ಅಭಿಪ್ರಾಯ / ಸಲಹೆಗಳು

ಸಂಚಾರಿ ಠಾಣೆ-೦೧ :       ದಿನಾಂಕ ೨೫-೦೫-೨೦೨೨ ರಂದು ಬೆಳಿಗ್ಗೆ ೬-೪೫ ಗಂಟೆ ಸುಮಾರಿಗೆ ಮಹ್ಮದ ಜೈನುಲ್ಲಾ ಅಬಿದಿನ ಇತನು ತಾನು ಚಲಾಯಿಸುತ್ತೀರುವ ಮೋಟಾರ ಸೈಕಲ ನಂಬರ ಕೆಎ-೩೩/ಯು-೬೨೩೪ ನೇದ್ದರ ಹಿಂದುಗಡೆ ಮೃತ ಮಹ್ಮದ ಹಿಸಾಮೋದ್ದೀನ ಇವರನ್ನು ಕೂಡಿಸಿಕೊಂಡು ಗಂಜ್ ಬಸ್ಸ ನಿಲ್ದಾಣ ಕಡೆಯಿಂದ ಚೌಕ ಸರ್ಕಲ ಕಡೆಗೆ ಹೋಗುವ ಕುರಿತು ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುವಾಗ ಅದೇ ರೀತಿ ಇನ್ನೊಂದು ಮೋಟಾರ ಸೈಕಲ ಸವಾರನು ಹುಮನಾಬಾದ ರಿಂಗ ರೋಡ ಕಡೆಯಿಂದ ಗ್ರಾಮೀಣ ಪೊಲೀಸ ಠಾಣೆ ಕಡೆಗೆ ಹೋಗುವ ಕುರಿತು ತನ್ನ ವಾಹನಕ್ಕೆ ಇಂಡಿಕೇಟರ ಹಾಕದೆ ಸನ್ನೆ ಮಾಡದೆ ಎಡ ರೋಡಿನಿಂದ ಬಲ ರೋಡಿಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡವಾಗಿ ಚಲಾಯಿಸಿಕೊಂಡು ಬಂದು  ಬಿಲಗುಂದಿ ಕಿರಾಣಿ ಅಂಗಡಿ ಎದುರು ರೋಡ ಮೇಲೆ ಎರಡು ವಾಹನಗಳನ್ನು ಒಂದಕ್ಕೊದು ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಮಹ್ಮದ ಹಿಸಾಮೋದ್ದೀನ ಇವರು ಭಾರಿ ಗಾಯ ಹೊಂದಿ ಅಪಘಾತ ಸ್ಥಳದಲ್ಲಿ ಮೃತಪಟ್ಟಿದ್ದು ಮಹ್ಮದ ಜೈನುಲ್ಲಾ ಅಬಿದಿನ ಇವರು ಭಾರಿಗಾಯ ಹೊಂದಿದ್ದು ಮತ್ತು ಇನ್ನೊಂದು ಮೋಟಾರ ಸೈಕಲ ಸವಾರ ಕೂಡಾ ಗಾಯ ಹೊಂದಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 ಚೌಕ ಠಾಣೆ : ದಿನಾಂಕ:24-05-2022 ರಂದು ಸಾಯಂಕಾಲ 7-00 ಗಂಟೆಗೆ ನಾನು ಸಿ.ಸಿ.ಬಿ. ಕಛೇರಿಯಲ್ಲಿದ್ದಾಗ ಕಲಬುರಗಿ ನಗರದ ರಾಜೀವಗಾಂಧಿ ನಗರ ಕೆ.ಇ.ಬಿ. ಲೈಟ ಖಜಾನಾ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ತನ್ನ ಲಾಭಗೋಸ್ಕರ ಸಾರ್ವಜನಿಕರಿಂದ ಹಣ ಪಡೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿಯನ್ನು ಬರೆದುಕೊಳ್ಳುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ ವಿಷಯವನ್ನು ಮೇಲಾಧಿಕಾರಿಗಳಾದ ಮಾನ್ಯ ಆಯುಕ್ತರು, ಮಾನ್ಯ ಉಪ ಆಯುಕ್ತರು (ಕಾ&ಸು) ಕಲಬುರಗಿ ನಗರ ಮತ್ತು ಮಾನ್ಯ ಉಪ ಆಯುಕ್ತರು (ಅಪರಾಧ & ಸಂಚಾರಿ) ಕಲಬುರಗಿ ನಗರ ರವರಿಗೆ ತಿಳಿಸಿ, ಮಾನ್ಯ ಉಪ ಆಯುಕ್ತರು, (ಅಪರಾಧ ಮತ್ತು ಸಂಚಾರಿ) ವಿಭಾಗ, ಕಲಬುರಗಿ ನಗರ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕುರಿತು ಇಬ್ಬರೂ ಪಂಚರಾದ 1) ಶ್ರೀ ಕಿಶೋರ ತಂದೆ ರಾಜು ರಾಠೋಡ, ವ:31 ವರ್ಷ, ಜಾತಿ:ಲಂಬಾಣಿ, ಉ:ಖಾಸಗಿ ಕೆಲಸ, ಸಾ:ಭರತನಗರ ತಾಂಡಾ, ಕಲಬುರಗಿ ಮೊ.ನಂ. 9611188886. 2) ಶ್ರೀ ಅರವಿಂದ ತಂದೆ ಶರಣಬಸಪ್ಪ ರೆಡ್ಡಿ, ವ:22 ವರ್ಷ, ಜಾತಿ:ಲಿಂಗಾಯತ, ಉ:ಖಾಸಗಿ ಕೆಲಸ, ಸಾ:ಶಾಸ್ತ್ರಿ ನಗರ ಕಲಬುರಗಿ ಮೊ.ನಂ.7411445830 ಇವರನ್ನು ಸಿ.ಸಿ.ಬಿ. ಘಟಕಕ್ಕೆ ಸಾಯಂಕಾಲ 7-30 ಗಂಟೆಗೆ ಬರಮಾಡಿಕೊಂಡು ಸದರಿ ಪಂಚರಿಗೆ ವಿಷಯ ತಿಳಿ ಹೇಳಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ನಾನು, ಪಂಚರು, ಮತ್ತು ಸಿ.ಸಿ.ಬಿ ಘಟಕ ಸಿಬ್ಬಂದಿಯವರಾದ 1) ಶರಣಬಸಪ್ಪ ಹೆಚ್.ಸಿ-94, 2) ಸುನೀಲಕುಮಾರ ಹೆಚ್ಸಿ-167, 3) ಯಲ್ಲಪ್ಪ ಸಿಪಿಸಿ-220, 4) ಶಿವಕುಮಾರ ಸಿಪಿಸಿ-16715, 5)ಅಶೋಕ ಕಟಕೆ ಸಿಪಿಸಿ-966, 6) ನಾಗರಾಜ ಸಿಪಿಸಿ-1257 ಎಲ್ಲರೂ ಕೂಡಿ ಸರ್ಕಾರಿ ಜೀಪ ನಂ.ಕೆಎ-32-ಜಿ-1249 ನೇದ್ದರಲ್ಲಿ ಮತ್ತು ಕೆಲವು ಸಿಬ್ಬಂದಿಯವರು ತಮ್ಮ ತಮ್ಮ ಮೋಟಾರಸೈಕಲಗಳ ರಾತ್ರಿ 7-45 ಗಂಟೆಗೆ ಹೊರಟು ಬಾತ್ಮಿ ಬಂದ ಸ್ಥಳವಾದ ಕಲಬುರಗಿ ನಗರದ ರಾಜೀವಗಾಂಧಿ ನಗರ ಕೆ.ಇ.ಬಿ. ಲೈಟ ಖಜಾನಾ ಹತ್ತಿರ ರಾತ್ರಿ 8-15 ಗಂಟೆಗೆ ತಲುಪಿ ಸ್ವಲ್ಪ ದೂರದಲ್ಲಿ ಜೀಪನ್ನು ಮತ್ತು ಮೋಟಾರಸೈಕಲಗಳನ್ನು ನಿಲ್ಲಿಸಿ ಎಲ್ಲರೂ ವಾಹನದಿಂದ ಇಳಿದು ಅಲ್ಲಿಯೇ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ತನ್ನ ಮನೆಯ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಅಲ್ಲಿ ಹೋಗಿ ಬರುವ ಸಾರ್ವಜನಿಕರಿಂದ 1 ರೂ.ಗೆ 80 ರೂ. ಕೊಡುವುದಾಗಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿ ಬರೆದುಕೊಳ್ಳುವುದನ್ನು ನಾನು ಮತ್ತು ಪಂಚರು ನೋಡಿ ಖಚಿತಪಡಿಸಿಕೊಂಡು ರಾತ್ರಿ 8-30 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ಒಮ್ಮಲ್ಲೇ ಎಲ್ಲರೂ ಸುತ್ತುವರೆದು ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲಾಗಿ ಆತನ ಹೆಸರು ಗಂಗಾಧರ ತಂದೆ ಕಾಶಿನಾಥ ಬುಯೇ, ವ:43 ವರ್ಷ, ಉ:ಹೋಟೆಲ ಕೆಲಸ, ಜಾತಿ:ಹಿಂದು ಖಾಟಿಕ, ಸಾ:ರಾಜೀವಗಾಂಧಿ ನಗರ, ಫಿಲ್ಟರಬೆಡ್ ಏರಿಯಾ-1, ಕಲಬುರಗಿ ಅಂತಾ ತಿಳಿಸಿದನು. ನಂತರ ಆರೋಪಿಯ ಅಂಗ ಶೋಧನೆ ಮಾಡಲಾಗಿ ಈತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ರೂ.6,200/- ನಗದು ಹಣ, ಮತ್ತು ಮಟಕಾ ಚೀಟಿಗಳು ಅ.ಕಿ.ರೂ.00/-, ಒಂದು ಬಾಲ ಪೆನ್ ಅ.ಕಿ.ರೂ.00/-, ದೊರೆತಿದ್ದುಇರುತ್ತದೆ. ಸದರಿ ಜಪ್ತುಪಡಿಸಿಕೊಂಡ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 26-05-2022 12:50 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080