ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್ ಠಾಣೆ -1 :- ದಿನಾಂಕ 26-06-2022  ರಂದು ಬೆಳಿಗ್ಗೆ ೯-೦೦ ಗಂಟೆಗೆ ಶ್ರೀ ಗುಲಾಮನಬಿ ತಂದೆ ಶರ್ಮುದ್ದೀನ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ನನ್ನ ಮಗ ಮಹ್ಮದ ಫೈಸಲ್ ಇತನು ಬೀದರನ ಶಾಹೀನ ಕಾಲೇಜನಲ್ಲಿ ವಿದ್ಯಾಬ್ಯಾಸ ಮಾಡುತಿದ್ದಾನೆ ಆಗಾಗಾ ನಾವು ಆತನ ಹತ್ತೀರ ಹೋಗಿ ಮಾತನಾಡಿಸಿ ಬರುತ್ತೇವೆ.  ದಿನಾಂಕ ೨೬-೦೬-೨೦೨೨ ರಂದು ಬೀದರನಲ್ಲಿರುವ ನನ್ನ ಮಗ ಮಹ್ಮದ ಪೈಸಲ್ ಇತನಿಗೆ ಮಾತನಾಡಿಸಲು ನಾನು ಮತ್ತು ನನ್ನ ಹೆಂಡತಿ ಪರವಿನ ಬೇಗಂ ಮಗ ಮಹ್ಮದ ಮುಖಿಮ ನನ್ನ ಹೆಂಡತಿ ಅಕ್ಕ ಶಹಾಂಜಾಹ ಗಂಡ ಅಬ್ದುಲ ವಾಹೀದ ಹಾಗೂ ಅವರ ಮೊಮ್ಮಗಳು ಮುಸ್ಸಿಯಾ ಈರಮ್ಮ ರವರೆಲ್ಲರೂ ನಮಗ  ಪರಿಚಯದ ಮಹ್ಮದ ಬಿಲಾಲ ತಂದೆ ಶೇಖ ಬಾಬು ಇತನ ಕಾರ ನಂಬರ ಕೆಎ-೩೨/ಎನ್-೩೩೩೧ ನೇದ್ದರಲ್ಲಿ ನಾವೆಲ್ಲರೂ ಕುಳಿತು  ಶಹಾಪೂರದಿಂದ ನಸುಕಿನಲ್ಲಿ  ಬಿಟ್ಟು ಜೇವರಗಿ ಮುಖಾಂತರವಾಗಿ ಮಹ್ಮದ ಬಿಲಾಲ ಇತನು ಕಾರ ಚಲಾಯಿಸಿಕೊಂಡು ಕಲಬುರಗಿ ಕಡೆಗೆ ಹೋಗುತ್ತಿದ್ದನ್ನು. ರಾಷ್ಟ್ರೀಯ ಹೆದ್ದಾರಿ-೫೦ ರ ಮೇಲೆ ಬರುವ ಶಹಾಬಾದ ಕ್ರಾಸ ಇಚೆಗೆ ಬರುವ ಹತ್ತಿ ಪ್ಯಾಕ್ಟರಿ ಎದುರುಗಡೆ ರೋಡ ಮೇಲೆ ಯಾವುದೋ ಐಚರ ಗೂಡ್ಸ ವಾಹನದ ಚಾಲಕನು ಕಲಬುರಗಿ ರೋಡ ಕಡೆಯಿಂದ ಜೇವರಗಿ  ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ತನ್ನ ಎಡ ರೋಡಿನಿಂದ ಬಲ ರೋಡಿಗೆ ಬಂದು ನಮ್ಮ ಕಾರಿನ ಎಡಗಡೆ ಸೈಡಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದನು. ನಾನು ಮತ್ತು ಕಾರ ಚಾಲಕ ಎಮ್.ಡಿ ಬಿಲಾಲ ಇಬ್ಬರೂ ಕಾರಿನಿಂದ ಇಳಿದು. ಅಪಘಾತ ಪಡಿಸಿದ ವಾಹನ ನೋಡಲು  ಐಚರ ಗೂಡ್ಸ ವಾಹನವಿದ್ದು ಅದರ ಚಾಲಕ ತನ್ನ ವಾಹನವನ್ನು ಜೇವರಗಿ ಕಡೆಗೆ ಚಲಾಯಿಸಿಕೊಂಡು ಹೋದನು. ಅದರ ನಂಬರ ನೋಡಲು ನನಗೆ ಆಗಿರುವದಿಲ್ಲ, ನಾನು ಮತ್ತು ಕಾರ ಚಾಲಕ ಇಬ್ಬರೂ ಸೇರಿಕೊಂಡು ನನ್ನ ಹೆಂಡತಿ ಪರವಿನ ಬೇಗಂ ಮಕ್ಕಳಾದ ಮಹ್ಮದ ಮುಖಿಮ ಹಾಗೂ ಮುಸ್ಸಿಯಾ ಈರಮ ರವರನ್ನು ಕಾರಿನಿಂದ ಹೊರಗಡೆ ತಂದು ರೋಡ ಪಕ್ಕದಲ್ಲಿ ಕೂಡಿಸಿದೆವು. ನನ್ನ ಹೆಂಡತಿಯ ಅಕ್ಕ ಶಹಾಂಜಾಹ ಇವರನ್ನು ನೋಡಲು ಅವರ ಮುಖಕ್ಕೆ ಭಾರಿ ಪೆಟ್ಟು ಬಿದ್ದಿದ್ದರಿಂದ ಕಾರಿನಲ್ಲಿ ಮೃತಪಟ್ಟಿದ್ದಳು ಅವಳ ಶವವನ್ನು ಕಾರಿನಿಂದ ಹೊರಗಡೆ ತಂದು ರೋಡ ಪಕ್ಕದಲ್ಲಿ ಮಲಗಿಸಿದೆವು ಸದರ ಘಟನೆ ಜರುಗಿದಾಗ ಬೆಳಿಗ್ಗೆ ಅಂದಾಜು ೫-೪೦ ಗಂಟೆ ಸಮಯವಾಗಿತ್ತು. ಸದರ ಘಟನೆಯಿಂದ ನನ್ನ ಎಡ ಕಣ್ಣಿಗೆ ಗುಪ್ತಪೆಟ್ಟು, ಎಡ ಭುಜಕ್ಕೆ ಗುಪ್ತಪೆಟ್ಟು, ಎಡ ಮೆಲಕಿಗೆ ತರಚಿದಗಾಯ, ನನ್ನ ಹೆಂಡತಿಗೆ ಮತ್ತು ಕಾರ ಚಾಲಕ ಬಿಲಾಲ ಇತನಿಗೆ ಯಾವುದೇ ಪೆಟ್ಟು ಬಿದ್ದಿರಲಿಲ್ಲ, ಮಗ ಮಹ್ಮದ ಮುಖಿಮ ಇತನ ಎಡಗೈ ರಿಸ್ಟ ಹತೀರ ತರಚಿದಗಾಯ, ಎಡ ಬೆನ್ನಿಗೆ ಗುಪ್ತಪೆಟ್ಟು ಮುಸ್ಸುಮ ಈರಮ ಇವಳ ಎಡ ಭುಜಕ್ಕೆ ಗುಪ್ತಪೆಟ್ಟು ಎಡ ಹಣೆಗೆ ತರಿಚದಗಾಯವಾಗಿತ್ತು. ಶಹಾಂಜಾಹ ಇವರ ಹಣೆಗೆ ಮುಖಕ್ಕೆ ಮೂಗಿಗೆ ಎಡ ಕಣ್ಣು ಬಾಯಿಗೆ ಎಡಗಲ್ಲಕ್ಕೆ ಭಾರಿ ರಕ್ತಗಾಯವಾಗಿ ಮೌಂಸ ಹೊರಗೆ ಬಂದಿತ್ತು. ನಾನು ಶಹಾಪೂರಕ್ಕೆ ಪೋನ ಮಾಡಿದ್ದರಿಂದ ನನ್ನ ತಮ್ಮ ಮುಬೀನ ಅಹ್ಮದ ಹಾಗೂ ಅಣ್ಣ ಲೈಕ ಪಾಶಾ ರವರು ಅಪಘಾತ ಸ್ಥಳಕ್ಕೆ ಬಂದಾಗ ನಾವೆಲ್ಲರೂ ಸೇರಿಕೊಂಡು ಒಂದು ಕೃಜರ ವಾಹನದಲ್ಲಿ ಶಹಾಂಜಾಹ ಇವರ ಶವವನ್ನು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ನಾನು ಮತ್ತು ನನ್ನ ಮಗ ಮಹ್ಮದ ಮುಖಿಮ ಹಾಗೂ ಮುಸ್ಸಿಯಾ ಈರಮ ರವರು ಹೊರ ರೋಗಿಯಾಗಿ ಚಿಕಿತ್ಸೆ ಮಾಡಿಕೊಂಡು ಪೊಲೀಸ ಠಾಣೆಗೆ ಬಂದಿರುತ್ತೆವೆ. ಅಪಘಾತ ಪಡಿಸಿದ ಐಚರ ಗೂಡ್ಸ ವಾಹನವನ್ನು ಮುಂದೆ ನೋಡಿದಲ್ಲಿ ಗುರುತ್ತಿಸುತ್ತೆನೆ.       ಯಾವುದೋ ಒಂದು ಐಚರ ಗೂಡ್ಸ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮಹ್ಮದ ಬಿಲಾಲ ಇತನು ಚಲಾಯಿಸಿಕೊಂಡು ಹೋಗುತ್ತೀರುವ ಕಾರ ನಂಬರ ಕೆಎ-೩೨/ಎನ್-೩೩೩೧ ನೇದ್ದರ ಎಡಗಡೆ ಡಿಕ್ಕಿಪಡಿಸಿ ಅಪಘಾತ ಮಾಡಿ ಕಾರಿನಲ್ಲಿ ಕುಳಿತಿದ್ದ ನನಗೆ ಮತ್ತು ಶಹಾಂಜಾಹ ಹಾಗೂ ನನ್ನ ಮಗ ಮಹ್ಮದ ಮುಖಿಮ ಹಾಗೂ ಮುಸ್ಸಿಯಾ ಈರಮ ರವರಿಗೆ ಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿದ್ದು ಶಹಾಂಜಾಹ ಇವರಿಗೆ ಭಾರಿ ಪೆಟ್ಟು ಬಿದ್ದಿದ್ದರಿಂದ ಅಪಘಾತ ಸ್ಥಳದಲ್ಲಿ ಮೃತಪಟ್ಟಿದ್ದು ಕಾರಣ ಐಚರ ಗೂಡ್ಸ ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಅರ್ಜಿ ಸಾರಂಶದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ: 26-06-2022  ರಂದು ೦೧:೦೦  ಪಿಎಮ್ ಕ್ಕೆ ಫಿರ್ಯಾದಿದಾರರಾದ ಜಲೀಲ್ ತಂದೆ ಬಾಬಾಸಾಬ್ ಕೋಳೂರ ವಯ:೩೦ವರ್ಷ ಜಾ:ಮುಸ್ಲಿಂ ಉ:ಡ್ರೈವರ್ ಕೆಲಸ ಸಾ//ಸರ್ಕಾರಿ ಆಸ್ಪತ್ರೆ ಮುಂಭಾಗ ಫರತಾಬಾದ ತಾ ಮತ್ತು ಜಿ ಕಲಬುರಗಿ ಈ ಮೂಲಕ ವಿನಂತಿ ದೂರು ಅರ್ಜಿ ಸಲ್ಲಿಸುವುದೆನೆಂದರೆ, ನನ್ನ ಅಣ್ಣನಾದ ಖಲೀಲ್ ಇತನ ಹೆಸರಿನಲ್ಲಿದ್ದ ಬಜಾಜ್ ಡಿಸ್ಕವರ್ ಮೋಟಾರ್ ಸೈಕಲ್ ನಂ: ಏಂ-೩೨-ಙ-೮೮೨೬ ನೇದ್ದು ಇದ್ದು ಸದರಿ ಮೋಟಾರ ಸೈಕಲವು ನಾನೇ ನೆಡೆಸುತ್ತೇನೆ. ದಿನಾಂಕ:೧೭/೦೬/೨೦೨೨ ರಂದು ಬೆಳಿಗ್ಗೆ ೧೧:೩೦ ಎ.ಎಮ್ ಗಂಟೆಗೆ ಕಲಬುರಗಿ ನಗರದ ಸುಪರ್ ಮಾರ್ಕೆಟದ ಹನುಮಾನ ಗುಡಿಯ ಹತ್ತಿರ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಮಾರ್ಕೆಟ್ ಒಳಗಡೆ ಹೋಗಿ ವಸ್ತುಗಳನ್ನು ಖರಿದಿ ಮಾಡಿಕೊಂಡು ಮರಳಿ ಅದೆ ದಿನ ಬೆಳಿಗ್ಗೆ ೧೧:೪೫ ಎ.ಎಮ್ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲ್‌ನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ  ಸಾರಂಶದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.‌

 

ಸ್ಟೇಷನ್ ಬಜಾರ ಪೊಲೀಸ ಠಾಣೆ :-  ದಿನಾಂಕ:26/06/2022 ರಂದು ಸಂಜೆ 6:15 ಗಂಟಗೆ ಫಿರ್ಯಾದಿ ಶ್ರೀ ಫತ್ರು ಪಟೇಲ್ ತಂದೆ ಅಮಿನ ಪಟೇಲ್ ವಯ:40 ವರ್ಷ ಉ:ವ್ಯಾಪಾರ ಸಾ:ಮದಿನಾ ಕಾಲೋನಿ ಎಮ್.ಎಸ್.ಕೆ ಮಿಲ್ ರೋಡ ಕಲಬುರಗಿ ಇವರು ಪೊಲೀಸ್ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನಂದರೆ, 2019 ನೇ ಸಾಲಿನಲ್ಲಿ ನಾನು ಪುನೀತಕುಮಾರ ತಂದೆ ಚನ್ನೆಗೌಡ ಸಾ:ಹಲಗೂರ ಹೊಬಳಿ ಕರದಳ್ಳಿ ಗ್ರಾಮ, ತಾಲೂಕಾ ಮಳವಳ್ಳಿ ಜಿ:ಮಂಡ್ಯ ಇವರಿಂದ 210 ಹಿಟಾಹಿ 2012 ಮಡೇಲ್ ಮಶೀನ್ ಇನ್ವಾಯಿಸ್ ನಂ. MHE/HPT/11-12-0113  ಮಶೀನ ಸಿರಿಯಲ್ ನಂ. N601D02167 ಇಂಜೆನ್ ನಂ.8403663 ಪಾಲಿಸಿ ನಂ.ಪಿಓ287157 ಇದನ್ನು 17 ಲಕ್ಷ 50 ಸಾವಿರ ರೂಪಾಯಿಗೆ ಮಳವಳ್ಳಿಯಲ್ಲಿ ಖರಿದಿ ಮಾಡಿಕೊಂಡು ಅದರ ಖರಿದಿ ಒಪ್ಪಂದ ಪತ್ರ ಆಗಿರುತ್ತದೆ. ಮತ್ತು ನಗದಿ 5 ಲಕ್ಷ 24 ಸಾವಿರ ರೂ ಹಿಟಾಚಿ ಮಾರಾಟ ಮಾಡಿದ ಪುನಿತಕುಮಾರ ತಂದೆ ಚನ್ನೆಗೌಡ ಇವರಿಗೆ 4 ಜನರ ಸಮಕ್ಷಮದಲ್ಲಿ ಕೊಟ್ಟಿರುತ್ತೆನೆ. ಉಳಿದ ಹಣ 12 ಲಕ್ಷ 26 ಸಾವರಿ ರೂಪಾಯಿಗಳನ್ನು ಪ್ರತಿ ತಿಂಗಳು ಹಿಟಾಚಿ ವಾಹನದ ಮೇಲಿರುವ ಶ್ರೀರಾಮ ಫೈನಾನ್ಸ ಬ್ಯಾಂಕಿಗೆ ಪ್ರತಿ ತಿಂಗಳು 49,200 ರೂ.ಸಂದಾಯ ಮಾಡುವದಕ್ಕೆ ಒಪ್ಪಿಕೊಂಡು ಅದೇ ದನ ಮೇಲ್ಕಂಡ ಹಿಟಾಚಿ ವಾಹನವನ್ನು ನನ್ನ ಸ್ವಾಧಿನಕ್ಕೆ ತೆಗೆದುಕೊಂಡು ಕಲಬುರಗಿಗೆ ಬಂದಿರುತ್ತೆನೆ. ಹಿಟಾಚಿ ವಾಹನ ತೆಗೆದುಕೊಂಡು ಕಲಬುರಗಿಗೆ ಬಂದ ನಂತರ ಸುಮಾರು 2 ತಿಂಗಳ ಕಾಲ ಬಾಡಿಗೆಯಿಂದ ನಡೆಸಿದ್ದು 2 ತಿಂಗಳ ಸಾಲದ ಹಣ ನಾನೇ ಕಟ್ಟಿರುತ್ತೆನೆ. ನಂತರ 2019ನೇ ಸಾಲಿನಲ್ಲಿ ಅಂದರೆ ಮೇ ತಿಂಗಳಿನಲ್ಲಿ ಹಿಟಾಚಿ ವಾಹನ ಖರಿದಿ ಸಲುವಾಗಿ ಮಹಾರಾಷ್ಟ್ರದ ಔರಂಗಬಾದ ನಿವಾಸಿಯಗಳಾದ ಖಾನ್ ಖಲಿಲ್ ಅಹ್ಮೆದ ಖಾನ್ ಶಾಹ ತಂದೆ ಕರೀಂ ಶಾಹ ಖಾನ ಸಾ:1ನೇ ಸಿರಗಾಪೂರ ನೆಹರು ನಗರ ಬಾಬರ ಕಾಲೋನಿ ಕಟಕಟಗೇಟ ಔರಂಗಬಾದ(ಮೊ.ನಂ.9370998787) ಇವರು ಬ್ರೊಕರ್ ಮಿಥುನ ತಂದೆ ಚಂದ್ರಕಾಂತ ನಲವಾದೆ ಸಾ:ಪ್ಲಾಟ ನಂ.25 ಜೋಹನ ಕಾಲೋನಿ ಬಾನು ದಾಸ ನಗರ ಔರಂಗಬಾದ(ಮೊ.ನಂ.8007118111) ಈ ಇಬ್ಬರು ಕೂಡಿಕೊಂಡು ಕಲಬುರಗಿಗೆ ನನ್ನ ಹತ್ತಿರ ಬಂದು ಹಿಟಾಚಿ ಬೇಕಾಗಿದೆ ಎಂದು ಮಾತನಾಡಿ ಅದರಂತೆ ನಾವಯ ಕಲಬುರಗಿಯ ಜಿಲ್ಲಾ ನ್ಯಾಯಾಲಯದ ಹತ್ತಿರ ಕುಳತುಕೊಂಡು ಪಂಚರ ಸಮಕ್ಷಮ ಈ ಮೇಲ್ಕಂಡ ಹುಂಡಾಯಿ ಹಿಟಾಚಿ ಮತ್ತು ನನ್ನ ಮಾಲಿಕತ್ವದ ಕಲ್ಲು ಒಡೆಯುವ ಯಂತ್ರ ಇನಾಯಿಸ್ ನಂ.574, 2012 ನೇ ಮಾಡೆಲ್ 1) HDB-BREAKER PIPING-R210-7, R220LC (33N6-91030) 2) HDB-ROCK BREAKER ASSY KIT (HDB210-9 (90N6-DA0070)  ಈ ಎರಡು ಸೇರಿ ಒಂದು ಯಂತ್ರ ಬೇಲೆ ರೂ.19 ಲಕ್ಷ ಇದ್ದು, ಹಿಟಾಚಿ ಮತ್ತು ಕಲ್ಲು ಒಡೆಯುವ ಯಂತ್ರ ಒಟ್ಟು ರೂ.24 ಲಕ್ಷ 50 ಸಾವಿರ ರೂಗೆ ಖರಿದಿ ಮಾಡಿದ್ದು, ಅದರಂತೆ ನಾನು ಒಪ್ಪಿಕೊಂಡಿರುತ್ತೆನೆ. ಅದೇ ದಿವಸ ನಗದು ರೂಪದಲ್ಲಿ 12 ಲಕ್ಷ 37 ಸಾವಿರ ರೂಪಾಯಿ ಕೊಟ್ಟಿದ್ದು ಉಲೀದ ಹಣ 12 ಲಕ್ಷ 13 ಸಾವರ ರೂ ಈ ಹಣ ಮುಂದಿನ 45 ದಿವಸಗಳ ಒಳಗಾಗಿ ಹಿಟಾಚಿ ಮೇಲಿರುವ ಸಾಲದ ಹಣ ಶ್ರೀರಾಂ ಫೈನಾನ್ಸ (ಸಾಲದ ಖಾತೆ ನಂ. MADDRT809260002) ಕ್ಲೀಯರ ಮಾಡಿಕೊಡುವಂತೆ ಮಾತುಕತೆಯಾಗಿದ್ದು ದಿ:01/05/2019 ರಂದು ಖರಿದಿ ಒಪ್ಪಂದ ಪತ್ರ ಆಗಿರುತ್ತದೆ. ಈ ಸಮಯದಲ್ಲಿ ಸೈಫನ ಇಫರ್ಾನ ಮಿಥುನ ನಲವಾದೆ ಇವರುಗಳು ಸಾಖ್ಷಿಯಾಗಿ ಸಹಿ ಮಾಡಿರುತ್ತಾರೆ. ಖರಿದಿ ಆದ ನಂತರ ಹಿಟಾಚಿ ಮೇಲಿರುವ ಸಾಲದ ಹಣ ನಾವು ಸರಿಯಾದ ಮಸಯಕ್ಕೆ ತುಂಬುತ್ತೆವೆ ನೀನು ಅನುಮಾನ ಪಡಬೇಡ ಅಂತ ಹೇಳಿ ನಂಬಿಸಿ ನನ್ನಿಂದ ಅದೇ ದಿನ ಲಾರಿ ನಂ. ಎಮ್.ಹೆಚ್. 14 ಎಫ್.ಟಿ-1818 ಟ್ರ್ಯಾಲಿಯಲ್ಲಿ ಹಿಟಾಚಿ ಮಶೀನ್ ಮತ್ತು ಕಲ್ಲು ಒಡೆಯುವ ಯಂತ್ರ ತೆಗೆದುಕೊಂಡು ಹೋಗಿರುತ್ತಾನೆ.  ನಂತರ ಕರಾರು ಒಪ್ಪಂದದ ಪ್ರಕಾರ ನನ್ನ ಹಿಟಾಚಿ ವಾಹನ ಮತ್ತು ಕಲ್ಲು ಒಡೆಯುವ ಯಂತ್ರ ಖರದಿಸಕೊಂಡು ಹೋಗಿರುವ ಖಾನ್ ಖಲೀಲ ಅಹ್ಮೆದ ಖಾನ ಶಾಹ ತಂದೆ ಕರೀಮ್ ಶಾಹ ಖಾನ್ ಇವರು ಹಿಟಾಚಿ ವಾಹನದ ಮೇಲೀರುವ ಶ್ರೀರಾಮ್ ಫೈನಾನ್ಸನಲ್ಲಿ ಇರುವ ಸಾಲದ ಹಣವನ್ನು ತುಂಬಲಿಲ್ಲ ಮತ್ತು ಈ ವಿಷಯ ನನಗೆ ಗೊತ್ತಾಗಿ ಖಾನ್ ಖಲೀಲ್ ಅಹ್ಮೆದ ಖಾನ ಶಾಹ ಇವರಿಗೆ ಫೊನ್ ಮಾಡಿ ಸಂಪರ್ಕಿಸಿದಾಗ ಸಾಲದ ಹಣ ಇಂದು ತುಂಬುತ್ತೆನೆ ನಾಳೆ ತುಂಬುತ್ತೆನೆ ಎಂದು ಹೇಳುತ್ತಾ ಸಾಲದ ಹಣ ಕಟ್ಟದೆ ಸುಳ್ಳು ನೇಪ ಹೇಳಿ ಮುಂದುಡುತ್ತಾ  ಬಂದಿರುತ್ತಾನೆ. ಒಂದೆರಡು ಸಲ ನಾನು ಮತ್ತು ಮಕ್ತುಮ ಪಟೇಲ್ ತಂದೆ ನಬೀ ಪಟೇಲ್ ಇವರನ್ನು ಜೋತೆಗೆ ಕರೆದುಕೊಂಡು ಔರಂಗಬಾದಕ್ಕೆ ಹೊಗಿ ಅವರನ್ನು ಬೇಟಿಯಾಗಲು ಪ್ರಯತ್ನಿಸಿದ್ದು ಅವರು ನಾವು ಬಂದಿದ್ದು ಕೇಳಿಕೊಂಡು ನಮ್ಮನ್ನು ಬೇಟಿಯಾಗದೆ ಮುಖ ತಪ್ಪಿಸಿಕೊಂಡು ಹೋಗಿರುತ್ತಾನೆ. ಅವರು ಸಿಗದೆ ಇದಾಗ ನಾವು ಮರಳಿ ಕಲಬುರಗಿಗೆ ಬಂದಿರುತ್ತೆವೆ. ನನ್ನಿಂದ ಹಿಟಾಚಿ ವಾಹನ ಮತ್ತು ಕಲ್ಲು ಒಡೆಯುವ ಯಂತ್ರ ಖರಿದಿ ಮಾಡಿದ ಖಾನ್ ಖಲೀಲ್ ಅಹ್ಮೆದ ಖಾನ ಶಾಹ ತಂದೆ ಕರೀಮ್ ಶಾಹ ಖಾನ್ ಮತ್ತು ಬ್ರೊಕರ್ ಮಿಥುನ್ ತಂದೆ ಚಂದ್ರಕಾಂರ ನಲವಾದೆ ಇವರುಗಳು ನನಗೆ ನಂಬಿಸಿ ಖರದಿ ಮಾಡಿಕೊಂಡು ಹೋಗಿ ಇಲ್ಲಿಯವರೆಗೆ ಶ್ರೀರಾಂ ಫೈನಾನ್ಸನಲ್ಲಿರುವ ಸಾಲದ ಹಣ ಕ್ರಮಬಧ್ಧವಾಗಿ ಕಟ್ಟದೆ ಮತ್ತು ನನಗೂ ಸಹ ಯಾವುದೆ ತರಹದ ಹಣ ಕೊಡದೆ ಮತ್ತು ಖರಿದಿಸಿದ ಹಿಟಾಚಿ ವಾಹನ ಮತ್ತು ಕಲ್ಲು ಒಡೆಯುವ ಯಂತ್ರ ಸಹ ಮರಳಿ ಕೊಡದೆ ತನ್ನ ಹತ್ತಿರ ಕಾನೂನು ಬಾಹಿರವಾಗಿ ಇಟ್ಟುಕೊಂಡು ನನ್ನನ್ನು ನಂಬಿಸಿ ಅಪರಾದಿಕ ನಂಬಿಕೆ ದ್ರೊಹ ಹಾಗೂ ಮೊಸ ಎಸಗಿದ್ದು ಆದ್ದರಿಂದ ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ಒದಿಗಿಸಿ ಕೊಟಬೇಕೆಂದು ಮನೆಯಲ್ಲಿ ಇದರ ಬಗ್ಗೆ ಚಚರ್ಿಸಿ ವಿಚಾರ ಮಾಡಿಕೊಂಡು ತಡವಾಗಿ ಪೊಲೀಸ್ ಠಾಣೆಗೆ ಬಂದು ಈ ದೂರನ್ನು ಸಲ್ಲಿಸುತ್ತಿದ್ದೆನೆ ಅಂತ ನೀಡಿದ ದೂರಿನ  ಸಾರಂಶದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 16-07-2022 04:24 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080