Feedback / Suggestions

ಮಹಿಳಾ ಪೊಲೀಸ ಠಾಣೆ :- ಇಂದು ದಿನಾಂಕ ೨೬.೦೮.೨೦೨೧ ರಂದು ಮಧ್ಯಾಹ್ನ ೧ ಗಂಟೆಗೆ ಫರ‍್ಯಾದಿ ಶ್ರೀಮತಿ ನಿಸರ್ಗ ಗಂಡ ನಟರಾಜ್ ಕೆ.ವೈ. ವಯಾ|| ೨೫ ಜಾ|| ಈಡಿಗ ಉ|| ಗೃಹಿಣಿ ಸಾ|| ಮನೆ ನಂ. ೪-೪೪೯ ಸಂತ್ರಾಸವಾಡಿ ದರ್ಗಾರಸ್ತೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ, ನಟರಾಜ್ ತಂದೆ ಯಲ್ಲಯ್ಯ ಸಾ|| ಮನೆ ನಂ. ೪-೪೪೯ ಸಂತ್ರಾಸವಾಡಿ ಕಲಬುರಗಿ ಇವರೊಂದಿಗೆ ನನ್ನ ಮದುವೆ ದಿನಾಂಕ ೩೦.೦೪.೨೦೨೧ ರಂದು ಆಗಿರುತ್ತದೆ. ನನ್ನ ಗಂಡ ನಟರಾಜ್ ಮತ್ತು ಅವನ ತಂದೆ ಯಲ್ಲಯ್ಯಾ ಮತ್ತು ತಾಯಿ ಗೃಹಲಕ್ಷ್ಮಿ ಇವರು ದಿನಾಂಕ ೦೬.೦೧.೨೦೨೧ ರಂದು ಮದುವೆ ಮಾತುಕತೆಯಲ್ಲಿ ೧೦ ಲಕ್ಷ ರೂಪಾಯಿ, ೨೫ ತೊಲ ಬಂಗಾರ ಮತ್ತು ವರೋಪಚಾರ ಮಾಡಿ ವಿವಾಹ ಮಾಡಿಕೊಡಬೇಕು ಅಂತಾ ಬೇಡಿಕೆ ಇಟ್ಟಿರುತ್ತಾರೆ. ಮದುವೆಯಾದ ನಂತರ ಕೂಡಾ ಯಲ್ಲಯ್ಯಾ ಮತ್ತು ಗೃಹಲಕ್ಷ್ಮಿ ಇವರು ತಮ್ಮ ಹಳೆಯ ಬೇಡಿಕೆಗಳನ್ನು ಈಡೇರಿಸಬೇಕು ಅಂತಾ ದಿನಾಂಕ ೨೮.೦೩.೨೦೨೧ ರಂದು ಹಠ ಹಿಡಿದು ಕೊಡದೇ ಇದ್ದಲ್ಲಿ ಮದುವೆಯನ್ನು ಕೈ ಬಿಡಲಾಗುವುದು ಅಂತಾ ಹೆದರಿಸಿದ್ದರಿಂದ, ೨೧ ತೊಲೆ ಬಂಗಾರ ಹಾಕಿ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ನಂತರ ನನ್ನ ಗಂಡ ನನ್ನ ಮಾವ ಅತ್ತೆ, ನಾದಿನಿ ಪಲ್ಲವಿ, ಭಾವ ಬಾಲರಾಜ್ ಇವರ ಒತ್ತಾಯದಂತೆ ನನಗೆ ನನ್ನ ತಂದೆಯಿಂದ ೫ ಲಕ್ಷ ರೂ.ಗಳನ್ನು ತರಲು ಒತ್ತಾಯಿಸಲು ಪ್ರಾರಂಭಿಸಿದರು. ಇದರಿಂದ ಅವರೆಲ್ಲಾ ನನಗೆ ತೊಂದರೆ ಕೊಡಲು ಪ್ರಾರಂಭಿಸಿದರು. ನನ್ನ ಗಂಡ ನನ್ನ ಮೇಲೆ ಸಂಶಯ ಮಾಡುತ್ತಾ ಮಾನಸಿಕವಾಗಿ ಕಿರುಕುಳ ನಿಡಿರುತ್ತಾರೆ. ನನಗೆ ವಿಚ್ಛೇಧನ ಕೊಟ್ಟು ತವರು ಮನೆಗೆ ಹೋಗು ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ. ನನ್ನ ಗಂಡ ಹಾಗೂ ಅವನ ಸಂಬಧಿಕರೆಲ್ಲಾ ನನಗೆ ಅವಾಚ್ಯ ಶಬ್ದಗಳಿಮದ ಬೈದು ನನಗೆ ಜೀವದ ಬೆದರಿಕೆ ಹಾಕಿರುತ್ತಾರೆ. ದಿನಾಂಕ ೨೩.೦೮.೨೦೨೧ ರಂದು ರಾತ್ರಿ ೯ ಗಂಟೆಯಿಂದ ನನ್ನ ಗಂಡ, ಅತ್ತೆ, ಮಾವ, ನಾದಿನಿ ಇವರೆಲ್ಲಾ ಸೇರಿ ರಾತ್ರಿ ಇಡೀ ಕಿರುಕುಳ ನೀಡಿರುತ್ತಾರೆ. ಕಾರಣ ನನಗೆ ವರದಕ್ಷಿಣೆ ಹಣ ತರಬೇಕು ಅಂತಾ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ನನ್ನ ಗಂಡ, ಅತ್ತೆ, ಮಾವ, ನಾದಿನಿ, ಬಾವ ಇವರೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 30-08-2021 01:37 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080