ಅಭಿಪ್ರಾಯ / ಸಲಹೆಗಳು

ರೋಜಾ ಪೊಲೀಸ ಠಾಣೆ :- ದಿನಾಂಕ: 24/11/2022 ರಂದು 15:30 ಗಂಟೆಗೆ ಶ್ರೀ ಉಮರ ಫಾರುಕ  ತಂದೆ: ಇಕ್ಬಾಲ ಪಟೇಲರವರು ಠಾಣೆಗೆ ಬಂದು ಹೇಳಿಕೆಯ ಸಾರಾಂಶ ಏನೆಂದರೆ, ಇಂದು ದಿನಾಂಕ 23/11/2022 ರಂದು ರಾತ್ರಿ 10:15 ಪಿ.ಎಮ್ ಕ್ಕೆ  ನಾನು ಮತ್ತು ನನ್ನ ಗೇಳೆಯ ಶಹಾಬಾಜ ಕೂಡಿಕೊಂಡು ದರ್ಗಾ ಹತ್ತಿರ ಇರುವ ಅಜೀಜ ಕೆಫೆ (ಮಾಮು ಹೊಟೇಲ್) ದಲ್ಲಿ ಚಹಾ ಕೂಡಿಯಲು ಹೋದಾಗ ಸಮಯ ರಾತ್ರಿ 10:40 ಗಂಟೆ ಸುಮಾರಿಗೆ ಹೊಟೇಲದಲ್ಲಿ ನಾನು ಮತ್ತು ನನ್ನ ಗೆಳೆಯ ಶಹಬಾಜ ಇಬ್ಬರೂ ಕೂಡಿ ಚಹಾ ಕೂಡಿಯುವಾಗ ಜೀಲಾನಿ ಷಾ ಮತ್ತು ಅಬ್ದುಲ್ ಸಾಜೀದ್, ಮಹ್ಮದ ರಪೀಕ್ ಇವರೆಲ್ಲರೂ ನನ್ನ ಹತ್ತಿರ ಬಂದು ಹಮಾರ ಬಾಸ್ ನಯೀಮ್ ಖಾನ್ ಔರ್ ಅಮ್ಜದ್ ಖಾನ್ ಕೇ ಖೀಲಾಫ್ ಬಾತ್ ಕರತೆ ಸಾಲೆ ಆಜ್ ತೆರೆಕೋ ಜೀಂದಾ ನಹೀ ಛೋಡತೆ ಅಂತಾ ಅಬ್ದುಲ್ ಸಾಜೀದ್ ಮತ್ತು ಮಹ್ಮದ ರಫಿಕ್ ಇವರು ನನ್ನನ್ನು ಆಜ್ ಇಸ್ಕೋ ನಹೀ ಚೋಡನಾ ಅಂತಾ ಕೈಯಿಂದ ನನ್ನ ಎದೆಗೆ ಮತ್ತು ತಲೆಗೆ ಮುಷ್ಠೀಯಿಂದ ಹೊಡೆದು ಗುಪ್ತಗಾಯ ಮಾಡಿ ನಂತರ ನನ್ನನ್ನು ಎಳೆದುಕೊಂಡು ಹೋಗುತ್ತಿರುವಾಗ  ಹೋಟೆಲನಲ್ಲಿರುವ ಶೋಕೆಸನ್ ಗಾಜನ್ನು ಮುಷ್ಠಿಯಿಂದ ಹೊಡೆದು ಒಡೆದಿರುತ್ತಾರೆ. ಆಗ ಅಬ್ದುಲ್ ಸಾಜೀದ್ ಮತ್ತು ಮಹ್ಮದ ರಫಿಕ್ ಇವರು ನನ್ನನ್ನು ಆಜ್ ಇಸ್ಕೋ ನಹೀ ಚೋಡನಾ ಅಂತಾ ನನ್ನನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದ್ದು ಆಗ ನಾನು ಇವರಿಂದ ತಪ್ಪಿಸಿಕೊಂಡು ಅಜೀಜ್ ಕೇಫೆ ಮೇಲೆ ಹೆದರಿ ಓಡಿಹೋಗಿ ಕೋಣೆಯಲ್ಲಿ ಅಡಗಿಕೊಂಡಿದ್ದಾಗ ಇವರು ಪುನಃ ಅಲ್ಲಿಯೂ ಬಂದು ತೂ ಕಹಾಂ ಜಾತೇಬೆ ಲೌಡೆ ಆಜ್ ತೇರೆಕೋ ನಹೀ ಛೋಡತೆ, ಅಂತಾ ಅವರಲ್ಲಿಯ ಜೀಲಾನಿ ಷಾ ಈತನು ಅಲ್ಲೆ ಬಿದ್ದಿರುವ ಯಾವುದೋ ಒಂದು ಚುಪಾದ ಕಬ್ಬಿಣದ ವಸ್ತುವನ್ನು ತೆಗೆದುಕೊಂಡು  ಕೊಲೆ ಮಾಡುವ ಉದ್ದೇಶದಿಂದ ತೂ ದರ್ವಾಜಾ ಖೋಲ್ ಅಂತಾ ಬಾಗಿಲನ್ನು ಮುರಿಯಲು ಪ್ರಯತ್ನಿಸುತ್ತಿದ್ದು, ಆಗ ಹೋಟೆಲ್ ಮಾಲೀಕ ಅಬ್ದುಲ್ ರಹೀಂ ಇವರು ಇನ್ನೋಂದು ಮೇಲ್ಚಾವಣಿಯಲ್ಲಿ ಮಲಗಿದ್ದು ಇತ್ತು ಶಬ್ದಕೇಳಿ, ಕೆಳಗೆ ಬಂದು ಜೀಲಾನಿ ಷಾ ಈತನನ್ನು ಕೆಳಗೆ ಕಳುಹಿಸಿದ್ದು ಆಗ ಹೊಟೇಲ್ ಮ್ಯಾನೇಜರ್ ಯುಸುಫ್ ಇವರಿಗೆ ಆಜ್ ತೂ ಚೂಡಾನೆ ಸೆ  ಉನ್ ಬಚಗಯಾ ಅಂತಾ ಸಿಟ್ಟಿನಿಂದ ಒಂದು ಚುಪಾದ ಕಬ್ಬಿಣದ ವಸ್ತುವಿನಿಂದ ಯುಸುಫ್ ಇವರಿಗೆ ಜೋರಾಗಿ ತಲೆಗೆ ಹೋಡೆಯಲು ಹೋದಾಗ ತಮ್ಮ ಕೈಯನ್ನು ಅಡ್ಡತಂದಿರುವುದರಿಂದ ಯುಸುಫ್ ರವರ ಎಡಗೈಗೆ ತಾಗಿ ಭಾರಿ ರಕ್ತಗಾಯ ಆಗಿರುತ್ತದೆ. ಆಗ ನನ್ನ ಗೇಳೆಯ ಶಹಬಾಜ್, ಹಾಗೂ ಪಕ್ಕದ ನವಾಜ್ ಲಾಡ್ಜ ಮ್ಯಾನೇಜರ ಜುಬೇರ್  ಇವರುಗಳು ಬಂದು ಜಗಳ ಬಿಡಿಸಿದ್ದು ಇರುತ್ತದೆ. ನಂತರ ನಾನು ಮತ್ತು ನನ್ನ ಗೇಳೆಯರಾದ ಶಹಬಾಜ್, ಶಾದಾಬಜಿಬ್ರಾನ್ ಎಲ್ಲರೂ ಸೇರಿ ಯುಸುಫ್ ಇವರನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು ಇರುತ್ತದೆ. ನಂತರ ನಾನು  ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ 24/11/2022 ರಂದು ಪೊಲೀಸ್ ಠಾಣೆಗೆ ಬಂದು ನನಗೆ ಮತ್ತು ಹೋಟೆಲ್ ಮ್ಯಾನೇಜರ್ ಯುಸುಫ್ ಇವರಿಗೆ ಕೊಲೆ ಮಾಡಲು ಪ್ರಯತ್ನಿಸಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿಬೇಕೆಂದು ನನ್ನ ಫಿರ್ಯಾದಿ ದೂರನ್ನು ಗಣಕಯಂತ್ರದಲ್ಲಿ ಹೇಳಿ ಟೈಪ್ ಮಾಡಿಸಿದ್ದು  ನಿಜವಿರುತ್ತದೆ.  ಕಾರಣ ನನಗೆ ಮತ್ತು ಹೋಟೆಲ್ ಮ್ಯಾನೇಜರ್ ಯುಸುಫ್ ಇವರಿಗೆ, ಕೊಲೆ ಮಾಡಲು ಪ್ರಯತ್ನಿಸಿದ , ಅವಾಚ್ಯ ಶಬ್ಧಗಳಿಂದ ಬೈಯ್ದು , ಜೀವಬೆದರಿಕೆ ಹಾಕಿದವರ ವಿರುದ್ಧ ಸೂಕ್ತಕಾನೂನು ಕ್ರಮ ಜರುಗಿಸಬೇಕು ಅಂತಾ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :-  ಫಿರ್ಯಾದಿ ಶ್ರೀ ಶಿವಕಾಂತ ತಂದೆ ಶರಣಪ್ಪ ವಯ:52 ವರ್ಷ ಉ: ಒಕ್ಕಲುತನ ಸಾ: ಬಿದನೂರು ತಾ: ಅಫಜಲಪುರ ಸಲ್ಲಿಸಿದ ಖಾಸಗಿ ದೂರಿನ ಮೇಲೆ ವಸೂಲಾದ ಖಾಸಗಿ ದೂರು ಅರ್ಜಿ ಸಂ.244/2022 ನೇದ್ದರ ಸಾರಾಂಶವೇನಂದರೆ, ಫಿರ್ಯಾದಿಯು ನಲೋಗಿ ಪೊಲೀಸ್ ಠಾಣೆ ಗುನ್ನೆ ನಂ:78/2021 ನೇದ್ದರಲ್ಲಿ ಪ್ರತ್ಯಕ್ಷ ಸಾಕ್ಷಿದಾರನಾಗಿದ್ದು ಸದರಿ ಪ್ರಕರಣವು ಮಾನ್ಯ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಕಲಬುರಗಿಯ ನೊಂದಯಿತ ಎಸ್ ಸಿ ನಂ:215/21 ನೇದ್ದರಲ್ಲಿ ಇರುತ್ತದೆ. ಫಿರ್ಯಾದಿಯು ದಿನಾಂಕ:11/03/2022 ರಂದು  ಸಿ ಸಿ ನಂ:10112/21 ನೇದ್ದರಲ್ಲಿ ವಿಚಾರಣೆಯಲ್ಲಿರುವ 2ನೇ ಹೆಚ್ಚುವರಿ ಜೆ.ಎಮ್.ಎಫ್.ಸಿ ನ್ಯಾಯಾಲಯಕ್ಕೆ ಬಂದಿರುತ್ತಾರೆ. 11:45 ರ ಸುಮಾರಿಗೆ ಫಿರ್ಯಾದಿದಾರರು ನ್ಯಾಯಾಲಯದಲ್ಲಿ ಇದ್ದಾಗ ಷರತ್ತು ಜಾಮಿನಿನ ಮೇಲೆ ಇದ್ದ ಅರೋಪಿತರು ದೂರುದಾರರಿಗೆ ಸನ್ಹೆ ಮುಖಾಂತರ ಬೆದರಿಕೆ ಹಾಕಿರತ್ತಾರೆ, ಆರೋಪಿತರು ಅನೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ. ಅವರು ನಮ್ಮ ಫೋಟೊ ತೆಗೆದುಕೊಂಡಿದ್ದು ಅವರು ನನ್ನ ಜೀವ ತೆಗೆಯುವ ಯೊಜನೆಯಲ್ಲಿದ್ದು ಸುಪಾರಿಕೊಡುವ ಸಾದ್ಯತೆ ಇರುತ್ತದೆ. ಅಂತ ಇತ್ಯಾದಿಯಾಗಿ ನೀಡಿದ ಖಾಸಗಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ ೧೧.೦೪.೨೦೧೪ ರಿಂದ ದಿನಾಂಕ ೦೪.೦೮.೨೦೧೪ ರ ಅವಧಿ ಸದರಿ ಆರೋಪಿತರು ಪ್ಲಾಟ ನಂ. ೪೮ ಮತ್ತು ೮೬ ನೇದ್ದಲ್ಲಿ ಸುಳ್ಳು ದಾಖಲಾತಿಗಳನ್ನು ತಯ್ಯಾರಿಸಿ ನೊಂದಣಿ ಮಾಡಿಕೊಂಢಿದ್ದು, ಫಿರ್ಯಾದಿಗೆ ಯಾವುದೇ ಮಾಹಿತಿ ನೀಡದೇ ರೆಕ್ಟಿಫಿಕೇಶನ್ ಡೀಡ್ ಮಾಡಿ ಸಬ್ ರಜಿಸ್ಟರ್ ದಲ್ಲಿ ನಾನೇ ನೀಲಾವತಿ ಅಂತಾ ಫೊಟೋ ತೆಗೆಯಿಸಿ ನಕಲು ಸಹಿ ಮಾಡಿ ನೊಂದಣಿ ಮಾಡಿಕೊಂಡು ಮೋಸ ಮಾಡಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 28-11-2022 11:41 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080