ಅಭಿಪ್ರಾಯ / ಸಲಹೆಗಳು

 ಚೌಕ ಪೊಲೀಸ್ ಠಾಣೆ:-  ದಿನಾಂಕ:25-03-2022 ರಂದು ಬೆಳಿಗ್ಗೆ ೧೦-೩೦  ಗಂಟೆಗೆ ಶ್ರೀಮತಿ ಮಾಹಾದೇವಿ ಗಂಡ ಮಾಹಾದೇವ ಪವಾರ ಸಾ: ಫೀಲ್ಟರ ಬೇಡ ಶಹಾಬಜಾರ ತಾಂಡಾ ಕಲಬುರಗಿ  ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಗಣಕೀಕೃತ ಮಾಡಿಸಿದ ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ, ನಮ್ಮ ತಂದೆ ಲಕ್ಷ್ಮಣ ತಾಯಿ ಕೇಶಲಾಬಾಯಿ ಇವರು ೨೦೧೪ ನೇ ಸಾಲಿನಲ್ಲಿ ದಿನಾಂಕ ಮತ್ತು ತಿಂಗಳು ನೆನಪಿಲ್ಲಾ ನನಗೆ ಫೀಲ್ಟರ ಶಹಾಬಜಾರ ತಾಂಡಾದ ಮಾಹಾದೇವ ತಂದೆ ಭಿಕ್ಕು ಪವಾರ ಇತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ಸಧ್ಯ ನನಗೆ ಅಂಕುಶ, ರೋಶನಿ ಎಂಬ ಇಬ್ಬರು ಮಕ್ಕಳು ಇರುತ್ತಾರೆ. ನನಗೆ ಮದುವೆಯಾಗಿ ೦೮ ವರ್ಷ ಆಗಿರುತ್ತದೆ. ನನ್ನ ಗಂಡ ಮಾಹಾದೇವ ಇತನು ಆಟೋ ಚಾಲಕನಾಗಿ ಕೆಲಸ ಮಾಡುತ್ತಾನೆ. ಅವನು ದುಡಿದ ಹಣವನ್ನು ಸಂಪೂರ್ಣವಾಗಿ ಕುಡಿದು ಬಂದು ಮನೆಗೆ ಎನು ಆಹಾರ ಪದಾರ್ಥಗಳು ತರದ ಕಾರಣ ನಾನೇ ಕೂಲಿಕೆಲಸಕ್ಕೆ ಹೋಗಿ  ಮನೆ ನಡೆಸುತ್ತಿದ್ದು, ನನ್ನ ಗಂಡ ಪ್ರತಿ ದಿನ ಕುಡಿದ ಅಮಲಿನಲ್ಲಿ ಮನೆಗೆ ಬಂದು ನನ್ನ ಶೀಲದ ಬಗ್ಗೆ ಸಂಶಯಪಟ್ಟು ನನಗೆ ಹೊಡೆ ಬಡಿ ಮಾಡಿ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತಾ ಬಂದಿರುತ್ತಾನೆ. ಈ ವಿಷಯ ನಮ್ಮ ತಂದೆ, ತಾಯಿಗೆ ತಿಳಿಸಿದಾಗ ಈಗ ಮೂರು ತಿಂಗಳ ಹಿಂದೆ ನಮ್ಮ ತಂದೆ ತಾಯಿ ಇವರು ತಾಂಡಾ ಪ್ರಮುಖರಾವ ಶಂಕರ ಚವ್ಹಾಣ, ಶಿವರಾಮ ನಾಯ್ಕ, ಅಶೋಕ ಕಾರಭಾರಿ ಇವರುಗಳ ಸಮಕ್ಷಮದಲ್ಲಿ  ಪಂಚಾಯತಿ ಮಾಡಿದಾಗ ನನ್ನ ಗಂಡ ಮಾಹಾದೇವ  ಇತನು ಹೆಂಡತಿಗೆ ಕುಡಿದು ಬಂದು ಮತ್ತು ಅವಳ ಶೀಲದ ಬಗ್ಗೆ ಸಂಶಯ ಪಡುವುದಿಲ್ಲಾ ಎಂದು ಒಪ್ಪಿಕೊಂಡಿರುತ್ತಾನೆ. ದಿನಾಂಕ ೨೩/೦೩/೨೦೨೨ ರಂದು ರಾತ್ರಿ ೧೧-೩೦ ಗಂಟೆ ಸುಮಾರಿಗೆ ಮನೆಯಲ್ಲಿ ಇದ್ದಾಗ ನನ್ನ ಗಂಡ ಮಾಹಾದೇವ ತಂದೆ ಭಿಕ್ಕು ಪವಾರ ಇತನು ಕುಡಿದ ಅಮಲಿನಲ್ಲಿ ಮನೆಗೆ ಬಂದು ನನಗೆ ತನಗೆ ಸರಾಯಿ ಕುಡಿಯಲು ಹಣ ಕೊಡು ಅಂತಾ ಕೇಳಿದನು. ಅವನಿಗೆ ನನ್ನ ಹತ್ತಿರ ಹಣವಿಲ್ಲಾ ಅಂತಾ ಹೇಳಿದ್ದಕ್ಕೆ ನನ್ನ  ಗಂಡ  ನನಗೆ ರಂಡಿ, ಭೋಸಡಿ ನನಗೆ ಹಣ ಕೊಡುವುದಿಲ್ಲಾ ಅಂತಾ ಹೇಳುತ್ತೀ ಅನ್ನುತ್ತಾ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ನನ್ನ ಎಡ ತೊಡೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿದನು. ಚೀರಾಡಲು ಸಪ್ಪಳ ನಮ್ಮ ಭಾವ ಅಶೋಕ ಮತ್ತು ಕಾಶಿನಾಥ ಚವ್ಹಾಣ ಮತ್ತು ಅವನ ತಾಯಿ ಕನ್ನುಬಾಯಿ ಇವರುಗಳು ಬಂದು ಜಗಳಾ ಬಿಡಿಸಿಕೊಂಡರು. ನಂತರ ನನ್ನ ಗಂಡ ಮಾಹಾದೇವ ಇತನು ತಾನು ಕೇಳಿದಾಗ ಸರಾಯಿ ಕುಡಿಯಲು ಹಣ ಕೊಡದೇ ಹೋದರೆ ನನಗೆ ಜೀವದಿಂದ ಹೊಡೆಯುವುದಾಗಿ ಜೀವ ಭಯ ಹಾಕಿದನು.  ಅದೇ ದಿನ ದಿನಾಂಕ ೨೪/೦೩/೨೦೨೨ ರಂದು ಮಧ್ಯದ ರಾತ್ರಿ ಸಮಯದಲ್ಲಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋಗಿ ಸೇರಿಕೆಯಾದೆನು. ದಿನಾಂಕ ೨೪/೦೩/೨೦೨೨ ರಂದು ಮಹಿಳಾ ಪೊಲೀಸ ಠಾಣೆಯವರು ಎಂ.ಎಲ್.ಸಿ. ವಿಚಾರಣೆಗಾಗಿ ಬಂದಿದ್ದು, ಅವರಿಗೆ  ವಿಚಾರಿಸಿಕೊಂಡು ದೂರು ಕೊಡುವುದಾಗಿ ತಿಳಿಸಿರುತ್ತೇನೆ. ಇಂದು ದಿನಾಂಕ ೨೫/೦೩/೨೦೨೨ ರಂದು ಮತ್ತೆ ಮಹಿಳಾ ಪೊಲೀಸ ಠಾಣೆಗೆ ಕಂಪ್ಲೇಟ ಕೊಡಲು ಹೋದಾಗ, ಅವರು ಘಟನಾ ಸ್ಥಳವು ಚೌಕ ಪೊಲೀಸ ಠಾಣೆ ಬರುತ್ತದೆ ಅಂತಾ ತಿಳಿಸಿದ್ದರಿಂದ ಮಹಿಳಾ ಪೊಲೀಸ ಠಾಣೆಯಿಂದ ಚೌಕ ಪೊಲೀಸ ಠಾಣೆಗೆ ಬಂದಿರುತ್ತೇನೆ. ಈ ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ. ಕಾರಣ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟು ಚಾಕುವಿನಿಂದ ಎಡೆ ತೊಡೆ ಮೇಲೆ ಹೊಡೆದು ಭಾರಿ ರಕ್ತಗಾಯಗೊಳಿಸಿ ಜೀವ ಭಯ ಹಾಕಿದ ನನ್ನ ಗಂಡ ಮಾಹಾದೇವ ತಂದೆ ಭಿಕ್ಕು ಪವಾರ ಸಾ:ಫೀಲ್ಟರ ಬೆಡ್ ಶಹಾಬಜಾರ ತಾಂಡಾ ಕಲಬುರಗಿ ಕಲಬುರಗಿ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆ. ಎಂದು ಕೊಟ್ಟ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 08-04-2022 12:57 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080