Feedback / Suggestions

 ಚೌಕ  ಪೊಲೀಸ್ ಠಾಣೆ  :- ದಿನಾಂಕ: 25-04-2022 ರಂದು ಸಂಜೆ ೬-೩೦ ಗಂಟೆಗೆ ಫಿರ್ಯಾದಿದಾರಳಾದ ಶ್ರೀಮತಿ  ರೇವಮ್ಮಾ ಗಂಡ ಶರಣಗೌಡ ಕಲಶೆಟ್ಟಿ ವ:೩೫ ವರ್ಷ ಉ: ಕೂಲಿಕೆಲಸ ಮತ್ತು ಮನೆಗೆಲಸ ಜಾತಿ ಗಾಣಗೇರ ಸಾ: ಗುರುಬಸವ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ದೂರು  ಹಾಜರ ಪಡಿಸಿದ್ದು ಸದರಿ ದೂರಿನ ಸಾರಾಂಶವೆನೆಂದರೆ  ನಾನು, ರೇವಮ್ಮಾ ಗಂಡ ಶರಣಗೌಡ ಕಲಶೆಟ್ಟಿ ವ:೩೫  ವರ್ಷ ಉ: ಕೂಲಿಕೆಲಸ ಮತ್ತು ಮನೆಗೆಲಸ ಜಾತಿ ಗಾಣಗೇರ ಸಾ: ಗುರುಬಸವ ನಗರ ಕಲಬುರಗಿ ಇದ್ದು, ನನಗೆ ಒಂದು ಹೆಣ್ಣು ಒಂದು ಗಂಡು ಮಗ ಹೀಗೆ ಒಟ್ಟು ಇಬ್ಬರು ಮಕ್ಕಳಿರುತ್ತಾರೆ. ಹೆಣ್ಣು ಮಗಳಾದ ರೇಣುಕಾ ವ:೧೬ ವರ್ಷದವಳಿದ್ದು, ಆರಾಧಾನಾ ಕಾಲೇಜನಲ್ಲಿ ಪಿಯುಸಿ ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಾಳೆ. ಮನೆಯಲ್ಲಿ ನಾನು ಮತ್ತು ನನ್ನ ಗಂಡ ಶರಣಗೌಡ, ಮಗ ರಾಮಗೌಡ ಎಲ್ಲರೂ ಒಂದೇ ಮನೆಯಲ್ಲಿ ವಾಸವಾಗಿರುತ್ತೇವೆ. ಹೀಗಿದ್ದು ದಿನಾಂಕ ೨೦/೦೪/೨೦೨೨ ರಂದು ಬೆಳಿಗ್ಗೆ ೧೦-೦೦ ಗಂಟೆ ಸುಮಾರಿಗೆ ಮನೆಯಿಂದ ನನ್ನ ಮಗಳಾದ ರೇಣುಕಾ ಇವಳಿಗೆ ನನ್ನ ಮಗ ರಾಮಗೌಡ ಇತನು ಆರಾಧಾನಾ ಕಾಲೇಜನಲ್ಲಿ ಪಿ.ಯು.ಸಿ. ಪ್ರಥಮ ವರ್ಷದ ಕೊನೆಯ ಇಂಗ್ಲೀಷ ಪೇಪರ ಬಿಡಿಸಲು ಕಾಲೇಜಿಗೆ ಬಿಟ್ಟು ಮನೆಗೆ ಬಂದನು. ನಾನು ಮತ್ತು ನನ್ನ ಗಂಡ ಇಬ್ಬರು ಕೆಲಸಕ್ಕೆ ಹೋದೇವು. ನನ್ನ ಮಗ ರಾಮಗೌಡ ಇತನು ಮಧ್ಯಾಹ್ನ ೧-೦೦ ಗಂಟೆ ಸುಮಾರಿಗೆ ಪೇಪರ ಮುಗಿದ ನಂತರ ನನ್ನ ಮಗಳಾದ ರೇಣುಕಾ ಇವಳಿಗೆ ಕರೆಯಲು ಕಾಲೇಜಿಗೆ ಹೋಗಿದ್ದು, ಮಧ್ಯಾಹ್ನ ೧-೩೦ ಗಂಟೆ ಸುಮಾರಿಗೆ ನನ್ನ ಮಗ ರಾಮಗೌಡ ಇತನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದೆರೆ, ನನ್ನ ಮಗಳಾದ ರೇಣುಕಾ ಇವಳು ಕಾಲೇಜನಲ್ಲಿ ಹುಡಕಾಡಲೂ ಅವಳು ಸಿಕ್ಕಿರುವುದಿಲ್ಲಾ ಅಂತಾ ತಿಳಿಸಿದಾಗ, ಗಾಬರಿಗೊಂಡು ಮಧ್ಯಾಹ್ನ   ೨-೦೦ ಗಂಟೆ ಸುಮಾರಿಗೆ ಆರಾಧಾನಾ ಕಾಲೇಜಿಗೆ ಬಂದು ಕಾಲೇಜನಲ್ಲಿ  ನನ್ನ ಮಗಳು ರೇಣುಕಾ ಬಗ್ಗೆ ವಿಚಾರಿಸಿದಾಗ ಅವಳು ಇವತ್ತು ಪರಿಕ್ಷೇಗೆ ಕುಳಿತಿರುವುದಿಲ್ಲಾ ಎಂದು ತಿಳಿಸಿದರು. ನಾನು ಮತ್ತು ನನ್ನ ಮಗ ರಾಮಗೌಡ,  ಗಂಡ ಶರಣಗೌಡ ಮೂವರು ಸೇರಿಕೊಂಡು ಅಂದಿನಿಂದ ಇಂದಿನ ವರೆಗೆ ಎಲ್ಲಾ ಕಡೆ ಹಾಗೂ ನಮ್ಮ ಸಂಬಂಧಿಕರುಗಳಲ್ಲಿ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ಕೊಡುತ್ತಿದ್ದು, ಈ ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ. ಕಾಣೆಯಾದ (ಅಪಹರಣಕ್ಕೆ ಒಳಗಾದ) ನನ್ನ ಮಗಳ ಚಹರೆ ಪಟ್ಟಿ ವಿವರ ಈ ರೀತಿ ಇದೆ

೧)         ಹೆಸರು               : ರೇಣುಕಾ

೨)         ತಂದೆ                 : ಶರಣಗೌಡ ಕಲ್ಲಶೆಟ್ಟಿ

೩)         ವಯಸ್ಸು                       :  ೧೬ ವರ್ಷ

೪)         ಎತ್ತರ                :  ೫'೧''

೫)         ಚಹರೆ ಪಟ್ಟಿ                    :  ಉದ್ದ ಮುಖ, ಉದ್ದ ಮೂಗು

೬)         ಮೈಬಣ್ಣ                       :  ಸಾದಾಕಪ್ಪು ಮೈಬಣ್ಣ

೭)     ಮಾತನಾಡುವಭಾಷೆ                         :  ಕನ್ನಡ

೮)         ಗುರುತು             :  ಬಲಗೈ ಮುಂಗೈ ಮೇಲೆ ಹಳೆಯ ಗಾಯ ಗುರುತು ಇದೆ

೯)         ಧರಿಸಿದ ಬಟ್ಟೆಗಳು            :  ೧)ಒಂದು ತಿಳಿ ನೀಲಿ ಬಣ್ಣದ ಚುಡಿದಾರ ಷರ್ಟು ಒಂದು ನೀಲಿ ಬಣ್ಣದ ಚುಡಿದಾರ ಪೈಜಾಮ & ಓಡನಿ ಕಾರಣ ಮಾನ್ಯರವರು ಕಾಣೆಯಾದ ನನ್ನ ಮಗಳಾದ ಕು: ರೇಣುಕಾ ತಂದೆ ಶರಣಗೌಡ ಕಲಶೆಟ್ಟಿ ವ:೧೭ ವರ್ಷ ಇವಳನ್ನು ಹುಡುಕಿ ನಮಗೆ ಒಪ್ಪಿಸಬೇಕಾಗಿ ವಿನಂತಿ ಅಂತಾ  ಕೊಟ್ಟ  ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

Last Updated: 26-04-2022 11:50 AM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080