ಅಭಿಪ್ರಾಯ / ಸಲಹೆಗಳು

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 24-01-2023  ರಂದು ೭-೩೦ ಪಿ.ಎಮ್ ಕ್ಕೆ ಜಂಬಗಾ(ಬಿ) ಗ್ರಾಮದಲ್ಲಿ ಆಪಾದಿತನು ಕುಡಿದ ಅಮಲಿನಲ್ಲಿ ತನ್ನ ಮನೆಯ ಮುಂದೆ ಬಂದು ತನ್ನ ತಂದೆ ಜೊತೆಗೆ ಜಗಳ ತೆಗೆದು ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದು. ಉಪಚಾರ ಕುರಿತು ಮಣೂರು ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ.  ದಿನಾಂಕ 25-01-2023 ರಂದು ಬೆಳಿಗ್ಗೆ ೫-೫೦ ಸುಮಾರಿಗೆ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ ಠಾಣೆ -1 :- ದಿನಾಂಕ 25-01-2023 ರಂದು ಸಾಯಂಕಾಲ 5-15 ಗಂಟೆಗೆ ಸರ್ಕಾರಿ ಆಸ್ಪತ್ರೆಯ ಓ.ಪಿ ರವರು ಠಾಣೆಗೆ ಪೋನ ಮಾಡಿ ರಸ್ಯೆ ಅಪಘಾತ ಹೊಂದಿ ಉಪಚಾರ ಪಡೆಯುತಿದ್ದ ಅಪರಿಚಿತ ಗಂಡು ಮನುಷ್ಯ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ವಿಚಾರಿಸಲು ಸರ್ಕಾರಿ ಆಸ್ಪತ್ರೆಯಲ್ಲಿದ್ದ ಮತ್ತು ಘಟನೆ ಬಗ್ಗೆ ತಿಳಿದುಕೊಂಡಿದ್ದ ಶ್ರೀ ಮಹಿಬೂಬ @ ಬಾಬಾ ತಂದೆ ಸಿಲಾರಸಾಬ ಲಾಲಶೇರ್ ಸಾ: ವಿದ್ಯಾ ನಗರ ಕಲಬುರಗಿ ಇವರು ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ 14.12.2022 ರಂದು ರಾತ್ರಿ ಸಮಯದಲ್ಲಿ ರೈಲ್ವೆ ಸ್ಟೇಷನದಿಂದ ನನ್ನ ಆಟೋರಿಕ್ಷಾ ವಾಹನವನ್ನು ಚಲಾಯಿಸಿಕೊಂಡು ಸುಪರ ಮಾರ್ಕೆಟ ಕಡೆಗೆ ಎಸ.ವಿ.ಪಿ ಸರ್ಕಲ ಮುಖಾಂತರ ಹೋಗುತ್ತೀರುವಾಗ ಮಿನಿ ವಿಧಾನ ಸೌಧದ ಗೇಟಿನ ಹತ್ತೀರ ಬರುವ ಪುಟಪಾತ ಹತ್ತೀರ ರೋಡ ಮೇಲೆ ಒಬ್ಬ ಮನುಷ್ಯ ಬಿದ್ದಿದ್ದ ಒಂದು ಅಂಬುಲೇನ್ಸ ವಾಹನ ಕೂಡಾ ಬಂದಿತ್ತು ನಾನು ಆಟೋರಿಕ್ಷಾ ನಿಲ್ಲಿಸಿ ಬಿದ್ದ ಮನುಷ್ಯನನ್ನು ನೋಡಲಾಗಿ ಸದರಿಯವನು ಬೇಹೊಸ ಇದ್ದನ್ನು.  ಆತನ ಎಡ ಟೊಂಕಿಕೆ ಮತ್ತು ಎಡ ತೊಡೆಗೆ ಉಬ್ಬಿದ್ದ ಗುಪ್ತಗಾಯವಾಗಿತ್ತು. ಅಲ್ಲಿ ನೆರದ ಜನರು ರಾತ್ರಿ 9-00 ಗಂಟೆ ಸುಮಾರಿಗೆ ಯಾವುದೊ ಒಂದು ವಾಹನದ ಚಾಲಕ/ ಸವಾರನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಆತನಿಗೆ ಡಿಕ್ಕಿಪಡಿಸಿ ಹೋಗಿತ್ತಾನೆ ಅಂತಾ ಮಾತನಾಡುತ್ತಿದ್ದರು. ಸದರಿಯವನ ಹೆಸರು ವಿಳಾಸ ಗೋತ್ತಾಗಲಿಲ್ಲ ಸದರಿಯವನು ಸಾದಾಗಪ್ಪು ಮೈಬಣ್ಣಾ ಕೊಲುಮುಖ, ತೆಳ್ಳನೆ ಮೈಕಟ್ಟು, ಅಂದಾಜು 60 ರಿಂದ 65 ವರ್ಷದ ಗಂಡು ಮನುಷ್ಯನಿದ್ದು ಸದರಿಯವನು ಉದ್ದೆನೆಯ ಗದ್ದ ಜಡೆಗಟ್ಟಿದ ಕುದಲು ಹೊಂದಿದ್ದನ್ನು ಸದರಿಯವನ ಉಪಚಾರ ಕುರಿತು 108 ಅಂಬುಲೇನ್ಸ ವಾಹನದವರು ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗುತ್ತೆವೆ ಅಂತಾ ಹೋದರು. ಇಂದು ದಿನಾಂಕ 25-01-2023 ರಂದು ನಾನು ಸರ್ಕಾರಿ ಆಸ್ಪತ್ರೆಯಲ್ಲಿರುವ ಅರ್ಥೊ ವಾರ್ಡನಲ್ಲಿ ನಮ್ಮ ಸಂಬಂದಿಕರನ್ನು ಮಾತನಾಡಸಲು ಮದ್ಯಾಹ್ನ ಹೋದಾಗ ದಿನಾಂಕ 14-12-2022 ರಂದು ವಿಧಾನ ಸೌಧದ ರೋಡ ಪಕ್ಕದಲ್ಲಿ ಅಪಘಾತ ಹೊಂದಿದ ಅಪರಿಚಿತ ವ್ಯಕ್ತಿ ಉಪಚಾರ ಪಡೆಯುತ್ತಿದ್ದನ್ನು ನಾನು ಆತನನ್ನು ನೋಡಿದೆನು. ಸದರಿಯವನಿಗೆ ಮಾತನಾಡಿಸಲು ಮಾತನಾಡಲಿಕ್ಕೆ ಬರಲಿಲ್ಲ, ಬೇಹೊಸ ಇದ್ದನ್ನು. ವೈದ್ಯರು ಮದ್ಯಾಹ್ನ 1-12 ಗಂಟೆಗೆ ಸದರಿ ಅಪರಿಚಿತ ವ್ಯಕ್ತಿಗೆ ಪರಿಕ್ಷೀಸಿ ಉಸಿರಾಟ ನಿಂತು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ ಅಪರಿಚತ ಮೃತನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ವಾಹನ ಮತ್ತು ಅದರ ಚಾಲಕನ ಹೆಸರು ವಿಳಾಸ ಗೋತ್ತಾಗಿರುವದಿಲ್ಲ.    ಯಾವುದೋ ಒಂದು ವಾಹನದ ಚಾಲಕ/ಸವಾರನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಪರಿಚಿತ ಮನುಷ್ಯನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆತನಿಗೆ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿದ್ದು ಅಪರಿಚಿತ ಗಂಡು ಮನುಷ್ಯನಿಗೆ ಭಾರಿಗಾಯದ ಉಪಚಾರ ಕುರಿತು ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ಅಪರಿಚಿತ ಮನುಷ್ಯ ಗಾಯದ ಉಪಚಾರ ಪಡೆಯುತ್ತಾ ಗಾಯದ ಉಪಚಾರ ಫಲಕಾರಿಯಾಗದೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಯಾವುದೋ ಒಂದು ವಾಹನದ ಚಾಲಕ/ಸವಾರನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಅರ್ಜಿಸಾರಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಅಶೋಕ ನಗರ ಪೊಲೀಸ ಠಾಣೆ :- ದಿನಾಂಕ:25.01.2023 ರಂದು 03:00 ಪಿ.ಎಂ ಕ್ಕೆ ಎ.ವಾಜೀದ ಪಟೇಲ್, ಪೊಲೀಸ ನಿರೀಕ್ಷಕರು, ಸಿ.ಸಿ.ಬಿ. ಘಟಕ, ಕಲಬುರಗಿ ನಗರ ರವರು ಮೂರು ಜನ  ಆಪಾದಿತರನ್ನು  ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ವರದಿ ಜೊತೆ ಜಪ್ತಿ ಪಂಚನಾಮೆ ಹಾಜರ ಪಡಿಸಿದ್ದು,  ಸದರಿ ವರದಿಯ ಸಂಕ್ಷಿಪ್ತ ಸಾರಾಂಶವೆನೆಂದರೆ, ಇಂದು ದಿನಾಂಕ 25.01.2023 ರಂದು ಬೆಳಿಗ್ಗೆ 8-00 ಗಂಟೆಗೆ ನಾನು ಸಿ.ಸಿ.ಬಿ. ಕಛೇರಿಯಲ್ಲಿದ್ದಾಗ ನನಗೆ ಕಲಬುರಗಿ ನಗರದ ಸೆಂಟ್ರಲ್ ಬಸಸ್ಟ್ಯಾಂಡ ಹತ್ತಿರ ಇರುವ ಪಬ್ಲಿಕ್ ಶೌಚಾಲಯದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಕೆಲವು ಜನರು ಅನಧಿಕೃತವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕುರಿತು ಇಬ್ಬರೂ ಪಂಚರಾದ 1) ಶ್ರೀ ಗುಂಡಪ್ಪ ತಂದೆ ರಾಮಚಂದ್ರ ಪಟ್ಟೇದಾರ, ವ:42 ವರ್ಷ, ಜಾತಿ:ಎಸ್.ಸಿ., ಉ:ತರಕಾರಿ ವ್ಯಾಪಾರ, ಸಾ:ಬಸವನ ನಗರ, ಕಲಬುರಗಿ ಮೊ.ನಂ.7022622998, 2) ಶ್ರೀ ಶೇಖ ಕರೀಮ ತಂದೆ ಶೇಖ ಹಾಜಿ ಅರಬ, ವ:25 ವರ್ಷ, ಜಾತಿ:ಮುಸ್ಲಿಂ, ಉ:ಹೊಟೇಲ ಕೆಲಸ, ಸಾ:ಎಂ.ಎಸ್.ಕೆ. ಮಿಲ್, ಕಲಬುರಗಿ ಮೊ.ನಂ.7022641390, ರವರನ್ನು ಸಿ.ಸಿ.ಬಿ. ಕಛೇರಿಗೆ ಬೆಳಿಗ್ಗೆ 8-20 ಗಂಟೆಗೆ ಬರಮಾಡಿಕೊಂಡು ಕಛೇರಿಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ವೇದರತ್ನಂ ಹೆಚ್.ಸಿ-51, 2) ಶರಣಬಸಪ್ಪ ಹೆಚ್.ಸಿ-94, 3) ಸುನೀಲಕುಮಾರ ಹೆಚ್.ಸಿ-167, 4) ಯಲ್ಲಪ್ಪ ಸಿಪಿಸಿ-220, 5) ಶಿವಕುಮಾರ ಸಿಪಿಸಿ-16715 ರವರುಗಳಿಗೆ ಪರಿಚಯಿಸಿ ಸದರಿ ಪಂಚರಿಗೆ ವಿಷಯ ತಿಳಿ ಹೇಳಿ ದಾಳಿ ಕಾಲಕ್ಕೆ ಹಾಜರಿದ್ದು, ಪಂಚನಾಮೆ ಬರೆಯಿಸಿಕೊಂಡುವಂತೆ ಕೋರಿಕೊಂಡಾಗ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ.  ನಂತರ ನಾನು, ಪಂಚರು, ಮತ್ತು ಸಿ.ಸಿ.ಬಿ ಘಟಕ ಸಿಬ್ಬಂದಿಯವರಾದ 1) ವೇದರತ್ನಂ ಹೆಚ್.ಸಿ-51, 2) ಶರಣಬಸಪ್ಪ ಹೆಚ್.ಸಿ-94, 3) ಸುನೀಲಕುಮಾರ ಹೆಚ್.ಸಿ-167, 4) ಯಲ್ಲಪ್ಪ ಸಿಪಿಸಿ-220, 5) ಶಿವಕುಮಾರ ಸಿಪಿಸಿ-16715 ಎಲ್ಲರೂ ಕೂಡಿ ಸರ್ಕಾರಿ ಜೀಪ ನಂ.ಕೆಎ-32-ಜಿ-1249 ನೇದ್ದರಲ್ಲಿ ಹಾಗೂ ಕೆಲವು ಸಿಬ್ಬಂದಿಯವರು ತಮ್ಮ ತಮ್ಮ ಮೋಟಾರಸೈಕಲಗಳ ಮೇಲೆ ಬೆಳಿಗ್ಗೆ 8-30 ಗಂಟೆಗೆ ಸಿ.ಸಿ.ಬಿ. ಕಛೇರಿಯಿಂದ ಹೊರಟು ಬಾತ್ಮಿ ಬಂದ ಸ್ಥಳವಾದ ಕಲಬುರಗಿ ನಗರದ ಸೆಂಟ್ರಲ್ ಬಸಸ್ಟ್ಯಾಂಡ ಹತ್ತಿರ ಇರುವ ಪಬ್ಲಿಕ್ ಶೌಚಾಲಯದ ಹತ್ತಿರ ಬೆಳಿಗ್ಗೆ 8-55 ಗಂಟೆಗೆ ತಲುಪಿ ಅಲ್ಲಿಯೇ ಮರೆಯಲ್ಲಿ ನಿಂತು ನೋಡಲಾಗಿ ಮೂವರು ವ್ಯಕ್ತಿಗಳು ಅನಧೀಕೃವಾಗಿ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ಒಮ್ಮಲ್ಲೇ ಎಲ್ಲರೂ ಕೂಡಿ ಸದರಿ ವ್ಯಕ್ತಿಗಳನ್ನು ಹಿಡಿಯಲು ಹೋದಾಗ ಮದ್ಯ ಖರೀದಿಸುತ್ತಿದ್ದ ವ್ಯಕ್ತಿಗಳು ಓಡಿ ಹೋಗಿದ್ದು, ಮದ್ಯ ಮಾರಾಟ ಮಾಡುತ್ತಿದ್ದ ಮೂವರು ಜನರಿಗೆ ಬೆಳಿಗ್ಗೆ 9-00 ಗಂಟೆಗೆ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1) ಮಹಾಂತೇಶ ತಂದೆ ರಾಮಚಂದ್ರ ಟಕ್ಕಳಕಿ, ವ:50 ವರ್ಷ, ಜಾತಿ:ಮಾದಿಗ, ಉ:ಕೈಲಾನ ವೈನಶಾಪನಲ್ಲಿ ವೆಟರ್ ಕೆಲಸ, ಸಾ:ನಂದಕಿಶೋರ ಕಾಂಪ್ಲೆಕ್ಸ್ , ಪಿ&ಟಿ ಕಾಲೋನಿ ಹತ್ತಿರ ಕಲಬುರಗಿ, 2) ಉದಯ ತಂದೆ ವೆಂಕಯ್ಯ ಗುತ್ತೇದಾರ, ವ:35 ವರ್ಷ, ಜಾತಿ:ಗುತ್ತೇದಾರ, ಉ:ನ್ಯೂ ತ್ರಿಶೂಲ ಬಾರನಲ್ಲಿ ವೆಟರ್ ಕೆಲಸ, ಸಾ:ಶಹಾಪೂರ, ಜಿ:ಯಾದಗಿರ, ಹಾವ:ನ್ಯೂ ತ್ರಿಶೂಲ ಬಾರ, ಬಸಸ್ಟ್ಯಾಂಡ ಹತ್ತಿರ ಕಲಬುರಗಿ, 3) ಬಸವರಾಜ ತಂದೆ ದಶರಥ ಮರಾಠಾ, ವ:48 ವರ್ಷ, ಜಾತಿ:ಮರಾಠಾ, ಉ:ಸುಹಾನಾ ಬಾರನಲ್ಲಿ ವೇಟರ ಕೆಲಸ, ಸಾ:ನಂದಿಕೂರ, ತಾ:ಜಿ:ಕಲಬುರಗಿ ಅಂತಾ ತಿಳಿಸಿದರು. ಸದರಿಯವರಿಗೆ ಮದ್ಯವನ್ನು ಮಾರಾಟ ಮಾಡುವುದಕ್ಕೆ ತಮ್ಮ ಹತ್ತಿರ ಯಾವುದಾದರೂ ಪರವಾನಿಗೆ ಇದ್ದರೇ ಹಾಜರಪಡಿಸಿ ಎಂದು ತಿಳಿಸಿದಾಗ ತಮ್ಮ ಹತ್ತಿರ ಯಾವುದೇ ಪರವಾನಿಗೆ ಇರುವುದಿಲ್ಲ ಅಂತಾ ತಿಳಿಸಿದರು.   ಅವರ ಹತ್ತಿರ ದೊರೆತ ಮದ್ಯದ ಬಾಟಲಿ/ಟೆಟ್ರಾ ಪಾಕೇಟಗಳನ್ನು ಪರಿಶೀಲಿಸಿ ನೋಡಲಾಗಿ ಓರಿಜನಲ್ ಚಾಯ್ಸ್ 90 ಎಂ.ಎಲ್.ನ 2 ಕಾಟನ ಬಾಕ್ಸಗಳು ದೊರೆತಿದ್ದು, ಪ್ರತಿ ಕಾಟನ ಬಾಕ್ಸನಲ್ಲಿ 96 ಟೆಟ್ರಾ ಪಾಕೇಟಗಳು ಇದ್ದು, ಪ್ರತಿಯೊಂದಕ್ಕೆ ರೂ.35/- ರಂತೆ ಒಟ್ಟು 192 ಟೆಟ್ರಾ ಪಾಕೇಟಗಳಿಗೆ ರೂ.6720/- ಇರುತ್ತದೆ. ಹೀಗೆ ಒಟ್ಟು ರೂ.6720/- ಮೌಲ್ಯದ ಮದ್ಯದ ಬಾಟಲಿಗಳನ್ನು ಜಪ್ತುಪಡಿಸಿಕೊಂಡು,  ನಂತರ  ಮಹಾಂತೇಶ ತಂದೆ ರಾಮಚಂದ್ರ ಟಕ್ಕಳಕಿ ಈತನ ಅಂಗ ಶೋಧನೆ ಮಾಡಲು ಅವನ ಹತ್ತಿರ ಮದ್ಯ ಮಾರಾಟ ಮಾಡಿದ ನಗದು ಹಣ ರೂ.550/- ದೊರೆತಿದ್ದು, ನಂತರ ಉದಯ ತಂದೆ ವೆಂಕಯ್ಯ ಗುತ್ತೇದಾರ ಈತನ ಅಂಗ ಶೋಧನೆ ಮಾಡಲು ಅವನ ಹತ್ತಿರ ಮದ್ಯ ಮಾರಾಟ ಮಾಡಿದ ನಗದು ಹಣ ರೂ.1050/- ಗಳು ದೊರೆತಿದ್ದು, ಬಸವರಾಜ ತಂದೆ ದಶರಥ ಮರಾಠಾ ಈತನಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ ಮದ್ಯ ಮಾರಾಟ ಮಾಡಿದ ನಗದು ಹಣ ರೂ.450/- ದೊರೆತಿದ್ದು, ಹೀಗೆ ಒಟ್ಟು ನಗದು ಹಣ ರೂ.2050/- ದೊರೆತಿದ್ದು ಇರುತ್ತದೆ.  ನಂತರ ಸದರಿಯವರಿಗೆ ಮದ್ಯದ ಬಾಟಲಿಗಳನ್ನು ಏಲ್ಲಿಂದ ತಂದು ಮಾರಾಟ ಮಾಡುತ್ತಿರುವೀರಿ ಅಂತಾ ವಿಚಾರಿಸಿದಾಗ ವಿಚಾರಿಸಿದಾಗ ಅವರು ಕೈಲಾಸ ವೈನಶಾಪ ಮ್ಯಾನೇಜರ ಆದ ನಾಗರಾಜ ತಂದೆ ಮಲ್ಲಯ್ಯ ಗುತ್ತೇದಾರ ಇವರು ಮಾರಾಟ ಮಾಡಲಿಕ್ಕೆ ಕೊಟ್ಟಿರುತ್ತಾರೆ ಅಂತಾ ತಿಳಿಸಿದರು. ಹೀಗೆ ಒಟ್ಟು ಜಪ್ತಾದ ಮದ್ಯದ ಟೆಟ್ರಾ ಪಾಕೇಟಗಳನ್ನು ಎರಡು ಪ್ರತ್ಯೇಕ ಕಾಟನ ಬಾಕ್ಸಗಳನ್ನು ಬಿಳಿ ಬಟ್ಟೆಯಿಂದ ಪ್ಯಾಕ ಮಾಡಿ ಹೊಲೆದು ಅದಕ್ಕೆ “ಎಸ್” ಅಂತ ಇಂಗ್ಲೀಷ ಅಕ್ಷರದ ಸೀಲ್ ದಿಂದ ಸೀಲ್ ಮಾಡಿ ಪಂಚರ ಹಾಗೂ ನನ್ನ ಸಹಿ ಚೀಟಿಯನ್ನು ಅಂಟಿಸಿ ಕೇಸಿನ ಪುರಾವೆ ಕುರಿತು ನಮ್ಮ ತಾಬಾಕ್ಕೆ ತೆಗೆದುಕೊಳ್ಳಲಾಯಿತು. ಸದರಿ ಜಪ್ತಿ ಪಂಚನಾಮೆಯನ್ನು ಬೆಳಿಗ್ಗೆ 9-00 ಗಂಟೆಯಿಂದ 10-30 ಗಂಟೆಯವರೆಗೆ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮದಲ್ಲಿ ಲ್ಯಾಪಟ್ಯಾಪನಲ್ಲಿ ಟೈಪ ಮಾಡಿ ಪೋರ್ಟಬಲ ಪ್ರಿಂಟರ್ ಮುಖಾಂತರ ಪ್ರಿಂಟ್ ತೆಗೆಯಲಾಯಿತು.    ಕಾರಣ ಅಕ್ರಮವಾಗಿ ಮದ್ಯ ಮಾರಾಟಮಾಡುತ್ತಿದ್ದ ಆರೋಪಿತರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಅಕ್ರಮವಾಗಿ ಮದ್ಯದ ಪಾಕೆಟಗಳನ್ನು ಸಂಗ್ರಹಿಸಿ ಇಟ್ಟುಕೊಂಡು ಮಾರಾಟ ಮಾಡಿದ ಆರೋಪಿತರ ವಿರುದ್ಧ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ:28-11-2022  ಸಂಜೆ ೦6-೦೦ ಗಂಟೆಯಲ್ಲಿ ನನ್ನ ರೇಲ್ವೆ ಸ್ಟೇಷನ್ ಗೇಟ್ ಮುಂದೆ ಇರುವ ತಾಜ್ ಹೊಟೇಲ ಮುಂದೆ ನನ್ನ HONDA AVITOR REG NO KA-32ER-0707 -ದ್ವಿ ಚಕ್ರ ವಾಹನವನ್ನು ನಿಲ್ಲಿಸಿ, ನಮ್ಮ ಸಂಬಂಧಿಕರಿಗೆ ರೇಲ್ವೆ ನಿಲ್ದಾಣ ಒಳಗಡೆ ಹೋಗಿ ರೇಲ್ವೆಕ್ಕೆ ಹತ್ತಿಸಿ ವಾಪಸ್ಸು ಸಂಜೆ ೦೬-೩೦ ಗಂಟೆಗೆ ಬಂದು ನೋಡಿದಾಗ ಸದರಿ ಸ್ಥಳದಲ್ಲಿ  ನಿಲ್ಲಿಸಿದ್ದ ನನ್ನ ವಾಹನ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ -2 :-  ದಿನಾಂಕ 25/01/2023 ರಂದು ರಾತ್ರಿ 07:15  ಗಂಟೆಗೆ ಶ್ರೀ.ಶಮಶೋದ್ದೀನ್ ತಂದೆ ಸಲಿಂ @ ಸಲಿಂವೋದ್ದೀನ್ ಇವರು ನೀಡಿರುತ್ತಾರೆಂಬು ಒಂದು ಕನ್ನಡದಲ್ಲಿ ಟೈಪ್ ಮಾಡಿಸಿ ಸಹಿ ಮಾಡಿದ ಫಿರ್ಯಾದಿ ಅರ್ಜಿಯನ್ನು ಶ್ರೀ ಮಹ್ಮದ ಯಾಕೂಬಮಿಯಾ ಇವರು ತಂದು ಹಾಜರು ಪಡಿಸಿದ್ದು ಸದರಿ ಅರ್ಜಿಯ ಸಾರಂಶವೆನೆಂದರೆ,  ದಿನಾಂಕ-23/01/2023 ರಂದು ಗಾಯಳು ಶಮಶೋದ್ದೀನ್ ಹಾಗೂ ಮಹ್ಮದ ಫ್ರರಖಾನ್ ಇಬ್ಬರೂ ರಾತ್ರಿ 07-45 ಗಂಟೆ ಸುಮಾರಿಗೆ ಹವಲಿಯಾ ಮಜೀದದಲ್ಲಿ ನಮಾಜ ಮುಗಿಸಿಕೊಂಡು ರಿಂಗ್ ರೋಡ ಕ್ಯೂ.ಪಿ ಆಸ್ಪತ್ರೆಯ ಎದುರುಗಡೆ ಮೆಡಿಕಲಗೆ ಗೂಲಿ ತರುವ ಕುರಿತು ಹೋಗುವಾಗ   ಹೀರಾಪುರ ರಿಂಗ್ ರೋಡ ಕಡೆಯಿಂದ ಒಂದು ದ್ವಿಚಕ್ರ ವಾಹನ ನಂ KA-32 HD-1945 ನೇದ್ದನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಇಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಶಮಶೋದ್ದಿನಿಗೆ ಭಾರಿಗಾಯವಾಗಿದ್ದು ಮತ್ತು ಮಹ್ಮದ ಪ್ರರಖಾನನಿಗೆ ರಕ್ತಗಾಯವಾಗಿದ್ದು ಉಪಚಾರ ಕುರಿತು ಕ್ಯೂ.ಪಿ ಆಸ್ಪತ್ರೆಯಲ್ಲಿ ಸೇರಿಕೆ ಆಗಿದ್ದು ಮೋಟಾರ ಸೈಕಲ ಸವಾರನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇರುವ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ಎಂ.ಬಿ.ನಗರ ಪೊಲೀಸ ಠಾಣೆ :-  ಫಿರ್ಯಾದಿದಾರರು  ದಿನಾಂಕ 25-01-2023 ತಮ್ಮ ಕೆಲಸ ಮುಗಿಸಿಕೊಂಡು ಕೆಎನ್‌ಝಡ್ ಫಂಕ್ಷನ ಹಾಲ್ ಹತ್ತಿರ ಹೊಗುತ್ತಿರವಾಗ ಆ ಕಡೆಯಿಂದ ಇಬ್ಬರೂ ಚಲಾಯಿಸಿಕೊಂಡು ನನ್ನನ್ನೂ ದಿಟ್ಟಿಸಿ ನೋಡುತ್ತಾ ಇದ್ದರೂ ಆಗ ನಾನು ಯಾಕೆ ಎಂದು ಕೇಳಿದಾಗ ಅವರು ಅವಾಚ್ಯ ಶಬ್ದದಿಂದ ಬೈದು ಹೋಡೆದಿರುವ ಬಗ್ಗೆ ಇತ್ಯಾದಿ ದೂರು ನೀಡಿದ್ದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ರಾಘವೇಂದ್ರ ನಗರ ಪೊಲೀಸ್‌ ಠಾಣೆ :- ದಿನಾಂಕಃ25.01.2023ರಂದು 6.30ಪಿ.ಎಮ್ಕ್ಕೆ ಶ್ರೀಮಂಜುನಾಥ ತಂದೆ ಲಕ್ಷ್ಮಣ ನಾಟೀಕರ ವಯಃ28ವರ್ಷ ಜಾಃಕಬ್ಬಲೀಗ ಉಃಎಲೆಕ್ಟ್ರೀಶಿಯನ್ ಕೆಲಸ ಸಾಃಶಾಹಬಜಾರ ಕಲಬುರಗಿರವರು ಠಾಣೆಗೆ ಬಂದು ದೂರು ಕೊಟ್ಟ ಸಾರಾಂಶವೇನೆಂದರೆ ನಾನು ಸುಮಾರು 7 ವರ್ಷಗಳಿಂದ ಶೆಟ್ಟಿ ಮಲ್ಟಿಪ್ಲೇಕ್ಸ ಚಿತ್ರಮಂದಿರದಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ. ನಮ್ಮ ಚಿತ್ರಮಂದಿರನಲ್ಲಿ ಪಠಾಣ ಚಿತ್ರ ಬಿಡಗಡೆ ಆಗಿದ್ದು, ಆ ಚಿತ್ರವು ಕೂಡಾ ನಮ್ಮ ಚಿತ್ರಮಂದಿರದಲ್ಲಿ ಪ್ರದರ್ಶನ ಆಗುತ್ತಿದ್ದು ಆ ವೇಳೆಯಲ್ಲಿ ಆ ಚಿತ್ರ ಪ್ರಧರ್ಶನ ಮಾಡಬಾರದು ಅಂತ ಕೆಲವು ಸಂಘಟನೆಗಳು ಬಂದು ನಮ್ಮ ಚಿತ್ರಮಂದಿರಕ್ಕೆ ಬಂದು ಹೋಗಿರುತ್ತಾರೆ. ಅಲ್ಲದೆ ಚಿತ್ರ ಯಾರಿಗೂ ತೋರಿಸಬಾರದು ಅಂತ ಬೈದು ಹೋಗಿರುತ್ತಾರೆ. ಅಂತ ನಾವು ದಿನಾಂಕಃ24.01.2023ರಂದು ರಾಘವೇಂದ್ರ ನಗರ ಪೊಲೀಸ ಠಾಣೆಗೆ ಬಂದು ನಮ್ಮ ಚಿತ್ರ ಮಂದಿರಕ್ಕೆ ರಕ್ಷಣೆ ಕೊಡಬೇಕೆಂದು ಅರ್ಜಿ ಕೂಡಾ ಕೊಟ್ಟಿರುತ್ತೇವೆ. ಅದರಂತೆ ರಾಘವೇಂದ್ರ ನಗರ ಪೊಲೀಸ್ರು ಇಂದು ದಿನಾಂಕಃ25.01.2023ರಂದು ಬೆಳಿಗ್ಗೆ9.00ಗಂಟೆಯಿಂದ ನಮ್ಮ ಚಿತ್ರಮಂದಿರಕ್ಕೆ ರಕ್ಷಣೆ ಮಾಡುತ್ತಾ ಇರುವಾಗ ಸಮಯ11.00ಗಂಟೆಯ ಸುಮರಿಗೆ ಸುಮಾರು25ರಿಂದ 30 ಜನ ಹಿಂದೂ ಪರ ಸಂಘಟನೆ ಮುಖಂಡರು ನಮ್ಮ ಚಿತ್ರಮಂದಿರ ಗೇಟಿನ ಕಡೆ ಜೈಕಾರ ಮಾಡುತ್ತಾ ಬರುತ್ತಿರುವಾಗ ನಾವುಗಳು ನಮ್ಮ ಚಿತ್ರಮಂದಿರದಗೇಟ ಬಂದ ಮಾಡಿದ್ದಾಗ ಆ ಸಂಘಟನೆ ಕಾರ್ಯಕರ್ತರು ಒಂದೆ ಸವನೆ ಜೈಕಾರ ಹಾಕುತ್ತಾ ಪೊಲೀಸರಿಗೆ ನೂಕಿಸಿ ಕೊಡುತ್ತಾ ಮುಂದೆ ಮುಂದೆ ಬಂದು ಅದರಲ್ಲಿ ಲಕ್ಷ್ಮೀಕಾಂತ ತಂದೆ ಸೂರ್ಯಕಾಂತ ಸ್ವಾದಿ ಹಾಗೂ ಇತರರು ನಮ್ಮ ಚಿತ್ರಮಂದಿರದ ಗೇಟ್ನ್ನು ಜಗ್ಗಾಡುತ್ತಾ ಗೇಟ ಮೇಲೆ ಏರಿದಾಗ ಲಕ್ಷ್ಮೀಕಾಂತ ಸ್ವಾದಿ ಇವರಿಗೆ ರಕ್ತ ಗಾಯ ಮಾಡಿಕೊಂಡಿರುತ್ತಾರೆ. ಉಳಿದ ಪ್ರತಿಭಟನಾಕಾರರು ನಮ್ಮ ಗೇಟನ್ನು ಜಗ್ಗಾಡಿ ಮತ್ತು ಕೆಲವರು ನಮ್ಮ ಚಿತ್ರಮಂದಿರಕ್ಕೆ ಕಲ್ಲನ್ನು ಎಸೆದಿರುತ್ತಾರೆ. ಏರಂಡಿ ಮಕ್ಕಳೆ ನೀವು ಹೇಗೆ ಚಿತ್ರ ಮಂದಿರ ನಡೆಸುತ್ತಿರಿ ಅಂತ ನೋಡುತ್ತೇವೆ ಅಂತ ಬೈದಿರುತ್ತಾರೆ. ದಿನಾಂಕ;25/01/2023ರಂದು ಬೆಳಿಗ್ಗೆ11.00ಗಂಟೆ ಸುಮಾರಿಗೆ ಹಿಂದೂ ಸಂಘಟನೆ ಕಾರ್ಯಕರ್ತರಾದ ಲಕ್ಷ್ಮೀಕಾಂತ ಸ್ವಾದಿ ಹಾಗೂ ಸುಮಾರು 25ರಿಂದ30 ಜನರು ಹಿಂದೂಸಂಘಟನೆ ಕಾರ್ಯಕರ್ತರು ಸೇರಿ ನಮ್ಮ ಚಿತ್ರಮಂದಿರವನ್ನು ಬಂದ ಮಾಡಿಸಿ ಪ್ರತಿಭಟನೆ ಮಾಡಿ ನಮ್ಮ ಚಿತ್ರಮಂದಿರಕ್ಕೆ ಕಲ್ಲಿನಿಂದ ಹೊಡೆದು ಅವಾಚ್ಯವಾದ ಬೈಬ್ದಗಳಿಂದ ಬೈದಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ  ಈ ವಿಷಯವನ್ನು ನಮ್ಮ ಮಾಲಕರೊಂದಿಗೆ ಚರ್ಚಿಸಿಕೊಂಡು ಬಂದು ಈಗ ತಡವಾಗಿ ಬಂದು ದೂರು ಕೊಡುತ್ತಿದ್ದೇನೆ ಅಂತ ಇತ್ಯಾದಿಯಾಗಿ ದೂರು ನೀಡಿದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ ಠಾಣೆ :-  ದಿನಾಂಕ:25-01-2023  ರಂದು ಸಾಯಂಕಾಲ ೬:೩೦ ಕ್ಕೆ ಫಿರ್ಯಾದಿದಾರರಾದ ಶಿವಾನಂದ ತಂದೆ ಮಹಾರುದ್ರಪ್ಪ ಸಂಪಳ್ಳಿ ವಯ:೨೯ ವರ್ಷ ಉ:ಖಾಸಗಿ ಕೆಲಸ ಸಾ;ಓಕಳಿ ತಾ:ಕಮಾಲಾಪೂರ ಜಿ:ಕಲಬುರಗಿ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದರ ಸಾರಾಂಶವೆನೆಂದರೆ ನನ್ನದೊಂದು ಸ್ವಂತ ಹಿರೋ ಹೊಂಡಾ ಸ್ಪ್ಲೇಂಡರ್ ಪ್ಲಸ್ ಮೋಟಾರ್ ಸೈಕಲ್ ನಂ. KA-32-EC-3714 ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ:೧೬/೦೧/೨೦೨೩ ರಂದು ಸಾಯಂಕಾಲ ೭:೪೫ ಗಂಟೆಗೆ ಕಲಬುರಗಿ ನಗರದ ಸುಪರ ಮಾರ್ಕೆಟದ ಹನುಮಾನ ಗುಡಿ ಎದುರುಗಡೆ ನಿಲ್ಲಿಸಿ ಗಜಾನನ ಖಾನಾವಳಿಗೆ ಹೋಗಿ ಊಟ ಮುಗಿಸಿಕೊಂಡು ಮರಳಿ ಅದೇ ದಿನ ರಾತ್ರಿ ೮:೧೦ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ಆದ ಕಾರಣ ಠಾಣೆಗೆ ಬಂದು ಫಿರ್ಯಾದಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 26-01-2023 11:02 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080