ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ ಠಾಣೆ :-  ದಿನಾಂಕ 25-06-2022  ರಂದು ರಾತ್ರಿ ೭:೧೫ ಪಿ.ಎಮ್ ಕ್ಕೆ ಫಿರ್ಯಾಧಿ ಗುರುರಾಜ ತಂದೆ ಶ್ರೀನಾಥ ಕುಲಕರ್ಣಿ ವ|| ೬೮ ವರ್ಷ ಉ|| ನಿವೃತ ನೌಕರ ಜಾ|| ಹಿಂದು ಬ್ರಾಹ್ಮಣ ಸಾ|| ಪ್ಲಾಟ ನಂ ೧೪೭ ಎ ಮನೆ ನಂ ೧೨-೨೦ ಉಡಚಲಾ ನಿವಾಸ ಶಾಮ ಲೇಔಟ ಕೊಟನೂರ ಮಠದ ಹಿಂದುಗಡೆ ಕಲಬುರಗಿ. ಇವರು ಠಾಣೆಗೆ ಹಾಜರಾಗಿ ದೂರು  ಅರ್ಜಿ ಸಲ್ಲಿಸಿದೆನಂದರೆ ನಮ್ಮ ಮನೆಯಲ್ಲಿ ನಾನು ನನ್ನ ಹೆಂಡತಿ ಗಾಯತ್ರಿ ಇಬ್ಬರು ಇರುತ್ತವೆ. ನನ್ನ ಮಗ ಗಿರಿಶ ಕುಲಕರ್ಣಿ ಇವರು ಹೈದ್ರಾಬಾದನಲ್ಲಿ  ಕೆಲಸ ಮಾಡಿಕೊಂಡು ಇರುತ್ತಾರೆ. ದಿನಾಂಕ ೨೦-೦೬-೨೦೨೨ ರಂದು ಬೆಳಿಗ್ಗೆ ೧೦:೩೦ ಗಂಟೆಗೆ ನಮ್ಮ ಮನೆಗೆ ಕೀಲಿ ಹಾಕಿಕೊಂಡು ಹೈದ್ರಾಬಾದನಲ್ಲಿ ನನ್ನ ಮಗ ಗಿರಿಶ ಈತನ ಮದುವೆ ಇರುವದರಿಂದ ನಾವು ಗಂಡ ಹೆಂಡತಿ ಇಬ್ಬರು ಮನೆಗೆ ಬೀಗ ಹಾಕಿಕೊಂಡು ಹೈದ್ರಾಬಾದಗೆ ಹೋಗಿರುತ್ತೆವೆ. ಇಂದು ದಿನಾಂಕ ೨೫-೦೬-೨೦೨೨ ರಂದು ಬೆಳಿಗ್ಗೆ ೬:೩೦ ಗಂಟೆಗೆ ನಮ್ಮ ಮನೆಯ ಮುಂದಿನ ಮನೆಯವರಾದ ಶಿವರಾಮ ಕುಲಕರ್ಣಿ ಇವರು ನನಗೆ ಪೊನ್ ಮಾಡಿ ತಿಳಿಸಿದೆನೆಂದರೆ ನಿಮ್ಮ ಮನೆಗೆ ಬಾಗಿಲ ಮುರಿದಿದ್ದು ಮನೆ ಕಳುವು ಆದಂತೆ ಕಂಡುಬುರುತಿದೆ ನೀವು ಬರಬೇಕು ಅಂತ ಹೇಳಿದ್ದರಿಂದ ನಾನು ನನ್ನ ಹೆಂಡತಿ, ಮಗ ಮೂರು ಜನರು ಬೆಳಿಗ್ಗೆ ೮:೩೦ ಗಂಟೆಗೆ ಹೈದ್ರಾಬಾದನಿಂದ ಬಿಟ್ಟು ಮದ್ಯಾಹ್ನ ೧೨:೩೦ ಗಂಟೆಗೆ ನಮ್ಮ ಮೆನಗೆ ಬಂದು ನೋಡಲು ಮನೆಯ ಬಾಗಿಲು ಕೊಂಡಿ ಮುರದಿದ್ದು ಒಳಗೆ ಹೋಗಿ ನೋಡಲು ಸಾಮಾನುಗಳ್ಳಲ್ಲಾ ಚಲ್ಲಾಪಿಲ್ಲಿಯಾಗಿದ್ದು, ಬೆಡರೂಮದಲ್ಲಿ ಬಾಗಿಲು ಕೊಂಡಿ ಮುರದಿದ್ದು ಓಳಗೆ ಹೋಗಿ ನೋಡಲು ಅಲಮಾರಾ ಕೊಂಡಿ ಮುರದಿದ್ದು ನೋಡಲು ಅಲಮಾರದಲ್ಲಿಟ್ಟಿದ್ದ ೧) ೬ ಗ್ರಾಂ ಬಂಗಾರದ ೨ ಮಾಟಿ ಅ.ಕಿ. ೧೭,೦೦೦/- ರೂ , ೨)  ೧೨.೫ ಗ್ರಾಂ ಬಂಗಾರದ ೪ ಬಿಲವಾರ ಒಟ್ಟು ೫೦ ಗ್ರಾಂ ಅ.ಕಿ. ೧,೫೦,೦೦೦/- ರೂ,  ೩) ೨೫ ಗ್ರಾಂ ಬಂಗಾರದ ಎರಡು ಪಾಟಲಿ ಒಟ್ಟು ೫೦ ಗ್ರಾಂ ಅ.ಕಿ. ೧,೫೦,೦೦೦/-ರೂ,  ೪) ೨೦ ಗ್ರಾಂ ಬಂಗಾರದ ೪ ಕೈ ಬಳೆ (ತೊಡೆ) ಒಟ್ಟು ೮೦ ಗ್ರಾಂ ಅ.ಕಿ. ೨,೪೦,೦೦೦/-ರೂ,  ೫) ೧೫ ಗ್ರಾಂ ಬಂಗಾರದ ಒಂದು ನಕ್ಲೆಸ ಅ.ಕಿ. ೪೫,೦೦೦/- ,  ೬) ೬ ಗ್ರಾಂ ಬಂಗಾರದ ೫ ಕಿವಿಯೋಲೆ ಒಟ್ಟು ೩೦ ಗ್ರಾಂ ಅ.ಕಿ. ೯೦,೦೦೦/-,   ೭) ೩ ಗ್ರಾಂ ಬಂಗಾರದ ೬ ಉಂಗುರು ಒಟ್ಟು ೧೮ ಗ್ರಾಂ ೫೪,೦೦೦/- , ೮) ೧.೨೫ ಗ್ರಾಂ ೮ ಮೂಗು ಬಟ್ಟು ಒಟ್ಟು ೧೦ ಗ್ರಾಂ ಅ.ಕಿ. ೩೦,೦೦೦/-,  ೯) ೩೦ ಗ್ರಾಂ ಬಂಗಾರ ೩ ನಕ್ಲೆಸ್ ಒಟ್ಟು ೯೦ ಗ್ರಾಂ ೨,೭೦,೦೦೦/-,  ೧೦) ೧೦ ಗ್ರಾಂ ಬಂಗಾರ ಒಂದು ಬ್ರೆಸಲೇಟ ಅ.ಕಿ. ೩೦,೦೦೦/-,  ೧೧) ೩ ಗ್ರಾಂ ಬಂಗಾರ ೨ ಉಂಗುರು ಒಟ್ಟು ೬ ಗ್ರಾಂ ಅ.ಕಿ. ೧೮,೦೦೦/-,  ೧೨) ೮ ಗ್ರಾಂ ಬಂಗಾರದ ಒಂದು ಮಂಗಳ ಸೂತ್ರ ಅ.ಕಿ ೨೪,೦೦೦/-,  ೧೩) ೧.ಕಿಲೊ ೭೫೦ ಗ್ರಾಂ ಬೆಳ್ಳಿಯ ತಟ್ಟೆ ಅ.ಕಿ. ೩೫,೦೦೦/- ರೂ ,  ೧೪) ೧,೦೦,೦೦೦/- ರೂ ನಗದು ಹಣ ಹಿಗೆ ಒಟ್ಟು ೩೭೩ ಗ್ರಾಂ ಬಂಗಾರದ ಆಭರಣಗಳು ಮತ್ತು ೧೭೫೦ ಗ್ರಾಂ ಬಿಳ್ಳಿಯ ತಟ್ಟೆ ಮತ್ತು ನಗದು ಹಣ ೧,೦೦,೦೦೦/_ ರೂ  ಹಿಗೆ ಒಟ್ಟು ೧೨,೫೩,೦೦೦/- ಸಾವಿರ ರೂಪಾಯಿ ಬಂಗಾರ, ಬೆಳ್ಳಿ, ಆಭರಣಗಳು ಮತ್ತು ನಗದು ಹಣ ಯಾರೋ ಕಳ್ಳರು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಈ ಮೇಲಿನ ಬಂಗಾರ, ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಯಾರೋ ಕಳ್ಳರು ದಿನಾಂಕ ೨೦-೦೬-೨೦೨೨ ರಂದು ಬೆಳಿಗ್ಗೆ ೧೦:೩೦ ಗಂಟೆಯಿಂದ ದಿನಾಂಕ ೨೫-೦೬-೨೦೨೨ ರಂದು ಬೆಳಿಗ್ಗೆ ೬:೩೦ ಗಂಟೆ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದು, ಸದರಿ ಕಳ್ಳರನ್ನು ಪತ್ತೆ ಮಾಡಿ ಕಳುವಾದ ನಮ್ಮ ಬಂಗಾರದ ಆಭರಣಗಳು ಪತ್ತೆ ಮಾಡಿಕೊಂಡಬೆಕೆAದು ಮಾನ್ಯವರಲ್ಲಿ ವಿನಂತಿ. ಅಂತ ಇತ್ಯಾದಿ ಕೊಟ್ಟ ದೂರು ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 16-07-2022 02:06 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080