ಅಭಿಪ್ರಾಯ / ಸಲಹೆಗಳು

ಮಹಿಳಾ ಪೊಲೀಸ ಠಾಣೆ :- ಇಂದು ದಿನಾಂಕ ೨೬.೦೮.೨೦೨೧ ರಂದು ಮಧ್ಯಾಹ್ನ ೧ ಗಂಟೆಗೆ ಫರ‍್ಯಾದಿ ಶ್ರೀಮತಿ ನಿಸರ್ಗ ಗಂಡ ನಟರಾಜ್ ಕೆ.ವೈ. ವಯಾ|| ೨೫ ಜಾ|| ಈಡಿಗ ಉ|| ಗೃಹಿಣಿ ಸಾ|| ಮನೆ ನಂ. ೪-೪೪೯ ಸಂತ್ರಾಸವಾಡಿ ದರ್ಗಾರಸ್ತೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ, ನಟರಾಜ್ ತಂದೆ ಯಲ್ಲಯ್ಯ ಸಾ|| ಮನೆ ನಂ. ೪-೪೪೯ ಸಂತ್ರಾಸವಾಡಿ ಕಲಬುರಗಿ ಇವರೊಂದಿಗೆ ನನ್ನ ಮದುವೆ ದಿನಾಂಕ ೩೦.೦೪.೨೦೨೧ ರಂದು ಆಗಿರುತ್ತದೆ. ನನ್ನ ಗಂಡ ನಟರಾಜ್ ಮತ್ತು ಅವನ ತಂದೆ ಯಲ್ಲಯ್ಯಾ ಮತ್ತು ತಾಯಿ ಗೃಹಲಕ್ಷ್ಮಿ ಇವರು ದಿನಾಂಕ ೦೬.೦೧.೨೦೨೧ ರಂದು ಮದುವೆ ಮಾತುಕತೆಯಲ್ಲಿ ೧೦ ಲಕ್ಷ ರೂಪಾಯಿ, ೨೫ ತೊಲ ಬಂಗಾರ ಮತ್ತು ವರೋಪಚಾರ ಮಾಡಿ ವಿವಾಹ ಮಾಡಿಕೊಡಬೇಕು ಅಂತಾ ಬೇಡಿಕೆ ಇಟ್ಟಿರುತ್ತಾರೆ. ಮದುವೆಯಾದ ನಂತರ ಕೂಡಾ ಯಲ್ಲಯ್ಯಾ ಮತ್ತು ಗೃಹಲಕ್ಷ್ಮಿ ಇವರು ತಮ್ಮ ಹಳೆಯ ಬೇಡಿಕೆಗಳನ್ನು ಈಡೇರಿಸಬೇಕು ಅಂತಾ ದಿನಾಂಕ ೨೮.೦೩.೨೦೨೧ ರಂದು ಹಠ ಹಿಡಿದು ಕೊಡದೇ ಇದ್ದಲ್ಲಿ ಮದುವೆಯನ್ನು ಕೈ ಬಿಡಲಾಗುವುದು ಅಂತಾ ಹೆದರಿಸಿದ್ದರಿಂದ, ೨೧ ತೊಲೆ ಬಂಗಾರ ಹಾಕಿ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ನಂತರ ನನ್ನ ಗಂಡ ನನ್ನ ಮಾವ ಅತ್ತೆ, ನಾದಿನಿ ಪಲ್ಲವಿ, ಭಾವ ಬಾಲರಾಜ್ ಇವರ ಒತ್ತಾಯದಂತೆ ನನಗೆ ನನ್ನ ತಂದೆಯಿಂದ ೫ ಲಕ್ಷ ರೂ.ಗಳನ್ನು ತರಲು ಒತ್ತಾಯಿಸಲು ಪ್ರಾರಂಭಿಸಿದರು. ಇದರಿಂದ ಅವರೆಲ್ಲಾ ನನಗೆ ತೊಂದರೆ ಕೊಡಲು ಪ್ರಾರಂಭಿಸಿದರು. ನನ್ನ ಗಂಡ ನನ್ನ ಮೇಲೆ ಸಂಶಯ ಮಾಡುತ್ತಾ ಮಾನಸಿಕವಾಗಿ ಕಿರುಕುಳ ನಿಡಿರುತ್ತಾರೆ. ನನಗೆ ವಿಚ್ಛೇಧನ ಕೊಟ್ಟು ತವರು ಮನೆಗೆ ಹೋಗು ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ. ನನ್ನ ಗಂಡ ಹಾಗೂ ಅವನ ಸಂಬಧಿಕರೆಲ್ಲಾ ನನಗೆ ಅವಾಚ್ಯ ಶಬ್ದಗಳಿಮದ ಬೈದು ನನಗೆ ಜೀವದ ಬೆದರಿಕೆ ಹಾಕಿರುತ್ತಾರೆ. ದಿನಾಂಕ ೨೩.೦೮.೨೦೨೧ ರಂದು ರಾತ್ರಿ ೯ ಗಂಟೆಯಿಂದ ನನ್ನ ಗಂಡ, ಅತ್ತೆ, ಮಾವ, ನಾದಿನಿ ಇವರೆಲ್ಲಾ ಸೇರಿ ರಾತ್ರಿ ಇಡೀ ಕಿರುಕುಳ ನೀಡಿರುತ್ತಾರೆ. ಕಾರಣ ನನಗೆ ವರದಕ್ಷಿಣೆ ಹಣ ತರಬೇಕು ಅಂತಾ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ನನ್ನ ಗಂಡ, ಅತ್ತೆ, ಮಾವ, ನಾದಿನಿ, ಬಾವ ಇವರೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 30-08-2021 01:37 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080