Feedback / Suggestions

ಅಶೋಕ ನಗರ ಪೊಲೀಸ ಠಾಣೆ :-  ದಿನಾಂಕ:25.12.2022 ರಂದು 05:00 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ ಶೇಖ ಶಬ್ಬೀರ ಅಹ್ಮದ ತಂದೆ ಶೇಕ ಇಮಾಮ ಸಾಬ ವಯ:39 ವರ್ಷ ಜಾ: ಮುಸ್ಲಿಂ ಉ: ವ್ಯಾಪಾರ ಸಾ|| ಮಹ್ಮದಿ ಮಜ್ಜಿದ 2nd ಕ್ರಾಸ್ ಜಿಲಾನಾಬಾದ ಎಂ.ಎಸ್.ಕೆ ಮಿಲ್ ಕಲಬುರಗಿ ಇವರು ತಮ್ಮ ಸಂಗಡ ಸುಮಾರು 30 ಜನರೊಂದಿಗೆ ಠಾಣೆಗೆ ಹಾರಜಾಗಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾವು ಬಡ ಕೂಲಿ ಕಾರ್ಮಿಕರು, ರಿಕ್ಷಾ, ಆಟೋ ಚಾಲನೆ ಮಾಡಿಕೊಂಡು, ಹೊಟೆಲಗಳಲ್ಲಿ ಕೆಲಸ, ತಕರಾರಿ ಮಾರಾಟ ಮಾಡುವ ಕಲಬುರಗಿ ನಗರದ ನಿವಾಸಿಗಳಾಗಿದ್ದು, ನಗರದ ಹೊರ ವಲಯದ ಮಾದರಸನಹಳ್ಳಿ (ಹೀರಾಪೂರ ಹಿಂದುಗಡೆ) ಸರ್ವೆ ನಂ. 16/4 (16/2 ಹೊಸ ಸರ್ವೆ ನಂ.) ರಲ್ಲಿನ 9 ಎಕರೆ 33 ಗುಂಟೆ ಜಮೀನಿನಲ್ಲಿ ಅದರ ಮಾಲಿನ ಮೊಹ್ಮದ  ರಹೀಮುದ್ದಿನ್ @ ಮೊಹ್ಮದ ಖಾಜಾ ರಹಿಮೂದ್ದಿನ್ ತಂದೆ ಮೊಹ್ಮದ ಇಸಾ ಇವರು 1991-92 ರಲ್ಲಿ 171  ಪ್ಲಾಟಗಳನ್ನು ನಿರ್ಮಿಸಿ ಮಾರಿದ್ದರಿಂದ ಅನೇಕ ಬಡ ಜನತೆ 2000/- ರಂತೆ  ಒಂದೊಂದು ಪ್ಲಾಟ ಖರೀದಿಮಾಡಿ ಅಲ್ಲಿ ಮನೆಗಳನ್ನು, ಶೆಡಗಳನ್ನು, ಪಾಯಾಗಳನ್ನು ಕಟ್ಟಿ ತಮ್ಮ ತಮ್ಮ ಕಬ್ಜೆಯಲ್ಲಿ ಇದ್ದಿದ್ದರು, ಕೆಲವರು ಆರ್ಥಿಕ ಅಡಚಣೆಯಿಂದ ತಮ್ಮ ಪ್ಲಾಟಗಳನ್ನು ಮರು ಮಾರಾಟ ಕೂಡ ಮಾಡಿದ್ದಾರೆ. ಸರ್ವೆ ನಂ. 16/4 (ಹಳೆಯದ್ದು) 16/2 (ಹೊಸ ಸರ್ವೆ ನಂ) ನ ಸುಮಾರು 171 ಪ್ಲಾಟಗಳೆಲ್ಲವೂ ಮಾರಾಟವಾದ ನಂತರ ಅದರ ಮಾಲಿಕನಾಗಿದ್ದ ಮೊಹ್ಮದ ರಹಿಮುದ್ದಿನ್ @ ಮೊಹ್ಮದ ಖಾಜಾ ರಹಿಮುದ್ದಿನ್ ಇತನು ಹೊರ ದೇಶಕ್ಕೆ ಓಡಿ ಹೋಗಿದ್ದು, ಆದರೆ ಪ್ಲಾಟಗಳು ಬೇರೆಯವರ ಹೆಸರಿಗೆ ಮಾರಾಟ ಮಾಡಿದ್ದರೂ ಕೂಡ ಪಹಣಿಯಲ್ಲಿ ತನ್ನದೇ ಹೆಸರು ಇದ್ದಿದ್ದರಿಂದ ಅದರ ದುರುಪಯೋಗ ಪಡೆದುಕೊಂಡು ಪ್ಲಾಟ ಖರೀದಿ ಮಾಡಿದವರ ಗಮನಕ್ಕೆ ಬಾರದಂತೆ  ಮೋಸದಿಂದ ದಿನಾಂಕ:24.06.2022 ರಂದು ತನ್ನ ಮಗನಾದ ಅದ್ನಾನ ರಹಿಮೋದ್ದಿನ್  ಎನ್ನುವವನಿಗೆ  ಜಿ.ಪಿ.ಎ. ನೊಂದಣಿ ಮಾಡಿಸಿಕೊಟ್ಟು ಮತ್ತೇ ಹೊರದೇಶಕ್ಕೆ ಓಡಿ ಹೋಗಿದ್ದಾನೆ.  ಗುಲಬರ್ಗಾ ನಗರದಲ್ಲಿರುವ ಅದ್ನಾನ ರಹಿಮೋದ್ದಿನ್ ಇತನು ತಡ ಮಾಡದೆ ಪ್ಲಾಟಗಳಿದ್ದ ಜಮೀನನ್ನು ಗುಲಬರ್ಗಾದ ಭೂಗಳ್ಳ ಖ್ಯಾತಿಯ ಡಾ|| ಮಿರ್ಜಾ ಉಸ್ಮಾನ ಬೇಗ ತಂದೆ ಮಿರ್ಜಾ ಜಾಫರ ಬೇಗ ಅನ್ನುವವನಿಗೆ ದಿನಾಂಕ:27.07.2022 ರಂದು ಡವಲಪ್ ಮೆಂಟ್ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾನೆ, ಡವಲಪ್ ಮೆಂಟ್ ಅಗ್ರಿಮೆಂಟ್ ಆದ ತಕ್ಷಣ ತನ್ನ ಕ್ರಿಮಿನಲ್ ಬುದ್ದಿ ಉಪಯೋಗಿಸಿದ ಡಾ|| ಮಿರ್ಜಾ ಉಸ್ಮಾನ ಬೇಗ ಇತನು ಎಂದಿನಂತೆಯೇ ಪ್ಲಾಟ ಖರೀದಿಸಿದ ಕೆಲವರ ವಿರುದ್ದ ಕಲಂ 420 ಅಡಿ ಕೆಸು ದಾಖಲಿಸುವ ವ್ಯವಸ್ಥೆ ಮಾಡಿ (ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ. 112/2022 ಕಲಂ 420, 463, 448, 504 ಅಡಿಯಲ್ಲಿ ಪ್ರಕರಣ ದಾಖಲಿಸುವ ವ್ಯವಸ್ಥೆ ಮಾಡಿ) ದಿನಾಂಕ:26.08.2022 ರಂದು ಬಡವರನ್ನು ಹೆದರಿಸುವ ಕುತಂತ್ರ ಮಾಡಿದ್ದಾನೆ. ಪ್ಲಾಟ ಮಾರಾಟ ಮಾಡಿದ ಮೊಹ್ಮದ ರಹೀಮೊದ್ದಿನ್ ಹೊರದೇಶಕ್ಕೆ ಓಡಿ ಹೋಗಿದ್ದಾನೆ, ಭೂಗಳ್ಳ ಮೋಸಗಾಗ ಅದ್ನಾನ ರಹೀಮೊದ್ದಿನ್ ಮತ್ತು ಡಾ|| ಮಿರ್ಜಾ ಉಸ್ಮಾನ ಬೇಗ ಪೊಲೀಸ್ ವಾಹನ ನಿಲ್ಲಿಸಿ ಬುಲ್ಡೋಜರ ಮೂಲಕ ಬಡವರ ಮನೆಗಳನ್ನು ಧ್ವಂಸ ಮಾಡಿ ಕಾನೂನಿ  ಅಪಹಾಸ್ಯ ಮಾಡಿರುತ್ತಾರೆ. ಅಲ್ಲದೆ ಹೊರದೇಶಕ್ಕೆ ಓಡಿ ಹೋಗಿರುವ ಮೊಹ್ಮದ ರಹೀಮೊದ್ದಿನ್ ಮಗ ಪ್ಲಾಟ ಖರೀದಿ ಮಾಡಿದವರ ವಿರುದ್ಧ ಜೆ.ಎಂ.ಎಫ್.ಸಿ. ನ್ಯಾಯಾಲಯ ಕಲಬುರಗಿಯಲ್ಲಿ ತಡೆಯಾಜ್ಞೆಗಾಗಿ ಓ.ಎಸ್. ನಂ. 273/2022 ಅರ್ಜಿಯನ್ನು ಸಲ್ಲಿಸಿದ್ದು, ಸದರಿ ಅರ್ಜಿಯನ್ನು ಪರಿಶೀಲಿಸಿದ ನಂತರ ಮಾನ್ಯ ನ್ಯಾಯಾಲಯದಲ್ಲಿ ದಿನಾಂಕ:28.09.2022 ರಂದು ಸದರಿ ಅರ್ಜಿಯು ತೀರಸ್ಕೃತಗೊಂಡಿದ್ದು ಇರುತ್ತದೆ. ನಾನು ನನ್ನ ಅರ್ಜಿಯೊಂದಿಗೆ ನಾನು ಖರಿದಿಸಿದ ನಿವೇಶನಕ್ಕೆ ಸಂಬಂದಿಸಿದ ದಾಖಲಾತಿಗಳನ್ನು ಲಗತ್ತಿಸ್ಸಿರುತ್ತೇನೆ. ನನ್ನಂತೆ ನನ್ನೊಂದಿಗೆ 30 ಜನ ಬಂದಿದ್ದು ಅವರು ಸಹ ಮೊಸಕ್ಕೆ ಒಳಗಾಗಿರುತ್ತಾರೆ. ಕಾರಣ ಭೂಗಳ್ಳರಾದ 1) ಮೊಹ್ಮದ ರಹೀಮೊದ್ದಿನ್ @ ಮಹ್ಮದ ಖಾಜಾ ರಹಿಮೊದ್ದಿನ್ ತಂದೆ ಮಹ್ಮದ ಈಸಾ 2) ಅದ್ನಾನ ರಹಿಮೊದ್ದಿನ್ ತಂದೆ ಮಹ್ಮದ ಖಾಜಾ ರಹಿಮೊದ್ದಿನ್ ಮತ್ತು 3) ಡಾ|| ಮಿರ್ಜಾ ಉಸ್ಮಾನ ಬೇಗ ತಂದೆ ಮಿರ್ಜಾ ಜಾಫರ್ ಬೇಗ್, ಇವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನ್ಯಾಯ ದೊರಕಿಸಿ ಕೊಡಬೇಕು ಅಂತ ವಿನಂತಿ ಅಂತ ಇತ್ಯಾದಿಯಾಗಿ ಇದ್ದ ಫಿರ್ಯಾದಿಯ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :-  ದಿನಾಂಕ :24-12-2022 ರಂದು ರಾತ್ರಿ ೮.೦೦ ಸುಮಾರಿಗೆ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಕ್ಯಾಂಟೀನ ಹತ್ತಿರ ಹೊರಟಾಗ ಸದರಿ ಆರೋಪಿತರು ಪ್ಲಾಟಿನ ವಿಷಯದಲ್ಲಿ ಹಣ ಕೊಡು ಅಂದಿದ್ದಕ್ಕೆ ಅವಾಚ್ಯವಾಗಿ ಬೈದು ಚಾಕುವನಿಂದ ಹೊಡೆದು ಗಾಯ ಮಾಡಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :-  ದಿನಾಂಕ : 25-12-2022  ರಂದು ಸಾಯಂಕಾಲ ೦೫:೩೦ ಪಿ.ಎಮ್ ಕ್ಕೆ ಕೆಸರಟಗಿ ಸೀಮಾಂತರದ ಗಾರ್ಡನ ಎದರು ರೋಡಿನ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಅಂದರ-ಬಾಹರ ಎಂಬ ಜೂಜಾಟದಲ್ಲಿ ತೊಡಗಿದ್ದ ಸದರಿ ಆರೋಪಿತರಿಂದ ನಗದು ಹಣ 4130 ರೂ. ಮತ್ತು 52 ಇಸ್ಪೇಟ ಎಲೆಗಳು ಜಪ್ತಿ ಪಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ ಠಾಣೆ -2 :-  ದಿನಾಂಕ 25/12/2022 ರಂದು ಸಾಯಂಕಾಲ 06:45 ಗಂಟೆಗೆ ಅಬ್ದುಲ್ ಸತ್ತಾರ ತಂದೆ ಅಬ್ದುಲ್ ಸಮದ ವಯ:30ವರ್ಷ ಜಾ:ಮುಸ್ಲಿಂ ಉ: ಎಲೆಕ್ಟ್ರಿಶನ ಸಾ: ನೀರಿನ ಟ್ಯಾಂಕ ಹತ್ತೀರ ಯದುಲ್ಲಾ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ಅರ್ಜಿ ಸಲ್ಲಿಸಿದ್ದು ಸಾರಂಶವೆನೆಂದರೆ,  ನಿನ್ನೆ ದಿನಾಂಕ 24/12/2022 ರಾತ್ರಿ ನಾನು ನನ್ನ ಕೆಲಸದಲ್ಲಿ ಇರುವಾಗ ನಮ್ಮ ಪರಿಚಯದ ಸೈಯದ್ ಮಹಮ್ಮದ ಹುಸೇನ ತಂದೆ ಸೈಯದ್ ಅಬ್ದುಲ ವಹಾಬ  ಇವರು ನನಗೆ 9-50 ಗಂಟೆಸುಮಾರಿಗೆ ನನಗೆ ಫೋನ್ ಮಾಡಿ ನಾನು ಮತ್ತು ನಮ್ಮ ಪರಿಚಯದ ಸೈಯದ್ ಅಬ್ಬಾಸ ತಂದೆ ಸೈಯದ್ ನಸೀರ ಶಹಾ ಇಬ್ಬರು ಮೊಘಲ ಫಂಕ್ಷನ ಹಾಲ್ ಹತ್ತೀರ ಮಾತನಾಡುತ್ತಾ ನಿಂತಿರುವಾಗ ಒಬ್ಬ ಟಿವಿಎಸ್ ಎಕ್ಸ್ಎಲ್ ಮೋಟರ ಸೈಕಲ್ ಸವಾರನು ಮಹೇಬೂಬ ನಗರ ಕ್ರಾಸ ಕಡೆಯಿಂದ ಟಿಪ್ಪು ಸುಲ್ತಾನ ಚೌಕ ಕಡೆಗೆ ಹೋಗುವ ಕುರಿತು ತನ್ನ ಮೋಟರ ಸೈಕಲನ್ನು ನಿಧಾನವಾಗಿ ರಸ್ತೇಯ ಬದಿಯಿಂದ ಚಲಾಯಿಸಿಕೊಂಡು ಹೋಗುತಿದ್ದನು. ಅಷ್ಟರಲ್ಲಿ ರಾತ್ರಿ 9-20 ಗಂಟೆಸಯಸುಮಾರಿಗೆ ಇನ್ನೊಬ್ಬ ಮೋಟರ ಸೈಕಲ್ ಸವಾರನು ಮಹೇಬೂಬ ನಗರ ಕ್ರಾಸ ಕಡೆಯಿಂದ ಟಿಪ್ಪು ಸುಲ್ತಾನ ಚೌಕ ಕಡೆಗೆ ಹೋಗುವ ಕುರಿತು ತನ್ನ ಮೋಟರ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸದರಿ ನಿಧಾನವಾಗಿ ಹೋಗುತಿದ್ದ ಟಿ.ವಿ.ಎಸ್. ಎಕ್ಸಲ್ ಮೋಟರ ಸೈಕಲ್ಲಿಗೆ ಹಿಂದಿನಿಂದ ಡಿಕ್ಕಿಪಡಿಸಿದನು. ಆಗ ಸದರಿ ಟಿ.ವಿ.ಎಸ್. ಎಕ್ಸಲ್ ಮೋಟರ ಸೈಕಲ ಸವಾರನು ಮೋಟರ ಸೈಕಲ ಸಮೇತ ಕೆಳಗೆ ಬಿದ್ದನು. ಅದನ್ನು ನೋಡಿ ನಾನು ಮತ್ತು ಸೈಯದ್ ಅಬ್ಬಾಸ ಇಬ್ಬರು ಓಡಿಹೋಗಿ ಸದರಿ ಟಿ.ವಿ.ಎಸ್. ಎಕ್ಸಲ್ ಮೋಟರ ಸೈಕಲ ಸವಾರನಿಗೆ ಎಬ್ಬಿಸಿ ರಸ್ತೇಯ ಬದಿಯಲ್ಲಿ ಕೂಡಿಸಿ ನೋಡಲು ಅವರು ನಿಮ್ಮ ತಂದೆಯಾದ ಅಬ್ದುಲ್ ಸಮದ ಇದ್ದು. ಸದರ ಘಟನೆಯಿಂದ ಅವರ ಬಲಗಡೆ ಕಣ್ಣಿಗೆ ರಕ್ತಗಾಯ ಹಾಗೂ ಬಲಗಡೆ ತಲೆಗೆ ಮತ್ತು ಹಿಂದುಗಡೆ ಭಾರಿರಕ್ತಗಾಯ ವಾಗಿದ್ದು. ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಅವರು ಚಲಾಯಿಸಿಕೊಂಡು ಬಂದ ಟಿ.ವಿ.ಎಸ್. ಎಕ್ಸಲ್ ಮೋಟರ ಸೈಕಲ ನಂ.ನೋಡಲು ಕೆಎ-32ಇಜಿ-1521 ನೇದ್ದು ಇದ್ದು. ಸದರಿ ಮೋಟರ ಸೈಕಲ್ಲಿಗೆ ಹಿಂಗುಗಡೆ ಡಿಕ್ಕಿಪಡಿಸಿದ ಮೋಟರ ಸೈಕಲ ನಂ. ನೋಡಲು ಕೆಎ-32 ಇಕೆ-0316 ನೇದ್ದು ಇದ್ದು ಅದರ ಸವಾರನಿಗೆ ನೋಡಲು ಆತನು ಸಹ ಮೋಟರ ಸೈಕಲ ಸಮೇತ ರಸ್ತೇಯ ಮೇಲೆ ಬಿದ್ದಿದ್ದು ಆತನಿಗೂ ಸಹ ಅಲ್ಲಲ್ಲಿ ಗಾಯಗಳು ಆಗಿದ್ದು ಇರುತ್ತದೆ. ಆತನ ಹೆಸರು ಮಹಮ್ಮದ ಶಕೀಲ  ಅಂತಾ ಗೊತ್ತಾಗಿದ್ದು. ನಾನು ಮತ್ತು  ಸೈಯದ್ ಅಬ್ಬಾಸ ಇಬ್ಬರು ಸೇರಿ ಅಲ್ಲಿಯೇ ಹೋಗುತಿದ್ದ ಒಂದು ಅಟೋರಿಕ್ಷಾದಲ್ಲಿ ನಿಲ್ಲಿಸಿ ನಿಮ್ಮ ತಂದೆಯವರಿಗೆ ಉಪಚಾರ ಕುರಿತು ಕ್ಯೂಪಿ ಆಸ್ಪತ್ರೆಗೆ ಕರೆದುಕೊಂಡು ಹೋಗುತಿದ್ದೇವೆ. ನೀವು ಅಲ್ಲಿಗೆ ಬರಬೇಕೆಂದು ತಿಳಿಸಿದ ಮೇರೆಗೆ ನಾನು ಕ್ಯೂಪಿ ಆಸ್ಪತ್ರೆಗೆ ಹೋಗಿ ನೋಡಲು ನಮ್ಮ ತಂದೆಯವರಿಗೆ ಸೈಯದ್ ಮಹಮ್ಮದ ಹುಸೇನ ತಂದೆ ಸೈಯದ್ ಮೇಲೆ ತಿಳಿಸಿರುವಂತೆ ಗಾಯಗಳಾಗಿ ಮಾತನಾಡುವ ಸ್ಥಿಯಲ್ಲಿ ಇಲ್ಲ ನಾನು ಅವರ ಚಿಕಿತ್ಸೆಯಲ್ಲಿದ್ದು. ನಮ್ಮ ಮನೇಯವರೊಂದಿಗೆ ವಿಚಾರಿಸಿ ಇಂದು ಠಾಣೆಗೆ ಬಂದು ದೂರುನೀಡಲು ತಡವಾಗಿರುತ್ತದೆ. ಕಾರಣ ರಸ್ತೇಯ ಬದಿಯಿಂದ ನಿಧಾನವಾಗಿ ಹೋಗುತಿದ್ದ ನನ್ನ ತಂದೆಯ ಟಿ.ವಿ.ಎಸ್. ಎಕ್ಸಲ್ ಮೋಟರ ಸೈಕಲ್ಲಿಗೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿದ ಭಾರಿ ಗಾಯಗೊಳಿಸಿದ ಮೋಟರ ಸೈಕಲ್ ನಂ.ಕೆಎ-32 ಇಕೆ-0316 ನೇದ್ದರ ಸವಾರ ಮಹಮ್ಮದ ಶಕೀಲ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 26-12-2022 11:19 AM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080