ಅಭಿಪ್ರಾಯ / ಸಲಹೆಗಳು

   ಚೌಕ ಪೊಲೀಸ್ ಠಾಣೆ:-   ದಿನಾಂಕ 25-02-2022 ರಂದು ಬೆಳಿಗ್ಗೆ ೧೦.೦೦  ಗಂಟೆಗೆ ಫಿರ್ಯಾಧಿ ಶ್ರೀ ಎಂ.ಡಿ ಮಹಿಮೂದ ಅಲಿ ತಂದೆ ಎಂ.ಡಿ ಮಹಿಬೂಬ ಅಲಿ ವ:೬೦ ವರ್ಷ  ಉ: ವ್ಯಾಪಾರ (ಬ್ಯೂಜಿನೆಸ್) ಜ್ಯಾ:ಮುಸ್ಲಿಂ ಸಾ: ಮನೆ.ನಂ. 11-1115 ಮಜೀದ ಗಲ್ಲಿ ಜೀಲಾನಾಬದ ಎಂ.ಎಸ್.ಕೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ದೂರು ರ‍್ಜಿಯ ಸಾರಾಂಶ ಈ ಕೆಳಗಿನಂತೆ ಇರುತ್ತದೆ   ನಾನು ಎಂ.ಡಿ ಮಹಿಮೂದ ಅಲಿ ತಂದೆ ಎಂ.ಡಿ ಮಹಿಬೂಬ ಅಲಿ ವ:೬೦ ರ‍್ಷ ಉ:ಖಾಸಗಿ ಕೆಲಸ ಜ್ಯಾ:ಮುಸ್ಲಿಂ ಸಾ: ಮನೆ.ನಂ. 11-1115 ಮಜೀದ ಗಲ್ಲಿ ಜೀಲನಾಬದ ಎಂ.ಎಸ್.ಕೆ ಮಿಲ್ ಕಲಬುರಗಿ ಆಗಿದ್ದು ತಮ್ಮಲ್ಲಿ ದೂರು ಕೊಡುವುದೇನೆಂದರೆ, ಸುಮಾರು ೫ ರ‍್ಷಗಳ ಹಿಂದೆ ಅಶೋಕ ಲೇ ಲ್ಯಾಂಡ ಕಂಪನಿಯ ಟಿಪ್ಪರ ನಂ. AP26Y1158 ನೇದ್ದು 4,50,000/-ರೂ ಗೆ ೩ನೇ ಮಾಲೀಕನಾಗಿ ಖರೀದಿಮಾಡಿಕೊಂಡು ಕಲಬುರಗಿ ಸುತ್ತಮುತ್ತ ಬಾಡಿಗೆಯಿಂದ ಮಣ್ಣಿನ ಮುರುಮ ಮತ್ತು ಕಲ್ಲು ಚುರುಗಳನ್ನು ಸಾಗಿಸುವುದಕ್ಕಾಗಿ ನಡೆಸಿಕೊಂಡು ಬಂದಿರುತ್ತೇನೆ. ಸುಮಾರು ೪ ತಿಂಗಳಿಂದ ಯಾವುದೇ ಬಾಡಿಗೆ ಇಲ್ಲದ ಪ್ರಯುಕ್ತ ಲಿಮ್ರಾ ಮೋಟಾರ ಗ್ಯಾರೇಜ ಅಟೋ ನಗರ ಆಳಂದ ಚಕ್ಕ ಪೋಸ್ಟ ಕಲಬುರಗಿ ಹತ್ತಿರ ನಿಲ್ಲಿಸದಿದ್ದು ಇರುತ್ತದೆ. ಹೀಗಿದ್ದು ದಿನಾಂಕ:೧೩.೦೧.೨೦೨೨ ರಂದು ಮುಂಜಾನೆ ೧೧.೦೦ ಗಂಟೆಗೆ ಇಸ್ಲಾಮಾಬಾದ ಕಾಲೋನಿಯಲ್ಲಿರುವ ನನ್ನ ಸಹೋದರಿಯವರ ಮನೆಗೆ ಹೋಗಿ ಮರಳಿ ಹುಮನಾಬಾದ ರಿಂಗ್ ರೋಡ ದಿಂದ ಮನೆಗೆ ಹೋಗುವಾಗ ದಾರಿ ಮಧ್ಯದಲ್ಲಿರುವ ಅಟೋ ನಗರದ ಲಿಮ್ರಾ ಗ್ಯಾರೇಜ ಹತ್ತಿರ ನಿಲ್ಲಿಸಿದ ನನ್ನ ಟಿಪ್ಪರ ನಂ. AP26Y1158 ನೇದ್ದನ್ನು ನೋಡಲಾಗಿ ಕಾಣಿಸದೆ ಇರುವುದರಿಂದ , ನಾನು ನಿಲ್ಲಿಸಿದ ಸ್ಥಳಕ್ಕೆ ಹೋಗಿ ಸುತ್ತು ಮುತ್ತ ತಿರುಗಾಡಿ ನೋಡಿ ನನ್ನ ಟಿಪ್ಪರ ಇದ್ದಿರುವುದಿಲ್ಲ. ನಾನು ಭಯಭೀತನಾಗಿ ಈ ವಿಷಯವನ್ನು ಲಿಮ್ರಾ ಗ್ಯಾರೇಜ ಮಾಲೀಕನಾದ ಮಹ್ಮದ ಶಫಿ ತಂದೆ ಮಹ್ಮದ ಅನ್ವರ ಮತ್ತು ನನ್ನ ತಂಗಿಯ ಮಗನಾದ ಮುಕ್ತದೀರ ಅಹ್ಮದ ಖಾನ ತಂದೆ ಬಸೀರ ಅಹ್ಮದ ಖಾನ ರವರಿಗೆ ತಿಳಿಸಿದ್ದರಿಂದ ಅವರು ಅಲ್ಲಿಗೆ ಬಂದು ನಾವೆಲ್ಲರೂ ಕೂಡಿಕೊಂಡು ಟಿಪ್ಪರ ನಿಲ್ಲಿಸಿದ ಸ್ಥಳದ ಸುತ್ತ ಮುತ್ತಾ, ಲಾರಿ ತಂಗುದಾಣ ತಾವರಗೇರಾ ಕ್ರಾಸ, ಅಜಾದಪೂರ ಕ್ರಾಸ, ನಂದೂರ ಕ್ರಾಸ ಕಡೆಗೆ ಹುಡಕಾಡಿ ನನ್ನ ಟಿಪ್ಪರ ಪತ್ತೆಯಾಗಿರುವುದಿಲ್ಲ ಹಾಗೂ ನಾನು ಮತ್ತು  ಮುಕ್ತದೀರ ಅಹ್ಮದ ಖಾನ ಕೂಡಿಕೊಂಡು  ಬಸವಕಲ್ಯಾಣಕ್ಕೆ ಹೋಗಿ ವಿಚಾರಿಸಲಾಗಿಯೂ ಸಹ ನನ್ನ ಟಿಪ್ಪರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ಯಾರೋ ಕಳ್ಳರು ದಿನಾಂಕ:೧೩.೦೧.೨೦೨೨ ರಂದು ಮಧ್ಯರಾತ್ರಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ಎಲ್ಲಾ ಕಡೆಗೂ ಹುಡಿಕಾಡಿ ಎಲ್ಲಿಯಾದರೂ ಸಿಗಬಹುದು ಅಂತ ಪೊಲೀಸ ಠಾಣೆಗೆ ಬಂದು ದೂರು ಕೊಟ್ಟಿರುವುದಿಲ್ಲ. ಎಲ್ಲಾ ಕಡೆ ಹುಡಕಾಡಿ ಟಿಪ್ಪರ ಪತ್ತೆಯಾಗದೇ ಇರುವುದರಿಂದ ಇಂದು ಪೊಲೀಸ ಠಾಣೆಗೆ ಬಂದು ತಡವಾಗಿ ದೂರು ಕೊಟ್ಟಿದ್ದು ಇರುತ್ತದೆ.

     ಸದರಿ ಕಳುವಾದ ನನ್ನ ಟಿಪ್ಪರನ  ವಿವರ  ಈ ಕೆಳಗಿನಂತಿರುತ್ತದೆ.

        ಟಿಪ್ಪರ ವಿವರ          :  ASHOL LEYLAND

         ಟಿಪ್ಪರ ನಂ              :   AP26Y1158

          ಟಿಪ್ಪರ ಚೆಸ್ಸಿ ನಂ      :  NPH127225

         ಟಿಪ್ಪರ ಇಂಜೀನ ನಂ    :  TPE442385

     ಟಿಪ್ಪರ ಮಾದರಿ         : 2017, 2516/2    TIPPER/GOODS

        ಟಿಪ್ಪರ ಬಣ್ಣ          :  YELLOW

         ಟಿಪ್ಪರ ಅಂದಾಜಿ ಕಿಮ್ಮತ್ತು  :  150,000/- ರೂ ಇರುತ್ತದೆ.

         ನನ್ನ ಟಿಪ್ಪರ ನಂ. AP26Y1158 ನೇದ್ದನ್ನು ಕಳ್ಳತನ ಮಾಡಿಕೊಂಡು ಹೋದವರ ವಿರುದ್ದ ಕಾನೂನು ಕ್ರಮ ಕೈಕೊಂಡು ಕಳುವಾದ ನನ್ನ ಟಿಪ್ಪರ  ಪತ್ತೆ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 03-03-2022 12:14 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080