ಅಭಿಪ್ರಾಯ / ಸಲಹೆಗಳು

ಸಂಚಾರಿ-೦೨ ಪೊಲೀಸ ಠಾಣೆ :- ಇಂದು ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ,  ಇಂದು ದಿನಾಂಕ ೨೩/೦೮/೨೦೨೧ ರಂದು ೫:೧೫ ಎ.ಎಮ್ ಕ್ಕೆ ಯುನೈಟೆಡ ಆಸ್ಪತ್ರೆಯಿಂದ ವಿಶ್ವನಾಥ ತಂದೆ ಲಕ್ಷ್ಮಿಕಾಂತ ಈತನ ಆರ್.ಟಿ.ಎ ಎಮ್.ಎಲ.ಸಿ ಹಾಗು ಸಿದ್ದು @ ರೇವಣಸಿದ್ದಪ್ಪಾ ಈತನ ಡೆತ್ ಎಮ್.ಎಲ್.ಸಿ ವಸೂಲಾದ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಯುನೈಟೆಡ ಆಸ್ಪತ್ರೆಗೆ ಭೇಟಿ ನೀಡಲು ಅಲ್ಲಿನ ಸಿಬ್ಬಂದಿಯವರು ಮೃತ ದೇಹ ಹಾಗು ವಿಶ್ವನಾಥ ಇವರು ಜಿಲ್ಲಾ ಆಸ್ಪತ್ರೆಗೆ ಹೋಗಿರುತ್ತಾರೆ ಅಂತಾ ಮಾಹಿತಿ ತಿಳಿಸಿದ ಮೇರೆಗೆ ನಾನು ಎಮ್.ಎಲ್.ಸಿ ಪಡೆದು ಜಿಲ್ಲಾ ಸರಕಾರಿ ಆಸ್ಪತ್ರೆ ಗಾಯಾಳು ಫರ‍್ಯಾದಿ ವಿಶ್ವನಾಥ ತಂದೆ ಲಕ್ಷ್ಮಿಕಾಂತ ನಿಲೂರೆ ಇವರಿಗೆ ನೋಡಿ ವಿಚಾರಿಸಿ ಬೆಳಿಗ್ಗೆ ೬:೩೦ ಗಂಟೆಯಿಂದ ೭:೩೦ ಗಂಟೆ ವರೆಗೆ ಹೇಳಿಕೆ ಪಡೆದುಕೊಂಡಿದ್ದು ಸದರಿಯವರ ಹೇಳಿಕೆ ಸಾರಂಶವೆನೆಂದರೆ, ನಿನ್ನೆ ದಿನಾಂಕ ೨೨/೦೮/೨೦೨೧ ರಂದು ನಾನು ಮತ್ತು ನನ್ನ ಸ್ನೇಹಿತ ಪ್ರಶಾಂತ ತಂದೆ ಸಿದ್ದಣ್ಣ ಕುಲಾಲಿ ಇಬ್ಬರು ಮನೆಯಲ್ಲಿದ್ದಾಗ ಇನ್ನೊಬ್ಬ ಗೆಳೆಯ ಸಿದ್ದು @ ರೇವಣಸಿದ್ದಪ್ಪಾ ತಂದೆ ನಾಗರಾಜ @ ನಾಗಣ್ಣ ಈತನು ನಮ್ಮ ಮನೆಗೆ ಬಂದು ನಡ್ರೊ ನಮ್ಮೂರಿಗೆ ಹೋಗಿ ಬರೋಣ ಅಂತಾ ಹೇಳಿ ತನ್ನ ಮೋಟರ ಸೈಕಲ ನಂ. ಕೆಎ ೨೮ ಇ.ಎನ್ ೬೧೫೭ ನೇದ್ದರ ಮೇಲೆ ನನಗೆ ಮಧ್ಯದಲ್ಲಿ ಕೂಡಿಸಿಕೊಂಡು ಹಾಗು ಪ್ರಶಾಂತನಿಗೆ ಹಿಂದೆ ಕೂಡಿಸಿಕೊಂಡು ಕಲಬುರಗಿಯಿಂದ ಕುರಿಕೊಟಾಕ್ಕೆ ಹೋಗುವ ಸಲುವಾಗಿ ಸಿದ್ದು ಈತನು ಮೋಟರ ಸೈಕಲನ್ನು ನಿಧಾನವಾಗಿ ರಸ್ತೆಯ ಬದಿಯಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ರಾತ್ರಿ ೭:೩೦ ಗಂಟೆ ಸುಮಾರಿಗೆ ಕಪನೂರ ಬ್ರಿಡ್ಜ ದಾಟಿ ಸಿಟಿ ಹೈವೆ ದಾಭಾ ಸಮೀಪ ಹೋಗುವಾಗ ಒಬ್ಬ ಜೀಪ ನಂ. ಎಮ್.ಹೆಚ್ ೦೪ ಕ್ಯೂ ೦೨೯೭ ನೇದ್ದರ ಚಾಲಕನು ಬೆಲೂರ ಪಾಟಿ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಬಲಕ್ಕೆ ಕಟ್ ಹೊಡೆದು ನಮ್ಮ ಮೋಟರ ಸೈಕಲಗೆ ಎದುರಿನಿಂದ ಡಿಕ್ಕಿ ಪಡಿಸಿದ್ದರಿಂದ ನಾವು ಮೂವರು ಮೋಟರ ಸೈಕಲ ಮೇಲಿಂದ ಕೆಳಗೆ ಬಿದ್ದೆವು, ಸದರಿ ಘಟನೆಯಿಂದ ನನ್ನ ಬಲಗಣ್ಣಿಗೆ ಗುಪ್ತಗಾಯ, ಸ್ನೇಹಿತ ಸಿದ್ದು @ ರೇವಣಸಿದ್ದಪ್ಪಾ ಈತನ ತಲೆಗೆ ಭಾರಿ ಒಳಪೆಟ್ಟಾಗಿ ಮೂಗಿನಿಂದ ರಕ್ತಸ್ರಾವ ಆಗಿದ್ದು, ಹಣೆಗೆ ಹಾಗು ಬಲಗಣ್ಣಿನ ಹತ್ತೀರ ರಕ್ತಗಾಯ, ಬಲ ರಟ್ಟೆಗೆ ಭಾರಿ ಒಳಪೆಟ್ಟು ಎರಡು ಕೈ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು ಮಾತನಾಡುವ ಸ್ಧಿತಿಯಲ್ಲಿ ಇರಲಿಲ್ಲಾ. ಇನ್ನೊಬ್ಬ ಗೆಳೆಯ ಪ್ರಶಾಂತನಿಗೆ ನೋಡಲಾಗಿ ಅವನ ಬಲಗಣ್ಣಿನ ಹತ್ತೀರ ಮತ್ತು ಅಲ್ಲಲ್ಲಿ ತರಚಿದಗಾಯಗಳಾಗಿದ್ದವು. ನಮ್ಮ ಮೋಟರ ಸೈಕಲಗೆ ಡಿಕ್ಕಿ ಪಡಿಸಿದ ಜೀಪ ಚಾಲಕನಿಗೆ ನೋಡಲಾಗಿ ಆತನ ಹೆಸರು ಮಹಮ್ಮದ ಅನ್ವರ ಅಂತಾ ಗೊತ್ತಾಗಿರುತ್ತದೆ. ಈ ಘಟನೆ ಗೊತ್ತಾಗಿ ಅಂಬುಲೆನ್ಸ ಸ್ಧಳಕ್ಕೆ ಬಂದಿದ್ದು, ನನಗೆ ಮತ್ತು ಸಿದ್ದು @ ರೇವಣಸಿದ್ದಪ್ಪಾ ಈತನಿಗೆ ಉಪಚಾರ ಕುರಿತು ಯುನೈಟೆಡ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಜೀಪ ಚಾಲಕ ಮತ್ತು ಆತನ ಜೊತೆಯಿದ್ದ ಖಾಜಾ ಪಟೇಲ ಮತ್ತು ಗೆಳೆಯ ಪ್ರಶಾಂತ ಈತನಿಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಗೆಳೆಯ ಸಿದ್ದು @ ರೇವಣಸಿದ್ದಪ್ಪಾ ಈತನಿಗೆ ಆಸ್ಪತ್ರೆಗೆ ಒಯ್ಯುವ ವೇಳೆಯಲ್ಲಿ ಆಸ್ಪತ್ರೆ ಹತ್ತೀರ ಮೃತ ಪಟ್ಟಿರುತ್ತಾನೆ. ಜೀಪ ನಂ. ಎಮ.ಹೆಚ್ ೦೪ ಕ್ಯೂ ೦೨೯೭ ನೇದ್ದರ ಚಾಲಕ ಮಹಮ್ಮದ ಅನ್ವರ ಈತನ ಮೇಲೆ ಕಾನೂನು ಕ್ರಮ  ಕೈಕೊಳ್ಳಬೇಕೆಂದು ಇತ್ಯಾದಿ ಕೊಟ್ಟ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ ಇಂದು ಬೆಳಿಗ್ಗೆ ೭:೪೫ ಗಂಟೆಗೆ ಬಂದು ಹೇಳಿಕೆ ಫರ‍್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಸಂಚಾರಿ-೦೨ ಪೊಲೀಸ ಠಾಣೆ :- ಇಂದು ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ,  ಇಂದು ದಿನಾಂಕ ೨೩/೦೮/೨೦೨೧ ರಂದು ೫:೩೦ ಪಿ.ಎಮ್ ಕ್ಕೆ ಶ್ರೀಮತಿ ರೇಖಾ ಗಂಡ ಭೀಮಾಶಂಕರ ಬೆಕನಾಳ ವಯಃ ೫೫ ರ‍್ಷ ಜಾತಿಃ ಲಿಂಗಾಯತ ಉಃ ಮನೆ ಕೆಲಸ ಸಾಃ ಗುಂಡಗರ‍್ತಿ ಹಾ.ವಃ ಕಣ್ಣಿ ವಠಾರ ಬ್ರಹ್ಮಪೂರ ಕಲಬುರಗಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿ ಫರ‍್ಯಾದಿ ರ‍್ಜಿಯನ್ನು ತಂದು ಹಾಜರು ಪಡಿಸಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ ೨೨/೦೮/೨೦೨೧ ರಂದು ಬೆಳಿಗ್ಗೆ ನನ್ನ ಗಂಡನಾದ ಭೀಮಾಶಂಕರ ತಂದೆ ಭಾಗಪ್ಪಾ ಬೆಕನಾಳ ಇವರು ನಮ್ಮ ಊರು ಗುಂಡಗರ‍್ತಿಯಲ್ಲಿ ಗುಡಿ ಕಟ್ಟಿಸುವ ಕೆಲಸವಿದೆ ಅಂತಾ ಹೇಳಿ ಊರಿಗೆ ಹೋದರು. ನಾನು ರಾತ್ರಿ ನನ್ನ ಗಂಡನ ಹಾದಿಕಾಯುತ್ತಾ ಮನೆಯಲ್ಲಿ ಇರುವಾಗ ನಮ್ಮ ಊರಿನ ಅಣ್ಣಪ್ಪಾ ತಂದೆ ರೇವಣಸಿದ್ದಪ್ಪಾ ಕಂಚನಾಳ ಇವರು ನನಗೆ ಫೋನ್ ಮಾಡಿ ನಾನು ಮತ್ತು ವಿಜಯಕುಮಾರ ತಂದೆ ಸಾಹೇಬಗೌಡ ಶಿವಶೇಟ್ಟಿ ಇಬ್ಬರು ಗುಂಡಗರ‍್ತಿಯಿಂದ ಕಲಬುರಗಿಗೆ ಬರುವಾಗ ನಮ್ಮ ಜೊತೆಗೆ ನಿಮ್ಮ ಗಂಡನಾದ ಭೀಮಾಶಂಕರ ಹಾಗು ಆತನ ಅಣ್ಣನ ಮಗನಾದ ರವಿ ಇಬ್ಬರೂ ಮೋಟರ ಸೈಕಲ ಮೇಲೆ ಕಲಬುರಗಿಗೆ ಬರುತ್ತಿದ್ದರು. ಮೋಟರ ಸೈಕಲ ರವಿ ಈತನು ಚಲಾಯಿಸುತ್ತಿದ್ದನು. ರವಿ ಈತನು ನನ್ನ ಮೋಟರ ಸೈಕಲಗೆ ಓವರ ಟೇಕ ಮಾಡಿ ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನಮ್ಮ ಎದುರಿಗೆ ಹೋಗಿ ರಾತ್ರಿ ೮:೩೦ ಗಂಟೆ ಸುಮಾರಿಗೆ ಕಾಳನೂರ ಕ್ರಾಸ್ ಹತ್ತೀರ ಬ್ರಿಡ್ಜ ರಸ್ತೆಯ ಮೇಲೆ ಒಂದು ಲಾರಿ ಬಲ್ಕರ ವಾಹನದ ಚಾಲಕನು ಯಾವುದೆ ಮುನ್ಸುಚನೆ ಇಲ್ಲದೆ ಯಾವುದೆ ಸ್ಟಾಪ ಇಂಡಿಕೆಟರ ಹಾಕದೆ ನಿಷ್ಕಾಳಜಿತನದಿಂದ ಸರ‍್ವಜನಿಕ ಸಂಚಾರಕ್ಕೆ ಅಡೆತಡೆಯಾಗುವಂತೆ ತನ್ನ ವಾಹನವನ್ನು ನಿಲ್ಲಿಸಿದ್ದು ಸದರಿ ಬಲ್ಕರ ವಾಹನವನ್ನು ನೋಡಿ ಒಮ್ಮೇಲೆ ಬ್ರೆಕ ಹಾಕಿ ಮೋಟರ ಸೈಕಲ ಸ್ಕೀಡ್ ಮಾಡಿ ಮೋಟರ ಸೈಕಲ ಬಿಳಿಸಿದನು. ಆಗ ಹಿಂದೆ ಕುಂತ ನಿಮ್ಮ ಗಂಡ ಭೀಮಾಶಂಕರ ಇವರ ತಲೆ ಹೋಗಿ ಬಲ್ಕರ ವಾಹನದ ಹಿಂದಿನ ಭಾಗಕ್ಕೆ ಬಡಿತು, ಆಗ ಭೀಮಾಶಂಕರ ಇವರು ಕೆಳಗೆ ಬಿದ್ದರು. ಅದನ್ನು ನೋಡಿ ನಾನು ಮತ್ತು ನನ್ನ ಜೊತೆಯಲ್ಲಿದ್ದ ವಿಜಯಕುಮಾರ ಶಿವಶಟ್ಟಿ ಇಬ್ಬರೂ ನಮ್ಮ ಮೋಟರ ಸೈಕಲ ನಿಲ್ಲಿಸಿ ಹೋಗಿ ನಿಮ್ಮ ಗಂಡ ಭೀಮಾಶಂಕರ ಇವರಿಗೆ ಎಬ್ಬಿಸಿ ರಸ್ತೆಯ ಬದಿಯಲ್ಲಿ ಕೂಡಿಸಿ ಮೊಬೈಲ ಟರ‍್ಚ ಬೆಳಕಿನಲ್ಲಿ ನೋಡಲು ಅವರ ತಲೆಗೆ ಭಾರಿ ಒಳಪೆಟ್ಟು ಹಾಗು ಗಟಬಾಯಿ ಹತ್ತೀರ ರಕ್ತಗಾಯವಾಗಿ ಅವರು ಮಾತನಾಡುವ ಸ್ಧಿತಿಯಲ್ಲಿಲ್ಲಾ, ಅವರ ಹಿಂದೆ ಕುಂತ ಮೋಟರ ಸೈಕಲ ಚಲಾಯಿಸುತ್ತಿದ್ದ ರವಿ ಈತನಿಗೆ ನೋಡಲು ಎಡಗಡೆ ಹೊಟ್ಟೆಗೆ ಒಳಪೆಟ್ಟಾಗಿದ್ದು, ಸದರಿ ಅವರ ಮೋಟರ ಸೈಕಲ ನಂಬರ ನೋಡಲು ಕೆಎ ೩೨ ಇ.ಎ ೩೭೬೨ ನೇದ್ದು ಇದ್ದು, ಸದರಿ ನಿಷ್ಕಾಳಜಿತನದಿಂದ ಸರ‍್ವಜನಿಕ ಸಂಚಾರಕ್ಕೆ ಅಡೆತಡೆಯಾಗುವಂತೆ ನಿಲ್ಲಿಸಿದ ಬಲ್ಕರ ವಾಹನ ನಂಬರ ನೋಡಲು ಸಿ.ಜಿ ೨೨ ಕೆ ೧೬೭೩ ನೇದ್ದು ಇರುತ್ತದೆ. ಸದರಿ ವಿಷಯ ಗೊತ್ತಾಗಿ ಸ್ಧಳಕ್ಕೆ ಅಂಬುಲೇನ್ಸ ವಾಹನ ಬಂದಿದ್ದು, ನಾನು ಮತ್ತು ವಿಜಯಕುಮಾರ ಹಾಗು ಭೀಮಾಶಂಕರ ಇವರ ಅಣ್ಣನ ಮಗ ರವಿ ಮೂರು ಜನರು ಸೇರಿ ಸದರಿ ಅಂಬುಲೇನ್ಸ ವಾಹನದಲ್ಲಿ ಭೀಮಾಶಂಕರ ಇವರಿಗೆ ಹಾಕಿಕೊಂಡು ಉಪಚಾರ ಕುರಿತು ಎ.ಎಸ್.ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೆವೆ. ನೀವು ಸಹ ಅಲ್ಲಿಗೆ ಬರಬೇಕೆಂದು ಹೇಳಿ ಫೋನ್ ಕಟ್ ಮಾಡಿದರು. ನಾನು ಮತ್ತು ನಮ್ಮ ನಾದನಿ ಮಗನಾದ ಬಸವರಾಜ ತಂದೆ ಶಿವಶರಣಪ್ಪಾ ತಿಪ್ಪಣ್ಣನವರ ಎ.ಎಸ್.ಎಮ್ ಆಸ್ಪತ್ರೆಗೆ ಹೋಗಿ ನೋಡಲು ನನ್ನ ಗಂಡ ಭೀಮಾಶಂಕರ ಇವರು ತಲೆಗೆ ಒಳಪೆಟ್ಟು ಹಾಗು ಗಟಬಾಯಿಗೆ ರಕ್ತಗಾಯವಾಗಿ ಮಾತನಾಡುವ ಸ್ಧಿತಿಯಲ್ಲಿ ಇರಲಿಲ್ಲಾ. ಇಂದು ದಿನಾಂಕ ೨೩/೦೮/೨೦೨೧ ರಂದು ಮಧ್ಯಾಹ್ನ ನನ್ನ ಗಂಡ ಭೀಮಾಶಂಕರ ಇವರಿಗೆ ಹೆಚ್ಚಿನ ಉಪಚಾರ ಕುರಿತು ಎ.ಎಸ್.ಎಮ್ ಆಸ್ಪತ್ರೆಯಿಂದ ಹೈದ್ರಾಬಾದಗೆ ಒಯ್ಯಬೇಕೆಂದು ಅಂಬುಲೇನ್ಸದಲ್ಲಿ ಕರೆದುಕೊಂಡು ಹೋಗುವಾಗ ಮಧ್ಯಾಹ್ನ ೩:೦೦ ಗಂಟೆ ಸುಮಾರಿಗೆ ಅಂಬುಲೇನ್ಸ ವಾಹನದಲ್ಲಿ ಮೃತ ಪಟ್ಟಿದ್ದು ಇರುತ್ತದೆ. ನನ್ನ ಗಂಡನ ಅಣ್ಣನ ಮಗ ರವಿ ಈತನು ಮೋಟರ ಸೈಕಲ ಚಲಾಯಿಸಿ ಬಿಳಿಸಿದ್ದು ಹಾಗು ನಾನು ನನ್ನ ಗಂಡನ ಚಿಕಿತ್ಸೆಯಲ್ಲಿದ್ದು ನಮ್ಮ ಸಂಬಂಧಿಕರೊಂದಿಗೆ ವಿಚಾರಿಸಿ ದೂರು ನೀಡಲು ತಡವಾಗಿರುತ್ತದೆ. ಮೋಟರ ಸೈಕಲ ನಂ. ಕೆಎ ೩೨ ಇ.ಎ ೩೭೬೨ ನೇದ್ದರ ಸವಾರ ರವಿ ಈತನು ಗುಂಡಗರ‍್ತಿ ಕಡೆಯಿಂದ ಕಲಬುರಗಿಗೆ ಬರುವ ಕುರಿತು ನನ್ನ ಗಂಡನಿಗೆ ಹಿಂದೆ ಕೂಡಿಸಿಕೊಂಡು ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮೇಲೆ ಬ್ರೆಕ್ ಹಾಕಿ ಮೋಟರ ಸೈಕಲ ಸ್ಕೀಡ ಮಾಡಿ ಕೆಳಗಿ ಬಿಳಿಸಿದ್ದು ಹಾಗು ಲಾರಿ ಬಲ್ಕರ ನಂ. ಸಿ.ಜಿ ೨೨ ಕೆ ೧೬೭೩ ನೇದ್ದರ ಚಾಲಕನು ತನ್ನ ವಾಹನವನ್ನು ಯಾವುದೆ ಮುನ್ಸುಚನೆ ಇಲ್ಲದೆ ಯಾವುದೆ ಸ್ಟಾಪ್ ಇಂಡಿಕೇಟರ ಹಾಕದೆ ಸರ‍್ವಜನಿಕ ಸಂಚಾರಕ್ಕೆ ಅಡೆತಡೆಯಾಗುವಂತೆ ನಿಲ್ಲಿಸಿದ್ದು, ಇವರಿಬ್ಬರು ಸದರಿ ಅಪಘಾತ ಸಂಭವಿಸಿ ನನ್ನ ಗಂಡನ ಪ್ರಾಣ ಹೋಗಲು ಕಾರಣಿಭೂತರಾಗಿದ್ದು ಕಾರಣ ಮೋಟರ ಸೈಕಲ ಸವಾರ ರವಿ ಹಾಗು ಸದರಿ ಲಾರಿ ಬಲ್ಕರ ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ರ‍್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಫರಹತಾಬಾದ ಪೊಲೀಸ ಠಾಣೆ :- ಇಂದು ದಿನಾಂಕ:೨೩.೦೮.೨೦೨೧ ರಂದು ಮದ್ಯಾಹ್ನ ೧೪೦೦ ಗಂಟೆಗೆ ಫಿರ್ಯಾದಿ ಬಸವಣಪ್ಪಾ ತಂದೆ ಶರಣಪ್ಪಾ ಕೋಬಾಳ ವಯ:೧೯ ವರ್ಷ ಉ: ವಿದ್ಯಾರ್ಥಿ ಜಾತಿ:ಲಿಂಗಾಯಿತ ಸಾ: ಫರಹತಾಬಾದ ತಾ:ಜಿ:ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದರ ಸಾರಾಂಸವೇನೆAದರೆ, ಫೀರೋಜಾಬಾದ ಸೀಮಾಂತರದಲ್ಲಿ ನಮ್ಮದ್ದು ಹೊಲ ಸರ್ವೆ ನಂ.೩೬೧ ನೆದ್ದು ೧ ೧/೨ ಎಕರೆ ಭೂಮಿ ಇರುತ್ತದೆ. ಇಂದು ದಿನಾಂಕ:೨೩.೦೮.೨೦೨೧ ರಂದು ೧೨ ಪಿಎಮ್ ಸುಮಾರಿಗೆ ನಾನು ಮತ್ತು ನಮ್ಮ ಮಾವನಾದ ಅಶೋಕ ಮಾಲಿಪಾಟೀಲ ಇಬ್ಬರೂ ಫರಹತಾಬಾದ ಬಸ್ ನಿಲ್ದಾಣದ  ಹತ್ತಿರ ನಿಂತಿದ್ದಾಗ ಫಿರೋಜಾಬಾದ ಸೀಮಾಂತರದ ನಮ್ಮ ಹೊಲದ ಪಕ್ಕದ ಹೊಲದವರಾದ ನಮ್ಮ ಕಾಕನಾದ ಸಿದ್ದಣ್ಣಾ ಇವರು ಫೊನ್ನ ಮಾಡಿ ತಿಳಿಸಿದ್ದೇನೆಂದರೆ, ಇಂದು ದಿನಾಂಕ:೨೩.೦೮.೨೦೨೧ ರಂದು ಬೆಳಗ್ಗೆ ೧೧೩೦ ಗಂಟೆಯ ಸುಮಾರಿಗೆ ನಾನು ಹೊಲಕ್ಕೆ ಬಂದಾಗ ನಿಮ್ಮ ಹೊಲದ ಹತ್ತಿರ ದುವಾರ್ಸನೆ ಬರುತ್ತಿದ್ದರಿಂದ ನಾನು ಆ ಕಡೆ ಈ ಕಡೆ ನೋಡಿದಾಗ ಅಲ್ಲೆ  ಸ್ವಲ್ಪ ಸಮೀಪದಲ್ಲಿ ಒಂದು ವ್ಯಕ್ತಿಯ ಮೃತ ದೇಹವು ಕಂಡAತೆಯಾಗಿ ಅದರ ಸಮೀಪಕ್ಕೆ ಹೋಗಿ ನೋಡಿದಾಗ ಮೃತದೇಹವು ಪೂರ್ತಿಯಾಗಿ ಕೊಳೆತು ದುವಾರ್ಸನೆ ಬರುತ್ತಿದ್ದು, ಮೃತ ದೇಹವು ಗುರುತು ಸಿಗದ ಸ್ಥಿತಿಯಲ್ಲಿದ್ದು ನೀನು ಕೂಡಲೇ ಬಾ ಅಂತಾ ತಿಳಿಸಿದ್ದರಿಂದ ನಾನು ಮತ್ತು ನಮ್ಮ ಮಾವನಾದ ಅಶೋಕ ಇಬ್ಬರೂ ಕೂಡಿಕೊಂಡು ಪೇಠ ಫಿರೋಜಾಬಾದ ರೋಡಿನ ಪಕ್ಕಕ್ಕೆ ಇರುವ ನಮ್ಮ ಹೊಲ ಸರ್ವೆ ನಂ ೩೬೧ ನೆದ್ದರಲ್ಲಿ ಬಂದು ನೋಡಲಾಗಿ ಮೃತದೇಹವು ಪೂರ್ತಿಯಾಗಿ ಕೊಳೆತು ದುವಾರ್ಸನೆ ಬರುತ್ತಿದ್ದು ಮುಖ ಪೂರ್ತಿಯಾಗಿಕೊಳೆತು ಹುಳಗಳು ಆಡುತ್ತಿದ್ದು, ಕೈಗಳು, ಕಾಲುಗಳು ಸಹ ಕೊಲೆತು ಹುಳುಗಳು ಆಡುತ್ತಿದ್ದು, ಎಡಗೈಯಲ್ಲಿ ಕಪ್ಪು ಬಣ್ಣದ ಬೆಲ್ಟ್ ಹಾಕಿದ ವಾಚ್‌ದಂತೆ ಕಂಡು ಬರುತ್ತಿದ್ದು, ಸದರಿ ಮೃತ ದೇಹವು ನೋಡಲು ಮೇಲ್ನೋಟಕ್ಕೆ ಯಾವುದೋ ೨೦-೨೫ ವಯಸ್ಸಿನ ಹೆಣ್ಣು ಮಗಳ ಮೃತ ದೇಹ ಕಂಡು ಬರುತ್ತಿದ್ದು, ಮೇಲ್ನೋಟಕ್ಕೆ ಯಾರೋ ಯಾವುದೋ ದುರುದ್ದೇಶಕ್ಕಾಗಿ ಕೊಲೆ ಮಾಡಿ ಗುರುತು ಸಿಗದಂತೆ ಮಾಡಿ ಬಿಸಾಕಿದಂತೆ ಕಂಡು ಬಂದಿರುತ್ತದೆ. ಸದರಿ ಮೃತದೇಹವು ಸುಮಾರು ೩-೪ ದಿನಗಳ ಹಿಂದೆ ಕೊಲೆ ಮಾಡಿ ಬಿಸಾಕಿದಂತೆ ಕಂಡು ಬಂದಿದ್ದರಿAದ ಪೂರ್ತಿಯಾಗಿ ದುವಾರ್ಸನೆ ಕೂಡಿರುತ್ತದೆ. ದಿನಾಂಕ:೧೮.೦೮.೨೦೨೧ ರಿಂದ ದಿನಾಂಕ:೨೩.೦೮.೨೦೨೧ ರ ಮಧ್ಯೆದ ಅವಧಿಯಲ್ಲಿ ಜರೂಗಿರಬಹುದು. ಕಾರಣ ಮಾನ್ಯರು ಸದರಿ ಮೃತ ವ್ಯಕ್ತಿಯನ್ನು ಕೊಲೆ ಮಾಡಿ ಗುರುತು ಸಿಗದಂತೆ ಮಾಡಿದ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಜರೂಗಿಸಲು ವಿನಂತಿ ಅದೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 25-08-2021 12:13 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080