ಅಭಿಪ್ರಾಯ / ಸಲಹೆಗಳು

ರಾಘವೇಂದ್ರ ನಗರ ಪೊಲೀಸ್‌ ಠಾಣೆ :- ದಿನಾಂಕಃ 25.09.2022 ರಂದು 11.30 ಎ.ಎಮ್ಕ್ಕೆ ಶ್ರೀಮಹಿಮುದಮಿಯಾ ತಂದೆ ಹಸನಪಟೇಲ ವಯಃ 58 ವರ್ಷ ಜಾಃಮುಸ್ಲಿಂ ಉಃಎಎಸ್ಐಸಾಃಸನಾ ಶಾಲೆ ಹತ್ತಿರ ಮದಿನಾ ಕಾಲೋನಿ ಕಲಬುರಗಿರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ದೂರು ಹಾಜರಪಡಿಸಿದ್ದರ ಸಾರಾಂಶವೆನೆಂದರೆ ನಾನು ಮದಿನಾ ಕಾಲೋನಿ ಕಲಬುರಗಿ ನಿವಾಸಿತನಿದ್ದು ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಮಕ್ಕಳು ಕೂಡಿಕೊಂಡು ವಾಸವಾಗಿದ್ದು ನನ್ನ ಹೆಂಡತಿಯಾದ ಶ್ರೀಮತಿ ಯಾಸ್ಮೀನ್ಬೇಗಂ ಇವರ ತಂದೆಯವರು ದಿನಾಂಕಃ 24.09.2022 ರಂದು ಕುನ್ನೂರ ಇವರು ಮೃತಪಟ್ಟಿರುವ ಪ್ರಯುಕ್ತ ನಾವೆಲ್ಲರೂ ಕೂಡಿಕೊಂಡು ನಮ್ಮ ಮನೆಗೆ ಸರಿಯಾಗಿ ಕೀಲಿ ಹಾಕಿಕೊಂಡು ಕುನ್ನೂರ ಗ್ರಾಮಕ್ಕೆ ಹೋಗಿರುತ್ತೇವೆ. ನಂತರದಿನಾಂಕಃ 25.09.2022 ರಂದುಬೆಳಿಗ್ಗೆ 10.00  ಗಂಟೆಯ ಸುಮಾರಿಗೆ ಕುನ್ನೂರು ಗ್ರಾಮದಿಂದ ನಮ್ಮ ಮನೆಗೆ ಬಂದು ನೋಡಿದ್ದಾಗ ನಮ್ಮ ಮನೆಯ ಬಾಗಿಲು ಖುಲ್ಲಾ ಇರುವದನ್ನು ನೋಡಿ ಗಾಬರಿಗೊಂಡು ಮನೆಯೋಳಗೆ ಹೋಗಿ ನೋಡಿದ್ದಾಗ ನಮ್ಮ ಮನೆಯ ಬಾಗಿಲಕ್ಕೆ ಹಾಕಿರುವ ಕೀಲಿ ಮುರಿದ್ದು ಕೆಳಗಡೆ ಬಿದಿದ್ದು ಒಳಗಡೆ ಹೋಗಿ ನೋಡಿದ್ದಾಗ ನಮ್ಮ ಮನೆ ಅಲಮಾ ರ್ಒಡೆದಿರುವದನ್ನು ನೋಡಿ ಗಾಬರಿಗೊಂಡು ನೋಡಿದ್ದಾಗ ಅಲಮಾರಿಯಲ್ಲಿ ಇಟ್ಟಿರುವ 1) ಒಂದು ತೋಲೆಯ ಎರಡು ಕಿವಿಯೋಲೆ ಅಃಕಿಃ 48,000/-,  2) 5 ಗ್ರಾಂನ ಎರಡು ಬಂಗಾರದ ಉಂಗೂರುಗಳು ಅಃಕಿಃ 48,000/- ಹೀಗೆ ಎರಡು ತೊಲೆ ಬಂಗಾರದ ಆಭರಣಗಳು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ದಿನಾಂಕಃ24.09.2022 ರಂದು ರಾತ್ರಿ ವೇಳೆಯಲ್ಲಿ ನಾನು ನಮ್ಮ ಮನೆ ಕೀಲಿಕೊಂಡಿ ಹಾಕಿ ನಮ್ಮ ಸಂಬಂಧಿಕರ ಮನೆಗೆ ಹೋದಾಗ ಯಾರೋ ಕಳ್ಳರು ನಮ್ಮ ಮನೆಯೋಳಗೆ ಅತಿಕ್ರಮ ಪ್ರವೇಶ ಮಾಡಿ ಮನೆಯ ಬಾಗಿಲ ಕೀಲಿಕೊಂಡಿ ಮುರಿದು ಮನೆಯಲ್ಲಿಟ್ಟಿರುವ  96000/- ರೂ ಬೆಲೆಬಾಳುವ ಬಂಗಾರ ಮತ್ತು ಬೆಳ್ಳಿ ಆಭರಣಗಳು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನಮ್ಮ ಮನೆಯಲ್ಲಿ ನಮ್ಮ ಕುಟುಂಬದೊಂದಿಗೆ ವಿಚಾರಿಸಿಕೊಂಡು ಬಂದು ಇಂದು ತಡವಾಗಿ ದೂರು ಕೊಡುತ್ತಿದ್ದೆನೆ. ಕಾರಣ ನಮ್ಮ ಮನೆಯ ಬಾಗಿಲು ಕೀಲಿ ಮುರಿದು ಮನೆಯಲ್ಲಿಟ್ಟಿರುವ ಬಂಗಾರದ ಆಭರಣಗಳು ಪತ್ತೆ ಹಚ್ಚಿ ನಮ್ಮ ಮನೆ ಕಳ್ಳತನ ಮಾಡಿದವರ ವಿರುದ್ಧ ಕಾನೂನು ಕ್ರಮ ಜರಗಿಸಲು ವಿನಂತಿ. ಅಂತಾ ಇತ್ಯಾಧಿಯಾಗಿ ದೂರು ನೀಡಿದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 13-10-2022 11:53 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080