ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ ಠಾಣೆ :-  ದಿನಾಂಕ: 24.10.2022 ರಂದು ಸಾಯಂಕಾಲ 6.15 ಗಂಟೆಗೆ ಮಾನ್ಯ ಪೊಲೀಸ್ ಆಯುಕ್ತರು ಕಲಬುರಗಿ ನಗರ ರವರ ಸಮೂಚಿತ ಮಾರ್ಗವಾಗಿ ಯಾದಗಿರಿ ಜಿಲ್ಲೆಯ ಸೋರಾಪೂರ ಪೊಲೀಸ್ ಠಾಣೆಯಲ್ಲಿ ದಿನಾಂಕ: 13/05/2022 ರಂದು 10:00 ಎ.ಎಮ್ ಕ್ಕೆ ಪಿರ್ಯಾದಿದಾರರಾದ ಶ್ರೀ ಶ್ರೀಶೈಲ್ಕುಮಾರ ತಂದೆ ಶಿವಯ್ಯ ಮಠಪತಿ ವ|| 43 ವರ್ಷ ಜಾ|| ಜಂಗಮ ಉ|| ಶಾಖಾ ವ್ಯವಸ್ಥಾಪಕರು, ಐಸಿಐಸಿಐ ಪ್ರೂಡೇನ್ಸಿಯಲ್ ಲೈಫ್ ಇನ್ಸೂರೇನ್ಸ ಕಂಪನಿ ಲಿಮಿಟೆಡ್, ಮಹಾಗಾಂವ್ಕರ್ ಮ್ಯಾನ್ಶನ್, ಕೋರ್ಟ ರೋಡ್, ಖೂಬಾ ಪ್ಲಾಟ್ ಕಲಬುರಗಿ ಸಾ|| ಬಿದ್ದಾಪೂರ ಕಾಲೋನಿ ಕಲಬುರಗಿ ರವರು ನೀಡಿದ ದೂರು ಅರ್ಜಿಯ ಸಾಯಾಂಶವೆನೆಂದರೆ  ಟಿ. ವಿಜಯಕುಮಾರ ಸಾ|| ಎಕ್ಸಿಸ್ ಬ್ಯಾಂಕ್ ಹತ್ತಿರ ಮೋಜಂಪುರ ಏರಿಯಾ ಸುರಪುರ ಈತನು ನಮ್ಮ ಕಂಪನಿಯಲ್ಲಿ 2 ಪಾಲಿಸಿಗಳನ್ನು ಮಾಡಿಸಿರುತ್ತಾನೆ. 1) ದಿನಾಂಕ: 26/02/2019 ರಂದು ಪಾಲಸಿ ನಂ. 34940954 ನೇದ್ದನ್ನು ಮಾಡಿಸಿರುತ್ತಾರೆ ಅದರ ವಿಮಾ ಮೊತ್ತ 50,00,000/-ರೂ.ಗಳು 2) ದಿನಾಂಕ: 13/08/2019 ರಂದು ಪಾಲಸಿ ನಂ. 44077663 ನೇದ್ದನ್ನು ಮಾಡಿಸಿರುತ್ತಾರೆ. ಅದರ ವಿಮಾ ಮೊತ್ತಾ 75,00,000/- ರೂ.ಗಳು. ಈ ಎರಡೂ ಪಾಲಸಿಗಳನ್ನು ಟಿ. ವಿಜಯಕುಮಾರ ಈತನು ಆನ್ಲೈನ್ ಮುಖಾಂತರ ಖರೀದಿಸಿರುತ್ತಾರೆ. ಪಾಲಸಿಗೆ ಸಂಬಂದಿಸಿದ ಎಲ್ಲಾ ದಾಖಲೆಗಳು ಮತ್ತು ಆರೋಗ್ಯಕ್ಕೆ ಸಂಬಂದಿಸಿದ ಹಾಗೂ ಇತರೆ ವಿಷಯಗಳನ್ನು ಆನ್ಲೈನ್ಲ್ಲಿಯೇ ಭರ್ತಿ ಮಾಡಿರುತ್ತಾನೆ ಅಲ್ಲದೆ ಮೆಡಿಕಲ್ ತಪಾಸಣೆಯನ್ನು ಮುಗಿದ ನಂತರ ಕಂಪನಿಯು ಪಾಲಸಿಯನ್ನು ನೀಡಿರುತ್ತಾರೆ.   ಟಿ. ವಿಜಯಕುಮಾರ ಈತನು ತಮ್ಮ ಪಾಲಸಿ ನಂ. 34940954 ನೇದ್ದಕ್ಕೆ ಪಾಲಿಸಿಯ ನಾಮಿನಿಯಾದ ರೇಣುಕಾಬಾಯಿ ಚೌದರಿ (ತಾಯಿ) ಅವರನ್ನು ತೆಗದು, ಅಜಯಕುಮಾರ (ತಮ್ಮ) ಹೆಸರಿಗೆ ದಿ: 22/02/2021 ರಂದು ನಾಮಿನಿ ಬದಲಾಯಿಸಿರುತ್ತಾನೆ. ಪಾಲಿಸಿ ನಂ. 44077663 ನೇದ್ದಕ್ಕೆ ಪಾಲಿಸಿ ನಾಮಿನಿಯಾದ ಪ್ರಿಯಾಂಕ ಚೌದರಿ (ತಂಗಿ) ಅವರನ್ನು ತೆಗೆದು, ಅಜಯಕುಮಾರ (ತಮ್ಮ) ಹೆಸರಿಗೆ ದಿ: 22/02/2021 ರಂದು ನಾಮಿನಿ ಬದಲಾಯಿಸಿರುತ್ತಾನೆ.   ಪಾಲಿಸಿಯ ಹಕ್ಕುದಾರನಾದ ಅಜಯಕುಮಾರ ಅವರು ದಿನಾಂಕ: 16/06/2021 ರಂದು ಪಾಲಿಸಿಯ ಡೆತ್ ಕ್ಲೇಮ್ ಸಲುವಾಗಿ ಐಸಿಐಸಿಐ ಪ್ರೂಡೇನ್ಸಿಯಲ್ ಲೈಫ್ ಇನ್ಸೂರೇನ್ಸ ಕಂಪನಿ ಲಿಮಿಟೆಡ್ ಕಲಬುರಗಿಗೆ ಬಂದು, ತಾನು ಟಿ. ವಿಜಯಕುಮಾರ ರವರ ಅವಳಿ ತಮ್ಮನಿರುತ್ತೇನೆ ಅಂತ ಹೇಳಿ, ನಮ್ಮ ಅಣ್ಣನಾದ ವಿಜಯಕುಮಾರ ಈತನು ದಿನಾಂಕ: 30/05/2021 ರಂದು ಕೊವಿಡ್ನಿಂದ ಮೃತಪಟ್ಟಿರುತ್ತಾನೆ ಎಂದು ಮರಣ ಪ್ರಮಾಣ ಪತ್ರ, ವೈದ್ಯಕೀಯ ಪ್ರಮಾಣ ಪತ್ರ, ಪಾಲಿಸಿಯ ಬಾಂಡ್ಗಳು, ಹಾಸ್ಪಿಟಲ್ನ ಪೇಷಂಟ್ ರಿಕಾಡ್ರ್ಸ, ಆಧಾರ ಕಾರ್ಡ, ಪ್ಯಾನ್ ಕಾರ್ಡ ಹಾಗೂ ತನ್ನ ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ ಮತ್ತು ಹೆಚ್ಡಿಎಫ್ಸಿ ಬ್ಯಾಂಕ್ ಅಕೌಂಟ್ನ ಕ್ಯಾನ್ಸಲ್ ಚೆಕ್ ಇವುಗಳನ್ನು ಒದಗಿಸಿರುತ್ತಾನೆ.   ನಂತರ ನಮ್ಮ ಕಂಪನಿಯವರು ಈ ಕ್ಲೇಮ್ ಕುರಿತು ತನಿಖೆಯನ್ನು ಕೈಕೊಂಡು ಈ ಕೆಳಕಂಡ ಅಂಶಗಳನ್ನು ಕ್ರೂಡಿಕರಿಸಿರುತ್ತಾರೆ. 1) ಹಕ್ಕುದಾರನಾದ ಅಜಯಕುಮಾರ ಈತನು ನಮಗೆ ಒದಗಿಸಿದ ಓಟರ ಐಡಿ ನಂ. YZÀH7091978 ನೇದ್ದರ ಬಗ್ಗೆ ನ್ಯಾಷನಲ್ ಓಟರ ಸರ್ವಿಸ್ಸ್ ಪೋರ್ಟಲ್ನಲ್ಲಿ ಪರಿಶೀಲನೆ ಮಾಡಿದಾಗ, ಓಟರ ಐಡಿ ಅಮಾನ್ಯವಾಗಿದೆ ಅಂತ ತಿಳಿದುಬಂದಿರುತ್ತದೆ. 2) ಪಾಲಿಸಿ ಹಕ್ಕುದಾರನಾದ ಅಜಯಕುಮಾರ ಈತನಿಗೆ ಕುಟುಂಬದ ಭಾವಚಿತ್ರಗಳನ್ನು ಒದಗಿಸುವಂತೆ ಈ ಮೇಲ್ ಮೂಲಕ ಕೇಳಿದಾಗ, ಕುಟುಂಬದ 2 ಭಾವಚಿತ್ರಗಳನ್ನು ಅಪಲೋಡ್ ಮಾಡಿ ಕಳುಹಿಸಿರುತ್ತಾನೆ. ನಾವು ಎರಡೂ ಭಾವಚಿತ್ರಗಳನ್ನು ಪರಿಶೀಲನೆ ಮಾಡಿದಾಗ ಅವಳಿ ಅಣ್ಣ-ತಮ್ಮಂದಿರ ಭಾವಚಿತ್ರಗಳ ಮುಖಭಾವನೆಗಳು ಒಂದೇ ರೀತಿಯಾಗಿ ಕಂಡುಬರುತ್ತವೆ ಮತ್ತು ಇಬ್ಬರ ಪ್ಯಾಂಟುಗಳು ಒಂದೇ ರೀತಿಯಲ್ಲಿ ಒದ್ದೆಯಾಗಿರುವ ಬಗ್ಗೆ ಕಂಡುಬಂದಿರುತ್ತದೆ. ಹೀಗಾಗಿ ಈ ಎರಡೂ ಭಾವಚಿತ್ರಗಳು ತಿದ್ದುಪಡಿ ಮಾಡಿ ಕಂಪನಿಗೆ ಕಳುಹಿಸಿರುತ್ತಾನೆ. 3) ಅಜಯಕುಮಾರ ಈತನು ದಿನಾಂಕ: 29/03/2021 ರಂದು ನಮ್ಮ ಕಂಪನಿಯಲ್ಲಿ ಪಾಲಿಸಿ ನಂ. 96546062 ನೇದ್ದನ್ನು ಖರೀದಿಸಿರುತ್ತಾನೆ. ಅದರಲ್ಲಿ ಮಮತಾ ಚೌದರಿ (ಹೆಂಡತಿ) ಇವರನ್ನು ನಾಮಿನಿಯಾಗಿ ಮಾಡಿರುತ್ತಾನೆ. ಪಾಲಿಸಿ ಮಾಡುವಾಗ ತನ್ನ ವಿದ್ಯಾಭ್ಯಾಸದ ಪ್ರಮಾಣ ಪತ್ರಗಳನ್ನು ಒದಗಿಸಿರುತ್ತಾನೆ. ಸರ್ಟೀಫಿಕೇಟ್ ನಂ. 097006 ಮತ್ತು ರಜಿಸ್ಟರ್ ನಂ. 91546132 ಆಗಿರುತ್ತದೆ. ಇದನ್ನು ನಾವು ಗುಲಬರ್ಗಾ  ವಿಶ್ವವಿದ್ಯಾಲಯದಲ್ಲಿ ಪರಿಶೀಲಿಸಿದಾಗ ಇದು kd & FoÀrgÀdd ಪ್ರಮಾಣ ಪತ್ರವೆಂದು ತಿಳಿದುಬಂದಿರುತ್ತದೆ. ಟಿ. ವಿಜಯಕುಮಾರ ಇವನ ಎರಡೂ ಪಾಲಿಸಿಗಳಿಗೆ ಒದಗಿಸಿದ ವಿದ್ಯಾಭ್ಯಾಸ ಪ್ರಮಾಣ ಪತ್ರ ಸರ್ಟೀಫಿಕೇಟ್ ಕೂಡ ನಂ. 097006 ಅಂತ ಇರುತ್ತದೆ ಮತ್ತು ರಜಿಸ್ಟರ್ ನಂ. 1546132 ಎಂದು ಇರುತ್ತದೆ. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ವಿಚಾರಿಸಿದ ಪ್ರಕಾರ ಟಿ. ವಿಜಯಕುಮಾರ ಇವರ ಪ್ರಮಾಣ ಪತ್ರ (ಬಿ.ಕಾಂ) ಸರಿ ಇದ್ದು, ಆದರೆ ಅಜಯಕುಮಾರ ಇವರ ಪ್ರಮಾಣ ಪತ್ರದ (ಬಿಎ) ಯಾವುದೇ ದಾಖಲಾತಿಗಳು ನಮ್ಮ ವಿಶ್ವ ವಿದ್ಯಾಲಯದಲ್ಲಿ ಇರುವದಿಲ್ಲ ಅಂತ ಮೌಖಿಕವಾಗಿ ತಿಳಿಸಿರುತ್ತಾರೆ.  4) ಪಾಲಿಸಿ ಹಕ್ಕುದಾರನಾದ ಅಜಯಕುಮಾರ ಈತನು ಟಿ. ವಿಜಯಕುಮಾರ ಅವರ 2017-18, 2018-19, 2019-20 ಮೂರು ವರ್ಷಗಳ ಇನ್ಕಮ್ ಟ್ಯಾಕ್ಸ್ ರಿಟನ್ರ್ಸಗಳನ್ನು ಒದಗಿಸಿರುತ್ತಾನೆ. ಆದರೆ 2017-18 ಮತ್ತು 2018-19 ಐಟಿಆರ್ ಪ್ರಮಾಣ ಪತ್ರಗಳ acknoÀwlddgÀdldnt noÀ. 414537470300119 ಎರಡರಲ್ಲೂ ಒಂದೇ ಇರುತ್ತದೆ. ಇದರಿಂದ 2017-18 ರ ಐಟಿಆರ್ FoÀrgÀdd ಎಂದು ತಿಳಿದುಬಂದಿರುತ್ತದೆ. 5) ನಮ್ಮ ಕಂಪನಿಯ ತನಿಖಾ ತಂಡದವರು ಟಿ. ವಿಜಯಕುಮಾರ ಈತನ ಮನೆಯ ಅಕ್ಕ ಪಕ್ಕದ ಜನರಲ್ಲಿ ವಿಚಾರಿಸಿದಾಗ ಟಿ. ವಿಜಯಕುಮಾರನಿಗೆ ಅವಳಿ ತಮ್ಮ ಇರುವದಿಲ್ಲ, ಆದರೆ 12-13 ವರ್ಷದ ತಮ್ಮನಿರುತ್ತಾನೆ ಮತ್ತು ತಂಗಿಯರು ಇರುತ್ತಾರೆ. ಟಿ. ವಿಜಯಕುಮಾರ ಈತನು ಮೊದಲಿನಿಂದಲೂ ಮೋಸದ ವ್ಯವಹಾರದಲ್ಲಿ ತೊಡಗಿರುತ್ತಾನೆ ಅಂತ ತಿಳಿದುಬಂದಿರುತ್ತದೆ. ಈ ಎಲ್ಲಾ ಮೇಲಿನ ಅಂಶಗಳಿಂದ ತಿಳಿದುಬಂದಿರುವದೇನೆಂದರೆ, ಪಾಲಿಸಿಯ ಹಕ್ಕುದಾರನಾದ ಅಜಯಕುಮಾರ ಈತನು ಮೋಸದಿಂದ ಹಣವನ್ನು ಸೆಳೆಯಲು, ಖೊಟ್ಟಿ ದಾಖಲಾತಿಗಳನ್ನು ಸೃಷ್ಟಿಸಿ ಕಂಪನಿಗೆ ದೊಡ್ಡ ಮೊತ್ತದ ಹಣದ ಹಾನಿ ಮತ್ತು ಕಂಪನಿಯ ಹೆಸರಿಗೆ ಕಳಂಕ ತರಲು ಪ್ರಯತ್ನಿಸಿದ್ದು, ಕಾರಣ ಸದರಿಯವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಂಚಾರಿ ಪೊಲೀಸ ಠಾಣೆ -1 :- ದಿನಾಂಕ 24.10.2022 ರಂದು ಬೆಳಿಗ್ಗೆ 5-15 ಗಂಟೆಗೆ ಖಾಸಗಿ ಎ.ಎಸ.ಎಮ್ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ಸಿದ್ದಾರ್ಥ, ನಿತೀನ ಹಾಗೂ ಪುನೀತ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಭೆಟಿಕೊಟ್ಟು ಗಾಯಾಳು ನಿತೀನ ಮತ್ತು ಸಿದ್ದಾರ್ಥ ಇಬ್ಬರೂ ಮಾತನಾಡಿ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರದ ಕಾರಣ ಅವರ ಜೊತೆಗಿದ್ದ ಸಿದ್ದಾರ್ಥ ಇವರ ತಂದೆಯಾದ ಶ್ರೀ ಪ್ರಕಾಶ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ 24-10-2022 ರಂದು ರಾತ್ರಿ 12-30 ಎ.ಎಮ್ ಸುಮಾರಿಗೆ ನನ್ನ ಮಗ ಸಿದ್ದಾರ್ಥ ಇತನು ಕೆ.ಬಿ.ಎನ್ ದರ್ಗಾ ಏರಿಯಾದಲ್ಲಿ ಊಟ ಮಾಡಿಕೊಂಡು ಬರುವ ಕುರಿತು ತನ್ನ ಗೆಳೆಯ ಪುನೀತ ಇತನು ಚಲಾಯಿಸುತ್ತೀರುವ ಮೋಟಾರ ಸೈಕಲ ನಂಬರ ಕೆಎ-33/ಯು-6529 ನೇದ್ದರ ಹಿಂದುಗಡೆ ನನ್ನ ಮಗ ಸಿದ್ದಾರ್ಥ ಹಾಗೂ ನಿತೀನ ಇಬ್ಬರೂ ಕುಳಿತು ಕೆ.ಬಿ.ಎನ್ ದರ್ಗಾ ಏರಿಯಕ್ಕೆ ಕೇಂದ್ರ ಬಸ್ಸ ನಿಲ್ದಾಣದಿಂದ ಜಗತ ಸರ್ಕಲ, ಎಸಟಿಬಿಟಿ ಕ್ರಾಸ ಮುಖಾಂತರವಾಗಿ ಹೋಗುವಾಗ ಪುನೀತ ಇತನು ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ರೋಡ ಎಡ ಬಲ ಕಟ್ ಹೊಡೆಯುತ್ತಾ ಚಲಾಯಿಸಿಕೊಂಡು ಹೋಗಿ ಸಾತ ಗುಮ್ಮಜ್ ಸಮೀಪ ಬರುವ ಸಯ್ಯದ ಅಕ್ಬರ ಹುಸೇನಿ ಸ್ಕೂಲ ಎದುರಿನ ರೋಡ ಡಿವೈಡರಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಮಗ ಸಿದ್ದಾರ್ಥ ಹಾಗೂ ನಿತೀನ ಇವರಿಗೆ ಭಾರಿಗಾಯಗೊಳಿಸಿ  ತಾನೂ ಗಾಯ ಹೊಂದಿದ್ದು ಆತನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 10-11-2022 12:58 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080