ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ 26-05-2022  ರಂದು ೧೯:೩೦ ಗಂಟೆಗೆ ಪಿರ್ಯಾಧಿದಾರರಾದ ಶ್ರೀ ಹಣಮಂತ ತಂದೆ ಸಾಯಿಬಣ್ಣ ನೂಲಕರ ವಯ: ೨೬ ವರ್ಷ, ಉ: ಒಕ್ಕಲುತನ, ಜಾತಿ: ಪ.ಜಾತಿ(ಹೊಲೆಯ) ಸಾ: ಖಾಜಾ ಕೋಟನೂರ ತಾ: ಜಿ: ಕಲಬುರಗಿ ಇವರು ಠಾಣೆಗೆ ಹಾಜರಾಗಿ ಸಲ್ಲಿಸಿದ ದೂರಿನ ಸಾರಾಂಶದ ಏನೆಂದರೆ, ದಿನಾಂಕ ೧೭.೦೫.೨೦೨೨ ರಂದು ಮದ್ಯಾಹ್ನ ೧೨:೩೦ ಗಂಟೆಗೆ ನಾನು ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಮಠದ ಕಮಾನ್ ಹತ್ತಿರ ನಮ್ಮ ಗ್ರಾಮದವನೆ ಆದ ಖಾನಸಾಬ ತಂದೆ ಬಾಬುಮಿಯ್ಯಾ ಮುಲ್ಲಾ ಈತನು ನನ್ನ ಎದುರು ಅಡ್ಡವಾಗಿ ನ ಇಂತು ಏ ಧೇಡ ಸೂಳಿ ಮಗನೇ (ಹೊಲ್ಯ) ನಿನಗ ಸೊಕ್ಕು ಬಂದಿದೆ ನಿನ್ನ ಕಥೆ ಮುಗಿಸುತ್ತೇನೆ ಎಂದು ಕೈಯಲ್ಲಿ ಕಬ್ಬಿಣದ ರಾಡ ಹಿಡಿದು ಹಲ್ಲೆ ಮಾಡಲು ಯತ್ನಿಸಿರುತ್ತಾನೆ. ಅಷ್ಟರಲ್ಲಿ ಆತನ ತಂದೆಯಾದ ಬಾಬು ತಂದೆ ಲಾಲಸಾಬ ಮುಲ್ಲಾ ಈತನು ಬಂದು ನನ್ನ ಶರ್ಟನ ಕೊರಳ ಪಟ್ಟಿ ಹಿಡಿದು ಹಲ್ಲೆ ಮಾಡಲು ಯತ್ನಿಸಿದನು. ಅನೀರೀಕ್ಷಿತವಾಗಿ ಇವರ ಹಲ್ಲೆಯ ಯತ್ನದಿಂದ ನಾನು ಪೂರ್ಣವಾಗಿ ಭಯಗೊಂದು ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಇಬ್ಬರು ತಂದೆ ಮಕ್ಕಳು ನನ್ನ ಹಿಡಿದು ನಿನ್ನ ಹೆಂಡತಿಯಾದ ರೇಣುಕಾ ಇವಳಿಗೆ ನಾನೆ ತೆಗೆದುಕೊಂಡು ಹೋಗಿರುತ್ತೇನೆ ಅವಳಿಗೆ ಏನಾದರೂ ಹೊಡೆಬಡೆ ಮಾಡಿದರೆ ನಿಮ್ಮ ಕುಟುಂಬಕ್ಕೆ ಬೆಂಕಿ ಹಚ್ಚಿ ಸುಟ್ಟು ಬಿಡುತ್ತೇನೆ. ನಿನ್ನ ಹೆಂಡತಿ ನನಗೆ ಪ್ರೀತಿಸಿದ್ದಾಳೆ ಅವಳಿಗೆ ಏನಾದರೂ ಆದರೆ ನಾನು ಸಹಿಸಿಕೊಳ್ಳುವುದಿಲ್ಲ. ಅವಳಿಂದಲೆ ನಿನ್ನ ಕೊಲೆ ಮಾಡಿಸುತ್ತೇನೆ. ಎಂದು ಜೀವ ಭಯ ಹಾಕಿರುತ್ತಾನೆ. ಗಲಾಟೆ ನಡೆದಾಗ ನನ್ನ ತಾಯಿಯಾದ ಶ್ರೀಮತಿ ಸುಶೀಲಾಬಾಯಿ ಘಟನೆ ಸ್ಥಳಕ್ಕೆ ಬಂದಾಗ ನನ್ನ ತಾಯಿಗೂ ಕೂಡಾ ಅಶ್ಲೀಲವಾಗಿ ಬೈದಿರುತ್ತಾನೆ.  ಇದಕ್ಕೆ ಪ್ರಮುಖ ಕಾರಣ ದಿನಾಂಕ ೦೫.೦೪.೨೦೨೨ ರಂದು ನನ್ನ ಪತ್ನಿ ಶ್ರೀ ರೇಣುಕಾ ಇವಳು ನನ್ನ ಮೂರು ವರ್ಷದ ಹೆಣ್ಣು ಮಗುವಿಗೆ ತೆಗೆದುಕೊಂಡು ಹೋದಾಗ ತಮ್ಮ ಠಾಣೆಯಲ್ಲಿ ದಿನಾಂಕ ೦೬.೦೪.೨೦೨೨ ರಂದು ಕಾಣೆಯಾದ ಬಗ್ಗೆ ದೂರು ಕೊಟ್ಟಾಗ ದೂರು ದಾಖಲಾಗಿತ್ತು. ನಂತರ ನನ್ನ ಪತ್ನಿ ದಿನಾಂಕ ೦೭.೦೪.೨೦೨೨ ರಂದು ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದಿಂದ ನನ್ನ ತಮ್ಮನ ಮೊಬಾಯಿಲಗೆ ಕರೆ ಮಾಡಿ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಎಂದಾಗ ನಾನು ಠಾಣೆಗೆ ಹೋಗಿ ಈ ವಿಷಯ ತಿಳಿಸಿದಾಗ ಸದರಿ ನನ್ನ ಪತ್ನಿಯನ್ನು ಠಾಣೆಗೆ ತಂದು ಬುದ್ದಿವಾದ ಹೇಳಿ ನನ್ನ ಮನೆಗೆ ಬರಲು ತಿಳುವಳಿಕೆ ಹೇಳಿದರೂ ಅವಳು ಒಪ್ಪಲಾರದೆ ತನ್ನ ತವರು ಮನೆಗೆ ಹೋಗಿರುತ್ತಾಳೆ. ಈ ವಿಷಯದಲ್ಲಿ ನನ್ನ ಪತ್ನಿ ಮತ್ತು ಸದರಿ ಖಾನಸಾಬ ಸಂಪರ್ಕದಲ್ಲಿದ್ದು, ನನ್ನ ಕೊಲೆ ಮಾಡಲು ಹೊಂಚು ಹಾಕುತ್ತಲಿದ್ದಾರೆ. ನನ್ನ ತಾಯಿಗೆ ಹಲವಾರು ಸಲ ಅವಮಾನಕರವಾದ ಮಾತುಗಳು ಆಡಿರುತ್ತಾರೆ. ಈ ಎಲ್ಲವುಗಳ ಹಿನ್ನಲೆಯಿಂದ ಇವತ್ತು ಖಾನಸಾಬ ಮತ್ತುಯ ಆತನ ತಂದೆ ಬಾಬು ಇವರು ನನ್ನ ಮೇಲೆ ಹಲ್ಲೆ ಮಾಡಲು ಬಂದಿದ್ದರು. ಅದೇ ಸಮಯದಲ್ಲಿ ರೇವಣಸಿದ್ದ ತಂದೆ ಚಂದ್ರಪ್ಪಾ ಮತ್ತು ಶೇಖಪ್ಪಾ ತಂದೆ ಬಂಡಪ್ಪಾ ಬಂದಾಗ ಅವರು ನನ್ನ ಹಲ್ಲೆ ಮಾಡುವುದನ್ನು ಬಿಡಿಸಿದ್ದಾರೆ, ಜಾತಿ ಹಿಡಿದು ಬೈದು ಅವಮಾನಿಸಿ ಮಾರಕಾಸ್ತçಗಳಿಂದ ಹಲ್ಲೆ ಮಾಡಲು ಯತ್ನಿಸಿದ ಖಾನಸಾಬ ತಂದೆ ಬಾಬು ಮತ್ತು ಬಾಬು ತಂದೆ ಲಾಲಸಾಬ ಇವರ ಮೇಲೆ ಕಾನೂನಿನ ಕ್ರಮ ಜರುಗಿಸಲು ತಮ್ಮಲ್ಲಿ ವಿನಂತಿ ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 01-06-2022 01:30 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080