ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 24/12/2022 ರಂದು 8.10 ಪಿ.ಎಮ್ ಕ್ಕೆ ಶ್ರೀ ಜೆಟ್ಟೆಪ್ಪಾ ತಂದೆ ಯಮನಪ್ಪಾ ಕೊಂಡಗೂಳಿ ಸಾಃ ಅನ್ನಪೂರ್ಣೆಶ್ವರಿ ಕಾಲೋನಿ ಕಲಬುರಗಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಅವರ ಮಗನಾದ ಅಭಿಷೇಕ ಈತನು ಕನ್ನಡದಲ್ಲಿ ಟೈಪ್ ಮಾಡಿಸಿ ಸಹಿ ಮಾಡಿದ ಒಂದು ಫಿರ್ಯಾಧಿ ಅರ್ಜಿಯನ್ನು ತಂದು ಹಾಜರಪಡಿಸಿದ್ದು ಅರ್ಜಿಯ ಸಾರಾಂಶವೆನೆಂದರೆ, ಫಿರ್ಯಾಧಿ ಅಭಿಷೇಕ ಈತನು ದಿನಾಂಕಃ 22.12.2022 ರಂದು ರಾತ್ರಿ 8.45 ಸುಮಾರಿಗೆ ಒಂದು ಅಟೋರೀಕ್ಷಾ ನಂ KA32AA1447 ನೇದ್ದರ ಚಾಲಕ ಸುಭಾಷ ತಂದೆ ಲೋಕು ಚವ್ಹಾಣ ಈತನ ಖರ್ಗೆ ಪೆಟ್ರೋಲ್ ಪಂಪ ಕಡೆಯಿಂದ ಅನ್ನಪೂರ್ಣೇಶ್ವರಿ ಕಾಲೋನಿ ಕಡೆಗೆ ಹೋಗುವ ಕುರಿತು ತನ್ನ ಆಟೋರೀಕ್ಷಾವನ್ನು ಅತೀವೇಗ & ಅಲಕ್ಷತನದಿಂದ ಚಲಾಯಿಸಿ ಪೂಜಾ ಕಾಲೋನಿಯ ಭವಾನಿ ಗುಡಿಯ ಸಮೀಪದ ರಸ್ತೆ ಮೇಲೆ ಆಟೋ ಪಲ್ಟಿ ಮಾಡಿ ಫಿರ್ಯಾಧಿಯ ಎಡಗಾಲಿನ ಮೇಲೆ ಆಟೋ ಬಿದ್ದಿ ಫಿರ್ಯಾದಿಗೆ ಭಾರಿ ಆಗಿದ್ದು, ಫಿರ್ಯಧಿಯು ಚಿಕಿತ್ಸೆ ಪಡೆದುಕೊಂಡು ಸ್ವಲ್ಪ ಚೇತರಿಕೆ ಆದ ನಂತರ ಮನೆಯವರೊಂದಿಗೆ ವಿಚಾರಿಸಿ ಇಂದು ತಡಮಾಡಿ ದೂರು ನಿಡಿದ್ದು, ಕಾರಣ ಸದರಿ ಈತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ದೂರಿನ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರಾಘವೇಂದ್ರ ನಗರ ಪೊಲೀಸ್‌ ಠಾಣೆ :-  ದಿನಾಂಕ; 24.12.2022 ರಂದು 7:00 ಪಿಎಮ ಕ್ಕೆ ಮಾನ್ಯ ಹಣಮಂತಕಟ್ಟಿ ಎಎಸ್ಐ ರಾಘವೇಂದ್ರ ನಗರ ಪೊಲೀಸಠಾಣೆ ಕಲಬುರಗಿನಗರ ರವರು ಒಬ್ಬ ಆರೋಪಿತ ಹಾಗೂ ಜಪ್ತಿ ಪಂಚನಾಮೆ, ಮುದ್ದೆ ಮಾಲುನೊಂದಿಗೆ ಜ್ಞಾಪನಪತ್ರ ನೀಡಿದರ ಸಾರಾಂಶವೇನೆಂದರೆ. ಈ ಮೂಲಕ ಜ್ಞಾಪನ ಪತ್ರ ಕೊಡುವುದೇನೆಂದರೆ,  ಇಂದು ದಿನಾಂಕ:24.12.2022 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ನಾನು ಮತ್ತು ಶ್ರೀಚಂದ್ರಕಾಂತ ಹೆಚ್.ಸಿ- ದಕ್ಷಿಣ ಉಪವಿಭಾಗ ಕಲಬುರಗಿ ನಗರರವರು ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಶ್ರೀಉಮೇಶ ಸಿಪಿಸಿ-111, ಶ್ರೀರಮೇಶ ಸಿಪಿಸಿ-445, ಹಾಗೂ ಶ್ರೀಶರಣ ಬಸಪ್ಪಾಸಿಪಿಸಿ-511 ರವರನ್ನು ಸಂಗಡ ಕರೆದು ಕೊಂಡು ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ಕರ್ತವ್ಯ ನಿರ್ವಹಿಸುತ್ತಿರುವಾಗ ಖಚಿತ ಬಾತ್ಮಿಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ಶಹಾಬಜಾರ ನಾಕಾ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವ ಜನರಿಗೆಇದುಬಾಂಬೆಮಟಕಾಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಸಾರ್ವಜನಿಕರಿಂದ ಹಣಪಡೆದುಕೊಂಡು ಮಟಕಾ ಚೀಟಿ ಬರೆದು ಕೊಡುತ್ತಿದ್ದಾನೆ ಅಂತ ಖಚಿತ ಬಾತ್ಮಿಬಂದಿರುತ್ತದೆ ಅಂತಾ ತಿಳಿಸಿರುವದರಿಂದ ಸದರಿ ಮಾಹಿತಿಯನ್ನು ಮಾನ್ಯ ಮೇಲಾಧಿಕಾರಿಯವರಿಗೆ ತಿಳಿಸಿ ಮಾನ್ಯ ಮೇಲಾಧಿಕಾರಿಯವರ ಮಾರ್ಗದರ್ಶನದಂತೆ ಖಚಿತವಾದ ಬಾತ್ಮಿಯಂತೆ ಸದರಿಯವರ ಮೇಲೆ ದಾಳಿ ಮಾಡಿ ಕ್ರಮ ಕೈಕೊಳ್ಳುವ  ಕುರಿತು ಇಬ್ಬರು ಪಂಚರನ್ನು ಶ್ರೀರಮೇಶ ಸಿಪಿಸಿ-445 ರವರ ಮುಖಾಂತರ ಬರಮಾಡಿಕೊಂಡು ಅವರಿಗೆ ತಿಳಿಹೇಳಿ ನಂತರ ಪಂಚರು ಮತ್ತು ನಾವು ಸಿಬ್ಬಂದಿಯವರು ನಮ್ಮ ನಮ್ಮ ಮೋಟಾರ ಸೈಕಲ್ಮೇಲೆ ಸಾಯಂಕಾಲ್ 4-30 ಗಂಟೆಗೆಹೊರಟು 4.45 ಗಂಟೆಗೆ ಸ್ಥಳಕ್ಕೆ ತಲುಪಿ ಮರೆಯಾಗಿನಿಂತು ಕೊಂಡು ನೋಡಲಾಗಿ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಅವರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದು ಕೂಡುತ್ತಿರುವದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಪಂಚರ ಸಮಕ್ಷಮ ಸದರಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಲು, ಮಟಕಾಬರೆಯಿಸಲುಬಂದವರುಓಡಿಹೋಗಿದ್ದು, ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನಿಗೆ ಸಿಬ್ಬಂದಿಯವರ ಸಹಾಯದಿಂದ ವ್ಯಕ್ತಿಗೆ ಹಿಡಿದಿದ್ದು ಅವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ರೇವಣಸಿದ್ದಪ್ಪಾ ತಂದೆ ಹಣಮಂತರಾವ ಬೇಲೂರವಯ-41 ವರ್ಷ ಉ||ಹೋಟೇಲ ಕೆಲಸ ಜಾ||ಲಿಂಗಾಯತ ಸಾ||ಸುಭಾಷನಗರ ಆಳಂದನಾಕಾ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಅವನ ಹತ್ತಿರ ನಗದುಹಣ 620 /-ರೂಸಿಕ್ಕಿದ್ದು ಮತ್ತು ಒಂದು ಬಾಲ ಪೆನಅಃಕಿಃ 00, ಒಂದುಮಟಕಾಚೀಟಿಅಕಿ. 00/-ದೊರೆತಿದ್ದು, ಸದರಿ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ 620/- ರೂಗಳು, ಬೆಲೆ ಬಾಳುವದನ್ನು ಸದರಿಯವನಿಂದ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿಕೊಂಡು ಮುಂದಿ ನಪುರಾವೆಗಾಗಿ ಸದರಿ ವ್ಯಕ್ತಿಯನ್ನು ನನ್ನ ತಾಬಾಕ್ಕೆ ತೆಗೆದುಕೊಂಡು ಸಾಯಂಕಾಲ 5-00 ಗಂಟೆಯಿಂದ 6-00 ಗಂಟೆಯವರೆಗೆ ಸಾರ್ವಜಿನಕಲೈಟಿನ ಕಂಬದ ಬೆಳಕಿನಲ್ಲಿ ಜಪ್ತಿ ಪಂಚನಾಮೆಯನ್ನು ಕೈಕೊಂಡು ಜಪ್ತಿ ಮಾಡಿಕೊಂಡ ಮುದ್ದೆ ಮಾಲು ಮತ್ತು ಆರೋಪಿತನೊಂದಿಗೆ ಮರಳಿ 6-30 ಪಿ.ಎಂಗಂಟೆಗೆ ಠಾಣೆಗೆ ಬಂದು ಸದರಿಯವನ ವಿರುಧ್ದ ಕಲಂ:78(3) ಕೆ.ಪಿ.ಆ್ಯಕ್ಟಅಡಿಯಲ್ಲಿ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಅಂತ ಇತ್ಯಾದಿಯಾಗಿ ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ:24-12-2022 ರಂದು ಸಾಯಂಕಾಲ ೭:೦೩  ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸಚೀನ್ ತಂದೆ ಮೋಹನ ರಾಠೋಡ ವಯ:೨೩ವರ್ಷ ಜಾ:ಲಂಬಾಣಿ ಉ:ಖಾಸಗಿ ಕೆಲಸ ಸಾ//ಮನೆ ನಂ ೩೯ ಅಟಲ್ ಜೀ ನಗರ ನೃಪತುಂಗ ಕಾಲೋನಿ ಶಹಬಾದ ರೋಡ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನನ್ನದೊಂದು ಸ್ವಂತ ಹಿರೋ ಸ್ಪ್ಲೇಂಡರ್ ಪ್ಲಸ್ ಮೋಟಾರ್ ಸೈಕಲ್ ನಂ. KA-32-ES-0765 ‌ ನೇದ್ದು ಇದ್ದು ಸದರಿ ಮೋಟಾರ್ ಸೈಕಲ್ ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ:೨೩/೧೦/೨೦೨೨ ರಂದು  ರಾತ್ರಿ ೮:೦೦ ಗಂಟೆಗೆ ಕಲಬುರಗಿ ನಗರದ ಗ್ರ್ಯಾಂಡ ಹೊಟೇಲ್ ಹತ್ತಿರ ಇರುವ  ಮಯೂರ ಬಹುಮನಿ ಬಾರ್ ಅಂಡ ರೆಸ್ಟೋರೆಂಟ್ ಎದುರುಗಡೆ ನಿಲ್ಲಿಸಿ ರೋಟರಿ ಕ್ಲಬ್ ಶಾಲೆಯಲ್ಲಿ ನೆಡೆಯುತ್ತಿರುವ ಡಾಂಡಿಯಾ ನೈಟ್ ಕಾರ್ಯಕ್ರಮಕ್ಕೆ ಹೋಗಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಮರಳಿ ಅದೇ ದಿನ ರಾತ್ರಿ ೯:೦೦ ಗಂಟೆಗೆ ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ. ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ. ಆದ್ದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಫರಹತಾಬಾದ ಪೊಲೀಸ್‌ ಠಾಣೆ :-  ದಿನಾಂಕ: 24.12.2022 ರಂದು 04:20 ಪಿ.ಎಮ್ ಕ್ಕೆ ಶ್ರೀ ಬಸವರಾಜ ಪೊಲೀಸ್ ಉಪ ನಿರೀಕ್ಷಕರು ಸಿ.ಸಿ.ಬಿ. ಘಟಕ, ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಒಂದು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಗೂ ಎರಡು ಜನ ಆರೋಪಿತರನ್ನು ತಂದು ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ದಿನಾಂಕ:24-12-2022 ರಂದು ಮಧ್ಯಾಹ್ನ 12-45 ಗಂಟೆಗೆ ನಾನು ಸಿ.ಸಿ.ಬಿ. ಕಛೇರಿಯಲ್ಲಿದ್ದಾಗ ಫರತಾಬಾದ ಗ್ರಾಮದ ಫರತಾಬಾದ ಹಳೆಯ ಪೊಲೀಸ್ ಠಾಣೆ ಹಿಂಭಾಗ ಸಾರ್ವಜನಿಕ ರಸ್ತೆಯ ಮೇಲೆ ಇಬ್ಬರೂ ವ್ಯಕ್ತಿಗಳು ತಮ್ಮ ಲಾಭಗೋಸ್ಕರ ಸಾರ್ವಜನಿಕರಿಂದ ಹಣ ಪಡೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿಯನ್ನು ಬರೆದುಕೊಳ್ಳುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕುರಿತು ಸಿ.ಸಿ.ಬಿ ಘಟಕ ಸಿಬ್ಬಂದಿಯವರಾದ 1) ಕೇಸುರಾಯ ಹೆಚ್.ಸಿ-223, 2) ಸುನೀಲಕುಮಾರ ಹೆಚ್ಸಿ-167, 3) ಶಿವಕುಮಾರ ಸಿಪಿಸಿ-16715, 4) ಅಶೋಕ ಸಿಪಿಸಿ-647, 5) ನಾಗರಾಜ ಸಿಪಿಸಿ-1257 ಎಲ್ಲರೂ ಕೂಡಿ ತಮ್ಮ ತಮ್ಮ ಖಾಸಗಿ ವಾಹನಗಳನ ಮೇಲೆ ಮಧ್ಯಾಹ್ನ 1-00 ಗಂಟೆಗೆ ಹೊರಟು ಫರತಾಬಾದ ಗ್ರಾಮದ ಬಸಸ್ಟ್ಯಾಂಡ ಹತ್ತಿರ 1-30 ಗಂಟೆಗೆ ತಲುಪಿ ನಂತರ ಇಬ್ಬರೂ ಪಂಚರಾದ 1) ಶ್ರೀ ವಿಶ್ವನಾಥ ತಂದೆ ಸೋಪಣ್ಣಾ ಸಾಹುಕಾರ, ವ:28 ವರ್ಷ, ಜಾತಿ:ಲಿಂಗಾಯತ, ಉ:ಸಮಾಜ ಸೇವಕ, ಸಾ:ಫರತಾಬಾದ, ಮೊ.ನಂ.9538485650, 2) ಶ್ರೀ ಲಿಂಗರಾಜ ತಂದೆ ಗುಂಡಪ್ಪ, ವ:26 ವರ್ಷ, ಜಾತಿ:ಕಬ್ಬಲಿಗ, ಉ:ಖಾಸಗಿ ಕೆಲಸ, ಸಾ:ಫರತಾಬಾದ, ಮೊ.ನಂ.7676055750 ಇವರನ್ನು ಫರತಾಬಾದ ಬಸ್ ಸ್ಟ್ಯಾಂಡ ಹತ್ತಿರ ಮಧ್ಯಾಹ್ನ 1-45 ಗಂಟೆಗೆ ಬರಮಾಡಿಕೊಂಡು ಸದರಿ ಪಂಚರಿಗೆ ವಿಷಯ ತಿಳಿ ಹೇಳಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ನಾನು, ಪಂಚರು, ಮತ್ತು ಸಿ.ಸಿ.ಬಿ ಘಟಕ ಸಿಬ್ಬಂದಿಯವರಾದ 1) ಕೇಸುರಾಯ ಹೆಚ್.ಸಿ-223, 2) ಸುನೀಲಕುಮಾರ ಹೆಚ್ಸಿ-167, 3) ಶಿವಕುಮಾರ ಸಿಪಿಸಿ-16715, 4) ಅಶೋಕ ಸಿಪಿಸಿ-647, 5) ನಾಗರಾಜ ಸಿಪಿಸಿ-1257 ಮತ್ತು ಫರತಾಬಾದ ಠಾಣೆಯ ಸಿಬ್ಬಂದಿ 6) ಗಡ್ಡೆಪ್ಪ ಹೆಚ್.ಸಿ-165 ರವರು ಕೂಡಿ ತಮ್ಮ ತಮ್ಮ ಖಾಸಗಿ ವಾಹನಗಳನ ಮೇಲೆ ಫರತಾಬಾದ ಬಸಸ್ಟ್ಯಾಂಡದಿಂದ ಬಾತ್ಮಿ ಬಂದ ಸ್ಥಳವಾದ ಫರತಾಬಾದ ಹಳೆಯ ಪೊಲೀಸ್ ಠಾಣೆ ಹಿಂಭಾಗ ಹತ್ತಿರ ಮಧ್ಯಾಹ್ನ 2-15 ಗಂಟೆಗೆ ತಲುಪಿ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಎಲ್ಲರೂ ವಾಹನದಿಂದ ಇಳಿದು ಅಲ್ಲಿಯೇ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಇಬ್ಬರೂ ವ್ಯಕ್ತಿಗಳು ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಅಲ್ಲಿ ಹೋಗಿ ಬರುವ ಸಾರ್ವಜನಿಕರಿಂದ 1 ರೂ.ಗೆ 80 ರೂ. ಕೊಡುವುದಾಗಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿ ಬರೆದುಕೊಳ್ಳುವುದನ್ನು ನಾನು ಮತ್ತು ಪಂಚರು ನೋಡಿ ಖಚಿತಪಡಿಸಿಕೊಂಡು, ಪಂಚರ ಸಮಕ್ಷಮ ಮಧ್ಯಾಹ್ನ 2-30 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ಒಮ್ಮಲ್ಲೇ ಎಲ್ಲರೂ ಕೂಡಿ ಸದರಿ ವ್ಯಕ್ತಿಗಳಿಗೆ ಹಿಡಿದಿದ್ದು, ನಂತರ ಸದರಿಯವರ ಹೆಸರು ವಿಳಾಸ ವಿಚಾರಿಸಲು 1) ವಿಶ್ವರಾಧ್ಯ ತಂದೆ ಚನ್ನಬಸಯ್ಯ ಹಿರೇಮಠ, ವ:26 ವರ್ಷ, ಉ:ಕೂಲಿಕೆಲಸ, ಸಾ:ಫರತಾಬಾದ, ತಾ:ಜಿ:ಕಲಬುರಗಿ, 2) ಅಬ್ದುಲ ತಂದೆ ಮೌಲಾಸಾಬ ಗೂಳಿ, ವ:50 ವರ್ಷ, ಉ:ಕೂಲಿಕೆಲಸ, ಸಾ:ಕೂಡಿ ಗ್ರಾಮ, ತಾ:ಜೇವರ್ಗಿ, ಜಿ:ಕಲಬುರಗಿ ಅಂತಾ ತಿಳಿಸಿದರು. ನಂತರ ಸದರಿ ಆರೋಪಿತರ ಅಂಗ ಶೋಧನೆ ಮಾಡಲಾಗಿ ವಿಶ್ವರಾಧ್ಯ ತಂದೆ ಚನ್ನಬಸಯ್ಯ ಹಿರೇಮಠ ಈತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ರೂ.4,000/- ನಗದು ಹಣ, ಮತ್ತು ಮಟಕಾ ಚೀಟಿ  ಅ.ಕಿ.ರೂ.00/-, ಒಂದು ಬಾಲ ಪೆನ್ ಅ.ಕಿ.ರೂ.00/-, ನೇದ್ದವುಗಳು ದೊರೆತಿದ್ದು, ನಂತರ ಅಬ್ದುಲ ತಂದೆ ಮೌಲಾಸಾಬ ಗೂಳಿ ಈತನ ಅಂಗ ಶೋಧನೆ ಮಾಡಲಾಗಿ ಈತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ರೂ.3,560/- ನಗದು ಹಣ, ಮತ್ತು ಮಟಕಾ ಚೀಟಿ  ಅ.ಕಿ.ರೂ.00/-, ಒಂದು ಬಾಲ ಪೆನ್ ಅ.ಕಿ.ರೂ.00/-, ನೇದ್ದವುಗಳು ದೊರೆತಿದ್ದು, ಹೀಗೆ ಒಟ್ಟು ರೂ.7,560/- ನಗದು ಹಣ ದೊರೆತಿದ್ದು ಇರುತ್ತದೆ.  ನಂತರ ಸದರಿಯವರಿಗೆ ಮಟಕಾ ಚೀಟಿಗಳನ್ನು ಯಾರಿಗೆ ಕೊಡುತ್ತೀರಿ ಅಂತಾ ವಿಚಾರಿಸಿದಾಗ ಮಲ್ಲಿಕಾರ್ಜುನ ತಂದೆ ಸದಾನಂದ ಮಮ್ಮಣ್ಣಿ, ಸಾ:ಫರತಾಬಾದ ಈತನಿಗೆ ಕೊಡುತ್ತೇವೆ ಅಂತಾ ತಿಳಿಸಿದರು.  ಸದರಿ ಜಪ್ತುಪಡಿಸಿಕೊಂಡ ಮುದ್ದೇಮಾಲುಗಳಿಗೆ ಪಂಚರು ಸಹಿ ಮಾಡಿದ ಚೀಟಿಯನ್ನುಅಂಟಿಸಿ ಒಂದು ಕವರನಲ್ಲಿ ಹಾಕಲಾಯಿತು. ಸದರಿ ಜಪ್ತಿ ಪಂಚನಾಮೆಯನ್ನು ಮಧ್ಯಾಹ್ನ 3-00 ಗಂಟೆಯಿಂದ 4-00 ಗಂಟೆಯವರೆಗೆ  ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮದಲ್ಲಿ ಲ್ಯಾಪಟ್ಯಾಪನಲ್ಲಿ ಟೈಪ ಮಾಡಿ ಪೋರ್ಟಬಲ ಪ್ರಿಂಟರ್ ಮುಖಾಂತರ ಪ್ರಿಂಟ್ ತೆಗೆಯಲಾಯಿತು.ನಂತರ ಫರತಾಬಾದ ಪೊಲೀಸ ಠಾಣೆಗೆ ಬಂದು ನನ್ನ ವರದಿಯನ್ನು ತಯಾರಿಸಿ, ಜಪ್ತಿಪಂಚನಾಮೆ, ಮತ್ತು ಮುದ್ದೇಮಾಲು ಹಾಗೂ ಇಬ್ಬರೂ ಆರೋಪಿತರನ್ನು ಹಾಜರಪಡಿಸಿದ್ದು, ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ.  ಅಂತಾ  ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಎಂ.ಬಿ.ನಗರ ಪೊಲೀಸ್‌ ಠಾಣೆ :- ದಿನಾಂಕ 24-12-2022 ರಂದು ಫಿರ್ಯಾದುದಾರರು ನಿಡಿದ ಫಿರ್ಯಾಧಿ ಸಾರಾಂಶವೆನೆಂದರೆ ರಾಜ್ಯಪಾಲ ಆಗುತ್ತೇನೆ ಅಂತಾ ಹೇಳಿ ಆರೋಪಿರತಾದ ಶಾಂತಕುಮಾರ ಜಟ್ಟೂರು  ಇವರು ಫಿರ್ಯಾಧಿದಾರರಿಂದ ರೂ 27,97,000/- ವಂಚನೆ  ಮಾಡಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ-24-12-2022 ರಂದು ಫಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯೆನೆಂದರೆ ಫಿರ್ಯಾದಿಯು ಅಲ್‌ಖೈರ್ ಫಂಕ್ಷನ್ ಹಾಲ್ ಹತ್ತಿರ ತಮ್ಮದೊಂದು ಮೆಡಿಕಲ್ ಶಾಪ್ ಇದ್ದು ಅದರಲ್ಲಿ ಫಿರ್ಯಾದಿಯ ಮಗನಿದ್ದಾಗ ಸದರಿ ಆರೋಪಿತನು ಮಾಂಡವನ್ನು ಕಟ್ ಮಾಡುವ ಸುತ್ತರದಿಂದ ಹೊಡೆದು ಹಣ ವಸೂಲು ಮಾಡಿ ಭಾರಿ ಗುಪ್ತ ಗಾಯ ಮಾಡಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 24-12-2022 ರಂದು ೪:೧೫ ಪಿ.ಎಮ್ ದಿಂದ ೫:೧೫ ಪಿ.ಎಮ್   ದ ಸುಮಾರಿಗೆ ಆರೋಪಿತರು  ಠಾಣೆಯ ವ್ಯಾಪ್ತಿಯ ಸಾಯಿ ಮಂದಿರ ಹತ್ತಿರ ಭರತ ಚವ್ಹಾಣ ಇವರ ಮನೆಯ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಸದರಿ ಆರೋಪಿತರು ಇಸ್ಪೀಟ ಜೂಜಾಟ ಆಡುತ್ತದ್ದು ಸದರಿ ಆಟಕ್ಕೆ ಉಪಯೋಗಿಸಿದ 52 ಇಸ್ಪೀಟ ಎಲೆಗಳು ಹಾಗೂ ನಗದು ಹಣ 11,640/- ರೂ.  ನೇದ್ದನ್ನು ಜಪ್ತಿ ಮಾಡಿಕೊಂಡು  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 24-12-2022 ರಂದು ೬-೪೫ ಪಿಎಮ್ ಗಂಟೆಯಿಂದ ೭-೪೫ ಪಿಎಮ್ ಸುಮಾರಿಗೆ ಸದರಿ ಆರೋಪಿಯು ಬುದ್ದ ವಿಹಾರ ಸರ್ಕಲ ಹತ್ತಿರ  ( ಅಂದಾಜು 760 ಗ್ರಾಂ ಅದರ ಕಿಮ್ಮತ್ತು 5೦೦೦/-ರೂ)  ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ ಮಾಲು ಜಪ್ತಿ ಮಾಡಿಕೊಂಡು  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 24-12-2022 ರಂದು ೮.೩೦ ಪಿ.ಎಮ್ ದಿಂದ ೯.೩೦ ಪಿ.ಎಮ್ ಸುಮಾರಿಗೆ ಸದರಿ ಆರೋಪಿತರು ಹಾಗರಗಾ ಗ್ರಾಮಕ್ಕೆ ಹೋಘುವ ಬಾಬಾ ಶೇಖ ರವರ ಹೊಲದಲ್ಲಿ ಇಟ್ಟಂಗಿ ಭಟ್ಟಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ಆಡುತ್ತಿದ್ದ ಖಚಿತ ಬಾತ್ಮಿ ಬಂಧ ಮೇರಗೆ ಆಟಕ್ಕೆ ಉಪಯೋಗಿಸಿದ 52 ಇಸ್ಪೀಟ ಎಲೆಗಳು ಹಾಗೂ 30,600/- ರೂ ನಗದು ಹಣ ಜಪ್ತಿ ಮಾಡಿಕೊಂಡು  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 26-12-2022 11:09 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080