಗಿರುತ್ತೇನೇ. ನಂತರ ಅದೆ ದಿನ ಸಂಜೆ ೦೭-೪೫ ಗಂಟೆಗೆ ಬಂದು ನೋಡಿದಾಗ ಸದರಿ ಸ್ಥಳದಲ್ಲಿ ನಿಲ್ಲಿಸಿದ್ದ ನನ್ನ ವಾಹನ ಇರಲಿಲ್ಲ.ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :-  ದಿನಾಂಕ:26.08.2022 ರಂದು 09:00 ಪಿ.ಎಂ.ಕ್ಕೆ ಫಿರ್ಯಾದಿದಾರರಾದ ಶ್ರೀ ಅದ್ನಾನ್ ರಹೀಮುದ್ದಿನ್ ತಂದೆ ಮಹ್ಮದ ರಹೀಮುದ್ದಿನ್  ವಯ: 24 ವರ್ಷ ಜಾ: ಮುಸ್ಲಿಂ ಉ: ಬೇಕಾರ ಸಾ|| ಮ.ನಂ. 1-907/9ಎ ಮಹ್ಮದ ಇಸಾ ಬಿಲ್ಡಿಂಗ್ 2ನೇ ಕ್ರಾಸ್ ರೆಹಮತ ನಗರ, ತಾರಫೈಲ್ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಆಂಗ್ಲ ಭಾಷೆಯಲ್ಲಿ ಗಣಕಿಕೃತ ಮಾಡಿಕೊಂಡು ಬಂದ ಒಂದು ಫಿರ್ಯಾದಿ ಅರ್ಜಿಯನ್ನು ಸಲ್ಲಿಸಿದ್ದು ಸದರಿ ಅರ್ಜಿಯ ಸಾರಾಂಶವೆನೆಂದರೆ, ನಮ್ಮ ತಂದೆ ಮಹ್ಮದ ರಹೀಮುದ್ದಿನ್ ಇವರು ಸೌದಿ ಅರೇಬಿಯಾದಲ್ಲಿ  ಕೆಲಸ ಮಾಡಿಕೊಂಡು ಇರುತ್ತಾರೆ. ಕಲಬುರಗಿಯಲ್ಲಿಯ ಹೀರಾಪೂರ ಹತ್ತಿರ ಇರುವ  ಮಾದರಸನ ಹಳ್ಳಿಯಲ್ಲಿ 10 ಎಕರೆ ಕೃಷಿ ಜಮೀನು ಇರುತ್ತದೆ. ಸದರಿ ಜಮೀನಿನ ವ್ಯವಹಾರವನ್ನು  ನೋಡಿಕೊಳ್ಳಲು ನಮ್ಮ ತಂದೆ ಆಗಾಗ ಬಂದು ಹೋಗುತ್ತಿದ್ದರು ಅದರಂತೆ ದಿನಾಂಕ:07.06.2022 ರಂದು 08:00 ಎ.ಎಂ.ಕ್ಕೆ ನಮ್ಮ ತಂದೆ  ಮಹ್ಮದ ರಹೀಮುದ್ದಿನ್ ಇವರು ನಮ್ಮ ಜಮೀನಿಗೆ ಹೋದಾಗ 1) ಇರ್ಫಾನ ಜಾವೇದ ಮಲೇನಮನಿ @ ಇರ್ಫಾನ ಹೀರಾಪೂರ ತಂದೆ ಜಾವೇದ ಮಲೇನಮನಿ 2) ಶಬ್ಬೀರ ಅಹ್ಮದ @ ಶಬ್ಬೀರ ಬೀಲ್ಡರ ತಂದೆ ಶೇಕ ಇಮಾಮ 3) ಗವಿ ಬಿನ್ ನಾಸೀರ ಚಾವೂಸ್  ಸಾ|| ಎಂ.ಎಸ್.ಕೆ. ಮಿಲ್ 4) ಮಿರ್ಜಾ ಸಿಕಂದರ ಬೇಗ ತಂದೆ ನಜೀರ ಬೇಗ ಸಾ|| ಛೋಟಾ ರೋಜಾ ಕಲಬುರಗಿ 5) ಶೋಯೆಬ ಮಹ್ಮದ ತಂದೆ ಅಬ್ದುಲ್ ಹಮೀದ 6) ಸಾಬೀರ ಇವರುಗಳು ನಮ್ಮ ತಂದೆಗೆ ಅವರ ಕೆಲಸ ಮಾಡದಂತೆ ತಡೆದು ಇದು ನಮ್ಮ ಜಮೀನು ಇರುತ್ತದೆ ಅಂತ ಖೊಟ್ಟಿ ದಾಖಲೆಗಳನ್ನು ತೋರಿಸಿ, ಹೆದರಿಸಿ ಅವರಿಗೆ ಮರಳಿ ಕಳುಹಿಸಿರುತ್ತಾರೆ. ಇದಾದ ನಂತರ ನಮ್ಮ ತಂದೆ ಸೌದಿ ಅರೇಬಿಯಾಗೆ ಹೋಗುವದಿದ್ದ ಕಾರಣ  ಸದರಿ ಜಮೀನಿನ ವ್ಯವಹಾರವನ್ನು ನೋಡಿಕೊಳ್ಳುವಂತೆ ನನಗೆ ಜನರಲ್ ಪಾವರ ಆಫ್ ಅಟಾರ್ನಿ ಮೂಲಕ ಅಧಿಕಾರ ನೀಡಿದ್ದು ಇರುತ್ತದೆ. ಕಾರಣ ನಮ್ಮ ತಂದೆ ಖರೀದಿಸಿದ ಜಮೀನಿನ ಖೊಟ್ಟಿ ದಾಖಲೆಗಳನ್ನು ತಯಾರಿಸಿ ನಮ್ಮ ಜಮೀನಿನಲ್ಲಿ ಅತಿಕ್ರಮ ಪ್ರವೇಶಮಾಡಿ ನೋಟರಿ ಮೂಲಕ ಬೇರೆಯವರಿಗೆ ನಮ್ಮ ಜಮೀನು ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು ಅಂತ ಇತ್ಯಾದಿಯಾಗಿ ಸಲ್ಲಿಸಿದ ಅರ್ಜಿ ಸಾರಾಂಶದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರೋಜಾ ಪೊಲೀಸ್‌ ಠಾಣೆ :- ದಿನಾಂಕ: 26/08/2022 ರಂದು 18:30 ಗಂಟೆಗೆ ನೂರಭಾಗ ಹತ್ತಿರ ಸಿದ್ದಿಖಿ ಮಜೀದಿ ಎದರುಗಡೆ   ಸದರಿ ಆರೋಪಿತನು ಮಟಕಾ ಬರೆದುಕೊಳ್ಳುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದುಕೊಂಡು ಸದರಿಯವ ನಿಂದ ನಗದು 11040/- ರೂ , ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ್ ಪೆನ್  ಹಾಗೂ ಎರಡು ಮೊಬೈಲ್ ಅ.ಕಿ: 6000/- ರೂ ಹೀಗೆ ಒಟ್ಟು 17040/- ರೂ ಜಪ್ತುಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.

 

ಇತ್ತೀಚಿನ ನವೀಕರಣ​ : 03-09-2022 12:15 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080