ಅಭಿಪ್ರಾಯ / ಸಲಹೆಗಳು

ರೋಜಾ ಪೊಲೀಸ್‌ ಠಾಣೆ :- ದಿನಾಂಕ: 17/08/22 ರಂದು ಸಾಯಂಕಾಲ 6.00 ಗಂಟೆಗೆ ಅವಾಚ್ಯಶಬ್ದಗಳಿಂದ ಫಿರ್ಯಾದಿದಾರರಿಗೆ ಬೈದು, ಕೈಯಿಂದ ಕಲ್ಲಿನಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ಖಾಜಾಪಾಶಾ , ಆಸೀಪ , ದಾವೂದ ಇವರ ಮೇಲೆ ಕಾನೂನು ಕ್ರಮ ಜರುಗಿಸ -ಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಫರಹತಾಬಾದ ಪೊಲೀಸ ಠಾಣೆ :- ದಿನಾಂಕ: 25-08-2022  ರಂದು ೫.೩೦ ಪಿಎಮ್ ಕ್ಕೆ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಶ್ರೀ ಬಿ.ಎಂ.ಕೊಟ್ರೇಶ್ ರವರು ನೀಡಿದ ಗಣಕೀಕೃತ ದೂರನ್ನು ಅವರ ಸಿಬ್ಬಂದಿಯಾದ ಶ್ರೀ ವಿಜಯಕುಮಾರ ಕುದರೆ ವಾರ್ಡರ್ ರವರು ತಂದು ಠಾಣೆಗೆ ಹಾಜರಪಡಿಸಿದರ ದೂರಿನ ಸಾರಾಂಶವೇನೆಂದರೆ, ದಿನಾಂಕ: ೨೫-೦೮-೨೦೨೨ ರಂದು ಸಮಯ ಬೆಳಿಗ್ಗೆ ೬-೩೦ ಗಂಟೆಯಿಂದ ಮಧ್ಯಾಹ ೧-೦೦ ಗಂಟೆಯ ವರೆಗೆ ಕಾರಾಗೃಹದ ಮುಖ್ಯ ಒಳ ಗೋಡೆ ಸಂಖ್ಯೆ-೩ ರ ಪಹರೆಯ ಕರ್ತವ್ಯಕ್ಕೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಅದರಂತೆ ಈ ಸಂಸ್ಥೆಯ ಸಿಬ್ಬಂದಿಗಳಾದ ಕುಮಾರಿ ರುದ್ರವ್ವ ಎಂ. ಒಂಭತ್ತ ರೊಟ್ಟಿ, ವಾರ್ಡರ್ ಮತ್ತು ಹಗಲು ಸಾಮಾನ್ಯ ಉಸ್ತುವಾರಿಯಾಗಿ ಶ್ರೀ ದಿಲೀಪಕುಮಾರ ಹಂಗರಗಿ, ಹೆಡ್ ವಾರ್ಡರ್ ಇವರಿಗೆ ಹಂಚಿಕೆ ಮಾಡಿರುವ ಪಹರೆಯ ಸ್ಥಳದಲ್ಲಿ ಸಮೀಪವಿರುವ ಬ್ಯಾರಕ್ ಸಂಖ್ಯೆ ೧೪ ಮತ್ತು ೧೫ ರ ಬ್ಯಾರಾಕಿನ ಹೊರ ಭಾಗದ ಮಧ್ಯದ ವರೆಗಿನ ಸ್ಥಳ ಪರಿಶೀಲನೆ, ಭದ್ರತೆಯನ್ನು ನೋಡಿಕೊಳ್ಳುವುದು ಇವರ ಆದ್ಯ ಕರ್ತವ್ಯವಾಗಿರುತ್ತದೆ.      ಅದರಂತೆ ದಿನಾಂಕ: ೨೫-೦೮-೨೦೨೨ ರಂದು ಬೆಳಿಗ್ಗೆ ಸಮಯ ೬-೪೫ ಗಂಟೆಗೆ ಬ್ಯಾರಕ್ ಸಂಖ್ಯೆ: ೧೪ ಮತ್ತು ೧೫ ರ ಮಧ್ಯಭಾಗದಲ್ಲಿ ಕರ್ತವ್ಯ ನಿರತ ಪಹರೆ ಸಿಬ್ಬಂದಿಯಾದ ಕುಮಾರಿ ರುದ್ರವ್ವ ಎಂ. ಒಂಭತ್ತ ರೊಟ್ಟಿ, ವಾರ್ಡರ್ ಚಾರ್ಜ್ ಪಡೆದುಕೊಳ್ಳುವ ಮುನ್ನ ಪರಿಶೀಲಿಸುವಾಗ ಪ್ಲಾಸ್ಟಿಕ್ ಸುತ್ತಿರುವ ೦೨ ಸಂಖ್ಯೆ ಬಾಲ್ ಕವರ್‌ಗಳು ಕಂಡು ಬಂದಿದ್ದು, ಅವುಗಳನ್ನು ಕಾರಾಗೃಹದ ಸಾಮಾನ್ಯ ಉಸ್ತುವಾರಿಯಾದ  ಶ್ರೀ ದಿಲೀಪಕುಮಾರ ಹಂಗರಗಿ, ಹೆಡ್ ವಾರ್ಡರ್ ಇವರ ವಶಕ್ಕೆ ನೀಡಿರುತ್ತಾರೆ. ಸದರಿ ಸಾಮಾನ್ಯ ಉಸ್ತುವಾರಿ ಸಿಬ್ಬಂದಿಯವರು ಬೆಳಿಗ್ಗೆ ಸಮಯ ೬-೫೦ ಗಂಟೆಗೆ ಕಾರಾಗೃಹ ಬಂದಿಗಳ ಬೀಗ ಮುದ್ರೆಯ ತೆರೆಯುವ ಸಮಯದಲ್ಲಿ ಕಾರ್ಯನಿರ್ವಹಕ ಜೈಲರ್ ರವರಿಗೆ ಸದರಿ ವಸ್ತುಗಳನ್ನು ಒಪ್ಪಿಸಿರುತ್ತಾರೆ. ದಿನಾಂಕ: ೨೫-೦೮-೨೦೨೨ ರಂದು ಕಾರಾಗೃಹದ ಮುಖ್ಯ ಕಾಂಪೌಂಡ್ ಗೋಡೆಯ ಹೊರಗೆ ಕೆ.ಎಸ್.ಐ.ಎಸ್.ಎಫ್ ಸಿಬ್ಬಂದಿಗಳನ್ನು ಹಗಲು ಮತ್ತು ರಾತ್ರಿ ಪಹರೆಯ ಕರ್ತವ್ಯಕ್ಕೆ ನೇಮಿಸಲಾಗಿದ್ದರೂ ಸಹ ಕಾರಾಗೃಹದ ಮುಖ್ಯ ಕಾಂಪೌಂಡ್ ಗೋಡೆಯಿಂದ ೨ ಸಂಖ್ಯೆಯ ಪ್ಲಾಸ್ಟಿಕ್ ಸುತ್ತಿದ ಕವರ್ ಎಸೆದಿದ್ದು, ಅವುಗಳನ್ನು ಪರಿಶೀಲಿಸಿದಾಗ ಅದರಲ್ಲಿ ೦೩ ಸಂಖ್ಯೆಯ ಮೊಬೈಲ್ ಫೋನ್‌ಗಳು ಇರುತ್ತವೆ. ಮೊಬೈಲ್ ಫೋನ್‌ಗಳು ಯಾರ ಹೆಸರಿನಲ್ಲಿದೆ? ಜೈಲಿನೊಳಗೆ ಯಾರಿಗೆ ಸರಬರಾಜು ಮಾಡಲು ಪ್ರಯತ್ನಿಸಲಾಗಿದೆಂಬುದರ ಬಗ್ಗೆ ಪತ್ತೆ ಹಚ್ಚಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ: 25-08-2022  ರಂದು ಬೆಳಿಗ್ಗೆ ೧೧:೪೫ ಎಎಮ್ ಕ್ಕೆ ಫಿರ್ಯಾದಿದಾರರಾದ ಲಕ್ಷ್ಮಿನಾರಾಯಣ ತಂದೆ ಬಾಬುರಾವ್ ಖರೆಟಮಲ್ಲ್ ವಯ:೪೦ವರ್ಷ ಜಾ:ಡೋರ ಉ:ಖಾಸಗಿ ಕೆಲಸ ಸಾ// EWS-45 1st ಪೇಸ್ ಬ್ರಹ್ಮಕುಮಾರಿ ಆರ್ಶಮದ ಹತ್ತಿರ ಆದರ್ಶ ನಗರ ಕಲಬುರಗಿ ನಗರ. ಈ ಮೂಲಕ ವಿನಂತಿ ದೂರು ಅರ್ಜಿ ಸಲ್ಲಿಸುವುದೆನೆಂದರೆ, ನನ್ನದೊಂದು ಸ್ವಂತ ಹಿರೋ ಸ್ಪ್ಲೇಂಡರ್ ಪ್ಲಸ್ ಮೋಟರ್ ಸೈಕಲ್ ನಂ KA-32-EM-0183 ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ: ೧೬/೦೭/೨೦೨೨ ರಂದು ಬೆಳಿಗ್ಗೆ ೦೯:೦೦ ಎ.ಎಮ್ ಗಂಟೆಗೆ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯ ವಾಹನ ನಿಲ್ಲಿಸುವ ಸ್ಥಳದಲ್ಲಿ ನಿಲ್ಲಿಸಿ ನನಗೆ ಆರಾಮವಿಲ್ಲದ ಕಾರಣ ವೈದ್ಯರ ಹತ್ತಿರ ತೋರಿಸಲು ಜಿಮ್ಸ್ ಆಸ್ಪತ್ರೆಯ ಒಳಗಡೆ ಹೋಗಿ ವೈದ್ಯರ ಹತ್ತಿರ ತೋರಿಸಿಕೊಂಡು ಮರಳಿ ಅದೆ ದಿನ ಬೆಳಿಗ್ಗೆ ೧೦:೩೦ ಎಎಮ್ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ ಠಾಣೆ :-  ದಿನಾಂಕ:25/08/2022 ರಂದು ಮದ್ಯಾಹ್ನ 2:15 ಗಂಟೆಗೆ ಫಿರ್ಯಾದಿ ಶ್ರೀ ಭಾರತಿ ಗಂಡ ಸೂರ್ಯಾಕಾಂತ ಪಾಟೀಲ, ವ:48 ವರ್ಷ, ಜಾತಿ:ಲಿಂಗಾಯತ, ಉ:ಆಹಾರ ನಿರೀಕ್ಷಕರು, ಸಹಾಯಕ ನಿರ್ದೇಶಕರ ರವರ ಕಛೇರಿ, ಅನೌಪಚಾರಿಕ ಪಡಿತರ ಪ್ರದೇಶ, ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ಇಂದು ದಿನಾಂಕ:25-08-2022 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾನು ಕಛೇರಿಯಲ್ಲಿದ್ದಾಗ ಕಲಬುರಗಿ ನಗರದ ಪಿ.&ಟಿ ಕ್ವಾರ್ಟಸ್ ಹತ್ತಿರ ಒಂದು ಟಿನ್ ಶೆಡನಲ್ಲಿ ಅಕ್ರಮವಾಗಿ ಗ್ಯಾಸ ಸಿಲೆಂಡರಗಳನ್ನು ಸಂಗ್ರಹಿಸಿಕೊಂಡು ಯಾವುದೇ ಲೈಸೆನ್ಸ್ ಪರವಾನಿಗೆ ಇಲ್ಲದೇ ಅಡುಗೆಗೆ ಉಪಯೋಗಿಸುವ ಸಿಲೆಂಡರಗಳನ್ನು ಅಟೋರಿಕ್ಷಾಗಳಿಗೆ ತುಂಬುತ್ತಿದ್ದಾರೆ ಅಂತಾ ಬಂದ ಬಾತ್ಮಿ ಮೇರೆಗೆ ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ದಾಳಿ ಮಾಡುವ ಕುರಿತು ನಾನು ಶ್ರೀ ಶಿವಪ್ಪ ಪಿ.ಎಸ್.ಐ., ಸಿ.ಸಿ.ಬಿ. ಘಟಕ, ಮತ್ತು ಸಿ.ಸಿ.ಬಿ. ಘಟಕ ಸಿಬ್ಬಂದಿಯವರಾದ 1) ಕೆಶುರಾಯ ಹೆಚ್.ಸಿ-223, 2) ಸುನೀಲಕುಮಾರ ಹೆಚ್.ಸಿ-167, 3) ಅಶೋಕ ಸಿಪಿಸಿ-647, 4) ನಾಗರಾಜ ಸಿಪಿಸಿ-1257, ರವರಿಗೆ ಪಿ&ಟಿ ಕ್ವಾರ್ಟಸ್ ಅಂಡರ ಬ್ರಿಡ್ಜ ಹತ್ತಿರ ಬರಮಾಡಿಕೊಂಡು ಅವರಿಗೆ ಮಾಹಿತಿ ತಿಳಿಸಿ ನಂತರ ಇಬ್ಬರೂ ಪಂಚರಾದ 1) ಶ್ರೀ  ಶಿವರಾಜ ತಂದೆ ಗುರುರಾಜ ಪೂಜಾರಿ, ವ:32 ವರ್ಷ, ಜಾತಿ:ಕುರುಬ, ಉ:ಖಾಸಗಿ ಕೆಲಸ, ಸಾ:ಬಿದ್ದಾಪೂರ ಕಾಲೋನಿ ಕಲಬುರಗಿ 2) ಶ್ರೀ ದಿಲೀಪ ತಂದೆ ಉಮಲು ಪವಾರ, ವ:28 ವರ್ಷ, ಜಾತಿ:ಲಂಬಾಣಿ, ಉ:ಖಾಸಗಿ ಕೆಲಸ, ಸಾ:ಪಾಣೇಗಾಂವ, ತಾ:ಜಿ: ಕಲಬುರಗಿ ಇವರನ್ನು ಕೂಡಾ ಪಿ&ಟಿ ಕ್ವಾರ್ಟಸ್ ಅಂಡರ ಬ್ರಿಡ್ಜ ಹತ್ತಿರ ಬೆಳಿಗ್ಗೆ 10-30  ಗಂಟೆಗೆ ಬರಮಾಡಿಕೊಂಡು ದಾಳಿ ಕಾಲಕ್ಕೆ ಹಾಜರಿದ್ದು ಪಂಚರಾಗುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ.         ನಂತರ ನಾನು, ಮತ್ತು ಶ್ರೀ ಶಿವಪ್ಪ ಪಿ.ಎಸ್.ಐ., ಸಿ.ಸಿ.ಬಿ. ಘಟಕ, ಮತ್ತು ಸಿ.ಸಿ.ಬಿ. ಘಟಕ ಸಿಬ್ಬಂದಿಯವರಾದ 1) ಕೆಶುರಾಯ ಹೆಚ್.ಸಿ-223, 2) ಸುನೀಲಕುಮಾರ ಹೆಚ್.ಸಿ-167, 3) ಅಶೋಕ ಸಿಪಿಸಿ-647, 4) ನಾಗರಾಜ ಸಿಪಿಸಿ-1257 ರವರೊಂದಿಗೆ ತಮ್ಮ ತಮ್ಮ ಮೋಟಾರಸೈಕಲಗಳ ಮೇಲೆ ಬೆಳಿಗ್ಗೆ 10-45 ಗಂಟೆಗೆ ಪಿ.&ಟಿ ಕ್ವಾರ್ಟಸ್ ಅಂಡರ ಬ್ರಿಡ್ಜದಿಂದ ಹೊರಟಿದ್ದು, ಬಾತ್ಮಿ ಬಂದ ಸ್ಥಳವಾದ  ಪಿ.&ಟಿ ಕ್ವಾರ್ಟಸ್ ಕಂಪೌಂಡ  ಹತ್ತಿರ ಇರುವ ಒಂದು ಟಿನ್ ಶೆಡ ಹತ್ತಿರ ಬೆಳಿಗ್ಗೆ 10-55 ಗಂಟೆಗೆ ತಲುಪಿ ಅಲ್ಲಿಯೇ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಸದರಿ ಟಿನ್ ಶೆಡನಲ್ಲಿ ಒಬ್ಬ ವ್ಯಕ್ತಿ ಗ್ಯಾಸ ಸಿಲೆಂಡರಗಳಿಂದ ಅಟೋರೀಕ್ಷಾಗಳಿಗೆ ತುಂಬುತ್ತಿದ್ದು,ನೋಡಿಖಚಿತಪಡಿಸಿಕೊಂಡು ಬೆಳಿಗ್ಗೆ 11-00 ಗಂಟೆಗೆ ಪಂಚರ ಸಮಕ್ಷಮ ನಾನು ಮತ್ತು ಸಿ.ಸಿ.ಬಿ. ಘಟಕದ ಪಿ.ಎಸ್.ಐ ಹಾಗೂ ಸಿಬ್ಬಂದಿಯವರ ಸಹಾಯದಿಂದ ಎಲ್ಲರೂ ಕೂಡಿ ಒಮ್ಮಲ್ಲೇ ದಾಳಿ ಮಾಡಿ ಸದರಿ ವ್ಯಕ್ತಿಗೆ ಹಿಡಿದಿದ್ದು,  ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅದನಾನ ತಂದೆ ಶಬ್ಬೀರ ಪಟೇಲ, ವ:20 ವರ್ಷ, ಜಾತಿ:ಮುಸ್ಲಿಂ, ಉ:ವೆಲ್ಡಿಂಗ ಕೆಲಸ, ಸಾ:ರಹೆಮತ ನಗರ ಪಿ.&ಟಿ. ಕಾಲನಿ ಎ1 ಬೇಕರಿ ಹತ್ತಿರ, ಕಲಬುರಗಿ ಅಂತಾ ತಿಳಿಸಿದನು.     ಸದರಿಯವನ ಹತ್ತಿರ ಯಾವುದಾದರೂ ಲೈಸೆನ್ಸ್ ಪರವಾನಿಗೆ ವಗೈರೆ ತೋರಿಸುವಂತೆ ಕೇಳಿದಾಗ ತಮ್ಮ ಹತ್ತಿರ ಯಾವುದೇ ಲೈಸೆನ್ಸ್ ಪರವಾನಿಗೆ ಇರುವುದಿಲ್ಲ ಅಂತಾ ತಿಳಿಸಿದನು.  ಅವನ ಹತ್ತಿರ ಇದ್ದ ಗ್ಯಾಸ ಸಿಲೆಂಡರಗಳನ್ನು ಪರಿಶೀಲಿಸಲಾಗಿ 1) 03 ಹೆಚ್.ಪಿ. ಕಂಪನಿಯ ತುಂಬಿದ ಗ್ಯಾಸ ಸಿಲೆಂಡರ್ ಗಳು  ದೊರೆತಿದ್ದು, ಅದರ ಅ.ಕಿ. ಒಂದಕ್ಕೆ ರೂ.2000/- ರಂತೆ ಒಟ್ಟು 03 ಸಿಲೆಂಡರಗಳಿಗೆ ರೂ.6000/- ಇದ್ದು, 2) 02 ಹೆಚ್.ಪಿ. ಕಂಪನಿಯ ಖಾಲಿ ಸಿಲೆಂಡರ್ಗಳು, 01 ಇಂಡೆನ್ ಕಂಪನಿಯ ಖಾಲಿ ಸಿಲೆಂಡರ ದೊರೆತಿದ್ದು, ಅದರ ಅ.ಕಿ. ಒಂದಕ್ಕೆ ರೂ.1000/- ರಂತೆ ಒಟ್ಟು 03 ಸಿಲೆಂಡರಗಳಿಗೆ ರೂ.3000/- ಇದ್ದು, 3) 1 ತೂಕದ ಯಂತ್ರದ ಮಷೀನ ದೊರೆದಿದ್ದು, ಅದರ ಅ.ಕಿ. ರೂ.3,000/-, 4) ½ ಹೆಚ್.ಪಿ. ಮೋಟಾರ ಅದರ ಅ.ಕಿ. ರೂ.2,000/- ಹೀಗೆ ಒಟ್ಟು ಅ.ಕಿ.ರೂ14,000/- ಕಿಮ್ಮತ್ತಿನ ಮುದ್ದೇಮಾಲುಗಳನ್ನು ದೊರೆತಿದ್ದು, ಪಂಚರ ಸಮಕ್ಷಮ ಜಪ್ತು ಮಾಡಿಕೊಂಡಿದ್ದು ಇರುತ್ತದೆ. ಸ್ಥಳದಲ್ಲಿಯೇ ಕುಳಿತು ಜಪ್ತಿ ಪಂಚನಾಮೆಯನ್ನು ಬೆಳಿಗ್ಗೆ11-00 ಗಂಟೆಯಿಂದ ಮಧ್ಯಾಹ್ನ 12-00 ಗಂಟೆಯವರೆಗೆ ಲ್ಯಾಪಟಾಪದಲ್ಲಿ ಟೈಪ ಮಾಡಿದ್ದು ಇರತ್ತದೆ. ನಂತರ ಆರೋಪಿ, ಜಪ್ತಿ ಮಾಡಿದ ಮುದ್ದೇಮಾಲಿನೊಂದಿಗೆ ಸ್ಟೇಷನ್ ಬಜಾರ ಪೊಲೀಸ್ ಠಾಣೆಗೆ ಬಂದು ಜಪ್ತಿ ಮುದ್ದೇಮಾಲುಗಳನ್ನು ಮತ್ತು ಆರೋಪಿಯನ್ನು ತಮ್ಮ ತಾಬೆಗೆ ಒಪ್ಪಿಸಿದ್ದು ಇರುತ್ತದೆ.  ನಂತರ ನನ್ನ ವರದಿಯನ್ನು ತಯಾರಿಸಿ ಸದರಿ ಆರೋಪಿತನ ವಿರುದ್ದ ಅಗತ್ಯ ವಸ್ತುಗಳ ಕಾಯ್ದೆ 1955, 3 & 7 ಆಕ್ಟ್ ಮತ್ತು ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ ಆರ್ಡರ 2000, 6 & 7 ಆಕ್ಟ್ ಅಡಿಯಲ್ಲಿ ಕಾನೂನು ಕ್ರಮ ಜರುಗಿಸುವಂತೆ ಕೋರಲಾಗಿದೆ ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.136/2022 ಕಲಂ  3 & 7 ಅಗತ್ಯ ವಸ್ತುಗಳ ಕಾಯ್ದೆ (ಇ.ಸಿ.ಎಕ್ಟ್-1995) ಮತ್ತು 6 & 7 ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ ಆರ್ಡರ 2000 ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.ಇಂದು ದಿನಾಂಕ:25/08/2022 ರಂದು ಮದ್ಯಾಹ್ನ 2:15 ಗಂಟೆಗೆ ಫಿರ್ಯಾದಿ ಶ್ರೀ ಭಾರತಿ ಗಂಡ ಸೂರ್ಯಾಕಾಂತ ಪಾಟೀಲ, ವ:48 ವರ್ಷ, ಜಾತಿ:ಲಿಂಗಾಯತ, ಉ:ಆಹಾರ ನಿರೀಕ್ಷಕರು, ಸಹಾಯಕ ನಿರ್ದೇಶಕರ ರವರ ಕಛೇರಿ, ಅನೌಪಚಾರಿಕ ಪಡಿತರ ಪ್ರದೇಶ, ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ಇಂದು ದಿನಾಂಕ:25-08-2022 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾನು ಕಛೇರಿಯಲ್ಲಿದ್ದಾಗ ಕಲಬುರಗಿ ನಗರದ ಪಿ.&ಟಿ ಕ್ವಾರ್ಟಸ್ ಹತ್ತಿರ ಒಂದು ಟಿನ್ ಶೆಡನಲ್ಲಿ ಅಕ್ರಮವಾಗಿ ಗ್ಯಾಸ ಸಿಲೆಂಡರಗಳನ್ನು ಸಂಗ್ರಹಿಸಿಕೊಂಡು ಯಾವುದೇ ಲೈಸೆನ್ಸ್ ಪರವಾನಿಗೆ ಇಲ್ಲದೇ ಅಡುಗೆಗೆ ಉಪಯೋಗಿಸುವ ಸಿಲೆಂಡರಗಳನ್ನು ಅಟೋರಿಕ್ಷಾಗಳಿಗೆ ತುಂಬುತ್ತಿದ್ದಾರೆ ಅಂತಾ ಬಂದ ಬಾತ್ಮಿ ಮೇರೆಗೆ ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ದಾಳಿ ಮಾಡುವ ಕುರಿತು ನಾನು ಶ್ರೀ ಶಿವಪ್ಪ ಪಿ.ಎಸ್.ಐ., ಸಿ.ಸಿ.ಬಿ. ಘಟಕ, ಮತ್ತು ಸಿ.ಸಿ.ಬಿ. ಘಟಕ ಸಿಬ್ಬಂದಿಯವರಾದ 1) ಕೆಶುರಾಯ ಹೆಚ್.ಸಿ-223, 2) ಸುನೀಲಕುಮಾರ ಹೆಚ್.ಸಿ-167, 3) ಅಶೋಕ ಸಿಪಿಸಿ-647, 4) ನಾಗರಾಜ ಸಿಪಿಸಿ-1257, ರವರಿಗೆ ಪಿ&ಟಿ ಕ್ವಾರ್ಟಸ್ ಅಂಡರ ಬ್ರಿಡ್ಜ ಹತ್ತಿರ ಬರಮಾಡಿಕೊಂಡು ಅವರಿಗೆ ಮಾಹಿತಿ ತಿಳಿಸಿ ನಂತರ ಇಬ್ಬರೂ ಪಂಚರಾದ 1) ಶ್ರೀ  ಶಿವರಾಜ ತಂದೆ ಗುರುರಾಜ ಪೂಜಾರಿ, ವ:32 ವರ್ಷ, ಜಾತಿ:ಕುರುಬ, ಉ:ಖಾಸಗಿ ಕೆಲಸ, ಸಾ:ಬಿದ್ದಾಪೂರ ಕಾಲೋನಿ ಕಲಬುರಗಿ 2) ಶ್ರೀ ದಿಲೀಪ ತಂದೆ ಉಮಲು ಪವಾರ, ವ:28 ವರ್ಷ, ಜಾತಿ:ಲಂಬಾಣಿ, ಉ:ಖಾಸಗಿ ಕೆಲಸ, ಸಾ:ಪಾಣೇಗಾಂವ, ತಾ:ಜಿ: ಕಲಬುರಗಿ ಇವರನ್ನು ಕೂಡಾ ಪಿ&ಟಿ ಕ್ವಾರ್ಟಸ್ ಅಂಡರ ಬ್ರಿಡ್ಜ ಹತ್ತಿರ ಬೆಳಿಗ್ಗೆ 10-30  ಗಂಟೆಗೆ ಬರಮಾಡಿಕೊಂಡು ದಾಳಿ ಕಾಲಕ್ಕೆ ಹಾಜರಿದ್ದು ಪಂಚರಾಗುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ.         ನಂತರ ನಾನು, ಮತ್ತು ಶ್ರೀ ಶಿವಪ್ಪ ಪಿ.ಎಸ್.ಐ., ಸಿ.ಸಿ.ಬಿ. ಘಟಕ, ಮತ್ತು ಸಿ.ಸಿ.ಬಿ. ಘಟಕ ಸಿಬ್ಬಂದಿಯವರಾದ 1) ಕೆಶುರಾಯ ಹೆಚ್.ಸಿ-223, 2) ಸುನೀಲಕುಮಾರ ಹೆಚ್.ಸಿ-167, 3) ಅಶೋಕ ಸಿಪಿಸಿ-647, 4) ನಾಗರಾಜ ಸಿಪಿಸಿ-1257 ರವರೊಂದಿಗೆ ತಮ್ಮ ತಮ್ಮ ಮೋಟಾರಸೈಕಲಗಳ ಮೇಲೆ ಬೆಳಿಗ್ಗೆ 10-45 ಗಂಟೆಗೆ ಪಿ.&ಟಿ ಕ್ವಾರ್ಟಸ್ ಅಂಡರ ಬ್ರಿಡ್ಜದಿಂದ ಹೊರಟಿದ್ದು, ಬಾತ್ಮಿ ಬಂದ ಸ್ಥಳವಾದ  ಪಿ.&ಟಿ ಕ್ವಾರ್ಟಸ್ ಕಂಪೌಂಡ  ಹತ್ತಿರ ಇರುವ ಒಂದು ಟಿನ್ ಶೆಡ ಹತ್ತಿರ ಬೆಳಿಗ್ಗೆ 10-55 ಗಂಟೆಗೆ ತಲುಪಿ ಅಲ್ಲಿಯೇ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಸದರಿ ಟಿನ್ ಶೆಡನಲ್ಲಿ ಒಬ್ಬ ವ್ಯಕ್ತಿ ಗ್ಯಾಸ ಸಿಲೆಂಡರಗಳಿಂದ ಅಟೋರೀಕ್ಷಾಗಳಿಗೆ ತುಂಬುತ್ತಿದ್ದು,ನೋಡಿಖಚಿತಪಡಿಸಿಕೊಂಡು ಬೆಳಿಗ್ಗೆ 11-00 ಗಂಟೆಗೆ ಪಂಚರ ಸಮಕ್ಷಮ ನಾನು ಮತ್ತು ಸಿ.ಸಿ.ಬಿ. ಘಟಕದ ಪಿ.ಎಸ್.ಐ ಹಾಗೂ ಸಿಬ್ಬಂದಿಯವರ ಸಹಾಯದಿಂದ ಎಲ್ಲರೂ ಕೂಡಿ ಒಮ್ಮಲ್ಲೇ ದಾಳಿ ಮಾಡಿ ಸದರಿ ವ್ಯಕ್ತಿಗೆ ಹಿಡಿದಿದ್ದು,  ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅದನಾನ ತಂದೆ ಶಬ್ಬೀರ ಪಟೇಲ, ವ:20 ವರ್ಷ, ಜಾತಿ:ಮುಸ್ಲಿಂ, ಉ:ವೆಲ್ಡಿಂಗ ಕೆಲಸ, ಸಾ:ರಹೆಮತ ನಗರ ಪಿ.&ಟಿ. ಕಾಲನಿ ಎ1 ಬೇಕರಿ ಹತ್ತಿರ, ಕಲಬುರಗಿ ಅಂತಾ ತಿಳಿಸಿದನು.     ಸದರಿಯವನ ಹತ್ತಿರ ಯಾವುದಾದರೂ ಲೈಸೆನ್ಸ್ ಪರವಾನಿಗೆ ವಗೈರೆ ತೋರಿಸುವಂತೆ ಕೇಳಿದಾಗ ತಮ್ಮ ಹತ್ತಿರ ಯಾವುದೇ ಲೈಸೆನ್ಸ್ ಪರವಾನಿಗೆ ಇರುವುದಿಲ್ಲ ಅಂತಾ ತಿಳಿಸಿದನು.  ಅವನ ಹತ್ತಿರ ಇದ್ದ ಗ್ಯಾಸ ಸಿಲೆಂಡರಗಳನ್ನು ಪರಿಶೀಲಿಸಲಾಗಿ 1) 03 ಹೆಚ್.ಪಿ. ಕಂಪನಿಯ ತುಂಬಿದ ಗ್ಯಾಸ ಸಿಲೆಂಡರ್ ಗಳು  ದೊರೆತಿದ್ದು, ಅದರ ಅ.ಕಿ. ಒಂದಕ್ಕೆ ರೂ.2000/- ರಂತೆ ಒಟ್ಟು 03 ಸಿಲೆಂಡರಗಳಿಗೆ ರೂ.6000/- ಇದ್ದು, 2) 02 ಹೆಚ್.ಪಿ. ಕಂಪನಿಯ ಖಾಲಿ ಸಿಲೆಂಡರ್ಗಳು, 01 ಇಂಡೆನ್ ಕಂಪನಿಯ ಖಾಲಿ ಸಿಲೆಂಡರ ದೊರೆತಿದ್ದು, ಅದರ ಅ.ಕಿ. ಒಂದಕ್ಕೆ ರೂ.1000/- ರಂತೆ ಒಟ್ಟು 03 ಸಿಲೆಂಡರಗಳಿಗೆ ರೂ.3000/- ಇದ್ದು, 3) 1 ತೂಕದ ಯಂತ್ರದ ಮಷೀನ ದೊರೆದಿದ್ದು, ಅದರ ಅ.ಕಿ. ರೂ.3,000/-, 4) ½ ಹೆಚ್.ಪಿ. ಮೋಟಾರ ಅದರ ಅ.ಕಿ. ರೂ.2,000/- ಹೀಗೆ ಒಟ್ಟು ಅ.ಕಿ.ರೂ14,000/- ಕಿಮ್ಮತ್ತಿನ ಮುದ್ದೇಮಾಲುಗಳನ್ನು ದೊರೆತಿದ್ದು, ಪಂಚರ ಸಮಕ್ಷಮ ಜಪ್ತು ಮಾಡಿಕೊಂಡಿದ್ದು ಇರುತ್ತದೆ. ಸ್ಥಳದಲ್ಲಿಯೇ ಕುಳಿತು ಜಪ್ತಿ ಪಂಚನಾಮೆಯನ್ನು ಬೆಳಿಗ್ಗೆ11-00 ಗಂಟೆಯಿಂದ ಮಧ್ಯಾಹ್ನ 12-00 ಗಂಟೆಯವರೆಗೆ ಲ್ಯಾಪಟಾಪದಲ್ಲಿ ಟೈಪ ಮಾಡಿದ್ದು ಇರತ್ತದೆ. ನಂತರ ಆರೋಪಿ, ಜಪ್ತಿ ಮಾಡಿದ ಮುದ್ದೇಮಾಲಿನೊಂದಿಗೆ ಸ್ಟೇಷನ್ ಬಜಾರ ಪೊಲೀಸ್ ಠಾಣೆಗೆ ಬಂದು ಜಪ್ತಿ ಮುದ್ದೇಮಾಲುಗಳನ್ನು ಮತ್ತು ಆರೋಪಿಯನ್ನು ತಮ್ಮ ತಾಬೆಗೆ ಒಪ್ಪಿಸಿದ್ದು ಇರುತ್ತದೆ.  ನಂತರ ನನ್ನ ವರದಿಯನ್ನು ತಯಾರಿಸಿ ಸದರಿ ಆರೋಪಿತನ ವಿರುದ್ದ ಅಗತ್ಯ ವಸ್ತುಗಳ ಕಾಯ್ದೆ 1955, 3 & 7 ಆಕ್ಟ್ ಮತ್ತು ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ ಆರ್ಡರ 2000, 6 & 7 ಆಕ್ಟ್ ಅಡಿಯಲ್ಲಿ ಕಾನೂನು ಕ್ರಮ ಜರುಗಿಸುವಂತೆ ಕೋರಲಾಗಿದೆ ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ ಠಾಣೆ :-   ದಿನಾಂಕ:25/08/2022 ರಂದು ಮದ್ಯಾಹ್ನ 12:30 ಗಂಟೆಗೆ ಫಿರ್ಯಾದಿ ಶ್ರೀ ಮದನಿಕಾಂತ ತಂದೆ ಜೈದ್ರಥ ಶೃಂಗೇರಿ ವಯ: 39 ವರ್ಷ ಉ:ವಲಯ ಆಯುಕ್ತರು ವಲಯ ಕಛೇರಿ-01 ಕಲಬುರಗಿ ರವರು ಪೊಲೀಸ್ ಠಾಣೆಗೆ ಬಂದು ಟೈಪ ಮಾಡಿದ ಅರ್ಜಿ ಸಲ್ಲಿಸಿದ್ದರ ಸಾರಾಂಶವೇನಂದರೆ, ನಾನು ಮಹಾ ನಗರ ಪಾಲಿಕೆಯ ವಲಯ ಕಛೇರಿ 01 ರಲ್ಲಿ ಸುಮಾರು 2 ತಿಂಗಳು ಕರ್ತವ್ಯ ನಿರ್ವಹಿಸಕೊಂಡು ಬಂದಿರುತ್ತೆನೆ. ನಮ್ಮ ಕಛೇರಿಯಲ್ಲಿ ಸುಮಾರು ದಿನಗಳ ಹಿಂದೆ ಅಬ್ದುಲ್ ಫಯಿಮ್ ತಂದೆ ಮಹ್ಮದ ಹನೀಫ್ ಎನ್ನುವ ವ್ಯಕ್ತಿ ಬಡೇಪೂರ ಸರ್ವೆ ನಂ. 81/2 ರಲ್ಲಿನ ಒಂದು ನಿವೇಶನದ ಮೊಟೇಶನ್ ಸಲುವಾಗಿ ಅಗ್ರಿಮೆಂಟ್ ಫಾರ್ ಸೇಲ್ ವಿಥೌಟ್ ಪೊಜಿಶನ್ ಎಂಬ ಕ್ರಯ ಪತ್ರದೊಂದಿಗೆ ಅರ್ಜಿ ಸಲ್ಲಿಸಿದ್ದು ಇರುತ್ತದೆ. ಸದರಿ ಅರ್ಜಿಯನ್ನು ಪರಿಶೀಲನೆ ಮಾಡಿ ನೋಡಿ ಸದರಿ ದಾಖಲಾತಿಗಳ ಮೇಲೆ ವರ್ಗಾವಣೆ ಮಾಡಲು ಬರುವದಿಲ್ಲ ಅಂತ ಅವನಿಗೆ ಹಿಂಬರಹ ನೀಡಿದ್ದು ಇರುತ್ತದೆ. ಸುಮಾರು ಒಂದು ವಾರಗಳ ಹಿಂದೆ ಸದರಿಯವನು ಮೊಟೇಶನ್ ಸಲುವಾಗಿ ಕೊಟ್ಟಿರುವ ಅರ್ಜಿ  ಮತ್ತು ಹಿಂಬರಹದ ಹಾಗೂ ಇತರೆ ದಾಖಲಾತಿಗಳ ಕಡತವನ್ನು ವಿಷಯ ನಿರ್ವಾಹಕರ ಟೇಬಲ್ ಮೇಲಿಂದ ತೆಗೆದುಕೊಡು ಹೋಗಿರುತ್ತಾನೆ.     ಹೀಗಿದ್ದು ದಿನಾಂಕ:25/08/2022 ಬೆಳಗ್ಗೆ 10:30 ಗಂಟೆ ಸುಮಾರಿಗೆ ನಮ್ಮ ವಲಯ ಕಛೇರಿಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯದ ಮೇಲೆ ಇದ್ದಾಗ  ಅಬ್ದುಲ್ ಫಯಿಮ್ ಇತನು ಬಂದು ವಲಯ ಕಛೇರಿಯಲ್ಲಿ ಇರುವ ಆಸ್ತಿ ವರ್ಗಾವಣೆ ವಿಭಾಗದ ಸಿಬ್ಬಂದಿಯಾದ ಪ್ರಹ್ಲಾದ ಕುಲಕರ್ಣಿ, ಬಸವರಾಜ ವಗ್ಗೆ ಕಛೇರಿ ವ್ಯವಸ್ಥಾಪಕರು ಇವರೊಂದಿಗೆ ತಕರಾರು ಮಾಡುತ್ತಿದ್ದಾಗ ನಾನು ನನ್ನ ಆಫೀಸ್ನಿಂದ ಹೋರಗೆ ಹೋಗಿ ನೋಡಲು ಅಬ್ದುಲ್ ಫಯಿಮ್ ಎನ್ನುವ ವ್ಯಕ್ತಿ ಜೋರು ದ್ವನಿಯಿಂದ ನೀವು ಮಹಾ ನಗರ ಪಾಲಿಕೆಯ ಸಿಬ್ಬಂದಿಗಳು ಮಾದರ್ ಚೋದ್ ಹೈ, ತುಮ್ ಚೋರ್ ಹೈ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಮತ್ತು ನಮ್ಮ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ತಿಳಿಸಿ ಹೇಳಿದರೂ ಕೇಳದೆ ತನ್ನ ಮನಸ್ಸಿಗೆ ಬಂದಂತೆ ಚೀರಾಡುತ್ತಾ ಕಛೇರಿಯ ಕೆಲಸ ಕಾರ್ಯಗಳಿಗೆ ಅಡತಡೆ ಮಾಡಿರುತ್ತಾನೆ. ಕಾರಣ ನಮಗೆ ಕರ್ತವ್ಯಕ್ಕೆ ಅಡೆತಡೆ ಮಾಡಿ ಅವಾಚ್ಯವಾಗಿ ಬೈದಿರುವ ಅಬ್ದುಲ್ ಫಯಿಮ್ ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ಮಾನ್ಯರವರಲ್ಲಿ ವಿನಂತಿ ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ ಠಾಣೆ :-   ಪ್ರದೀಪ ಬಾಬು ಹೆಚ್.ಎಸ್. ಸಾ:ಶರಬಾ ಮುನಿಸಾಮಯ್ಯ ಲೇಔಟ್ ಹಳೆ ಮದ್ರಾಸ ರಸ್ತೆ ನೇರ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ ಹತ್ತಿರ ಹೊಸಕೋಟೆ. ಶ್ರೀ.ಕಾಮಾಕ್ಷಿ ಬಜಾಜ್ ಅಧಿಕೃತ ಮಾರಾಟಗಾರರು ನಂ,೭೦/೧ ಎಂ.ಬಿ ರಸ್ತೆ ಸುಲ್ತಾನ್ ತಿಪ್ಪಸಂದ್ರ ಬಾಯ್‌ಪಾಸ್ ಕೋಲಾರ ಜಿಲ್ಲೆ ಇವರು ನಮ್ಮ ಮನೆಯ ಹತ್ತಿರ ಬಂದು ಸದೈಕ್ಕೆ ನಮ್ಮ ಹತ್ತಿರ ಹಣ ಇರುವುದಿಲ್ಲ. ನಿಮ್ಮ ಹತ್ತಿರ ಇದ್ದ ಬಿಎಸ್೪ ಬಜಾಜ್ ೪೪ ದ್ವಿ ಚಕ್ರ ವಾಹನಗಳು ಕೊಡಿ ನಂತರ ನಾನು ದಿನಾಂಕ:೦೧-೦೪-೨೦೨೦ ರ ಒಳಗಾಗಿ ನಿಮ್ಮ ಹಣವನ್ನು ಕೊಡುತ್ತೇನೆ ಎಂದು ಹೇಳಿ ದಿನಾಂಕ:೦೫-೦೩-೨೦೨೦ ರಂದು ಬೆಳಿಗ್ಗೆ ೧೦-೦೦ ಗಂಟೆಯಲ್ಲಿ ಪ್ರದೀಪ ಬಾಬು ಹೆಚ್.ಎಸ್. ಸಾ:ಶರಬಾ ಮುನಿಸಾಮಯ್ಯ ಲೇಔಟ್ ಹಳೆ ಮದ್ರಾಸ ರಸ್ತೆ ನೇರ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ ಹತ್ತಿರ ಹೊಸಕೋಟೆ. ಶ್ರೀ.ಕಾಮಾಕ್ಷಿ ಬಜಾಜ್ ಅಧಿಕೃತ ಮಾರಾಟಗಾರರು ನಂ,೭೦/೧ ಎಂ.ಬಿ ರಸ್ತೆ ಸುಲ್ತಾನ್ ತಿಪ್ಪಸಂದ್ರ ಬಾಯ್‌ಪಾಸ್ ಕೋಲಾರ ಜಿಲ್ಲೆ ಮಾತುಕತೆಯ ಒಪ್ಪಂದಂತೆ ಬಿಎಸ್೪ ಬಜಾಜ್ ೪೪ ದ್ವಿ ಚಕ್ರ ವಾಹನಗಳನ್ನು ಬೆಲೆ ೨೨೭೯೫೧೧.೯೦/-ರೂ ಸದರಿ ವಾಹನಗಳ ಇನ್‌ವಾಸ್ಸ ನಂಬರ ಆಗಿ ೧೧೦೪೬೧೯೦೦೦೬೨ ಇರುತ್ತದೆ. ಸದರಿ ಒಪ್ಪಂದಂತೆ ಓಂಕಾರ ಕ್ಯಾರಿಯರ್ಸ ಮೋವರ್ಸ ಪ್ರೈವೇಟ್ಸ ಲಿಮಿಟೆಡ್ ವಾಹನದಲ್ಲಿ ಬಿಎಸ್೪ ಬಜಾಜ್ ೪೪ ದ್ವಿ ಚಕ್ರ ವಾಹನಗಳನ್ನು ತುಂಬಿ ಕ್ಯಾರಿಯರ್ಸ ಮೋವರ್ಸ ವಾಹನ ಬಾಡಿಗೆ ಹಣ ೬೭೨೦೦/-ರೂ ಹಣವನ್ನು ಪಾವತಿಸಿ ರಶೀಧ ಪಡೆದುಕೊಂಡಿರುತ್ತದೆ. ನಂತರ ಬಿಎಸ್೪ ಬಜಾಜ್ ದ್ವಿ ಚಕ್ರ ೪೪ ವಾಹನಗಳನ್ನು ಪ್ರಯಾಣ ಸಮಯದಲ್ಲಿ ಡ್ಯಾಮೇಜ್ ಏನಾದರು ಆದರೆ ದಿ ನ್ಯೂ ಇಂಡಿಯಾ ವಿಮಾ ದವರಿಗೆ ೨೪೨೩-ರೂ ಹಣವನ್ನು ಸಂದಾಯ ಮಾಡಿ ಬಿಎಸ್೪ ಬಜಾಜ್ ೪೪ ದ್ವಿ ಚಕ್ರ ವಾಹನಳಿಗೆ ವಿಮಾ ಮಾಡಿರುತ್ತದೆ.   ಸದರಿ ಕಾಮಾಕ್ಷಿ ಬಜಾಜ್ ಅಧಿಕೃತ ಮಾರಾಟಗಾರರು ಕೋಲಾರ ಜಿಲ್ಲೆ ಮತ್ತು ನಮ್ಮ ನಡುವೆ ಆಗಿರುವ ಮೌಖಿಕ ಒಪ್ಪಂದಂತೆ ಒಟ್ಟು ೨೩೪೯೧೩೪/-ರೂ ಹಣವನ್ನು ದಿನಾಂಕ:೦೧-೦೪-೨೦೨೦ ಒಳಗಾಗಿ ಹಣವನ್ನು ಕೊಡುತ್ತೇನೆ ಎಂದು ಹೇಳಿರುತ್ತಾನೆ. ನಂತರ ಪ್ರದೀಪ ಬಾಬು ನಮ್ಮ ಮನೆಯ ಹತ್ತಿರ ಬಂದು ನನ್ನ ಶ್ರೀ.ಕಾಮಾಕ್ಷಿ ಬಜಾಜ್ ಶೋ ರೂಮ್ & ಸರ್ವಿಸ್ ಮುಕ್ತಾಯ ಮಾಡುತ್ತೇನೆ ನನ್ನ ಶ್ರೀ.ಕಾಮಾಕ್ಷಿ ಬಜಾಜ್ ಶೋ ರೂಮ್ & ಸರ್ವಿಸ್‌ನಲ್ಲಿ ದ್ವಿ ಚಕ್ರ ವಾಹನಗಳ ಬಿಡಿ ಭಾಗಗಳು ಹಾಗೂ ಉಪಕರಣಗಳು ನಿಮಗೆ ಕೋಡುತ್ತೇನೆಂದು ನಗದು ರೂಪದಲ್ಲಿ ೧೦೦೦೦೦೦/-ರೂ ಹಣವನ್ನು ತೆಗೆದುಕೊಂಡು ಹೋಗಿರುತ್ತಾನೆ. ಸ್ವಲ್ಪ ದಿನಗಳ ನಂತರ ಪ್ರದೀಪ ಬಾಬು ರವರಿಗೆ ನಾನು ಪೋನ್ ಮಾಡಿದಾಗ ಪ್ರದೀಪ ಬಾಬು ತನ್ನ ಮೊಬೈಲ್ ಫೋನ್ ತನ್ನ ತಂದೆಯಾದ  ಹೆಚ್.ವಿ ಸುರೇಶ ಬಾಬು ರವರಿಗೆ ಕೊಟ್ಟಿದ್ದು ಸುರೇಶ ಬಾಬು ರವರು ನನ್ನ ಜೊತೆಯಲ್ಲಿ ಪೋನ್‌ನ ಕಾಲನಲ್ಲಿ ಮಾತನಾಡಿ ನನಗೆ ಎರಡು ಮೂರು ದಿನಗಳ ಸಮಯ ನೀಡಿ ನಿಮ್ಮ ಹಣವನ್ನು ನಾನು ಕೂಡುತ್ತೇನೆ ಎಂದು ಹೇಳಿರುತ್ತಾನೆ.     ನಮ್ಮ ಹತ್ತಿರ ಪ್ರದೀಪ ಬಾಬು ರವರು ತೆಗೆದುಕೊಂಡು ಹೋದ ಬಿಎಸ್೪ ಬಜಾಜ್ ೪೪ ದ್ವಿ ಚಕ್ರ ವಾಹನಗಳನ್ನು ಬೆಲೆ ೨೨೭೯೫೧೧.೯೦/-ರೂ ಕ್ಯಾರಿಯರ್ಸ ಮೋವರ್ಸ ವಾಹನ ಬಾಡಿಗೆ ಹಣ ೬೭೨೦೦/-ರೂ ಹಣ ದಿ ನ್ಯೂ ಇಂಡಿಯಾ ವಿಮಾ ದವರಿಗೆ ೨೪೨೩-ರೂ  ನಗದು ಹಣ ೧೦೦೦೦೦೦/-ರೂ ಹೀಗೆ ಒಟ್ಟು ೩೩೪೯೧೩೪/-ರೂ ಹಣವನ್ನು ನಮಗೆ ಕೋಡಬೇಕಾಗಿರುತ್ತದೆ. ಪ್ರದೀಪ ಬಾಬು ತಂದೆ ಹೆಚ್.ವಿ ಸುರೇಶ ಬಾಬು ಶ್ರೀ.ಕಾಮಾಕ್ಷಿ ಬಜಾಜ್ ಅಧಿಕೃತ ಮಾರಾಟಗಾರರು ನಂ,೭೦/೧ ಎಂ.ಬಿ ರಸ್ತೆ ಸುಲ್ತಾನ್ ತಿಪ್ಪಸಂದ್ರ ಬಾಯ್‌ಪಾಸ್ ಕೋಲಾರ ಜಿಲ್ಲೆ ಇವರು ಹಣವನ್ನು ಇಲ್ಲಿಯವರಿಗೂ ಪಾವತಿ/ಸಂದಾಯ ಮಾಡದೆ ಕೊಡುತ್ತೇನೆ ಎಂದು ಹೇಳುತ್ತಾ ಸತ್ತಾಯಿಸಿ ಬಂದು ಹಣವನ್ನು ಕೊಡದೆ ಮೋಸ ಮಾಡಿರುತ್ತಾರೆ.   ನಮಗೆ ಹಣವನ್ನು ಪಾವತಿ ಮತ್ತು ಸಂಧಾಯ ಮಾಡುವುದು ಬಾಕಿ ಇರುತ್ತದೆ. ಇದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ಹಾಗೂ ಮೊಬೈಲ್ ಫೊನ್  ಎಸ್‌ಎಮಎಸ್. ವಾಟ್ಸಾಪ್ ಚಾಟ್ ಮಾಡಿರುವ ದಾಖಲೆಗಳು ನಮ್ಮ ಬಳಿ ಇರುತ್ತೇವೆ. ಸದರಿಯವನ ಹತ್ತಿರ ನಮಗೆ ಬರಬೇಕಾದ ಹಣ ಬಗ್ಗೆ ವಿಚಾರಿಸಿದಾಗ ಇಲ್ಲ ಸಲ್ಲದ ನೆಪಗಳನ್ನು ಹೇಳುತ್ತಾ ಬಂದು ಸುಮಾರು ಎಂಟು ತಿಂಗಳಿಂದ ಮೊಬೈಲ್ ಪೋನ್ ಕರೆ ಮಾಡಿದರು ಸ್ವೀಕರಿಸಿದೆ ಇರುವುದರಿಂದ ನಾನು ತಡವಾಗಿ ಇಂದು ಠಾಣೆಗೆ ಬಂದು ದೂರು ನೀಡಿರುತ್ತೇನೆ.    ಆದ್ದರಿಂದ ಪ್ರದೀಪ ಬಾಬು ಅವರ ತಂದೆ ಹೆಚ್.ವಿ ಸುರೇಶ ಬಾಬು ರವರ ಮೇಲೆ ಕಾನೂನು ಕ್ರಮ ಜರುಗಿಸಿ ನಮ್ಮ ಹಣವನ್ನು ನಮಗೆ ವಾಪಸ್ಸು ಕೊಡಿಸಬೇಕೆಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ ಠಾಣೆ :-  ದಿನಾಂಕ:25.08.2022 ರಂದು 06:30 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ ಎಸ್.ಕೆ.ಕಾಂತಾ ವಯ: 83 ವರ್ಷ ಉ: ಸಮಾಜ ಸೇವೆ ಸಾ|| ಮ.ನಂ. 11-2052 ಎಂ.ಎಸ್.ಕೆ. ಮಿಲ್ ಕ್ವಾಟರ್ಸ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಸಮಾಜ ಸೇವೆ ಮಾಡಿಕೊಂಡು ಇರುತ್ತೇನೆ. ಹೀಗಿದ್ದುದಿನಾಂಕ:19.08.2022 ರಂದು ಬೆಳಿಗ್ಗೆ 06:00 ಗಂಟೆ ಸುಮಾರಿಗೆ ನಾನು ಕೆಲಸದ ನಿಮಿತ್ಯ ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿರುತ್ತೇನೆ. ನಂತರ ದಿನಾಂಕ:21.08.2022 ರಂದು ರಾತ್ರಿ 10:00 ಗಂಟೆ ಸುಮಾರಿಗೆ ಮರಳಿ ಮನೆಗೆ ಬಂದಾಗ ಮನೆಯ ಬೀಗ ಮುರಿದು ಬಿದ್ದಿದ್ದು, ನಾನು ಗಾಬರಿಯಾಗಿ ಒಳಗೆ ಹೋಗಿ ನೋಡಲುಬೆಡರೂಮ ಅಲ್ಮಾರಾದಲ್ಲಿ ಇಟ್ಟಿದ್ದ  ನಗದು ಹಣ ರೂ 8,000/- ಗಳು ( 1) 50 ರೂ ಮುಖ ಬೆಲೆಯ 100 ನೋಟುಗಳು ಒಟ್ಟು ರೂ. 5000/- 2) 20 ರೂ ಮುಖ ಬೆಲೆಯ 100 ನೋಟುಗಳು ಒಟ್ಟು 2000/- 3) 10 ರೂ ಮುಖ ಬೆಲೆಯ 100 ನೋಟಗಳು ಒಟ್ಟು 1000/- ಹೀಗೆ ಒಟ್ಟು ರೂ. 8000/- ಗಳು) ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಮನೆಯಲ್ಲಿ ವಿಚಾರಿಸಿ ಇಂದು ತಡಮಾಡಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು,ದಿನಾಂಕ:19.08.2022 ರ 06:00 ಎ.ಎಂ. ದಿಂದ ದಿನಾಂಕ:21.08.2022 ರ 10:00 ಪಿ.ಎಂ. ಅವಧಿಯಲ್ಲಿ ನಮ್ಮ ಮನೆಯ ಬೀಗ ಮುರಿದು ಅಲ್ಮಾರಾದಲ್ಲಿ ಇಟ್ಟಿದ್ದ ನಗದು ಹಣ ರೂ, 8,000/- ಗಳನ್ನು ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆಮಾಡಿ ಅವರ ವಿರುದ್ಧ ಕ್ರಮ ಜರುಗಿಸಿ ನಮ್ಮ ಹಣವನ್ನು ನನಗೆ ದೊರಕಿಸಿ ಕೊಡಲು ಮಾನ್ಯರಲ್ಲಿ ವಿನಂತಿ ಅಂತ ಇತ್ಯಾದಿಯಾಗಿ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ ಠಾಣೆ :-  ದಿನಾಂಕ:25.08.2022 ರಂದು 03:00 ಪಿ.ಎಂ.ಕ್ಕೆ ಕಲಬುರಗಿ ನಗರದ ಕ್ಯೂ.ಪಿ. ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳುದಾರರಾದ ಶ್ರೀ ರಾಣೋಜಿ ತಂದೆ ಮಲ್ಲೇಶಪ್ಪ ಡಿಪ್ಟಿ ವಯ: 42 ವರ್ಷ ಜಾ: ಪ.ಜಾ. (ಹೊಲೆಯ) ಉ: ಸಮಾಜ ಸೇವೆ ಸಾ|| ಹೀರಾಪೂರ ಕಲಬುರಗಿ ಇವರ ಫಿರ್ಯಾದಿ ಅರ್ಜಿಯನ್ನು ಅವರ ಹೆಂಡತಿಯಾದ ಶ್ರೀಮತಿ ಮಹಾನಂದ ಗಂಡ ರಾಣೋಜಿ ಡಿಪ್ಟಿ ಇವರು ಠಾಣೆಗೆ ತಂದು ಹಾಜರ ಪಡಿಸಿದ್ದು ಸದರಿ ಅರ್ಜಿಯ ಸಾರಾಂಶವೆನೆಂದರೆ, ನಾನು ಸಮಾಜ ಸೇವೆ ಮಾಡಿಕೊಂಡು ಮತ್ತು ಕಳೆದ 3 ಬಾರಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರಾಪೂರಕ್ಕೆ ಆಯ್ಕೆಯಾಗುತ್ತಾ ಬಂದಿರುತ್ತೇನೆ. ಈ ವಿಚಾರವಾಗಿ ನಮ್ಮ ಸಮಾಜದ ಅರುಣ ಕುಮಾರ ಇನಾಮದಾರ ಸಾ|| ಹಿರಾಪೂರ ಇತನು ನನಗೆ ವಿರೋಧ ಮಾಡುತ್ತಾ ಬಂದಿರುತ್ತಾನೆ. ನಾನು ಒಂದು ಸಲ ಆತನ ವಿರುದ್ಧ ಎಸ್.ಡಿ.ಎಂ.ಸಿ. ಚುನಾವಣೆಯಲ್ಲಿ ಗೆದ್ದಿರುತ್ತೇನೆ. ಅಂದಿನಿಂದ ಅರುಣ ಹಾಗೂ ಅಣ್ಣ ತಮ್ಮ ರವರಾದ ಶಿವಯೋಗಿ ಇನಾಮದಾರ,ಮಂಜುನಾಥ ಇನಾಮದಾರ,ಪ್ರಜ್ವಲ್ ಇನಾಮದಾರ, ಪವನ ಇನಾಮದಾರ, ಹಾಗೂ ಆದಿತ್ಯ ಮತ್ತು ಇತರರು ಹೇಗಾದರು ಮಾಡಿ ನನಗೆ ಹೆಗಾದರೂ ಮಾಡಿ ಕೊಲೆ ಮಾಡಬೇಕು ಅಂತ ನನ್ನ ವಿರುದ್ಧ ಒಳಸಂಚು ರೂಪಿಸುತ್ತಾ ಬಂದಿರುತ್ತಾರೆ.   ಹೀಗಿದ್ದು ನಿನ್ನೆ ದಿನಾಂಕ:24.08.2022 ರಂದು 08:30 ಎ.ಎಂ.ಕ್ಕೆ ನಮ್ಮ ತಂಗಿಯ ಮಗ ಪ್ರಜ್ವಲ್ ಇತನೊಂದಿಗೆ ಶಿವಯೋಗಿ ಮಗನಾದ ಪ್ರಜ್ವಲ್ ಇತನು ತಂಟೆ ತಕರಾರು ಮಾಡಿದ್ದು ಈ ವಿಷಯವಾಗಿ ನಾನು ನನ್ನ ತಮ್ಮ ಆನಂದ ಮತ್ತು ನಮ್ಮ ತಂಗಿ ಭಾಗ್ಯವಂತಿ 3 ಜನರು ಕೂಡಿ ಅರುಣಕುಮಾರ ಇವರ ಮನೆಯ ಹತ್ತಿರ ಹೋಗಿ ಘಟನೆಯ ಬಗ್ಗೆ  ವಿಚಾರಿಸುತ್ತಿದ್ದಾಗ,1) ಅರುಣಕುಮಾರ ಇನಾಮದಾರ 2) ಶಿವಯೋಗಿ ಇನಾಮದಾರ 3) ಆದಿತ್ಯ ಇನಾಮದಾರ, 4) ಪ್ರಜ್ವಲ್ ಇನಾಮದಾರ 5) ಸುನೀಲ ಇನಾಮದಾರ 6) ಪವನ ಇನಾಮದಾರ 7) ಅಭಿಷೇಕ ಇನಾಮದಾರ 8) ಪವನ ಸಿರಸಗಿ 9) ಮಂಜುನಾಥ ತಂದೆ ಪೀರಪ್ಪಾ ಇನಾಮದಾರ 10) ನೀಲಮ್ಮ ಗಂಡ ಶಿವಯೋಗಿ ಇನಾಮದಾರ 11) ಸಂಗೀತಾ ಇನಾಮದಾರ 12) ಯಶೋಧಾ ಗಂಡ ಅರುಣಕುಮಾರ 13) ರಮಾ ದೊಡ್ಡಮನಿ 14) ನಾಗಮ್ಮ ಇನಾಮದಾರ  ಇವರ ಸಂಗಡ ಇನ್ನೂ 8-10 ಜನರು ಒಳಸಂಚು ಮಾಡಿಕೊಂಡು ತಮ್ಮಕೈಯಲ್ಲಿ ಮಾರಕಾಸ್ತ್ರಗಳಾದ ರಾಡು, ತಲವಾರು, ಬ್ಯಾಟ, ಕಲ್ಲು, ಕಟ್ಟಿಗೆ, ಇತ್ಯಾದಿಗಳನ್ನು ತೆಗೆದುಕೊಂಡು ಬಂದು ನಮಗೆ ರಂಡಿ ಮಕ್ಕಳ್ಯಾ ನಿಮಗೆ ಇವತ್ತು ಜೀವಂತ ಬಿಡುವುದಿಲ್ಲ  ಅಂತ ಬೈಯುತ್ತಾ ಬಂದವರೇ ನನಗೆ ಅರುಣಕುಮಾರ ಇತನು ತನ್ನ ಕೈಯಲ್ಲಿದ್ದ ತಲವಾರದಿಂದ ತಲೆಗೆ ಹೊಡೆದು ಗಂಭೀರವಾದ ಗಾಯ ಪಡಿಸಿರುತ್ತಾನೆ. ಇದನ್ನು ನೋಡಿ ಬಿಡಿಸಲು ಬಂದ ನಮ್ಮ ತಮ್ಮ ಆನಂದನಿಗೆ ಶಿವಯೋಗಿ ಇತನು ರಾಡಿನಿಂದ ತಲೆಗೆ ಹೊಡೆದನು, ಹಾಗೂ ಪ್ರಜ್ವಲ್, ಪವನ, ಆದಿತ್ಯ, ಅರುಣ ಮತ್ತು ಪವನ ಸಿರಸಗಿ ಈ 5 ಜನರು ಸೇರಿ ನಮ್ಮಿಬ್ಬರಿಗೆ ನೆಲಕ್ಕೆ ಹಾಕಿ ಮಾರಕಾಸ್ತ್ರಗಳಿಂದ ಹೊಟ್ಟೆ, ಎದೆ, ಬೆನ್ನಿಗೆ ಹೊಡೆದರು. ನನ್ನ ತಂಗಿ ಭಾಗ್ಯವಂತಿ ಇವಳಿಗೂ ಕೂಡ ಸುನೀಲ, ನೀಲಮ್ಮ, ಸಂಗೀತಾ, ರಮಾ, ನಾಗಮ್ಮ ಇವರೆಲ್ಲರೂ ಎಳೆದಾಡಿ ಕೈಯಿಂದ ಮನಬಂದಂತೆ ಹೊಡೆದಿರುತ್ತಾರೆ. ಪ್ರಜ್ವಲ್ ಶಿವಯೋಗಿ, ಸುನೀಲ ಇವರು ಭಾಗ್ಯವಂತಿಗೆ ಸೀರೆ ಹಿಡಿದು ಎಳೆದಾಡಿರುತ್ತಾರೆ. ಈ ಘಟನೆಯನ್ನು ಕುಪೇಂದ್ರ ಡಿಪ್ಟಿ, ವಿಶ್ವನಾಥ ಡಿಪ್ಟಿ, ಮಚ್ಛೇಂದ್ರ, ಶರಣು ಪಾಳಾ, ಜ್ಯೋತಿ ಡಿಪ್ಟಿ, ಮಲ್ಲು ದೊಂಡತ್ತಿ ಇನ್ನೂ ಇತರರು ನೋಡಿ ಬಿಡಿಸಿರುತ್ತಾರೆ. ಇವರುಗಳು ಬಿಡಿಸದೆ ಇದ್ದಿದ್ದರೆ ಅರುಣ ಹಾಗೂ ಇತರರು ಸೇರಿ ನಮಗೆ ಕೊಲೆ ಮಾಡಿಯೇ ಬಿಡುತ್ತಿದ್ದರು. ಕಾರಣ ಎಸ್.ಡಿ.ಎಂ.ಸಿ. ಚುನಾವಣೆ ದ್ವೇಷ ಸಾಧಿಸಿ ನನಗೆ ಮತ್ತು ನನ್ನ ಕುಟುಂಬದವರಿಗೆ ಕೊಲೆ ಮಾಡುವ ಸಂಚು ರೂಪಿಸಿ ಅರುಣಕುಮಾರ ಮತ್ತು ಅವನ ಕಡೆಯವರು ದಿನಾಂಕ:24.08.2022 ರಂದು 08:45 ಎ.ಎಂ.ಕ್ಕೆ ನಮ್ಮ ತಂಗಿಯ ಮನೆಯ ಹತ್ತಿರ ರೋಡಿನ ಮೇಲೆ ಬಂದು ನಮಗೆ ಹೊಡೆಬಡೆಮಾಡಿ ಕೊಲೆ ಮಾಡಲು ಪ್ರಯತ್ನಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಇತ್ಯಾದಿಯಾಗಿ ಸಲ್ಲಿಸಿದ ಫಿರ್ಯಾದಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 03-09-2022 12:03 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080