ಅಭಿಪ್ರಾಯ / ಸಲಹೆಗಳು

ಸಂಚಾರಿ-೦೨ ಪೊಲೀಸ ಠಾಣೆ :-  ದಿನಾಂಕ 26-04-2022 ರಂದು ಸಾಯಂಕಾಲ ೦೫:೩೦ ಗಂಟೆಗೆ  ಅನೀಲ ತಂದೆ ಹಿರಾ ಲಾಲ ಹಿಬಾರೆ ವ; ೫೫ ವರ್ಷ ಜಾ: ಬಹುಸಾರ ಕ್ಷತ್ರೀಯ ಉ: ವ್ಯಾಪಾರ ಸಾ; ವಲ್ಲಾಬಾಯಿ ಪಟೇಲ ಚೌಕ್ ಶಹಾಬಾದ ತಾ; ಶಹಾಬಾದ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ನೀಡಿದ್ದು ಸಾರಂಶವೆನೆಂದರೆ, ದಿನಾಂಕ-೨೧/೦೪/೨೦೨೨ ರಂದು ನನ್ನ ಅಣ್ಣನ ಮಗನಾದ ಆಕಾಶ ತಂದೆ ಈಶ್ವರಲಾಲ ಈತನು ಸೇಡಂ ರಿಂಗ್ ರೋಡ ಸರ್ಕಲ ಮೇಲೆ ಬೆಳಿಗ್ಗೆ ೧೦-೧೫ ಗಂಟೆ ಸುಮಾರಿಗೆ ರೋಡ ದಾಟುವಾಗ ಮಹೆಬೂಬ ನಗರ ರಿಂಗ್ ರೋಡ ಕಡೆಯಿಂದ ಟಂ ಟಂ ನಂ ಕೆಎ-೩೨ ಬಿ-೭೧೦೯ ನೇದ್ದರ ಚಾಲಕ ಮಹಮ್ಮದ ಶಫಿ ತಂದೆ ಮಹಮ್ಮದ ಶಾಬೋದ್ದೀನ್ ಸಾ; ಬುಲಂದ ಪರವೇಜ ಕಾಲೋನಿ ಕಲಬುರಗಿ ಈತನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ತೆಲೆಯ ಭಾಗಕ್ಕೆ ರಕ್ತಗಾಯ ಎಡಕವಿಯಿಂದ ರಕ್ತ ಬಂದಿದ್ದು. ಬಲಕಣ್ಣಿನ ಹತ್ತಿರ ಮತ್ತು ಎಡಕಣ್ಣಿನ ಹತ್ತಿರ ಹಾಗೂ ಬಲಕೈಗೆ ತರಚಿದ ಗಾಯಗಳಾಗಿದ್ದು ಘಟನೆಯನ್ನು ಮಹೇಶ ಗುತ್ತೆದಾರ ಮತ್ತು ವಸಂತ ಗುತ್ತೆದಾರ ಇವರು ನೋಡಿದ್ದು ಅಣ್ಣನ ಮಗನಿಗೆ ಯುನೈಟೇಡ್ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ಮುಂದೆ ಮಗನ ಪರಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಉಪಚಾರ ಕುರಿತು ಈ ವಿಷಯದಲ್ಲಿ  ಪ್ರಕರಣ ನಂ. ೮೬/೨೦೨೨ ಕಲಂ ೨೭೯,೩೩೭,೩೩೮ ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ, ಅಂದೆ ದಿನಾಂಕ-೨೧/೦೪/೨೦೨೨ ರಂದು ಕಲಬುರಗಿಯಿಂದ ಹೈದ್ರಾಬಾದಿನ ಮಿಯಾಪುರ ಏರಿಯಾದ ಶ್ರೀಕಾರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಮುಂದೆ ಅಲ್ಲಿಯ ವೈದ್ಯರ ಸಲಹೆಯಂತೆ ಮಗ ಆಕಾಶನ ಪರಸ್ಥಿತಿಯು ತುಂಬಾ ಚಿಂತಾಜನಕವಾಗಿರುತ್ತದೆ. ಅಂತಾ ತಿಳಿಸಿದಕ್ಕೆ ಏನೋ ಗೊತ್ತಾಗದೆ ಅಲ್ಲಿಂದ ದಿನಾಂಕ-೨೩/೦೪/೨೦೨೨ ರಂದು ಮತ್ತೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಚಿರಾಯು ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಮಗ ಆಕಾಶನು ಉಪಚಾರ ಪಡೆಯುತ್ತಿರುವಾಗ ರಸ್ತೆ ಅಪಘಾತದಲ್ಲಿ ಆದ ಗಾಯವು ಗುಣಮುಖವಾಗದೆ ಇಂದು ದಿನಾಂಕ-26-04-2022 ರಂದು ಸಾಯಂಕಾಲ ೪-೧೨ ಗಂಟೆ ಸುಮಾರಿಗೆ ಗುಣಮುಖವಾಗದೆ ಮೃತ ಪಟ್ಟಿರುತ್ತಾನೆ. ಈ ವಿಷಯದಲ್ಲಿ ಮುಂದಿನ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 27-04-2022 06:17 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080