ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ ಠಾಣೆ:- ದಿನಾಂಕ 24-06-2022 ರಂದು ೭:೪೫ ಪಿ.ಎಮ್ ಕ್ಕೆ ಪಿರ್ಯಾಧಿದಾರರಾದ ಶ್ರೀ ಶಿವಶರಣಪ್ಪ ತಂದೆ ಅಮೃತ ಲಾಡಂತಿ ವಯ: ೫೨ ವರ್ಷ, ಉ: ಕೂಲಿ ಕೆಲಸ, ಜಾತಿ: ಪ.ಜಾತಿ (ಹೊಲೆಯ) ಸಾ: ಸುಕ್ರವಾಡಿ ತಾ: ಆಳಂದ ಜಿ: ಕಲಬುರಗಿ ಇವರು ಠಾಣೆಗೆ ಹಾಜರಾಗಿ ಸಲ್ಲಿಸಿದ ದೂರಿನ ಸಾರಾಂಶ ಏನೆಂದರೆ, ನನಗೆ ಮೂರು ಜನ ಗಂಡು ಮಕ್ಕಳಿದ್ದು ಅವರಲ್ಲಿ ೧) ಕೈಲಾಸ ವಯ: ೨೭ ವರ್ಷ, ಉ: ದುಬೈನಲ್ಲಿ ಖಾಸಗಿ ಕೆಲಸ, ೨) ಮೃತ ದಯಾನಂದ ವಯ: ೨೬ ವರ್ಷ, ಉ: ದುಬೈನಲ್ಲಿ ಹೆಲ್ಪರ್ ಕೆಲಸ, ೩) ಆಕಾಶ ವಯ: ೨೪ ವರ್ಷ ಉ: ಮುಂಬೈ ಖಾಸಗಿ ಕಂಪನಿಯಲ್ಲಿ ಕೆಲಸ, ಅಂತಾ ಮೂರು ಜನ ಮಕ್ಕಳಿರುತ್ತಾರೆ. ಸದ್ಯ ನನ್ನ ಮಕ್ಕಳಾದ ಕೈಲಾಸ ಮತ್ತು ದಯಾನಂದ ಇವರು ಈಗ ೪ ತಿಂಗಳ ಹಿಂದೆ ದುಬೈದಿಂದ ನಮ್ಮೂರಿಗೆ ಬಂದಿರುತ್ತಾರೆ. ಆಕಾಶ ಈತನು ಕೂಡ ಮುಂಬೈಯಿಂದ ನಮ್ಮೂರಿಗೆ ಬಂದಿರುತ್ತಾನೆ. ನನ್ನ ಮಕ್ಕಳಲ್ಲಿ ಕೈಲಾಸ ಮತ್ತು ಆಕಾಶ ಇವರ ಮದುವೆಯಾಗಿರುತ್ತದೆ. ದಯಾನಂದ ಈತನಿಗೆ ಇನ್ನೂ ಮದುವೆಯಾಗಿರುವುದಿಲ್ಲ. ಈಗ ಸುಮಾರು ೪ ತಿಂಗಳ ಹಿಂದೆ ನಮ್ಮ ಅಣ್ಣ-ತಮ್ಮಕಿಯರವರಾದ ೧) ಸುನೀಲ ತಂದೆ ಮಾರುತಿ ಲಾಡಂತಿ ವಯ: ೩೭ ವರ್ಷ ಉ: ಮಿಲ್ಟಿçಯಲ್ಲಿ ಕೆಲಸ, ೨) ಅನೀಲ  ತಂದೆ ಮಾರುತಿ ಲಾಡಂತಿ ವಯ: ೪೨ ವರ್ಷ, ಉ: ಕೆ.ಎಸ್.ಆರ್.ಟಿ.ಸಿಯಲ್ಲಿ ಕಂಡಕ್ಟರ್, ೩) ಮಂಜುನಾಥ ತಂದೆ ಮಾರುತಿ ಲಾಡಂತಿ ವಯ: ೩೦ ವರ್ಷ, ಉ: ಕೂಲಿ ಕೆಲಸ, ೪) ಹಣಮಂತ ತಂದೆ ಮಾರುತಿ ಲಾಡಂತಿ ವಯ: ೨೬ ವರ್ಷ, ಉ: ಕೂಲಿ ಕೆಲಸ, ಸಾ: ಎಲ್ಲರೂ ಸುಕ್ರವಾಡಿ ಇವರು ನಮ್ಮ ಮನೆಯ ಹತ್ತಿರ ಕಸ ತಂದು ಹಾಕಿದ್ದರಿಂದ ನಾನು ಅವರಿಗೆ ಯಾಕೆ ನಮ್ಮ ಮನೆಯ ಮುಂದೆ ಕಸ ತಂದು ಹಾಕಿದ್ದಿರಿ ಅಂತಾ ಕೇಳಿದಾಗ ಅವರು ನನಗೆ ಬೈದು ಹೊಡೆಬಡೆ ಮಾಡಿದ್ದರಿಂದ ನಾನು ನಮ್ಮೂರಿನ ಬಾಬುರಾವ್ ತಂದೆ ಕಲ್ಲಪ್ಪ ಪಾಟೀಲ ಇವರಿಗೆ ಹೇಳಿದಾಗ ಅವರು ಸುನೀಲ, ಅನೀಲ, ಮಂಜುನಾಥ, ಹಣಮಂತ ಇವರಿಗೆ ಕರೆಯಿಸಿ ಬುದ್ದಿವಾದ ಹೇಳಿ ಕಳುಹಿಸಿದ್ದು ಇರುತ್ತದೆ. ನಂತರ ಈಗ ಸುಮಾರು ೨ ತಿಂಗಳ ಹಿಂದೆ ನಮ್ಮೂರಿನಲ್ಲಿಯ ಹಾಲ್ ಕಮಿಟಿಯ ಹತ್ತಿರ ನಮ್ಮ ಅಣ್ಣತಮ್ಮಕೀಯ ಲವಿತ್ ತಂದೆ ದತ್ತಾತ್ರೇಯ ಲಾಡಂತಿ ಈತನ ಹುಟ್ಟು ಹಬ್ಬ ಆಚರಿಸುತ್ತಿದ್ದರಿಂದ ನಾನು ಅಲ್ಲಿಗೆ ಹೋದಾಗ ಆಗ ಸುನೀಲ, ಅನೀಲ, ಮಂಜುನಾಥ, ಹಣಮಂತ ಇವರು ಬಂದು ನನಗೆ ರಂಡಿ ಮಗನೇ ಅಂತಾ ಅಂದು ನನಗೆ ಸುನೀಲ ಈತನು ಕಪಾಳಕ್ಕೆ ಹೊಡೆದನು. ಆಗ ನನ್ನ ಮಕ್ಕಳಾದ ಕೈಲಾಸ ಮತ್ತು ದಯಾನಂದ ಹಾಗೂ ಆಕಾಶ ಇವರು ಬಂದು ಅವರಿಗೆ ಯಾಕೆ ನನ್ನ ತಂದೆಗೆ ಹೊಡೆಯುತ್ತಿದ್ದಿರಿ ಅಂತಾ ಕೇಳಿದಾಗ ಅವರು ರಂಡಿ ಮಕ್ಕಳೆ ನಿಮಗೆ ಬಹಳ ಸೊಕ್ಕು ಬಂದಿದೆ ಅಂತಾ ಅಂದು ನನಗೆ ರಂಡಿ ಮಗನ್ಯಾ ಶಾಣ್ಯಾ ನಿನ್ನ ಮೂರು ಮಕ್ಕಳಲ್ಲಿ ಒಬ್ಬನಿಗೆ ಖಲಾಸ ಮಾಡುತ್ತೇವೆ ಆವಾಗ ನಿನ್ನ ಸೊಕ್ಕು ಮುರಿಯುತ್ತದೆ ಅಂತಾ ನನಗೆ ಹೆದರಿಸಿ ಅಲ್ಲಿಂದ ಹೊರಟು ಹೋದರು ಆಗ ನಾನು ನನ್ನ ಮಕ್ಕಳನ್ನು ಕರೆದುಕೊಂಡು ಆಳಂದ ಪೊಲೀಸ ಠಾಣೆಗೆ ಹೋಗಿ ಸದರಿ ಘಟನೆಯ ಬಗ್ಗೆ ಅಲ್ಲಿನ ಪೊಲೀಸರಿಗೆ ತಿಳಿಸಿದಾಗ ಆಳಂದ ಪೊಲೀಸರು ಸುನೀಲ, ಅನೀಲ, ಮಂಜುನಾಥ, ಹಣಮಂತ ಇವರಿಗೆ ಕರೆಯಿಸಿ ವಿಚಾರಿಸಿದಾಗ ಅವರು ನಾವು ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ ಅಂತಾ ಒಪ್ಪಿಗೆ ಪತ್ರ ಬರೆದು ಕೊಟ್ಟಿದ್ದು ಇರುತ್ತದೆ. ದಿನಾಂಕ 24-06-2022 ರಂದು ಬೇಳಿಗ್ಗೆ ೯:೩೦ ಗಂಟೆ ಸುಮಾರಿಗೆ ನನ್ನ ಮಗನಾದ ದಯಾನಂದ ಈತನು ದುದೈಗೆ ಹೋಗುವ ಸಲುವಾಗಿ ಕಲಬುರಗಿಯಲ್ಲಿ ಕೆಲಸ ಇದೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದನು. ನಂತರ ನನಗೆ ನನ್ನ ಇನ್ನೊಬ್ಬ ಮಗನಾದ ಆಕಾಶ ಈತನು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ಅಣ್ಣನಾದ ದಯಾನಂದ ಈತನಿಗೆ ಕಲಬುರಗಿಯ ಹೊರವಲಯದಲ್ಲಿರುವ ವಾಜಪೇಯಿ ಬಡಾವಣೆ ಹತ್ತಿರ ರಸ್ತೆಯ ಪಕ್ಕದಲ್ಲಿ ಕೊಲೆ ಮಾಡಿರುತ್ತಾರೆ ಅಂತಾ ಪೊಲೀಸರು ಫೋನ್ ಮಾಡಿ ತಿಳಿಸಿದ್ದಾರೆ ಅಂತಾ ನನಗೆ ಫೋನ್ ಮಾಡಿ ತಿಳಿಸಿದಾಗ ನಾನು ಮತ್ತು ನನ್ನ ಮಕ್ಕಳಾದ ಕೈಲಾಸ, ಆಕಾಶ, ನನ್ನ ಹೆಂಡತಿಯಾದ ಗಿನ್ಯಾನಬಾಯಿ, ನನ್ನ ತಮ್ಮನಾದ ಪರಮೇಶ್ವರ ಎಲ್ಲರೂ ಕಲಬುರಗಿಯ ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಾಗಾರ ಕೋಣೆಗೆ ಬಂದು ನನ್ನ ಮಗನಿಗೆ ನೋಡಲಾಗಿ ಮೃತ ಪಟ್ಟಿದ್ದು, ನನ್ನ ಮಗನ ಕುತ್ತಿಗೆ ಕೊಯ್ದು ಹರಿದ ಭಾರಿ ರಕ್ತಗಾಯವಾಗಿದ್ದು, ತುಟಿಯ ಕೆಳಗೆ ಹರಿದ ರಕ್ತಗಾಯ, ಬಲಗೈ ರಿಸ್ಟ್ ಹತ್ತಿರ ಹರಿದ ರಕ್ತಗಾಯ, ಬೆನ್ನ ಹಿಂದೆ ಹರಿದ ರಕ್ತಗಾಯವಾಗಿದ್ದು ಕಂಡು ಬಂದಿದ್ದು ಇರುತ್ತದೆ. ನನ್ನ ಮಗನಾದ ದಯಾನಂದ ಈತನಿಗೆ ನಮ್ಮ ಅಣ್ಣ ತಮ್ಮಕೀಯವರಾದ ಸುನೀಲ, ಅನೀಲ, ಮಂಜುನಾಥ, ಹಣಮಂತ ಇವರು ನನಗೆ ಈ ಹಿಂದೆ ಆದ ಜಗಳದಲ್ಲಿ ನಿನ್ನ ಮೂರು ಮಕ್ಕಳಲ್ಲಿ ಒಬ್ಬನಿಗೆ ಖಲಾಸ ಮಾಡುತ್ತೇವೆ ಅಂತಾ ಹೇಳಿದ್ದರಿಂದ ಅದೇ ವೈಮನಸ್ಸಿನಿಂದ ಮತ್ತು ದ್ವೇಶದಿಂದ ಇಂದು ನನ್ನ ಮಗ ದಯಾನಂದ ಈತನು ನಮ್ಮೂರಿನಿಂದ ಕಲಬುರಗಿಗೆ ಹೋಗುವುದನ್ನು ನೋಡಿ ಅವನ ಹಿಂದೆ ಹೋಗಿ ಅವನಿಗೆ ಕಲಬುರಗಿಯ ವಾಜಪೇಯಿ ಬಡಾವಣೆ ಹತ್ತಿರ ಕರೆದುಕೊಂಡು ಹೋಗಿ ದಿನಾಂಕ ೨೪.೦೬.೨೦೨೨ ರಂದು ಅಂದಾಜು ೧:೦೦ ಪಿ.ಎಮ್ ದಿಂದ ೧:೩೦ ಪಿ.ಎಮ್ ದ ಮಧ್ಯದ ಅವಧಿಯಲ್ಲಿ ಸುನೀಲ, ಅನೀಲ, ಮಂಜುನಾಥ, ಹಣಮಂತ ಮಾರಕಾಸ್ತçಗಳಿಂದ ನನ್ನ ಮಗ ದಯಾನಂದ ಈತನಿಗೆ ಕುತ್ತಿಗೆಗೆ ಹರಿತವಾದ ಮಾರಕಾಸ್ತçಗಳಿಂದ ಕೊಯ್ದಿದ್ದು, ತುಟಿಯ ಕೆಳಗೆ, ಬಲಗೈ ರಿಸ್ಟ್ ಹತ್ತಿರ, ಬೆನ್ನ ಹಿಂದೆ ಮಾರಕಾಸ್ತçಗಳಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಕಾರಣ ನನ್ನ ಮಗ ದಯಾನಂದ ಈತನಿಗೆ ಸುನೀಲ, ಅನೀಲ, ಮಂಜುನಾಥ, ಹಣಮಂತ ಇವರು ಮಾರಕಾಸ್ತçಗಳಿಂದ ಹೊಡೆದು ಕೊಲೆ ಮಾಡಿದ್ದು ಇವರುಗಳ ಮೇಲೆ ಕಾನೂನು ರೀತ್ಯ ಕ್ರಮ ಕೈಕೊಂಡು ನಮಗೆ ನ್ಯಾಯ ಒದಗಿಸಬೇಕು ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 16-07-2022 02:05 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080