ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 25/11/2022 ರಂದು ಸಾಯಂಕಾಲ 6:30 ಗಂಟೆಗೆ ಶ್ರೀಮತಿ ನೀಲಮ್ಮ ಗಂಡ ಉಲ್ಲಾಸ ಕಾಂಬ್ಳೆ ವಯಃ 28  ವರ್ಷ ಜಾಃ ಪ.ಜಾತಿ (ಮಾದಿಗ) ಉಃ ಮನೆಕೆಲಸ ಮುಃ ಅವರಾದ (ಬಿ) ತಾ & ಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಕೊಟ್ಟಿದ್ದು ಸಾರಂಶವೆನೆಂದರೆ, ನಾನು ಮೇಲಿನ ವಿಳಾಸದವಳಿದ್ದು, ನನ್ನ ಗಂಡ ಉಲ್ಲಾಸ ತಂದೆ ಮಾಣಿಕ ಕಾಂಬ್ಳೆ ವಯಃ 32 ವರ್ಷ ಇವರು ಮತ್ತು ನಮ್ಮೂರಿನ ಮಲ್ಲಿಕಾರ್ಜುನ ತಂದೆ ಕಾಶಪ್ಪ ಇಬ್ಬರೂ ಕೂಡಿಕೊಂಡು ಮೋಟರ ಸೈಕಲ ನಂ. ಕೆಎ 32 ಹೆಚ್.ಎ 7415 ನೇದ್ದರ ಮೇಲೆ ಕಲಬುರಗಿಯಿಂದ ಅವರಾದಿಗೆ ದಿನಾಂಕ 08/10/2022 ರಂದು ರಾತ್ರಿ 8:00 ಗಂಟೆಗೆ ಹುಮ್ನಾಬಾದ ರೋಡಿನ ಸಲಾಂ ಟೇಕಡಿ ಹೊಡ್ಡಿಗೆ ಬರುತ್ತಿರುವಾಗ ಮಲ್ಲಿಕಾಜರ್ುನ ಈತನು ಮೋಟರ ಸೈಕಲನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬರುವಾಗ ಎದುರಿಗೆ ಬರುವ ಯಾವುದೋ ವಾಹನದ  ಫೋಕಸ್ ಲೈಟ್ಗೆ ಸೈಡಿಗೆ ತೆಗೆದುಕೊಳ್ಳುವಾಗ ಮೋಟರ ಸೈಕಲದ ಮೇಲಿಂದ ಬಿದ್ದಿದ್ದರಿಂದ ತಲೆಗೆ ಭಾರಿ ಒಳಪೆಟ್ಟು, ಮುಖಕ್ಕೆ, ಗದ್ದಕ್ಕೆ ತರಚಿದ ಗಾಯಗಳಾಗಿದ್ದು ಬೇಹೊಷ ಸ್ಥಿತಿಯಲ್ಲಿದ್ದು ಯುನೈಟೆಡ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ದಿನಾಂಕ 09/10/2022 ರಂದು ತಮ್ಮ ಕಡೆಗೆ ಬಂದು ಫಿರ್ಯಾದಿಯನ್ನು ಸಲ್ಲಿಸಿದ್ದು, ಅದರ ಮೇಲಿಂದ ಪ್ರಕರಣ ನಂ. 216/2022 ಕಲಂ 279, 338 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.     ಮುಂದೆ ನನ್ನ ಗಂಡನವರು ಯುನೈಟೆಡ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ ಅವರ ಸ್ಧಿತಿಯು ಚಿಂತಾಜನಕವಾಗಿರುವುದರಿಂದ ವಿಚಾರಣೆ ಮಾಡಿಕೊಂಡು ಹೆಚ್ಚಿನ ಉಪಚಾರ ಕುರಿತು ಸೊಲ್ಲಾಪೂರಕ್ಕೆ ತೆಗೆದುಕೊಂಡು ಹೋಗುವ ನಿರ್ಧರ ಮಾಡಿ ದಿನಾಂಕ 10/10/2022 ರಂದು ಕಲಬುರಗಿಯಿಂದ ಸೊಲ್ಲಾಪೂರ ಗಂಗಾಮಾಯಿ ಆಸ್ಪತ್ರೆಯಲ್ಲಿ ನಾನು, ನಮ್ಮ ಅಣ್ಣತಮ್ಮಕೀಯ ಕೈಲಾಸ ತಂದೆ ಕಾಶಿನಾಥ ಹಾಗು ಗುಂಡಪ್ಪಾ ತಂದೆ ನಾಗಪ್ಪಾ ಕಾಂಬಳೆ ರವರೆಲ್ಲರೂ ಕೂಡಿಕೊಂಡು ಸೇರಿಕೆ ಮಾಡಿದ್ದು, ಗಂಡನವರು ಉಪಚಾರ ಪಡೆಯುತ್ತಿರುವಾಗ ಸ್ವಲ್ಪವು ಗುಣಮುಖವಾಗದೆ ಚಿಂತಾಜನಕ ಸ್ಧಿತಿಯಲ್ಲಿಯೇ ಉಪಚಾರ ಪಡೆಯುತ್ತಿರುವಾಘ ದಿನಾಂಕ 22/10/2022 ರಂದು ಮಧ್ಯಾಹ್ನ 2:05 ಗಂಟೆ ಸುಮಾರಿಗೆ ಗಂಗಾಮಾಯಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು, ಮುಂದೆ ಅಂದೆ ದಿನಾಂಕ 22/10/2022 ರಂದು ಸೊಲ್ಲಾಪೂರದ ಕ್ಷತ್ರಪತಿ ಶಿವಾಜಿ ಮಹಾರಾಜ ಆಸ್ಪತ್ರೆಯಲ್ಲಿ ಗಂಡನವರ ಶವದ ಪಿ.ಎಮ್.ಇ ಪರೀಕ್ಷೆ ಕೈಗೊಂಡು, ದಿನಾಂಕ 23/10/2022 ರಂದು ನಮ್ಮೂರಿನಲ್ಲಿ ನಮ್ಮ ಸಂಸ್ಕಾರದ ಪ್ರಕಾರ ಅಂತ್ಯಸಂಸ್ಕಾರ ಕೈಗೊಂಡಿದ್ದು ಇರುತ್ತದೆ. ಮುಂದೆ ನನ್ನ ಗಂಡನವರು ಮೃತ ಪಟ್ಟ ದುಖಃದಲ್ಲಿ ಉಳಿದುಕೊಂಡು ಬರದೆ ಆಗದೆ ಇರುವುದರಿಂದ, ಇಂದು ದಿನಾಂಕ 25/11/2022 ರಂದು ಪೊಲೀಸ್ ಠಾಣೆಗೆ ಬಂದಿದ್ದು, ಈ ವಿಷಯದಲ್ಲಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಚೌಕ ಪೊಲೀಸ ಠಾಣೆ:-  ದಿನಾಂಕ: 25.11.2022 ರಂದು ಸಂಜೆ 5.45 ಗಂಟೆಗೆ ನಮ್ಮ ಠಾಣೆಯ ಶ್ರೀ ರಾಜಶೇಖರ ವಿ. ಹಳಗೋಧಿ ಪಿ.ಐ. ಚೌಕ ಪೊಲೀಸ ಠಾಣೆ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಇಬ್ಬರು ಆರೋಪಿ ಮತ್ತು ಮುದ್ದೇ ಮಾಲಿನೊಂದಿಗೆ ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ಸರ್ಕಾರಿ ತರ್ಫೇ ದೂರು ಮತ್ತು ಮಟಕಾ ದಾಳಿ ಜಪ್ತಿಪಂಚನಾಮೆ ಕೊಟ್ಟಿದ್ದರ ಸಾರಾಂಶವೆನೆಂದೆರೆ,ಇಂದು ದಿನಾಂಕ:25/11/2022 ರಂದು ಮಧ್ಯಾಹ್ನ 04-00 ಗಂಟೆಗೆ ಚೌಕ ಪೊಲೀಸ ಠಾಣೆಯಲ್ಲಿ ಇದ್ದಾಗ ನನಗೆ ಖಚಿತವಾದ ಬಾತ್ಮಿ ಬಂದಿದ್ದೆನೆಂದೆರೆ, ನಮ್ಮ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ನಗರದ ಯಾಕೂಬ ಮಣಿಯಾರ ಚಾಳ ಏರಿಯಾದಲ್ಲಿ ಇರುವ ಜುಬಲೀ ಕಾಂಪ್ಲೆಕ್ಸದ ಮುಂದುಗಡೆ ಇರುವ  ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ನಿಂತುಕೊಂಡು ಹೋಗಿ-ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾರೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ನಸೀರ ಅಹ್ಮದ ತಂದೆ ಅಜೀಜ ರಹೇಮಾನ ಬಾಲವಾಲೇ ವ;36 ವರ್ಷ ಉ: ವ್ಯಾಪರ ಜಾತಿ ಮುಸ್ಲಿಂ ಸಾ: ಮಿಲ್ಲತ ನಗರ ಕಲಬುರಗಿ ಮೋ.ನಂ. 9845911821 2) ಶ್ರೀ ಮಹ್ಮದ ಸೋಹೇಲ್ ತಂದೆ ಖಾಜಾ ಮೈನೋದ್ದಿನ ವ:22 ವರ್ಷ ಉ:ವ್ಯಾಪರ ಜಾತಿ ಮುಸ್ಲಿಂ ಸಾ: ಮಿಲ್ಲತ ನಗರ ಕಲಬುರಗಿ ಮೋ.ನಂ. 7795912082 ಇವರುಗಳನ್ನು ಬರಮಾಡಿಕೊಂಡು ಮತ್ತು ನಮ್ಮ ಠಾಣೆಯ ಸಿಬ್ಬಂದಿಯವರಾದ ಸಿಹೆಚಸಿ 226 ಸಿದ್ರಾಮಯ್ಯ  ಸಿಪಿಸಿ 136 ಸುರೇಶ, ಸಿಪಿಸಿ 08 ಅಶೋಕ ಇವರುಗಳನ್ನು ಬರಮಾಡಿಕೊಂಡು ಪಂಚರಿಗೆ ನಾವು ಮಾಡುವ ದಾಳಿ ಜಪ್ತಿ ಪಂಚನಾಮೆಯ ಪಂಚರಾಗಿ ಜಪ್ತಿ ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಪಂಚರು ಒಪ್ಪಿಕೊಂಡರು. ಮತ್ತು ನಮ್ಮ ಸಿಬ್ಬಂದಿಯವರಿಗೆ ನನ್ನ ಜೊತೆಯಲ್ಲಿ ದಾಳಿಗೆ ಬರಲು ಸೂಚಿಸಿದಾಗ ಅವರು ಕೂಡಾ ಒಪ್ಪಿಕೊಂಡರು. ಆಗ ನಾನು ಮಟಕಾ ಜೂಜಾಟ ದಾಳಿ ಕುರಿತು ಠಾಣೆಯ ಜೀಪ್  ನಂ.ಕೆಎ 32 ಜಿ-874 ರಲ್ಲಿ ನಾನು ಮತ್ತು ಪಂಚರು ಹಾಗೂ ಈ ಮೇಲಿನ ಸಿಬ್ಬಂದಿಯವರು ಕುಳಿತುಕೊಂಡೇವು. ಜೀಪು ಸಿಪಿಸಿ 136 ಸುರೇಶ ಇವರು ಚಾಲನೆ ಮಾಡುತ್ತಿದ್ದರು. ದಾಳಿ ಕುರಿತು ಮಹಿಬಾಸ ಮಾಸ್ಕ ಮುಖಾಂತರವಾಗಿ ಬಾತ್ಮಿ ಸ್ಥಳವಾದ ಕಲಬುರಗಿ ನಗರದ ಯಾಕೂಬ ಮಣಿಯಾರ ಚಾಳ ಏರಿಯಾದಲ್ಲಿ ಇರುವ ಜುಬಲೀ ಕಾಂಪ್ಲೆಕ್ಸ್ ಇನ್ನೂ ಸ್ವಲ್ಪ ಮುಂದೆ ಇರುವಂತೆ ಜೀಪು ನಿಲ್ಲಿಸಿದಾಗ ಎಲ್ಲರೂ ಜೀಪು ಇಳಿದು ಜುಬಲೀ ಕಾಂಪ್ಲೆಕ್ಸದ ಗೋಡೆ ಮರೆಯಲ್ಲಿ ನಿಂತು ನೋಡಲಾಗಿ ಇಬ್ಬರು ಜುಬಲೀ ಕಾಂಪ್ಲೆಕ್ಸದ ಎದುರುಗಡೆ  ಇರುವ ಸಾರ್ವಜನಿಕ ರಸ್ತೆ ಮೇಲೆ ನಿಂತುಕೊಂಡು ಹೋಗು-ಬರುವ ಸಾರ್ವಜನಿಕರಿಗೆ 1 ರೂ.ಗೆ 80 ರೂ. ಗೆಲ್ಲಿರಿ ಕಲ್ಯಾಣ ಮಟಕಾ ಇದೆ ಅಂತಾ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಬರೆದುಕೊಡುತ್ತಿದ್ದರು. ಮತ್ತು ತಮ್ಮ ತಮ್ಮ ಹತ್ತಿರವಿದ್ದ ಮೋಬಾಯಿಲನಿಂದ ಕೂಡಾ ಮಟಕಾ ಅಂಕಿ ಸಂಖ್ಯೆ ಚೀಟಿಗಳನ್ನು ಬರೆದುಕೊಡುತ್ತಿದ್ದನ್ನು  ನಾನು ನೋಡಿ ಜೊತೆಯಲ್ಲಿ ಇದ್ದ ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ತೋರಿಸಿ ಖಚಿತಪಡಿಸಿಕೊಂಡು, ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿಯವರು ಮಧ್ಯಾಹ್ನ 4-30  ಗಂಟೆಗೆ ದಾಳಿ ಮಾಡಿ ಮಟಕಾ ಬರೆದುಕೊಳ್ಳುತ್ತಿದ್ದ  ಇಬ್ಬರಿಗೆ ಹಿಡಿದು ಅವರುಗಳ  ಹೆಸರು ವಿಳಾಸ ವಿಚಾರಿಸಲೂ ಅವರಲ್ಲಿ ಒಬ್ಬನು ತನ್ನ ಹೆಸರು 1)ಮಜರಅಲಿ ತಂದೆ ಅಕ್ಬರ ಅಲಿ ಸಾಬ ವ:43 ವರ್ಷ ಉ: ಡಾಕ್ಟರ ವೃತ್ತಿ ಜಾತಿ ಮುಸ್ಲಿಂ ಸಾ: ಕಮಾಲೇ ಮುಜರತ ದರ್ಗಾ  ಹತ್ತಿರ ಯಾದುಲ್ಲಾ ಕಾಲನಿ ಕಲಬುರಗಿ  ಅಂತಾ ತಿಳಿಸಿದನು. ಆತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ 1)ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ:ಕಿ:00 ರೂ. 2) ಒಂದು ಬಾಲಪೆನ್ನು ಅ:ಕಿ:00 ರೂ. 3)ನಗದು ಹಣ  8200/- ರೂ. 4)ಒಂದು ಎಂ.ಐ. ಅಂತಾ ಬರೆದ ಮೋಬಾಯಿಲ್ ಅ:ಕಿ:3000/- ರೂ. ದೊರೆತವು. 2) ಎರಡನೆಯವನಿಗೆ ವಿಚಾರಿಸಲೂ ಅವನು ತನ್ನ ಹೆಸರು ಖಾಸೀಂ ಅಲಿ ತಂದೆ ನಬೀಸಾಬ ಭಾಗವಾನ ವ:65 ವರ್ಷ ಉ: ಹಣ್ಣಿನ ವ್ಯಾಪರ ಜಾತಿ ಮುಸ್ಲಿಂ ಸಾ: ಮೌಲಾಲಿ ಕಟ್ಟಾ ಎಂ.ಎಸ್.ಕೆ.ಮಿಲ್ಲ ಕಲಬುರಗಿ ಅಂತಾ ತಿಳಿಸಿದನು. ಆತನ ಅಂಗಶೋಧನೆ ಮಾಡಲಾಗಿ ಆತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ 1)ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ:ಕಿ:00 ರೂ. 2)ಒಂದು ಬಾಲಪೆನ್ನು ಅ:ಕಿ:00 ರೂ. 3)ನಗದು ಹಣ  3200/- ರೂ. 4)ಒಂದು ಜಿಯೋ ಅಂತಾ ಬರೆದ ಮೋಬಾಯಿಲ್ ಅ:ಕಿ:500/- ರೂ. ದೊರೆತವು. ನಂತರ  ನಾನು ಅವರಿಬ್ಬರಿಗೆ ಮಟಕಾ ಚೀಟಿ ಯಾರಿಗೆ ಒಯ್ದು ಕೊಡುತ್ತೀ ಅಂತಾ ವಿಚಾರಿಸಿದಾಗ ಅವರಿಬ್ಬರು ಶರಣು ಕಾಳೆ ಸಾ: ದುಬೈಕಾಲನಿ ಕಲಬುರಗಿ ಇತನಿಗೆ  ಕೊಡುವುದಾಗಿ ತಿಳಿಸಿದರು.  ಆಗ ನಾನು ಕೇಸಿನ ಪುರಾವೆಗೋಸ್ಕರ ಒಂದು ದಸ್ತಿಯಲ್ಲಿ ಮಜರಅಲಿ ಮತ್ತು ಖಾಸೀಂ ಅಲಿ ಇವರ ಹತ್ತಿರ ದೊರೆತ ಈ ಮೇಲಿನ ಎರಡು ಮಟಕಾ ಚೀಟಿಗಳು, ಎರಡು ಬಾಲಪೆನ್ನುಗಳು ನಗದುಹಣ, ಎರಡು ಮೋಬಾಯಿಲಗಳು ಹಾಕಿ ಗಂಟು ಕಟ್ಟಿ ಅದಕ್ಕೆ ಪಂಚರು ಸಹಿಸಿದ ಚೀಟಿ ಅಂಟಿಸಿ ನನ್ನ  ವಶಕ್ಕೆ ತೆಗೆದುಕೊಂಡು ಜಪ್ತ ಪಡಿಸಿಕೊಂಡೆನು. ಮತ್ತು 1)ಮಜರಅಲಿ ತಂದೆ ಅಕ್ಬರ ಅಲಿ ಸಾಬ ವ:43 ವರ್ಷ ಉ: ಡಾಕ್ಟರ ವೃತ್ತಿ ಜಾತಿ ಮುಸ್ಲಿಂ ಸಾ: ಕಮಾಲೇ ಮುಜರತ ದಗರ್ಾ ಹತ್ತಿರ ಯಾದುಲ್ಲಾ ಕಾಲನಿ ಕಲಬುರಗಿ 2) ಖಾಸೀಂ ಅಲಿ ತಂದೆ ನಬೀಸಾಬ ಭಾಗವಾನ ವ:65 ವರ್ಷ ಉ: ಹಣ್ಣಿನ ವ್ಯಾಪರ ಜಾತಿ ಮುಸ್ಲಿಂ ಸಾ: ಮೌಲಾಲಿ ಕಟ್ಟಾ ಎಂ.ಎಸ್.ಕೆ.ಮಿಲ್ಲ ಕಲಬುರಗಿ 3)ಶರಣು ಕಾಳೆ ಸಾ:ದುಬೈ ಕಾಲನಿ ಕಲಬುರಗಿ ಇವರುಗಳು ಮಟಕಾ ಜೂಜಾಟದಲ್ಲಿ ನಿರತರಾದ ಖಚಿತಪಟ್ಟಿದ್ದರಿಂದ ಸ್ಥಳದಲ್ಲಿ ಸಿಕ್ಕಿ ಬಿದ್ದ ಮಜರಅಲಿ ಮತ್ತು ಖಾಸೀಂ ಅಲಿ ಇವರುಗಳಿಗೆ ನಾನು ಮತ್ತು ಸಿಬ್ಬಂದಿಯವರು ವಶಕ್ಕೆ ತೆಗೆದುಕೊಂಡೇವು. ಸದರ ಜಪ್ತಿ ಪಂಚನಾಮೆ ಇಂದು ದಿನಾಂಕ 25/11/2022 ರಂದು ಮಧ್ಯಾಹ್ನ 4-30 ಗಂಟೆಯಿಂದ ಸಂಜೆ 5-30  ಗಂಟೆಯವರೆಗೆ ಸದರ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮಲ್ಲಿ ಲ್ಯಾಪಟ್ಯಾಪನಲ್ಲಿ ಸಿಪಿಸಿ 08 ಅಶೋಕ ಇವರ ಕಡೆಯಿಂದ ಗಣಕೀಕೃತ ಮಾಡಿ ಮುಗಿಸಲಾಯಿತು. ಸದರ ಮಟಕಾ ಜೂಜಾಟದಲ್ಲಿ ನಿರತರಾದ 1)ಮಜರಅಲಿ ತಂದೆ ಅಕ್ಬರ ಅಲಿ ಸಾಬ ವ:43 ವರ್ಷ ಉ: ಡಾಕ್ಟರ ವೃತ್ತಿ ಜಾತಿ ಮುಸ್ಲಿಂ ಸಾ: ಕಮಾಲೇ ಮುಜರತ ದಗರ್ಾ ಹತ್ತಿರ ಯಾದುಲ್ಲಾ ಕಾಲನಿ ಕಲಬುರಗಿ 2) ಖಾಸೀಂ ಅಲಿ ತಂದೆ ನಬೀಸಾಬ ಭಾಗವಾನ ವ:65 ವರ್ಷ ಉ: ಹಣ್ಣಿನ ವ್ಯಾಪರ ಜಾತಿ ಮುಸ್ಲಿಂ ಸಾ: ಮೌಲಾಲಿ ಕಟ್ಟಾ ಎಂ.ಎಸ್.ಕೆ.ಮಿಲ್ಲ ಕಲಬುರಗಿ 3)ಶರಣು ಕಾಳೆ ಸಾ:ದುಬೈ ಕಾಲನಿ ಕಲಬುರಗಿ ಇವರುಗಳು ಮೇಲೆ ಕಾನೂನು ಕ್ರಮ ಜರೂಗಿಸಬೇಕೆಂದು ಸಿಕ್ಕಿ ಬಿದ್ದ ಆರೋಪಿ ಮಜರ ಅಲಿ ಮತ್ತು ಖಾಸೀಂ ಅಲಿ ಮತ್ತು ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯೊಂದಿಗೆ ಸರ್ಕಾರಿ ತರ್ಫೇ ದೂರು ಕೊಟ್ಟಿರುತ್ತೇನೆ. ಎಂದು ಕೊಟ್ಟ ಸರ್ಕಾರಿ ತರ್ಫೇ ದೂರು ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರಾಘವೇಂದ್ರ  ನಗರ ಪೊಲೀಸ ಠಾಣೆ :-  ದಿನಾಂಕಃ 25-11-2022  ರಂದು ೩:೩೦ ಪಿ.ಎಮ್ ಕ್ಕೆ ಶ್ರೀ ಮತೀನ್‌ತಂದೆ ಮೊಹ್ಮದ್‌ಇಬ್ರಾಹಿಂ ವಯಃ ೨೨ ವರ್ಷಜಾಃ ಮುಸ್ಲಿಂ ಉಃ ಖಾಸಗಿ ಕೆಲಸ ಸಾಃ ಮನೆ ನಂ,೧೦-೧೦೦೦ ಲಾಲಗಿರಿ ಮಜೀದ್ ಹತ್ತಿರ  ಬ್ರಹ್ಮಪುರರೋಡ್ ಕಲಬುರಗಿರವರುಇ-ಎಫ್,ಐ,ಆರ್‌ತಂತ್ರಾಂಶದಲ್ಲಿತಮ್ಮ ವಾಹನ ಕಳೆದ ಬಗ್ಗೆ ದೂರು ದಾಖಲಿಸಿದ್ದು, ಸದರಿದೂರಿನ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ವಿಳಾಸದ ನಿವಾಸಿತನಿದ್ದು ನಾನು ಖಾಸಗಿ ಕೆಲಸ ಮಾಡಿಕೊಂಡು ಬರುವದಕ್ಕೆ ಮತ್ತು ನಮ್ಮ ಮನೆಯಇತರೆ ಕೆಲಸ ಮಾಡುವದಕ್ಕೆಒಂದು ಸ್ಪ್ಲೇಂಡರ್ ಪ್ಲಸ್. ಹೀರೋ  ಮೋಟಾರ ಸೈಕಲ್‌ಖರೀದಿ ಮಾಡಿದ್ದು ಸದರಿ‌ ಸ್ಪ್ಲೇಂಡರ್ ಪ್ಲಸ್. ಹೀರೋ ಮೋಟಾರ ಸೈಕಲ್ ನಾನು ಉಪಯೋಗ ಮಾಡುತ್ತಾ ಬಂದಿರುತ್ತೇವೆ. ಹೀಗೆ ಇರುವಾಗ ದಿನಾಂಕಃ ೦೧.೧೦.೨೦೨೨ ರಂದು ೦೧:೦೦ ಎಎಮ್‌ರಾತ್ರಿ ವೇಳೆ ಪ್ರತಿ ದಿನದಂತೆ ನಮ್ಮ ಮನೆಯ ಮುಂದೆ ನಿಲ್ಲಿ ಮಲಗಿಕೊಂಡಿದ್ದು ನಂತರ ದಿನಾಂಕಃ ೦೧.೧೦.೨೦೨೨ ರಂದು ಬೆಳಿಗ್ಗೆ ೭.೦೦ ಗಂಟೆ ಸುಮಾರಿಗೆಎದ್ದು ನೋಡಿದ್ದಾಗ ನಮ್ಮ ಮನೆಯ ಮುಂದೆ ನಿಲ್ಲಿಸಿರುವ ನನ್ನ ಸ್ಪ್ಲೇಂಡರ್ ಪ್ಲಸ್ ಹೀರೋ ಮೋಟಾರ ಸೈಕಲ್‌ ಇರಲ್ಲಿಲ್ಲ. ನಂತರ ಗಾಬರಿಗೊಂಡು ನಾನು ನನ್ನ ತಂದೆ ಕೂಡಿಕೊಂಡು ನನ್ನ ಮೋಟಾರ ಸೈಕಲ್‌ ಇಲ್ಲಿಯವರಗೆ ಹುಡುಕಾಡಲಾಗಿ ಎಲ್ಲಿಯೋ ಸಿಕ್ಕಿರುವದಿಲ್ಲ ಯಾರೋ ಕಳ್ಳರು ನನ್ನ ಮೊಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ನಮ್ಮ ಮನೆಯಲ್ಲಿ ಮತ್ತು ಗೆಳೆಯರಲ್ಲಿ ವಿಚಾರಿಸಿಕೊಂಡು ಬಂದುತಡವಾಗಿಇಂದುದೂರುಕೊಡುತ್ತಿದೇನೆ.

ಸದರಿ ಮೋಟಾರ ಸೈಕಲ್ ವಿವರ ಈ ಕೆಳಗಿನಂತೆ ಇರುತ್ತದೆ.

ಮೋಟಾರ ಸೈಕಲ್ ವಿಧಃ- ಸ್ಪೇಂಡರ ಪ್ಲಸ್. ಹೀರೋಮೋಟಾರ ಸೈಕಲ್ ನಂ; ಕೆಎ-೩೨ ಇಎಫ್-೨೭೩೬

ಚಸ್ಸಿ ನಂ   ; MBLHA10AMDHL36281

ಇಂಜಿನ ನಂ HA10EJDHL60729

ಮಾಡಲ ನಂ :  ೨೦೧೩

ಬಣ್ಣ        : ಗ್ರೇ ಬ್ಲಾಕ್ ಬಣ್ಣ

ಅ.ಕಿ.        : ೩೫೦೦೦/-ರೂ

     ಈ ಮೇಲ್ಕಾಣಿಸಿದ ಮೋಟಾರ ಸೈಕಲ್ ಕಳ್ಳತನವಾಗಿದ್ದು ಮಾನ್ಯರವರು ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿಕೊಡಬೇಕೆಂದು ವಿನಂತಿ ಇರುತ್ತದೆ. ಅಂತಾ ಇತ್ಯಾಧಿಯಾಗಿ ದೂರು ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 28-11-2022 11:53 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080