ಅಭಿಪ್ರಾಯ / ಸಲಹೆಗಳು

 ರೋಜಾ ಪೊಲೀಸ್‌ ಠಾಣೆ :- ದಿನಾಂಕ:25-07-2022  ರಂದು ಸಾಯಾಂಕಾಲ ೧೮:೩೦  ಗಂಟೆಗೆ ಗೃಹ ಬಳೆಕೆಯ ಗ್ಯಾಸ್ ಸಿಲಿಂಡರ್ ಗಳನ್ನು ಅನಧಿಕೃವಾಗಿ ಆಟೋ ರಿಕ್ಷಾಗಳಿಗೆ ತುಂಬುತ್ತಿರುವ ವ್ಯಕ್ತಿಗಳ ವಿರುದ್ದ ಅಗತ್ಯ ವಸ್ತುಗಳ ಕಾಯಿದೆ ಮತ್ತು ಕಲಂ ೬&೭ ಲಿಕ್ವಿಪೈಡ್ ಪೆಟ್ರೊಲಿಯಂ ಗ್ಯಾಸ್ ಆರ್ಡರ್ ೨೦೦೦ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತದೆ ಹಾಗೂ ಪ್ರಕರದಲ್ಲಿ ೧)ನಗದು ಹಣ ೬೦೮೦ ಹಾಗೂ ೨)ಒಂದು ಹೆಚ್ ಪಿ ಸಿಲಿಂಡರ್ ಗ್ಯಾಸ್, ಅ.ಕಿ:೨೦೦೦ ರೂ ೩)ವಿಡಿಯೋಕಾನ್ ಕಂಪನಿಯ ತೂಕದ ಯಂತ್ರ ಅ.ಕಿ :೨೦೦೦ ಹಾಗೂ ೪)ನೀಯೊ ಕಂಪನಿಯ ಗ್ಯಾಸ್ ಮೋಟಾರ್ ಅ.ಕಿ:೨೦೦೦ ಹೀಗೆ ಒಟ್ಟು ೧೨೦೮೦ ರೂ ಮೌಲ್ಯದ ವಸ್ತುಗಳನ್ನು ಜಪ್ತಿಯನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಫರಹತಾಬಾದ ಪೊಲೀಸ್‌ ಠಾಣೆ :-  ದಿನಾಂಕ:25-07-2022  ರಂದು ೮:೦೫ ಪಿಎಮ್ ಕ್ಕೆ ಶ್ರೀ ಗಡ್ಡೆಪ್ಪ ಸಿಹೆಚ್ಸಿ:೧೬೫ ಫರಹತಾಬಾದ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ನೀಡಿದ್ದರ ಸಾರಾಂಶವೇನೆಂದರೆ, ಇಂದು ದಿನಾಂಕ: ೨೫-೦೭-೨೦೨೨ ರಂದು ಸಾಯಂಕಾಲ ೪:೩೦ ಗಂಟೆಯ ಸುಮಾರಿಗೆ ನಾನು ಪೊಲೀಸ ಠಾಣೆಯಲ್ಲಿದ್ದಾಗ ಭಾತ್ಮಿ ಬಂದಿದ್ದೇನೆಂದರೆ, ನಮ್ಮ ಠಾಣೆಯ ವ್ಯಾಪ್ತಿಯ ಕವಲಗಾ(ಬಿ) ಗ್ರಾಮದಲ್ಲಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಕುಳಿತು ಸರ‍್ವಜನಿಕರಿಂದ ೧ ರೂಪಾಯಿಗೆ ೮೦ ರೂಪಾಯಿ ಗೆಲ್ಲಿರಿ ಅಂತಾ ಸರ‍್ವಜಿನಿಕರಿಗೆ ಹೇಳಿ ಸಾರ್ವಜನಿಕರಿಂದ ಹಣ ಪಡೆದು ದೈವ ಲೀಲೇಯ ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಭಾತ್ಮಿ ಬಂದ ಮೇರೆಗೆ ಪಿ.ಐ ಸಾಹೇಬರಿಗೆ ವಿಷಯ ತಿಳಿಸಿ ಅವರ ಮೌಖಿಕ ಆದೇಶದ ಮೇರಗೆ ನಾನು ಠಾಣೆಗೆ ಇಬ್ಬರೂ ಪಂಚರಾದ ೧) ರವಿಕುಮಾರ ತಂದೆ ವೀರಬಸಪ್ಪ ಮಡಿವಾಳ ವಯ||೨೯ ರ‍್ಷ ಉ||ಕೂಲಿ ಕೆಲಸ ಜಾ||ಮಡಿವಾಳ   ೨) ಗುರುಲಿಂಗಪ್ಪ ತಂದೆ ಶಂಕ್ರೆಪ್ಪ ಠಕ್ಕಾ ವಯ|| ೩೭ ವರ್ಷ ಜಾ||ಲಿಂಗಾಯತ ಉ||ಸರ್ವಿಸಿಂಗ ಕೆಲಸ ಸಾ:ಇಬ್ಬರು ಫರಹತಾಬಾದ ತಾಜಿ:ಕಲಬುರಗಿ ಇವರನ್ನು ಬರ ಮಾಡಿಕೊಂಡು ನಮ್ಮ ಠಾಣೆಯ ಸಿಬ್ಬಂದಿ ಜನರಾದ ೧) ಶ್ರೀ ಮಹೆಬೂಬ ಸಿಪಿಸಿ:೨೭೬ ೨) ಶ್ರೀ ಸಾಜೀದಪಾಶಾ ಸಿಪಿಸಿ:೨೯೮ ರವರಿಗೆ ಮತ್ತು ಪಂಚರಿಗೆ ಮಟಕಾ ಜೂಜಾಟದ ಮಾಹಿತಿ ತಿಳಿಸಿ, ಮಾನ್ಯ ಎಸಿಪಿ ಸಾಹೇಬರು ಸಬ್-ರ‍್ಬನ್ ಉಪ-ವಿಭಾಗ ಕಲಬುರಗಿ ರವರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ ನಾನು ಪಂಚರಿಗೆ ಮತ್ತು ಸಿಬ್ಬಂದಿ ಜನರಿಗೆ ಸರ್ಕಾರಿ ಜೀಪ್ ನಂ:ಕೆಎ-೩೨/ಜಿ-೧೧೫೧ ನೇದ್ದರಲ್ಲಿ ಕರೆದುಕೊಂಡು ಠಾಣೆಯಿಂದ ಸಾಯಂಕಾಲ ೫:೦೦ ಗಂಟೆಗೆ ಹೊರಟು, ಭಾತ್ಮೀ ಸ್ಥಳದ ಹತ್ತಿರ ಸಾಯಂಕಾಲ ೫:೩೦ ಗಂಟೆಗೆ ಕವಲಗಿ (ಬಿ) ಗ್ರಾಮಕ್ಕೆ ಹೋಗಿ ಮನೆಗಳ ಹತ್ತಿರ ಮರೆಯಾಗಿ ನಿಂತು ನೋಡಲು ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಒಬ್ಬ ವ್ಯಕ್ತಿ ಸಾರ್ವಜನಿಕರನ್ನು ಕೂಗಿ ಕರೆದು ೧ ರೂಪಾಯಿ ಗೆ ೮೦ ರೂಪಾಯಿ ಗೆಲ್ಲಿರಿ ಅಂತಾ ಮಟಕಾ ದೈವ ಲೀಲೆಯ ನಂಬರ ಬರೆದುಕೊಳ್ಳುತ್ತಿದ್ದು ಅವನ ಜೊತೆಗೆ ಇತರರು ಇರುವುದನ್ನು ಖಚಿತ ಪಟ್ಟಾಗ ೫:೪೫ ಪಿಎಮ್ ಕ್ಕೆ ಏಕಕಾಲಕ್ಕೆ ದಾಳಿ ಮಾಡಲು ಮಟಕಾ ಬರೆಯಿಸುತ್ತಿದ್ದು ಜನರು ನಮ್ಮನ್ನು ನೋಡಿ ಓಡಿ ಹೋದರು ಮಟಕಾ ನಂಬರ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಸಿಕ್ಕಿ ಬಿದಿದ್ದು ಆತನ ಹೆಸರು ವಿಳಾಸ ವಿಚಾರಿಸಲು ಮಲ್ಲಣ್ಣ ತಂದೆ ಶಿವಶಂಕ್ರೆಪ್ಪ ಕಲ್ಲಶೆಟ್ಟಿ ವಯ:೬೧ ವರ್ಷ ಉ||ಟಿವ್ಹಿ ರಿಪೇರಿ ಜಾ||ಗಾಣಿಗೇರ ಸಾ||ಕವಲಗಾ(ಬಿ) ತಾಜಿ||ಕಲಬುರಗಿ ಅಂತ ತಿಳಿಸಿದ್ದು ಆತನಿಗೆ ಅಂಗ ಶೋಧನೆ ಮಾಡಲಾಗಿ ೧) ಒಂದು ಮಟಕಾ ನಂಬರ ಚೀಟಿ ಅ.ಕಿ ೦೦=೦೦ ೨) ಒಂದು ಬಾಲ ಪೆನ್ನ ಅ.ಕಿ ೦೦=೦೦ ೩) ನಗದು ಹಣ ೧೮೨೦/- ರೂ ಸಿಕ್ಕಿದ್ದು ಹೀಗೆ ಒಟ್ಟು ನಗದು ಹಣ ೧೮೨೦/- ರೂ ಸಿಕ್ಕಿರುತ್ತದೆ. ಸದರಿಯವನ ಹತ್ತಿರ ಸಿಕ್ಕಿದ್ದ  ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಪಂಚರ ಸಮಕ್ಷಮದಲ್ಲಿ ೬:೦೦ ಪಿಎಮ್ ದಿಂದ ೭:೦೦ ಪಿಎಮ್ ದವರೆಗೆ ಕೈಕೊಂಡಿರುತ್ತೇನೆ. ನಂತರ ಜಪ್ತಿ ಪಂಚನಾಮೆ, ಮುದ್ದೆ ಮಾಲು ಮತ್ತು ಒಬ್ಬ ಆರೋಪಿತನೊಂದಿಗೆ ಸಾಯಂಕಾಲ ಠಾಣೆಗೆ ಬಂದು ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ-25-07-2022  ರಂದು ಸದರಿ ಪರ‍್ಯಾದಿದಾರರು (ಆಹಾರ ನಿರೀಕ್ಷಕರು ಕಲಬುರಗಿ) ಇದ್ದು ಇವರು ಕಪನೂರು ಬಳಿಯ ಅಂಬಾಭವಾನಿ ದೇವಸ್ಥಾನದ ಹತ್ತಿರ ಅನದಿಕೃತವಾಗಿ ಗೃಹ ಬಳಕೆಯ ಗ್ಯಸ್ ಸಿಲಿಂಡರ್ ಅನ್ನು ಆಟೋರಿಕ್ಷಾಗಳಿಗೆ ತುಂಬುತ್ತಿದ್ದಾರೆ ಎಂಬ ಬಾತ್ಮಿ ಬಂದ  ಮೇರೆಗೆ ದಾಳಿ ಮಾಡಲಾಗಿ ಸದರಿ ಆರೋಪಿತರು ಗ್ಯಾಸ್ ಸಿಲಿಂಡರ್ ನ್ನು ಆಟೋರಿಕ್ಷಾಗಳಲ್ಲಿ ತುಂಬಿಕೊಂಡು ಮಾರಲು ಸಾಗಿಸುತ್ತಿದ್ದಾಗ ಸದರಿ ಆರೋಪಿತರನ್ನು ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡು ಅವರ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ  :- ದಿನಾಂಕ-23-07-2022  ರಂದು ಪರ‍್ಯಾದಿದಾರರು ಮನೆಯಲ್ಲಿ ಸಂದರ್ಭದಲ್ಲಿ ಸದರಿ ಆರೋಪಿತನು ನೀರಿನ ವಿಷಯದಲ್ಲಿ ಏ ರಂಡಿ ಮಗನೆ  ನನ್ನ ಮನೆಯ ಕಡೆಗೆ ನೀರು ಹರಿಸ ಬೇಡವೆಂದರು ನೀರು ನೀರು ಹರಿಸುತ್ತಿಯೇನಲೇ ಅಂತಾ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯಗೊಳಿಸಿ ಕೈಯಿಂದ ಎದೆಯ ಮೇಲೆ ಹೊಡೆದು ಗುಪ್ತಗಾಯಗೊಳಿಸಿದ್ದು ನಂತರ ನನಗೆ ಗಾಯವಾಗಿದ್ದರಿಂದ ನಾನು ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡು ಬಂದು ಫಿರ್ಯಾದಿ ನೀಡಿದ್ದರಿಂದ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ 23-07-2022  ರಂದು ೦೦.೦೫ ದಿಂದ ೮.೩೦ ಗಂಟೆ ಸುಮಾರಿಗೆ  ಗ್ರಾಮದಲ್ಲಿನ ಸಾಧು ಮುತ್ಯಾನ  ಕಟ್ಟೆಯ ಪಕ್ಕದಲ್ಲಿ  ಕಬ್ಬಿಣದ ಬೋರ್ಡ ಇದ್ದು ಸದರಿ ಬೋರ್ಡಗೆ ಡಾ;ಬಾಬು ಜಗಜೀವನರಾಮ ರವರ ಭಾವಚಿತ್ರದ ಬ್ಯಾನರ ಅಂಟಿಸಿದ್ದು ಅದನ್ನು ಯಾರೋ ಕಿಡಿಗೇಡಿಗಳು ಹರಿದು ಬಿಸಾಕಿ ನಮ್ಮ ಜನಾಂಗಕ್ಕೆ ಅವಮಾನ ಮಾಡಿದ್ದಾರೆ ಎಂದು ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಎಂ.ಬಿ.ನಗರ ಪೊಲೀಸ್‌ ಠಾಣೆ :- ಫಿರ್ಯಾದಿದಾರರು ತನ್ನ ಮೋಟರ್ ಸೈಕಲ್ ನಂ ಕೆಎ ೩೨ ಹಚ್.ಎ ೭೮೨೨ ಬಾಜಾಜ್ ಪಲ್ಸ್ರ್ ಎನ್.ಎಸ್-೨೦೦ ಅ.ಕಿ ೪೫೦೦೦/- ನೇದ್ದನ್ನು ದಿನಾಂಕ: ೧೫/೦೭/೨೦೨೨ ರಂದು ರಾತ್ರಿ ಮನೆಯ ಮುಂದೆ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಮಲಗಿಕೊಂಡಿದ್ದು ಮರುದಿನ ಬೆಳಿಗ್ಗೆ ೫-೦೦ ಗಂಟೆಗೆ ಎದ್ದು ನೋಡಲಾಗಿ ಸದರಿ ಬೈಕ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಹುಡುಕಿ ಕೊಡಬೇಕೆಂದು ಎಂದು ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

ಇತ್ತೀಚಿನ ನವೀಕರಣ​ : 01-08-2022 04:38 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080