ಅಭಿಪ್ರಾಯ / ಸಲಹೆಗಳು

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 26-07-2022 ರಂದು ಸದರಿ ತರಪೆ ಪಿರಾದಿದಾರು ಕಲಬುರಗಿ ನಗರದ ರಾಜೀವ್ ಗಾಂಧಿ ಅಪಾರ್ಟಮೆಂಟ್‌ನ ಬಳಿಯಲ್ಲಿ ಬಂದ ಬಾತ್ಮಿಯ ಮೇರೆಗೆ ದಾಳಿ ಮಾಡಲಾಗಿ ಕೆಲವು ಜನರು ಗುಂಪುಗಟ್ಟಿಕೊಂಡು ಅಂದರ್ ಬಾಹರ್ ಎಂಬ ದೈವಾಲೀಲೆಯ ಕಾನೂನು ಬಾಹಿರ ಆಟವನ್ನು ಆಡುತ್ತಾ ಕುಳಿತಿರುವುದನ್ನು ಖಚಿತ ಪಡಿಸಿಕೊಂಡು ೨ ಜನ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಆರೋಪಿತರನ್ನು ಮತ್ತು ನಗದು ಹಣವನ್ನು ವಶಪಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ-26-07-2022  ರಂದು ಸದರಿ ಫಿರ್ಯಾದಿದಾರರು ಠಾಣೆಗೆ ಬಂದು ನೀಡಿದ ಫಿರ್ಯಾದಿಯೇನೆಂದರೆ ಸದರಿಯವರ ಹೊಲದಲ್ಲಿ ಅಂದು ರಾತ್ರಿ ೧೦.೩೦ ಗಂಟೆ ಸುಮಾರಿಗೆ ಅವರು ದಿನಾಂಕ ೧೯.೦೩.೨೦೨೨ ರಂದು  ತಮ್ಮ ಬೈಕ್ ನಂ ಕೆಎ ೩೨ ಇಎ ೩೪೭೭ ಹೊಲದಲ್ಲಿ ಹಚ್ಚಿ ಕುರಿಗಳಿಗೆ ಮೇವನ್ನು ಹಕಿ ರಾತ್ರಿ ೧೦.೦೦ ಸುಮಾರಿಗೆ ಮಲಗಿಕೊಂಡಾಗ ತಮಗೆ ಸೇರಿದ ಬೈಕ್,ಮೊಬೈಲ್  ಮತ್ತು ೧೯ ಕುರಿಗಳನ್ನು ಯಾರೋ ಕಳ್ಳರು ಕಳುವು ಮಾಡಿದ್ದು ಅವುಗಳ ಅಂ.ಕಿ.೧.೩೩.೦೦೦ ರೂ ಇದ್ದು ಹುಡುಕಿಕೊಡಬೇಕೆಂದು ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 26-07-2022  ರಂದು ಸದರಿ ತರಪೆ ಪಿರಾದಿದಾರು ಡಬರಾಬಾದ್ ಏರಿಯಾದ ರಾಣೇಶ್ಪೀರ್ ದರ್ಗಾದ ಬಳಿಯಲ್ಲಿ ಬಂದ ಬಾತ್ಮಿಯ ಮೇರೆಗೆ ದಾಳಿ ಮಾಡಲಾಗಿ ಕೆಲವು ಜನರು ಗುಂಪುಗಟ್ಟಿಕೊಂಡು ಅಂದರ್ ಬಾಹರ್ ಎಂಬ ದೈವಾಲೀಲೆಯ ಕಾನೂನು ಬಾಹಿರ ಆಟವನ್ನು ಆಡುತ್ತಾ ಕುಳಿತಿರುವುದನ್ನು ಖಚಿತ ಪಡಿಸಿಕೊಂಡು ೨ ಜನ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಆರೋಪಿತರನ್ನು ಮತ್ತು ನಗದು ಹಣವನ್ನು ವಶಪಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಎಂ.ಬಿ.ನಗರ ಪೊಲೀಸ್‌ ಠಾಣೆ :- ದಿನಾಂಕ 26-07-2022  ರಂದು ೦೮.೩೦ ಪಿಎಮ್ ಕ್ಕೆ ಶ್ರೀಮತಿ ಕಲಾವತಿ ಗಂಡ ಶಿವಶರಣಪ್ಪಾ ವಯ: ೩೫ ವರ್ಷ ಸಾ|| ಈಡಬ್ಲ್ಯೂಎಸ್ ಮನೆ ನಂ. ೧೩/ಎ ಕೆಹೆಚ್‌ಬಿ ೪ ನೇ ಹಂತ ಕಲಬುರಗಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರನ್ನು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ನಾನು ಕಲಾವತಿ ಗಂಡ ಶಿವಶರಣಪ್ಪಾ ವಯ: ೩೫ ವರ್ಷ ಜಾತಿ: ಪ.ಜಾತಿ(ಹೊಲೆಯ) ಉ: ಟೀಚರ್ ಸಾ|| ಈಡಬ್ಲ್ಯೂಎಸ್ ಮನೆ ನಂ. ೧೩/ಎ ಕೆಹೆಚ್‌ಬಿ ೪ ನೇ ಹಂತ ಕಲಬುರಗಿಇದ್ದು ಮಾನ್ಯರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ನಾನು ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾಗಿ ಸುಮಾರು ೧೦ ವರ್ಷಗಳಿಂದ ಕೆಲಸ ಮಾಡುತ್ತಿದ್ದೆನೆ. ಹಿಗಿದ್ದು ಇಂದು ದಿನಾಂಕ ೨೬/೦೭/೨೦೨೨ ರಂದು ಮದ್ಯಾಹ್ನ ಸುಮಾರು ೧.೩೦ ಪಿಎಮ್ ಕ್ಕೆ ಊಟದ ಸಮಯದಲ್ಲಿ ಮಕ್ಕಳು ಹೊರಗಡೆ ಶೌಚಾಲಯಕ್ಕೆ ಹೋದಾಗ ದೇವರಾಜ ತಂದೆ ಶರಣಪ್ಪಾ ಎಂಬ ಹುಡುಗ ೭ ನೇ ತರಗತಿಯಲ್ಲಿ ಓದುತ್ತಿದ್ದು ಅವನು ಶಶಿಕಲಾ ಎಂಬುವವಳಿಗೆ ನೋಡಿ ನಕ್ಕಿದಾನೆ ಎಂದು ಶಶಿಕಲಾ ಶಾಲೆಯ ಓಳಗಡೆ ಬಂದು ಹುಡುಗನಿಗೆ ಹೊಡೆಯಲು ಬಂದಾಗ ನಾನು ಶಶಿಕಲಾ ಇವರಿಗೆ ಅವನು ಚಿಕ್ಕವನು ಹಾಗೆಲ್ಲಾ ಮಾಡೊದಿಲ್ಲ ಎಂದು ತಿಳಿ ಹೇಳುತ್ತಿರುವಾಗ ಶಶಿಕಲಾ ಇವರು ಏ ರಂಡಿ ನೀನು ಶಾಲೆಯಲ್ಲಿ ಹೀಗೆ ಮಾಡ್ತಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಳು. ಅಷ್ಟರಲ್ಲಿ ಅವರ ಅಕ್ಕ, ಅಕ್ಕನ ಮಗಾ ಮಲ್ಲು ಹಾಗೂ ಅವರ ಅಮ್ಮ ಎಲ್ಲರು ಶಾಲೆಯ ಒಳಗಡೆ ಬಂದು ನನಗೆ ಅವಾಚ್ಯ ಶಬ್ದಗಳಿಂದ ಬೈದು ಮಲ್ಲು ಎಂಬುವವನು ನನಗೆ ಅವನ ಬಲಗೈಯಿಂದ ಮುಷ್ಠಿ ಮಾಡಿ ನನ್ನ ಎದೆಯ ಮೇಲೆ ಎರಡು ಬಾರಿ ಹೊಡೆದಿರುತ್ತಾನೆ. ಶಶಿಕಲಾ ಇವಳು ನನ್ನ ಬೇನ್ನಿಗೆ ಮತ್ತು ಕಪಾಳಕ್ಕೆ ಕೈಯಿಂದ ಹೊಡೆಯುತ್ತಿರುವಾಗ ಶಶಿಕಲಾ ಇವರ ಅಕ್ಕ ಮತ್ತು ಅಮ್ಮ ನನ್ನ ಕೈ ಹಿಡಿದು ಎಳೆದಾಡಿರುತ್ತಾರೆ. ಅಷ್ಟರಲ್ಲಿ ನಮ್ಮ ಶಾಲೆಯಲ್ಲಿಯೇ ಕೆಲಸ ಮಾಡುತ್ತಿರುವ ಸಹ ಶಿಕ್ಷಕಿಯವರಾದ ಅಂಬಿಕಾ ಮತ್ತು ಶಾಲಿನಿ ಎಂಬುವವರು ಬಂದು ಜಗಳ ಬಿಡಿಸಿರುತ್ತಾರೆ. ನಂತರ ಶಶಿಕಲಾ ಮತ್ತು ಮಲ್ಲು ಇಬ್ಬರು ಹೊರಗಡೆ ಹೋಗುತ್ತಿರುವಾಗ ನನಗೆ ಜೀವ ಸಹಿತಾ ಬಿಡಲ್ಲಾ ನೀ ಹೇಗೆ ಸಾಲಿ ನಡುಸ್ತಿ ನಡಸು ನಾವು ನೋಡ್ತೆವೆ ಎಂದು ಜೀವ ಬೇದರಿಕೆ ಹಾಕಿ ಹೋಗಿರುತ್ತಾರೆ. ಆಗ ಸಮಯ ೦೨.೦೦ ಗಂಟೆ ಆಗಿರುತ್ತದೆ. ನನ್ನ ಹಲ್ಲೆ ಮಾಡಿದ ಈ ಕುರಿತು ನಾನು ಆಸ್ಪತ್ರೆಗೆ ಹೋಗಿರುವುದಿಲ್ಲ. ನಾನು ನಡೆದ ವಿಚಾರ ನಮ್ಮ ಶಾಲೆಯ ಕಮೀಟಿ ಹಾಗೂ ಸಿಬ್ಬಂದಿಯವರೊಂದಿಗೆ ವಿಚಾರ ಮಾಡಿಕೊಂಡು ದೂರು ನಿಡುತ್ತಿರುತ್ತೆನೆ. ಆದರಿಂದ ನನಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಮುಷ್ಠಿ ಮಾಡಿ ನನ್ನ ಎದೆಗೆ, ಮತ್ತು ಕಪಾಳಕ್ಕೆ ಹೊಡೆದು, ಕೈ ಗಳನ್ನು ಹಿಡಿದು ಎಳೆದಾಡಿ ನನ್ನ ಮೇಲೆ ಹಲ್ಲೆ ಮಾಡಿ ಜೀವ ಬೇದರಿಕೆ ಹಾಕಿರುವ ಶಶಿಕಲಾ ಮತ್ತು ಅವರ ಅಕ್ಕ, ಅಕ್ಕನ ಮಗಾ  ಮಲ್ಲು ಹಾಗೂ ಅವರ ಅಮ್ಮನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿರುವ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ಮಾನ್ಯ ಪ್ರಿನ್ಸಿಪಲ್‌ ಜೆಎಮ್‌ಎಫ್‌ಸಿ ನ್ಯಾಯಾಲಯ ಕಲಬುರಗಿರವರಿಂದ ಖಾಸಗಿ ದೂರು ರ‍್ಜಿ ಸಂ. ೧೬೦/೨೦ ನೇದ್ದು ವಸೂಲಾಗಿದ್ದರ ಸಾರಾಂಶವೆನಂದರೆ, ಫರ‍್ಯಾದಿ ಶ್ರೀ ಸಂದೀಪ ತಂದೆ ಜಿ ರಾಜೇಂದ್ರ ಪಿಳ್ಳೇ ಉ|| ಬ್ಯಾಂಕ್ ಮ್ಯಾನೇಜರ್ ಬ್ಯಾಂಕ್ ಆಫ್ ಬರೋಡಾ ಕಲಬುರಗಿ ಸಾ|| ಕಲಬುರಗಿ ಇವರು ಸಲ್ಲಿಸಿದ ಖಾಸಗಿ ದೂರಿನ ಸಾರಾಂಶವೆನೆಂದರೆ, ಆರೋಪಿತನಾದ ಬಸವಂತರಾಯ ಗೌಡ ತಂದೆ ನಾನಾಗೌಡ ಪಾಟೀಲ್ ವಯ|| ೪೮ ವರ್ಷ ಉ|| ವ್ಯಾಪಾರ ಸಾ|| ಫ್ಲಾಟ ನಂ, ಜಿ೧ ಸಿ ಬ್ಲಾಕ್ ಎಶೀಯನ್ ಗರ‍್ಡನ್ ಕಲಬುರಗಿ ಇವರು ಮರ‍್ಚ ೨೦೧೭ ನೇ ಸಾಲಿನಲ್ಲಿ ಬ್ಯಾಂಕಿಗೆ ಭೇಟಿ ಕೊಟ್ಟು ಮನೆಯ ಸಾಲದೊಂದಿಗೆ ಪ್ಲಾಟ್ ಖರಿದಿಸಲು ದಾಖಲಾತಿಗಳನ್ನು ತೊರಿಸಿ ತನ್ನ ಇಂಕಮ್ ಟ್ಯಾಕ್ಸ್ ದಾಖಲಾತಿಗಳನ್ನು ಒದಗಿಸಿ ಕೋರಿಕೊಂಡಿದ್ದು ಇರುತ್ತದೆ. ಆದ್ದರಿಂದ ಫರ‍್ಯಾದಿ ಆರೋಪಿತನ ಆಧಾರ ಕಾರ್ಡ, ಪ್ಯಾನ್ ಕಾರ್ಡ ಗಳಿಕೆಯ ಮೂಲ ಆಧಾರದ ಮತ್ತು ಮರುಪಾವತಿಯ ಯೋಗ್ಯತೆಯ ಬಗ್ಗೆ ಮತ್ತು ಬ್ಯಾಂಕಿನ ನಿಬಂಧನಗಳು ಒಳಪಟ್ಟು ೩೫,೦೦,೦೦೦/- ರೂಗಳನ್ನು ಪ್ಲಾಟ ಖರಿದಿಸಿ ಮನೆ ಕಟ್ಟಲು ದಿನಾಂಕ:೧೨.೦೪.೨೦೧೭ ರಂದು ಸಾಲ ಮಂಜೂರಾತಿ ಮಾಡಿ ಅಕೌಂಟ ನಂ,೫೧೧೦೬೦೦೦೦೦೧೨೩ ನೇದ್ದಕ್ಕೆ ಮೊದಲ ಕಂತು ೨೧,೫೦,೦೦೦/- ರೂ,ಗಳು ಪ್ಲಾಟ ಖರೀದಿಸಲು ಬಿಡುಗಡೆ ಮಾಡಿದ್ದು, ಸದರಿ ಆರೋಪಿತನು ಪ್ಲಾಟ ನಂ,೧೨೦ ರ‍್ವೇ ನಂ,೧೧೩ ಬಡೇಪೂರ ನೇದ್ದವುಗಳ ದಾಖಲಾತಿಗಳನ್ನು ಮಾಟಗೇಜ್ ಮಾಡಿ ಬ್ಯಾಂಕಿನ ತಾಬೇಗೆ ಕೊಟ್ಟಿರುತ್ತಾನೆ. ನಂತರ ಆರೋಪಿತನು ಸಾಲದ ಕಂತುಗಳನ್ನು ನಿಗದಿತ ಸಮಯಕ್ಕೆ ಸಂದಾಯ ಮಾಡದೇ ಇದ್ದಿದ್ದರಿಂದ ಫರ‍್ಯಾದಿ ಆರೋಪಿತನಿಗೆ ಭೇಟಿಯಾಗಿ ಸಾಲದ ಹಣ ಮರುಪಾವತಿ ಮಾಡಲು ವಿನಂತಿಸಿಕೊಂಡರು ಸಂದಾಯ ಮಾಡಲು ಒಪ್ಪಿಕೊಂಡಿರುವುದಿಲ್ಲಾ. ಆದ್ದರಿಂದ ಫರ‍್ಯಾದಿಯು ಆರೋಪಿತನ ಗಳಿಕೆಯ ಬಗ್ಗೆ ಮತ್ತು ಇನಕಮ್ ಟ್ಯಾಕ್ಸ್ ಇಲಾಖೆಯ ದಾಖಲಾತಿಗಳು ಕೊಟ್ಟಿದ್ದ ಬಗ್ಗೆ ವಿಚಾರಿಸಲು ಅಲ್ಲಿಯು ಮಾಹಿತಿ ಇರುವುದಿಲ್ಲಾ. ಮತ್ತು ಕರಸಂದಾಯ ಕುಡಾ ಮಾಡಿರುವುದಿಲ್ಲಾ. ಆರೋಪಿತನು ಫರ‍್ಯಾದಿಯ ಬ್ಯಾಂಕಿಗೆ ಮೋಸ ಮಾಡಬೇಕು ಎಂಬ ಉದ್ದೇಶದಿಂದ ಖೊಟ್ಟಿ ಇನಕಮ್ ಟ್ಯಾಕ್ಸ್ ದಾಖಲಾತಿಗಳನ್ನು ಸಲ್ಲಿಸಿ ಮೋಸ ಮಾಡಿರುತ್ತಾನೆ ಕಾರಣ ಆರೋಪಿತನ ವಿರುದ್ದ ಕಲಂ ೪೨೦ ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡು ವರದಿ ಸಲ್ಲಿಸಲು ನ್ಯಾಯಾಲಯ ನಿರ್ದೇಶನ ನೀಡಿದ್ದರಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ಮಾನ್ಯ ಪ್ರಿನ್ಸಿನಪಲ್‌ ಜೆಎಮ್‌ಎಫ್‌ಸಿ ನ್ಯಾಯಾಲಯ ಕಲಬುರಗಿರವರಿಂದ ಖಾಸಗಿ ದೂರು ಅರ್ಜಿ ಸಂ. ೮೬೯/೧೯ ನೇದ್ದು ವಸೂಲಾಗಿದ್ದರ ಸಾರಾಂಶವೆನಂದರೆ, ಫರ‍್ಯಾದಿ ಶ್ರೀ ಸುಭಾಶ್ಚಂದ್ರ ತಂದೆ ಮಾಳಪ್ಪಾ ಕಣ್ಣಿ ವಯ|| ೬೯ ವರ್ಷ ಉ|| ನಿವೃತ್ತಿ ಸರ್ಕಾರಿ ನೌಕರರು ಸಾ|| ಎಲ್,ಐ,ಜಿ ೪೯, ೩ನೇ ಕ್ರಾಸ್ ಬಡೇಪೂರ ಕಾಲೋನಿ ಕಲಬುರಗಿ ಇವರು ಸಲ್ಲಿಸಿದ ಖಾಸಗಿ ದೂರಿನ ಸಾರಾಂಶವೆನೆಂದರೆ, ಕಲಬುರಗಿ ನಗರದ ದರಿಯಾಪೂರ ಸೀಮಾಂತರದ ಜಮೀನು ಸರ್ವೇ ನಂ, ೮/೧ ಅದರಲ್ಲಿ ನರ‍್ಮಿಸಿದ ನಿವೇಶನ ಸಂಖ್ಯೆ ಫರ‍್ಯಾದಿದಾರರಿಗೆ ಸಂಬಂಧ ಪಟ್ಟಿದ್ದು ಸದರಿ ನಿವೇಶನದಲ್ಲಿ ಎದುರುದಾರರು ಅತಿಕ್ರಮ ಪ್ರವೇಶ ಮಾಡಿ ಗುಂಡಾಗಿರಿಯಿಂದ ಅಕ್ರಮ ಚಟುವಟಿಕೆಯಲ್ಲಿ ತೊಡಗಿ ರಾಜಾರೋಷವಾಗಿ ಮನೆ ನರ‍್ಮಿಸಿದ್ದು, ಫರ‍್ಯಾದಿದಾರನ ತಂದೆ ಮಾಳಪ್ಪಾ ತಂದೆ ನಿಂಗಪ್ಪಾ ಕಣ್ಣಿ ರವರು ತಮ್ಮ ೬ ಎಕರೆ ಜಮೀನಿನಲ್ಲಿ ಬೀನ್ ಶೇತಕಿ ಆದೇಶ ಮಾಡಿ ಪ್ಲಾಟಗಳನ್ನು ವಿಂಗಡಿಸಿ ಹಲವಾರು ಜನರಿಗೆ ಮೂಲ ಮಾಲೀಕರಾದ ಅಂದರೆ ಫರ‍್ಯಾದಿದಾರರ ತಂದೆ ಮಾಳಪ್ಪಾ ತಂದೆ ನಿಂಗಪ್ಪಾ ಕಣ್ಣಿ ಇವರು ಮಾರಾಟ ಮಾಡಿರುತ್ತಾರೆ. ಕೌಟಂಬಿಕ ಒಡಂಬಿಕೆ ಪ್ರಕಾರ ಫರ‍್ಯಾದಿದಾರನ ತಮ್ಮನಾದ ನಾಗಣ್ಣಾ ತಂದೆ ಮಾಳಪ್ಪಾ ಕಣ್ಣಿ ಇವರು ನಿವೇಶನ ಸಂಖ್ಯೆ ೧೮ ಇದರ ಉದ್ದ-ಅಳತೆ ೩೦x೪೦ ಫರ‍್ಯಾದಿದಾರರಿಗೆ ನೊಂದಾಯಿತ ದಾನಪತ್ರ ಮಾಡಿ ಕೊಟ್ಟಿರುತ್ತಾರೆ ಅದರ ದಸ್ತಾವೇಜು ಸಂಖ್ಯೆ ೧೧೯೩೦/೧೫-೧೬ ದಿನಾಂಕ: ೦೩.೧೨.೨೦೧೫ ರಂದು ಇರುತ್ತದೆ. ಫರ‍್ಯಾದಿದಾರನು ವಯೋವೃದ್ದನಾಗಿದ್ದು ಆರೋಗ್ಯ ಸ್ಥಿತಿ ಅಷ್ಟೋಂದು ಸರಿಯಾಗಿ ಇಲ್ಲದ ಕಾರಣ ನಡೆದಾಡುವುದು ಕೂಡಾ ಕಷ್ಟದಾಯಕವಾಗಿರುತ್ತದೆ. ಹೀಗಿದ್ದರು ಕೂಡಾ ದಿನಾಂಕ: ೦೧.೦೭.೨೦೧೯ ರಂದು ತಮ್ಮ ಪ್ಲಾಟಿನ ಕಡೆಗೆ ಫರ‍್ಯಾದಿ ಹೋದಾಗ ಪ್ಲಾಟಿನಲ್ಲಿ ಮನೆ ಕಟ್ಟಿದ್ದು ಕಂಡುಬಂದಿರುತ್ತದೆ. ಸದರಿ ಮನೆಯಲ್ಲಿ ಇದ್ದವರಿಗೆ ವಿಚಾರಿಸಲಾಗಿ ಹನಮಂತಪ್ಪಾ ತಂದೆ ಬಸವಣಪ್ಪಾ ಕೋಸಗಿ (ವೈದ್ಯರು) ಹಾಗೂ ಅವರ ಹೆಂಡತಿಯಾದ ವಿಜಯಲಕ್ಷ್ಮೀ ಇವರು ನನಗೆ ಕೊಟ್ಟಿದ್ದಾರೆ ನಾನು ಮನೆ ಕಟ್ಟಿದ್ದೆನೆಂದು ಜಾವೇದ ಇರಾನಿ ತಿಳಿಸಿರುತ್ತಾನೆ. ಆರೋಪಿತರು ಸದರಿ ನಿವೇಶನಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿ ಹಕ್ಕು ಮಾಲೀಕತ್ವ ಹೋಂದಿರುವುದಿಲ್ಲಾ. ಹಾಗೂ ಜಮೀನಿನ ಮೂಲ ಮಾಲೀಕರು ಅಥವಾ ಜಮೀನಿನ ಮೂಲ ಮಾಲೀಕರ ಮಕ್ಕಳು ಯಾವುದೇ ರೀತಿ ಸದರಿ ನಿವೇಶನಗಳನ್ನು ಮಾರಾಟ ಮಾಡಿರುವುದಿಲ್ಲಾ. ಫರ‍್ಯಾದಿಯ ವಯೋವೃದ್ದತನ ಹಾಗೂ ಅವರ ಸದರಿ ನಿವೇಶನದಲ್ಲಿ ಏನು ಮಾಡುತ್ತಾರೆ ಎಂವ ನರ‍್ಭಯದಿಂದ ಅತಿಕ್ರಮ ಪ್ರವೇಶ ಮಾಡಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿ ಕಟ್ಟಡ ನರ‍್ಮಿಸಿರುತ್ತಾರೆ. ಆರೋಪಿತರು ಮೋಸದಿಂದ ಅಕ್ರಮ ಚಟುವಟಿಕೆ ಮಾಡಿ ನಿವೇಶನದಲ್ಲಿ ಮನೆಯನ್ನು ಕಟ್ಟಿದ್ದು ಸದರಿಯವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಬೇಕು ಅಂತಾ ನ್ಯಾಯಾಲಯದ ನಿರ್ದೇಶನದಂತೆ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :-  ದಿನಾಂಕ ೦೩-೦೨-೨೦೨೨ ರಂದು ಸಾಯಂಕಾಲ ೫.೦೦ ಗಂಟೆ ಸುಮಾರಿಗೆ ಕೋಟನೂರ(ಡಿ)ಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಕಾರಿನಲ್ಲಿ ಹೋಗಿ ಮರಳಿ ಬರುವಾಗ ಅಯ್ಯಪ್ಪ ಸ್ವಾಮಿ ದೇವಸ್ಥಾನ ದಾಟಿ ರಸ್ತೆಯ ಮೇಲೆ ಕಾರಿನಲ್ಲಿ ಹೊರಟಾಗ ನನ್ನ ಎದುರಿನಿಂದ ಒಂದು ಮೊಟಾರ ಸೈಕಲ ಮೇಲೆ ಇಬ್ಬರು ಅಪರಿಚಿತರು ನನ್ನ ಕಾರಿನ ಎದುರಿಗೆ ಬಂದು ಕಾರ ನಿಲ್ಲಿಸಿ, ನನ್ನ ಹತ್ತಿರ ಬಂದು ನನಗೆ ಕಾರಿನಿಂದ ಕೆಳಗೆ ಇಳಿಸಿ ನನ್ನ ಜೊತೆ ನಮ್ಮ ಗಾಡಿ ಖರಾಬ ಆಗಿದೆ ನಮ್ಮ ಗಾಡಿ ಹತ್ತಿರ ಬನ್ನೀರಿ ಅಂತಾ ಅನ್ನುತ್ತಾ ಅವರಲ್ಲಿ ಒಬ್ಬನು ನನಗೆ ಚಾಕು ತೋರಿಸಿದನು ಇನ್ನೊಬ್ಬನು ನನಗೆ ಹಿಡಿದು ನನ್ನ ಕೊರಳಲ್ಲಿದ್ದ ೨೫ ಗ್ರಾಂ ಬಂಗಾರದ ಚೈನ ಮತ್ತು ನನ್ನ ಕೈಯಲ್ಲಿದ್ದ ೫ ಗ್ರಾಂ ಬಂಗಾರದ ಉಂಗುರ ಕಸಿದುಕೊಂಡು ಅವರು ತಂದಿದ್ದ ಮೊಟಾರ ಸೈಕಲ ಮೇಲೆ ಕೆಸರಟಗಿ ಕಡೆ ಹೋದರು. ಸದರಿ ಇಬ್ಬರು ಅಪರಿಚಿತರು ಅಂದಾಜು ೨೦-೨೫ ವಯಸ್ಸಿನವರಿದ್ದು, ಮೊಟಾರ ಸೈಕಲ ನೋಡಲು ಬಜಾಜ ಪಲ್ಸರ ಕಪ್ಪು ಬಣ್ಣದ್ದು ಇದ್ದು, ಅದಕ್ಕೆ ನಂಬರ ಇರುವುದಿಲ್ಲಾ. ಅಂತ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 01-08-2022 05:00 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080