ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ ಠಾಣೆ-1 :- ದಿನಾಂಕ 26-02-2023 ರಂದು 6:00 ಪಿ.ಎಂ ಕ್ಕೆ  ಶ್ರೀ. ವಿಶ್ವನಾಥ ತಂದೆ ಲಕ್ಷ್ಮಣ ಮೇಲಿನಮನಿ ಸಾ: ಗುತ್ತರಗಿ ತಾ: ಸಿಂದಗಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಅವರ ಅಣ್ಣನಾದ ಮಂಜುನಾಥ ಮೇಲಿನಮನಿ ಇವರು ಒಂದು ಕನ್ನಡದಲ್ಲಿ ಟೈಪ್ ಮಾಡಿಸಿ ಸಹಿ ಮಾಡಿದ ಫಿರ್ಯಾದಿ ಅರ್ಜಿಯನ್ನು ಹಾಜರುಪಡಿಸಿದ್ದು ಸದರಿ ಫಿರ್ಯಾದಿ ಅರ್ಜಿ ಸಾರಾಂಶವೇನೆಂದರೆ ನಾನು ಮಂಜುನಾಥ ತಂದೆ ಲಕ್ಷ್ಮಣ ಮೇಲಿನಮನಿ ವಯ:38ವರ್ಷ ಜಾ: ಮಾದಿಗ (ಎಸ್.ಸಿ) ಉ: ಖಾಸಗಿ ಕೆಲಸ ಸಾ: ಬಿ.ಸಿ.ಎಂ ಹಾಸ್ಟೇಲ್ ಹತ್ತಿರ, ಕಾಂತಾ ಕಾಲೋನಿ, ಕಲಬುರಗಿ ಈ ಮೂಲಕ ನಾನು ದೂರು ಸಲ್ಲಿಸುವದೇನೆಂದರೆ ನಿನ್ನೆ ದಿನಾಂಕ 25-02-2023 ರಂದು ಸಾಯಂಕಾಲ ನನ್ನ ವೈಯಕ್ತಿಕ ಕೆಲಸದ ಕುರಿತು ನನ್ನ ಮೋಟಾರ್ ಸೈಕಲ್ ನಂ ಕೆ.ಎ-28 ಇ.ಸಿ-4036 ನೇದ್ದರ ಮೇಲೆ  ದರ್ಗಾ ಏರಿಯಾಗೆ ಹೋಗಿ ನನ್ನ ಕೆಲಸ ಮುಗಿಸಿಕೊಂಡು ಮರಳಿ ನಮ್ಮ ಮನೆಗೆ ಹೋಗುವ ಕುರಿತು ಎಸ್.ವಿ.ಪಿ ಸರ್ಕಲ್ ಮುಖಾಂತರ ರಸ್ತೆ ಬದಿಯಿಂದ ನಿಧಾನವಾಗಿ ಹೋಗುವಾಗ ರಾಷ್ಟ್ರಪತಿ ಸರ್ಕಲ್ ಹತ್ತಿರದ ಎಲ್.ಪಿ.ಜಿ ಗ್ಯಾಸ್ ಪಂಪ್ ಹತ್ತಿರ ರಸ್ತೆ ಮೇಲೆ ಸಾಯಂಕಾಲ 7:30 ಗಂಟೆ ಸುಮಾರಿಗೆ ಒಂದು ಆಟೋ ರಿಕ್ಷಾ ಚಾಲಕನು ರಾಷ್ಟ್ರಪತಿ ಸರ್ಕಲ್ ಕಡೆಯಿಂದ ಎಲ್.ಪಿ.ಜಿ ಗ್ಯಾಸ್ ಪಂಪ್ ಒಳಗೆ ಹೋಗುವ ಕುರಿತು ತನ್ನ ಆಟೋ ರಿಕ್ಷಾ ಅನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ನಾನು ಹೋಗುವ ರಸ್ತೆ ಬದಿಗೆ ಬಂದು ನನಗೆ ಎದುರಿನಿಂದ ಡಿಕ್ಕಿಪಡಿಸಿದನು ಆಗ ನಾನು ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದೆನು  ಕಾರಣ ಆಟೋ ರಿಕ್ಷಾ ನಂ.ಕೆಎ-32 ಎ-3716 ನೇದ್ದರ ಚಾಲಕನು ರಾಷ್ಟ್ರಪತಿ ಸರ್ಕಲ್ ಕಡೆಯಿಂದ ಎಲ್.ಪಿ.ಜಿ ಗ್ಯಾಸ್ ಪಂಪ್ ಒಳಗೆ ಹೋಗುವ ಕುರಿತು ತನ್ನ ಆಟೋ ರಿಕ್ಷಾ ಅನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ನನ್ನ ರಸ್ತೆ ಬದಿಗೆ ಬಂದು ನನಗೆ ಎದುರಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿದ್ದು ಕಾರಣ ಸದರಿ ಆಟೋ ರಿಕ್ಷಾ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೆಕೆಂದು ನೀಡಿದ ದೂರು ಅರ್ಜಿ ಸಾರಾಂಶದ ಮೆಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ-25-02-2023 ರಂದು ಸದರಿ ಆರೋಪಿತರು ಫಿರ್ಯಾದಿಯ ಮನೆಗೆ ಬಂದು ನಿನ್ನ ಮಗ ಎಲ್ಲಿ ಎಂದು ಕೇಳಿದ್ದು ಅದಕ್ಕೆ ಫಿರ್ಯಾದಿಯು ನನ್ನ ಮಗನಿಗೆ ನೀವೆ ಕರೆದುಕೊಂಡು ಹೋಗಿದ್ದೀರೆಂದು ಹೇಳಿದಾಗ ಅದಕ್ಕೆ ಸದರಿ ಆರೋಪಿತರು ನಿನ್ನ ಮಗ ನಮ್ಮ ಮಗಳಿಗೆ ಚುಡಾಯಿಸಿದ್ದಾನೆಂದು ಹೇಳಿದವರೆ ಫಿರ್ಯಾದಿಗೆ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ-25-02-2023  ರಂದು ಫಿರ್ಯಾದಿಯ ಮಗಳಿಗೆ ಸಿದ್ದು ಆರೋಪಿತನು ಚುಡಾಯಿಸಿದ್ದು ಅದಕ್ಕೆ ಫಿರ್ಯಾದಿಯು ಸಿದ್ದು ಈತನ ತಂದೆ ತಾಯಿಗೆ ಹೋಗಿ ಅದರ ಬಗ್ಗೆ ಮಾಹಿತಿಯನ್ನು ನೀಡಿದ್ದು ಅದಕ್ಕೆ ಸದರಿ ಆರೋಪಿತನು ರಂಡಿ ಮಗನೆ ನಿನ್ನ ಮಗಳಿಗೆ ಚುಡಾಯಿಸಿದರೆ ಏನಾಯಿತು ಇದರ ಬಗ್ಗೆ ನಮ್ಮ ತಂದೆ ತಾಯಿಗೆ ಹೇಳುತ್ತಿ ಎಂದು ಕಟ್ಟಿಗೆಯಿಂದ ತಲವಾರಿನಿಂದ ಹೊಡೆ ಬಡೆ ಮಾಡಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ-26-02-2023  ರಂದು ಮಧ್ಯಾಹ್ನ ೩.೦೦ ಗಂಟೆಗೆ  ಸುಲ್ತಾನಪುರ ಕ್ರಾಸದಿಂದ ಒಂದು ಟಂಟಂ ವಾಹನದಲ್ಲಿ ಅಂಗನವಾಡಿ ಶಾಲೆಗಳಲ್ಲಿ ನೀಡುತ್ತಿದ್ದ ಪೌಷ್ಟಿಕ ಆಹಾರದ ಪಾಕೇಟುಗಳನ್ನು ಸಾರ್ವಜನಿಕ ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದಾರೆಂದು ಖಚಿತ ಬಾತ್ಮಿ ಬಂದ ಮೇರೆಗೆ ದಾಳಿ ಮಾಡಲಾಗಿ ಸದರಿ ಆರೋಪಿತರು ಮತ್ತು ಮುದ್ದೆ ಮಾಲನ್ನು ವಶಕ್ಕೆ ಪಡೆದು ಕೆಎ ೩೨ ಡಿ ೨೧೦೦ ಟಂಟಂ ವಾಹನವನ್ನು ವಶಕ್ಕೆ ಪಡೆದು ಸದರಿ ಆರೋಪಿತರ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ್‌ ಠಾಣೆ :-  ದಿನಾಂಕ: 26.02.2023 ರಂದು ಸಾಯಂಕಾಲ 18.30 ಪಿಎಂಕ್ಕೆ ಶ್ರೀ ಸಿದ್ರಾಮಯ್ಯ ಸಿಹೆಚಸಿ 222 ಚೌಕ ಪೊಲೀಸ್ ಠಾಣೆ ಕಲಬುರಗಿ ನಗರ ರವರು 16 ಜನ ಇಸ್ಪೀಟ್ ಜೂಜಾಟನಿರತ ಆರೋಪಿಗಳು ಮತ್ತು ಮುದ್ದೆ ಮಾಲು, ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಸರಕಾರಿ ತರ್ಫೆ ಫಿರ್ಯಾದಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ನಾನು ಸಿದ್ರಾಮಯ್ಯ ಸಿಹೆಚಸಿ 222 ಚೌಕ ಪೊಲೀಸ್ ಠಾಣೆ ಕಲಬುರಗಿ ನಗರ ಸರಕಾರಿ ತರ್ಫೆಯಾಗಿ ಫಿರ್ಯಾದಿ ವರದಿ ಸಲ್ಲಿಸುವದೆನೆಂದರೆ  ದಿನಾಂಕ:26.02.2023 ರಂದು ಸಾಯಂಕಾಲ 16.00 ಗಂಟೆಗೆ ಠಾಣಾ ವ್ಯಾಪ್ತಿಯ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಾ ಠಾಣಾ ವ್ಯಾಪ್ತಿಯ ಚೌಕ ಸರ್ಕಲ ಹತ್ತಿರ ಹೋಗುತ್ತಿದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ ಶಹಾಬಜಾರ ಕಟಗರಪೂರದ ಮಹಾದೇವ ದೇವಸ್ಥಾನದ ಹಿಂದಿನ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ದೈವಲೀಲೆ (ನಶೀಬಿನ) ಇಸ್ಪೇಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ನಾನು ಸದರಿ ವಿಷಯವನ್ನು ತಮಗೆ ಈಗಾಗಲೇ ಫೋನ ಮುಖಾಂತರ ತಿಳಿಸಿ ಮಾನ್ಯ ನ್ಯಾಯಾಲಯದಿಂದ ದಾಳಿ ಮಾಡಿ ಕ್ರಮಕೈಕೊಳ್ಳುವ ಕುರಿತು ಅನುಮತಿ ಪಡೆಯಲು ತಿಳಿಸಿದ್ದು ಇರುತ್ತದೆ. ನಂತರ ನಾನು ಸದರಿ ವಿಷಯವನ್ನು ನಮ್ಮ ಮೇಲಾಧಿಕಾರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಂತೆ ನಮ್ಮ ಠಾಣೆಯ ಸಿಬ್ಬಂದಿಯವರಾದ 1) ಶ್ರೀ ಮಹಾಂತಪ್ಪ ಸಿಹೆಚಸಿ 22 2) ಸುರೇಶ ಸಿಪಿಸಿ 130  3) ಶ್ರೀ ಅಶೋಕ ಸಿಪಿಸಿ 06 4) ಶ್ರೀ ಪ್ರದೀಪ ಸಿಪಿಸಿ 85 5) ಕು:ಜಗದೇವಿ ಮಪಿಸಿ 37 6) ಶ್ರೀ ಶಿವಪ್ಪಾ ಸಿಪಿಸಿ 303 7) ಜಗದೇವರೆಡ್ಡಿ ಸಿಪಿಸಿ 28 ಇವರುಗಳನ್ನು ಚೌಕ ಸರ್ಕಲ ಹತ್ತಿರ ಕರೆಯಿಸಿದ್ದು ಮತ್ತು ಇಬ್ಬರು ಪಂಚರಾದ 1) ಶ್ರೀ ಶರಣಪ್ಪಾ ತಂದೆ ಹಣಮಂತಪ್ಪ ಡೋರನಳ್ಳಿ ವ:52 ವರ್ಷ ಉ:ಗೌಂಡಿ ಕೆಲಸ ಜಾ:ಕಬ್ಬಲೀಗ ಸಾ:ಯಲ್ಲಮ್ಮ ಗುಡಿಯ ಹತ್ತಿರ ಗಂಗಾ ನಗರ ಕಲಬುರಗಿ 2) ಶ್ರೀ ಮಹಾದೇವ ತಂದೆ ಶ್ರೀಪತರಾವ ಮೇತ್ರೆ ವ:32 ವರ್ಷ ಉ:ಕುಂಬಾರ ಕೆಲಸ ಜಾ:ಗೀಸಾಡಿ ಸಾ:ಸಿಟಿ ಬಸ್ಟ್ಯಾಂಡ ಎದುರುಗಡೆ ಜೋಪಡ ಪಟ್ಟಿ ಕಲಬುರಗಿ ಇವರಿಗೂ ಸಹ ಚೌಕ ಸರ್ಕಲ ಹತ್ತಿರ 16.15 ಗಂಟೆಗೆ ಬರಮಾಡಿಕೊಂಡು ಬಾತ್ಮಿಯಂತೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಪಂಚರಿಗೆ ಮೇಲಿನ ವಿಷಯ ತಿಳಿ ಹೇಳಿ ,ಶಹಾಬಜಾರ ಕಟಗರಪೂರದ ಮಹಾದೇವ ದೇವಸ್ಥಾನದ ಹಿಂದಿನ ಖುಲ್ಲಾ ಜಾಗೆಯಲ್ಲಿ ಒಟ್ಟು 16 ಜನರು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ದೈವಲೀಲೆ (ನಶೀಬಿನ) ಇಸ್ಪೇಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಇಸ್ಪೀಟ ಜೂಜಾಟ ನಿರತರ ಮೇಲೆ ದಾಳಿ ಮಾಡಿ ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದ ಆಸಾಮಿಗಳನ್ನು ಹಿಡಿದುಕೊಂಡು ಒಬ್ಬೊಬ್ಬರಂತೆ ಅವರ ಹೆಸರು ವಿಳಾಸ ವಿಚಾರಿಸಲು ಮೊದಲನೆಯವನು ತನ್ನ ಹೆಸರು 1) ಮಹ್ಮದಗೌಸ ತಂದೆ ಮಹ್ಮದ ಮುಸ್ತಾಕ ಸೈಯ್ಯದ ವ:24 ವರ್ಷ ಉ:ಆಟೋ ಚಾಲಕ ಜಾ:ಮುಸ್ಲಿಂ ಸಾ:ಶಹಾಬಜಾರ ನಾಕಾ ಹತ್ತಿರ ಕಲಬುರಗಿ ಅಂತಾ ತಿಳಿಸಿದನು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 1200/- ರೂ ನಗದು ಹಣ ಹಾಗೂ 18 ಇಸ್ಪೇಟ ಎಲೆಗಳು ದೊರೆತಿದ್ದು 2) ರಮೇಶ ತಂದೆ ಶರಣಪ್ಪಾ ಜಮಾದಾರ ವ:24 ವರ್ಷ ಉ:ಸೆಂಟ್ರಿಂಗ ಕೆಲಸ ಜಾ:ಕಬ್ಬಲೀಗ ಸಾ:ದುಬೈ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 800/- ರೂ ನಗದು ಹಣ, 12 ಇಸ್ಪೇಟ ಎಲೆಗಳು ದೊರೆತಿದ್ದು 3) ಪವನ ತಂದೆ ಮಹಾದೇವ ಗಣೇರ್ ವ:24 ವರ್ಷ ಉ:ಮೇಕ್ಯಾನಿಕ್ ಜಾ:ಕಬ್ಬಲೀಗ ಸಾ:ಗಂಧಿಗುಡಿ ಲೇಔಟ ಶಹಾಬಜಾರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 1100/- ರೂ ನಗದು ದೊರೆತಿದ್ದು  4) ಇಮ್ರಾನ ತಂದೆ ಶೂರಮಾಪಾಶಾ ವ:23 ವರ್ಷ ಉ:ಟಂಟಂ ಡ್ರೈವರ ಜಾ:ಮುಸ್ಲಿಂ  ಸಾ:ಮಿಲತ್ ನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 1800/- ರೂ ನಗದು ದೊರೆತಿದ್ದು 5) ಮಹ್ಮದ ಇಮ್ರಾನ ತಂದೆ ಅಬ್ದುಲ ಸಲೀಮ ವ:21 ವರ್ಷ ಉ:ಲಾರಿ ಡ್ರೈವರ ಜಾ:ಮುಸ್ಲಿಂ ಸಾ:ಗಂಜ ಬ್ಯಾಂಕ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 2100/- ರೂ ನಗದು ದೊರೆತಿದ್ದು 6) ರೇವಣಸಿದ್ದಪ್ಪಾ ತಂದೆ ಬಸವರಾಜ ಶಿರೂರ ವ:27 ವರ್ಷ ಉ:ಖಾಸಗಿ ಕೆಲಸ ಜಾ:ಲಿಂಗಾಯತ  ಸಾ:ದುಬೈ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 1700/- ರೂ ನಗದು ದೊರೆತಿದ್ದು 7) ಶರಣು ತಂದೆ ಸೂರ್ಯಕಾಂತ ಬಿರಾದರ ವ:25 ವರ್ಷ ಉ:ಹೊಟೇಲ ಕೆಲಸ ಜಾ:ಲಿಂಗಾಯತ ಸಾ:ದೇವಿನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 1400/- ರೂ ನಗದು ದೊರೆತಿದ್ದು 8) ತಬರೇಜ್ ತಂದೆ ಚಾಂದಪಾಶಾ ವ:27 ವರ್ಷ ಉ:ಹಣ್ಣಿನ ವ್ಯಾಪಾರ ಜಾ:ಮುಸ್ಲಿಂ ಸಾ:ಬುಲಂದ್ ಪರವೇಜ್ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 2000/- ರೂ ನಗದು ದೊರೆತಿದ್ದು 9) ಮಹ್ಮದ ಅಲ್ತಾಫ ತಂದೆ ಅಬ್ಬಾಸಅಲಿ  ವ:31 ವರ್ಷ ಉ:ಎಸಿ ಮೇಕ್ಯಾನಿಕ್ ಜಾ:ಮುಸ್ಲಿಂ ಸಾ:ಹಾಗರಗಾ ಕ್ರಾಸ ಪ್ರೀನ್ಸ ಫಂಕ್ಷನ್ ಹಾಲ್ ಹತ್ತಿರ ಝಂಝಂ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 1600/- ರೂ ನಗದು ದೊರೆತಿದ್ದು 10) ಮೋಹಿನ್ ತಂದೆ ಗುಡುಭಾಯಿ  ವ:42 ವರ್ಷ ಉ:ಆಟೋ ಡ್ರೈವರ  ಜಾ:ಮುಸ್ಲಿಂ ಸಾ:ಪಾಶಾಪೂರ ಕಾಲಿ ಗುಮ್ಮಜ್ ಹತ್ತಿರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 1300/- ರೂ ನಗದು ದೊರೆತಿದ್ದು 11) ಬಬ್ಬು @ ಶಹಾಬಾಜ ತಂದೆ ದೀಲದಾರ ಅಹ್ಮದ ವ:24 ವರ್ಷ ಉ:ಮಟನ್ ಅಂಗಡಿ ಜಾ:ಮುಸ್ಲಿಂ ಸಾ:ನಯಾ ಮಹೋಲಾ ಹಜ್ ಕಮೀಟಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 1900/- ರೂ ನಗದು ದೊರೆತಿದ್ದು 12) ಸದ್ದಾಮ ತಂದೆ ಮೈನೊದ್ದೀನ ವ:24 ವರ್ಷ ಉ:ಮಟನ ಅಂಗಡಿ ಜಾ:ಮುಸ್ಲಿಂ ಸಾ:ಗೋಳಾಚೌಕ ಮೋಮಿನಪೂರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 2100/- ರೂ ನಗದು ದೊರೆತಿದ್ದು 13) ಪ್ರವೀಣ ತಂದೆ ಪ್ರಕಾಶ ಜಾಂತಿ ವ:23 ವರ್ಷ ಉ:ಖಾಸಗಿ ಕೆಲಸ ಜಾ:ಲಿಂಗಾಯತ ಸಾ:ಶಹಾಬಜಾರ ನಾಕಾ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 1500/- ರೂ ನಗದು ದೊರೆತಿದ್ದು 14) ಅಖಿಲೇಶ ತಂದೆ ರಮೇಶ ಭೋವಿ ವ:25 ವರ್ಷ ಉ:ತರಕಾರಿ ವ್ಯಾಪಾರ ಜಾ:ಭೋವಿ ಸಾ:ಗಾಜಿಪೂರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 2300/- ರೂ ನಗದು ದೊರೆತಿದ್ದು 15) ಸಂತೋಷ ತಂದೆ ಶರಣಪ್ಪಾ ಜಮಾದಾರ ವ:35 ವರ್ಷ ಉ:ಖಾಸಗಿ ಕೆಲಸ ಜಾ:ಕಬ್ಬಲೀಗ ಸಾ:ಮಹಾದೇವ ನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 2200/- ರೂ ನಗದು ದೊರೆತಿದ್ದು  16) ಮೈನು ತಂದೆ ಇಸ್ಮಾಯಿಲ ಸೈಯ್ಯದ ವ:28 ವರ್ಷ ಉ:ಆಟೋ ಡ್ರೈವರ ಜಾ:ಮುಸ್ಲಿಂ ಸಾ:ಸುಭಾಷ ನಗರ ಶಹಾಬಜಾರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 2100/- ರೂ ನಗದು ದೊರೆತಿದ್ದು ಹಾಗೂ ಜೂಜಾಟ ನಡೆದ ಕಣದ ಸ್ಥಳದಲ್ಲಿ ನಗದು ಹಣ 14140/- ರೂಪಾಯಿ, 22 ಎಲೆಗಳು ಹೀಗೆ ಒಟ್ಟು 41240/- ನಗದು ಹಣ ಮತ್ತು 52 ಇಸ್ಪೇಟ ಎಲೆಗಳು ದೊರೆತಿದ್ದು, ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು  ಸರಕಾರಿ ತರ್ಫೆ ಫಿರ್ಯಾದಿ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 27-02-2023 11:31 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080