ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -2  :-  ಇಂದು ದಿನಾಂಕ 24-07-2022 ರಂದು ರಾತ್ರಿ ೮:೧೫ ಗಂಟೆಗೆ ಶ್ರೀ. ಶರಣಬಸಪ್ಪಾ ತಂದೆ ಸಿದ್ದಣ್ಣ ರೆಡ್ಡಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಒಂದು ಲಿಖಿತ ಫರ‍್ಯಾದಿಯನ್ನು ಹಾಜರು ಪಡಿಸಿದರ ಸಾರಂಶವೆನೆಂದರೆ, ದಿನಾಂಕ ೨೨/೦೭/೨೦೨೨ ರಂದು ಫರ‍್ಯಾದಿಯ ತಾಯಿ ಗೌರಾಬಾಯಿ ಇವಳಿಗೆ ಮೂಲವ್ಯಾಧಿ ಆಗಿರುವುದರಿಂದ ಅದರ ಆಯರ‍್ವೆದಿಕ ಔಷದ ಪಡೆದುಕೊಳ್ಳುವ ಕುರಿತು ತಮ್ಮುರಿನಿಂದ  ಅಂಕಲಗಿ ಗ್ರಾಮಕ್ಕೆ ಮೋಟರ ಸೈಕಲ ಮೇಲೆ ಫರ‍್ಯಾದಿ ಮತ್ತು ಅವರ ತಾಯಿ ಗೌರಬಾಯಿ ಹಾಗು ಇನ್ನೊಂದು ಮೋಟರ ಸೈಕಲದ ಮೇಲೆ ನಾಗರಾಜ ಕುಲರ‍್ಣಿ & ಶಾಂತಕುಮಾರ ಕೂಡಿಕೊಂಡು ಅಂಕಲಗಿ ಗ್ರಾಮಕ್ಕೆ ಬಂದು ಔಷಧ ಪಡೆದುಕೊಂಡು ಮರಳಿ ತಮ್ಮೂರಿಗೆ ಹೋಗುವಾಗ ಮಧ್ಯಾಹ್ನ ೨:೦೦ ಗಂಟೆ ಸುಮಾರಿಗೆ ಕಗ್ಗನಮಡಿ ರೈಲ್ವೆ ಬ್ರಿಡ್ಜದ ಹತ್ತೀರ ಹೋಗುತ್ತಿದ್ದಾಗ ಗೌರಾಬಾಯಿ ಇವಳು ಮೂತ್ರ ವಿರ‍್ಜನೆ ಮಾಡಿ ರೋಡ ದಾಟುವಾಗ ಹಿಂದಿನ ರೋಡಿನಿಂದ ನಾಗರಾಜ ತಂದೆ ಪಂಡೀತರಾವ ಕುಲರ‍್ಣಿ ಈತನು ತನ್ನ ವಶದಲ್ಲಿದ್ದ ಮೋಟರ ಸೈಕಲ ನಂ. ಕೆಎ ೩೨ ಇ.ಯು ೫೫೦೨ ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಗೌರಾಬಾಯಿಗೆ ಡಿಕ್ಕಿ ಹೊಡೆದ ಪರಿಣಾಮ ಅವಳಿಗೆ ತಲೆಯ ಭಾಗಕ್ಕೆ, ಮೈಕೈಗೆ ಭಾರಿಗಾಯವಾಗಿದ್ದು, ೧೦೮ ಅಂಬುಲೇನ್ಸದಲ್ಲಿ  ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ  ಸೇರಿಕೆ ಮಾಡಿದ್ದು, ಅವಳು ಪ್ರಜ್ಞಾಹೀನ ಸ್ಧಿತಿಯಲ್ಲಿ ಉಪಚಾರ ಪಡೆಯುತ್ತಿದ್ದು, ವಿಚಾರಮಾಡಿಕೊಂಡು ವಿಳಂಬಮಾಡಿ ದೂರು ಸಲ್ಲಿಸುತ್ತಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಲಿಖಿತ ಫರ‍್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಂಚಾರಿ ಪೊಲೀಸ್‌ ಠಾಣೆ -2  :-  ದಿನಾಂಕ 24-07-2022 ರಂದು ೬:೦೦ ಪಿ.ಎಮ್ ಕ್ಕೆ ಶ್ರೀ ಸುನೀಲಕುಮಾರ ತಂದೆ ಬಾಬರಾವ ಇವರು ಠಾಣೆಗೆ ಹಾಜರಾಗಿ ಶ್ರೀ. ಬಾಬುರಾವ ತಂದೆ ಜ್ಯೋತೆಪ್ಪಾ ಕಾಳಪ್ಪನವರ ವಯಃ ೬೩ ವರ್ಷ ಜಾತಿಃ ತಳವಾರ ಉಃ ಖಾಸಗಿ ಕೆಲಸ ಸಾಃ ಪೂಜಾ ಕಾಲೋನಿ ಕಲಬುರಗಿ ಇವರು ಕನ್ನಡದಲ್ಲಿ ಟೈಪ ಮಾಡಿಸಿ ಸಹಿ ಮಾಡಿದ ಫರ‍್ಯಾದಿ ಅರ್ಜಿಯನ್ನು ತಂದು ಹಾಜರು ಪಡಿಸಿದ್ದು ಸಾರಂಶವೆನೆಂದರೆ,  ದಿನಾಂಕ ೨೨/೦೭/೨೦೨೨ ರಂದು ಸಾಯಂಕಾಲ ನಮ್ಮ ಮನೆಯಿಂದ ಕಿರಾಣಾ ವಸ್ತುಗಳನ್ನು ಖರೀದಿ ಮಾಡಲು ಕಿರಾಣಾ ಅಂಗಡಿಗೆ ಹೋಗಿ ಮರಳಿ ರಸ್ತೆಯ ಬದಿಯಿಂದ ನಡೆದುಕೊಂಡು ಬರುವಾಗ ಬಂಜಾರಾ ಆಕರ್ೆಡ ಕಾಂಪ್ಲೇಕ್ಸ ಹತ್ತೀರ ಸಾಯಂಕಾಲ ೭:೩೦ ಗಂಟೆ ಸುಮಾರಿಗೆ ಒಬ್ಬ ಮೋಟರ ಸೈಕಲ ಸವಾರಳು ಗುಲರ‍್ಗಾ ವಿಶ್ವವಿದ್ಯಾಲಯ ಕಡೆಯಿಂದ ಹೊಸ ಆರ್.ಟಿ.ಓ ಕಡೆಗೆ ಹೋಗುವ ಕುರಿತು ತನ್ನ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಹಿಂದುಗಡೆಯಿಂದ ಬಂದು ನನಗೆ ಡಿಕ್ಕಿ ಪಡಿಸಿದಳು. ಆಗ ನಾನು ರಸ್ತೆಯ ಮೇಲೆ ಬಿದ್ದೆನು. ಅದನ್ನು ನೋಡಿದ ಅಲ್ಲಿಯೇ ಹೋಗುತ್ತಿದ್ದ ದಿಗಂಬರ ತಂದೆ ಹಣಮಂತ ಕಟ್ಟಿಮನಿ ಹಾಗು ಗಿರಿಧರ ತಂದೆ ಮಹಾರುದ್ರಪ್ಪಾ ಮರತೂರ ಇವರು ಬಂದಿ ನನಗೆ ಎಬ್ಬಿಸಿ ರಸ್ತೆಯ ಬದಿಯಲ್ಲಿ ಕೂಡಿಸಿ ನೋಡಲು ಸದರ ಘಟನೆಯಿಂದ ನನ್ನ ಬಲಗಾಲಿನ ಮೊಳಕಾಲಿನ ಕೆಳಭಾಗದಲ್ಲಿ ಹಾಗು ಪಾದದ ಜಾಯಿಂಟಿನ ಮೇಲ್ಭಾಗದಲ್ಲಿ ಭಾರಿ ಒಳಪೆಟ್ಟು ಹಾಗು ಅಲ್ಲಲ್ಲಿ ತರಚಿದಗಾಯ ಗಳಾಗಿದ್ದು, ನನಗೆ ಡಿಕ್ಕಿ ಪಡಿಸಿದ ಮೋಟರ ಸೈಕಲ ನಂಬರ ನೋಡಲು ಕೆಎ ೩೨ ಹೆಚ್.ಎ ೭೭೧೭ ನೇದ್ದು ಇದ್ದು, ಅದರ ಸವಾರಳಿಗೆ ನೋಡಲು ಅವಳು ನಿಲ್ಲುವ ಹಾಗೆ ಮಾಡಿ ನಮ್ಮ ಕಡೆಗೆ ನೋಡುತ್ತಾ ತನ್ನ ಮೋಟರ ಸೈಕಲ ಸಮೇತ ಹೊಸ ಆರ್.ಟಿ.ಓ ಕಡೆಗೆ ಓಡಿ ಹೋಗಿರುತ್ತಾಳೆ. ಅವಳಿಗೆ ನೋಡಿರುತ್ತೆನೆ. ಮುಂದೆ ನೋಡಿದಲ್ಲಿ ಗರ‍್ತಿಸುತ್ತೆನೆ. ಸದರ ವಿಷಯ ಗೊತ್ತಾಗಿ ಸ್ಧಳಕ್ಕೆ ಅಂಬುಲೇನ್ಸ ವಾಹನ ಬಂದಿದ್ದು ದಿಗಂಬರ ಹಾಗು ಗಿರಿಧರ ಕೂಡಿ ನನಗೆ ಅದರಲ್ಲಿ ಕೂಡಿಸಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಮತ್ತು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ನಾನು ಚಿಕಿತ್ಸೆಯಲ್ಲಿದ್ದು, ನಮ್ಮ ಮನೆಯವರೊಂದಿಗೆ ವಿಚಾರಿಸಿ ಇಂದು ದೂರು ನೀಡಲು ತಡವಾಗಿರುತ್ತದೆ. ಕಾರಣ ಸದರಿ ಮೋಟರ ಸೈಕಲ ನಂ. ಕೆಎ ೩೨ ಹೆಚ್.ಎ ೭೭೧೭ ನೇದ್ದರ ಸವಾರಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟು ಫರ‍್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಫರಹತಾಬಾದ ಪೊಲೀಸ್‌ ಠಾಣೆ :- ದಿನಾಂಕ:24-07-2022  ರಂದು ೪.೩೦ ಪಿಎಮ್ ಗಂಟೆಗೆ ನಮ್ಮ ಠಾಣೆಯ ಗಡ್ಡೇಪ್ಪಾ ಸಿಹೆಚ್ಸಿ ೧೬೫ ರವರು ಠಾಣೆಗೆ ಹಾಜರಾಗಿ ಮುದ್ದೆಮಾಲು, ಜಪ್ತಿ ಪಂಚನಾಮೆ, ೪ ಜನ ಆರೋಪಿತರೊಂದಿಗೆ ಮುಂದಿನ ಕ್ರಮಕ್ಕಾಗಿ ವರದಿ ಹಾಜರಪಡಿಸಿದರ ಸಾರಾಂಶವೇನೆಂದರೆ, ಇಂದು ದಿನಾಂಕ:೨೪.೦೭.೨೦೨೨ ರಂದು ಮದ್ಯಾಹ್ನ ೨ ಗಂಟೆಯ ಸುಮಾರಿಗೆ ನಾನು ಪೊಲೀಸ್ ಠಾಣೆಯಲ್ಲಿದ್ದಾಗ ಭಾತ್ಮಿ ಬಂದಿದ್ದೇನೆಂದರೆ, ನಮ್ಮ ಠಾಣೆಯ ವ್ಯಾಪ್ತಿಯ ಖಣದಾಳ ಗ್ರಾಮದ ಹನುಮಾನ ಗುಡಿ ಹತ್ತಿರ ಸರ‍್ವಜನಿಕ ಸ್ಥಳದ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ನಮ್ಮ ಠಾಣಾ ಸಿಬ್ಬಂದಿ ಜನರಾದ ಆನಂದ ಸಿಪಿಸಿ ೨೯೬, ತಿರುಪತಿ ಸಿಪಿಸಿ ೨೯೧ ಹಾಗೂ ಸಾಜೀದ ಪಾಶಾ ಸಿಪಿಸಿ ೨೯೮ ರವರಿಗೆ ಜೂಜಾಟದ ಬಗ್ಗೆ ಮಾಹಿತಿ ತಿಳಿಸಿ ನಂತರ ನಮ್ಮ ಪಿಐ ಸಾಹೇಬರಿಗೆ ಹಾಗೂ ಮಾನ್ಯ ಎಸಿಪಿ ಸಾಹೇಬರು ಸಬ್ ರ‍್ಬನ್ ಉಪ ವಿಭಾಗ ಕಲಬುರಗಿ ರವರಿಗೆ ಮಾಹಿತಿ ತಿಳಿಸಿ ಅವರ ಮರ‍್ಗರ‍್ಶನದಲ್ಲಿ ಸಿಬ್ಬಂದಿ ಜನರಿಗೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಠಾಣೆಯಿಂದ ಮದ್ಯಾಹ್ನ ೨.೧೫ ಗಂಟೆಗೆ ಹೊರಟ್ಟು, ಭಾತ್ಮಿ ಸ್ಥಳಕ್ಕೆ ಹೊರಡುವಾಗ ಮರ‍್ಗಮಧ್ಯೆ ದಾರಿ ಹೊಕ್ಕ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಅವರಿಗೂ ಭಾತ್ಮಿ ಬಂದ ವಿಷಯ ತಿಳಿಸಿ ಅವರು ನಮ್ಮೊಂದಿಗೆ ದಾಳಿ ಕಾಲಕ್ಕೆ ಹಾಜರಿರಲು ಒಪ್ಪಿದ ಮೇರೆಗೆ ಅವರನ್ನು ನಮ್ಮೊಂದಿಗೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಹೊರಟು ಭಾತ್ಮೀ ಸ್ಥಳದ ಹತ್ತಿರ ಮದ್ಯಾಹ್ನ ೨.೩೦ ಗಂಟೆಗೆ ಮನೆಗಳ ಮರೆಯಲ್ಲಿ ನಿಂತು ನೋಡಲು ಸರ‍್ವಜನಿಕ ಸ್ಥಳದಲ್ಲಿ ಕುಳಿತು ಕೆಲವು ಜನರು ದುಂಡಾಗಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ಮದ್ಯಾಹ್ನ ೨.೩೫ ಗಂಟೆಗೆ ಏಕಕಾಲಕ್ಕೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ ಕೆಲವು ಜನರು ಓಡಿ ಹೋಗಿದ್ದು ಇನ್ನು ಕೆಲವು ಜನರಿಗೆ ಸಿಕ್ಕಿದ್ದು ಸಿಕ್ಕಿದ ಜನರಿಗೆ ಹಿಡಿದು ಅವರಿಗೆ ಅಂಗಶೋಧ ಮಾಡಿ ಹೆಸರು ವಿಳಾಸ ಕೇಳಲು ೧) ಬಸವರಾಜ ತಂದೆ ಮಲ್ಲೇಶಪ್ಪಾ ನಾಟೀಕಾರ ವಯ: ೫೦ ವರ್ಷ ಉ: ಕೂಲಿಕೆಲಸ ಜಾತಿ: ಕಬ್ಬಲಿಗಾ ಸಾ: ಖಣದಾಳ ೨) ನಾಗಣ್ಣಾ ತಂದೆ ಶಿವಶರಣಪ್ಪಾ ನಾಟೀಕಾರ ವಯ: ೩೫ ವರ್ಷ ಉ: ಒಕ್ಕಲುತನ ಜಾತಿ: ಕಬ್ಬಲಿಗಾ ೩) ಸಿದ್ದರಾಮ ತಂದೆ ಚೆನ್ನಮಲ್ಲಪ್ಪಾ ಕಂಬಾರ ವಯ: ೩೫ ವರ್ಷ ಉ: ಒಕ್ಕಲುತನ ಜಾತಿ: ಕಬ್ಬಲಿಗಾ ಸಾ: ಬಡದಾಳ ತಾ: ಅಫಜಲಪೂರ ೪) ಸರ‍್ಯಕಾಂತ ತಂದೆ ಮಲ್ಲಪ್ಪಾ ಹೊನ್ನಳ್ಳಿ ವಯ: ೬೦ ವರ್ಷ ಉ: ಒಕ್ಕಲುತನ ಜಾತಿ: ಕಬ್ಬಲಿಗಾ ಸಾ:ಖಣದಾಳ ಅಂತಾ ತಿಳಿಸಿದ್ದು, ಸದರಿ ಸ್ಥಳದಲ್ಲಿ ೫೨ ಇಸ್ಪೇಟ ಎಲೆಗಳು ಹಾಗೂ ನಗದು ಹಣ ೨೫೪೦/-ರೂ. ಸಿಕ್ಕಿದ್ದು ಇವುಗಳನ್ನು ಪಂಚರ ಸಮಕ್ಷಮದಲ್ಲಿ ೨.೪೦ ಪಿಎಮ್ ಗಂಟೆಯಿಂದ ೩.೪೦ ಪಿಎಮ್ ಗಂಟೆಯವರೆಗೆ ಬ್ಯಾಟರಿ ಬೆಳಕಿನಲ್ಲಿ ಗುನ್ನೆ ಸ್ಥಳದಲ್ಲಿ ಕುಳಿತು ಜಪ್ತಿ ಪಂಚನಾಮೆಯನ್ನು ಬ್ಯಾಟರಿ ಬೆಳಕಿನಲ್ಲಿ ಬರೆದು ಮುಗಿಸಲಾಯಿತು. ನಂತರ ಮುದ್ದೇಮಾಲು ಮತ್ತು ಆರೋಪಿತರೊಂದಿಗೆ ೪.೩೦ ಪಿಎಮ್ ಗಂಟೆಗೆ ಠಾಣೆಗೆ ಬಂದಿದ್ದು, ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊರಲಾಗಿದೆ ಅಂತಾ ಇತ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 24-07-2022  ರಂದು  ಮುಂಜಾನೆ ೫:೧೫ ಪಿ.ಎಮ್ ದಿಂದ ೬:೧೫ ಪಿಎಮ್ ಅವಧಿ ಸದರಿ ಆರೋಪಿತರು ಪ್ರೆಸ್ ಕ್ಲಬ್ ಹಿಂದುಗಡೆ ಬಯಲು ಜಾಗೆಯಲ್ಲಿ ಇಸ್ಪೀಟ ಜೂಜಾಟ ಆಡುತ್ತಿದ್ದು ಸದರಿ ಆರೋಪಿತರಿಗೆ ದಸ್ತಗಿರಿ ಮಾಡಿ ಹಾಗೂ ಆಟಕ್ಕೆ ಉಪಯೋಗಿಸಿದ ೨೬೨೦೦/- ರೂ ಮತ್ತು ೫೨ ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿದ ಬಗ್ಗೆ ದೂರು ಇರುತ್ತದೆ.

 

ಇತ್ತೀಚಿನ ನವೀಕರಣ​ : 01-08-2022 04:23 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080