ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್‌ ಠಾಣೆ :- ದಿನಾಂಕ: 23-02-2023 ರಂದು ರಾತ್ರಿ 8:30 ಗಂಟೆ ಸುಮಾರಿಗೆ ಬೆಂಗಳೂರದಿಂದ ದಿನಾಂಕ: 24-02-2023 ರಂದು ಬೆಳಿಗ್ಗೆ ಕಲಬುರಗಿಗೆ ಬಂದಿರುತ್ತೇನೆ. ನಿನ್ನೆ ದಿನಾಂಕ: 24-02-2023 ರಂದು ಮಧ್ಯಾಹ್ನ 1:00 ಗಂಟೆಯಿಂದ ಮಧ್ಯಾಹ್ನ 1:15 ಗಂಟೆಯ ಅವಧಿಯಲ್ಲಿ ಕಲಬುರಗಿ ನಗರದ ಪೋರ್ಟ ರಸ್ತೆಯಲ್ಲಿ ಇರುವ ಕರ್ನಾಟಕ ಬ್ಯಾಂಕ ಶಾಖೆಗೆ ಹಣ ಕಟ್ಟಲು ಹೋದಾಗ ಬ್ಯಾಂಕಿನ ಪ್ರವೇಶ ದ್ವಾರದಲ್ಲಿ ಒಬ್ಬ ಅಪರಿಚಿತ ಹುಡುಗ 18-ರಿಂದ 20 ವರ್ಷ ವಯಸ್ಸಿನವನು ನನ್ನನ್ನು ತಳ್ಳಿ ಓಡಿ ಹೋಗಿದ್ದು, ನಾನು, ಬ್ಯಾಂಕಿನ ಒಳಗೆ ಹೋಗಿ ಬ್ಯಾಗನಲ್ಲಿದ್ದ ಹಣ ತೆಗೆದು ಜಮಾ ಮಾಡಲು ಹೋದಾಗ ಬ್ಯಾಗಿನಲ್ಲಿದ್ದ 1,33,000/- ರೂ. ಕಳ್ಳತನವಾಗಿದ್ದು ಕಂಡು ಬಂತು. ಕಾರಣ ನಾನು ಅರ್ಜಂಟಾಗಿ ಬೆಂಗಳೂರಕ್ಕೆ ಹೋಗಬೇಕಾ ಗಿರುವುದರಿಂದ ದೂರು ಕೊಟ್ಟಿರುವುದಿಲ್ಲಾ. ಇಂದು ಈ-ಮೇಲ್‌ನಲ್ಲಿ ದೂರು ಕೊಡುತ್ತಿದ್ದೆನೆ. ಆದ್ದರಿಂದ ಹಣ ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ: 15-02-2023 ರಂದು ಬೆಳಿಗ್ಗೆ 08:30 ಗಂಟೆಯಲ್ಲಿ ನನ್ನ HERO SPLENDOR PLUS REG NO KA-32 EL-8428-ದ್ವಿ ಚಕ್ರ ವಾಹನವನ್ನು ತೆಗೆದುಕೊಂಡು  ರೇಲ್ವೆ ವಸತಿ ಗೃಹದ ಹತ್ತಿರ ನಿಲ್ಲಿಸಿ. ನಾನು ಚಿತ್ತಾಪೂರ ತಾಲ್ಲೂಕಿನ ಕೂಂದನೂರ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕರ್ತವ್ಯ ನಿರ್ವಹಿಸಲು ಹೋಗಿರುತ್ತೇನೆ. ನಂತರ ಸಂಜೆ 7:30 ಗಂಟೆಗೆ ನಾನು ವಾಪಸ್ಸು ಬಂದು ನೋಡಿದಾಗ ಸದರಿ ಸ್ಥಳದಲ್ಲಿ ನಿಲ್ಲಿಸಿದ್ದ ನನ್ನ ವಾಹನ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ದ್ವಿ-ಚಕ್ರ ವಾಹನವನ್ನು ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ: 23-02-2023 ರಂದು ಜಿಲ್ಲಾ ಮತ್ತು ಸತ್ರ ನ್ಯಾಯಲಯ ಕಲಬುರಗಿ ರವರ ಆದೇಶದಂತೆ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೆನೆಂದರೆ ನಾನು ಮಾನ್ಯ ನ್ಯಾಯಾಧೀಶರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಲಯರವರ ಆದೇಶದಂತೆ ನ್ಯಾಯಾಲಯದ ಸ್ಪೇಶಲ್ ಸಿ ( ಕೋರ್ಟ ) 4/2021 ( 1/2019 ಎ ಸಿ ಬಿ  ಪಿ ಎಸ್ ) ಲೋಕಾಯುಕ್ತ ಪಿಎಸ್ ಕಲಬುರಗಿ ರವರ ವಿಚಾರಣೆಯಲ್ಲಿ ಇರುವ ಪ್ರಕರಣದ ಸಿಡಬ್ಲೂ 1/ ಪಿ ಡಬ್ಲೂ 1 ಸಿದ್ದಲಿಂಗ ತಂದೆ ಶಿವರಾಯ ಮತ್ತು ಆರೋಪಿ ನಂ 1 ಮತ್ತು 2 ರವರು ದಿನಾಂಕ: 17-02-2023 ರಂದು ಹಾಜರಾಗಿದ್ದು ಆ ದಿನ ಸಿಡಬ್ಲೂ 1/ ಪಿ ಡಬ್ಲೂ 1 ಸಾಕ್ಷಿ ನುಡಿದಿದ್ದು ನಿಶಾನೇ ಪಿ-1 ರಿಂದ ನಿಶಾನೆ ಪಿ- 5 ಹಾಗು ನಿಶಾನೇ ಪಿ-1 ಎ ಎಂದು ಗುರುತಿಸಲಾಗಿದೆ. ಸಿಡಬ್ಲೂ 1/ ಪಿ ಡಬ್ಲೂ 1 ರವರು ನುಡಿದಿರುವ ಸಾಕ್ಷಿಯನ್ನು ನ್ಯಾಯಲಯವು ಗಮನಿಸಲು ಪ್ರಕರಣ ತನಿಖಾಧಿಕಾರಿಗಳು ಸಂಗ್ರಹಿಸಿದ ಸಾಕ್ಷಿಗೆ ಅನುಗುಣವಾಗಿ ನುಡಿಯದೆ ತಮ್ಮ ಸ್ವಂತ ಲಾಭಕ್ಕಾಗಿ ಮಾನ್ಯ ನ್ಯಾಯಾಲಯದ ಮುಂದೆ ಸುಳ್ಳು ಸಾಕ್ಷಿ ನುಡಿದಿರತ್ತಾರೆಂದು ನೀಡಿದ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲೆ ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ -1 : ದಿನಾಂಕ: 25-02-2023 ರಂದು  03:00 ಎ.ಎಂ ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆ, ಕಲಬುರಗಿಯಿಂದ ಶ್ರೀ. ಮಣಿಕಂಠ ತಂದೆ ಹಣಮಂತರಾಯ ಪೂಜಾರಿ ಇವರ ಆರ್.ಟಿ.ಐ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಎಂ.ಎಲ್.ಸಿ ಪತ್ರ ವಸೂಲು ಮಾಡಿಕೊಂಡು ಗಾಯಾಳು ಮಣಿಕಂಠ ಪೂಜಾರಿ ಇವರಿಗೆ ನೋಡಿ ವಿಚಾರಿಸಲು ಅವರು ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ ದಿನಾಂಕ: 24-02-2023 ರಂದು ರಾತ್ರಿ ಫಿರ್ಯಾದಿ ತನ್ನ ಮನೆಯಲ್ಲಿ ಇರುವಾಗ ಅವರ ಗೆಳೆಯನಾದ ಶಶಿಭೂಷಣ ತಂದೆ ಕೆ.ಟಿ. ಮೃತ್ಯುಂಜಯ ಇತನು ಫಿರ್ಯಾದಿ ಮನೆಗೆ ಬಂದು ಸಂತೋಷ ಕಾಲೋನಿಯಲ್ಲಿರುವ ಗೆಳೆಯರನ್ನು ಭೇಟಿಯಾಗಿ ಬರೋಣ ಅಂತ ಹೇಳಿ ಫಿರ್ಯಾದಿಗೆ ತನ್ನ ಮೋಟಾರ್ ಸೈಕಲ್ ನಂ-ಕೆ.ಎ-32 ಹೆಚ್.ಸಿ-7909 ನೇದ್ದರ ಮೇಲೆ ಹೋಗಿ ಗೆಳೆಯರನ್ನು ಭೇಟಿ ಆಗಿ ಮರಳಿ ಫಿರ್ಯಾದಿ ಮನೆಗೆ ಹೋಗುವಾಗ ಇಂದು ದಿನಾಂಕ: 25-02-2023 ರಂದು 00:30 ಎ.ಎಂ ಸುಮಾರಿಗೆ ಶಶಿಭೂಷಣ ಇತನು ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಸಂತೋಷ ಕಾಲೋನಿಯಿಂದ ರಾಷ್ಟ್ರಪತಿ ಸರ್ಕಲ್ ರಸ್ತೆಯಲ್ಲಿ ಬರುವ ರೈಲ್ವೇ ಓವರ್ ಬ್ರೀಡ್ಜ್ ರಸ್ತೆಯ ಮೇಲೆ ಡಿವೈಡರಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಸಾದಾ ಗಾಯಗೊಳಿಸಿ ತಾನು ಭಾರಿಗಾಯಹೊಂದಿ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ ಕಾರಣ ಸದರಿ ಮೋಟಾರ್ ಸೈಕಲ್ ಸವಾರ ಶಶಿಭೂಷಣ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ನೀಡಿದ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಕಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ -1 :- ದಿನಾಂಕ: 25-02-2023 ರಂದು 12:15  ಕ್ಕೆ ಅಬ್ದುಲ್ ಗಫಾರ್ ತಂದೆ ಇಸ್ಮಾಯಿಲ್ ಸಾಬ್ ಜರ್ದಿ ರವರು ಖುದ್ದಾಗಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿದ ಫಿರ್ಯಾದಿ ಅರ್ಜಿ ತಂದು ಹಾಜರು ಮಾಡಿದ್ದು ಸದರಿ ಫಿರ್ಯಾದಿ ಅರ್ಜಿ ಸಾರಂಶವೇನೆಂದರೆ ನಾನು ಅಬ್ದುಲ್ ಗಫಾರ್ ತಂದೆ ಇಸ್ಮಾಯಿಲ್ ಸಾಬ್ ಜರ್ದಿ ವಯ:62ವರ್ಷ ಜಾ: ಮುಸ್ಲಿಂ ಉ: ಖಾಸಗಿ ಕೆಲಸ ಸಾ: ಕೆ.ಬಿ.ಎನ್ ಇಂಜಿನಿಯರ್ ಕಾಲೇಜ್ ಹತ್ತಿರ, ಬೀಲಾಲಾಬಾದ್, ಕಲಬುರಗಿ ಈ ಮೂಲಕ ನಾನು ದೂರು ಸಲ್ಲಿಸುವದೇನೆಂದರೆ ದಿನಾಂಕ: 04-02-2023 ರಂದು  ಸಾಯಂಕಾಲ ನಾನು ನನ್ನ ವೈಯಕ್ತಿಕ ಕೆಲಸ ಕುರಿತು ಮೋಹಮ್ಮದ್ ರಫೀಕ್ ಚೌಕ್ ಕಡೆಗೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಹೋಗುವ ಕುರಿತು ರಸ್ತೆ ಬದಿಯಿಂದ ನಡೆದುಕೊಂಡು ಶಾಲಿಮಾರ್ ಪಂಕ್ಷನ್ ಹಾಲ್ ದಾಟಿ ಇಂಡಿಯನ್ ಮೇಡಿಕಲ್ ಹತ್ತಿರ ಹೋಗುವಾಗ ರಾತ್ರಿ 9:00 ಗಂಟೆ ಸುಮಾರಿಗೆ ಒಂದು ಕಾರ್ ಚಾಲಕನು ಬಿ.ಬಿ. ರೋಜಾ ಶಾಲೆ ಕಡೆಯಿಂದ ಮಹಮ್ಮದ್ ರಫಿಕ್ ಚೌಕ್ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನನ್ನ ಎದುರಿನಿಂದ ಬಂದು ನನಗೆ ಡಿಕ್ಕಿಪಡಿಸಿದನು ಆಗ ನಾನು ಪುಟಿದು ರಸ್ತೆಯ ಮೇಲೆ ಬಿದ್ದೆನು. ಅದನ್ನು ನೋಡಿದ ಮಹಮ್ಮದ್ ಉಮರ್ ಹಾಗೂ ಮಹಮ್ಮದ್ ಅನೀಸ್ ಇವರು ಬಂದು ನನಗೆ ಎಬ್ಬಿಸಿ ರಸ್ತೆಯ ಬದಿಯಲ್ಲಿ ಕೂಡಿಸಿ ನೋಡಲು ಸದರ ಘಟನಯಿಂದ ನನ್ನ ಎಡಗಾಲಿನ ಕಪಗಂಡ ಹತ್ತಿರ ಭಾರಿ ಒಳಪೆಟ್ಟು ಮತ್ತು ಬಲಗಾಲಿನ ಮೋಳಕಾಲಿಗೆ ಗುಪ್ತಗಾಯವಾಗಿದ್ದು ನನಗೆ ಡಿಕ್ಕಿಪಡಿಸಿದ ಕಾರ್ ನಂಬರ ನೋಡಲು ಕೆ.ಎ-32 ಎಂ-3234 ನೇದ್ದು ಇದ್ದು ಅದರ ಚಾಲಕನಿಗೆ ನೋಡಲು ಆತನು ನಿಲ್ಲುವ ಹಾಗೆ ಮಾಡಿ ನಮ್ಮ ಕಡೆಗೆ ನೋಡುತ್ತ ತನ್ನ ಕಾರ ಸಮೇತ ಓಡಿಹೋಗಿರುತ್ತಾನೆ. ಆತನಿಗೆ ನೋಡಿದ್ದು ಮುಂದೆ ನೋಡಿದ್ದಲ್ಲಿ ಗುರುತಿಸುತ್ತೇನೆ. ಮಹಮ್ಮದ್ ಉಮರ್ ಮತ್ತು ಮಹಮ್ಮದ್ ಅನಿಸ್ ಇಬ್ಬರು ಸೇರಿ ಅಲ್ಲಿಯೇ ಹೋಗುತ್ತಿದ್ದ ಒಂದು ಆಟೋರಿಕ್ಷಾ ನಿಲ್ಲಿಸಿ ನನಗೆ ಅದರಲ್ಲಿ ಕೂಡಿಸಿಕೊಂಡು ಉಪಚಾರ ಕುರಿತು ಕಲಬುರಗಿ ನಗರದ ಸೌಧಾಗರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ನಾನು ದಿನಾಂಕ: 06-02-2023 ರಂದು ಹೆಚ್ಚಿನ ಉಪಚಾರ ಕುರಿತು ಸೋಲಾಪೂರದ ಐಯ್ಯರ್ ಆಸ್ಪತ್ರೆಗೆ ಹೋಗಿ ಉಪಚಾರ ಪಡೆದುಕೊಂಡು ಇಂದು ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ.  ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತನ್ನ ಕಾರ್ ಸಮೇತ  ಓಡಿಹೊದ ಸದರಿ ಕಾರ್ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೆಕೆಂದು ಫಿರ್ಯಾದಿ ನೀಡಿದ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ -1 :- ದಿನಾಂಕ: 25-02-2023 ರಂದು ಮದ್ಯಾಹ್ನ 2:15 ಗಂಟೆಗೆ ಶ್ರೀ. ಉಸ್ಮಾನ ಸಿಪಿಸಿ-04 ರವರು ಠಾಣೆಗೆ ಬಂದು ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿ ಹಾಜರುಪಡಿಸಿದ್ದರ ಸಾರಾಂಶವೆನೆಂದರೆ ನಾನು ಉಸ್ಮಾನ ಸಿಪಿಸಿ-04 ವಯ:52 ವರ್ಷ ಜಾ: ಮುಸ್ಲಿಂ ಉ: ಪೊಲೀಸ್ ಅಧಿಕಾರಿ ಸಾ: ಸಂಚಾರ ಪೊಲೀಸ್ ಠಾಣೆ-01, ಕಲಬುರಗಿ ನಗರ, ಈ ಮೂಲಕ ನಾನು ಸರಕಾರ ತರ್ಫೆ ದೂರು ಸಲ್ಲಿಸುವದೇನೆಂದರೆ ದಿನಾಂಕ: 25-02-2023 ರಂದು ಬೆಳಿಗ್ಗೆ 8:00 ಗಂಟೆಗೆ ಕರ್ತವ್ಯ ಕುರಿತು ಠಾಣೆಗೆ ಹಾಜರಾಗಿದ್ದು ನನಗೆ ಎಸ್.ಹೆಚ್.ಓ ರವರು ಬೆಳಿಗ್ಗೆ 9:00 ಗಂಟೆಯಿಂದ ಮದ್ಯಾಹ್ನ 1:00 ಗಂಟೆಯವರೆಗೆ ಹಾಗೂ ಸಾಯಂಕಾಲ 5:00 ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೆ ಟಿಪ್ಪುಸುಲ್ತಾನ ಚೌಕ್ ಸಂಚಾರ ನಿಯಂತ್ರಣ ಕುರಿತು ಪಾಯಿಂಟ್ ಕರ್ತವ್ಯಕ್ಕೆ ನೇಮಕ ಮಾಡಿ ಕಳುಹಿಸಿದ್ದು ಇರುತ್ತದೆ. ನಾನು ಕರ್ತವ್ಯದ ಮೇಲೆ ಇರುವಾಗ ಮದ್ಯಾಹ್ನ 12:30 ಗಂಟೆ ಸುಮಾರಿಗೆ ಸೆಡಂ ರಿಂಗ್ ರೋಡ್ ದಿಂದ ಹುಮನಾಬಾದ್ ರಿಂಗ್ ರೋಡ್ ರಸ್ತೆಯಲ್ಲಿ ಬರುವ ಟಿಪ್ಪುಸುಲ್ತಾನ ಚೌಕ್ ಹತ್ತಿರ ಇರುವ ರಾಯದಾನ್ ಹೋಟೆಲ್ ಎದುರಿನ ರಸ್ತೆ ಮೇಲೆ ಭಾರತ ಬೆಂಜ್ ಟಿಪ್ಪರ ನಂಬರ ಕೆ.ಎ-33 ಎ-4328 ನೇದ್ದರ ಚಾಲಕನು ಸಾರ್ವಜನಿಕ ಸಂಚಾರಕ್ಕೆ ಅಡೆತಡೆಯಾಗುವ ರೀತಿಯಲ್ಲಿ ರಸ್ತೆಯ ಮೇಲೆ ನಿಷ್ಕಾಳಜಿತನದಿಂದ ತನ್ನ ವಾಹನ ನಿಲ್ಲಿಸಿದ್ದರಿಂದ ಹೋಗುವ ಬರುವ ವಾಹನಗಳಿಗೆ ತೊಂದರೆ ಆಗುತ್ತಿದ್ದಿದ್ದು ಇರುತ್ತದೆ. ಈ ವೇಳೆಗೆ ಅಲ್ಲಿಯೇ ಹೋಗುತ್ತಿದ್ದ ನಮ್ಮ ಠಾಣೆಯ ಶ್ರೀ. ಆಸೀಫ್ ಹೆಚ್.ಸಿ-131 ರವರು ಬಂದಿದ್ದು ಸದರಿ ವಿಚಾರ ಅವರಿಗೆ ತಿಳಿಸಿದ್ದು ಆಗ ನಾನು ಮತ್ತು ಶ್ರೀ. ಆಸೀಫ್ ಹೆಚ್.ಸಿ-131 ರವರು ಸೇರಿ ಸದರಿ ಟಿಪ್ಪರ್ ಚಾಲಕನ ಹೆಸರು ವಿಚಾರಿಸಲು ಗುಡುಲಾಲ್ ಶೇಖ್ ತಂದೆ ಮಹಿಬೂಬ್ ಶೇಖ್ ವಯ: 35 ವರ್ಷ, ಜಾತಿ: ಮುಸ್ಲಿಂ ಉ: ಟಿಪ್ಪರ್ ಚಾಲಕ ಸಾ: ತಾಜ್ ನಗರ ಮುಸ್ಲಿಂ ಸಂಘ, ಕಲಬುರಗಿ ಅಂತ ಗೋತ್ತಾಗಿದ್ದು ಇರುತ್ತದೆ. ಆದ್ದರಿಂದ ಸಾರ್ವಜನಿಕರಿಗೆ ಸಂಚರಿಸಲು ಅಡೆತಡೆಯಾಗುವ ರೀತಿಯಲ್ಲಿ ನಿಲ್ಲಿಸಿದ  ಭಾರತ ಬೆಂಜ್ ಟಿಪ್ಪರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರೋಜಾ ಪೊಲೀಸ್‌ ಠಾಣೆ :- ದಿನಾಂಕ: 25/02/2023  ರಂದು ಬೆಳೆಗ್ಗೆ 11:45 ಗಂಟೆಗೆ ಲಾರಿ ನಂ. 01) KA 28 C 6250, 02) KA 33 A 7088, 03)  KA 36 A 1401 ನೇದ್ದವುಗಳ ಚಾಲಕರು  ತಮ್ಮ ವಾಹನಗಳನ್ನು ರಿಂಗ ರೋಡ್ ನಲ್ಲಿ ಸಂಚಾರಿಸುತ್ತಿರುವ ವಾಹನಗಳಿಗೆ ಅಡತಡೆಯಾಗುವಂತೆ ತಮ್ಮ  ವಾಹನಗಳನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿದ್ದರು. ಕಾರಣ ಸದರಿ ವಾಹನಗಳ ಚಾಲಕರಿಗೆ ಹೇಳಿ ರಸ್ತೆಯ ಮದ್ಯದಲ್ಲಿ ನಿಲ್ಲಿಸಿದ ವಾಹನಗಳನ್ನು ತೆರುವುಗೊಳಿಸಿ, ರಿಂಗ ರೋಡ್ ನಲ್ಲಿ ಸುಮಾರು ವಾಹನಗಳು ನಿಂತು ಸಂಚಾರವು ಸಂಪೂರ್ಣವಾಗಿ ಜಾಮ್ ಆಗಿರುತ್ತದೆ. ರಸ್ತೇಯ ಮಧ್ಯದಲ್ಲಿ ವಿನಾಕಾರಣ ತಮ್ಮ ವಾಹನಗಳನ್ನು ನಿಲ್ಲಿಸಿ ಇತರ ವಾಹನಗಳ ಸಂಚಾರಕ್ಕೆ ಅಡತಡೆ ಉಂಟು ಮಾಡಿದ್ದರಿಂದ ಈ ಮೇಲಿನ 03 ಜನ ಲಾರಿ  ಚಾಲಕರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ವರದಿ ನೀಡಿದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 25-02-2023 ರಂದು ರಾತ್ರಿ 8:25 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಅರ್ಚನಾ ತಂದೆ ಪೋಪಟ್ ರಣಕಾಂಬೆ ವಯ:29 ವರ್ಷ ಜಾ:ಹೋಲೆಯ ಉ:ಜಿಮ್ಸ್ ಆಸ್ಪತ್ರೆಯಲ್ಲಿ ನರ್ಸ ಕೆಲಸ ಸಾ|| ಕಾರಬಾರಿ ಆಸ್ಪತ್ರೆ ಹತ್ತಿರ ಶಕ್ತಿನಗರ ಕಲಬುರಗಿ ನಗರ. ರವರು ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದರ ಸಾರಾಂಶವೆನೆಂದರೆ, ನನ್ನ ಅಣ್ಣನಾದ ಅವಿನಾಶ ತಂದೆ ಪೋಪಟ್ ರಣಕಾಂಬೆ ಇವರ ಹೆಸರಿನಲ್ಲಿ ಒಂದು ಹೊಂಡಾ ಡಿಯೋ ಮೋಟಾರ್ ಸೈಕಲ್ ನಂ KA-28-ES-0715 ನೇದ್ದು ಇದ್ದು ಅದನ್ನು ನಾನು ನೆಡೆಸಿಕೊಂಡು ಹೋಗಿರುತ್ತೆನೆ. ನಾನು ಜಿಮ್ಸ್ ಆಸ್ಪತ್ರೆಯಲ್ಲಿ ನರ್ಸ ಅಂತಾ ಕೆಲಸ ನಿರ್ವಹಿಸುತ್ತಿರುವುದರಿಂದ ನಿನ್ನೆ ದಿನಾಂಕ: 24-02-2023 ರಂದು ಮಧ್ಯಾಹ್ನ 2:00 ಗಂಟೆ ಸುಮಾರಿಗೆ ಆಸ್ಪತ್ರೆಗೆ ಕೆಲಸಕ್ಕೆ ಬರುವ ಸಂಬಂಧ ನನ್ನ ಅಣ್ಣನ ಹೊಂಡಾ ಡಿಯೋ ಮೋಟಾರ್ ಸೈಕಲ್ ನಂ KA-28-ES-0715 ನೇದ್ದು ತೆಗೆದುಕೊಂಡು ಬಂದು ಆಸ್ಪತ್ರೆ ವಾಹನ ನಿಲ್ಲಿಸುವ ಸ್ಥಳದಲ್ಲಿ ನಿಲ್ಲಿಸಿ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ ಅಂದಾಜು 9:30 ಗಂಟೆ ಸುಮಾರಿಗೆ ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲಾ, ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 27-02-2023 11:17 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080