Feedback / Suggestions

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ ೧೦-೦೮-೨೦೨೨ ರಂದು ರಾತ್ರಿ ೭.೦೦ ಗಂಟೆ ದಿನಾಂಕ ೧೧-೦೮-೨೦೨೨ ರಂದು ಬೆಳಿಗ್ಗೆ ೬.೦೦ ಗಂಟೆ ಸುಮಾರಿಗೆ ಯಾರೋ ಅಪರಿಚಿತ ಕಳ್ಳರು ಮನೆಯ ಒಳಗೆ ಹೋಗಿ ಮನೆಯಲ್ಲಿದ್ದ ಅಲಮಾರಿಯಲ್ಲಿಟ್ಟಿದ್ದ ೧) ೫ ಗ್ರಾಂ ಬಂಗಾರದ ಉಂಗುರ ಅ.ಕಿ ೧೦೦೦೦/- ರೂ. ೨) ೮ ಗ್ರಾಂ ಬಂಗಾರದ ಮಂಗಳಸೂತ್ರ ೧೫೦೦೦/- ೩) ೬ ಗ್ರಾಂ ಬಂಗಾರದ ಕಿವಿಯೋಲೆ ಅ.ಕಿ ೧೨೦೦೦/- ರೂ. ೪) ೧೫೦ ಗ್ರಾಂ ಬೆಳ್ಳಿಯ  ಕಾಲಚೈನ್ ಅ.ಕಿ ೧೫೦೦/- ರೂ. ೫) ೧೦೦ ಗ್ರಾಂ ಬೆಳ್ಳಿಯ  ಕಾಲಚೈನ್ ಅ.ಕಿ ೮೦೦/- ೬) ನಗದು ಹಣ ೪೧,೦೦೦/- ರೂ. ಹೀಗೆ ಒಟ್ಟು ೮೦,೩೦೦/- ರೂ, ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ಮೋಟರ ಸೈಕಲ್  KA 32 EC 5941   ಅ. ಕಿ 18000/- ನೇದ್ದನ್ನು ಪಿರ್ಯ಻ದಿಯು ಮನೆಯ ಮುಂದೆ ಹಚ್ಚಿದ್ದನ್ನು ಯಾರೋ ಕಳ್ಳರು ದಿನಾಂಕ 08/05/2022 ರಂದು ಬೆಳಿಗ್ಗೆ 11:00 ಎ.ಎಮ್ ದಿಂದ 1.00 ಪಿ.ಎಮ್  ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಂಚಾರಿ ಪೊಲೀಸ್‌ ಠಾಣೆ :- ದಿನಾಂಕ 24.08.2022 ರಂದು ಸಾಯಂಕಾಲ 8-15 ಗಂಟೆಗೆ ಖಾಸಗಿ ಧನ್ವಂತರಿ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ಸೂರ್ಯಕಾಂತ ಮತ್ತು ನಾಗೇಂದ್ರ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಭೆಟಿಕೊಟ್ಟು ಗಾಯಾಳು ಸೂರ್ಯಕಾಂತ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ: 24-08-2022 ರಂದು ಸಾಯಂಕಾಲ ಅಂದಾಜು 7-00 ಗಂಟೆ ಸುಮಾರಿಗೆ ನಳಂದ ಶಾಲೆಯಲ್ಲಿ ಕಾರ್ಯಕ್ರಮ ಇದ್ದುದ್ದರಿಂದ ಸದರ ಕಾರ್ಯಕ್ರಮಕ್ಕೆ ನಾನು ಮತ್ತು ನನ್ನ ಗೆಳೆಯನಾದ ನಾಗೇಂದ್ರ ತಂದೆ ರಾಮಣ್ಣಾ ಹೊಕ್ಕರಾಣಿ ಇಬ್ಬರೂ ಸೇರಿಕೊಂಡು ನಾನು ಚಲಾಯಿಸುತ್ತೀರುವ ಮೋಟಾರ ಸೈಕಲ ನಂಬರ ಕೆಎ-32/ಇಎ-2396 ನೇದ್ದರ ಮೇಲೆ ಸಾಹಿ ಮಂದಿರದಿಂದ ರಾಮ ಮಂದಿರ ಸರ್ಕಲ ಮುಖಾಂತರವಾಗಿ ಹೊಸ ಜೇವರ್ಗಿ ರೋಡ ಮೇಲೆ ಬರುವ ಮಾನಕರ್ ಪೆಟ್ರೊಲ ಪಂಪನಲ್ಲಿ ಪೆಟ್ರೊಲ ಹಾಕಿಸಿಕೊಂಡು ನಳಂದ ಕಾಲೇಜ ಕಡೆಗೆ ಹೋಗುವ ಕುರಿತು ರೋಡ ಮೇಲೆ ಹೋಗಿ ಬರುವ ವಾಹನಗಳನ್ನು ನೋಡಿಕೊಂಡು ವಾಪಸ್ಸ ರಾಮ ಮಂದಿರ ಸರ್ಕಲ ಕಡೆಗೆ ಹೋಗುವ ಕುರಿತು ನಾನು ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುವಾಗ ಮಾನಕರ್ ಪೆಟ್ರೊಪ ಪಂಪ ಎದುರಿನ ರೋಡ ಮೇಲೆ ಹೊಸ ಮೋಟಾರ ಸೈಕಲ ಚೆಸ್ಸಿ ನಂಬರ       MD2B72BXXNCD48594 ನೆದ್ದರ ಸವಾರ ಯಲ್ಲಾಲಿಂಗ ಇತನು ರಾಮ ಮಂದಿರ ಸರ್ಕಲ ಕಡೆಯಿಂದ ಆರಪಿ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಮತ್ತು ನಾಗೆಂದ್ರ ಇಬ್ಬರಿಗೆ ಗಾಯಗೊಳಿಸಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ:24-08-2022 ರಂದು 3:30 ಪಿಎಮ್ ಕ್ಕೆ ಶ್ರೀ ಗಡ್ಡೆಪ್ಪ ಹೆಚ್.ಸಿ:165 ಫರಹತಾಬಾದ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ: 24-08-2022 ರಂದು ಮದ್ಯಾಹ್ನ 1:00 ಗಂಟೆಯ ಸುಮಾರಿಗೆ ನಾನು ಪೊಲೀಸ ಠಾಣೆಯಲ್ಲಿದ್ದಾಗ ಭಾತ್ಮಿ ಬಂದಿದ್ದೇನೆಂದರೆ, ನಮ್ಮ ಠಾಣೆಯ ವ್ಯಾಪ್ತಿಯ ಕಡಣಿ ಗ್ರಾಮದಲ್ಲಿ ಲಕ್ಷ್ಮೀ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಕುಳಿತು ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಸಾರ್ವಜಿನಿಕರಿಗೆ ಹೇಳಿ ಸಾರ್ವಜನಿಕರಿಂದ ಹಣ ಪಡೆದು ದೈವ ಲೀಲೇಯ ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಭಾತ್ಮಿ ಬಂದ ಮೇರೆಗೆ ಪಿ.ಐ ಸಾಹೇಬರಿಗೆ ವಿಷಯ ತಿಳಿಸಿ ಅವರ ಮೌಖಿಕ ಆದೇಶದ ಮೇರಗೆ ನಾನು ಠಾಣೆಗೆ ಇಬ್ಬರೂ ಪಂಚರಾದ 1) ರವಿಕುಮಾರ ತಂದೆ ವೀರಬಸಪ್ಪ ಮಡಿವಾಳ ವಯ||29 ವರ್ಷ ಉ||ಕೂಲಿ ಕೆಲಸ ಜಾ||ಮಡಿವಾಳ   2) ದೀಪಕ ತಂದೆ ಶ್ರೀಮಂತ ಹರಸೂರ ವಯ|| 35 ವರ್ಷ ಜಾ||ಹರಿಜನ ಉ||ಕೂಲಿ ಕೆಲಸ ಸಾ:ಇಬ್ಬರು ಫರಹತಾಬಾದ ತಾಜಿ:ಕಲಬುರಗಿ ಇವರನ್ನು ಬರ ಮಾಡಿಕೊಂಡು ನಮ್ಮ ಠಾಣೆಯ ಸಿಬ್ಬಂದಿ ಜನರಾದ 1) ಶ್ರೀ ಮೌನೇಶ   ಸಿಪಿಸಿ:271 2) ಶ್ರೀ ಹಣಮಂತ ಸಿಪಿಸಿ:828 ರವರಿಗೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಠಾಣೆಯಿಂದ ಮಧ್ಯಾಹ್ನ 1:30 ಗಂಟೆಗೆ ಹೊರಟು ವಾಹನದಲ್ಲಿದ್ದ ಸಿಬ್ಬಂದಿ ಜನರಿಗೆ ಮತ್ತು ಪಂಚರಿಗೆ ಮಟಕಾ ಜೂಜಾಟದ ಮಾಹಿತಿ ತಿಳಿಸಿ, ಭಾತ್ಮೀ ಸ್ಥಳದ ಹತ್ತಿರ ಮಧ್ಯಾಹ್ನ 2:10 ಗಂಟೆಗೆ ಕಡಣಿ ಗ್ರಾಮಕ್ಕೆ ಹೋಗಿ ಮನೆಗಳ ಹತ್ತಿರ ಮರೆಯಾಗಿ ನಿಂತು ನೋಡಲು ಲಕ್ಷ್ಮೀ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಒಬ್ಬ ವ್ಯಕ್ತಿ ಸಾರ್ವಜನಿಕರನ್ನು ಕೂಗಿ ಕರೆದು 1 ರೂಪಾಯಿ ಗೆ 80 ರೂಪಾಯಿ ಗೆಲ್ಲಿರಿ ಅಂತಾ ಮಟಕಾ ದೈವ ಲೀಲೆಯ ನಂಬರ ಬರೆದುಕೊಳ್ಳುತ್ತಿದ್ದು ಅವನ ಜೊತೆಗೆ ಇತರರು ಇರುವುದನ್ನು ಖಚಿತ ಪಟ್ಟಾಗ 2:15 ಪಿಎಮ್ ಕ್ಕೆ ಏಕಕಾಲಕ್ಕೆ ದಾಳಿ ಮಾಡಲು ಮಟಕಾ ಬರೆಯಿಸುತ್ತಿದ್ದು ಜನರು ನಮ್ಮನ್ನು ನೋಡಿ ಓಡಿ ಹೋದರು ಮಟಕಾ ನಂಬರ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಸಿಕ್ಕಿ ಬಿದಿದ್ದು ಆತನ ಹೆಸರು ವಿಳಾಸ ವಿಚಾರಿಸಲು ಗುಂಡುರಾಯ@ಗುಂಡಪ್ಪ ತಂದೆ ಸಂಗನಬಸಪ್ಪ ಭಾವಿಕಟ್ಟಿ ವಯ||50 ವರ್ಷ ಉ||ಒಕ್ಕಲುತನ ಕೆಲಸ ಜಾ||ಲಿಂಗಾಯತ ಸಾ||ಕಡಣಿ ತಾಜಿ||ಕಲಬುರಗಿ ಅಂತ ತಿಳಿಸಿದ್ದು ಆತನಿಗೆ ಅಂಗ ಶೋಧನೆ ಮಾಡಲಾಗಿ 1) ಒಂದು ಮಟಕಾ ನಂಬರ ಚೀಟಿ ಅ.ಕಿ 00=00 2) ಒಂದು ಬಾಲ ಪೆನ್ನ ಅ.ಕಿ 00=00 3) ನಗದು ಹಣ 900/- ರೂ ಸಿಕ್ಕಿದ್ದು ಹೀಗೆ ಒಟ್ಟು ನಗದು ಹಣ 900/- ರೂ ಸಿಕ್ಕಿರುತ್ತದೆ. ಸದರಿಯವನ ಹತ್ತಿರ ಸಿಕ್ಕಿದ್ದ  ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಪಂಚರ ಸಮಕ್ಷಮದಲ್ಲಿ 2:20 ಪಿಎಮ್ ದಿಂದ 3:00 ಪಿಎಮ್ ದವರೆಗೆ ಕೈಕೊಂಡಿರುತ್ತೇನೆ. ನಂತರ ಜಪ್ತಿ ಪಂಚನಾಮೆ, ಮುದ್ದೆ ಮಾಲು ಮತ್ತು ಒಬ್ಬ ಆರೋಪಿತನೊಂದಿಗೆ 3:30 ಪಿಎಮ್ ಕ್ಕೆ  ಠಾಣೆಗೆ ಬಂದಿದ್ದು ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ಸರಕಾರಿ ತರಪೆ ಫಿರ್ಯಾದಿದಾರರು ಇಂದು ದಿನಾಂಕಃ-24-08-2022 ರಂದು ಬಂದು ಸಲ್ಲಿಸಿದ ಫಿರ್ಯಾದಿಯೇನೆಂದರೆ ಸದರಿಯವರು ಏರಿಯಾದಲ್ಲಿ ಪೆಟ್ರೊಲಿಂಗ್‌ ಕರ್ತವ್ಯದಲ್ಲಿದ್ದಾಗ ಸದರಿ ಆರೋಪಿತರು ಲಂಗಾರ ಹನು ಮಾನಗುಡಿಯ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ೧ ರೂಪಾಯಿಗೆ ೮೦ ರೂ ಗೆಲ್ಲಿರಿ ಎಂದು ಮಟಕಾ ಬರೆದುಕೊಳ್ಳುತ್ತಿದ್ದಾಗ ಬಂದ ಮಾಹಿತಿಯ ಆಧಾರದ ಮೇರೆಗೆ ದಾಳಿ ಮಾಡಲಾಗಿದ್ದು ಸದರಿಯವನನ್ನು ಚೆಕ್ ಮಾಡಲಾಗಿದ್ದು ಸದರಿಯವರ ಹತ್ತಿರ ಮಟಕಾಚೀಟಿ ನಗದು ಹಣ ಮತ್ತು ಪೆನ್ನುಗಳನ್ನು ಜಪ್ತಿಮಾಡಿ ಅವರ ವಿರುದ್ದ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

ರೋಜಾ ಪೊಲೀಸ್‌ ಠಾಣೆ :- ದಿನಾಂಕ: 23/08/22 ರಂದು ಸಾಯಂಕಾಲ 20.00 ಗಂಟೆಗೆ 1)ತಬ್ರೇಜ ಉಲ್ಲಾ ಹುಸೇನಿ @ ತಬ್ರೇಜ @ ಶೇಖ ತಬ್ರೇಜ,2) ಮುದಶೀರ , 3)ಅಬ್ದುಲ ಸಮದ 4) ನಜೀರ ಅಹ್ಮದ ಹಾಗೂ ಸಂಗಡ 07-08 ಜನರು ಸೇರಿಕೊಂಡು ಯಾವುದೇ ಅನುಮತಿ ಇಲ್ಲದೇ ವಿದಿ ವಿರುದ್ದ ಅಕ್ರಮ ಕೂಟ ರಚಿಸಿಕೊಂಡು, ಸಾರ್ವಜನಿಕ ರಸ್ತೆಯ ಮೇಲೆ ಪ್ರತಿಭಟನೆ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅಡತಡೆ ಮಾಡಿ, ಅದರಲ್ಲಿ ತಬ್ರೇಜ ಹುಸೇನಿ ಮತ್ತು ಮುದಶೀರ ಇವರು “ಗುಸ್ತಾಕ ಈ ನಬೀ ಕೀ ಏಕ ಹೀ ಸಜಾ ಸರತನಸೇ ಜುದಾ- ಸರತನಸೇ ಜುದಾ, ಗುಸ್ತಾಕ ಈ ನಬೀ ಕೀ ಏಕ ಹೀ ಸಜಾ ಸರತನಸೇ ಜುದಾ- ಸರತನಸೇ ಜುದಾ” ಅಂತಾ ಈ ಗೋಷ್ಯ ವಾಕ್ಯ ಕೂಗುತ್ತಾ ಟಿ. ರಾಜಾಸಿಂಗ M.L.A  ಇವರ ವಿರುದ್ದ , ಕಾಲಾ ಸುವರ ಈತನು ತಾನು ಹಿಂದು ದರ್ಮದವನಾಗಿ, ಇಸ್ಲಾಂ ಧರ್ಮದ ವಿರುದ್ದ ಅವಹೇಳನಕಾರಿ ಹೇಳಿಕೆಯನ್ನು  ಯೂಟೂಬನಲ್ಲಿ ಹರಿಬಿಟ್ಟಿದ್ದಾನೆ. ಹಾಗೂ ಈತನ ವಿರುದ್ದ ಕೇಸ ದಾಖಲಾದರೂ ಪೊಲೀಸರು ಜಾಮೀನಿನ ಮೇಲೆ ಬಿಟ್ಟಿದ್ದಾರೆ, ಅವನು ಪೊಲೀಸರ ಅಳಿಯನಿರಬಹುದು, ಹಾಗೂ ಕಾಲಾ ಸುವರ ರಾಜಾಸಿಂಗ ಈತನಿಗೆ ಸರಕಾರ ಕ್ರಮ ಕೈಕೂಳ್ಳದಿದ್ದರೇ ಭಾರತೀಯ ಮುಸ್ಲಿಂಮರು ಅವನ ಮನೆಯನ್ನು ಹೋಕ್ಕು ಅವನ ರುಂಡವನ್ನು ಕಡಿಯುತ್ತೆವೆ. ಅಂತಾ ಸಾರ್ವಜನಿಕರಿಗೆ ಬೀತಿ ಹುಟ್ಟಿಸಿ, ಟಿ ರಾಜಾಸಿಂಗ ಈತನು ಹಿಂದೂ ಆಗಿ ಮುಸ್ಲಿಂ ಧರ್ಮದ ವಿರುದ್ದ ಮಾತನಾಡಿರುತ್ತಾನೆ. ಅದಕ್ಕಾಗಿ ಅವನಿಗೆ ಬಿಡಬಾರದು ಎಂದು  ಸರಕಾರದ ವಿರುದ್ದ ಹಾಗೂ ಟಿ ರಾಜಾಸಿಂಗ ಎಮ.ಎಲ್,ಎ ವಿರುದ್ದ ಅಪರಾದವನ್ನು ಮಾಡುವಂತೆ  ಪ್ರಚೋದನಕಾರಿ ಹೇಳಿಕೆಯನ್ನು ನೀಡಿ ಸಾರ್ವಜನಿಕ ಶಾಂತಿ ಸುವೆವೆಸ್ಥೆಗೆ ದಕ್ಕೆತರುವಂತೆ ಮಾಡಿರುತ್ತಾರೆ. ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಆರೋಪಿತರ ಮಾಹಿತಿ ಸಂಗ್ರಹಿಸಿ ಇಂದು ದಿನಾಂಕ: 24.08.2022 ರಂದು  ಈ ದೂರು ದಾಖಲಿಸಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ್‌ ಠಾಣೆ :-  ದಿನಾಂಕ:24.08.2022 ರಂದು 01:00 ಎ.ಎಂ. ಫಿರ್ಯಾದಿ ಶ್ರೀ ಅಮಿತ ತಂದೆ ರಾಜೇಂದ್ರ ವಳಕೇರಿ ವಯ: 25 ವರ್ಷ ಜಾ: ಎಸ್.ಸಿ. (ಹೊಲೆಯ) ಉ: ಖಾಸಗಿ ಕೆಲಸ ಸಾ|| ಹನುಮಾನ ಗುಡಿ ಹತ್ತಿರ ಬಿದ್ದಾಪೂರ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿನೀಡಿದ್ದರ ಸಾರಾಂಶವೆನೆಂದರೆ, ನಾನು ಖಾಸಗಿ ಕೆಲಸ ಮಾಡಿಕೊಂಡು ಟುಂಬದೊಂದಿಗೆ ವಾಸವಾಗಿರುತ್ತೇನೆ. ನಮ್ಮ ತಂದೆ ರಾಜೇಂದ್ರ ಇವರು ಖಾಸಗಿ ಕೆಲಸ ಮಾಡಿಕೊಂಡಿರುತ್ತಾರೆ. ನಮ್ಮ ತಾಯಿ ನಿರ್ಮಲಾ ಇವರು ತರಕಾರಿ ವ್ಯಾಪಾರ ಮಾಡಿಕೊಂಡಿರುತ್ತಾರೆ. ನಮ್ಮ ತಂದೆ ತಾಯಿಗೆ ಒಟ್ಟು 2 ಜನ ಹೆಣ್ಣು ಮಕ್ಕಳು ಮತ್ತು ನಾನೊಬ್ಬನೆ ಗಂಡು ಮಗನಿರುತ್ತೇನೆ. ನನಗೆ ನಮ್ಮ ಬಡಾವಣೆಯ ಸಂತೋಷ ಜಮಾದಾರ ಇತನು ಗೆಳೆಯನಿರುತ್ತಾನೆ. ಸಂತೋಷ ಇತನು ದ್ವಿ-ಚಕ್ರ ವಾಹನ ಮೆಕ್ಯಾನಿಕ್ ಕೆಲಸ ಮಾಡಿಕೊಂಡು ಇರುತ್ತಾನೆ. ನಾವಿಬ್ಬರು ದಿನಾಲು ರಾತ್ರಿ ಊಟ ಮಾಡಿದ ನಂತರ ಬಡಾವಣೆಯಲ್ಲಿ  ವಾಕಿಂಗ್ ಮಾಡುತ್ತಿರುತ್ತೇವೆ.ಹೀಗಿದ್ದು ನಿನ್ನೆ ದಿನಾಂಕ:23.08.2022 ರಂದು ರಾತ್ರಿ 11:00 ಗಂಟೆ ಸುಮಾರಿಗೆ ನಾನು ಮತ್ತು ಸಂತೋಷ ಜಮಾದಾರ ಇಬ್ಬರೂ ಕೂಡಿಕೊಂಡುಬಿದ್ದಾಪೂರ ಕಾಲೋನಿಯಲ್ಲಿ ವಾಕಿಂಗ್ ಮಾಡುತ್ತಿರುವಾಗ 4 ಜನ ಸುಲಿಗೆ ಕೋರರು ತಮ್ಮ ಕೈಯಲ್ಲಿ ಮಾರಕ ಅಸ್ತ್ರಗಳನ್ನು ಹಿಡಿದುಕೊಂಡು ಬಂದು ನನಗೆ ಮತ್ತು ಸಂತೋಷನಿಗೆ ನಿಲ್ಲಿಸಿ ನಿಮ್ಮ ಹತ್ತಿರ ಎಷ್ಟು ಹಣ ಇವೆ ತೆಗೆಯಿರಿ ಅಂತ ಅಂದಾಗ ನಾವು ನಿಮಗೇಕೆ ಹಣ ಕೊಡಬೇಕು ಅಂತ ಅಂದಿದ್ದಕ್ಕೆ ಅವರಲ್ಲಿದ್ದ ಇಬ್ಬರು ತಮ್ಮ ಕೈಯಲ್ಲಿದ್ದ ಕಬ್ಬಿಣದ ರಾಡ ತೋರಿಸಿ ನಮಗೆ ಹೆದರಿಸಿದ್ದು, ಇನ್ನುಳಿದ ಇಬ್ಬರೂ ನನಗೆ ಮತ್ತು ಸಂತೋಷ ಇಬ್ಬರಿಗೂ ಕೈಯಿಂದ  ಹೊಟ್ಟೆಗೆ, ಬೆನ್ನಿಗೆ ಮತ್ತು ಮುಖಕ್ಕೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ. ನನಗೆ ಕೈಯಿಂದ ಹೊಡೆದ ವ್ಯಕ್ತಿ ನನ್ನ ಪ್ಯಾಂಟಿನ ಜೇಬಿನಲ್ಲಿದ್ದ ನಗದು ಹಣ 1300/- ಗಳನ್ನು ಜಬರದಸ್ತಿಯಿಂದ ಕಸಿದು ಕೊಂಡನು. ಮತ್ತು ಸಂತೋಷನಿಗೆ ಹೊಡೆದ ವ್ಯಕ್ತಿ ಅವನ ಹತ್ತಿರವಿದ್ದ ನಗದು ಹಣ 750/- ಗಳನ್ನು ಕಸಿದು ಕೊಂಡಿರುತ್ತಾನೆ. ಅಷ್ಟರಲ್ಲಿ ನಾವು ಚಿರಾಡುವುದನ್ನು ಕೇಳಿ ಬಡಾವಣೆಯ ಇತರೆ ಜನರು  ನಮ್ಮ ಕಡೆಗೆ ಓಡಿ ಬರುತ್ತಿರುವುದನ್ನು ನೋಡಿ 4 ಜನ ಸುಲಿಗೆ ಕೋರರು ಓಡಿ ಹೋಗುತ್ತಿದ್ದಾಗ ಕೈಯಲ್ಲಿ ರಾಡ ಹಿಡಿದುಕೊಂಡ ವ್ಯಕ್ತಿಗಳು ಓಡಿ ಹೋಗಿದ್ದು, ನಮಗೆ ಹೊಡೆಬಡೆ ಮಾಡಿದ ವ್ಯಕ್ತಿಗಳು ಸಿಕ್ಕಿ ಬಿದ್ದಿರುತ್ತಾರೆ. ನಂತರ ಈ ವಿಷಯದ ಬಗ್ಗೆ ಅಶೋಕ ನಗರ ಪೊಲೀಸ್ ಠಾಣೆಗೆ ಕರೆಮಾಡಿ ತಿಳಿಸಿದ ಮೇರೆಗೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಜನರು ಬಂದು ಅವರಿಗೆ ತಮ್ಮ ವಶಕ್ಕೆ ಪಡೆದುಕೊಂಡು ಅವರಿಗೆ ಹೆಸರು ವಿಳಾಸ ವಿಚಾರಿಸಲಾಗಿ ಅವರು ತಮ್ಮ ಹೆಸರು 1) ಲಹು ತಂದೆ ಬಾಹುರಾವ ಸಾವಂತ ವಯ: 30 ವರ್ಷ ಮತ್ತು 2) ದೇವಿದಾಸ ತಂದೆ ದತ್ತಾಸಾಬ ಸಾವಂತ ವಯ: 20 ವರ್ಷ ಸಾ|| ಇಬ್ಬರೂ ಜಳಕೋಟ ಅಂತ ತಿಳಿಸಿರುತ್ತಾರೆ. ಅಲ್ಲದೆ ನನಗೆ ಹೊಡೆದು ಹಣ ಕಸಿದುಕೊಂಡ ವ್ಯಕ್ತಿ ಹೆಸರು ಲಹು ಮತ್ತು ಸಂತೋಷ ಇತನಿಗೆ ಹೊಡೆದು ಹಣ ಕಸಿದುಕೊಂಡ ವ್ಯಕ್ತಿಯ ಹೆಸರು ದೇವಿದಾಸ  ಅಂತ ಗೊತ್ತಾಯಿತು, ನಂತರ ಅವರಿಗೆ ಪೊಲೀಸರು ಕರೆದುಕೊಂಡು ಓಡಿ ಹೋದ ಇಬ್ಬರು ವ್ಯಕ್ತಿಗಳ ಹೆಸರು ವಿಚಾರಿಸಲಾಗಿ ಅವರ ಹೆಸರು ದತ್ತು ಮತ್ತ ನಿತೀನ ಅಂತ ತಿಳಿಸಿರುತ್ತಾರೆ ಸದರಿ ಘಟನೆಯು ಬೀದಿ ಲೈಟಿನ ಬೆಳಕಿನಲ್ಲಿ ಜರುಗಿದ್ದರಿಂದ ನಾವು ಅವರಿಗೆ ನೋಡಿದರೆ ಗುರ್ತಿಸುತ್ತೇವೆ. ನಂತರ ಪೊಲೀಸರು ಬಡಾವಣೆಯ ಜನರು ಹಿಡಿದುಕೊಟ್ಟ ಇಬ್ಬರು ವ್ಯಕ್ತಿಗಳಿಗೆ ಕರೆದುಕೊಂಡು ಹೋಗಿರುತ್ತಾರೆ.  ಕಾರಣ ನನಗೆ ಮತ್ತು ನನ್ನ ಸ್ನೇಹಿತ ಸಂತೋಷ ಜಮಾದಾರ ಇಬ್ಬರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಹೆದರಿಸಿ ಕೈಯಿಂದ ಹೊಡೆಬಡೆಮಾಡಿ ನಮ್ಮ ಹತ್ತಿರ ವಿದ್ದ ನಗದು ಹಣ ಒಟ್ಟು ರೂ, 2050/- ಗಳನ್ನು ಕಸಿದುಕೊಂಡ ಮೇಲೆ ನಮೂದಿಸಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿಯಾಗಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 02-09-2022 06:27 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080