ಅಭಿಪ್ರಾಯ / ಸಲಹೆಗಳು

ಸಬ್‌ ಅರ್ಬನ್‌ ಪೊಲೀಸ ಠಾಣೆ :- ಫಿರ್ಯಾದಿದಾರರ ಮಗಳಾದ ಭವಾನಿ ವಯಃ ೨೧ ವರ್ಷ ಇವಳಿಗೆ ಆರೋಪಿತರು ದಿನಾಂಕ ೨೧.೦೧.೨೦೨೩ ರಂದು ಬೆಳಿಗ್ಗೆ ಗ್ರಾಮದ ಅಂಬೇಡ್ಕರ ಕಟ್ಟೆಯ ಹತ್ತಿರ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಹೊಡೆ ಬಡೆ ಮಾಡಿದಕ್ಕೆ ಭವಾನಿ ಇವಳು ಮನನೊಂದು ವಿಷ ಸೇವನೆ ಮಾಡಿದ್ದು. ಉಪಚಾರ ಕುರಿತು ಸೇರಿಕೆ ಮಾಡಿದ್ದು. ಉಪಚಾರ ಫಲಕಾರಿಯಾಗದೆ ದಿನಾಂಕ 25-01-2023 ರಂದು ರಾತ್ರಿ ಸಮಯದಲ್ಲಿ ಮೃತಪಟ್ಟಿರುತ್ತಾಳೆ ಅಂತಾ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ ಠಾಣೆ :- ಶ್ರೀ ಮಹ್ಮದ ಹನೀಫ್ ತಂದೆ ಮಕಬೂಲಸಾಬ ಮಡಕಿ ವ:29 ವರ್ಷ ಉ: ಗೋಬಿ ಮಂಚರಿ ವ್ಯಾಪರ ಜಾತಿ ಮುಸ್ಲಿಂ ಸಾ: ಆರೀಫ ಕಾಲನಿ ಎಂ.ಎಸ್.ಕೆ.ಮಿಲ್ಲ ಕಲಬುರಗಿ ಇತನು  ಹಲ್ಲೆ ಒಳಗಾಗಿ ಆಸ್ಪತ್ರೆಯಿಂದ ಉಪಚಾರ ಪಡೆದುಕೊಂಡು, ಹೊರ ರೋಗಿ ಎಂದು ಪರಿಗಣಿಸಿ ಕಳುಹಿಸಿಕೊಟ್ಟಾಗ ಸದರ ಗಾಯಾಳುದಾರ ಶ್ರೀ ಮಹ್ಮದ ಹನೀಫ್ ಇತನು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಫಿರ್ಯಾದಿ ಗಣಕೀಕೃತ ಮಾಡಿಸಿದ್ದರ ಸಾರಾಂಶವೆನೆಂದೆರೆ,   ಇಂದು  ದಿನಾಂಕ 26/01/2023 ರಂದು ಮಧ್ಯಾಹ್ನ 01-00 ಗಂಟೆ ಸುಮಾರಿಗೆ ನಮ್ಮ ಮನೆ ಹತ್ತಿರ ಇರುವ  ಅಹ್ಮದ ತಂದೆ ರುಕ್ಕಮೋದ್ದಿನ  ಇತನ ಮಗನಾದ ಮಹ್ಮದ ಜಹೇದ ಇತನು ನನ್ನ ಮಗ ಮಹ್ಮದ ಹಮ್ಮಜಾ ಇತನಿಗೆ ಬಾಯಿಗೆ ಮಣ್ಣು ಹಾಕಿದ್ದರಿಂದ  ಮಹ್ಮದ ಜಹೇದ ಯಾಕೇ ನನ್ನ ಮಗನಿಗೆ ಬಾಯಲ್ಲಿ ಮಣ್ಣು ಹಾಕಿದ್ದಾನೆ ಅಂತಾ ಬೆದರಿಸಿ, ನನ್ನ ಮಗನಿಗೆ ಮನೆಗೆ ಕಳುಹಿಸಿಕೊಟ್ಟು, ತದನಂತರ ನಾನು ಮತ್ತು ನನ್ನ ತಮ್ಮ ಮಹ್ಮದ ಮುಸ್ತಾಫ, ಸಂಬಂಧಿ ಮಶಾಕ ತಂದೆ ಅಮೀರ ಪಟೇಲ್ ಮೂವರು ಕೂಡಿಕೊಂಡು ಶಹಾಬಜಾರ ನಾಕಾದಲ್ಲಿ ಇರುವ ನಮ್ಮ ಮೈಸೂರು ಗೋಬಿ ಮಂಚರಿ ಅಂಗಡಿಗೆ ಬಂದು ವ್ಯಾಪರ ಮಾಡುತ್ತಿದ್ದಾಗ, ಮಧ್ಯಾಹ್ನ 03-00 ಗಂಟೆ ಸುಮಾರಿಗೆ ಅಹ್ಮದ ತಂದೆ ರುಕ್ಕಮೋದ್ದಿನ ಮತ್ತು ಅವನ ತಮ್ಮ ವಸೀಮ ತಂದೆ ರುಕ್ಕಮೋದ್ದಿನ  ಇಬ್ಬರು ಕೂಡಿಕೊಂಡು ನನ್ನ ಅಂಗಡಿ ಎದರುಗಡೆ ಬಂದಿದ್ದು ನೋಡಿ ನಾನು ಅವರಿಬ್ಬರ ಹತ್ತಿರ ಹೋದಾಗ ಅಹ್ಮದ ಮತ್ತು ವಸೀಮ ಇವರಿಬ್ಬರು ನನಗೆ ಭೋಸಡಿಕೇ ಹಮಾರೇ ಬಚ್ಚಕೋ ಕೈಂವ ಮ್ಯಾರ ಬೇ ರಾಂಡಕೇ ಅಂತಾ ಬೈಯ್ಯುತ್ತಾ ವಸೀಮ ಇತನು ಕೈಮುಷ್ಟಿ ಮಾಡಿ ನನ್ನ ಮೂಗಿನ ಮೇಲೆ ಹೊಡೆದು ರಕ್ತಗಾಯಗೊಳಿಸಿದನು. ಅಹ್ಮದ ಇತನು ನಮ್ಮ ಅಂಗಡಿ ಒಳಗಡೆ ಹೋಗಿ ಅಂಗಡಿಯಲ್ಲಿದ್ದ ಗೋಬಿ ಮಂಚರಿ ಕರಿಯುವ ಕಬ್ಬಿಣದ ಝಾರಿ ತೆಗೆದುಕೊಂಡು ಬಂದು ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿದನು. ಮತ್ತು ವಸೀಮ ಅಲ್ಲೇ ಬಿದ್ದ ಹಿಡಿಗಾತ್ರ ಕಲ್ಲು ತೆಗೆದುಕೊಂಡು ಬೆನ್ನಿಗೆ ಹೊಡೆದು ಗುಪ್ತಗಾಯಗೊಳಿಸಿದನು.  ಈ ಜಗಳಾ ನೋಡಿ ಅಂಗಡಿಯಲ್ಲಿದ್ದ ನನ್ನ ತಮ್ಮ ಮಹ್ಮದ ಮುಸ್ತಾಫ ಮತ್ತು ನಮ್ಮ ತಂದೆಯ ಮಗ ಮಶಾಕ ಇಬ್ಬರು ಜಗಳಾ ಬಿಡಿಸಿಕೊಂಡರು.  ಅವರುಗಳು ಅಲ್ಲಿಂದ ಹೊರಟು ಹೋದರು. ನಂತರ ನನ್ನ ತಮ್ಮ ಮಹ್ಮದ ಮುಸ್ತಾಫ ಇತನು ಮೋಟಾರ ಸೈಕಲ ಮೇಲೆ ಕೂಡಿಸಿಕೊಂಡು ನಮ್ಮ ಮನೆಯ ಹತ್ತಿರ ಇರುವ ಆಶೀಯಾ ಆಸ್ಪತ್ರೆಯಲ್ಲಿ ತೋರಿಸಿಕೊಂಡು, ನಂತರ ಜಿಲ್ಲಾ ಸರಕಾರಿ ಅಸ್ಪತ್ರೆ ಕಲಬುರಗಿಗೆ ಬಂದು ಸೇರಿಕೆಯಾಗಿರುತ್ತೇನೆ. ವೈದ್ಯರು ನನಗೆ ನೋಡಿ ಹೊರ ರೋಗಿ ಅಂತಾ ಪರಿಗಣಿಸಿ ಕಳುಹಿಸಿಕೊಟ್ಟರು. ನಂತರ ನಾನು  ಚೌಕ ಪೊಲೀಸ ಠಾಣೆಗೆ ಬಂದಿರುತ್ತೇನೆ. ನನಗೆ  ಅವಾಚ್ಯ ಬೈದು ಕೈಯಿಂದ ಕಬ್ಬಿಣದ ಝಾರಿಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿದ ಅಹ್ಮದ ತಂದೆ ರುಕ್ಕಮೋದ್ದಿನ ಮತ್ತು ಅವನ ತಮ್ಮ ವಸೀಮ ತಂದೆ ರುಕ್ಕಮೋದ್ದಿನ  ಸಾ;ಇಬ್ಬರು ಆರೀಫ ಕಾಲನಿ ಎಂ.ಎಸ್.ಕೆ.ಮಿಲ್ಲ ಕಲಬುರಗಿ  ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನಾನು ಹಿಂದಿಯಲ್ಲಿ ಹೇಳಿದ್ದು ಕನ್ನಡದಲ್ಲಿ ಅನುವಾದಿಸಿ ಗಣಕೀಕೃತ ಮಾಡಿದ ಹೇಳಿಕೆ ನಿಜವಿದೆ. ಸದರ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಅಶೋಕ ನಗರ ಪೊಲೀಸ ಠಾಣೆ :- ದಿನಾಂಕ:26.01.2023 ರಂದು 07:00 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀಮತಿ ಸುನೀತಾ ಗಂಡ ನಾರಾಯಣ ಚವ್ಹಾಣ ವಯ: 26 ವರ್ಷ ಜಾ: ಲಮಾಣಿ ಉ: ಡಿ.ಎಲ್.ಈಡಿ ವಿಧ್ಯಾರ್ಥಿನಿ ಸಾ|| ಸೇರಿ ಬಡಾ ತಾಂಡಾ ಪೊಸ್ಟ್ ಕೊಡ್ಲಿ ತಾ|| ಕಾಳಗಿ ಕಲಬುರಗಿ ಇವರು  ಠಾಣೆಗೆ  ಹಾಜರಾಗಿ  ಲಿಖಿತ  ದೂರು  ಸಲ್ಲಿಸಿದ್ದರ ಸಾರಾಂಶವೆನೆಂದರೆ, ನನ್ನ ಗಂಡ ನಾರಾಯಣ ಇವರು ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆ ಸೇರಿ ಬಡಾ ತಾಂಡಾ ದಲ್ಲಿ ಅಥಿತಿ ಶಿಕ್ಷಕರಾಗಿ ಕೆಲಸಮಾಡಿಕೊಂಡಿರುತ್ತಾರೆ. ನಮಗೆ 2 ಜನ ಗಂಡು ಮಕ್ಕಳು ಇರುತ್ತಾರೆ. ನಾನು ಕಲಬುರಗಿ ನಗರದ ಸರ್ಕಾರಿ ಕಾಲೇಜಿನಲ್ಲಿ ಡಿ.ಎಲ್.ಈಡಿ ಪ್ರಥಮ ವರ್ಷದಲ್ಲಿ ಅಭ್ಯಾಸ ಮಾಡುತ್ತಿರುತ್ತೆನೆ. ನಾನು ದಿನಾಲು ನಮ್ಮೂರಿನ ತಾಂಡಾದಿಂದ ಬೆಳಿಗ್ಗೆ 09:00 ಗಂಟೆಗೆ ಕಲಬುರಗಿಗೆ ಬಂದು ಮರಳಿ ಸಾಯಂಕಾಲ 05:00 ಗಂಟೆಗೆ ಹೋಗುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ:25.01.2023 ರಂದು ಎಂದಿನಂತೆ ಬೆಳಿಗ್ಗೆ 09:00 ಗಂಟೆಗೆ ಕಲಬುರಗಿಗೆ ಬಂದಿದ್ದು ನನ್ನೊಂದಿಗೆ ತಮ್ಮ ಯಾವುದೊ ಕೆಲಸದ ನಿಮಿತ್ಯ ನನ್ನ ಗಂಡನು ಸಹ ನನ್ನೊಂದಿಗೆ ಬಂದಿರುತ್ತಾರೆ. ನನ್ನ ಕಾಲೇಜ ಮುಗಿದ ನಂತರ ನಾನು ಮತ್ತು ನನ್ನ ಗಂಡ ಇಬ್ಬರೂ ಸೇರಿ ಉರಿಗೆ ಹೋಗುವ ಸಂಬಂಧ 04:30 ಪಿ.ಎಂಕ್ಕೆ ಕೇಂದ್ರ ಬಸ್  ನಿಲ್ದಾಣಕ್ಕೆ ಬಂದಿರುತ್ತೇವೆ. ಸುಮಾರು 04:45 ಗಂಟೆ ಸುಮಾರಿಗೆ ಮೋಗಾ ಚಿಂಚೋಳಿ ಬಸ್ ಬಂದಿದ್ದು ನಾವಿಬ್ಬರೂ ಬಸ್ ಹತ್ತಿ ಒಳಗೆ ಹೋಗಿ ಕುಳಿತುಕೊಂಡು ನನ್ನ ವ್ಯಾನಿಟಿ ಬ್ಯಾಗಿನಲ್ಲಿದ್ದ ಮೋಬೈಲ್ ತೆಗೆಯುವದಕ್ಕೆ ನೋಡಿದಾಗ ಅದರಲ್ಲಿ ಮೋಬೈಲ ಮಾತ್ರ ಇದ್ದು ಅದರೊಂದಿಗೆ ಇದ್ದ ಸುಮಾರು 8 ವರ್ಷಗಳ ಹಿಂದೆ ಖರಿದಿಸಿದ್ದ ನನ್ನ 3 ತೋಲೆಯ ಎರಡೆಳೆಯ ಬಂಗಾರದ ಮಂಗಳ ಸೂತ್ರ ಅ|| ಕಿ|| 1,20,000/- ರೂ ನೇದ್ದು ಇದ್ದಿರುವುದಿಲ್ಲ. ನಾನು ಗಾಬರಿಗೊಂಡು ಬ್ಯಾಗಿನಲ್ಲಿ ಎಲ್ಲಾ ಕಡೆ ಚೆಕ್ ಮಾಡಿದರು ಸಹ ಸಿಕ್ಕಿರುವುದಿಲ್ಲ. ನಂತರ ಈ ವಿಷಯವನ್ನು ನನ್ನೊಂದಿಗೆ ಇದ್ದ ನನ್ನ ಗಂಡನಿಗೆ ತಿಳಿಸಿ ಊರಿಗೆ ಹೋಗಿ ಮನೆಯಲ್ಲಿ ಇಟ್ಟಿರಬಹುದು ಅಂತ ಚೆಕ್ ಮಾಡಿದರು ಸಹ ಸಿಕ್ಕಿರುವುದಿಲ್ಲ. ಈ ಬಗ್ಗೆ ನಾನು ಮತ್ತು ನನ್ನ ಗಂಡ ಮನೆಯಲ್ಲಿ ವಿಚಾರ ಮಾಡಿ ಇಂದು ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ನಿನ್ನೆ ದಿನಾಂಕ:25/01/2023 ರಂದು 04:45 ಪಿ.ಎಂ ಸುಮಾರಿಗೆ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ಕಾಲಕ್ಕೆ ನನ್ನ ವ್ಯಾನಿಟಿ ಬ್ಯಾಗಿನಲ್ಲಿದ್ದ ಬಂಗಾರದ ಮಂಗಳ ಸೂತ್ರವನ್ನು ಕಳ್ಳತನ  ಮಾಡಿದ  ಕಳ್ಳರನ್ನು ಪತ್ತೆಮಾಡಿ  ಅವರ ವಿರುದ್ಧ ಸೂಕ್ತ  ಕಾನೂನು  ಕ್ರಮ  ಜರುಗಿಸಿ ನನ್ನ ಬಂಗಾರದ ಮಂಗಳ ಸೂತ್ರವನ್ನು ನನಗೆ ದೊರಕಿಸಿಕೊಡಲು ವಿನಂತಿ ಅಂತ ವಗೈರೆಯಾಗಿ  ಇದ್ದ  ಅರ್ಜಿ  ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ:26-01-2023  ರಂದು ಮದ್ಯಾಹ್ನ ೧:೩೦ ಕ್ಕೆ ಫಿರ್ಯಾದಿದಾರರಾದ ಶ್ರೀ ಸತೀಶ ತಂದೆ ದೇವಪ್ಪ ಹೊಸಮನಿ ವಯ:೩೩ವರ್ಷ ಜಾ:ಹೊಲೆಯ ಉ:ಮಹಾನಗರ ಪಾಲಿಕೆಯಲ್ಲಿ ಕೆಲಸ ಸಾ//ಗೊಬ್ಬರ ಕೆ ತಾ//ಅಫಜಲಪೂರ ಜಿ//ಕಲಬುರಗಿ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದರ ಸಾರಾಂಶವೆನೆಂದರೆ ನನ್ನ ಗೆಳೆಯನಾದ ಪರಮೇಶ್ವರ ತಂದೆ ಭೀಮಷಾ ಮೇಳಕುಂದಿ ಸಾ//ಬಿದ್ದಾಪೂರ ಕಾಲೋನಿ ಕಲಬುರಗಿ ನಗರ. ಇವರ ಹೆಸರಿನಲ್ಲಿ ಹೊಂಡಾ ಶೈನ್ ಮೋಟಾರ್ ಸೈಕಲ್ ನಂ. KA-32-EE-4485 ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ನ್ನು ನಾನು ಖರಿದಿಮಾಡಿದ್ದು ಇನ್ನೂ ನನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿರುವುದಿಲ್ಲಾ ಮತ್ತು ಸದರಿ ಮೋಟಾರ್ ಸೈಕಲನ್ನು ನಾನೇ ನಡೆಸುತ್ತಿರುತ್ತೇನೆ. ನಾನು ದಿನಾಂಕ: 22-01-2023 ರಂದು ಬೆಳಿಗ್ಗೆ ೫:೩೦ ಗಂಟೆ ಸುಮಾರಿಗೆ ಕಲಬುರಗಿ ನಗರದ ವೀರಶೈವ ಕಲ್ಯಾಣ ಮಂಟಪದ ಕಾಂಪೌಂಡ ಹತ್ತಿರ ನಿಲ್ಲಿಸಿ ಎಂದಿನಂತೆ ಮಹಾನಗರ ಪಾಲಿಕೆಯಲ್ಲಿ ಕೆಲಸಕ್ಕೆ ಹೋಗಿ ಮರಳಿ ಅದೇ ದಿನ ಮದ್ಯಾಹ್ನ ೨:೦೦ ಗಂಟೆ ಸುಮಾರಿಗೆ ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ಮೋಟಾರ್ ಸೈಕಲ್ ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ್ ಪತ್ತೆ ಕುರಿತು ನಾನು ಮತ್ತು ನನ್ನ ಗೆಳೆಯ ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ:26-01-2023  ರಂದು ರಾತ್ರಿ ೮:೦೫ ಕ್ಕೆ  ಫಿರ್ಯಾದಿದಾರರಾದ ಶ್ರೀ ಮಂಜುನಾಥ ತಂದೆ ಬಾಬುರಾವ್ ಬಿರಾದಾರ ವಯ:೩೦ ವರ್ಷ ಜಾ:ಲಿಂಗಾಯತ ಉ:ಖಾಸಗಿ ಕೆಲಸ ಸಾ//ಮೇಳಕುಂದಿ ಬಿ ಗ್ರಾಮ ತಾ ಮತ್ತು ಜಿ ಕಲಬುರಗಿ ಹಾಲಿವಾಸ:ಬಿದ್ದಾಪೂರ ಕಾಲೋನಿ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದರ ಸಾರಾಂಶವೆನೆಂದರೆ, ನಮ್ಮ ತಂದೆಯವರಾದ ಬಾಬುರಾವ್ ತಂದೆ ಕಾಶಿರಾಯ ಬಿರಾದಾರ ಸಾ//ಮೇಳಕುಂದಿ ಬಿ ಗ್ರಾಮ ತಾ ಮತ್ತು ಜಿ ಕಲಬುರಗಿ. ಇವರ ಹೆಸರಿನಲ್ಲಿ ಹೊಂಡಾ ಶೈನ್ ಮೋಟಾರ್ ಸೈಕಲ್ ನಂ. KA-32-ER-6022 ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ನ್ನು ನಾನೇ ನಡೆಸುತ್ತಿರುತ್ತೇನೆ. ದಿನಾಂಕ:೨೬/೦೧/೨೦೨೩ ರಂದು ದಿವಂಗತ ಶ್ರೀ ಚಂದ್ರಶೇಖರ್ ಪಾಟೀಲ್ ರೇವೂರ ಇವರ ಹುಟ್ಟುಹಬ್ಬದ ನಿಮಿತ್ಯ ಪಶು ಆಸ್ಪತ್ರೆಯ ಎದುರುಗಡೆ ಇರುವ ವೀರಶೈವ ವಸತಿ ಗೃಹ ಪಕ್ಕದಲ್ಲಿರುವ ಶ್ರೀ ಚಂದ್ರಶೇಖರ್ ಪಾಟೀಲ್ ರೇವೂರ ಡಯಾಲಿಸಿಸ್ ಸೆಂಟರ್‌ನಲ್ಲಿ ಉಚಿತ ರಕ್ತಧಾನ ಶಿಬಿರ ಎರ್ಪಡಿಸಿರುವುದರಿಂದ ನಾನು ಬೆಳಿಗ್ಗೆ ೧೧:೩೦ ಗಂಟೆ ಸುಮಾರಿಗೆ ನಮ್ಮ ತಂದೆಯ ಮೋಟಾರ್ ಸೈಕಲನ್ನು ತೆಗೆದುಕೊಂಡು ಹೋಗಿ ಹಳೇ ಕಲಬುರಗಿ ಸೇಡಂ ರಸ್ತೆಯಲ್ಲಿರು ಕಾಂಗ್ರೆಸ್ ಆಫೀಸ್ ಎದುರುಗಡೆ ಮೋಟಾರ್ ಸೈಕಲ್ ನಿಲ್ಲಿಸಿ ಡಯಾಲಿಸಿಸ್ ಸೆಂಟರ್‌ನಲ್ಲಿ ನೇಡೆಯುತ್ತಿರುವ ಉಚಿತ ರಕ್ತಧಾನ ಶಿಬಿರಕ್ಕೆ ಹೋಗಿ ಅಲ್ಲಿ ಬಹಳಷ್ಟು ಜನ ನೇರೆದಿದ್ದು ಸದರಿ  ಕಾರ್ಯಕ್ರವನ್ನು ಮುಗಿಸಿಕೊಂಡು ಮರಳಿ ಮದ್ಯಾಹ್ನ ೧:೦೦ ಗಂಟೆ ಸುಮಾರಿಗೆ ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ಮೋಟಾರ್ ಸೈಕಲ್ ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲಾ ಮೋಟಾರ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 06-01-2023  ರಂದು ಮುಂಜಾನೆ ೦೯-೦೦ ಗಂಟೆಯಿಂದ ಸಾಯಾಂಕಾಲ ೫-೦೦ ಗಂಟೆಯ ಅವದಿಯಲ್ಲಿ ಫಿರ್ಯಾದಿಯು ಕಲಬುರಗಿ ನಗರದ ಇ.ಎಸ್.ಐ.ಸಿ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ ಹೊಂಡಾ ಆಕ್ಟಿವ ಮೊಟಾರ ಸೈಕಲ ನಂ ಕೆಎ೫೬/ಹೆಚ್-೩೦೮೫ ಅ.ಕಿ ೩೦೦೦೦/- ರೂ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರಾಘವೇಂದ್ರ ನಗರ ಪೊಲೀಸ್‌ ಠಾಣೆ :-  26.01.2023 ರಂದು 7.00 ಪಿಎಮ್ಕ್ಕೆ ಠಾಣೆಗೆ ಬಂದು ಹೇಳಿಕೆ  ನೀಡಿದರ ಸಾರಾಂಶವೆನೆಂದರೆ ವಿಶಾಲ ತಂದೆ ಪ್ರಕಾಶ ಸಿಂದೆ ವಯ:36 ವರ್ಷ ಜಾ:ಮರಾಠಿ ಉ:ಟೇಲರಿಂಗ ಕೆಲಸ ಸಾ:ಜಂಗೆ ಬ್ರದರ್ಸ ಲಾಲಗೇರಿ ಕ್ರಾಸ ಕಲಬುರಗಿ ಟೇಲರ ಕೆಲಸ ಮಾಡಿಕೊಂಡು ತಂದೆ ತಾಯಿಯೊಂದಿಗೆ ವಾಸವಾಗಿರುತ್ತೇನೆ. ನಮ್ಮ ತಂದೆ ತಾಯಿಗೆ ನಾವು ಮೂರು ಜನ ಮಕ್ಕಳಿದ್ದು ನಾನು ಟೇಲರಿಂಗ ಕೆಲಸ ಮಾಡಿಕೊಂದು ತಂದೆ ತಾಯಿಯೋಂದಿಗೆ ವಾಸವಾಗಿರುತ್ತೇನೆ. ಹೀಗಿರುವಾಗ ನಮ್ಮ ಬಡಾವಣೆಯಲ್ಲಿ ಸಾರ್ವಜನಿಕರ ಉಪಯೋಗೊಸ್ಕರ ಒಂದು ನೀರಿನ ಪಂಪವಿದ್ದು ,ಆ ಪಂಪನ ನೀರು ದುರ್ಬಳಕೆ ಆಗದ ರೀತಿಯಲ್ಲಿ ಆಗಾಗ ನಾನು ಆ ನೀರನ್ನು ದುರ್ಬಳಕೆ ಆಗದಂದತೆ ಜನರಿಗೆ ಹೇಳುತ್ತಾ ಬಂದಿತುತ್ತೇನೆ. ಅದೆ ರೀತಿ ನಮ್ಮ ಬಡಾವಣೆಯ ನಿವಾಸಿ ಗೊಪಾಲ ತುವರ ಈತನು ವಿನಾಃ  ಕಾರಣ ನೀರು ಚೇಲ್ಲುತ್ತಿದ್ದು. ಆತನಿಗೆ ಸುಮಾರು ಬಾರಿ ನೀರು ಚೆಲ್ಲದಂತೆ ಹೇಳಿದ್ದು ಆತನು ಕೇಳದೆ,ಆತನು ವಿನ: ಕಾರಣ ನೀರು ಚೆಲ್ಲುತ್ತಾ ಬಂದಿದ್ದು .ಅದೇ ರೀತಿ ದಿನಾಂಕ 25/01/2023 ಸಾಯಂಕಾಲ 6.00 ಗಂಟೆಗೆ ನೀರು ಚೆಲ್ಲುತ್ತಿರುವಾಗ ನಾನು ಹೇಗೆ ನೀರು ಚೆಲ್ಲುವುದು ಸರಿಯಲ್ಲ ಯೆಂದು ಹೇಳಿದಾಗ ಏ ಬೊಸಡಿ ಮಗನೆ ನೀ ಏನ ನಂಗ ಹೇಳತಿಯಾ ಎಂದು ಎದೆಯ ಮೇಲಿನ ಅಂಗಿ ಹಿಡಿದು ಹೊಡೆ ಬಡೆ ಮಾಡಿ ನಂತರ ಅಲ್ಲೆ ಬಿದ್ದಿರುವ ಪಸರ್ಿ ಕಲ್ಲಿನಿಂದಾ ನನ್ನ ತಲೆಗೆ ಹೊಡೆದು ರಕ್ತ ಗಾಯ ಮಾಡಿರುತ್ತಾನೆ .ಅಷ್ಟರಲ್ಲೆ ಅಲ್ಲೆ ನಿಂತಿರುವ ನನ್ನ ಗೆಲೆಯರಾದ ಮಹೇಶ, ರಾಜು, ಇವರುಗಳು ಬಂದು ಜಗಲ ಬಿಡಿಸಿದರು .ಇಲ್ಲವಾದದಲ್ಲಿ ಭಾರಿ ಹೊಡೆಯುತ್ತಿದ್ದರು ನಂತರ ನನಗೆ ಆಸ್ಪತ್ರಗೆ ಸೆರಿಸಿರುತ್ತಾರೆ .ಈ ವಿಷಯದ ಬಗ್ಗೆ ನಮ್ಮ ಸಂಬಂದಿಕರಲ್ಲಿ ಚರ್ಚೆ ಮಾಡಿಕೊಂಡು ಬಂದು ಇಂದು ತಡವಾಗಿ ದೂರು ನೀಡಿರುತ್ತೆನೆ. ಕಾರಣ ದಿನಾಂಕ 25/01/2023 ರಂದು 6.00 ಸಾಯಂಕಾಲ ರಕ್ತ ಗಾಯ ಗುಪ್ತಗಾಯ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮಕೈಕೊಳ್ಳುವಂತೆ ಹೇಳಿ ಬರೆಸಿದ ಹೇಳಿಕೆ ನಿಜ ಇರುತ್ತದೆ, ಅಂತ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರೋಜಾ ಪೊಲೀಸ ಠಾಣೆ :-  ದಿನಾಂಕ 25/01/2023  ರಂದು ಸಮಯ 09.30 ಪಿ ಎಮ್ ಕ್ಕೆ ನಯಾಮೊಹಲ್ಲಾ ಕಾಲೋನಿಯ ಸಿದ್ದಿಕ್ ಮಜೀದ್ ಹತ್ತಿರ ಕಾಲೋನಿಯ ಮಹ್ಮದ ಹಸನ್, ಮಹ್ಮದ ಹುಸೇನ, ಗುಡ್ಡು, ಸಮೀರ, ಅಕ್ತರ ಉಸ್ತಾದ ಮತ್ತು ಶಾದಾಬ್ ಇವರೆಲ್ಲರೂ ಕೂಡಿಕೊಂಡು ಪಿರ್ಯಾದಿಗೆ ಅವಾಶ್ಚ ಶಬ್ದಗಳಿಂದ ಬೈದು ಮಹ್ಮದ ಹಸನ ಈತನು ತನ್ನಲ್ಲಿದ್ದ ಚಾಕುವಿನಿಂದ  ನನ್ನ ಬಲಗೈ ಮೋಳಕೈಗೆ ಬಲವಾಗಿ ಹೋಡೆದು  ಭಾರಿ ರಕ್ತಗಾಯ ಮಾಡಿರುತ್ತಾನೆ. ಮತ್ತು ಮಹ್ಮದ ಹುಸೇನ ಈತನು ಅಲ್ಲೆ ಬಿದ್ದಿದ್ದ ಒಂದು ಹಿಡಿ ಗಾತ್ರದ ಕಲ್ಲಿನಿಂದ ನನ್ನ ಬೇನ್ನಿಗೆ ಹೋಡೆದು ಗುಪ್ತಗಾಯ ಪಡಿಸಿರುತ್ತಾನೆ. ನಂತರ ಅವರ ಜೋತೆಯಲ್ಲಿದ್ದ ಗುಡ್ಡು, ಸಮೀರ, ಅಕ್ತರ ಉಸ್ತಾದ ಮತ್ತು ಶಾದಾಬ್ ಇವರೆಲ್ಲರೂ  ಕೈಯಿಂದ ನನ್ನ ಬೆನ್ನಿಗೆ ಹಾಗೂ ಹೋಟ್ಟೆಗೆ ಹೋಡೆದು ಗುಪ್ತಗಾಯ ಮಾಡಿದ್ದು ಇರುತ್ತದೆ. ಏ ಸಾಲೆಕೋ ಆಜ್ ಇದರ ಹೀ ಜಾನ್ ಸೇ ಖಲಾಸ್ ಕರೆಂಗೆ  ಅಂತಾ ಮೇಲಿನ ಎಲ್ಲಾ ಆರೋಪಿತರು ನನಗೆ  ಜೀವದ ಭಯ ಹಾಕಿರುತ್ತಾರೆ. ಆಗ ಅಲ್ಲೆ ಇದ್ದ ಮಹ್ಮದ ಗೌಸ್ ಹಾಗೂ ನನ್ನ ತಮ್ಮ ಮಹ್ಮದ ಆಸೀಫ್ ಅಲಿ ಇವರು ಕಣ್ಣಾರೆ ನೋಡಿ ಜಗಳ ಬೀಡಿಸಿರುತ್ತಾರೆ. ಅವಾಶ್ಚವಾಗಿ ಬೈದು ಕಲ್ಲಿನಿಂದ ಹೋಡೆದು ಗುಪ್ತಗಾಯ ಮಾಡಿ ಜೀವ ಬೇದರಿಕೆ ಹಾಕಿದವರ ಮೇಲೆ ಕಾನೂನಿನ ಕ್ರಮ ಜರುಗಿಸಬೆಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರೋಜಾ ಪೊಲೀಸ ಠಾಣೆ :-  ದಿನಾಂಕ: 25/01/2023 ರಂದು ರಾತ್ರಿ 09.30 ಪಿ ಎಮ್ ಕ್ಕೆ ಪಿರ್ಯಾದಿ ಸಿದ್ದಿಕ್ ಮಜೀದ್ ಕಡೆಯಿಂದ  ಭಯ್ಯಾ ಕೀರಾಣಾ ಅಂಗಡಿ ಹತ್ತಿರ ಹೋಗುತ್ತಿರುವಾಗ ಮಹ್ಮದ ಅಲಿ ಹಾಗೂ ಅವರ ತಮ್ಮಂದಿರಾದ ಮಹ್ಮದ ಆಸೀಫ್ ಅಲಿ, ಯುಸುಫ್ ಅಲಿ , ಶೌಕತ್ ಅಲಿ ನಿಂತಿದ್ದು ಇವರಲ್ಲಿಯ ಮಹ್ಮದ ಅಲಿ ಈತನು ಫಿರ್ಯಾದಿಗೆ ಅವಾಶ್ಚ ಶಬ್ದಗಳಿಂದ ಬೈದು ಅಲ್ಲೆ ಬಿದ್ದಿದ್ದ ಒಂದು ಬಡಿಗೆಯಿಂದ ನನ್ನ ಎದೆ ಭಾಗಕ್ಕೆ ಹೋಡೆದು ಗುಪ್ತಗಾಯ ಮಾಡಿರುತ್ತಾನೆ. ನಂತರ ಅವರ ತಮ್ಮಂದಿರಾದ ಮಹ್ಮದ ಆಸೀಫ್ ಅಲಿ, ಯುಸುಫ್ ಅಲಿ , ಶೌಕತ್ ಅಲಿ ಇವರುಗಳು ಕೈಯಿಂದ  ನನ್ನ ಬೆನ್ನಿಗೆ, ಕಾಲಿಗೆ ಹೋಡೆದು ಗುಪ್ತಗಾಯ ಮಾಡಿರುತ್ತಾರೆ. ಆಗ ಅಲ್ಲೆ ಸ್ವಲ್ಪ ದೂರದಲ್ಲಿದ ನನ್ನ ತಮ್ಮ ಗುಡ್ಡು ಹಾಗೂ ಸಲ್ಮಾನ ಇಬ್ಬರೂ ಓಡಿ ಬಂದು ಕಣ್ಣಾರೆ ನೋಡಿ ಜಗಳ ಬೀಡಿಸಿರುತ್ತಾರೆ ನನಗೆ ಗಾಯಗಳಾಗಿದ್ದರಿಂದ ನನ್ನ ತಮ್ಮ ಗುಡ್ಡು ಮತ್ತು ಸಲ್ಮಾನ್ ಇವರು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ತಂದು ಸೇರಿಕೆ ಮಾಡಿರುತ್ತಾರೆ. ಅವಾಚ್ಯ ಶಬ್ಧಗಳಿಂದ ಬೈಯ್ದು, ಕೈಯಿಂದ ಮತ್ತು ಬಡಿಗೆಯಿಂದ ಹೋಡೆ ಬಡೆ ಮಾಡಿ ಗುಪ್ತಗಾಯ ಪಡಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ -2 :-  ದಿನಾಂಕ 26/01/2023 ರಂದು ರಾತ್ರಿ 8:15  ಗಂಟೆಗೆ ಶ್ರೀ.ಕೈಲಾಸ ತಂದೆ ನೂರು ಚವ್ಹಾಣ ಸಾಃ ಶಹಾಬಜಾರ ತಾಂಡಾ ಕಲಬುರಗಿ ಇವರು ಒಂದು ಕನ್ನಡದಲ್ಲಿ ಟೈಪ್ ಮಾಡಿಸಿ ಸಹಿ ಮಾಡಿದ ಫಿರ್ಯಾದಿ ಅರ್ಜಿಯನ್ನು ನೂರು ತಂದೆ ಗೋಪು ಚವ್ಹಾಣ ಇವರು ತಂದು ಹಾಜರುಪಡಿಸಿದ್ದು ಸದರಿ ಅರ್ಜಿಯ ಸಾರಂಶವೆನೆಂದರೆ,  ದಿನಾಂಕ-23/01/2023 ರಂದು ಫಿರ್ಯಾಧಿ ಮತ್ತು ದಿಲಿಪಕುಮಾರ ಇಬ್ಬರೂ ಮೋ.ಸೈಕಲ್ ನಂ KA32HB3291 ನೇದ್ದರ ಮೇಲೆ ದೀಲಿಪಕುಮಾರ ಈತನು ಶಹಾಬಜಾರ ತಾಂಡಾದಿಂದ ಆಳಂದ ಚೆಕ ಪೋಸ್ಟ ಕಡೆಯಿಂದ ನಾಕಾ ಕಡೆಗೆ ಬರುತ್ತೀರುವಾಗ ದೇವಿ ನಗರದ ರೋಡಿನ ಗೇಟ್ ಹತ್ತಿರ ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರೋಡ್ ಡಿವೈಡರಗೆ ಡಿಕ್ಕಿಪಡಿಸಿಕೊಂಡು ಬಿದಿದ್ದರಿಂದ ಫಿರ್ಯಾಧಿಗೆ ಕುತ್ತಿಗೆ ಹತ್ತೀರ & ಬೆರಳಿಗೆ ಭಾರಿಗಾಯವಾಗಿದ್ದು ಉಪಚಾರ ಕುರಿತು ಯುನೈಟೆಡ್ ಆಸ್ಪತರೆಯಲ್ಲಿ ಸೇರಿಕೆ ಆಗಿದ್ದು ಮೋ.ಸೈಕಲ ಸವಾರ ದಿಲಿಪಕುಮಾರ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಎಂ.ಬಿ.ನಗರ ಪೊಲೀಸ್‌ ಠಾಣೆ :-  ಫಿರ್ಯಾದಿದಾರನು  ದಿನಾಂಕ: 17-01-2023  ರಂದು ಸಂಜೆ ೭-೦೦ ಗಂಟೆಗೆ ಬಸವೇಶ್ವರ ಕಾಲೋನಿಯ ತನ್ನ ತಾತಾ ಅಜ್ಜಿ ಬಾಡಿಗೆ ಮನೆಯಲ್ಲಿರುವ ಮನೆಗೆ ಹೋಗಿದ್ದು ಅಲ್ಲಿ ತಾತಾ ಅಜ್ಜಿಯವರಿಗೆ ಕಿವಿ ಸರಿಯಾಗಿ ಕೇಳಿಸದೇ ಇರುವುದರಿಂದ ಜೋರಾಗಿ ಟಿವಿ ಸೌಂಡ್ ಇಟ್ಟು ನೋಡುತ್ತಿದ್ದರು, ಅದೇ ಸಮಯಕ್ಕೆ ಮನೆಯ ಮಾಲೀಕರಾದ ಆರೋಪಿತರು ಬಂದು ಜೋರಾಗಿ ಟಿವಿ ಸೌಂಡ್ ಇಟ್ಟು ಟಿವಿ ನೋಡುತ್ತಿದ್ದೀರಿ ನಮಗೆ ಡಿಸ್ಟ್ರಬ್ ಆಗುತ್ತಿದೆ ರಾಂಡಕೇ ಚಿನಾಲಕೇ ಎಂದು ಅವಾಚ್ಯವಾಗಿ ಬೈದು ಜಗಳ ತೆಗೆದು ಫಿರ್ಯಾದಿಗೆ ರಾಡಿನಿಂದ ಕಾಲಿಗೆ ಹೊಡೆದು ಗುಪ್ತಗಾಯ ಮಾಡಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 27-01-2023 02:06 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080